EN | KA

Menu

VI

ಸಿದ್ಧರಾಮ ಚಾರಿತ್ರ

ಮೇದಿನಿಯೊಳಿರದಧೋ ದೈತ್ಯಂಗೆ ತಣಿವಿತ್ತುಆ ದಿನಂ ವಿಶ್ವತೋಮುಖವ ಶಿವ ತೋಱಿದೊಡೆಆದಿಲಿಂಗವನು ಬಿಜಯಂಗೈಸಿ ತಂದ ಭೂದೇವಿ ಪುಳಕಿಸೆ ಸಿದ್ಧನು ||

ತೋರಗಿವಿ ಕೆಂಗಣ್ಣು ಬಿಡುವಾಯಿ ನಿಡುದಾಡೆಸೀಱುದಲೆ ಬಳಿತಂಗವಱತ ಮೊಲೆ ಸುಗಿದ ತೊಗಲೇಱದೆಗೆದೆಳ್ಳೆ ದಿಲ್ವಸನವೆತ್ತಿದ ಕತ್ತಿಯೊಡ್ಡಿದ ಕಪಾಲವೆರಸುಮೀಱಿದುದಯದ ನಿಡಿಯ ಕಾಳರಕ್ಕಸಿ ಬರುತನೀಱನಂ ಸುಕುಮಾರನಂ ಪುಷ್ಟನಂ ದೇಸೆಕಾಱನಂ ನಿಶ್ಚಿಂತನಂ ಸಿದ್ದರಾಮಯ್ಯನಂ ದೂರದಿಂ ಕಂಡಳು

ಈ ರುಚಿರ ಕೋಮಲ ಶರೀರನಂಗದ ರುಧರವಾರಿಯನ್ನಾವರುಚಿಯೋ ಆಗ ಸವಿವೆನೋತೀರಲೆಂದೆಳಸಿ ಲವಲವಿಸಿ ನಡೆದಂಜಿಸುವೆನಂಜಿದೊಡೆ ಹೊಡೆವೆನೆಂದುಸಾರಿ ನೋಡಿದಳೊದಱಿ ನೋಡಿದಳು ಬೊಬ್ಬೆಗೊಟ್ಟಾರಿ ನೋಡಿದಳಾವ ತೆಱದಿ ನೋಡಿದಡೇಂ ವಿಚಾರಿಸದೆ ಲೆಕ್ಕಿಸದೆ ಹೋಗುತಿರೆ ಕಂಡಿವಂ ಹೆದಱನೇಗುವೆನೆಂದಳು

ಎನ್ನ ಬಡದಾಡೆ ಕಿಡಿಗಣ್ಗಳುಕುವಾತನಲ್ಲಿನ್ನು ಕೀರ್ತಿಸಿ ಬೇಳ್ಪೆನೆಂದೆಲೆಲೆ ಧೈರ್ಯ ಸಂಪನ್ನ ಭೂತಸ್ನೇಹಿ ಕರುಣಿ ದಾನವಿನೋದಿ ನಿಶ್ಯಂಕ ಮರಣರಹಿತನನ್ನಿಯುಳ್ಳನೆ ಬಸುಱ ಬಱನ ಕಳೆಯೆಂದೆಂಬಕನ್ನೆಯಂ ನೋಡಿ ನಸುನಗುತಾವುದಾಱಕೆಯೆನೆನಿನ್ನ ದಿವ್ಯಾಂಗದೊಳಗಣ ರುಧಿರಸುಧೆಯನೆನಗೀಯಬೇಕೆಂದಳವಳು

ಒಡಲೊಳಾವೆಡೆಯ ರುಧಿರಕ್ಕೆ ಬಯಸಿದೆಯದಂಕಡಿದು ಕುಡಿದುಕೊ ಎಂದಡೊಡನೆ ಕತ್ತಿಯನೆತ್ತಿಹೊಡೆದು ನೋಡಿದಳೊತ್ತಿ ಕೀಸಿ ನೋಡಿದಳಡಸಿ ಕೊಱೆದು ನೋಡಿದಳು ನೋಡೆಹೊಡೆಯೆ ವಜ್ರಂ ಹಱಿವುದೇ ಕೀಸೆ ನೆಳಲು ಹೊರೆಬಿಡುವುದೇ ಕೊಱೆಯೆ ಬಯಲಾಸಱುವುದೇ ಕಂಡುನಡುಗಿ ಕಾಲ್ವಿಡಿದು ದೈನ್ಯಂದೋರ್ಪ ರಕ್ಕಸಿಗೆ ನಸುನಗುತ್ತಿಂತೆಂದನು

ಹೆದಱದುಸುರಾವೆಡೆಯ ರುಧಿರ ಬೇಕೆನಲು ನಿನ್ನುದರದೊಳಗೆನ್ನ ಹೊಗಿಸಿದೊಡೆನಗೆ ಸೊಗಸಿದಂಗದ ಸಾರಮಂ ಸವಿದು ಪೂಱಮಡುವೆನೆನಲೊಡಂಬಟ್ಟಖಿಳ ಜಗವನೊಳಗೆಪುದಿದು ಪೊರೆವಂಗಿವಳು ಭಾರವೇ ಬಾಯ್ದೆಱೆದುಸುದತಿ ಬಾಯೆನೆ ಹೊಕ್ಕ ಕಾಳರಕ್ಕಸಿಯ ನುಂಗಿದನೆನೆಗೆ ಲೋಭವಿಲ್ಲೆಂದು ಶಪಥದ ನಂಜಿನುರುಳಿಯಂ ನುಂಗುವಂತೆ

ಅಯ್ಯ ಕೇಳಯ್ಯ ನೀನೊಡ್ಡಿದೊಡ್ಡಿದ ಸಮಂಮೆಯ್ಯನಿಱಿದಿಱಿದು ಕಿಱಿಕಿಱಿದಾಗಿ ಕಡಿದಡಂಅಯ್ಯಯೆಂದಳುಕೆ ಹಿರಿಹಿರಿದಾಗಿ ನೆನೆವೆ ಕೇಳಯ್ಯ ಅಯ್ಯಯೆನುತಕಯ್ಯ ಲಾಕುಳವನಂದಲುಗುತ್ತ ಹಾಡುತ್ತಲೊಯ್ಯನೀ ಕಾಯವಿವಳಿಗೆ ಜೀವ ನಿಮಗೆಂದುಸಯ್ಯಮಿ ವ್ರತನಿರತ ಶ್ರೀ ಸಿದ್ಧರಾಮನಾಥಂ ಹಾಡಿದಂ ಗೀತವ

ಉದರದೊಳಗಿಳಿದಾರ್ತದಿಂ ನೋಡೆ ರೇತ ರಕ್ರದಿನಾದ ತನುವಲ್ಲ ಸಪ್ತಧಾತುಗಳುಂಟೆಹೃದಯದಲರ್ವಸೆಯ ಮೇಲೆಸೆವ ಚಿತ್ತಿನ ಸೊಡರ ಬೆಳಗಿನೊಳಗಾತ್ಮನಿರ್ದಂಅದಱಿಂದ ಕೆಳಗೆ ಮುನ್ನಾರ್ತದಿಂದೇಕ ಚಿತ್ವದೊಳೆ ಪುರಮಂ ಮಾಡಿದಾ ಭಾವ ಬಲಿದೊಳಗೆಪುದಿದ ಶಿವನಿಳಯಕೋಟಿಗಳಿಂ ವಿರಾಜಿಸುತ್ತಿಪ್ಪ ಪುರಮಂ ಕಂಡಳು

ಅಲ್ಲಿಯಂ ಕ್ಷೇತ್ರಮಂ ಬಲಗೊಂಬ ಶಿವಸಿದ್ಧವಲ್ಲಭನ ಬಸುಱೊಳಗೆ ತೊಳಲುತಿಹ ತನ್ನನಂತಲ್ಲಿ ಮುನ್ನಿನ ಪರಿಯನದಱೊಳಾ ಪರಿಯನೇಳೆಂಟು ಗಡಿತನಕ ಕಂಡುತಲ್ಲಣಿಸಿ ನಡುಗಿ ಹೊಱಮಡುವೆನೆಂದೆನೆ ಬಟ್ಟೆಯಿಲ್ಲದಿರೆ ಸಿದ್ಧನಂ ಹೊಗಳಿದಡಧೋದ್ವಾರದಲ್ಲಿ ಪೊಱಮಡಿಸಲ್ಯಧೋದೈತ್ಯೆಯೆಂಬ ಪೆಸರಾದುದಂತಾ ದನುಜೆಗೆ

ಅಱಿಯದೆಳಸಿದೆನೆಂದು ನಮಿಸಿದಸುರೆಯ ಬಸುಱಬಱನಳಿಯೆ ತಣಿವಿತ್ತು ಮತ್ತೆ ಬಲಗೊಳ ಹೋಹನೆಱೆ ವೀರಸಿದ್ಧರಾಮನ ಹಿಂದೆ ಹಿಂದೆ ಪುರಮಥನ ಸಲೆ ಕಂಡಿದೇನುಕಱುವಿನೊಡನೆಯ್ತಪ್ಪವೊಲ್ ಬಂದು ಕಂಡು ಚೆಚ್ಚರದಿ ಕಲಿತನಕೆ ಬೆಱಗಾಗುತ್ತಿವಂಗೆನ್ನಹರವರಿಯ ರೌದ್ರವೇಷವನು ತೋಱಿಸೆ ಮನದ ಬಲುಹ ನೋಡುವೆನೆಂದನು

ನೀಲಕಂಠಂ ರೂಹುದೋಱಿ ಸಿದ್ಧೇಶ್ವರನನಾಲಿಂಗನಂಗೈದು ತಲೆದಡವಿ ಬಾರೆನ್ನಮೂಲೋಕದರಸ ನಿನಗೊಂದು ಹೊಸತಂ ತೋರ್ಪೆನೆಂದು ಕೈವಿಡಿದು ನೆಗೆದುಭೂಲೋಕದಿಂ ಭುವರ್ಲೋಕದಿಂ ಸ್ವರ್ಲೋಕದಾಲಯ ಮಹಾಲೋಕ ಜನಲೋಕ ತಪಲೋಕಮೇಲೆನಿಪ ಸತ್ಯಲೋಕ ವಿಷ್ಣುಲೋಕಂಗಳಂ ಕಳೆದು ಕೊಂಡೊಯ್ದನು

ಇದಕಂಜನೆಂದು ಶಿವಲೋಕದ ಗಯಾಪುರದಸದನದೊಳು ಬೆದಱಿಸುವೆನೆಂದು ನೆನೆದಂ ಪಂಚವದನ ದಶಲಪನ ಶತಮುಖ ಸಹಸ್ರಾಸ್ಯ ಲಕ್ಷಾನನಂ ಕೋಟವಕ್ತ್ರಂಒದವಿ ಕೋಟಾಕೋಟಿ ತುಂಡಂಗಳೊಗೆದೊಗೆದುಪುದಿದು ಮೊಗದೊಳಗೆ ಮೊಗವಗೆವೊಯ್ದ ತೆಱದೊಳೊಪ್ಪಿದುವು ಬೇಱವಱೊಳೊಂದೊಂದು ರಸವಾಗಿಯಭಿನಯಿಸಿದನು ಪುರಮಥನನು

ಹಲವು ದೆಸೆಯೊಳಿಡಿದಿಡಿದ ವದನಂಗಳೊಳುಕೆಲವುಬ್ಬಿ ಬೊಬ್ಬಿಡುವ ಕೆಲವು ಮಾಣದೆ ನಗುವಕೆಲವು ಗಜಱುವ ಕೆಲವು ಗರ್ಜಿಸುವ ಕೆಲವಗಿವ ಕೆಲವುರಿವ ಕೆಲವಾರುವಕೆಲವು ಹಾಡುವ ಕೆಲವು ಹುಂಕರಿಸಿ ಕಣ್ದೆಱೆವಕೆಲವು ಕರುಣಿಸುವ ಕೆಲವಾನಂದದಿಂದಿಪ್ಪಕೆಲವು ನಿಜದಿಂದಿಪ್ಪ ನಾನಾ ರಸಂದಳೆದನತಿಭಯಂಕರ ರೂಪನು

ಮುಸುಕಿದದ್ಭುತಮುಖವಿಳಾಸಮಂ ಕಂಡು ಶಂಕಿಸದೆ ಜಯಜಯವೆನುತ್ತಂ ಸಿದ್ಧನಿರಲು ಮಾಮಸಕದಿಂ ಸಕಳಸ್ವರೂಪನಾಗಿರ್ದ ರುದ್ರಂ ನಿಷ್ಕಳಾಕಾರವನೊಸೆದು ಕೈಕೊಂಡು ರವಿಯಿಲ್ಲ ಬಿಸಿಲುಂಟೆಂಬದೆಸೆಯಂತೆ ನಿಷ್ಕ್ರಿಯಾತ್ಮಕ ನಿರ್ಮಳಂ ನಿರಾವಸಥ ನಿರುಪಾಧಿಕ ಜ್ಯೋತಿರ್ಮಯಾಕಾರ ಶಿವಲಿಂಗವಾದನಂದು

ದೆಸೆದೆಸೆಯ ಪಸರಮಂ ಸಕಲಲೋಕಂಗಳಾದಿಶಿಖಾಂತಮಂ ಕಳೆದು ಸರ್ವಗತವಾದ ಕಾಂತಿ ಸಮೂಹ ಲಿಂಗಮಂ ನೋಡಲಮ್ಮದೆ ನಡುಗಿ ನಡುಗಬೇಕೆಂದು ನೆನೆದುಹೊಸತಾವುದಾವ ರೂಪಾದೊಡಾ ರೂಪಿನಿಂದೊಸೆದು ಹಿಡಿವೆಂ ಶಿವನನೆಂದು ನಿಶ್ಚಯಿಸಿ ಶಂಕಿಸದೆ ಲಿಂಗದ ಬೆಳಗಿನೊಳಗೆ ಬೆಳಕಾಗಿ ಹೊಗಲನುಗೈದನಪ್ರತಿಮನು

ಒಡಗೂಡಿ ಮಗನೆನ್ನೊಳಡಗಿ ಬೆರಸಲು ಮುಂದೆನಡೆಯದೆನ್ನಯ ಲೀಲೆಯೆಂದಂಜಿ ಶಶಿಯ ಜಡೆಮುಡಿಯ ಬಿಸಿಗಣ್ಣ ಫಣಿಕುಂಡಲಂಗಳ ಪಂಚವದನವೀರೈದು ಭುಜದಒಡಲ ಭಸಿತದ ಕೊರಳ ಗರಳದ ಗಜಾಜಿನದಹಿಡಿದ ಹಲವಾಯುಧಂಗಳ ಹರಿಣರಿಪುಚರ್ಮದುಡಿಗೆ ಹರಿನಯನವೆರಸಿದ ಮೆಲ್ಲಡಿಯ ನಿಜದ ಮೂರ್ತಿಯಂ ತೋಱಿಸಿದನು

ಲೋಕದೊಳು ವೃಕ್ಷಬೀಜ ನ್ಯಾಯದಂತೆ ಬಿಡದೇಕತ್ವದಾಕಾರದೊಳು ನಿರಾಕಾರಂ ನಿರಾಕಾರದೊಡಲೊಳಾಕಾರವಾಗಿರ್ದಖಿಳ ರೂಪುಗಳನಳಿದು ಕಳೆದುಆಕಾರದಾದಿ ಬಯಲೊಳು ಲಿಂಗವಾಗಿರ್ಪನೇಕಗುಣ ನಿನ್ನಳವನಾರ್ ಬಲ್ಲರೆಂದು ಮಹಿಮಾಕರಗೆ ಬಿನ್ನವಿಸಿ ಮೆಚ್ಚಿ ತೆಗೆದಪ್ಪಿ ಗಿರಿಜಾಧೀಶನಿಂತೆಂದನು

ಅಂಗವಿಸಿ ನಿನ್ನ ಸೊನ್ನಲಿಗೆಯೊಳು ನೀನಾದಿಲಿಂಗವೆಸರಿಂದೆಮ್ಮನೀ ತೆಱದ ರೂಪಿನೊಳಭಂಗ ಪ್ರತಿಷ್ಠಿಸಲು ಬೇಕೆಂಬ ಬೆಸನದಿಂ ತೋಱಿದೆಂ ನಿಜರೂಪನುಹಿಂಗದಾ ಪುರದ ವಾಯವ್ಯ ಯೋಜನದೊಳತಿಕಂಗೆ ಮಂಗಳವಪ್ಪ ಲಿಂಗವಿದೆ ಬೇಗ ಬಿಜಯಂಗೈಸಿ ತಂದು ಮಾಡೇಳು ಹೋಗೆಂದು ಬೀಳ್ಕೊಟ್ಟನಗಜಾರಮಣನು

ಮೇದಿನಿಗೆ ನಡೆತಂದು ಸೊನ್ನಲಿಗೆಯೊಳು ದುರಿತಸೂದನಂ ಸಗುಣ ನಿರ್ಗುಣ ಸಂಗ ಸಂತುಷ್ಟನಾದಿಲಿಂಗಾಲೋಕನಾಸಕ್ತಚಿತ್ತನಪ್ರತಿಮ ಶಿವ ಸಿದ್ಧರಾಮಂಸಾದರಂ ಶ್ರೀ ಮಲ್ಲಿನಾಥ ಚರಣಾಂಬುಜಾಮೋದ ಮಾನಸನಾಗುತಿರ್ಪ ಸಮಯದೊಳಿರುಳುತೀದು ರವಿ ಮೂಡಿದಂ ಜಗದಘಂ ತೀದು ಪುಣ್ಯೋದಯಂ ಸಮನಿಪಂತೆ

ತರಿಸು ಲಿಂಗದ ರಥಕೆ ವೃಷಭ ಸಂತತಿಗಳಂಕರಸು ಶಿಲ್ಪಾಭಿಜ್ಞರಂ ಮಂಗಳದ್ರವ್ಯಪರಿಕರವ ನೆರಪೆಂದು ಶಿವ ಸಿದ್ಧರಾಮಯ್ಯ ಚರಿತದಿಂದ ತರಿಸಿ ನೆರಪಿಉರಗೆಜ್ಜೆ ದಂಡೆ ಪೆಂಡಾರ ಬಾಸಿಗವನಾದರದಿ ರುದ್ರಾಕ್ಷೆಯೊಳಲಂಕರಿಸಿ ಭಸಿತದಿಂಹೊರೆದ ಹೊಸ ಹೋರಿಯೆತ್ತುಗಳನೊತ್ತಬಂದಿಂ ಹೂಡಿದಂ ಗಾಡಿವಡೆದು

ತಳಿತ ಬೆಳಗೊಡೆಯ ತುಱುಗಿದ ಹೀಲಿದಳೆಯ ಮಂಡಳಿಸಿದಣುಕುಗಳ ನೆಳಲೊಳು ನಡೆವ ಶತರಥಂಗಳ ಮುಂದೆ ಮುಗ್ಧೆ ಮಧ್ಯಮೆ ವಿದಗ್ಧೆಯರು ತರದಿಂ ತಂಡದಿಂ ಸರಸದಿಂತೊಳಪ ಕಳಸಂಗಳಂ ಪಿಡಿಯೆ ಚಂಬಕನ ಬೊಂಬುಳಿಯ ಪದಡಕ್ಕೆ ಪಟಹಂಗಳಾವುಜ ಕರಡೆಗಳ ತಾಳ ಕಂಸಾಳರವದೊಳಗೆ ನಡೆದನಪ್ರತಿಮನಚಳಿತ ಸಿದ್ಧನು

ಹೊಡೆದ ನಿಸ್ಸಾಳ ಕೋಟಿಗಳ ಬಿರುದೆತ್ತಿ ಬೊಬ್ಬಿಡುವ ಕಹಳೆಗಳ ಪೂರೈಪ ಶಂಖಾವಳಿಯಕಡುದನಿಯ ಕೊಂಬುಗಳ ಸೂಳ್ಳೆಪ ತಮ್ಮಟಂಗಳ ತಳಿತ ಕೈ ಗುಡಿಗಳಪಿಡಿದ ವೃಷಭಧ್ವಜಂಗಳ ಹಲವು ಕೇಳಿಕೆಯಸಡಗರದ ಸಂಭ್ರಮದ ಸೌರಂಭದಿಂ ಮೀಱಿನಡೆದನಪ್ರತಿಮಸಿದ್ಧಂ ಸಿದ್ಧರಾದಿತ್ಯ ಸಿದ್ಧಕುಲ ಚಕ್ರೇಶನು

ಪಸರಿಸಿದ ಹರುಷದಿಂ ಬರವರಲು ಶೂಲಿ ಸೂಚಿಸಿದ ಕುಱುಹಂ ಕಂಡು ಮೆಯ್ಯಿಕ್ಕಿ ನಿಂದೆಲೆಲೆವಸುಧೆ ವಸುಮತಿ ಚರಾಚರದ ಭರಾಭಾರಮಂ ಹೊತ್ತು ನಿತ್ತರಿಪ ಕರುಣಿಒಸೆದಾದಿಲಿಂಗಮಂ ಬಸುಱೊಳಿಟ್ಟೋವಿ ಸಾಗಿಸಿಕೊಂಡು ಸುಖದೊಳಿಹ ಸುಜನೆ ತೋಱವ್ವ ವಂಚಿಸದೆ ಲಿಂಗಸ್ಥಳವನೆಂದು ಸಿದ್ಧರ ಬಲ್ಲಹಂ ಧರೆಗೆ ಕೈಮುಗಿದನು

ಮನಮೊಸೆದು ಧರ್ಮಾರ್ಥ ಕಾಮ ಮೋಕ್ಷಂಗಳೆಂದೆನಿಪ ಕನ್ನಿಕೆಯರಂ ಸಿದ್ಧರಾಮವರಂಗೆಘನಲಿಂಗವೀವ ಮದುವೆಗೆ ಹಿಡಿದ ಜವನಿಕೆಯ ಸೆಱಗು ತೆಱಹಪ್ಪಂದಿದಿಂವಿನಯದಿಂದಾದಿಲಿಂಗದ ಸೆಜ್ಜೆಯರಳ್ವಂತೆವಿನುತ ಧರೆ ಹಿಗ್ಗಿ ಸರಿದಿಂಬುಗೊಡೆ ಕಂಡನೊಯ್ಯನೆ ಶಿಲಾಗರ್ಭದೊಳು ಹಿಂದೆ ಕಂಡಖಿಳ ಮುಖ ಕುಱುಹುಗಳು ಹೊಳೆಹೊಳೆಯಲು

ಧರಣಿಯಂ ಮೆಲ್ಲನೆ ಸಡಿಲ್ಚಿ ತೆಱಹಂ ಮಾಡಿಹರುಷಜಲಮೊಸರ್ವ ಕಣ್ಣಿಂ ನೋಡಿ ಪುಳಕವಾವರಿಸುವೊಡಲಿಂದೆಱಗಿ ತೊದಳು ತುಂಬಿದ ನುಡಿಗಳಿಂ ಹೊಗಳಿ ನಡುಕವಡೆದಕರಕಮಳದಿಂ ನವ್ಯಕುಸುಮ ದಿವ್ಯಾಂಬರಾಭರಣ ನಾನಾ ಯಕ್ಷ ಕರ್ದಮದಿನೊಪ್ಪೆ ಸಿಂಗರಿಸಿ ಲಿಂಗವ ಮನೋರಥದೊಳಿಡುವಂತಿಟ್ಟನಾ ರಥ ಸುಖಾಸನದೊಳು

ಬಳವಱಿದು ಹರೆಯವಱಿದೆಣೆಯಱಿದು ಬಗೆಯೆತ್ತುಗಳನಾಯ್ದು ಹಲವು ತಲೆಯಾರ್ಗಳಂ ಹೂಡಿ ಬೆಂಬಳಿಯಲನುವಱಿದು ನಡೆಸುವ ಭಟರನಿತ್ತು ಗಾಲಿಗಳದ್ದಡೆತ್ತಲೆಂದುಬಳಿವಿಡಿದು ಹಾರೆಗಳನಾಂತು ತಾಂ ಬಲ್ಲಿದರ್ಬಳಸಿ ಖೋಯೆಂದು ಬೊಬ್ಬಿಟ್ಟಾರ್ದು ಹೆಱೆಗಳಂಮೊಳಗಿ ನಡಸಲು ರಥಂ ನಡುಗದೆಂಬುದು ಮಾತು ಕಾರಣವನಾರ್ ಬಲ್ಲರು

ಮುಂದೆ ಸಿದ್ಧೇಶ್ವರಂ ನಡೆಯೆ ನಡೆವುದು ರಥಂನಿಂದು ಠಾವಿನೊಳು ನಿಲುವುದು ದಿಟಂ ಹುಸಿಯೆಂಬೊಡೊಂದು ದಿನವಾ ರಥಂ ಬಟ್ಟೆಯೊಳ್ ಬಪ್ಪ ಕಾಲದೊಳಿತ್ತ ದಿನಪನ ರಥಂಬಂದು ಪಡುವಣ ಕಡಲೊಳಿಳಿಯೆ ಕಂಡಿರುಳಾದುದೆಂದಲ್ಲಿ ಬಿಡಿಸಿ ರವಿಯುದಯಿಸಿದ ಬಳಿಕವಾಂಬಂದಲ್ಲದೆತ್ತುಗಳ ಹೂಡಬೇಡೆಂದು ಗುಡ್ಡರ್ಗೆ ಬೆಸನಂ ಕೊಟ್ಟನು

ಪುರಕೆ ನಡೆತಂದು ನೆಱೆ ಮಲ್ಲಿಕಾರ್ಜುನನನಾದರದೊಳರ್ಚಿಸಿ ನಿತ್ಯನೇಮವಂ ಸಲಿಸಿ ಭಾಸುರದ ರಾತ್ರಿಯಂ ಕಳೆದು ಬಳಿಕುದಯದವಸರದ ಪೂಜಾಸುಖಾತುರದೊಳುಇರಲಿತ್ತ ಗುಡ್ಡರೆತ್ತುಗಳ ಕೊರಳಂ ಹೂಡಿಭರದೊಳಿದಿರಾಗಿ ಕೊಂಡೊಯ್ಯಲೆಂದುಲಿದು ಚಪ್ಪರಿಸಿ ಹೊತ್ತೆತ್ತಿ ನೂಂಕಿದೊಡೆ ಮಿಡುಕದೆ ರಥಂ ಗಿರಿಯಂತೆ ನೆಲಸಿರ್ದುದು

ಭಂಡಿ ನಡೆಯದ ಹದನನಱಿಯದಂತಾಗಳುದ್ದಂಡ ಗುಡ್ಡರು ಹೊಡೆಯೆ ಬಿಡೆ ತೆಗೆದು ಮೂಗೂಱಿದಿಂಡುಗೆಡೆದೆತ್ತುಗಳು ದೇಹಮಂ ಬಿಟ್ಟು ಜೀವಂ ಮಲ್ಲಿನಾಥನೆಡೆಗೆಹಿಂಡುಗೊಂಡಡಗುತಿರೆ ನಿತ್ಯನೇಮದೊಳಿರ್ದುಕಂಡು ಸಿದ್ಧರ ದೇವನಾ ಜೀವವಂ ಹಿಡಿದುಕೊಂಡು ಜೀವದ ಹೋಹ ಬಹ ಗೀತಮಂ ಬಿನ್ನಹಂ ಮಾಡಿ ನಡೆತಂದನು

ಮರಳಿ ಹರಣಂಗಳಂ ಹಿಡಿತಂದು ಕೆಡೆದಿರ್ದಹಿರಿಯೆತ್ತುಗಳ ಶವಗಳೊಳಗಿಟ್ಟು ತಡವಿ ಚಪ್ಪರಿಸೆ ಮೈಮುರಿದು ಕೊಣಕಿಟ್ಟೇಳೆ ಕಂಡು ಹರುಷಂದಳೆದು ಹೆಗಲ ಹೂಡಿಗುರುವರೇಣ್ಯಂ ಸಕಲ ಚೇಷ್ಟಾಪರಂ ಚರಾಚರ ಭರಿತನಖಿಳ ಸಾಮರ್ಥ್ಯಯುತ ಶಿವಕೀರ್ತಿಶರಧಿಶಶಿ ರಾಮನಾಥಂ ಮುಂದೆ ನಡೆಯೆ ನಡೆದುದು ರಥಂ ಜಗ ಹೊಗಳಲು

ತಿಂಗಳಂ ಸಾಗರಕೆ ತಪ್ಪಂತೆ ಪುರದ ನಡುವಿಂಗೆ ರಥವಂ ತಂದು ಹಲಕೆಲವು ಶಿಲ್ಪ ಶಾಸ್ವಂಗಳೊಳಭಿಜ್ಞರಂ ಕರಸಿ ಬೆಸನಂ ಕೊಟ್ಟು ಮುಂದಿಟ್ಟು ತೋಱಲವರುಕಂಗಳಾಲಿಗಳ ಮುಸುಕಿರ್ದೆವೆಯ ಬೆಸುಗೆಯಂಪಿಂಗಿಸುವ ಮನವೆನಿಪ್ಪುಳಿಗಳಂ ಕೊಂಡಾದಿಲಿಂಗದ ಮುಖಕ್ಕೆ ಮಱೆಯಾದ ಕತ್ತಳಿಕೆಯಂ ಕಳೆಯಲನುಗೈದರು

ಫಳದ ಮೇಲಣ ಸೊಪ್ಪು ತಿರುಳು ರಸಮಂ ತೆಗೆಯೆಬಳಿಕೊಳಗೆ ಬೀಜ ಸ್ವಯಂಭುವಾಗಿದ್ದಂತೆಬಳಸಿ ಲಿಂಗದ ಮುಖಕೆ ಕವಿದಡ್ಡವಾದ ಕತ್ತಳಿಕೆ ಹೊರೆತೆರೆಸೆರೆಗಳಅಳವಟ್ಟ ಸೆಜ್ಜೆಗಳೆವಂತೆ ಪಿಂಗಿಸಿ ಕಳೆದುತೊಳಪ ಸ್ವಯಂಭುಲಿಂಗವ ಕಂಡರಾಗ ನಿರ್ಮಳ ಲಿಂಗದೊಳು ಕಠಿನಮಂ ನುಡಿದವಂಗಾಗದಿಹುದೆ ನಾಯಕ ನರಕವು

ಸಂದ ಶಬ್ದಾರ್ಥದಂತರ್ಧನಾರೀತತ್ವದಿಂದೆಸೆವ ಸಹಜ ದಂಪತಿಗಳಂ ಬೇರ್ಪಡಿಸಿದಂದತಿ ದ್ರೋಹೆಂದು ಮಾಡಿದ ಸಯೋಗಲಿಂಗಕ್ಕೆದುಮುಖವ ರಚಿಸಿಅಂದವಱ ಮೇಲೆ ತರತರವಿಡಿದು ಬಳಸಿ ಮುಖವೃಂದಮಂ ಸವೆದು ಬಳಿಕಂ ಬೇಱೆ ಬೇಱೆ ಮುದದಿಂದಂ ಸಯೋಗಲಿಂಗವ ಸಾವಿರವನು ಒದವಿಸಿದನಚಳಿತ ಸಿದ್ಧನು

ಈ ಸರ್ವಲಿಂಗ ಪ್ರತಿಷ್ಠೆಯೊಳಗೆಸೆವ ನಾನಾ ಶುದ್ಧನಾದವಾ ಹೋಮಧೂಮಂ ಸೋಂಕಿದಾ ಸಕಲ ಜನದ ಪಾಪಂ ಪರೆದು ಪುಣ್ಯಮಯವಾಗಬೇಕೆಂದು ಚರರದೇಶದೇಶಕ್ಕಟ್ಟಿ ಕರಸೆ ನೆರೆದುದು ಮೇಲೆಸೂಸಿದಣು ಧರೆಗಾಣದೆನಲಪುದೈ ಸಲ್ಲದೀಸೈಸೆನಿಪ್ಪುದರಿದಾ ಪುರದ ಸುತ್ತಲರೆಗಾವುದಂತರದೆಡೆಯೊಳು

ರಸೆಯಱೆಯೆ ಕಾರಹುಣ್ಣುವೆಯ ಮುಂದಣ ಚತುರ್ದಶಿಯ ದಿನ ನಡುವಿರುಳು ಲಿಂಗಂಗಳಂ ಪ್ರತಿಷ್ಠಿಸುವೆನೆಂದಲ್ಲಿಗೆ ತಥೋಚಿತ ದ್ರವ್ಯ ಪರಿಕರವನತಿ ಸಂಭ್ರಮದಲಿಹೆಸರಿಡಲು ಬಾರದುಪಮಿಸಬಾರದೆನಿಸಿ ನೆರಪಿಸಿ ನೆನೆದು ಲಿಂಗದಭಿಷೇಕದವಸರಕಮೃತರಸವ ತರಬೇಕೆಂದು ನುಡಿದು ಪೊಱಮಡುವಾಗಲಿನನಸ್ತಗಿರಿಗಿಳಿದನು

ಅಳಿಯಿರಲು ಪೂವನಾ ಪೂವಿರಲು ಜಲವನಾಜಲವಿರಲು ಕೊಳನನಾ ಕೊಳನಿರಲು ವನವನೊಸೆದಳವಡಿಸಿದಜನಂತೆ ದೃಷ್ಟಮಹಿಮೆಗಳಿರಲು ಲಿಂಗವ ಲಿಂಗವಿರಲುಹೊಳೆವ ಪೀಠಮುಮನಾ ಪೀಠಮಿರಲಧಿಕತರನಿಳಯಮಂ ವಸುಮತಿಗೆ ಹೊಸತೆನಿಸಿ ಚೆಲುವಿಂಗೆನೆಲೆಯೆನಿಸಿ ಮಂಗಳಕೆ ಮನೆದೈವವೆನಿಸಿ ರಚಿಸಿದನು ಸಿದ್ಧವರೇಣ್ಯನು

ನಾಡೆ ಮೊಳಗುವ ಬಹಳ ವಾದ್ಯತತಿಯೊಳಗೆ ಕುಣಿದಾಡಿ ಹರಸುವ ಜನದ ಪುಣ್ಯರವದೊಳಗೆ ಕೈನೀಡಿ ದಿವಿಜರು ಸುರಿಯೆ ಕವಿವ ಪೂಮಳೆಯೊಳಗೆ ತತ್ತ ಶುಭಲಗ್ನದೊಳಗೆಕೂಡಿದನು ಶಿವಶಕ್ತಿಗಳನು ಶಿವಶಿವ ಮರಳಿನೋಡಿ ಕೊಂಡಾಡಿ ಮುಂಡಾಡಿ ನೆಱೆಪಾಡಿ ತೂಗಾಡಿದನು ಶಿರವನಾ ಲಿಂಗದ ಕಳಾವಿಳಾಸಕ್ಕೆ ಸಿದ್ಧರ ದೇವನು

ಮೌನದಿಂದೆಂತಕ್ಕೆ ಕಣ್ಮುಚ್ಚಿ ಮನದೊಳಗೆಜಾನಿಸುತ್ತಾಹ್ವಾನಿಸುತ್ತರ್ಚಿಸುವ ತೊಡಕನಾನಂದದಿಂ ನಿಲಿಸಿ ನಿಜಮೂರ್ತಿಯಂ ಧರೆಗೆ ತೋಱಿದೀ ಶಿವಲಿಂಗದಆನನಂ ದಣಿಯೆ ಪಂಚಾಮೃತಂ ಮಾಡಬೇಕೀ ನೆಲದೊಳುಳ್ಳ ಸಂಕಲ್ಪಾಮೃತದೊಳಪ್ಪುದೇನೋ ದಿವ್ಯಾಮೃತವನೀಶನಂ ಬೇಡುವೆಂ ತಂದು ಮಾಡುವೆನೆಂದನು

ಮಂಗಳರವಂಗಳಂ ಮಾಣಬೇಡುಲಿವ ವಾಮಂಗಳಂ ನಿಲಿಸಬೇಡೋಲೈಸುತಿರ್ಪ ಪಾತಂಗಳಂ ತಡೆಯಬೇಡುತ್ಸವದಿ ನೆರೆದಾಡುವೀ ಜನಂ ಪರೆಯಬೇಡತಿಂಗಳೀಯೆಡೆಗೆ ಬಾರದ ಮುನ್ನ ಸುಧೆಯನೀಲಿಂಗದವಸರಕೆಂದು ತಪ್ಪೆನೆಂದಂಗವಿಸಿಹಿಂಗದೆ ಛಲವ ಹಿಡಿದು ನಡೆಗೊಂಡನಾಗಳಾ ಮೃಡನಿರ್ಪ ರಜತಗಿರಿಗೆ

ಅರಮನೆಗೆ ಬಂದು ಬಾಗಿಲುಗಳಂ ಕಳಿದು ಕಳಿದುರವಣಿಪ ನಡೆಯಱಗಲನುಗೆಯ್ವ ತನು ಗಣೇಶ್ವರರ ನೆರವಿಯ ಬಗಿದು ಶಿವನನಾರೈವ ಕಣು ಸುಧೆಯನಿಂತೀಗಳೆನಗೆಕರುಣಿಸೆಂದಾಡಲಟಮಟಪ ನಾಲಗೆವೆರಸುಹರಿತಂದು ಮೆಯ್ಯಕ್ಕಿದಚಳಿತನನೆತ್ತಿ ದೇವರ ಬಲ್ಲಹಂ ತೊಡೆಗೆ ತೆಗೆದು ಬೋಳೈಸಿ ಕೇಳ್ದನು ಬಂದ ಕಾರಣವನು

ವಿಷಕಂಠ ವಿಷಮಾಕ್ಷ ವಿಷಮಾಸ್ತ್ರಹರ ವಿಷಮವಿಷಧರಾಭರಣ ವಿಷಜಾಸನಕಪಾಲಧರವಿಷರುಹಾಂಬಕನಯನಪಾದ ವಿಷಳವ್ಯಾಪ್ತ ನುತತರ ವಿಶಾಖಜನಕವಿಷಧರ ಧರಾಧಿಪತಿ ವಿಷಧರಕಿರಣಮೌಳಿವಿಷಯ ವಿಹ್ವಲದೂರ ವಿಶದಾಮೃತವನು ನಿಸ್ತುಷನಾಗಿ ಕರುಣಿಸುವುದಾದಿ ಲಿಂಗಕ್ಕಭಿಷವಂ ಮಾಡಬೇಕೆಂದನು

ತನಯನಭಿಷೇಕಮಂ ಮಾಡುವಾರ್ತಕ್ಕೆ ಭಕ್ತ ನಿಧಾನನತಿಸಂತಸಂಬಟ್ಟು ಕಂದ ಕೇಳನುಪಮ ಸುಧಾರಸಂ ಪಾತಾಳ ತಳದೊಳದೆ ಕನಕಘಟದಿಂದ ನಿನ್ನಮನಕೆ ಬಂದನಿತನೊಯಿ ಹೋಗೆಂದು ಬೆಸಸೆ ಪದವನರುಹಕ್ಕೆಱಗಿ ಬೀಳ್ಕೊಂಡು ಸಂತೋಷಮಂಡನನಿಳಿದು ಫಣಿಲೋಕಮಂ ಸಾರ್ದನಿತ್ತಲತ್ತಲು ರುದ್ರನೇಗೈದನು

ಎಳಸಿ ಸಿದ್ಧೇಶ್ವರನ ಕೂಡೆ ಹುಸಿ ಜಗಳಮಂಬೆಳಸಬೇಕೆಂತು ಬೆಳಸುವೆನೆಂದು ಮನದೊಳುಮೃಳಿಸುತೆನಗಂಜುವಂತೆನ್ನ ಭಕ್ತರ್ಗಂಜುವನೊ ಅಂಜದಿಹನೊ ಎಂದುತಿಳಿವೆನೆಂದೀಶ್ವರಂ ಮುಂದೆ ಹರಿದಮೃತಮಂಕೊಳಬಂದವರ್ಗೆಮ್ಮ ಭಕ್ತರಾಣೆಯನಿಟ್ಟುಕಳುಹಿಯೆಂದಲ್ಲಿ ಕಾವರ್ಗೆ ನುಡಿದಿತ್ತ ಬರಲತ್ತಲಾತಂ ಹೋದನು

ಘನ ಕಾಮಧೇನುಗಳು ಮೇವ ಕಲ್ಪದ್ರುಮದವನದ ನಡುವಣ ಸಿದ್ಧರಸಕೂಪಕೂಲದೊತ್ತಿನೊಳು ಪರುಷದ ಸಱಿಗಳಿಂ ವಿಶ್ವಕರ್ಮ ನಿರ್ಮಿಸಿದ ಹಿರಿಯರ ಮನೆಯೊಳುಕನಕಮಯ ಕೊಪ್ಪರಿಗೆಗಳೊಳು ಚಿಂತಾಮಣಿಯಮಿನುಗೆಸೆವ ಮುಚ್ಚುಳುಗಳಿಕ್ಕಿ ಮುದ್ರಿಸಿ ರಾಜಿಪನುಪಮಾಮೃತದೆಡೆಗೆ ಬಂದನಪ್ರತಿಮಸಿದ್ಧಂ ಸಿದ್ಧರಾದಿತ್ಯನು

ಕಿಡಿಗಣ್ಣ ಕೆಮ್ಮೀಸೆಗಳ ಕೆದಱುದಲೆಯ ಕಾರೊಡಲ ಕೊಂಕಿದ ಕೋಱಿದಾಡೆಗಳ ರೋಮವಿದಿರಡರ್ದ ಪೇರುರದ ಕೊಬ್ಬಿದ ಭುಜಂಗಳ ಓಡಿದ ಪೆರ್ಬಾಳ ನಿಡುವಲಗೆಯತುಡುಕಿ ಗಗನವನಲೆವ ಮೌಳಿಗಳ ಚಲ್ಲಣದಕುಡಿಯ ತೊಂಗಲ ಹಲವು ವಿಧದ ನಾನಾಧ್ವಾನವಿಡಿದ ಗರ್ಜನೆಯ ರಕ್ಕಸ ಭೂತವೇತಾಳರಮೃತಮಂ ಕಾದಿರ್ದರು

ಖಳರ ನಿಡಿಯೊಡಲದ್ಭುತಕ್ಕೆ ನಾನಾರೂಪುಗಳ ಭಯಂಕರ ಗರ್ಜನೆಗಳುಗ್ರಕ್ಕೆ ಸಂಚಳಿಸದನೆ ಸಡಿಫಡಿಲಿಲ್ಲ ಕರಿವಿಂಡ ಪೊಗುವಾ ಸಿಂಹಶಿಶುವಿನಂತೆನಿಳಯಮಂ ಹೊಗೆ ಕಂಡು ಬೇಡ ಬೇಡಲೆ ಸಿದ್ಧಕುಲತಿಲಕಯೆನಲು ಲೆಕ್ಕಿಸಿದಮೃತಮುದ್ರೆಯಂಕಳೆಯುತಿರೆ ಕಳೆದೆಯಾದೆಡೆ ನಿನಗೆ ಶಿವಭಕ್ತರಾಣೆಯೆಂದಡೆ ನಿಂದನು

ಹರಭಕ್ತರಾಣೆಯಂ ಕೇಳ್ದು ಮತಿ ಮಾಸಿ ಭರಕರಗಿ ಬಗೆ ಬಾಡಿ ಮುದವದಿರಿ ಕಾಲ್ಕುಂಬಿಕ್ಕಿತಿರಿಗಿ ಲೋಕಂಗಳಂ ಕಳಿದೇಱಿ ಮೀಱಿ ನಡೆತಂದು ಕೈಲಾಸಪುರದಹಿರಿಯ ಬಾಗಿಲ ದಾಂಟಿ ಸವೆದ ಸೈರಣೆಯ ಮಾದುರವಣಿಪ ಸಲುಗೆ ಮುಕ್ಕಳಿಸೆ ಮುಚ್ಚಿದ ಮುನಿಸುವೆರಸು ಕದಡಿದ ಗಂಗೆಯಂತೆ ಬಂದಗಜಾಧಿಪತಿಯ ಸಭೆಯಂ ಹೊಕ್ಕನು

ನಗೆ ಸುಗಿದು ಕುಂಬಿಡುತ ಕೋಪದಿಂ ಮೈಯಿಕ್ಕೆತೆಗೆದೆತ್ತಿ ತಲೆದಡವಿ ತೂಪಿಱಿದು ಮುಂಡಾಡಿಬಿಗಿಯಪ್ಪಿ ತೊಡೆಗೆ ತೆಗೆದೋವಿ ಗಿರಿಜಾಮನೋರಾಮನಾ ರಾಮಯ್ಯನಮಗನೆ ಮನದೊಳಗೆ ಮಾಜದೆ ಮಾತುಗೊಡು ಮೊಗದದುಗುಡವೇನೇಕೆ ಮರಳಿದೆ ಹೋದ ಕಾರ್ಯದುಜ್ಜುಗವಾಯ್ತೆ ಹೇಳು ಹೇಳೆನ್ನಾಣೆ ಹೇಳಯ್ಯ ಹೇಳೆಂದು ಬೆಸಗೊಂಡನು

ಹುಸಿ ನುಸುಳು ನುಡಿಗಾಹು ಗನ್ನಗತಕಂಗಳಲಿಕುಶಲನಲ್ಲದೊಡೆಲ್ಲರಂ ಕೊಂದು ಕಡೆಗೆ ವಂದಿಸಿಕೊಂಬ ತಿರಿದು ಲೋಕಂಗಳಂ ಹೊರೆವ ವಿಷವುಂಡುಳಿವ ಹೀನವೆಸರಹಸಿಯ ತೊಗಲುಟ್ಟು ಶುದ್ದಾಹ್ವಯನೆನಿಸುವ ಹೆಂಗುಸಿಗೊಡಲೊಳರ್ಧಾಂಗವಿತ್ತು ಪುಣ್ಯ ಶರೀರವೆಸರ ಧರಿಸಿರ್ಪ ನಿನ್ನಲ್ಲಿ ತಪ್ಪಂ ಸಾಧಿಸುವ ಧೀರನಾರೆಂದನು

ಏಗೈದೆ ನಾಂ ನೆಗಳ್ದ ತಪ್ಪಾವುದೆಂದೆನಲುಕೂಗಿ ಕರೆದೋಯೆಂಬನಂತಳಿಸಿ ತೊಟ್ಟಿಲಂತೂಗುವವಳಂತೆನ್ನನಮೃತಕ್ಕೆ ಕಳುಹಿ ನಿನ್ನವರ ಮೇಲಾಣೆಯಿಡಿಸಿಈಗಳುಪಚರಿಸಿದಪೆಯೆಂದಡಂತವರಾಣೆಯೇಗುವುದು ನಿನ್ನನೆನೆ ಭಕ್ತರಾಣೆಯ ಮೀಱಿಹೋಗಲೆಳಸಿದ ಹೊತ್ತು ನಿನ್ನಾಣೆಯಂ ಮೀಱಿದವನಲ್ಲವೇ ಎಂದನು

ತನ್ನ ಭಕ್ತರ ಮೇಲಣಾಣೆಯಂ ಪಾಲಿಸಿದನನ್ನಕಾಱನಭವನೆತ್ತಿ ತರ್ಕೈಸಿ ಕೇಳಿನ್ನು ನಿನ್ನಾಣೆ ತೊಂಡಾಣೆ ಹೋಗೆಂದು ಕರುಣಿ ಕಳುಪಲ್ಕಿಳಿದು ಬಂದುಮುನ್ನಿನೆಡೆಗೈದಿ ರಕ್ಕಸರ ಲೆಕ್ಕಿಸದೆ ಹೊಕ್ಯುನ್ನತಾಮೃತದ ಘರ್ಘರ ಮುದ್ರೆಯಂ ಮುಱಿದುಹೊನ್ನಕಳಸದಲೋವಿ ತೀವಿಕೊಂಡಾ ವನದ ಕರಿಯ ಮರುಗವ ಕೊಂಡನು

ಹೃದಯದ ಕಳಂಕು ದೋಷಾಕರತೆ ನಷ್ಟಕಲೆಮೊದಲಾದ ದುರ್ಗುಣಂಗಳುವೆರಸು ಬಿಡದಳುಕದುದಯವಪ್ಪಮೃತಕರನಂ ತನ್ನ ಸದ್ಗುಣದಿ ನಗುವೆನೆಂದುದಯವಪ್ಪಸದಮಲಾಮೃತಕರನೊ ಎಂಬಂತೆ ಭೂತಳಕುದಯಿಸಿದನಮೃತಕರನಾಗಿ ಸಕಲರು ನಲಿಯೆಪದೆದೆ ಕುವಲಯಲೋಕದಘತಿಮಿರವೋಡೆ ಕರಕಮಲಾಳಿ ಮುಗಿಯಲಂದು

ಚಾರು ಚಂದ್ರಿಕೆಯ ಬರವಂ ಪಾರ್ದು ನಿಂದಿಹ ಚಕೋರ ಸಂಕುಳದಂತೆ ಬಪ್ಪ ಹೊತ್ತಂ ನೋಡುತಾರತಿಯ ಸೀಗುರಿಯ ಚಾಮರದ ಝಲ್ಲರಿಯ ಬಹಳ ಮಂಗಳವಾದ್ಯದಸೌರಂಭದಿಂದಿದಿರ್ಗೊಂಡರಂತಾ ಪುರದವಾರನಾರಿಯರು ಸದ್ವೃತ್ತ ಭಕ್ತರು ನಯದೊಳಾ ರಾಮನಾಥಂ ನುಡಿದಂತೆ ಗಂಡನಂ ವಂದಿಜನಬೃಂದಸಹಿತ

ನುಡಿದು ಹುಸಿದನೆ ಬಪ್ಪೆನೆಂದು ತಪ್ಪಿದನೆ ಸಡಿಫಡ ಭಾನು ಪೋಷಾಗ ಪೋಗಿ ಸುಧೆಯಂ ಕೊಂಡುಕಡೆಗೆ ನಡುವಿರುಳು ಗಡಿಯೊತ್ತಿನೊಳು ಬಂದ ಭಾಪುರೆ ಸಿದ್ದಪತಿಯೆ ಎಂದುಪೊಡವಿ ಬಣ್ಣಿಸಲಾದಿಲಿಂಗಾಂಘ್ರಿಯಂ ಕಂಡುಪೊಡಮಟ್ಟು ತಂದಮೃತಘಟಮನರ್ಚಿಸಿ ಹಿರಿಯರೊಡೆಯನಭಿಷೇಕಮಂ ಮಾಡಿದಂ ಬೊಬ್ಬಿಡುವ ಪಂಚಮಹಶಬ್ದದೊಳಗೆ

ಗಂಗೆ ನೆಲೆಗಿಡೆ ಜಡೆ ತರಂಗಿಸಲು ಮಸಗಿ ಮಱಿದಿಂಗಳಲ್ಲಾಡೆ ಸೂಡಿದ ಶಿರೋಮಾಲೆ ಜೀವಂಗೂಡೆ ನಾಡೆ ಹಣೆಗಣ್ ತಣಿಯೆ ಕೊರಳ ಹೊಸಗರಳವಿನಿದಾಗಿ ಕುಱುಪುಹಿಂಗಿ ವರ್ಣಂಗಳೊಂದೇ ವರ್ಣವಾಗೆ ಧವಳಾಂಗವಿಮ್ಮಡಿ ಧವಳವಾಗೆ ಮೆಱೆವಾದಿಲಿಂಗಂಗೆ ತುಂಗಾಭಿಷೇಕವನಲಂಕರಿಸಿದಂ ಸಿದ್ಧಕುಲಚಕ್ರೇಶನು

ಶಿವನ ಮೈಯೆಲ್ಲ ಮುಖವಾಗಿ ನಾಲಗೆಯಾಗಿಸವಿಯೊಳವಗಾಹವಿರ್ದಂ ತಣಿದನೊಡನಖಿಳಭುವನದ ಚರಾಚರಂಗಳು ತಣಿಯೆ ತೇಗಿದಂ ಸರ್ವದೊಳು ದನಿ ಪುಟ್ಟಲುಇವನೆಯ್ದೆ ಕಂಡು ಸಿದ್ಧರ ಬಲ್ಲಹಂ ತಣಿದುನವಸುಧಾ ಪಾದೋದಕವನು ಗುಡ್ಡರ್ಗೆಱೆದುಸಿವನಿವಗೆ ಕೊಂಬುದೆಂದಿತ್ತು ನಂದಿಯ ಹಿಂದೆ ಬಂದೋಲಗಂಗೊಟ್ಟನು

ಮರಣಮಂ ತೊಡೆವ ಪ್ರಸಾದಾಮೃತವನು ಕೊಂಡಿರೆ ಕೊಂಡುದಿಲ್ಲೆಂದಡೇಕೆಂದು ಗುಡ್ಡರಂಗುರು ಕೇಳ್ಪಡಾವದಱ ಗೌರವದ ಶುದ್ಧತೆಯ ತುಹಿನತೆಯ ಸವಿಗಂಪಿನಉರವಣೆಯ ಸೊಗಸಿಂಗೆ ಕಣ್ಮನಂ ದಣಿದು ಕೊಕ್ಕರಿಸಿ ಕೊಳಲಱಿಯದಿರಿಸಿದೆವೆಂದಡಕಟ ಮೂಧರಿರ ಸುಡುಸುಡು ಮುಂದೆ ಹೊಂದುವರ್ಗೇನಪ್ಪುದೆಂದು ನೊಂದನು ಮನದೊಳು

ಕರುಣಿಸುವುದೆಂದು ಕಾಲ್ವಿಡಿದೊಡಂ ಕುಡದೆ ತತ್ಪುರ ತಟಾಕದ ಮಧ್ಯದೊಳು ಸುರಿದು ಲೋಕೈಕಗುರು ನಮಿತಕಲ್ಪತರು ಸಾಮರ್ಥ್ಯಸಿಂಧು ಕಲಿಯುಗದ ಕಾರಣರುದ್ರನುಹರುಷದಿಂದಾ ಕೈಯಲಾ ಅಮೃತಲಿಂಗಮಂಚರಿತದಿ ಪ್ರತಿಷ್ಠಿಸಿ ಮಹಾಪೂಜೆಯಂ ಮಾಡಿಗುರುಸಿದ್ಧರಾಮಯ್ಯ ದಾನಧರ್ಮವ ಮಾಡಿದಂ ಸರ್ವಜನ ನಲಿಯಲು