III
ಸಿದ್ಧರಾಮ ಚಾರಿತ್ರ
ದೇವ ಮಝ ಭಾಪು ಸಾಮರ್ಥ್ಯ ಸಾಗರವೆಂದುಭೂವಲಯವೈದೆ ಕೀರ್ತಿಸೆ ಮಲ್ಲಿಕಾರ್ಜುನನನೋವಿ ಸಿರಿಗಿರಿವೆರಸಿ ಸೊನ್ನಲಿಗೆಯೊಳು ನಿಲ್ಲಿಸಿದನು ಸಿದ್ಧಕುಲತಿಲಕನು
ಉದಯತಾಳಿನ ಮೋಹಿನೀಗಜದ ಶೈಲೋದಕದ ವಜ್ರಲೇಪದ ಕುಮಾರಧಾರೆಗಳನೇಱಿದ ನೆಲಹಿನಾಯುಧದ ಕುಳಿಯ ಘನ ನೆಳಲುಗತ್ತರಿಯ ಪಾಪಿಯ ಕೂಸಿನಕುದಿವ ಕೂಪದ ಕಮ್ಮರಿಯ ಬಿಲಾಶ್ರಯದ ಮುಂಡದ ಭೈರವನ ರಾಜಿಪಗ್ನಿಕುಂಡದ ಭಯಂಪುದಿದ ಹೊಂಬಳಿದ ತಾಣಂಗಳಂ ತೋಱಿದಂ ಭೈರವಂ ಸಿದ್ದಪತಿಗೆ
ನಡೆವ ಗಿಡಗಳನು ಹಾಡುವ ಪಕ್ಷಿ ವೃಕ್ಷಮಂನುಡಿವ ಮೆಳೆಗಳ ಕಥೆಯ ಕಮ್ಮರಿಯನುತ್ತರಂಗೊಡುವ ಗುಹೆಗಳನು ಹಾಱುವ ಮೊರಡಿಗಳನೆದ್ದು ಹರಿದಿಡುವ ಹಾಸಱೆಗಳಬಿಡದೆ ವಾಚಿಸುವ ಮರೆಯರ್ಥೈಸುವಾನೆಗಳನೊಡನೆ ಸಭೆಯಾಗಿ ಕೇಳ್ವೆರಳೆಗಳನೆರಡನೆಯಮೃಡ ಸಿದ್ದರಾಮಂಗೆ ತೋರುತ್ತ ನಡೆತಂದನಾ ದಿಗಂಬರವೀರನು
ಕರಿಯ ಹುಲಿಯಂ ಕೃಷ್ಣಹಂಸಗಳಂ ಬಿಳಿಯಕರಡಿಯಂ ಶ್ವೇತಮಾತಂಗಂಗಳಂ ಕೆಂಪಿನೆರಳೆಯಂ ರಕ್ತಸೂಕರತತಿಯನುರಿಯ ಬಣ್ಣವನುಗುಳ್ವ ಕೋಣಂಗಳಂಗಿರಿಯ ಸರಿಯಿಱುಹೆಯನನಂತ ಹೆಡೆಗಳ ಹಾವನೆರಡುಮೊಗದಾವನೈಮೊಗದೊಟ್ಟೆಯಂ ಜಗದಗುರು ಸಿದ್ಧರಾಮಂಗೆ ತೋರುತ್ತ ನಡೆತಂದನಾ ದಿಗಂಬರವೀರನು
ಮೆಱೆವ ಸುರಕುಜದ ವನಮಂ ಕಲ್ಪಲತೆಯ ಕುತ್ತುಱನಮೃತರಸದ ಮಡುವಂ ಸಿದ್ಧರಸದ ಪೆರ್ಗೆಱೆಯನಾಡುವ ಪುರುಷಮೃಗದ ಹಿಂಡಂ ಸುರಭಿಗಳ ನೆರವಿಯಂ ಪರುಷದಸಱಿಯ ಮರುಜೇವಣಿಯ ಮಡಲ ದಿವಿಜರ ಬಾಯ್ಗಳೊಱೆವ ಸುಧೆ ಚಿಂತಾಮಣಿಯ ಮೊರಡಿಯಂ ಹುತ್ತುಹೊಱಗೆ ಹೊದಿಸಿದ ಪರಮಕಾಷ್ಠಯುತರಂ ತೋಱಿದಂ ವೃಶ್ಚಿಕಾರೂಢನು
ಹುಗದ ಮುನ್ನಂ ಕೊಱೆದು ಕಡಿಗಳಂ ಕಾಲನೋಲಗಕಿಡುವ ಕದಳಿಯಂ ಹೊಕ್ಕು ಹೊಕ್ಕರನು ಮಾರಿಗೆ ಭೋಜನಂಗೊಡುವ ಬಿಲ್ವವನದೊಳಗಾಡಿ ತಿರುಗಿ ಕೈಲಾಸಗಿರಿಗೆನೆಗೆವ ಬಾಗಿಲನು ಮೂಕುತಿಯ ಮುಚ್ಚುಳಂ ಸ್ವರ್ಗದಗುಸೆಯಂ ರುದ್ರಲೋಕದ ಕೇರಿಗಳನ್ನು ಪನಗಲೋಕದರಮನೆಗಳಂ ಕಾಂಬ ನೆಲೆಗಳಂ ಕಾಣುತ್ತೆ ನಡೆತಂದನು
ಹರಿ ಭಜಿಸಿ ಸುರಪನಾರಾಧಿಸಿ ವಿರಿಂಚಿಯುಪಚರಿಸಿ ಮುನಿಗಳು ಸ್ಮರಿಸಿ ಮನುಗಳರ್ಚಿಸಿ ಮಹಾಸುರರು ಮೆಚ್ಚಿಸಿ ರವಿಗಳೋಲೈಸಿ ಶಶಿನಮಿಸಿ ಹುತವಹಂ ಸಲೆ ಬೋಧಿಸಿಗಿರಿಜೆ ಭಾವಿಸಿ ಸಿರಿಸರಸ್ವತಿಯರಾದರಿಸಿಸುರರೈದೆ ಪೂಜಿಸಿ ಸಮಸ್ತ ಯಜ್ಞಂ ಯಜಿಸಿನೆರೆದ ವೇದಂ ನುತಿಸಿ ಮುಕುತಿ ಜಾನಿಸಿ ವರಂಬಡೆದ ತಾಣಂ ಮೆಱೆದುವು
ಕರದ ಕಂಗಳ ಬೆನ್ನ ಬಾಯ ನೆತ್ತಿಯ ಬಸಿಱಕೊರಲ ಯೋನಿಯ ಕಾಲ ಮೊಲೆಯ ಹೆದ್ದೊಡೆಯ ಪೇರುರದ ಭೇತಾಳರಂ ರೌದ್ರರಾಕ್ಷಸಿಯರಂ ನೆರೆದ ನಾನಾ ಸತಿಯರಂಉರಿಯ ಹಳ್ಳವನು ಕೆಂಡದ ತೊಱೆಯನೆಸೆವ ಕತ್ತರಿವಾಣಿಗಡಲ ವಿಷಕೂಪಂಗಳಂ ನಂಜಿನೆರಳ ಮಾರಿಯ ಮನೆಯನಾ ಮೃತ್ಯುವಿನ ನೆಲೆಯನಾರಯ್ಯುತಂ ಬಂದನು
ತತ್ತ ಕತ್ತರಿವಾಣಿಯಂ ಪುಗುತ ವಿಷವನೀಂಟುತ್ತುದಯತಾಳನೇಱುತ್ತ ಪಾಪಿಯ ಕೂಸನೆತ್ತುತ್ತ ಮೋಹಿನೀಗಜವನಡರುತ್ತಾ ಕುಮಾರಧಾರೆಯನಾನುತಸುತ್ತಣ ಬಿಲದ್ವಾರಮಂ ಪುಗುತ ಘನ ನೆಳಲುಗತ್ತರಿಯನೆಡಪುತ್ತ ವಜ್ರಲೇಪವನು ತುಡುಕುತ್ತ ನಡೆದಂ ಭಾಪು ಸಿದ್ಧಕುಲಪತಿಯೆಂದು ಭೈರವಂ ಕೈಮುಗಿದನು
ಕಿಡಿಯ ಕಡಲಂ ಹೊಗೆಯ ಹಗವಮಂ ದಳ್ಳುರಿಯಮಡುಗಳಂ ಕೆಂಡದೊಱೆಯಂ ಪಾಯ್ದು ಮುಂದೆ ಝಂಗಿಡುವ ನಂಜಿನ ಮಂಜನುತ್ತರಿಸಿ ನಡೆದನಿನ್ನಾವುದಾವುದನುಸಿರುವೆಂನುಡಿಸಿದೊಡೆ ನುಂಗುವವರಂ ನುಡಿಸಿ ಮುಟ್ಟಿದೊಡೆಸುಡುವರಂ ಮುಟ್ಟಿ ನೋಡಿದಡೆ ಕಣ್ಗೆಡಿಪರಂನಡೆ ನೋಡಿ ಸಿದ್ಧ ನಾಗಾರ್ಜುನಂ ತಲೆಗೊಟ್ಟ ತಾಣಮಂ ನಿಟ್ಟಿಸಿದನು
ಈ ಕಡೆಯೊಳೀ ಯೆಡೆಯೊಳೀ ಕುಱುಹನಾ ಕುಱುಹನಾಕಡೆಯನೀಕ್ಷಿಸಿದನೆನಲೇನು ಪರ್ವತದನಾಕು ಬಾಗಿಲ ನಡುವೆ ಮೆಱೆವ ನಾಲ್ವತ್ತೆಂಟು ಗಾವುದಂತರದೊಳುಳ್ಳಆ ಕೌತುಕಂಗಳಂ ನೋಡುತ್ತ ಸರ್ವಮಹಿಮಾಕರಂ ಸಿದ್ಧಪತಿ ನಡೆತಂದು ನಮಿಸಿದಡುಮಾಕಾಂತನೆತ್ತಿ ತೂಪಿಱಿದು ತಲೆದಡವುತ್ತ ತೊಡೆಯನೇಱಿಸಿಕೊಂಡನು
ಏನೇನನೂನ ಚೋದ್ಯಾವಳಿಗಳಂ ಕಂಡೆನೀನೆಂದಡಾನೇನುವಂ ಕಾಣೆನೆಂದೆನಲದೇನೆಂದು ಕಾಣೆಯೆನೆ ದೇವ ದಿವ್ಯಾಮೃತವನೊಸೆದುಂಡು ತಣಿದವಂಗೆಜೇನುಱುವುದೇ ತಂದೆ ಹರಿಯಜರ ಬಗೆ ನಿಲುಕದಾನಂದಮಯ ನಿನ್ನ ಕಂಡ ಹೊಸತಿಂಗೆ ಹೊಸತೇನಾವುದಿನ್ನೆಂಬ ಮಾತಾಗೆ ಮೆಚ್ಚಿ ಗಿರಿಜಾಧೀಶನಿಂತೆಂದನು
ಜಸ ಮಿಗಿಲು ದೇವತಿರ್ಯಜ್ಞನುಷ್ಯಾದಿಗಳಿಗಸಮಗುರು ನೀನಾದೊಡಂ ಜನಂ ಮೆಚ್ಚಲೆಂದೊಸೆದನುಗ್ರಹವ ನಾನೇ ಮಾಡಿ ನಿನಗೆ ಗುರುವಪ್ಪೆನೇ ಮಗನೆಯೆನಲುಉಸಿರು ಪರಿಮಳವಾಗೆ ಬೆಲೆಗೊಂಬ ಹೂವೇಕೆರಸವೆ ಸಾಧನವಾಗೆ ಧನವೇಕೆ ಬಗೆವಡೆನ್ನಸುವಪ್ಪ ನೀನೆ ಗುರುವಪ್ಪಡಿನ್ನೆನ್ನಿಂದ ಧನ್ಯರಾರೀ ಧರೆಯೊಳು
ಕಂಗೆಸೆವ ನಾಲ್ಕು ಬಾಗಿಲ ಶಿವಾಲಯದ ಕಳಸಂಗಳೇ ಕಳಸವಗಜಾತ ನಂದೀಶ್ವರಂಭೃಂಗಿಯುಂ ವೀರೇಶರೆಸೆವ ಕಳಶಾಚಾರ್ಯರಾ ಮಲ್ಲಿನಾಥನೆಡೆಯಲಿಂಗಾಲಯದ ಕಳಸ ಗುರುಕಳಸವಾಜಿತಾನಂಗನೇ ಗುರುವಾಗಿ ಭರದೊಳಪ್ರತಿಮಸಿಶೃಂಗನುಗ್ರಹವಿತ್ತನೊಸೆದು ಶೋಧಿಸಿದ ಪುಣ್ಯವನು ಪುಟವಿಟ್ಟಂತಿರೆ
ಉದಯವಪ್ಪಂದು ಕೂಡುತ್ತಮಾಂಗದಲಿ ಮೂಡಿದ ಗೂಢಲಿಂಗಮಂ ತೋಱಿ ಪಂಚಾಕ್ಷರಿಯಹೃದಯಮಂ ತಿಳಿಪಿ ನಿಜಭಕ್ತಿಯಂ ಗುರುಪೂಜೆಯಾಗಿ ಕೈಕೊಂಡು ಬಳಿಕಮೊದಲ ನಾಮವನೆ ದೀಕ್ಷಾನಾಮವಿತ್ತು ಭೂತದಯಾವಿಚಾರಮಂ ನೇಮಮಂ ಕೊಟ್ಟು ನೋಡಿದಡೆ ಕನ್ನಡಿಗೆ ಕನ್ನಡಿದೋಱಿದಂತೆರಡನಳಿದೊಂದುವಿಡಿದಿರ್ದನು
ಎಲೆ ಸಿದ್ಧರಾಮಯ್ಯ ನಿನ್ನ ಮನದಱಕೆಯುಂಫಲಿಸಿತೇ ಫಲಿಸಿದತ್ತಾದಡಿನ್ನೇಳ್ ನಿನ್ನನೆಲೆಗೆ ಪೋಗೆಂದಡಾ ನುಡಿ ಕಾದ ಕಬ್ಬುನದ ಕೂರಂಬನುಱೆ ಕಿವಿಯಲಿಸಲಿಸಿದಂತಾಗಿ ನೆನೆದಿದ್ದಿದೇಕೆನ್ನತೊಲಗಿಸಲ್ ಮನದಂದೆ ತಂದೆಯೆಂದೆನೆ ಹಿಂದೆಮಲಮಲಂ ಮಱುಗುವರು ಮಾತೆಪಿತರೇಗೆಯ್ದೊಡಂ ಹೋಗಬೇಕೆಂದನು
ಕಡುವಿಚಾರಿಪಡೆನಗೆ ಮಾತೆಪಿತರುಂಟೆ ನಿಮ್ಮಡಿಗಳಲ್ಲದೆ ಮಾತುಗೇಳನೆಂದೆನ್ನ ಕೊಂದಡೆ ಕೊಲುವೆಯಲ್ಲದಾನಡಿಯಿಡುವನಲ್ಲ ನಿಮ್ಮಡಿದಾವರೆಗಳನಗಲ್ದುಮೃಡಯೆನಲು ಧರೆಯ ಬೇಸಱನಳಿದು ದೋಷಮಂಹುಡಿಗುಟ್ಟಲೆಂದು ಪುಟ್ಟಿದ ನಿನ್ನ ನಾನಿಲ್ಲಿಮಡಗುವೆನೆ ಮಗನೆ ಕತ್ತಲೆಯ ಮೃತ್ಯುವನು ಮಡಗಿತೆ ಮೂಡುಗಡೆಯೆಂದನು
ಎಂತಾದೊಡಂ ಹೊಗಳ್ದು ಹೋಗವೇಳ್ಕೆಂದಡಾನೆಂತುವುಂ ಹೋಗೆನೆಂದೆನಲುಪಾಯದಲು ನಿನ್ನಂ ತಗುಳಲೆಂದಾಡಿದೆನೆ ಧರೆಯ ಹಿತವನಾಚರಿಸಲಾಡಿದೆನಲ್ಲದೆಮುಂತೆ ಧರೆಯುಂಡಡೇನೊಡಬಿದ್ದಡೇನೀಗಕಂತುಹರ ನಿನ್ನನೆಂತಗಲಿ ಹೋಹೆಂ ತಂದೆಪಿಂತೆ ಜೀವವನಿರಿಸಿ ತನು ಮುಂದೆ ಹೋದುದುಂಟೇ ದೇವ ಹೇಳೆಂದನು
ಕಂದ ಕೇಳ್ ಕಡೆಗೆನ್ನನಗಲಲಾಱದೆ ನೇಹದಿಂದೈಸಲೇ ನುಡಿದೆಯಾ ನುಡಿಗೆ ತಕ್ಕಂತುಹಿಂದುಗೊಂಡೇ ಬಂದು ನೀಂ ಹಿಡಿದುದಂ ಹಿಡಿದು ಬಿಟ್ಟುದಂ ಬಿಟ್ಟು ಕಳೆದುನಿಂದಲ್ಲಿ ನಿಂದು ನಡೆದಡೆ ನಡೆದು ಕರೆದರೋಯೆಂದು ಬೇಡಿತನಿತ್ತು ಕೊಟ್ಟುದಂ ಕೊಂಡು ನೀನೆಂದಂತೆ ಮಾಳ್ಪೆನುಮ್ಮಳಿಸಬೇಡಂಜಬೇಡೆಂದು ನಂಬುಗೆಯಿತ್ತನು
ಎಂತುವು ಬಹುದುಳ್ಳಡತುಳ ಪುಣ್ಯಖ್ಯಾತಿಯಂ ತಳೆದ ನಿನ್ನ ಪರ್ವತಕುಳ್ಳ ಸಾಮರ್ಥ್ಯಮಂ ತೆಗೆದು ತಂದೆನ್ನ ಸೊನ್ನಲಿಗೆಯೆಂಬ ಕಿಱುವಳ್ಳಿಗಿತ್ತದಱ ನಡುವೆಸಂತತಂ ನೆಲಸಿ ನೀನಿಪ್ಪಂತು ಬಾಯೆಂದಡಂತಕಾಂತಕನದನೊಡಂಬಿಟ್ಟು ನೀನಿಂದುಮುಂತೆ ಹೋಗಾಂ ಪಿಂತೆ ಬಹೆನೆನಲು ಕೈಮುಗಿದು ಬಪ್ಪ ಕುಱುಹೇನೆಂದನು
ಮಂದೈಸಿ ಮಸಗಿ ಮುಸುಕಿದ ಮೋಡದಿಂದ ಮಿಂಚಿಂದ ಮೊಳಗಿಂದ ಸಿಡಿಲಿಂದ ನೆಱೆ ಬಿಱುಗಾಳಿಯಿಂದೆದ್ದ ಕತ್ತಲೆಯೊಳೊಗೆದು ಮಂದಾರದಡಿಯೊಳು ಲಿಂಗವಾಗಿರ್ದಪೆಂಮುಂದೊಂದು ಲಿಂಗಪ್ರತಿಷ್ಠೆಗೈದೆನ್ನನಾನಂದದಿಂದಾ ಲಿಂಗದುತ್ತಮಾಂಗದಲಿ ನಿಲಿಸೆಂದಡೆಲೆ ಗಿರಿಶ ಲಿಂಗಕ್ಕೆ ಲಿಂಗಂ ಪೀಠವೇಕೆ ಕರುಣಿಪುದೆಂದನು
ಈ ಮಹಾಲಿಂಗಮಂ ಮೂರ್ತಿಗೊಳಿಸಿದ ಸಿದ್ಧರಾಮಯ್ಯ ತನಕೆ ತಾನಾಧಾರವೇ ಸಲ್ಲದೀ ಮಹಿಯ ಮರ್ತ್ಯರಂತಲ್ಲೆಂದು ಮುಂದೆ ಜನವಱಿಯಬೇಕದು ಕಾರಣಂಕ್ಷೇಮತರವಾಗಿ ಲಿಂಗದ ಮೇಲೆ ಲಿಂಗಮಂಪ್ರೇಮದಿಂದಂ ಪ್ರತಿಷ್ಠಿಸು ಮಗನೆಯೆಂದಡೆಲೆಸೋಮಾವತಂಸನೆ ಪ್ರತಿಷ್ಠೆಗಾಚಾರ್ಯರಾರಾದಪರು ಹೇಳೆಂದನು
ಸರಸಿಜಸುತಂ ಸ್ವಪುತ್ರೀವರಂ ವಾಯು ವಿಷಧರನಿಕರಪೀತಾವಶೇಷನಿನನತ್ಯುಷ್ಣಕರನಿಂದು ದೋಷಾಕರಂ ವಿಷ್ಣು ಪುಷ್ಪಾಕ್ಷನಗ್ನಿ ತಾಂ ಸರ್ವಭಕ್ಷಂವರಮುನಿಗಳೆಲ್ಲ ಕುಸ್ಥಾನಜಾತರು ಮಹಾಸುರಪನತಿ ಜಾರನಿಂತವರಾಗದಿಂದೆಮ್ಮಸರಿ ಸರ್ವಧರ್ಮರೂಪಂ ವೃಷಭನಾಚಾರ್ಯನಾದಪಂ ಹೋಗೆಂದನು
ಆದಿ ವೃಷಭೇಂದ್ರನೇಂ ಕುಱುಹುವಿಡಿದಾಚಾರ್ಯನಾದಪಂ ದೇವಯೆನೆ ನಿನ್ನೂರ ತುಱುವಿನೊಳುಭೂದೇವಿಯಿಂದಚ್ಚ ಬಱಡುಗವಿಲೆಯ ತೆಱದೊಳ್ಳೆದಳಾ ಗರ್ಭದೊಳಗೆಆ ದಿನದಲೇ ಮೂಡಿಯಾ ದಿನದಲೇ ಜನಿಸಿಯಾ ದಿನದೊಳೇ ಯೌವನಂದಳೆದು ಬೆಳೆದು ಪ್ರಮೋದದಲಿ ಬಂದಪ್ಪನಱಿತುಕೊಳ್ಳೆಂದನಗಜಾಹರ್ಷವನಚೈತ್ರನು
ಅಲ್ಲಿಂದ ಮೇಲೆನಗೆ ಕಜ್ಜವೇಂ ಕರುಣಿಸಘದಲ್ಲಣನೆಯೆಂದಡೀ ಪರ್ವತದೊಳುಳ್ಳ ಲೇಸೆಲ್ಲವಂ ನಿನ್ನ ಸೊನ್ನಲಿಗೆಯೊಳಲಂಕರಿಸು ಪುರವ ವಿರಚಿಸು ಧರೆಯೊಳುಪಲ್ಲವಿಸಿದಷ್ಟಷಷ್ಟಿಕ್ಷೇತ್ರ ಮೊದಲಾದಸಲ್ಲಲಿತ ಲಿಂಗವೆನಿತುಂಟವಂ ನಿಲಿಸು ಬಳಿಕಿಲ್ಲದುದನೆಮ್ಮ ಕೈಲಾಸಗಿರಿಗೆಡೆಯಾಡಿ ಬೇಡಿಕೋ ಹೋಗೆಂದನು
ಆವ ದಿನದಿಂದ ಪುರವಂ ರಚಿಸುವೆಂ ತಂದೆಭೂವಲಯದೊಳಗುಳ್ಳ ಸರ್ವಲಿಂಗಗಳಾವಾವವಱ ನಾಮಮಂ ಬಲ್ಲೆನೆ ಪ್ರತಿಷ್ಠಿಸುವಡಂದಂದಿನವಸರವನುದೇವ ಬಿನ್ನಯ್ಸುವಡೆ ಭೂಚರಂ ಕೈಲಾಸಕಾವಂದದಿಂ ಬಪ್ಪೆನೆಲೆ ರತೀಶ್ವರವಿಪಿನದಾವ ನತಜೀವಯೆಂದಾ ಸಿದ್ಧಪತಿ ನುಡಿಯೆ ನಸುನಗುತ್ತಿಂತೆಂದನು
ಜಡ ಮನುಜನೇ ಮಗನೆ ನಿನ್ನ ಮಹಿಮೆಗಳ ಬಗೆಗಡ ನೋಳ್ಪಡಿಂದ್ರಂಗೆ ಲೆಕ್ಕಿಸದೆ ಸೂರ್ಯಂಗೆಬಿಡೆ ಹೊಗಳ್ವಡುರಗರಾಜಂಗರಿದು ತರು ಬಲ್ಲುದೇ ತನ್ನ ಫಲರುಚಿಯನುಹಿಡಿದು ಕಲು ಪರುಷವೀಂಟಿದ ಜಲಂ ರಸವಾಡಿದೆಡೆ ಮಹಾನಿಧಿ ಪೆಸರ್ಗೊಂಡುದೇ ದೈವ ನೀನುಡಿದುದೇ ಮಂತ್ರವನುಗೈದುದೇ ಗಮನ ಹೆದಱದೆ ಮಾಡು ಹೋಗೆಂದನು
ನಿಲ್ಲದೆಯ್ತರ್ಪುದುಂಟೇ ದೇವ ಉಂಟು ಪುಸಿಯಿಲ್ಲವೇ ಇಲ್ಲ ನಂಬುವೆನಯ್ಯ ನಂಬು ಮುಂತೆಲ್ಲವಂ ಸಮಕಟ್ಟಿ ಹೋಹೆನೇ ಹೋಗೆನಲು ತಳುವದಿರು ತಂದೆಯೆಂದುಲಲ್ಲೆಗರೆದಡಿಗಡಿಗೆ ಹೇಳಿ ಕೈಮುಗಿದು ಬಸಿಅಲ್ಲಿ ತಲೆಯಿಟ್ಟು ಕರುಣಂದೋಱಿ ಮೀಱಿ ಪದಪಲ್ಲವಕ್ಕೆಱಗಿ ಬೀಳ್ಕೊಂಡನಂತಾಗಳೀಶ್ವರನ ಕರುಣದ ಕಂದನು
ತನ್ನನಲವತ್ತಱಸಿ ಕಂಡು ಕೊಂಡುಯ್ವ ತವಕನ್ನಿಮಿತ್ತಂ ಬಪ್ಪ ಬೊಮ್ಮಯ್ಯನಂ ಕಂಡುಮನ್ನಿಸಿ ಮಹಾಕರುಣವಿತ್ತು ಭೈರವ ಶಬರನಾಗಿಯೊಡನೊಡನೆ ಬರಲುಉನ್ನತಾಂಬುಜವನಕೆ ದಿನಕರಂ ಬಪ್ಪಂತೆಸೊನ್ನಲಿಗೆಗೊಲಿದು ಬಪ್ಪಾಗಳಿದಿರ್ಗೊಂಡರಾಕನ್ನೆಯರು ಬಪ್ಪ ಚೈತ್ರವನಿದಿರ್ಗೊಂಬ ವನದೇವಿಯರ ನೆರವಿಯಂತೆ
ಅಂದು ತಮತಮಗೆ ಕಣ್‌ಬಂದಂತೆ ಬಂದು ತಾಯ್ತಂದೆಗಳು ಬಿಗಿದಪ್ಪಿ ಕೊಂಡೊಯ್ದು ಬಳಿಕ ಮನೆಯಿಂದಗಲಲೀಯವುತ್ತಿರ್ದರುಱೆ ಶರತ್ಕಾಲದ ಮುಗಿಲ ಮಱೆಯಲಿಇಂದುವ ಗಗನಸತಿ ಸಲಹುವಂತಿರುತಮಿರೆಹಿಂದೆ ಶಿವನಿತ್ತ ಕುಱುಹಿನ ದಿನದ ಬರವನಾನಂದದಿಂ ಬಯಸುತಾ ಸಿದ್ಧನಿರ್ದಂ ಕೋಕನುದಯಮಂ ಬಯಸುವಂತೆ
ಎಳಸಿತ್ತು ಬಪ್ಪಂತೆ ಬಪ್ಪ ದಿನದೊಳು ಮಹಾಬಳನಣ್ಣ ಬೊಮ್ಮಯ್ಯನೊಡನೆ ಬರೆ ನಡೆತಂದುನಳನಳಿಸಿ ಚಳಿತು ಬೆಳೆದೆಳೆಯ ಮಂದಾರದಡಿಯಂ ಸಾರ್ದು ಮಂದಾರದನೆಳಲ ಚಿಂತಾಮಣಿಯ ಚಿಣ್ಣನಂತಿಪ್ಪಾಗಮುಳಿದು ಘುಳುಘುಳಿಸಿ ಭೂರಜದೊಡನೆ ಗಿಡುಮರಂಗಳನಾಗಸಕ್ಕೆತ್ತಿ ಬೀಸಿತ್ತು ಗಾಳಿ ಸರ್ವಂ ಧರಾಮಯವಾಗಲು
ಗಗನವೆಡೆಗಿಡೆ ಮುಗಿಲು ನೆಗೆದವೆಡೆವಿಡದೆ ಭುಗಿಭುಗಿಲು ಮಿಂಚಾಡಿದವು ಧರಣಿಯಂ ಹೊತ್ತ ಫಣಿಸುಗಿದು ನಡನಡುಗೆ ಸಿಡಿಲಡಸಿ ಘುಡುಘುಡಿಸಿ ಮತ್ತವನಿಯಂ ಮಂದೈಸಿತುಹಗಲ ಹಣೆಯಕ್ಕರಂದೊಡೆದು ಇಡಿಗುಟ್ಟಿ ಕಾಡಿಗೆಯೊಳಗೆ ಕಾರಿರುಳ ತಿರುಳ ರಸಮಂ ಕಲಸಿಮೊಗೆದು ಬಳಿದಂತೆ ಬಳವೆತ್ತ ಕತ್ತಲೆ ಸಿದ್ಧರಾಮಂಗೆ ಬೆಳಗಾದುದು
ಮದನಮದಮರ್ದನನ ಬರವಿಂಗೆ ಕೂಡೆ ನೆಗಪಿದ ತಳೆಗಳೆನಿಸಿರ್ದವಾ ಮೇಘವುಱೆ ಹೊತ್ತಿಸಿದ ಹಲವು ಕೈದೀವಿಗೆಗಳೆನಿಸಿದವು ಕೂಡೆ ಹೊಳೆವ ಮಿಂಚುಗಳು ಮುಂದೆಒದವಿ ಭೂರಜವನುಡುಗುವವನಂ ಗಾಳಿ ಪೋಲ್ತುದು ನೆಲನನುಗ್ಗಡಿಪ ದನಿಯನಾ ಸಿಡಿಲು ನೆನಸಿದುದು ಚಳೆಯಂಗೊಡುವವೋಲೆಸೆದುದಾ ಚಿಟುಕುವನಿ ಸಿದ್ಧಪತಿ ನಲಿಯಲು
ಘಳಿಲನಂತಾಗಳೆದ್ದುದು ಗಗನದೊಳಗೊಂದುಬೆಳಗು ಮೊಳೆಯಿತ್ತದಱ ಬಳಿವಿಡಿದು ಕಣ್ಗೆ ಮಂಗಳವಪ್ಪ ಶೈತ್ಯಪ್ರಭಾಪಟಲದಿಂದ ನಾನಾ ದಿವ್ಯನಾದದಿಂದಬಳಸಿ ಪರುಷದ ಕರಂಡಗೆಯೊಳಣಿಮಾದಿ ಗುಣಮಿಳಿತ ಸೆಜ್ಜೆಯೊಳಮಲಲಿಂಗವಿಳಿದಾ ಸಿದ್ಧಕುಲತಿಲಕನಿರ್ದ ಮಂದಾರಗುಲ್ಮದ ತಳದ ಭೂಮಿಯೊಳು ಮೈದೋಱಲು
ತಳಿತ ಪುಳಕದ ಗುಡಿಗಳಿಂ ಮುಗಿದ ಕರಕಮಲಕಳಶದಿಂದಾನಂದ ಜಲಬಿಂದು ಕುಸುಮದಿಂಮೊಳೆವ ಗದುಗದದ ಹಱೆಯಿಂ ಮನೋರಾಗತಳಿರಿಂ ನಯನದೀವಿಗೆಗಳಿಂಬಳವೆತ್ತ ಸಂತಸದ ಬೆಳುದಿಂಗಳೊಳಗೆ ನಿರ್ಮಳ ದಿವ್ಯಲಿಂಗವನಿದಿರ್ಗೊಂಡು ಕೊಂಡು ನಿಜನಿಲಯಕೈತಂದು ಘನಸುಖಸಂಕಥಾವಿನೋದದೊಳಿರ್ದ ಸಿದ್ಧೇಂದ್ರನು
ಆ ಲಿಂಗಮಂ ಮನೆಯೊಳಾರಾಧಿಸುತ್ತಾ ನಿರಾಲಂಬನಿರಲೊಂದು ದಿವಸ ಮನೆದೈವವಹಧೂಳಿಮಾಕಾಳನಂ ನೋನಲೆಂದಾ ತಂದೆ ತಾಯ್ಗಳುದ್ಯೋಗಿಸಿದಡೆಕೇಳಿ ಕಿಡಿಕಿಡಿಯಾಗಿ ಬೇಡಿತಂ ಕೊಡಬಲ್ಲಶೂಲಿ ಬಂದಿರೆ ಬಗೆಯದಕಟಕಟ ಬೂದಿಯೊಳುಬೇಳುವಂತಧಮ ದೈವವ ಮಾಡಿದಪರೆಂದು ಹೊಱವಂಟ ನಿಜಗೃಹವನು
ಅತಿ ಜಡರೆನಿಪ್ಪ ಮಾನವರನಿನ್ನೇನೆಂಬೆನತನುಹರನಿರಲನ್ಯದೈವಗಳನೋನುವಿರೆಪತಿತರಿರ ನಿಮ್ಮ ಮನೆಯೊಳು ನಿಲುವನಲ್ಲೆಂದು ಲಿಂಗಮಂ ಧರಿಸಿ ಪಿಡಿದುಗತಿಗೆಟ್ಟು ಬೇಱಿನ್ನು ದೈವರೆಂದೆನ್ನದಿರಿಧೃತಿಗೆಟ್ಟು ಬೇಱಿನ್ನು ದೈವವೆಂದೆನ್ನದಿರಿಅತನುಹರ ಮಲ್ಲಿಕಾರ್ಜುನನೀವನೆಂದು ಹಾಡಿದನೊಂದು ಗುರುವಚನವ
ಮುಂದಿಲ್ಲಿ ಮಲ್ಲಿಕಾರ್ಜುನನ ಗೃಹವಾದಪ್ಪುದೆಂದು ಪೇಳ್ವಂದದಿಂ ಹೊಱಗೆ ಮಠಮಂ ಕಟ್ಟಿಹಿಂದುಗೊಂಡೆಯ್ದಿ ಬಂದಣ್ಣ ಬೊಮ್ಮಯ್ಯಂಗೆ ಕರುಣದಿಂ ದೀಕ್ಷೆಯಿತ್ತುಸಂದ ಹೂಗಿಡುಗಳಂ ಬಿತ್ತಿ ಸಲಹುತ್ತ ಮೇಲೊಂದೆರಡು ತಿಂಗಳಂ ಸಿದ್ಧಕುಲತಿಲಕನಾನಂದದಿಂದಿರಲಿತ್ತ ಚಿಂತೆ ಮೊಳೆಯಿತ್ತು ಶೂಲಿಗೆ ರಜತಪರ್ವತದಲಿ
ರಾಗದಿಂ ನಿನ್ನ ಸೊನ್ನಲಿಗೆಯಂ ಧರೆಯುಱಿಯೆಯೋಗ ರಮಣೀಯ ಸುಕ್ಷೇತ್ರಮಂ ಮಾಡುವೆಂಹೋಗೆಂದು ಕಂದನಂ ಕಳುಹಿ ಪಲಕೆಲವು ದಿನವಾಯ್ತೆಂದು ನೆನೆದು ಹರನುಬೇಗದಿಂ ನಡೆದು ಬಂದಾವೂರೊಳುಱುವ ವಿಭುವಾಗಿಪ್ಪ ನನ್ನಪ್ಪನರಸಿ ಚಾಮಲದೇವಿಗಾಗಳಂತೇ ಕನಸಿನೊಳು ಮನದ ಮೊನೆಯ ಮೇಲಿರ್ದ ಬಳಿಕಿಂತೆಂದನು
ಚಾಮವ್ವೆ ಮಗಳೆ ನಿನ್ನೂರೊಳೊಂದು ಕ್ರೋಶಭೂಮಿಯಂ ಸಿದ್ಧರಾಮಂಗೆ ಕೊಡು ಕೊಟ್ಟಡಭಿರಾಮದಿಂದೆಮಗೆ ಪುರಮಂ ರಚಿಸಿದಪನೇಳು ಬೇಗ ಮಾಡೆಂದು ಬೆಸಸಿಸೋಮಧರನಡಗೆ ಮೈಮುರಿದೆದ್ದು ಕರೆದೊರ್ವಕಾಮಿನಿಗೆ ಹಿಂದೆಮ್ಮ ಗುರು ರೇವಣಾರ್ಯನೆಂದಾ ಮಾತಿನಂತಿಂದು ಕನಸಿನೊಳು ಶಿವ ಪೇಳ್ದನೆಂದು ನುಡಿದಳು ಮುದದಲಿ
ಹರಹರ ಮಹಾದೇವ ಕನಸಲ್ಲ ನಡೆಯೆಂದುಹರುಷಜಲದಿಂ ಮಿಂದು ಮೊಳೆವ ಪುಳಕಂಗಳಾಭರಣಮಂ ತೊಟ್ಟು ಸಂತಸದಣಿಂಬವನುಟ್ಟು ಮುಗಿದ ಕೈ ಹೂವ ಸೂಡಿನೆರೆದ ಪರಿವಾರ ಸಹಿತೈತಂದು ಲೋಕೈಕಗುರುವಿಂಗೆ ಮೈಯಿಕ್ಕಿ ನಿಂದಿರ್ದು ನಿಮ್ಮ ಶಿವಪುರಕೆ ತಕ್ಕನಿತು ಭೂಮಿಯನಿತ್ತೆನವಧರಿಪುದೆಂದು ಧಾರೆಯನೆಱೆದಳು
ಮುಂದೇನು ಬೇಕಾದೊಡಂ ಬೆಸಸು ಬೆಸಕೆಯ್ದೆನೆಂದು ಪೊಡಮಟ್ಟಾಕೆ ಪೋಗೆ ಕಂಡಱಿಯದೀಯಿಂದುಮುಖಿ ಕೊಟ್ಟಡಿಂತೀಯಯ್ಯ ಕೊಂಡನಿದ ಪುರವ ರಚಿಸುವೆನೆಂದಡೆಹೆಂದದ ಧನಂ ಬೇಕು ಧನವಿಲ್ಲ ಲೋಕ ನಗುವಂದವಾಯ್ತೆಂದು ನುಡಿಯದೆ ಭ್ರಮಿಸಿ ಕಳೆಗುಂದಿಮುಂದೆ ನಿಂದಣ್ಣ ಬೊಮ್ಮಯ್ಯನನುವಱಿದನಾ ಸಿದ್ಧಪತಿ ಮನದೊಳಂದು
ಎಸೆವ ಶಿವನಿಳಯಮಂ ಮಾಡುವಡೆ ನೆಲನ ಶೋಧಿಸಬೇಹುದೀಯೆಡೆಯನಗೆಯೆನಲು ಮನದೊಳಗೆನುಸಿಗೊಳುತುದಾಸೀನದಿಂ ಗುದ್ದಲಿಯನೆತ್ತಿ ಮೀಂಟುತ್ತೆ ಪೊಡೆಯೆ ಮುಂದೆಹೊಸಹೊನ್ನ ಹಿರಿಯ ಕೊಪ್ಪರಿಗೆಯಂ ಕಂಡು ಶಂಕಿಸುತ ನಿನ್ನಳವಱಿಯಲೆನ್ನಳವೆಯೆಂದು ಕೀರ್ತಿಸುತೆಱಗಿದಣ್ಣ ಬೊಮ್ಮಯ್ಯಂಗೆ ನಸುನಗುತಲಪ್ರತಿಮನಿಂತೆಂದನು
ಶ್ರೀನಾರಿಯಂ ಧರೆಗೆ ಕೊಡುವ ಮಹಿಮಂ ತನಗೆತಾನಧಮನೇ ಎಂದು ಶಿಲ್ಪಜ್ಞರಂ ಕರಸಿನಾನಾ ನವೀನವೆನೆ ತನ್ನಿಚ್ಛೆಯಲಿ ಮಾಡಿಸಿದನೀಶನಿಲಯಂಗಳಏನೆಂಬೆನೀ ಹಸ್ತವೀಯಳತೆಯೀಯಧಿಷ್ಠಾನವೀ ರೇಖೆಯೀ ಖಂಡೆಯಂ ಕಡಿಗೆಯೇತಾನವೀಯಾಯವೀ ಗೃಹವೆಂದು ಹೆಸರಿಡುವರಿಲ್ಲೆಂದು ಹಿಂದು ಮುಂದೆ
ಸಲೆ ಮಲ್ಲಿಕಾರ್ಜುನಂಗೊಂದು ನಾಲ್ದೆಸೆಯ ಬಾಗಿಲಲಿರ್ಪ ದೇವರ್ಗೆ ನಾಲ್ಕಷ್ಟಮೂರ್ತಿಗಳ್ಗಲಸದೆಂಟಾದಿಯೊಳು ಕಂಡ ನವಣೆಯ ಕೆಯ್ಯ ತಮ್ಮಡಿಯ ಹೆಸರಲೊಂದುನಲಿದು ಹರ ಕುಳ್ಳಿರ್ದ ಗೊಂಟಿಗೊಂದುರೆ ಸತ್ರದಲಿಮೆಱೆತೆಯಲೊಂದನುಗ್ರಹವಿತ್ತ ಗುರುಮೂರ್ತಿಯಲಿ ಬಳಿಕ್ಕೊಂದಿಂತು ಹದಿನೇಳು ಯೋಗಲಿಂಗಂಗಳಂ ನಿರ್ಮಿಸಿದನು
ಎಲ್ಲವಳವಟ್ಟುದೀ ಸಮಯದೊಳು ಗಿರಿಸುತೆಯವಲ್ಲಭನ ವಾಹನಂ ಬಂದಡುತ್ಸವಕೆ ಪಡಿಯಿಲ್ಲೆನುತ್ತಾವೂರ ತುಱುವಿನೊಳು ಸಿದ್ದಪತಿ ನೋಡುತಿರೆ ಮುಂದೆಲ್ಲರುಬಲ್ಲ ಬಡ ಬಱಡುಗಎಲೆಗೆಯಾಗಳೇ ಗರ್ಭಪಲ್ಲವಿಸಿ ಬೆಳೆವೆತ್ತು ಬೆಸಲಾಯ್ತು ಸುರಭಿಗಳನಲ್ಲನಂ ದುರಿತಗಜಮಲ್ಲನಂ ಹೊಗಳಲಳವಲ್ಲೆನಿಸಿಕೊಂಬವನನು
ಘನಮುಕ್ತಿ ಕಾಯ ದೇವಾಳಿ ರೋಮಾಳಿ ತೀರ್ಥನಿಕಾಯ ಸುಳಿ ಪುಣ್ಯವವಯವ ಯುಗಂಚರಣವಿನುತ ರುದ್ರಂ ಜೀವ ಸರ್ವಮಂತ್ರಂ ನಾದವಜ ಹರಿಗಳುಭಯ ಪಕ್ಷಅನುಪಮ ಪ್ರಣವಮಂದುಗೆಯ ದಯೆಯೆ ತೊಡರು ಶ್ರುತಿಧ್ವನಿಗಳುರಗಜ್ಜಿ ಸತ್ಯದ ಸಂಜೆ ಶಾಂತಿ ಮಂಡನ ಭಕ್ತಿದಂಡೆ ಚಿತ್ತಿನ ನೊಸಲುಗನ್ನಡಿಯೊಳೆಸೆದನಾ ವೃಷಭೇಂದ್ರನು
ಆ ನಂದಿಕೇಶ್ವರನನಾ ಸಿದ್ಧರಾಮನತ್ಯಾನಂದದಿಂ ಗುಡಿಯ ಕಲಸ ಕನ್ನಡಿಯ ವಾದ್ಯಾನೀಕ ರವದಿಂದಿದಿರ್ಗೊಂಡು ಬಂದೀಶನ ಗೃಹಾಂತರಾಳದೊಳು ಪೊಗಿಸಿಸ್ವಾನುಭಾವದಿ ಪ್ರತಿಷ್ಠಾಪರಿಕರಂಗಳನನೂನದಿಂ ನೆರಪಿ ಪುಣ್ಯಾಕಾರ ಲಿಂಗಕ್ಕೆನಾನಾ ವಿಶೇಷ ಪೂಜೆಯನೊದವಿ ಪಿಡಿದು ಜಯಜಯತೆಂದು ನಿಂದಿರ್ದನು
ವಸುಧೆ ಪುಳಕಿಸೆ ಹಲವು ವಾದ್ಯಕುಲವುಲಿಯೆ ದೆಸೆದೆಸೆಗಳಲಿ ಶಿವಹೋಮವುಣ್ಮೆ ಶರಣಾಳಿ ಸಂತಸದಿಂದಲುಘೆಯೆಂದು ಕುಣಿಯೆ ಪೂಮಳೆವಿಡಿದು ದೇವರಂಬರದೊಳಾಡೆಒಸೆದು ಪಿಡಿದಧರವೇ ಹಸ್ತವುಸಿರೇ ಮಂತ್ರವಿಸರ ಲಾಲಾಜಲದಿನಭಿಷೇಕ ಫೇನವೇಕುಸುಮವೆನೆ ನಿಲಿಸಿದಂ ಮುನ್ನಿನ ಸುಯೋಗಲಿಂಗದ ಶಿಖೆಯೊಳಾ ವೃಷಭನ
ಬಂದವರ್ಗಾನನ್ಯಾಧಾರನೆಂದು ಪೇಳ್ವಂದದಿಂ ಮೊದಲಲಿಂಗವೆ ಪೀಠವಾಗಿ ಮುದದಿಂದೊಸೆದು ಮೂರ್ತಿಗೊಂಡಾಲಿಂಗದೊಳು ವೃಷಭನಡಗೆ ಕಂಡಾ ಸಿದ್ಧನುಹಿಂದೆ ಸವೆದಿರ್ದ ಹದಿನಾಱು ಲಿಂಗಸ್ಥಲವನಿಂದೀಗಲೇಕಕಾಲದೊಳು ಪ್ರತಿಷ್ಠಿಸುವೆನೆಂದು ಸಂಭ್ರಮದೊಳಗೆ ಸಂಭ್ರಮ ಬೆಳೆಯೆ ಪರಿಚಾರಕರಿಗಿಂತೆಂದನು
ನಿಲ್ಲದೆಲ್ಲಾಯೆಡೆಯೊಳೆಲ್ಲರನು ತಳುವಿಲ್ಲದಣಿಮಾಡಿಕೊಂಡಿರಿಯೆಂದು ಬೆಸನನಿತಲ್ಲಲ್ಲಿಗಟ್ಟಿ ಚೆಚ್ಚರದೊಳಾಚಾರ್ಯರ ಶಿರೋರತ್ನ ಸಿದ್ಧನೈದಿಅಲ್ಲಿ ಹದಿನಾಱು ಲಿಂಗವನೇಕಲಗ್ನದೊಳಗೆಲ್ಲಂ ಪ್ರತಿಷ್ಠಿಸಿದನೊರ್ವನೇ ಮುನಿವರರವಲ್ಲಭಂ ನೋಡಲೆಲ್ಲಿಯು ತಾನೆಯಾಗಿರ್ದನೇನೆಂದು ಬಣ್ಣಿಸುವೆನು


