EN | KA

Menu

V

ಸಿದ್ಧರಾಮ ಚಾರಿತ್ರ

ಗಿರಿಜೆ ನಡಸುವ ಯೋಗಮಜ್ಜನದ ಚೌಕಮಂಪುರದೊಳಗೆ ಮಲ್ಲಿನಾಥಂಗೆ ನೇಮದಿ ನಡಸಿಹರನಿಂ ವಿಷಪ್ರಸಾದವ ಮಾಡಿ ಎಕ್ಕವಿಂಡಿಗೆ ಕೊಟ್ಟ ಸಿದ್ಧೇಂದ್ರನು

ಒತ್ತರಿಸಿ ತವಕ ತನುವೆತ್ತಂದದಿಂ ವ್ಯಗ್ರಿಸುತ್ತಂದು ನಂದಿ ನಡೆತಂದು ವಂದಿಸಿ ನಿಂದುಚಿತ್ತೈಸು ದೇವದೇವರು ನಿಮ್ಮ ಬಂದುದೇ ಹೊತ್ತಾಗಿ ಬರಹೇಳ್ದರುಮತ್ತೆನಿಸದೇಳಬೇಕೆಂದು ಕೈನೀಡೆ ಮನವಿತ್ತು ಲಿಂಗಕ್ಕೆಱಗಿ ಹಿಂದ ಸಂತೈಸಿ ಸಿದ್ಧೋತ್ತಮಂ ಗಗನಕ್ಕೆ ನೆಗೆದು ರಜತಾಚಳಕೆ ಹೋದನಿಳೆ ಬೆಱಗಾಗಲು

ಸಂತಸದಿ ಬಪ್ಪಾಗಳೋಲಗಂ ಪರೆದು ತನ್ನಂತರಂಗದೊಳಿರ್ದ ಸಕಲ ಲೋಕಂಗಳಂಸಂತೈಸುತಿರ್ದಪನೊ ಬರ್ಪ ಸಿದ್ಧೇಸ್ವರನನಾವಾವ ಕೌತುಕದಲಿಮುಂತೆ ಮೆಱೆವೆನೊ ಎಂದು ನೆನೆಯುತಿರ್ದಪನೊ ಮಹಾಂತರ ಸಮಾಧಿಯಂ ಸವಿದಪನೊ ಕಡೆಗೆ ತನ್ನಂ ತಾನೆ ನೋಡಿದಪನೊ ಎನಿಸಿ ಪರಮನೇಕಾಂತ ಸುಖದಿಂದಿರ್ದನು

ಕೆಲವು ಬಾಗಿಲುಗಳಂ ಕಳಿದು ಬರೆ ಮುಂದುಲಿವಹಲವು ವಾದ್ಯದ ತಳಿತ ಝಲ್ಲರಿಯ ಪಲ್ಲವದಲಲನೆಯರ ಕಳಸ ಕನ್ನಡಿಯ ದೆಸೆದೆಸೆಯ ಕೇಳಿಕೆಯ ಕನಕದ ಚೌಕದಒಳಗೆ ನಳನಳಿಸುವೆಳದಳಿರ ಮುಕುರದ ಹೊನ್ನಕಳಸಂಗಳಂ ತಳೆದ ರುದ್ರಕನ್ನಿಕೆಯರಿಟ್ಟಳದ ಗೋಟುಗಳ ಸೀಗುರಿ ಚಮರ ರಚನೆಗಳು ಕಣ್ಣೆ ಮಂಗಳವಾದುದು

ಇಂಬಿನಿಂದಾ ಚೌಕ ಮೆಱೆಯುತಿರೆ ಕಂಡು ಜಗದಂಬಿಕೆ ಪತಿವ್ರತಾನಿಧಿ ದಶಾಮೃತರಸ ಕದಂಬಪೂರಿತಕಲಶ ನಾಲ್ಕನತಿಮುದದೊಳಾಕಾಶ ಗಂಗಾಜಲವನುತುಂಬಿರ್ದ ಕಳಸ ಹದಿಮೂಱನೊಳಗಿಟ್ಟು ಕನಕಾಂಬುಜದ ಪೀಲಿ ವಿಲಸಿತ ತಮಂಧದ ಕಳಸವೆಂಬುದೊಂದಂ ತಂದು ತಾನಿಳಿಪಿಕೊಂಡಿರಿಸಿ ಬೇಱೆ ಬೇಱರ್ಚಿಸಿದಳು

ಅತ್ಯಂತ ನಿತ್ಯದ ನಿಧಾನಕ್ಕೆ ನೆಱೆ ಸತ್ಯಮುತ್ತೈದೆಯೋಗ ಮಜ್ಜನವನೊದಗಿಸಿ ಸುತ್ತಿಮುತ್ತಿ ಪೂಜಿಸಿ ರಾಜಿಸಲ್ ತಣಿದು ಕಣ್ದೆಱೆದು ಕಂಡು ಸಿದ್ಧೇಶ್ವರನನುಎತ್ತಿ ಬಿಗಿದಪ್ಪಿ ತಲೆದಡಹಿ ತೂಪಿಱಿದೆನ್ನತೆತ್ತಿಗನೆ ಸುಖದೊಳಿರ್ದಾ ಎಂದು ನಾಗಾಜಿನೋತ್ತರೀಯಂ ಕೇಳ್ದಡಿರ್ದೆನೆನ್ನಂ ಬರಿಸಿತಿಕ್ಕೆ ಬೆಸನೇನೆಂದನು

ಇಂದಿನೀ ಯೋಗಮಜ್ಜನದಂತೆ ನೀ ಮನಂದಂದನುದಿನಂ ಮಲ್ಲಿನಾಥಂಗೆ ಮಾಡಬೇಕೆಂದು ತೋಱಲ್ ಕರೆಸಿದೆಂ ನಿನ್ನನಾನೆಂದು ಗಿರಿಜಾತೆ ತೊಡೆಗೆ ತೆಗೆದುಕಂದಿ ಕುಂದದೆ ನಡಸು ತಪ್ಪದಿದು ನಡೆಯುತಿರಲೆಂದುವುಂ ಪುರಕೆ ಕೇಡಿಲ್ಲ ಕಂಡವರೆನ್ನಮಂದಿರಕೆ ಬಹರೆಂದಡಿಂತಿದಂ ಮಾಳ್ಪ ಪರಿಯೆಂತೆಂದು ಬೆಸಗೊಂಡನು

ಕ್ಷೀರ ದಧಿ ಮಧು ಘೃತಂ ಸಿತ ನಾಗರಂ ಮರಿಚಜೀರಕಂ ಲವಣವೆಲ್ಲಾ ದಶಾಮೃತಸಾರಪೂರ ಕಳಸಂ ನಾಲ್ಕು ಕನಕ ಪುಷ್ಟಾನ್ವಿತ ತಮಂಧ ಕಳಸಂ ಪೀಲಿಯಿಂಬಾರಗೆಯ್ದೊಂದಗ್ರ ಜಲಭರಿತಮಾಗೆ ಮಂದಾರ ಮಂಜರಿವಿಡಿದ ಹದಿಮೂಜು ಕಳಸವಿಂತೀರೊಂಬತಿನ್ನುಳಿದ ವಿಭವವೀ ಪರಿಯಿಂದ ನೇಮದಿಂ ನಡಸೆಂದಳು

ಅಡಿಗಡಿಗೆ ಕೈಲಾಸಕ್ಕೆ ತಂದು ಬೇಹುದಂನುಡಿದು ಹೇಳುತ್ತ ಬಾಯೆಂದು ತೂಪಿಱಿದು ತಲೆದಡವಿ ತಮ್ಮಿಬ್ದರುಂ ಬೀಳ್ಕೊಡಲು ನಡೆತಂದು ತನ್ನ ಸೊನ್ನಲಿಗೆಯೊಳಗೆಪೊಡವಿಗೆ ವಿಚಿತ್ರಮನೆ ಚೌಕಮಂ ಮೆಱೆಸಿಯಾಕಡೆಗದಂತಿಂತೆಂದು ಪೊಗಳ್ವ ಬಡಕವಿಗಿವಿಯನುಡಿ ಕೊಳ್ಳದೆಂದೆನಿಸಿ ಯೋಗ ಮಜ್ಜನವ ನಡಸುತ್ತಿರ್ದನಪ್ರತಿಮನು

ಇರುಳೊಂದು ದಿನವೆಂದಿನಂದದಿಂ ಬಲವರುತಿರೆ ಮುಂದೆ ಮೇರು ಗಜವದನರೂಪಿನಲಿ ಬಂದಿರದಲೇ ಎಂಬಂತೆ ಗಗನವಂ ಬಗಿದು ನೆಗೆದೊಗೆವ ನವ್ಯಾಕೃತಿಯಲಿನೆರೆಯ ಸೆಳ್ಳಿಗೆಯ ಬೊಬ್ಬುಲಿಯ ಬೆನಕಂ ನಿನ್ನಪುರದೊಳಿರಲೆನಗೊಂದು ಠಾವಕೊಡು ಲೋಕೈಕಗುರುವೆಯೆನೆ ನಿನ್ನನೊಳಕೊಂಬ ಠಾವಾವುದೆನೆ ಕಿಱಿಯ ರೂಪಂ ತಳೆದನು

ಇನ್ನು ನೀನಿರೆ ಠಾವ ನಿನಗಿತ್ತಡಿಂದೆಮಗೆನಿನ್ನ ದೆಸೆಯಿಂದಪ್ಪುದೇನೆಂದಡೀ ಪುರಕ್ಯನ್ಯಾಯಗಳನೆಡರು ಬಡತನವನೊದವಿಸದೆ ಎಕ್ಕವಿಂಡಭಿಮತವನುಉನ್ನತಿಕೆಯಿಂದೀವೆನೆನಲೆಮ್ಮ ಬೆನಕನಂತನ್ನೂರ್ಗೆ ಕೊಂಡೊಯ್ದನೆಂದು ಬಂದವರೊಯ್ಯೆಬನ್ನವಲ್ಲಾ ಎನಲವರ್ಗೆ ಹೋಹಾತನಲ್ಲೊಯ್ದಿರಿಸು ಸಾಕೆಂದನು

ಇದು ಸತ್ಯವಾದೊಡೇಳ್ ಬಾಯೆಂದು ನುಡಿದು ಕರೆಯದ ಮುನ್ನ ಕೈವೊಕ್ಕ ಗಜಮುಖನನೊಯ್ದು ನೇಹದಿ ಮಲ್ಲಿಕಾರ್ಜುನನ ಕೆಲದಡೆಯೊಳಿಳುಹೆ ಪುರಜನಕಿತ್ತ ಬೆನಕನಾಗೆಮುದದೊಳೈದಾಱು ದಿನವಿರೆ ಕಂಡು ಸೆಳ್ಳಿಗೆಯಕದನಿಗರು ಬಂದು ಬೇಡಿದೊಡೆ ಕೊಂಡೊಯ್ಯ ಹೇಳಿದಡೆತ್ತುಗಳ ಕಟ್ಟಿ ತೆಗೆಯೆ ಗಿರಿಯಂದದಿಂ ಮಿಡುಕದಿರ್ದಂ ಬೆನಕನು

ಆವ ತೆಱದಿಂ ತೆಗೆದೊಡಂ ಬಾರದಿರೆ ಕಂಡುಹೇವರಿಸಿ ಸೆಳ್ಳಿಗೆಯ ವಿಭುಗಳೀ ಸಿದ್ಧನಂನಾವು ಸೋಲಿಸಲಾಱದಿರ್ದಡೇನನ್ಯ ಶಕ್ತಿ ಪರಾಕ್ರಮಂ ಸಲುವುದುಬೋವರ್ಕಳಿಂದಿವರ ಮದವ ಮುಱಿಸುವೆವಂದುಅವೂರ ನೆರೆಹೊರೆಯ ಕಬ್ಬಿಲರನೊಡಗೂಡಿನೀವು ನಿಮಗುಳ್ಳ ಲಿಂಗಪ್ರಸಾದವ ಬೇಡಿಯೆಂದು ಕಳುಹಿದರಧಮರು

ಕತ್ತಲೆಯ ತತ್ತಿಗಳ ಮೊತ್ತವೆನೆ ನೆರೆದೈದಿಚಿತ್ತೈಸು ಲಿಂಗಪ್ರಸಾದವೆಮಗುಳ್ಳುದದನೊತ್ತರಿಸಿ ತೇಜದಿಂ ಕೊಳ್ಳದಿನ್ನಾದೊಡಂ ಕೊಡಬೇಕು ದೇವಯೆನಲುಮತ್ತೆನಿಸದೀಯಬೇಕೇ ಬೇಕು ಬೇಹಡೀಹೊತ್ತೇಕೆ ನಾಳೆ ಮಧ್ಯಾಹ್ನಕಿತ್ತಪೆನು ಕೈಗುತ್ತಿಕೊಂಡುಂಡಾರು ಜೀವಿಸಿದವರ್ ಕೊಂಬುದೆಂದು ಕಳುಹಿದನವರನು

ಕಾಳಕೂಟಂ ವತ್ಸನಾಭಿಯಂ ಸಿಂಗಿಯಂಹಾಲಾಹಲಂಗಳಂ ಕಬ್ಬುನದ ಕೋವಿಯೊಳುಮೇಳವಿಸಿ ಕಡುಗಾಸೆ ಕುದಿದು ಕಿಡಿಗುಟ್ಟಿ ಕೆಂಗಲಿಸಿ ಭುಗಿಲಿಡುವ ವಿಷವಕೇಳಬಹುದೇ ಹೊಗಳ್ದ ಬಾಯುಳಿಯದೆನಲದಂನೀಲಕಂಠಂಗೆ ಫಣಿಭೂಷಂಗೆ ರುದ್ರಂಗೆಭಾಳನಯನಂಗೆ ಪೂಜಾವಸಾನದೊಳರ್ಪಿಸಿದನಿಳಾ ಮದನಹರನು

ತಂದು ಹೊಱಗಿಟ್ಟು ಕಬ್ಬಿಲರ ಕೈವಿಡಿದು ನೀವೆಂದ ಪ್ರಸಾದವಿದೆ ಕೊಳ್ಳಿಯೆನಲವರು ಮತ್ತೊಂದೆಂದು ಬಗೆದು ಬಾಯಂ ತೆಗೆಯೆ ಭುಗಿಲಿಡುವ ರೌದ್ರತೆಗೆ ಬಳಸಿ ಕವಿದುಮುಂದುಗೆಡಿಸುವ ಸೊಗಡ ಸೋಂಕಿಗೆ ಕರ್ಬೊಗೆಯೊಳೊಂದಿದಿಡಿಗಪ್ಪಿಂಗೆ ಹೆದಱಿ ನಾವಮ್ಮೆವಿದನಿಂದು ನೀವುಂಡೊಡೆಯರಾಗಿ ಪ್ರಸಾದದಾಸೆಯನೊಲ್ಲೆವಾವೆಂದರು

ಬಿಟ್ಟಿರಾ ಬಿಟ್ಟೆವಳುಪಿಲ್ಲವೇ ಇಲ್ಲೆನಲುಬಟ್ಟಲಿಂ ಮೊಗೆಮೊಗೆದು ಗುಡ್ಡರ್ಗೆ ಗುಡ್ಡರಿಂಹುಟ್ಟಿದಬಳರ್ಗೆಯ ಕರೆದು ಕರೆದೆಱೆದನಂದಕ್ಲೇಶನವ್ಯಗ್ರನುನೆಟ್ಟನುಗ್ರಂ ತಾನೆ ಗರಳವಂ ಕೊರಳ ಹೊಱಗಿಟ್ಟುಕೊಂಡಾ ಹೆಮ್ಮೆ ಬಿಮ್ಮುಗೆಡುತಿರೆ ಹಡೆದುಕೊಟ್ಟನೆಸೆದೆಕ್ಕವಿಂಡಿಂಗೆ ಪ್ರಸಾದಮಂ ಶಶಿ ರವಿಗಳಿರುವ ತನಕ

ನಿತ್ಯಪೂಜೆಯನು ಮಲ್ಲಯ್ಯಂಗೆ ಮಾಡಿ ನೋಡುತ್ತ ತೋಟವನು ಕೆಱೆಯನು ಜಾವಗುತ್ತಗೆಯನಿತ್ತು ತಾಂ ಹರುಷದಿಂ ಕವಿಲೆಗಳ ಕಱುವ ನೋಡುತ್ತ ಸತ್ರದ ಬೋನದಿಂಬಿತ್ತರಂಬಡೆದ ಚೌಕದ ಯೋಗಮಜ್ಜನದಿಸತ್ಯಸನ್ನಿಹಿತಂಗೆ ಮಹಬೋನವೆತ್ತಿ ನಡುಗತ್ತಲೆಯೊಳಾ ಕ್ಷೇತ್ರಮಂ ಬಲವರುತ್ತ ಸಿದ್ಧೇಂದ್ರನೆಯ್ತಪ್ಪಾಗಳು