ಪೀಠಿಕೆ

ಪೀಠಿಕೆ
ಕರ್ಣಾಟ - ದಖನಿನ ಫಲವತ್ತಾದ ಕಪ್ಪುಮಣ್ಣನ್ನು ನೆನಪಿಸುವ ಮತ್ತು ಕಿವಿಗೆ ಹಿತವಾದುದನ್ನು ಸೂಚಿಸುವ ಪದ; ಅಭಿಜಾತ ಕನ್ನಡ ಭಾಷೆ, ಸಾಹಿತ್ಯ ಮತ್ತು ವಾಸ್ತುಶಿಲ್ಪದ ವಿಶಾಲ ಪರಂಪರೆಯನ್ನು ಸೃಜನಾತ್ಮಕವಾಗಿ ಪೋಷಿಸಲು ಮುಂದಾದ ವಿದ್ವಾಂಸರ ಮತ್ತು ತಜ್ಞರ ಕಾರ್ಯಕ್ರಮ. ಇದು ಅಭಿಜಾತ ಕನ್ನಡದ ಪರಂಪರೆಯನ್ನು ಸಾರ್ವಜನಿಕರಿಗೆ ಪರಿಚಯಿಸಲು, ವಿದ್ವತ್ತನ್ನು ಪ್ರೋತ್ಸಾಹಿಸಲು ರೂಪುಗೊಂಡಿದೆ. ಪ್ರಪಂಚದ ಅತ್ಯಂತ ಸಮೃದ್ಧವಾದ ಸಾಹಿತ್ಯ ಮತ್ತು ವಸ್ತು ಸಂಸ್ಕೃತಿಗಳನ್ನು ಹಂಚಿಕೊಂಡು ಪ್ರೀತಿ ಮತ್ತು ಆಸಕ್ತಿಯ ಸುತ್ತ ಸಮುದಾಯವನ್ನು ನಿರ್ಮಿಸುವ ಪ್ರಯತ್ನವಿದು.









