IV
ಸಿದ್ಧರಾಮ ಚಾರಿತ್ರ
ಶಾಪಹತರಾದ ಗಂಧರ್ವರ್ಗೆ ನಿಜವಿತ್ತುಕೋಪದಿಂ ಬಂದ ಮದನನ ಬಿಲ್ಲ ಬಿಸುಡಿಸಿದಭಾಪುರೇ ಶಿವಸಿದ್ಧರಾಮಯ್ಯ ಮರ್ತ್ಯದ ಮಹಾದೇವನಂ ನಂಬರೇ
ಮರಳಿ ವರಮಲ್ಲಿಕಾರ್ಜುನನೆಡೆಗೆ ನಡೆತಂದುತೊರೆವ ಕಣ್ಣಿಂದ ಕಂಪಿಸುವ ಕೈಯಿಂದವಂಕುರಿಪ ಮೈಯಿಂದ ತೊದಳಿಸುವ ಬಾಯಿಂದ ಡೆಂಡಣಿಪ ಕಾಲಿಂದ ಮೆಱೆವಕರುಣದಿಂದಂ ನೋಡಿ ಮುಟ್ಟಿ ಬಿಗಿಯಪ್ಪಿ ತುತಿಗರೆದು ಕುಣಿದಾಡಿ ಜಾನಿಸಿ ಬಳಿಕ ಲೋಕೈಕಗುರು ಸಿದ್ಧರಾಮನಾಥಂ ದಾನಧರ್ಮಮಂ ಮಾಡಲುದ್ಯೋಗಿಸಿದನು
ಇಂದೊಮ್ಮೆ ನೆರೆದೀ ಮನುಷ್ಯಮಾತ್ರಕ್ಕಿತ್ತೆನೆಂದಡೇನಹುದಖಿಳ ಮುಖದ ಜೀವಾಳಿಗಳಿಗೆಂದುವುಂ ತಪ್ಪದಂತೀವೆನೆಂದನುಗೈದು ಸತ್ರಮಂ ಪರಿಕಲ್ಪಿಸಿಸಂದ ಪುರದೆಣ್ದೆಸೆಯೊಳೊಂದು ಯೋಜನದೊಳಿಹಹೆಂದದಣು ಮೊದಲಿಱುಹೆ ಪಶುಪಕ್ಷಿ ಮೃಗವಾನೆಯೆಂದವಕ್ಕಲಸದುಚಿತಾಹಾರಮಂ ಕಟ್ಟಿಕೊಟ್ಟನುದಿನಂ ನಡೆಯಲು
ಹೀನರಿವರುತ್ತಮರಪಾತ್ರ ಸತ್ಪಾತ್ರವೆಂಬೀ ನೋಟವಿಲ್ಲ ಸರ್ವರಿಗೆ ಭೂದಾನ ಗೋದಾನ ಕನ್ಯಾದಾನ ವಸ್ತ್ರದಾನಂ ಮಹಿಷಿದಾನವಖಿಳಾನ್ನದಾನನಾನಾ ಮಹಾದಾನವಂ ಮಾಡಿ ನೆಱೆ ತಣಿಪಿಜ್ಞಾನನಿಧಿ ಸರ್ವದೇವರು ನವಗ್ರಹ ತಣಿಯೆನೂನವಿಲ್ಲದೆ ಜಗಜ್ಜನದ ಕೃಪೆಗಾ ನಿತ್ಯಹೋಮಕುದ್ಯೋಗಿಸಿದನು
ಹೋಮಾಗ್ನಿ ಮಲ್ಲಿನಾಥನ ಹಣೆಯ ಜಸ್ರಾಗ್ನಿಹೋಮೇಶ ಮಲ್ಲಿನಾಥಂ ಹೋಮ ನಿಷ್ಕಾಮಹೋಮವಿದಕಗ್ನಿಯೇ ಸಂಸ್ಕಾರಮುಲ್ಲೇಖ ಸಾಧನಂ ದ್ರವ್ಯಸಿದ್ಧಿರಾಮವೆನಿಸಲು ಸಿದ್ಧಮಂತ್ರದಿ ನವಗ್ರಹಂಭೂಮಿಯೊಳಗುಳ್ಳ ದೇವರು ಭೂತವಾಹುತಿಯನೇಮದಿಂ ನಿತ್ಯಹೋಮದೊಳಿಲ್ಲಿ ಕೊಳುತಿರ್ಪುದೆಂದಾಸನವನಿತ್ತನು
ಮೃಡಮಲ್ಲಿನಾಥಂಗೆ ನಿತ್ಯನೇಮಂಗಳಂನಡೆಯಿಸುತ ಹೋಮಮಂ ಮಾಡಿ ಮಂತ್ರದಿ ರುದ್ರರೊಡಗೂಡಿ ಜಂಗಮಾರ್ಚನೆಯಿಂದ ಸರ್ವಗಣದೊಳು ಧರಾತಳದ ಮೇಲೆಪಡಿಯಿಲ್ಲೆನಲು ಪುರವ ರಚಿಸಿ ಬಳಿಕೊಂದು ದಿನನಡುವಿರುಳು ಕ್ಷೇತ್ರಮಂ ಬಲವರುತ್ತಂ ಮೂಡಗಡೆಯಿಂದ ತ್ರಿಪುರಾಂತಕಾದಿ ಸಿದ್ಧನೈತರುತ್ತಿರೆ ಭಯಂಕರ ಮೊಳೆತುದು
ಕಾರೊಡಲು ದಾಡೆ ಮಣಿಮಕುಟ ಫಣಿಕುಂಡಲಂತೋರಗಣು ಕೆಮ್ಮೀಸೆ ರುಂಡಾಭರಣ ಸರ್ಪಹಾರ ಶೂಲಂ ಡಮರುವಸಿ ಫಳಕ ಕಿಗ್ಗಟ್ಟನೆಸೆವ ಬಾವುಲಿ ತೊಡರಿನವೀರಭದ್ರಂ ಚಂಡಿ ಕೋಳಾಹಳಂ ಮೂಕಭೈರವಂ ನಂದಿ ಮಾಕಾಳ ಮದಗಜವದನವೀರಕರೆನಿಪ್ಪಾ ಗಣೇಶ್ವರರು ಸಂಭ್ರಮಂ ಮಿಗಲು ಗುರುವ ಕಂಡರು
ಕೆದಱುದಲೆ ಕೆಮ್ಮೀಸೆ ರುಂಡ ಮುಂಡಾಭರಣವೊದವಿರ್ದ ವೃಶ್ಚಿಕದ ಮಾಲೆ ಪೇರುರದಲ್ಲಿವಿದಿತವೆನೆ ಡಮರು ಶೂಲಂ ಖಡ್ಗವರಿದ ತಲೆ ದಿಗ್ವಸನ ಪಾದುಕೆಯಲಿಅದಿರದೈತಂದುಂಚನುನ್ಮತ್ತಕ್ರೋಧ ಚಂಡದುದಾರ ಸ್ವಚ್ಛಂದ ಮೂಕರುರು ಭೈರವರುಸದಮಳಜ್ಞಾನಿ ಗುರುವಿಂಗೆಱಗಿ ಕೈಮುಗಿದು ನಿಂದಿರ್ದರೇವೊಗಳ್ವೆನು
ಹಸುರುಮೈ ಹಾವಿನಾಭರಣ ಬಿಡುಮಂಡೆ ಕೂರಸಿ ಪಾನಪಾತ್ರೆ ಘಟಕುಚ ದಿಗಂಬರ ಹವಳವೆಸೆವ ಹಾವುಗೆ ರುಂಡಮಾಲೆ ಗಜಗಮನ ಕೆಂಪಿನ ಪುಷ್ಪಸರವೊಪ್ಪುವಾಹೊಸ ವಿಜಯೆ ಯಮದೂತಿ ಮಕರಿ ಜಯೆ ಕಾಳಾರಾಕ್ಷಸಿ ಪರಾಜಿತೆ ಷಷ್ಠಿಯಜಿತೆಯೆಂಬೆಂಟು ಹೆಸರೆಸೆವ ದೇವಾಂಗನೆಯರೈತಂದು ಕಂಡರಪ್ರತಿಮ ಸಿದ್ಧೇಶ್ವರನನು
ನೀವಾರಿಗಿಲ್ಲಿಗೇಕೈತಂದಿರೆಂದಡಗಜಾವರಂ ಕಳಿಪಿದಡದೇಕೆಂದಡೀವೂರಕಾವ ಕೆಲಸಕ್ಕೆಂಟು ಭೈರವರನೆಂಟು ದೇವರನೆಂಟು ಗಣಮುಖ್ಯರಆ ವೀರ ಗಣನೆಂಟಱೊಳಗೊಬ್ಬವಂ ನರರಠಾವಿಂಗೆ ಹೋಗಲಾನೊಲ್ಲೆನೆಂದಡೆ ಮುನಿದುದೇವದೇವನು ದೈತ್ಯನಾಗೆಂದು ಶಾಪಮಂ ಕೊಟ್ಟನವಧರಿಸೆಂದರು
ಕವಿಮಂಚ ಭೈರವಂ ವಿಜಯೆ ವೀರೇಶನೆಂಬಿವರ ಮೂಡಲು ಬೆನಕನಜಿತೆ ಘನ ಚಂಡ ಭೈರವನನಾಗ್ನಿಯದೊಳು ಜಯೆ ನಂದಿ ಮಾಕಾಳನುನ್ಮತ್ತ ಭೈರವರನುಜವನ ದೆಸೆಯೊಳು ಮಕರಿ ಚಂಡೇಶ ಕ್ರೋಧ ಭೈರವರ ನೈರುತಿಯೊಳು ಪರಾಜಿತೆಯನುದಿತ ಭೈರವ ವೀರಕರನಿರಿಸಿದಂ ಪಡುವಲಪ್ರತಿಮ ಸಿದ್ಧಕುಲ ಚಕ್ರೇಶನು
ವೀರಕೋಳಾಹಳಂ ಷಷ್ಟಿ ನಿಷ್ಟಶ್ವಂ ಚಂಡಭೈರವರ ವಾಯವ್ಯದೊಳುಮಶ್ರುವಂ ಮೂಕಭೈರವಂ ಯಮದೂತಿಯಂ ಬಡಗಲೀಶಾನ್ಯದೊಳು ಕಾಳರಾಕ್ಷಸಿಯನುರೌರವ ದುರಾತ್ಮ ಭೈರವನನೀ ಕ್ಷೇತ್ರವನಹೋರಾತ್ರೆ ಕಾವುದೆಂದಿರಿಸಿ ರಾತ್ರಿಯೊಳತಿ ಮಹಾರುದ್ರ ಮಹಕಾಳಕಾದಿ ಶರಣೆಂದಡೀಶನ ದೆಸೆಯೊಳಿರಹೇಳ್ದನು
ಅಲ್ಲಿಂದ ಸಿದ್ಧನೈತರ್ಪನ್ನ ಲಕ್ಷ್ಮಿ ಬಂದೆಲ್ಲಿಪ್ಪೆನೆನಗೆ ಠಾವಾವುದೆನೆ ನೀನೊಬ್ಬರಲ್ಲಿಪ್ಪುದುಂಟೆ ಸಂಚಲೆ ಕೃತಕಿ ಪಿತೃಪುತ್ರವೈರದಾಯಿನಿ ನಿಷ್ಠುರೆಬಲ್ಲತ್ತ ಹೋಗೆನಲ್ಕಿಲ್ಲಿಂದ ಹೋದಡಘಮಲ್ಲ ನಿನ್ನಾಣೆಯೆನೆ ಮಲ್ಲಿಕಾರ್ಜುನನ ಪದದಲ್ಲಿದ್ದು ಕವಿಲೆಗಳನಾರೈದುಕೊಂಡಿರೆಂದಿತ್ತನಭಿನವರುದ್ರನು
ಶ್ರೀ ಮಲ್ಲಿನಾಥನ ಪದಾಂಭೋಜದಲ್ಲಿಗಾರಾಮನಾಥಂ ಬಂದು ನಿಚ್ಚಲೆಂದಿನ ತೆಱದಿನೇಮದಿಂ ಕ್ಷೇತ್ರಪ್ರದಕ್ಷಿಣಂ ಬಪ್ಪುದಂ ಕೈಮುಗಿದು ಬೇಡಿ ಪಡೆದುಪ್ರೇಮದಿಂ ಲಿಂಗಪೂಜಾಕೌಶಳಂಬೆತ್ತುಸಾಮರ್ಥ್ಯಭೂಷಣಂ ಶಾಂತಿಸಂಪನ್ನಂ ದಯಾಮೇರು ಸುಖಸಂಕಥಾವಿನೋದದೊಳಿರಲು ಕೀರ್ತಿವಧುವೇಗೆಯ್ದಳು
ಹಿರಿದು ಭಕ್ತ್ಯಂಗನೆಯನುರದೊಳುಂ ಜಯಸತಿಯವರಭುಜದೊಳು ದಯಾಸತಿಯ ಮುಖದೊಳತಿ ಶಾಂತಿತರುಣಿಯಂ ಮನದೊಳೆವಿಡದಪ್ಪಿ ನೆರೆವುದಲ್ಲದೆ ಮತ್ತೆ ಪರನಾರಿಗೆತೆಱವನಟ್ಟುವನಿವನ ಬೇಟದೊಳು ಕಣ್ಗಾಣದಿರದೆ ಕೈವಿಡಿದೆನ್ನ ನೂಂಕಿ ಕಳೆದಂ ಮಹಾಪುರುಷರಱಿದಿರಿ ಸಿದ್ಧರಾಮನೆಂದಾ ಕೀರ್ತಿವಧು ದೂಱಿದಳು ಜಗದೊಳು
ನಡೆಗೆ ಹೆಜ್ಜೆಗಳಿಲ್ಲ ತನುಗೆ ನೆಳಲಿಲ್ಲ ನೀರ್ಗುಡಿಯನುಣ್ಣಂ ಮಱೆಯನಲಸನಾಗುಳಿಸನಾವೆಡೆಯೊಳಂ ವಿಣ್ಮೂತ್ರಮಂ ವಿಸರ್ಜಿಸ ಬೆಮರನೆವೆಯಿಕ್ಕನುಸಿರಿಕ್ಕನುನುಡಿದುದೇ ಮಂತ್ರ ಹೆಸರಿಟ್ಟುದೇ ದೈವವಿದ್ದೆಡೆ ಮಹಾಕ್ಷೇತ್ರ ಕಂಡವನೆ ಜೀವನ್ಮುಕ್ತಹಿಡಿದುದೇ ಕಾರ್ಯ ಸಿದ್ಧೇಶ್ವರಂಗೆಂಬ ನುಡಿ ಪಸರಿಸಿತು ಮೂಜಗದೊಳು
ಆ ಕೀರ್ತಿಯಂ ಕೇಳ್ದು ತೀವ್ರದಿಂ ಬಂದೊಸೆದನೇಕ ನೃಪರಾರಾಧಿಸಿದ ವಸ್ತುನಿಕರಮಂಸ್ವೀಕರಿಸಿ ಜನನ ಮರಣಕ್ಕೆ ಸೆಡೆದೈಹಿಕ ಪ್ರೇಮವಂ ತೊಱೆದು ಬಂದುವ್ಯಾಕುಳದೆ ಮಕ್ಕಳಾದರ್ಗಭಯವಿತ್ತು ಮಹಿಮೂಕರಂ ಸಿದ್ಧಪತಿಯುಂ ಜನಿಸಿತಕ್ಕೆ ಭೂಲೋಕದ ಸಮಸ್ತ ಜೀವಾಳಿಗಪವರ್ಗಮಂ ತೋರ್ಪೆನೆಂದನುಗೆಯ್ದನು
ಮಱೆದೊಮ್ಮೆ ನೆನೆದು ನಿಟ್ಟಿಸಿ ಕೇಳ್ದು ಪೆಸರ್ಗೊಂಡುಹರವರಿಯ ನರಕಮಂ ನರರೈದೆ ಗೆಲುವುದಕೆಗುಱಿಯಾದನೀ ಮಲ್ಲಿನಾಥನಿವು ದೊರೆಕೊಳ್ಳದಜ್ಞಾನಿ ಜನ್ಮವೆತ್ತುಹೊಱಗಿಪ್ಪ ಪಶುಪಕ್ಷಿ ಕ್ರಿಮಿಕೀಟಕಾವಳಿಗಳಱತು ನೀರ್ಗುಡಿಯೆ ಭವವಳಿವಂತು ಕಟ್ಟುವೆಂಕೆಱೆಯನಮರಾಪಗೆಯ ಮೈಮಱೆಯ ಮಾಂಗಲ್ಯ ಮೆಱೆಯಲೆಂದನುಗೆಯ್ದನು
ಮಲ್ಲಿಕಾರ್ಜುನನ ಮಹಾಮಂದಿರಕ್ಕಾಗ್ನೇಯದಲ್ಲಿ ಜಲಜನಿತ ಸೆಲೆಯಂ ನೋಡಿ ಕೆಱೆಯಗಲಎಲ್ಲಿತನಕೆಂದು ಸೀಮಾರೇಖೆಯಂ ಕಟ್ಟಿ ಸುಮುಹೂರ್ತವೆರಸಿ ಪಿಡಿದಪಲ್ಲವದ ಕಳಶ ಕನ್ನಡಿಯ ಸತಿಯರ ತಳಿತಝಲ್ಲರಿಯ ಬಹಳ ವಾದ್ಯದ ನಡುವೆ ನಡೆದು ಮುದದಲ್ಲಿ ಬಾಯಿನವಿತ್ತುವಿದಿರ್ಗೊಂಡನಾಹಾ ತಟಾಕ ಖನನೋದ್ಯೋಗನು
ಜೀವರೆಲ್ಲರ ದುರಿತಕರಿಗಂಕುಶಂಗೊಂಬಮಾವತಿಗನಂತೆ ಗುದ್ದಲಿಗೊಂಡನೊಡನೆ ನಾಲ್ಸಾವಿರ ಸಮರ್ಥ ಗುಡ್ಡರು ಗುದ್ದಲಿಯನೆತ್ತಿಯಗೆಯತೊಡಗಿದರಲಸದೆಏವೇಳ್ವೆನಾನಾತರ ಭವದ ಬೇರಗೆವಂತೆತೀವಿ ಹೊಱಗೊಕ್ಕನಜ್ಞಾನತೆಯನೊಗೆವಂತೆಭಾವಿಸಲು ಹೆಸರುವಡೆದಂ ಶೈವಕೀರ್ತಿಯಂ ಪಸರಿಸುವವೊಲು ಸಿದ್ಧನು
ಕುಂದದೀ ತೆಱದೊಳನುದಿನವಗೆಯುತಿರ್ಪಾಗಳೊಂದು ದಿನ ನಡುವಗಲೊಳುರು ಬಿಸಿಲೊಳಗಡೆವೆರಸಿಂದುಧರನಾಕಾಶದೊಳು ಬರುತ ಕಂಡು ಕರುಣ ಹುಟ್ಟಿ ನಿಂದಾಗಳುಕಂದನೀಸೊಂದು ಕೆಲಸಕ್ಕಾಱನೆಲೆ ಗಂಗೆಯಿಂದುಳ್ಳ ಪುಣ್ಯನದಿಗಳುವೆರಸಿ ಹೋಗಿ ಸಿದ್ಘೇಂದ್ರನಿರಹೇಳ್ದೆಡೆಯೊಳಿರು ಹೋಗು ಬೇಗವೆಂದೊಸೆದು ಕಳುಹಿದನಾಗಳೆ
ಕ್ಷಿಪ್ರದಿಂ ಗಂಗೆ ಗೌತಮಿ ತುಂಗಭದ್ರೆ ವರದೆ ಪ್ರಯಾಗೆ ಪಯೋಷ್ಠಿ ಕಾಳಿಂದಿ ನರ್ಮದೆ ಮಲ ಪ್ರಹಾರಿಣಿ ಭೀಮರಥಿ ಸರಸ್ವತಿ ವರುಣೆಯಸಿ ಕುಮುದೆಯಾದಿಯಾದಸುಪ್ರಸಿದ್ಧ ನದೀವ್ರಜಂ ತಮ್ಮ ನಿಜರೂಪಿನ ಪ್ರಭೆಯೊಳೆಯ್ತಂದು ವಂದಿಸಿದರತುಳ ಖನನ ಪ್ರಮೋದಂಗೆ ಸಿದ್ಧಂಗೆ ಸಿದ್ಧೇಂದ್ರಂಗೆ ಸಿದ್ಧಕುಲ ಕಮಲರವಿಗೆ
ಸುದತಿಯರು ನೀವಾರ್ ಧರಾತಳಾಗ್ರದ ಪುಣ್ಯನದಿಗಳಾರಟ್ಟಿದರು ಶಿವನೇಕೆ ನಿಮ್ಮೀ ಪುರದೊಳಿರಲೆಂದು ಸಿದ್ಧೇಂದ್ರ ಕೇಳೆನಲು ತಾಯ್ಗಳಿರ ನೀವಿರಲು ತಕ್ಕಸದಮಳ ಸ್ಥಾನವದಱೊಳಗಿಲ್ಲ ನಿಮ್ಮ ನಿಜಸದನಕ್ಕೆ ಹದುಳ ಬಿಜಯಂಗೆಯ್ವುದೆನಲು ನೀನುದಯಿಸಿದುದೇ ಮಹಾಕ್ಷೇತ್ರವಾವೆಯ್ತಂದ ಹದನನವ ಧರಿಸೆಂದರು
ಈ ಸಱಿಯನೀ ಬಿಸಿಲೊಳಯ್ಯ ನೀನೊಡೆದೆಗೆದುಸೂಸುವಾಯಾಸಮಂ ಬಿಡು ಸಾಕು ನಾವೀ ಪ್ರದೇಶದೊಳು ಕೆಱೆಯಾಗಿ ತೊಱೆಯಾಗಿ ದೊಣೆಯಾಗಿ ವಾಪಿಕೂಪಂಗಳಾಗಿಈಶನಭಿಷವದಗ್ರಜಲಕೆ ಸಂದಿಪ್ಪೆವೆಂದಾಸತಿಯರಾಡೆ ಶಿವಯೋಗಿಯ ಶರೀರಂ ವೃಥಾ ಸವೆಯಲಾಗದನುಗೊಂಬನಿತು ಕಾಯಕಂ ನಡೆಯುತಿರಬೇಕೆಂದನು
ಎನಗೆ ಬೇಗಂ ಹೋಗಿ ಬೆಸಸಿದಱೊಳಿರಹೇಳ್ದುಶಿವನಟ್ಟಿದಂ ದಿಟವೆ ದಿಟವಾದಡೀ ಕೆಱೆಯೊಳವನಿಯೊಳಗುಳ್ಳಷ್ಟಷಷ್ಟಿಗಳು ದಿವ್ಯನದಿಗಳು ದಿವ್ಯತೀರ್ಥಂಗಳುಅವಿವೆನ್ನದೆಲ್ಲವಂ ತಂದಿದಱೊಳಿರ್ಪುದೆನೆಯವನೆಯ್ದೆ ತಂದೆವೆಂದೆನುತ ವನಿತೆಯರು ವೇಷವನುಳಿದು ನೋಡ ನೋಡಲು ಪುಣ್ಯಜಲವಾಗಿ ನಿಂದರಾ ಕೆಱೆಯ ನಡುವೆ
ಬಿಡೆ ಕೇಳ್ದಡಘಹರಂ ನೆನೆಯೆ ಪುಣ್ಯೌಘ ನುಡಿದಡೆ ಸರ್ವಸಿದ್ಧಿ ಕಂಡಡೆ ಜನನನಾಶ ಹೊಗಳ್ದಡೆ ಸುರೇಂದ್ರತ್ವ ಸೋಂಕಿದಡೆ ಕಮಲಜಪದವಿ ಮಱೆದೊಮ್ಮೆ ಕುಡಿತೆಗೊಂಡುಕುಡಿದನಾದಡೆ ಮುಕ್ತಿಯವಗಾಹವಿರ್ದನಾದಡೆ ಗಣೇಶತ್ವ ಸಾರ್ದಡೆ ಮಹಾರುದ್ರತ್ವವೊಡನಹುದು ಸಿದ್ಧನೊದವಿಸಿದಷ್ಟಷಷ್ಟಿವೆಸರಿನ ಕೆಱೆಯ ನವಜಲದಲಿ
ಕೆಱೆಯ ಠಾವಭಿನವ ಶ್ರೀಶೈಲವಾ ಕೆಱೆಯನೆಱೆಯಗೆವನೆರಡನೆಯ ಶಿವ ಸಿದ್ಧರಾಮಯ್ಯಕೆಱೆಯ ಜಲವಷ್ಟಷಷ್ಟಿಕ್ಷೇತ್ರ ತೀರ್ಥಕುಲವೆಂಬ ವಾರ್ತೆಯನು ಕೇಳ್ದುಉಱುವ ದೇಶದ ಕಡೆಯ ಮನ್ನೆಯರು ಭೂಭುಜರುಕುಱುಹಿನ ಭಟರು ದಂಡನಾಯಕರು ಪ್ರಭುಗಳುಂಗರುವರಧಿಕಾರಿಗಳು ಬಂದು ಹೊತ್ತಡಕಿ ಹೊಱಸೂಸುತಿಪ್ಪರು ಮಣ್ಣನು
ಮೃಡಮೂರ್ತಿ ಸಿದ್ಧಪತಿಯೊಂದು ದಿನವಾ ಕೆಱೆಯನಡುವೊಪ್ಪುತಿಪ್ಪ ಜಾಲಿಯ ಕುಱುವವೆಂಬ ಗಿಡುದಡದಲ್ಲಿ ಪದ್ಮಾಸನಂಗೆಯ್ದು ಶಶಿ ರವಿಗಳಂ ಬಲಿದು ಕರಣಂಗಳತೊಡಚಿ ಕುಂಡಲಿಗೊತ್ತಿ ಸುತ್ತಿರ್ದ ವಾಯುವಂಹಿಡಿದು ಲಂಬಿಕೆಯಿಂ ಸುಷುಮ್ನೆಯೊಳು ಜ್ಯೋತಿಯಂನಡಸಿ ಗಗನದ ಚಂದ್ರಕಳೆಯ ಬೆಮರಿಸುವ ಚಿಹ್ನದೊಳಿರ್ದನೇವೊಗಳ್ವೆನು
ಆ ಸೊಡರ ಸೆಕಳಿಗಾ ಚಂದ್ರನೊಳಗಿಪ್ಪೆರಳೆಬೇಸತ್ತು ಬೆಂಬಿರ್ದು ಧರೆಗಿಳಿದು ಬಂದು ಸಿದ್ಧೇಂದ್ರನಂ ಭಜಿಸಿದಪುದೋ ಎನಿಪ್ಪಂದದಿಂದೊಂದೆರಳೆ ವಿಪಿನದಿಂದಆ ಸಮಯದೊಳು ಹರಿದು ಬಂದು ಕೋಡಿಂದ ಸಿದೇಶನಂಗವನೊರಸೆ ಭಾವದಚ್ಚಳಿದು ಬಗೆಸೂಸಲು ಸಮಾಧಿ ಸಂಚಳಿಸಿ ಕಣ್ದೆಱೆಯುತಾಗಳು ಹಾಡಿದಂ ಗೀತವ
ಪರಮ ಸುಖದಿಂದಂ ನಿರ್ವಾತ ನಿಶ್ಚಿಂತನಾಗಿರುತಿಪ್ಪನೋ ಹೇಳು ಹೇಳು ಅಯ್ಯಯ್ಯ ನೀಗುರುವೆ ಶಿವನೇ ಎನ್ನ ಮಱೆದು ನಿಮ್ಮಂ ಕೂಡಿ ಪರಿಣಮಿಸಿಯೆಂದಿಪ್ಪೆನೊಹರಿಣ ಬಂದಿತೆನ್ನ ಮೇಲುವಾಯ್ದಡೆ ಬಳಿಕತರಹರಿಸಿ ನಾನೆಂತು ನಿಲುವೆ ಹೇಳೈ ತಂದೆಹರ ಕಪಿಲಸಿದ್ಧ ಮಲ್ಲಯ್ಯಯ್ಯ ಎಂದು ಹಾಡಿದನು ನೋಳ್ಪಾಗಳಂದು
ತಿರುಗಿ ನೋಡದ ಮುನ್ನ ಮಗತನಂ ಹಾಱಿ ರತಿವರನ ಸುಕುಮಾರತೆಯನೇಳಿಸುವ ರೂಪ ಸುಂದರತೆಯಿಂ ಬಂದು ವಂದಿಸಿ ನಿಂದು ಕೈಮುಗಿದು ಸಕಲ ದೀಕ್ಷಾವತಾರಗುರುವೆ ಪುಣ್ಯದ ಕರುವೆ ನುತ ಕಲ್ಪತರುವೆ ಎಂದಿರದೆ ಕೀರ್ತಿಸುತ್ತಿರಲು ಕಂಡು ನೀನಾರಾವಪುರವಾವ ದೇಶವೇಂ ಪೆಸರಾರ ಮಗನೆಂದು ಕೇಳ್ಪನಚಳಿತ ಸಿದ್ಧನು
ವಿವಿಧ ವಿದ್ಯಾಧರಾವನಿಯ ಜಲಜಾತ ಖೇಟವೆನಿಪ್ಪ ಪುರದಲಿಹ ಪುಣ್ಯ ಧನದನ ವನಿತೆನವಕುಸುಮಗಂಧಿಯೆಂಬಬಲೆಗೊಗೆದೆಂ ಮೇಘಚೂಡನೆಂದೆನ್ನ ನಾಮಂಶಿವನಿಪ್ಪ ಹೇಮಕೂಟದೊಳು ಕೈವಲ್ಯಮುನಿಯವರಂಘ್ರಿಗಳನೆಡಹೆ ಮುನಿದಾತನೆನಗೆ ಶಾಪವನು ಮೃಗವಾಗೆಂದು ಕೊಟ್ಟಡಾ ಶಾಪ ನಿಮ್ಮಿಂದೀಗ ಹೋಯ್ತೆಂದನು
ಅವಧರಿಸಿದೆನ್ನ ಪೂರ್ವಾಪರವಿದೆನ್ನ ಶಾಪವಿಮೋಕ್ಷವಿದು ನಿಮ್ಮ ಮಹಿಮೆಯ ಮಹತ್ವವಿದುಶಿವಮೂರ್ತಿ ಸಿದ್ಧಪತಿ ವಡಬಮುಖವೆಂಬುದಿಂತೀ ಪಿರಿಯ ಸುರಗಿಯಿದನುನಿಮಗೀವ ಮನವಿದಂ ಕೊಂಡು ಕರುಣಿಸಬೇಹುದವಿನಾಶಯೆಂದಡೆಲೆ ಮರುಳೆ ಹೇಳೈ ಕೈದುವೆಮಗೇವುದಯ್ಯ ಕಟ್ಟಾಳ್ಗಳೋ ಕಲಿಗಳೋ ನಾವೆಂದನಪ್ರತಿಮನು
ಲಲನೆಯರ ನಯನಬಾಣಕ್ಕಳುಪದಿದ್ದವಂಕಲಿ ಕೋಪಗಿಚ್ಚನೊತ್ತರಿಸುವಂ ಕಲಿ ಲೋಭದಲಗಿಂಗೆ ತೆರಳದವ ಕಲಿ ಮೋಹಸಂಕಲೆಯ ಮುಡಿದುಕೊಳಲಾಪಂ ಕಲಿಬಲಿದ ಮದಮತ್ಸರಾರಣ್ಯದಲಿ ತೊಳಲದಂಕಲಿಯವಿದ್ಯಾರಿಪು ಬಲಕ್ಕೆ ಬೆಂಗೊಡದವಂಕಲಿಯಿವೆಲ್ಲವನುಳ್ಳ ನೀವೆ ಕಲಿಯಲ್ಲದಿನ್ನಿಳೆಯೊಳಾರುಂಟೆಂದನು
ಕಡೆಗಿದು ನಿಮಿತ್ತವೀ ಸುರಿಗೆ ನಿನಗಲ್ಲದಿನ್ನೆಡೆಯವರ್ಗೊಪ್ಪದಿದನನವರತ ಹಿಡಿಯಬೇಕೊಡೆಯಯೆಂದಡಿಗೆಱಗಿ ಕೊಡೆ ಕೊಂಡು ಕರುಣವೆರಸಾತನಂ ಕಳುಹಿ ತಿರುಗಿನಡೆತಂದು ಬಳಿಕದನಜಸ್ರಮಿಳುಹದೆ ಕೂರ್ತುಹಿಡಿಯುತಿರೆ ಕಂಡು ಹಗೆ ಕೆಳೆಗಳೋರಂತೆ ನಡನಡುಗತೊಡಗಿದರಿದೇನಪ್ರತಿಮನಲಗನೇಂ ಕಾರಣಂ ಪಿಡಿದನೆಂದು
ಹರನ ನಾಸಿಕದ ಸವಿಯಂ ಸಲಹುವಂತೆ ಶಂಕರನ ಸುಖಮಂ ಸಾಗಿಪಂತೆ ಮೆಱೆವಂಬಿಕಾವರನ ಮಂಗಳವ ಮನ್ನಿಸುವಂತೆ ಭಕ್ತರಿಗೆ ಧರ್ಮಾರ್ಥಕಾಮವೆಂಬವರ ಫಳವನೀವ ಬೆಳೆಯಂ ಬೆಳಸುವಂತೆ ಸುಂದರವೆನಿಸಿ ತಾನೆ ಬಿತ್ತಿದ ಪುಷ್ಪವಾಟಿಗಾದರದೊಳುದಕವೆತ್ತಿ ಹೊರೆದು ಹೂದಿಱಿವ ಜಾಣ್ಮೆಯನದೇವಣ್ಣಿಸುವೆನು
ಕುಡಿಮುರುಟಿ ಬೆಳುಪಿಡದೆ ಬೆಳೆದ ಮೊಗ್ಗೆಗಳನೆಸಳೊಡೆಯದಂತರೆಬಿರಿದ ಮುಗುಳ್ಗಳಂ ಮಿಗೆ ಚೆಲ್ವುಗೆಡದಂತೆ ಚಿಪ್ಪರಳದೊಳ್ಳಲರ್ಗಳಂ ತುಂಬಿ ಮೊಗವಿಟ್ಟು ಪರಿಮಳವನುಕುಡಿಯದ ಪರಾಗರಸ ತುಳುಕದಂತೆಳಗಾಳಿಜಡಿಯದ ಬಿಸಿಲ್ ಪೊಯ್ಯದೊಪ್ಪವುಡುಗದ ಹೂವನೆಡೆವಿಡದೆಯಱಸಿ ಕೊಯ್ದಂ ಸಿದ್ಧವಲ್ಲಭಂ ದೇವರಾಯನ ಪೂಜೆಗೆ
ಕುಸುಮದೊಪ್ಪಕ್ಕೆ ಮನದೊಳು ಪುಳಕಿಸುತ್ತ ಕಂಪಿಸುವ ಕೈ ಕಮಳವೆಂದೆಱಗಿ ಪರಿಮರಿಗೊಂಬಹಸುಳೆದುಂಬಿಯನೂಡಿ ಸಾಕುವಾಸಕ್ತಿಯಿಂ ಸಿದ್ಧಪತಿಯಿಪ್ಪಾಗಳುಹೊಸಯೋಗಿಯೊಬ್ಬನಾಕಸ್ಮಿಕಂ ಬಂದು ನಿಂದೊಸೆದಿಪ್ಪೆನೋ ಹೋಹೆನೊ ಎಂದು ಹಲವು ಸೂಳ್ಬೆಸಗೊಳುತ್ತಿರಲು ಬೇಸತ್ತು ಹೋಗೆಂದನಾಗಳು ಸಿದ್ಧಕುಲತಿಲಕನು
ಹೋಗೆಂಬ ನುಡಿ ಹಿಂಚೆ ಮುಂಚಿ ಜೀವಂ ನೆಗೆದುತಾಗಿ ನಡುನೆತ್ತಿಯಂ ಬಗಿದು ಬಾದಣದೆಗೆದುಮೇಗಡರ್ದು ಗಗನಕ್ಕೆ ದಂಡಾಯಮಾನದುರಿಯಾಗಿ ನೆಗೆಯಲ್ಕೆ ಬಳಿಕಯೋಗಿಯ ಶಬಂ ಬಯಲ ನೆಮ್ಮಿ ನಿಲೆ ಕಂಡು ಬೆಱಗಾಗುತ್ತ ಮಲ್ಲಿಕಾರ್ಜುನನೆಡೆಗೆ ಬಂದು ನಾನೇಗೆಯ್ವೆನೊಬ್ಬನಿಂದಿಂತಸುವನಳಿದನೆಂದಾಡಿದು ಸಿದ್ಧೇಂದ್ರನು
ಇದಕಂಜಬೇಡಾತನತಿಹಂಸನೆಂಬ ನಾಮದ ಯತಿ ಯತಿ ಬ್ರಹ್ಮಚಾರಿ ವನಚರಿಯ ಕೂಡಿದಡೆ ಗುರು ಮೈಳಾಕ ಮುನಿದೈದು ಭವದ ಶಾಪವನಿತ್ತು ಸಿದ್ಧಂದ್ರನಿಂತುದಿಯೊಳು ವಿಶಾಪ ಹೋಗೆಂದೆನಲು ಬಂದು ಹೊಂದಿದನು ಮೂಲಸ್ವಾಮಿಯೆಂದು ಹೆಸರೀಗ ಮುಂದುದಿಸಿ ನಿನಗುತ್ತುಂಗಭದ್ರನೆಂಬತುಳಬಲ ಗುಡ್ಡನಾದವನೆಂದನು
ಅಂತವಂ ಮುಂದೆ ನಾಗಾರ್ಜುನಂ ಸಹಿತೀಗಪಿಂತೆ ಮಾಯದ ಬಲೆಯೊಳಳಿದವರು ಘನಸಿದ್ಧರಂ ತೆಗೆದು ತಂದು ಮೇಲಿಳೆಯಱಿಯೆ ನಿನ್ನ ನಿಜದೊಳು ಬೆರಸಿ ಬೆಳಗಾದಪಂಚಿಂತೆ ಬೇಡನ್ನಕಂ ಗೊಪೆಯೊಳಿರಿಸವನನೆನೆಸಂತಸದೊಳತಿ ವಿಭವವೆರಸೊಯ್ದು ಕೆಱೆಯ ಪರಿಯಂತದೊಳು ನಿಕ್ಷೇಪಿಸಿದನತುಳಬಳ ಮದನ ಮದರದನಿಪಂಚಾಸ್ಯನು
ಹೊಸಪುಷ್ಟವಾಟಿಯಂ ಸಾಗಿಸುತ ಕೆಱೆಯನಗುಳಿಸುತ ಶಿವನಿಳಯಮಂ ಮಾಡಿಸುತ ಪುರವ ವಿರಚಿಸುತ ಲಿಂಗಾರ್ಚನಂ ಗೈಯುತ್ತ ಧರೆಗೆ ಕರುಣಿಸುತ ನೃಪರೋಲೈಸುತವಸುಧೆ ಗೋವುಂ ರತ್ನದಾಭರಣಮಂ ಮಹಾಹೊಸ ವಸ್ತುಗಳನು ಸ್ವೀಕರಿಸಿ ಕವಿತಿಯ ಹಟ್ಟಿಗೊಸೆದು ನಡೆತಂದು ಸಿದ್ಧೇಂದ್ರನೆಳಗಱುಗಳಂ ಬಿಡಿಸಿ ನಗುತಿಪ್ಪಾಗಳು
ಮರಳಿ ನೋಡುವ ಹೆದಱುಗಂಗಳಿಂ ಮೈಗಂಡಸರಳ ಮೊನೆಯಿಂ ಸುರಿವ ರುಧಿರ ಡೆಂಡಣಿಪ ನಡೆಹುರಿಯೊಡೆದ ರೋಮ ಹೊಯ್ವಳ್ಳೆ ನಾಲಗೆ ಬೀಳ್ವ ಬಾಯರಳ್ವ ನಾಸಾಪುಟಂಸುರಿವ ಬೆಮರೆಳಲ್ವ ಕಿವಿವೆರಸು ಕಂಗೆಟ್ಟೊಂದುಹರಿಣನೆಯ್ತಂದೆಡೆಯ ಸಗಣಿಯೊಳಗೆಡಹಿ ತರಹರಿಸಲಾಱದೆ ಮುಗ್ಗಿ ಬಿದ್ದುದಾ ಸಿದ್ಧರಾಮಂ ಕರುಣದಿಂ ನೋಡಲು
ನೋಡಿ ಶಿವಶಿವಯೆನುತ ತಾನೆ ಹರಿತಂದು ಕೈನೀಡಿ ಕೋಡಂ ಪಿಡಿದು ನೆಗಪೆ ನೆಗಪಿಸಿಕೊಂಬಕೋಡು ಕೈಯಾಗೆ ತನು ಪುಣ್ಯತನುವಾಗೆ ಶಿರ ಶಿರವಾಗಲಡೆಯನೊಡೆದುಮೋಡಮಂ ಬಗಿದೇಳ್ವ ಬಾಲಾರ್ಕನಂತೆ ಕಣ್ಗಾಡಂಬರಂ ಮಿಕ್ಕು ನಿಂದಿರ್ದು ಹಾಡಿ ಕುಣಿದಾಡಿ ಕೀರ್ತಿಸುವ ಗಂಧರ್ವನಂ ಕಂಡು ನೀನಾರೆಂದನಪ್ರತಿಮನು
ವಿನುತ ಲೋಹಿತಕೇತುವೆಂಬ ವಿದ್ಯಾಧರಾವನಿಪನ ಮಗಂ ಮಯೂರಕನು ನಾನೊಮ್ಮೆ ಪರಿಜನವೆರಸಿ ಬೇಂಟೆಯಾಡುತ್ತ ಶತಶೃಂಗತಟವಿಪಿನದೊಳು ತೋಹುಗೊಂಡುಮುನಿದೊಂದು ಹರಿಣನಂ ತೀವಿ ತೆಗೆದೆಚ್ಚು ಪಿಂದನೆ ಪರಿದಡದು ಹೋಗಿ ಕಂಗೆಟ್ಟು ವಿಶ್ವದರ್ಶನನೆಂಬ ಯತಿಪತಿಯ ಮುಂದೆ ಬಿದ್ದಸುವಳಿದುದಯ್ಯ ಚಿತ್ತೈಸೆಂದನು
ಆ ವಿಶ್ವದರ್ಶನಂ ಕಂಡು ಮುನಿದೆಲವೊ ನೀನೇವೆರಳೆಯಾಗಿ ಕಡೆಗೀ ಪರಿಯೊಳೆಸುವಡೆದುಸಾವನೈದೆಂದು ಶಾಪವನಿತ್ತಡಾಂ ದೈನ್ಯದಿಂದ ಕೀರ್ತಿಸಲು ಮೆಚ್ಚಿಭೂವಳಯದೊಳು ಸಿದ್ಧರಾಮನಭಿನವಮಹಾದೇವನೊಗೆದಪನಾತ ಸೋಂಕಲು ವಿಶಾಪವೆಂದಾ ವಿಮಳಮುನಿಯೆನಲು ಬಂದು ನಿಮ್ಮಿಂದ ನಿಜವಡೆದೆನವಧರಿಸೆಂದನು
ಆತನಂ ಬೀಳ್ಕೊಟ್ಟು ಕಳುಪಿ ನಡೆತಂದು ವಿಖ್ಯಾತಿಯಿಂ ಸುಖದೊಳಿರುತಿಪ್ಪ ಸಿದ್ಧೇಶ್ವರನಮಾತುಗೇಳದೆ ಮೀಱಿ ಕೇತಾರಮಂ ಕಾಣಲೆಂದಣ್ಣ ಬೊಮ್ಮಯ್ಯನುಓತು ನಡೆಗೊಂಡು ಕಂಗೆಟ್ಟು ಮಗುಳೆಯ್ತಂದುಭೀತಿಯಿಂದೆಱಗಿ ಕಿಂಕುರ್ವಾಣಮಂ ತೋಱಿಧಾತುಗೆಡಬೇಡೆಂದು ಮಲ್ಲಿಕಾರ್ಜುನನ ಸುಖಸದನಕ್ಕೆ ಕೊಂಡೊಯ್ದನು
ತಂದು ಕಂಗಳನಿತ್ತು ನೆಱೆ ಮಲ್ಲಿಕಾರ್ಜುನನಹಿಂದೆ ಮುಂದೆಡ ಬಲದೊಳುಳ್ಳ ದಿವ್ಯಕ್ಷೇತ್ರವೃಂದದ ಮಹಾಲಿಂಗವೆಯ್ದೆ ನೆರೆದಿರೆ ತೋಱುತವಱೊಳಗೆ ಬೇಱೆ ಬೇಱೆಒಂದನೊಂದೊಂದು ಪೆಸರಿಂ ಕರಸಿ ತಡೆಯದೋಯೆಂದೆನಿಸಿ ಹೊಱಗಿನ್ನು ಬೇಱಧಿಕವುಂಟೆಂಬಸಂದೇಹಮಂ ಬಿಡಿಸಿ ಸುಖಸಂಕಥಾವಿನೋದದೊಳಿರ್ದ ಸಿದ್ಧೇಂದ್ರನು
ಪುರದ ಜನವದಿದೆನ್ನದೆಲ್ಲರಿದ್ದು ಹೇವರಿಸಿ ಮೂಗಂ ಮುಚ್ಚಿಕೊಳಲೊಬ್ಬನೈದಿ ಬಂದಿರದಷ್ಟಷಷ್ಟಿತೀರ್ಥವ ಮಿಂದು ಮಲ್ಲಿನಾಥನನಡರಿ ನೋಡಿ ನಮಿಸಿಉರದ ಮೀನಂ ಹೊಲಸುನಾತಮಂ ನೀಗಿ ಹೊಸಪರಿಮಳದ ಕರುವಾಗಿ ನಡೆತಂದು ಲೋಕೈಕಗುರುವಿಂಗೆ ವಂದಿಸಲು ನೀನಾರಿದೆತ್ತಣವನೆಂದು ಬೆಸಗೊಂಡನಂದು
ಭಾವಿಸಲು ಗಂಧರ್ವಲೋಕದೊಳಗಣ ಸುಗಂಧಾವತಿಯೆನಿಪ್ಪ ಪೆಂಪಿನ ಪಟ್ಟಣವನಾಳ್ವಭೂವರಂ ಸೌಗಂಧಶೇಖರಂಗಂಗನೆ ಕಳಾವತಿಯೆನಿಪ್ಪ ವನಿತೆಆ ವಿದಗ್ಧೆಯ ಗರ್ಭದಿಂದೊಗೆದೆನೆಲೆ ಪತಿತಪಾವನನೆ ಕುಮುದಶೇಖರನು ನಾಂ ಸುಖಸಂಕಥಾ ವಿನೋದದೊಳಿರ್ಪ ದಿನದೊಳೇವೊಗಳ್ವೆಂ ವಸಂತಸಮಯಂ ಬಂದುದು
ಬಳಸಿದ ವಸಂತಕಾಲದೊಳೆನ್ನ ಹೆತ್ತವನಕೆಳೆಯಂ ಕುಬೇರನೆನ್ನಂ ಕರೆಸಿಕೊಂಡು ತನಳಕಾಪುರದೊಳುತ್ಸವಂ ಬೆರಸು ಪರಿವಾರಸಹ ಜಲಕ್ರೀಡೆಗೆಂದುಗಿಳಿಯ ಕೋಗಿಲೆಯ ಹಂಸೆಯ ನವಿಲ ಪಾರಿವದಕೊಳನ ಪುಳಿನಸ್ಥಳದ ಕಮಲ ಕೈರವ ವಿವಿಧಫಳವೀವ ತರುಗಳ ಲತಾಗೃಹದ ಕೇಳೀವನಕೆ ಪೋದೆನವಧರಿಪುದು
ಅತಿರಮ್ಯವೆನಿಪ ವನದೊಳು ವಿಶ್ವಕರ್ಮನಿರ್ಮಿತವಪ್ಪ ಕೃತಕಕಮಲಂ ಕೃತಕಕೈರವಂಕೃತಕಜಲಚರ ಕೃತಕಹಂಸ ಕೋಕಂಗಳಂತಸ್ಥವಂ ಕಂಡಱಿವಡೆಚತುರವದನಂಗಾಗದೆನಿಸುವ ಸರೋವರಪ್ರತತಿಯೊಳಗೊಂದನೆನ್ನನುವಱಿಯಲೆಂದು ಧನಪತಿ ಹೊಗಿಸಲಾನಱಿಯದದಱೊಳೆನ್ನಬಳೆವೆರಸಂಬುಕೇಳಿಯೊಳಿರ್ದೆನು
ಉದಕದೊಳು ಹೊಳೆವ ಜಂತ್ರದ ಮೀನ ಕಂಡೆನ್ನಸುದತಿ ಹೆದಱಿದಡಱಿಯದಾನೆಯ್ದಿ ಹೊಡೆದಡಂತದಱ ಕೀಲ್ತಪ್ಪಿ ಗಗನಕ್ಕೆ ನೆಗೆದಾ ವನಪ್ರಾಂತದೊಳು ತಪದೊಳಿರ್ದಸದಮಳ ಯತೀಂದ್ರನೆಂದೆನಿಪ ಕಪಿಲವ್ರತಿಪನೆದೆಯ ಮೇಲಡಸಿ ಬೀಳಲು ಕಂಡು ಮುನಿದು ಕೋಪದಲಿ ಶಾಪವನಿತ್ತನಯ್ಯ ಸಗರರ ಹಣೆಯ ಲಿಪಿಯನೊರಸಿದ ವೀರನು
ಹೆದಱದಿದನೆನ್ನೆದೆಯ ಮೇಲಾವನಿಟ್ಟನವನೆದೆಯ ಮೇಲಿದು ಹತ್ತಲಿದಱ ದುರ್ಗಂಧವಂಗದಲಿದಱ ಹೊಲಸು ತೀಡುತ್ತಿರಲಿಯೆಂದು ಶಾಪವನಿತ್ತನತ್ತಲಿತ್ತಮುದದಿಂ ಜಲಕ್ರೀಡೆಯೊಳು ಪರಿಮಳ ಪ್ರವಾಹದೊಳಿರ್ದ ಪರಿಜನಂ ಹೇಸೆ ದುರ್ಗಂಧವೆನ್ನೆದೆಯ ಮೇಲಿಂದೇಳೆ ಕಂಡು ನಾಚುತ್ತ ಹೊಱವಂಟೆ ನಾನಾ ವನವನು
ಆ ಶಫರವೆತ್ತ ಹೋದತ್ತಲಾಂ ಹೋಹಾಗಳಾಸುರದೊಳೆದ್ದ ದುರ್ಗಂಧಕ್ಕೆ ಮುನಿವರಂಹೇಸುತೇನೋ ಮೀನ ನೀನಿಡಿಕಿದಾ ಎಂದಡಿಡಿಕಿದೆ ವಿಭುವೆಯೆಂದುಈ ಶಾಪವಿನ್ನೆಂದು ಹಿಂಗುವುದು ಕರುಣಿಸು ಮುನೀಶಯೆಂದೆನಲಷ್ಟಷಷ್ಟಿತೀರ್ಥವನು ಮಿಂದಾ ಸರ್ವಲಿಂಗಂಗಳಂ ಕಂಡ ದಿನದೊಳು ವಿಶಾಪಮಾದಪುದೆಂದನು
ನಡೆದಷ್ಟಷಷ್ಟಿತೀರ್ಥಕ್ಷೇತ್ರ ಲಿಂಗಂಗಳೆಡೆಗೆ ಪೋದಪೆನೆಂದಡೊಂದು ಲಂಕಾಪುರದಕಡೆಯೊಳೊಂದಾಕಾಶದೊಳಗೊಂದು ಪಾತಾಳ ಕೆಲವು ಲಕ್ಷಸ್ಥಳದಲಿಬಡವ ನಾನೆಂತು ಕಾಂಬೆಂ ತಂದೆ ನಿನ್ನನಱಿದಿಡಿಕಿದೆನೆ ನಿನಗೆನ್ನ ಮೇಲಿನಿತು ಮುನಿಸೇಕೆಮೃಡಮೂರ್ತಿಯೆಂದು ಕಾರ್ಪಣ್ಯದಿಂ ಕೈಮುಗಿದೆನಯ್ಯ ಚಿತ್ತೈಸೆಂದನು
ಧರೆಯೊಳುಳ್ಳಾ ಕ್ಷೇತ್ರ ತೀರ್ಥ ಲಿಂಗವನೆಯ್ದೆನೆರಪಿದಂ ತನ್ನ ಸೊನ್ನಲಿಗೆಯೊಳು ಲೋಕೈಕಗುರುಸಿದ್ಧರಾಮನಲ್ಲಿಗೆ ಹೋಗಿ ತೀರ್ಥಮಂ ಮಿಂದು ಲಿಂಗವನು ಕಂಡುಪುರವ ಬಲಗೊಂಡು ಹೊಲಸಂ ನೀಗು ಹೋಗೆನಲುಹರಿದುಬಂದಾ ಹರಿಯ ಮಾಡೆ ನಿಜವಾಯ್ತೆಲೇನರರೂಪ ರುದ್ರ ಎಂದಡಿಗೆಱಗಿ ಬೀಳ್ಕೊಂಡು ಹೋದನಾ ಗಂಧರ್ವನು
ಬೆಸಗೆಯ್ದು ವಂದಿಸಿದ ಕಂಡು ಪೆಸರ್ಗೊಂಡು ಕೇಳ ಸಮಸ್ತನರರ ನರಕವನಳಿಯುತಪ್ರತಿಮನಸಮಾಕ್ಷ ಸಿದ್ಧನಾನಂದದಿಂದಿರಲಿತ್ತಲತ್ತ ರಜತಾಚಲದಲಿಶಶಿಕಲಾ ಮಂಡಿತ ಜಟಾಪಟಲನಖಿಳ ದೇವಸಮೂಹವೆರಸೋಲಗಂಗೊಟ್ಟು ಬಹಳ ಸಂತಸದೊಳಿರಲಲ್ಲಿಗೆಯ್ತರುತಿರ್ದನನಿಮಿತ್ತಕಲಹಕಾರಣರೂಪನು
ತನ್ನೊಡಲಲಿಪ್ಪ ಸರ್ವೇಂದ್ರಿಯಂ ಪರರ ಯುದ್ಧಂ ನಿಮಿತ್ತಕ್ಕಲ್ಲದಿಂತು ಚೇಷ್ಟಿಸದ ಮಹಿಮಂ ನಡೆದು ಸೊಡರಂತೆ ಹೊಱವೇಷಮುಂ ದೋಷಮುಂ ಮೆಱೆವ ನಾರದಮುನಿಪನ್ನಗಾಭರಣನಾಸ್ಥಾನಕ್ಕೆ ಬಂದು ತನುವಂ ನೀಡಿ ಮೆಯ್ಯಿಕ್ಕೆ ಕಂಡು ಹತ್ತಿರೆ ಕರೆದುಮನ್ನಿಸಿ ಮಹತ್ವದಿಂದೆಲ್ಲಿರ್ದು ಬಂದೆಯೆಂದಡೆ ಬಳಿಕ್ಕಿಂತೆಂದನು
ಗಿರಿಜೇಶ ಕೇಳೀಗಳುತ್ತಾರಕವ್ರತೀಶ್ವರನ ಸಭೆಯೊಳು ನಿಮ್ಮ ಭಾಳಾಕ್ಷ ಮನ್ಮಥನನುರುಪಿದ ಕಥಾಚಿತ್ರಮಂ ನಿರೂಪಿಸುತಿರಲು ಕೇಳ್ದು ಸೈರಿಸಲಾಱದೆಸ್ಮರಕಳಾತಾಪಸಂ ನೀಲಪಟನೆಂಬವಂಹರಿದು ಬಂದೆಮ್ಮ ರತಿನಾಥನಂ ಶೂಲಿ ಸಂಹರಿಸಿದನೆನಿಪ್ಪ ನುಡಿ ಹುಸಿಯೆಂದು ಬವರಮಂ ಪಿಡಿದು ಬಳಿಕಿಂತೆಂದನು
ಕೊಸರಿ ನೀ ಹೊಗಳ್ವ ಹರನುಂ ಕೇಳುವೀ ಮುನಿಪ್ರಸರಮುಂ ಕಡೆಗೆಮ್ಮ ಕಾಮಭೂಪನ ಕೆಯ್ಯಕುಸುಮಬಾಣದ ಮೊನೆಗೆ ಹಾಹೆಯಹರೆಂದೊಡಿನ್ನುಳಿದ ಬಡದರ್ಶನರನುಹೆಸರಿಸದಿರೆಂದು ಧಟ್ಟಿಸುವುದಂ ಕೇಳ್ದು ಕೋಪಿಸಿ ನಿಮಗೆ ದೂಱಬಂದೆಂ ಕಾಲಮಥನಯೆನೆನಸುನಗುತ್ತಾಗಳಾ ಸಭೆಗೆಯವನಂ ಕರಸಿದನು ಮದನಗಿರಿಕುಲಿಶನು
ಹೊತ್ತ ಮದನನ ವೇಷವವಯವದೊಳತಿ ಚೆಲುವುವೆತ್ತ ರತಿಕಲಹ ಚಿಹ್ನಂ ಹಸಿಯ ಹರೆಯ ಕೈತತ್ತಿಕ್ಕಿದೆಡದ ಕೋಮಳೆವೆರಸಿ ಬಂದು ವಂದಿಸಿ ನಿಂದು ನೀಲಪಟನುಚಿತ್ತಭವ ಗತಿಯೆನುತ ಕುಳ್ಳಿರಲು ಸಕಲದೇವೋತ್ತಮಂ ಕಂಡಿದೇನೆಲವೊ ಕಾಮನನು ಉರುಹಿತ್ತು ಹುಸಿಯೆಂದು ಮುನಿಗಳಿಗೆಂದ ಕಂಡ ನೀನೆಂದು ಮೆಲ್ಲನೆ ನುಡಿದನು
ಅರೆವೆಣ್ಣನೀಶ ಪುತ್ರೀವರಂ ಬ್ರಹ್ಮನಾಸುರದ ಜಾರಂ ಶಕ್ರ ಸತಿಯರೀರೆಂಟು ಸಾಸಿರದ ಹರಳಿಗನು ಹರಿ ಮನುಮುನಿಗಳಳುಪುತಿಹರಂತಾಗಲಂಗಜನನುಗಿರಿಶ ನೀನಾವ ಪರಿಯಿಂ ಸುಟ್ಟೆ ಬೆಂದವನುಮರಳಿ ಸರಳಿಂ ಜಗವನಾಡಿಸುವನೇ ಎಂದಡುರಿದುದಿಲ್ಲಾದೊಡಾವೆಡೆಯೊಳಿರ್ದಪನವನ ಕರೆದೀಗ ತೋಱೆಂದನು
ಇನ್ನು ಹೊಱಗಱಸಿ ಕರೆತರಲೇಕೆ ಕರೆಯೆಂಬನಿನ್ನ ಮನ ಮೊದಲಾಗಿ ಸರ್ವ ಜೀವರೊಳಿಪ್ಪನೆನ್ನೊಡೆಯನವನನ್ಯರ್ ಕರೆಯಲಱಿಯರೀಶ್ವರ ನೀನೆ ಕರೆವುದೆನಲುಉನ್ನತ ಸ್ವಾತಂತ್ರನಖಿಳ ಚಿತ್ತಜನನೊಲವಿಂ ನೆನೆದು ಕರೆಯೆ ಮೋಹನಗುಣಂ ತಂಪು ಕಂಪಂ ನೆಮ್ಮಿ ಮುಂದೆ ಬಂದೋಲಗವನಾಲಂಗಿಸಿತ್ತು ಬಳಿಕೇವೊಗಳ್ವೆನು
ನಳಿನ ಗುಣದಂಬರದ ಮಲ್ಲಗಂಟಾಮ್ರದೆಳದಳಿರ ಕೈಪೊಡೆ ಪುಷ್ಪದುಡಿಗೆ ಮಕರಂದರಸತಿಳಕ ಕೇತಕಿಯೆಸಳ ಕೂರಲಗು ದಾಸಮದ ಗೊಂಡೆಯಂ ನನೆಗಣೆಗಳಂತಳೆದ ಸಂಪಗೆಯ ಬಿರಿಮುಗುಳ ಮೂಡಿಗೆ ತುಂಬಿಗಳ ರವದ ನಾರಿ ಕಬ್ಬಿನ ಬಿಲ್ಲು ಕುಮುದಕುಟ್ಮಳದ ಕಿಂಕಿಣಿ ಕುಸುಮಮಂಜರಿಯ ತಲೆಚಮರವೆರಸಿ ಮನ್ಮಥನೆಸೆದನು
ಶಶಿಮೇಲೆ ಮಂದಮರುತಂ ಮುಂದೆ ರತಿಯೆಡದದೆಸೆಯೊಳು ವಸಂತ ಬಲದೊಳು ಪಿಂತೆ ಸತಿಯರಿಪ್ಪೆಸಕಮಂ ಸುಖದ ಸುಕುಮಾರತೆಯ ಮಂಗಳಕೆ ಮನಸಂದು ಮುಳಿಸ ಮಱೆದುಕುಸುಮಶರ ನಿನ್ನ ಮೋಹನದ ಬೀಜದ ತಿರುಳರಸವ ಬಲಿದೊಂದು ಹೆಣ್ಣಂ ಮಾಡಿ ಕೊಂಡೊಯ್ದುವಸುಧೆಯೊಳು ಸಿದ್ಧರಾಮನೊಳು ನೆರಪಿದೊಡೆಮ್ಮ ನೀಂ ಗೆಲಿದೆ ಹೋಗೆಂದನು
ಹಿಂದೆ ನಿಜಮಿಥುನವಹ ನಿಮ್ಮನೆಚ್ಚಡೆ ಕೋಪದಿಂದುರುಪಿ ಕಳೆದ ಗಿರಿಸುತೆಯ ಕರುಣದಲಿ ಹೆಸರಿಂದುಳಿದೆನಿಂದಿನಾತಂ ಜಿತೇಂದ್ರಿಯನು ಬಾಲಬ್ರಹ್ಮಚಾರಿ ಪುರುಷಂಒಂದುಳ್ಳ ಹೆಸರನೊರೆಸಿದಡೇಗುವೆಂ ತಂದೆಯೆಂದಡಾತಂ ನಿನಗೆ ಮುಳಿವಾತನಲ್ಲ ಹೋಗೆಂದು ಬೀಳ್ಕೊಡಲಂಗಸೂನು ತಿರುಗದ ಮುನ್ನ ಮುಂದೆ ಚೈತ್ರಂ ಪರಿದನು
ಹೊಸದಾಗಿ ಮದವಾಱೆ ಮಾವಂಕುರಂದೋಱೆಯಸುಗೆ ತಳಿರಂ ಬೀಱೆ ಲತೆ ನನೆಗಳಂ ಪೇಱೆಕುಸುಮರಜಮಂ ತೂಱೆ ತುಂಬಿ ಸುತ್ತಂ ಪಾಱೆ ತಂಗಾಳಿ ತಂಪ ಬೀಱೆಸಸಿಗೆ ಕಳೆಯೇಱೆ ಕೋಕಿಳರವಂ ಮೀಱೆ ಕಾಮಶರಂಗಳೂಱೆ ವಿರಹಿಗಳ ಬಾಯಾಱೆ ಮಾಮಸಕದಿಂ ಬಂದನು ವಸಂತನು ವಿಯೋಗಿ ಹೃತ್ಕುಂತನು ಸುಖಾಶ್ರಾಂತನು
ಉದಯಕಾಲದೊಳನುದಿನಂ ಬಪ್ಪ ತೆಱದಿ ಪುಷ್ಪದ ರತಿಯಲಾ ಸಿದ್ಧಕುಲತಿಲಕನೆಯ್ತಂದುಮುದದಿಂದ ನೋಳ್ಪಾಗ ನಿಜದೊಳೊಪ್ಪುವ ನಂದನಂ ಮೇಲೆ ಮಧುಮಾಸದಮದವೇಱೆ ನಳನಳಿಸುತೆಂದಿನೋಪಾದಿಯಲ್ಲದೆ ಕಣ್ಗೆ ಮಂಗಳಂಬೆತ್ತು ಜೌವನವಡರ್ದಸುದತಿ ಮತ್ತೊಂದಂದವಾಗಿ ಮೋಹಿಸುವಂತೆ ಮೋಹನಂಬೆತ್ತಿರ್ದುದು
ಪರಮ ಮಂಗಳವಾಗಿ ಏಕಾಂತತರ ಮನೋಹರವಾಗಿ ಮೆಱೆಯುತಿರೆ ಕಂಡಿದಱೊಳಾನೆನ್ನಪುರುಷನೊಳು ಕೂಡಿ ಸುಖವಡೆವೆನೆಂದೊಸೆದು ಹೃತ್ಕಮಲದಲರ್ವಸೆಯ ಮೇಲೆಉರುತರ ಜ್ಞಾನ ಪ್ರಭಾದೀಪ್ತಿವೆಳಗಿನೊಳುನೆರೆವ ತವಕದ ಕಳಾಸುಖಮುಖದ ಪರವಶದಪರಮಕಾಷ್ಠೆಯೊಳಚಲಸಿದ್ಧನಿರೆ ಕಂಡು ರತಿವಲ್ಲಭಂ ಭುಜವೊಯ್ದನು
ರತಿಯ ಸೊಬಗಂ ತನ್ನ ಮೋಹನವ ಚಂದ್ರನುನ್ನತ ಕಳೆಗಳಂ ವನದ ಮಂಗಳವ ಮಂದಮಾರುತನ ಸೊಗಸಂ ನನೆಗಣೆಯ ಕೂರ್ಪುಮಂ ಕೂಡಿಕೊಂಡು ಮೂಜಗದೊಳುಳ್ಳಸತಿಯರ ಶಿರೋರತ್ನವೆಂಬ ಪೆಸರಿನ ಪೆಣ್ಣಚತುರು ಮಿಗೆ ಮಾಡಿತಂದಪ್ರತಿಮ ಶಿವಸಿದ್ಧಪತಿಯ ಮುಂದಿರಿಸಿ ತಾಂ ಪಿಂತೆ ಬಿಲುವೊಯ್ದು ನಿಂದನುವಾದನಂಗಭವನು
ಬಳಸಿದಳಿ ಗಿಳಿ ಸೋಗೆ ಕೋಗಿಲೆಗಳುಲಿಯೆ ಪೂಗಳ ಕಂಪು ಕವಿಯೆ ಮಂದಾನಿಲಂ ತೀಡೆ ಶಶಿಕಳೆಗಳಂ ಬೀಱೆ ಸತಿ ಮೋಹನಂಬೆತ್ತು ನಿಲೆ ಮನುಮಥಂ ನನೆಗಣೆಯನುಸೆಳೆದು ತೆಗೆದೊಂದೊಂದಱಿಂದೆಚ್ಚಡವುಸಮುಜ್ವಳ ತಪಃಪ್ರಭೆಯನೊತ್ತರಿಸಲಾಱದೆ ಬೀಳೆಮುಳಿದೈದುಕೋಲನೊಂದೇ ಬಾರಿ ತೊಟ್ಟು ಕುಸಿದೆಱಗಿ ಕುಕಿಲಿಱಿದೆಚ್ಚನು
ನನೆಯಂಬು ರತಿಯಿಲ್ಲದನ ಪೂಜೆಯಂತೆ ಹೊಱಗನೆ ತಾಗೆ ಬಗೆ ಬೆದಱಿ ಕಣ್ದೆಱೆದು ಮುಂದಿರ್ದಘನಕುಚೆಯ ಪಿಂದಿರ್ದ ಕಾಮನಂ ಕಂಡು ಬಗೆಯದೆ ಮರಳಿ ಕಣ್ಮುಚ್ಚುವಅನುಪಮನ ಮನದ ಬಲುಹಂ ಕಂಡು ಕೈ ಮುಗಿದುಮುನಿಯದೀ ಕಾಂತೆಗೇಕಾಂತಮಂ ಕೊಡು ವೈರಿವನಜ ಶಶಿಯೆಂದಲ್ಲಿ ಲಲ್ಲೆಗರೆದು ಬಿಲ್ಲನೀಡಾಡಿ ಫುಲ್ಲಶರನು
ಸತಿಗೆ ಸತಿ ಸೋಲ್ತು ಕೂಡಿದ ಕಾಲವುಂಟೆ ವಸುಮತಿಯೊಳೆನೆ ನಿನ್ನ ಸೋಲಿಸುವೆನೆಂದಂಬಿಕಾಪತಿಗೆ ಭಾಷೆಯನಿತ್ತೆನೆನ್ನ ವಶವಲ್ಲ ನೀಂ ಕರುಣಿಸದೆ ಮೆಯ್ದೆಗೆದಡೆಅತಿಭಂಗವೆನ್ನ ವೀರಕ್ಕೆ ಸಿದ್ಧೇಂದ್ರಯೆನೆಧೃತಿಗುಂದಬೇಡ ನಿನ್ನೊಳಿಗವನಂಬಿಕಾಪತಿಯನೈದಿಸುವೆನೆನುತಾತನಂ ಕಳುಪಿ ಗುರುವಚನಮಂ ಹಾಡುತಿರಲು
ದೇವರುಂ ಕೈವೀಸಲವರಿವರುಯೆಂಬ ಬಗೆಯಾವುದುಂ ನಿನಗಿಲ್ಲ ನೆಲೆಗೊಳಲ್ಕೀಯದಂತೋವೋ ಮೊನೆಗೊಳಿಸುವೆಯೊ ಸರ್ವಜನಮಂ ನಿನ್ನ ಹೂಗೋಲ ಹೂಡಿ ತೆಗೆದುಭಾವಜಾಂತಕಗೆ ನೆಟ್ಟನೆ ಕೊಟ್ಟ ಭಾಷೆಯೊಳ್ಕಾವನು ಕಪಿಲಸಿದ್ಧ ಮಲ್ಲಯ್ಯ ಮನನೋಡಲಾವನನೆಸೆಯ ಹೇಳಿದರವನನೆಸುವೆ ನಿನ್ನ ಮೇಲೆ ತಪ್ಪೇನೆಂದನು
ಹಿರಿದೆನಿಪ ಘೋರ ಸಂಸಾರದಾರಣ್ಯದೊಳುಹರವರಿಯ ಕಾಮನೆಂದೆಂಬ ಬೇಂಟೆಯ ಬೇಡನುರವಣೆಯನನ್ಯಾಯ ಮಾಣಿಸೈ ಎಂಬ ಗೀತವ ಹಾಡಿ ಸುಖದೊಳಿರಲುಪುರದೊಳೆಡೆಗೆಯ್ದ ಮೊರಬದ ವಿಪ್ರಸಂಕುಳಂನೆರೆದು ಬಂದೀ ಕೆಱೆಗೆ ಸಂಸ್ಕಾರ ಜಲಶುದ್ಧಿದೊರಕದು ಚತುರ್ಥನಿದನಗೆದಾತನಿಂದಿನ ಸ್ನಾನವಿಧಿಗೆಂತೆಂದರು
ಅದಱೊಳೊಬ್ಬಂ ನಿಮ್ಮ ವಚನದಿಂ ಶುದ್ಧವಾಗದದಾವುದಭಿಮಂತ್ರಿಸಿ ಸ್ನಾನಮಾಳ್ಪೆವೆನಲಿದು ಮಂತ್ರವೆಂದು ಹೊಕ್ಕರು ಕೆಱೆಯನತಿ ಪುಣ್ಯತೀರ್ಥ ನದಿ ನದ ಸಂಕುಳಂಅದಿದೆನ್ನದಾರ್ತದಿಂ ನಡೆದು ಬಂದಿಲ್ಲಿ ನೆಲಸಿದ ಹದನನಱಿಯದಕಟಕಟ ತಾವಭಿಮಂತ್ರಿಸಿದರಂದು ಬೂದಿಯಿಂದಾದಿತ್ಯಬಿಂಬಮಂ ಬೆಳಗಲೆಳಸುವ ತೆಱದೊಳು
ಸ್ನಾನಪಾನಕ್ಕಿನ್ನನುಜ್ಞೆಯೆ ಅನುಜ್ಞೆಯೆಂದಾ ನೆರವಿ ಮುಳುಗಿ ನಿಂದಿರದ ಮುನ್ನಂ ಕಾಗೆತಾನೊಂದು ಬಂದೆಲ್ಲರಂ ಮುಟ್ಟಿ ಮುಟ್ಟಿ ಮುಳುಗಾಡಿಸಿತ್ತುದಯ ತೊಡಗಿಭಾನು ಮುಳುಗಲು ಬಿಡದೆ ಕಾಡುತಿರೆ ಕಂಡವರಿದೇನಾ ಮಹಾತೀರ್ಥನಿಂದೆಯಿಂದಲ್ಲಲೇಈ ನಿಘ್ರವಾತನಂ ಬಲಗೊಂಬೆವೆಂದು ಸಿದ್ಧೇಂದ್ರನೆಡೆಗೆಯ್ತಂದರು
ಬರವಿಂಗೆ ಮುಂದೆ ಕಾಗೆಯ ಕಥನಮಂ ಹೇಳುತಿರೆ ಕಂಡು ನಮಿಸೆ ನೀವ್ ಬ್ರಾಹ್ಮಣರು ನಾವು ನಿಷ್ಠುರ ಶೂದ್ರರೆಮಗೇಕೆ ವಂದಿಸುವಿರೆಂದಡಖಿಳಾಗಮೋಕ್ತ ಬ್ರಹ್ಮಮಂಚರಿಸುತಿಹ ನೀವಲ್ಲದಾವೇತಱ ಬ್ರಹ್ಮರರಿ ವಿಜಯಯೆಂದ ವಿಪ್ರರ ಮನದ ಶಂಕೆಯಂಪರಿಹರಿಸಿ ಬಳಿಕೆಂದಿನಂದದಿಂ ಕ್ಷೇತ್ರಮಂ ಬಲವರುತ್ತಿಪ್ಪಾಗಳು


