XIV
ಖಗೇಂದ್ರಮಣಿದರ್ಪಣ
ಕೃತ್ರಿಮವಿಷಚಿಕಿತ್ಸಾ ಪ್ರಕರಣಂ
ಶ್ರೀ ದಿವಿಜವಂದಿತ ಸ್ಯಾದ್ವಾದ ಸುಧಾವನಧಿಗೆಱಗಿ ಕೃತ್ರಿಮವಿಷದಿಂದಾದ ರುಜಾಚಿಹ್ನಂಗಳನಾದರದಿಂ ತಚ್ಚಿಕಿತ್ಸೆಯಂ ವಿವರಿಸುವೆಂ
ರಿಪುವರ್ಗಂಗಳಿನಾ ವಿರಕ್ತ ಯುವತೀಸಂದೋಹ ದುರ್ಮೋಹದಿಂಕಪಟೋಪಾಯದೊಳಾದೊಡನ್ನದೊಳೆ ಸತ್ಪಾನಾಂಗದೊಳ್ ಖಾದ್ಯದೊಳ್ಲಪಿತ ಸ್ವಾದುಸಿತಾಜ್ಯ ಮುಖ್ಯ ಬಹುಧಾ ಲೇಹ್ಯಂಗಳೊಳ್ ಚೂರ್ಣದಿಂದುಪಯುಕ್ತಂ ವಿಷಮಪ್ಪುದಂತದಱಿನೆಲ್ಲಾ ವ್ಯಾಧಿಯಕ್ಕುಂ ಬುಧಾ
ನಾನಾ ಜೀವವಿಷಂಗಳನಾನಾ ಧಾತುಪ್ರಯೋಗ ಪೂಗಾದಿ ಫಲಾಪಾನಪ್ರಯೋಗದಿಂದಂನಾನಾ ನಖಕೇಶದಿಂ ರುಜೋತ್ಕಟಮಕ್ಕುಂ
ಬಿಂಬಾಧರೆಯರ್ ಕೆಲಬರ್ನಂಬಿಸಿ ಪುರುಷರ್ಕಳಸುವನಾಗಳೆ ತೆಗೆವರ್ಚುಂಬನದೆಡೆಯೊಳ್ ವಿಷಮಂಕಿಂ ಬಹುನಾ ತೊಡೆದು ಗಡ ಮಹಾಪಾತಕಿಯರ್
ಸ್ಮರತಾಪದೊಳಂ ಮಱುಗುತ್ತಿರವೇೞ್ಕುಮಗಲ್ದೊಡೆಂದು ಭೋಜ್ಯದೊಳೆ ತಳೋದರಿಯರ್ ಕಿಂ ಗಹನಂ ಸ್ತ್ರೀಚರಿತಮೆನಲ್ ಪಲವು ಮರ್ದನಿಕ್ಕುಗುಮದಱಿಂ
ಕೃತ್ರಿಮ ವಿಷವ್ಯಾಪ್ತಲಕ್ಷಣಂ
ಕೋಪಂ ಶ್ವಾಸಂ ಕಾಸಂತಾಪಂ ದಾಹಂ ಕ್ಷಯಂ ಮಹಾಚಿಂತೆ ಮನಸ್ತಾಪಂ ಮಂದಾಗ್ನಿ ವೃಥಾಲಾಪಂಗಳಿದಕ್ಕುಮೆಂಬರಿಳೆಯೊಳಭಿಜ್ಞರ್
ಮನದುದ್ವೇಗಂ ದೃಗ್ಧಂತ ನಖಾಂಘ್ರಿತಳಂಗಳೊಪ್ಪುವಂಗೆಯ್ಗಳ್ ಮುನ್ನಿನ ತೆಱನಲ್ಲದೆ ಮತ್ತೊಂದೆನೆ ಕಂಡಿರಲಱಿವುದದಱಿನಾ ಕೃತ್ರಿಮಮಂ
ವಾಂತಿ ಶಿರೋರೋಗ ಮಹಾಭ್ರಾಂತಿ ತನೂದ್ಭೂತ ರಕ್ತ ಮೂತ್ರಸ್ರಾವಂಸ್ವಾಂತಸ್ತಾಪಂ ಶೋಷಂಕಾಂತಾಜನ ಕೃತ್ರಿಮಂಗಳಿಂ ತಲೆದೋರ್ಕುಂ
ಪಿರಿದುಂ ನೀರೞ್ಕೆಯುಮಾಜ್ವರಮುಂ ಸ್ಫೋಟಕವಿಕಾರಮುಂ ಪುಗುೞುಂ ಮತ್ತಿರೆ ಪಲವುಂ ಬೇನೆಗಳುಂಪರಕೃತ ಚೇಷ್ಟೆಗಳಿವೆಂದು ಭಾವಿಪುದಱಿವಂ
ಊಟದೊಳಂ ಶಯನದೊಳಂಕೂಟದೊಳಂ ಕೋಟಿತೆಱದೊಳಱಗುಲಿವೆಂಡಿರ್ಚೇಟಿಯರಿಕ್ಕುಗುಮದು ತಾಂನಾಟಲ್ ತನುವೞಿಯದುೞಿಯದಿಂತಿದಮೋಘಂ
ಅದು ಮಂತ್ರತಂತ್ರದಿಂ ಪೋಗದೊಡೊಂದೇ ದಿವಸ ಪಕ್ಷ ಮಾಸಾಯನದಿಂದದು ಮೀಱಿದೊಡಂ ವತ್ಸರಮದೆನಲ್ ತನ್ಮನುಜನಂಗದಸುವಂ ತೆಗೆಗುಂ
ಭಾವಿಪುದನಿಂದ್ಯಮೆನಿಸಿದದೇವತೆಯರ ಜಲ ಸುಚಂದನಾಕ್ಷತ ಬಹುಪುಷ್ಪಾವಳಿ ಮೊದಲೆನಿಸುವ ನಾನಾ ವಿಧದರ್ಚನೆಗಳಿಂದೆ ಪೂಜಿಪುದಱಿವಂ
ದಾನ ಮಹಾಪೂಜೆ ಶುಭಧ್ಯಾನಂ ಶುದ್ಧೋಪಯೋಗ ಜಪ ಹೋಮಂ ಸನ್ಮಾನಂ ಮೋನಮಿವೆಲ್ಲಂಮಾನವರಿಷ್ಠಾರ್ಥಸಿದ್ಧಿಯಂ ಜನಿಯಿಸುಗುಂ
ಪ್ರಸ್ತುತದ ಶಾಂತಿಕರ್ಮಂಶಸ್ತಮೆನಲ್ ಮಾೞ್ಪುದೊಸೆದು ವಂದನೆಯುಮನಪ್ರಸ್ತುತಮಂ ನೆನೆಯದೆ ದಿವಿಜಸ್ತುತನಂ ನೆನೆಯೆ ಕೃತ್ರಿಮೋಗ್ರಂ ಕಿಡುಗುಂ
ಮಂತ್ರಂ. ಓಂ ನಮೋ ಭಗವತೇ ಪಾರ್ಶ್ವತೀರ್ಥಂಕರಾಯ ಸಂಸಾರಚಕ್ರಪ್ರಮನಿರ್ದನಾಯ, ದ್ವಾದಶ
ಗಣ ಪಕ್ಷ ಪರಿವೇಷ್ಟಿತಾಯ, ಸಮಸ್ತ ಲಕ್ಷಣ ಸಂಪೂರ್ಣಾಯ, ಅಷ್ಟವಿಧ ಕರ್ಮ ನಿರ್ಮೂಲನಾಯರಿ,
ರು ತುರು ಮೂ (ಷೆ)ತಿ ಗರಿ ತುರು ಕಟುವೇಣಿ ತಿರಿ ಸಿರಿ ಆವೇಶಯ, ಶೀಘ್ರಂ ಘೆ ಬಂಧ
ಪರವಿದ್ಯಾಚ್ಛೇದಿನಿ ಸರ್ವರೋಗವಿನಾಶಿನಿ ಆಮ್ಬ್ರಪ್ರಿಯೆ ಕೂಷ್ಮಾಂಡಿನಿ ರಕ್ತಪ್ರಿಯೆ ಅವತರ,
ಓಂ ಹ್ರಾಂ ಹ್ರೀಂ ಹ್ರೂಂ ಹ್ರೌಂ ಹ್ರಃ ಆಸಿ ಅವು (ಫಟ್) ಸ್ವಾಹಾ
ಮುನಿಮತವಿದಾಮ್ರಕೂಷ್ಮಾಂಡಿನಿಯೊಪ್ಪುವ ಮಂತ್ರಮಿದುವೆ ಸಕಳ ವಿಧಾನಕ್ಕನುವಿಸೆ ಪರವಿದ್ಯಾಚ್ಛೇದನಮಂ ಮಾೞ್ಕುಂ ಪ್ರಶಸ್ತಮೆಲ್ಲೆಲ್ಲೆಡೆಗಂ
ಮಂತ್ರಂ. ಓಂ ನಮೋ ಭಗವತೇ ಚಂಡೋಗ್ರಪಾರ್ಶ್ವನಾಥಾಯ ಸಕಳ ಕ್ಷುದ್ರೋಪದ್ರವ ನಿರ್ಣಾಶನಾಯ
ಓಂ, ಐಂ, (ಶ್ರೀಂ) ಹ್ರೀಂ, ಕ್ಲೀಂ ಕಲಿಕುಂಡ ದಂಡ ಸ್ವಾಮಿನ್ ದೇವದತ್ತ ಕೃತಮಂತ್ರ ತಂತ್ರ ಯಂತ್ರ
ಪರವಿದ್ಯಾಚ್ಛೇದನಂ ಕುರು ಠ ಠ ಠ ಠ ಠ ಠ ಠ ಠ ಠ ಠ ಠ ಓಂ ಶ್ರೀಂ ಪರವಿದ್ಯಾಂ ಛಿಂ (ದಿ)ದ,
ಆತ್ಮವಿದ್ಯಾಂ ರಕ್ಷ, ಕಲಿಕುಂಡ ದಂಡಸ್ವಾಮಿನ್ ನಮಃ ಠ ಠ ಠ, ಶ್ರೀಂ
ಈ ಮಂತ್ರಮನೆಸೆವಾ ಜಿನನಾಮಾಕ್ಷರದೊಡನೆ ಜಪಿಸಲೆಲ್ಲಾ ಕರ್ಮಸ್ತೋಮಪ್ರಯೋಗದಿಂ ತತ್ಸಾಮರ್ಥ್ಯದೊಳಿಕ್ಕುಗುತ್ತಮೆಲ್ಲಂ ಕಿಡುಗುಂ
ಮಂತ್ರಂ. ಓಂ ರಕ್ತಜಟಾ ಓಂ ರಕ್ತಭಾಗೇ ಓಂ ರಕ್ತಡಂಬರಿ ಕಾರ್ಯಾಕಹೈ ಜಯವೇದ ವಿಘ್ನೆನಕರಿ
ಉಲೂಪಿ (ರಲಾಟಿ) ವೇದಘಟೆ ಮಾರವಿಘ್ನಾವೇ ಸಿದ್ಧಿ ಶ್ರೀಗುರುಪಯಾಪಾಣಿ
ಇದು ಯಂತ್ರಂ
ಎಂಬೀ ಮಂತ್ರಮನೋದುತ್ತಂಬುಜಸಖನುದಯದಲ್ಲಿ ಮುಕ್ಕುಡಿತೆಯುಮಂಕೊಂಬುದು ಜಲಮಂ ಮೂಮೆಯದುಂ ಬಾಜಿ (ಚಿ)ಸೆ ಪರರ ವಿದ್ಯೆಯಂ ಛೇದಿಸುಗುಂ
ಮಂತ್ರಂ. ಓಂ ಪರವಿದ್ಯಾಚ್ಛೇದನ ಮಂತ್ರಸ್ಯ, ಸುದರ್ಶನ ಋಷಿಃ, (ಶ್ರೀಮಹಾವಿಷ್ಣುರ್ದೇವತಾ),
(ತೃ) ತ್ರಿಟ್ಟು (ಷ್ಟು)ಪ್ ಛಂದಃ, ಓಂ ಬೀಜಂ, ಸ್ವಾಹಾ ಶಕ್ತಿರಿತಿ ಕೀಲಕಂ, ಪರವಿದ್ಯಾಚ್ಛೇದನಾರ್ಥೇ
(ಜಪೇ) ವಿನಿಯೋಗಃ, ದೈತ್ಯದಾನವವಿಧ್ವಂಸನಾಯ ಸ್ವಾಹಾ ಹೃದಯಾಯ ನಮಃ, ಚೋರಾರಿ
(ಮಾಯಾ) ನಿರ್ಧೂಮಾವರಾರಿ ಶಿರಸೇಸ್ವಾಹಾ ಅತ್ಯಂತ ರೌದ್ರರೂಪಾಯ ಶಿಖಾಯೈ ವೌಷಟ್,
ಕಾಲಮೃತ್ಯು ನಿರ್ನಾಶನಾಯ ಕವಚಾಯ ಹೂಂ ಸಮಸ್ತ ಲೋಕಾನುಗ್ರಹಕಾರಕಾಯ ನೇತ್ರತ್ರಯಾಯ
ವೌಷಟ್, ಹೂಂಫಟ್, ಅಸ್ತ್ರಾಯ ಫಟ್, ಓಂ ಸುದರ್ಶನಾಯ ಸ್ವಾಹಾ,
ದಗ (ಹ) ಸರ್ವಭೂತ ಭಯಂಕರ ರ, ಛಿಂದ, ಭಿಂದ, ಮುಹ, ಭೂತಾನ್ ತ್ರಾಸಯ (ರಿ)
ಪರವಿದ್ಯಾಚ್ಛೇದನಾಯ ಠ- (ಠ) ಹೂಂ ಫಟಾ ಸ್ವಾಹಾ.
ಈ ಮಂತ್ರದಿಂದ ಸಾಸಿರಹೋಮಂ ತತ್ಪ್ರಮಿತದರ್ಘ್ಯಮುಂ ಲಕ್ಷಜಪಂತಾಮಾಗಲ್ ಪರವಿದ್ಯಾನಾಮಚ್ಛೇದನಮಿದಲ್ತೆ ಶತಭೋಜನದಿಂ
ದ್ರಾವಿಡಮಂತ್ರಂ. ಓಂ ನಮೋ ಭಗವತೇ ಪಾರ್ಶ್ವತೀರ್ಥಂಕರಾಯ, ವಜ್ರರೂಪಾಯ ಅರ್ಹದ್ಭಟ್ಟಾರಕಾಯ
ಅಪರಾಜಿತ, ಕಲ್ಲಱ ಇಲ (ಲ್ಕ)ಲ್ಕದ ವಿಳಲ್ಕಳ ಯಕ್ಷಂ ಪೊಲ್ಲೆಱೇಱಿ ಪೊತ್ತಂದೆದಿಪ್ಪವಿಪ್ಪಪ್ಪಾನ್, (ಪ್ರಾಪ್ಟಾನ್)
ತಿರಿ, ತಿಷ, ಪಚ್ಚು (ಪ)ದುಕ್ಕಪ್ಪ) ನಮೋವಾ ಯೆನಿತ್ತು ಪಟ್ಟುನಿಲಲ್ಕೆ ದಕ್ಕ ಕಾಟ್ಟುಚ್ಚವರ್ಣನ್ ಕೈಕೌತಾನ್
ಓರಾನ ತವಳು ವನಪ್ಪ ಱಪ್ಪನಕ್ಕೆ ದಪ್ಪನ ವೆಟ್ಟುವನ ಕುತ್ತವನ ಯಿರಿಯವನ ಪುಗೆವನ ಕಳ್ಳರಂ,
ಪಾಂಬುಂ, ಕಡುವಾವಿಲಂ, ಗುಯಿಷ್ಟನೊಟು ಉಂಱದಾನ್ ಶ್ರೇ (ಸೇ)ಯಸೆವನಂ ಇಡದಾವರಿಟ್ಟನೋಉಂ
ಯೆಡೆಯೂರಾರ್ ಸಿಯಸೆಫಲಂ ಕಲ್ಲದು (ಕಲ್ಕಿಡು)ರೆಯಿದು ಪೆಣಮಿದ (ಡು) ತೆರೆದು ಯೆಲುಂ
ಬಿಡುವರಪುದು (ಡು), ಚಿಂರತನೆ ಮುದಲೊನ ಕಿನ್ನರ ಕಿಂಪುರುಷ ಗರುಡ ಗಂಧರ್ವ ಯಕ್ಷ ರಾಕ್ಷಸಂಗಳಕ್ಕುಂ
ತೊಟ್ಟೆ (ಕುಟ್ಟಿನ್) ನಾ (ಕಾ) ಪು ಇಟ್ಟು ಸಿ (ನಿ)ಱುಪೊ (ಪು)ಗಾರವೆ ಪೊಗುದಾರಾದಡೇವರುನಿ
ನಿ (ವಿ)ಟ್ಟಜನಿಱದೆಱುಗೆ ನಿರದೆ ನಿರದೆಱುಗೆ ಬೊಲ್ಲದೆಱುಗೆ ಪುರುಳಾದೆಱುಗೆ, ಓಂ ಹ್ರೀಂ, ಶ್ರೀಂ,
(ಅರ್ರಂ) ಠಂ, ಠಂ, ಅಱಿಸಿ (ಪಿ) ಕುಳಱಱವಾಶಿ (ಲಿ)ಕ್ಕ ಸ್ವಾಹಾ-ಈ ಮಂತ್ರ 1200 ಬಾರಿ.
ಕುಶಲಾರ್ಥಂ ಜಿನಪಾರ್ಶ್ವನಾಥನ ಪದಾಬ್ಜದ್ವಂದ್ವದೊಳ್ ಭಕ್ತಿಯಿಂದ್ವಿಶತಾಧಿಕೃಸಹಸ್ರಮಂ ಪ್ರಸವಮಂ ಪೇೞ್ದಿಕ್ಯಲೀ ಮಂತ್ರಮಂವಿಶದಂ ಸಿದ್ಧಿಯೆನಿಕ್ಕುಮಂತದಱಿನೆಲ್ಲಾ ಕರ್ಮದೊಳ್ ಕೂಡೆ ಲಕ್ಷ ಶತೋಗ್ರೋಗ್ರತರಂಗಳಪ್ಪಪರವಿದ್ಯಾಚ್ಛೇದಮಂ ಮಾಡುಗುಂ
ಅಣಿಲೆಯ ಕಾಯೈದಂ ತಾಂಗಣಜಿಲೆಯಂ ಬಿಳಿದೆನಿಪ್ಪುದಂ ಬೆರಸಿರೆಚಿಕ್ಕಣಿಕೆಯಡಕೆಯನು ತಿನಲಾಕ್ಷಣಮಾಮಾಂತ್ಯಪ್ರವೃತಿಯಕ್ಕುಂ ಬೞಿಯಂ
ಅಚ್ಚತಿಲದೆಣ್ಣೆಯೊಳ್ ನೀಂಬೆಚ್ಚದವೋಲ್ ಬರೆದು ಯಂತ್ರಮಂ ಮೂಮೆಯದಂಬೆಚ್ಚರದಿಂ ಮಂತ್ರಿಸಿ ಕೊಂಡೊಚ್ಚತದಿಂ ಪೀರ್ದು ಬೞಿಯುಮಂತೆಳನೀರೊಳ್
ಬೆರಸುಗೆ ಜಂಬೀರದ ಫಲವೆರಡರ ರಸಮಂ ಸಮಂತ್ರಕಂ ಕುಡಿಸೆ ಖಳರ್ಬೆರಸಿಕ್ಕಿದ ಕೆಯ್ಮಸಕಂಪರಿಪಡುಗುಂ ಪಸಿಯ ಗರ್ದುಗಿನಂತದು ಬೀೞ್ಗುಂ
ಮಂತ್ರಂ. ಓಂ ಚೌ (ತಾ)ದರ್ಯ ಬೈರದಿಯಾ ಬಿಂದು ಪಾಯಾ (ಪುಡಿಯಾ) ಪುಡಿಜಕ್ಕು (ಲಾಪುದಿ)
ಅಸುನಿ (ಣಿ)ಯಾ ರಕಿತತ್ವನಿ ಮೋಹಿನೀತಕ್ವನಿ ಪಾಂಚುದಿವೆ ಪೆರಾಯ ಸಮುದ್ರಪ್ರಣಿ ಆಣಿ ಬಾಲೋ
ಕೌಡಿಯಾ ಗದ ಗಡುಗ ಜ (ಗ)ಂತುಮ (ಮಾ) ಗರಿರೆಮಾಸ ಚರುದಿ ಇಂದ್ರಚೋರಬರುಟಿ ಮಿಯಾಕಿಯಾ
ರೇವಂತು ದೊಳಯಾ ಪಡಿಲೆಯಾ ಅಕಕೂರಾ ಕಂತುರ ಕುತೋಕಿಣಿಗಾವ (ವಾ)ರಾಸಿರ ಕುಕೊ (ಲೋ)ಕಿಣಿ,
ಗಾವಾ ದಾ (ರಾ)ಸಿರ ಕುತೋಕಿಣಿ, ಬಜಾ ಗೊದಿಟ್ಟಾ ಬಾಂ (ದ) ಬವಮೊಟಿ ಆಜುಗುರುರಾ ಗ (ಸಿ)ಜಸಿದ್ಧಿ
ಗರುಡಸಿಲ್ಲಟ (ವೊ)ಕ್ಕುಲೆ ನಾಯಂದೆ ಪಕ್ಕಾಲೆ ತಾರೆ ಸದು (ಮ)ಗು (ಂ) ರುಂಚಸಿದ್ಧಿ, ಹನುಮಂತ ವೀರಗೆ
ವಿದ್ಯಾಧರಾ ಆಶ್ವಿನ ಹರಿಣಿ ವಿರಬೞಿಯ ಕೊಡಿರಗಂ ಬಿಳಗಟ್ಟು ಬೆಟ್ಟತುಮೆ ಸೂರಿ ಚಿ (ತ್ರಿಭುವನಿದುಕು
ನಿವಾಸಂ ಚನಿನಾಉದೆಸು ಹನುಮಂತವೀರಹಾಹೆ ರುಷಲಿ (ರಿ)ಯಾ ದೂರಾಕಿಳಾ ಸಾಸಿರ ತೊಡೆಬಾರ
ಸಂಕರ ತೊಡೆ ವತಿಳಾತೊಡೆ ನಾಗಕಾಳಿಂಗರಿ ನಾ (ರೊ) ಉದೆ ಸುತೆ ಪೋರಾಸಿ ಅವಶ್ಯ ಮೋಹಿನಿ
ಶ್ರೀಗುರುಪ್ರಸಾದ-
ವ. ಈ ಮಂತ್ರ (ದಿ)ಂಗಳಂ ಮೂಱುಸೂೞೆಣ್ಣೆಯಂ ಮಂತ್ರಿಸಿ ಕುಡೆ ಕೆಯ್ಮಸಕಂ ಮಾಣ್ಗುಂ ಸಾವೆ
ಓಗರ, ಆಕಳ ಮಜ್ಜಿಗೆ ಪಥ್ಯ – ಹೀಗೆ ಮೂಱು ದಿನಂ ಮಾಡುವುದು ಬೞಿಯಂ
ಮಡುವಾಗಲ್ ಗಣಜಿಲೆಗಳಕಡಸಿಗೆ ಘನನಾದಿವುಲಿಗನೆಲೆ ಮೂಕೊಱತಿಯಗಿಡುವಿನ ಪತ್ರಂಗಳಿವಂಕುಡಿಸುಗೆ ಕೆಯ್ಮಸಕದಂಗೆ ನಿಂಬೆಯ ಪುಳಿಯಿಂ
ವ. ಅದಱಿಂದೆ ಕೆಯ್ಮಸಕಂ ಕಿಡುಗುಂ, ಅಂತುಮಲ್ಲದೆಯುಂ
ಉದಕವನೆ ತೀವಿ ಮೃದ್ಭಾಂಡದೊಳೊಂದಿರುಳಿರೆ ಬೞಿಕ್ಕೆ ರೋಗಿಯ ಕೈಯಿಟ್ಟುದಯದೊಳದಱೊಳ್ ಮಂತ್ರಿಸುವುದು ಶರದಂಡದೊಳೆ ಸುರಗಿಯಂ ತಚ್ಛಿರಮಂ
ವ. ಇೞಿಯೆ ಮಂತ್ರಿಸುವುದು
ಮಂತ್ರಂ. -ಓಂ ನಮೋ ಭಗವತೇ ರುದ್ರಾಯ ರಕ್ತ ಶಂಬರಾಯ ಖುಖುಂದನ ಕರ್ಣರುದ್ರಶತೇನ
ಸರವಿಷ, ಪ್ರವಿಷ ಅಕ್ರಮಮರ ಭಂಜನಾಶಯ ಧರಾಂ ವಿಷಜಾಯ ಭೂಮ್ಯಾಂಗಚ್ಛ ಹಿಂ ಪ್ರವಿಶತು ಸ್ವಾಹಾ
ವ. ಸುಪ್ರತಿಷ್ಠಾನಾಜ್ಞಾಮಂತ್ರಂ. ದೃಷ್ಟಪ್ರತ್ಯಯಂ ಸಾಧ್ಯಮಸ್ತಕಮಂ ಮುಟ್ಟಿ ಇೞಿಯೆ ಮಂತ್ರಿಸುವುದು
ಯುಕ್ತಮೆನೆ ಹಸ್ತಮಂ ಪೂರ್ವೋಕ್ತ ಜಲಾಂತಸ್ಥಮಾಗೆ ಮಂತ್ರಿಸಿ ಮೂಮೆ ಸದುಕ್ತಂ ಜಲಭಾಂಡದೊಳಂವ್ಯಕ್ತಂ ವಿಷಮಿೞಿದು ತೋರ್ಕುಮೇಂ ಪ್ರತ್ಯಕ್ಷಂ
ತನ್ಮಂತ್ರಂ- ಓಂ ಆದ್ಯಗರಂ (ಸಾನ್ಯ) ಮದ್ಯಗರಂ (ಧಾನ್ಯ) ಜಲಗರಂ, ಲೋಹ ಚೂರ್ಣಜಲಜಗರಂ,
ಶಂಖಚೂರ್ಣಗರಂ, (ಶಂಕಾಗರಂ, ಆಜ್ವರಗರಂ, ವಿಷಗರಂ, ಆಸಾದಾತ್ಯಗರಂ) ಪರಶಂಕಾಗರಂ,
ಮಂಡೂಕಚೂರ್ಣಗರಂ, ಗೋನಸ ಚೂರ್ಣಗರಂ, (ವೃಶ್ಚಿಕಚೂರ್ಣಗರಂ) ಅಸ್ಥಿಗತಗರಂ,
ಸ್ನುಹಿಕ್ಷೀರಗರಂ, ಹಾಸ್ಯಗರಂ, ಪರಹಾಸ್ಯಗರಂ, (ಹಾ) ಹಾಸ್ಯಗರಂ, ಅ (ಅ)ಸಸು (ರಾದಿ) ದಾತ್ಯಗರಂ,
ಶಂಕಾಗರಂ ಅಜ್ಜರಗರಂ (ಅಧ್ವಗರಂ) ವಿಜ್ಜರಗರಂ, ಪಾನೀಯಫೇನ (ಗರಂ) ಆಜ್ವ (ಕ್ಷ) ರಚಿಗರಂ, ಮೇರು (ಗರಂ)
ಚ್ಛಾಯಗರಂ, ಸಂಧ್ಯಾಕಾಲೇ ಅ ಹರಾ (ಗ, ಗರಂ, ಎಂಬನೇಕ ಗರಂ ಕಲ್ಲಟ್ಟಾಮೀರವಾಲಗರಂ,
ಕಡ್ಡಾಮಿಮ್ಚಗರಂ (ಕಡ್ಡಾಮಿ ಫಾಲಗರಂ) ಕಡ್ಡಾಮಿ ಮಾಂಸ ಗರಂ) ಕಡ್ಡಾಮಿ ಶ್ರೋತ್ರಗರಂ, ಕಡ್ಡಾಮಿ
ಸ್ಕಂಧಗರಂ ಕಡ್ಡಾಮಿ ವೇತ್ರಗರಂ ಕಡ್ಡಾಮಿ ನೇತ್ರಗರಂ ಕಡ್ಡಾಮಿ ನಾಸಿಕಾಗರಂ ಕಡ್ಡಾಮಿ ಅಷ್ಟಾಗರಂ,
ಕಡ್ಡಾಮಿ ಜಿಹ್ವಾಗರಂ, ಕಡ್ಡಾಮಿ ಗ್ರಾವಾಗರಂ, ಕಡ್ಡಾಮಿ ಬಾಹುಗರಂ ಕಡ್ಡಾಮಿ ಹಸ್ತಗರಂ, ಕಡ್ಡಾಮಿ
ನಕ್ಷಾಗರಂ, ಕಡ್ಡಾಮಿ ಪಕ್ಷಿ ಗರಂ, ಕಡ್ಡಾಮಿ ಹ್ರದಹಿತಗರಂ, ಕಡ್ಡಾಮಿ ಭಿಧಾನಾಭಿಗರಂ? ಕಡ್ಡಾಮಿ
ಲಿಂಗಗರಂ ಕಡ್ಡಾಮಿ ಊರುಗರಂ, ಕಡ್ಡಾಮಿ ಕೊಟ್ಟಗರಂ, ಕಡ್ಡಾಮಿ ಪಾದಗರಂ, ಕಡ್ಡಾಮಿ ಸರ್ವಾಂ (ಗ)ಗರಂ,
ಕಡ್ಡಾಮಿ ಅಸ್ಥಿಗರಂ, ಕಡ್ಡಾಮಿ ಶುಕ್ಲಗರಂ, ಕಡ್ಡಾಮಿ ಜೀವಗತಂಗರಂ, ಕಡ್ಡಾಮಿ, ವಿಡ್ಡಾಮಿ ಹೂಂ ಫಟ್.
ಓಂ ನಮೋ ನಮಸ್ತೆ ಅಮೃತಕಳೆ (ಸಕಳೆ) ಶೀತ (ಕ)ಳೆಯಿಂದುಲೇಖೆ ಅಷ್ಟಾಟ್ಟಹಾಸ ಶಬ್ದೇನ ಗರಂ
ನಾಶಯ, ಭಂಜ, ಲೊಡ, ಕಿದ, ಹ, ಪ್ರಸ್ವಂದ, (ಪ್ರಚ್ಛಂದಯ) ಸರ್ವ ರೋಗಾತುರೇಷು, ಕುರು,
ಮಾರ ವಲ್ಪ, ಹುದು, ಆವೇಶಯ, ಸಪ (ವ)ಣಾಗಚ್ಞಾಪಯತಿ. ಹ್ರೀಂ, ಖ್ರೂಂ, ಖ್ವ (ಖಂ), ಖ್ಖು,
(ಖಂಡನ)ಹೂಂಫಟ್ ಸ್ವಾಹಾ – ಇತಿ ಸಿದ್ಧಮಂತ್ರತ್ರಯಂ ಏಕೇನ ವಾ ತ್ರಿಭಿರ್ವಾ ಮಾರ್ಜಯೇತ್
ಪ್ರತ್ಯಕ್ಷಜಲಭಾಂಡ ಮಧ್ಯೇ ವಿಷಮಾಯಾತಿ ಇಂತಿದು ದೃಷ್ಟಪ್ರತ್ಯಯಂ, ಸರ್ವ ಕೃತ್ರಿಮಹರಂ-
ವಮನಪ್ರವೃತ್ತಿಯುಪವಾಸಮೆ ಮುಖ್ಯಮೆನಿಕ್ಕುಮೆಲ್ಲಾ ವಿಷದೋಷಮನಱಿಗುಮಿದೆಯವರ್ಕಂಕ್ರಮದಿಂ ಮಾೞ್ಪುದು ಬೞಿಕ್ಕೆ ತಕ್ಕೌಷಧಿಯಂ
ಜಿತ ಚಿರ ಶುದ್ಧ ಸೂತಮತಿಶುದ್ಧಮೆನಿಪ್ಪ ಸುವರ್ಣಮಾಕ್ಷಿಕಂಮೃತ ಕಳಧೌತಮಿಂತಿವಱ ಮೂಱಱ ಸಾಮ್ಯದ ಗಂಧಕಂ ಸುಸಂಗತಮೆನೆ ಕನ್ಯಕಾದ್ರವದೊಳೊಪ್ಪಿರೆ ಮರ್ದಿಸಿ ಮಾಷಮಾತ್ರಮಂಸಿತ ಮಧುಯುಕ್ತ ಲೇಹ್ಯಮದು ಭಂಗಿಸುಗುಂ ವಿಷಮಂ ಬುಧೋತ್ತಮಾ
ವ. ಅದರ್ಕೆ ಅನುಪಾನಂ
ಪಾವಕನೊಳ್ಮೂಲದ ರಸಭಾವಿತವಕ್ಷೀರ ಸಿತಯುತಂ ಕುಡಿಯಲೊಡಂತೀವಿದ ಗರಮಂ ಕಳೆಗುಂಭೂವಳಯದೊಳದುವೆ ಮಂಗರಾಜನ ಮತದಿಂ
ಪಾಲುಂ ಶರ್ಕರೆಯುಂ ವರಶಾಲೀಯಾನ್ನಂಗಳಿಂತಿವೇಂ ಪಥ್ಯಕರಂಸಾಲದೆ ಕೃತ್ರಿಮ ವಿಷನಿರ್ಮೂಲನಮಂ ಮಾೞ್ಕುಮೆಂದಪಂ ಬುಧ ಮಂಗಂ
ಬೆರಸುವುದು ಪುತ್ರಜೀವಿಯತಿರುಳೊಂದಂ ನಿಷ್ಕಮಾತ್ರಮಂ ಪಾಲೊಳದಂಭರದಿಂದೀಂಟಿಸೆ ನಾನಾಗರಳಂಗಳನೞಿಗುಮೆಂದನುಭಯಕವೀಶಂ
ಕೆಯ್ಮಸಕಕ್ಕೆ
ಪಂಬಲಿಸದೆ ಪಲವಂ ತಾಂನಿಂಬದಳಂ ವೃಷಭಮಾ ಪಟೋಲಂ ಪ್ರತ್ಯೇಕಂ ಬೆರಸೊಪ್ಪಲ್ ಮಾಗಧದಂಬುವಿನಿಂದಷ್ಟಗುಣಮದರ್ಕೆಂಬಿವಱಿಂ
ಮಱುಗಿಸಿ ಪದಾವಶೇಷದೊಳಱಿವುದು ಗೋಘೃತಮನದಱ ಸರಿಯಂ ಮತ್ತಂಮೆಱೆವಣಿಲೆಯ ಚೂರ್ಣಮನಿಟ್ಟುಱುವ ತದರ್ಧಮನೆ ಕಾಸುವುದು ಘೃತಮುೞಿಯಲ್
ಅದು ಕಳೆಗುಂ ಪಾತಕರಿಕ್ಕಿದ ವಿಷಮಂ ತುಪ್ಪಮಂತದಂ ಭಕ್ಷಿಸೆ ಸಾಲದೆ ಪಲವಱೊಳೇಂ ಫಲಮೆಂದು ಧೀವರಂ ಪೇೞ್ದನಲ್ತೆ ಮಂಗಕವೀಶಂ
ಸಮಮಾಗಲ್ ಗೃಹಧೂಮದೊಳ್ ಜಲಯುತಂ ತತ್ತಂಡುಲೀಮೂಲಮಂಕ್ರಮದಿಂದಿಟ್ಟರೆ ತಚ್ಚತುರ್ಗುಣ ಘೃತಕ್ಷೀರಾಜ್ಯದಿಂ ಕಾಸೆ ತತ್ಪ್ರಮಿತಂ ತುಪ್ಪದನಿತ್ತದಾಗಲದನೀಂಟಲ್ ಕ್ರೂರ ನಾರೀಜನಂಭ್ರಮೆಗೆಂದಿಕ್ಕಿದನೇಕ ಭೇದದ ವಿಷಂ ತೀರ್ಗುಂ ಬುಧಾಳಿಪ್ರಿಯಾ
ಏಲಾತ್ರ್ಯೂಷಣ ಜೀರಕತಾಲೀಸದಳಾಹ್ವಮೆಂಬಿನಂ ಚೂರ್ಣಿಸಿ ಸಲ್ಲೀಲೆಯೊಳಿಮ್ಮಡಿ ಸಿತದೆ ನಿರಾಲಸ್ಯಂ ಮೆಲುವುದಖಿಳ ವಿಷಹರಮಕ್ಕುಂ
ಇನವಾರದಂದು ತಪ್ಪದುಜಿನಿಜಿನಿಯಂ ಹಸ್ತಿಕರ್ಣಿಯಂ ತೊಳಸುಗೆ ನೀಂ ಪಿಟ್ಟಿನೊಳಿಡಿದು ತುಪ್ಪದಿಂದಂತಿನೆ ಕೃತ್ರಿಮ ವಿಷಮನಂತದೞಿಗುಮವಶ್ಯಂ
ಚುಂಚಿನ ಕಟ್ಟವತ್ತಿಗೆಯ ಬಿತ್ತುಗಳಂ ಪುಡಿಮಾಡಿ ಮತ್ತದಂಸಂಚಿತಮಪ್ಪವೋಲ್ ನವಣೆಯಕ್ಕಿಯೊಳೆಮ್ಮೆಯ ತಕ್ರದಿಂದದಂನೀಂ ಚರಿತಾರ್ಥಮಂತಡುವುದಂಬಲಿಯಿಂ ಬೆರಸುಂಬುದಾಧಿಕಂಚುಂಚಿದೆನಿಪ್ಪ ತುಪ್ಪಮನೆ ವಾಂತಿಕರಂ ಹಿತಕೃದ್ಗರಾಪಹಂ
ಅಮೃತಲತೆ ಮಾದಳಫಳಂಕಮನೀಯಮೆನಿಪ್ಪ ಶುಂಠಿ ಸೈಂಧವಸಹಿತಂಅಮರ್ದಿರೆ ಭಕ್ಷಿಸೆಯುಂ ಕೃತ್ರಿಮವಿಷಹರಮಕ್ಕುಮೆಂದನಮಳಚರಿತ್ರಂ
ಮಡುವಾಗಲಬೇರಿನೊಳರೆಕೊಡ ನೀರಿನೊಳಗರೆದು ವಟಕಂಗಳನನುವಾದೊಡೆ ತಿನಲಾಗೊಂದೊಂದಂತಡೆಯದೆ ಕೆಯ್ಮಸಕ ಕಿಡುಗು ದಿವಸಕ್ರಮದಿಂ
ಘೃತಮಂ ಲೊಕ್ಕಿಯ ರಸಸಂಯುತಮೆನೆ ಸೇವಿಸಲದೞಿಗುಮಹಿತಸ್ತ್ರೀನಿರ್ಮಿತಮೆನಿಸಿದ ಕೆಯ್ಮಸಕಂನುತ ಮುಗುಳಿಯಧೀಶ ಮಂಗರಾಜನ ಮತದಿಂ
ಶಂಕಿಸದೆ ಕುಡುವುದೊಪ್ಪದೊಳಂಕೋಲೆಯ ಮೊಳಗಿನೆಸೆವ ಕೋರಕಮಂ ತಾಂಬಿಂಕದೊಳಬಲಾಕೃತಕಾತಂಕಂ ಕೆಯ್ಮಸಕಮೞಿಗುಮೆಂಬರಭಿಜ್ಞರ್
ತುಱುವೆಯ ಕಾಯ್ಗಳುಮಂ ಮಂಗುಱುವಳ್ಳಿಯನಿಡಿದ ಚೂರ್ಣಮಂ ಶರ್ಕರೆಯಿಂನೆಱೆ ತಿಂದು ಬಿಸಿಯನೀರಂಕಿಱಿದುಗೊಳಲ್ಕೞಿಯದುೞಿಗುಮೇ ಕೆಯ್ಮಸಕಂ
ವ. ಇದಂ ಐದು ದಿನಂ ಕೊಂಬುದು
ವಿನುತ ಕುಬೇರಾಕ್ಷಿಯ ದಳಮನೆ ಪಿಂಡಿದ ರಸದೊಳಿಟ್ಟು ಕಡಲೆಗಳಂ ತಾಂನೆನೆಯಿಕ್ಕಿ ಪುರಿದು ಮೆಲೆ ದಶದಿನದೊಳೆ ಕೆಯ್ಮಸಕಮೆಯ್ದೆ ಕಿಡುಗುಮಮೋಘಂ
ಗರುಗದ ರಸಮಮೃತಲತೋತ್ಕರ ರಸಮೊಪ್ಪುವ ಘೃತಂ ಸಮಾನದೊಳಿರೆ ಶರ್ಕರೆವೆರಸಿ ಕುಡಿಯಲ್ಕಾ ಸ್ತ್ರೀಚರಿತದ ಕೆಯ್ಮಸಕಮೞಿಗುಮೆಂಬುದಮೋಘಂ
ಎಡೆಯಕ್ಕರ. ಉತ್ತರಣೆಯೆಸೆವ ಬಿತ್ತಂ ಕೞಿಯೊಳೀಂಟಲ್ಮತ್ತೆ ಪೆಱತೇಂ ವಮನಮಕ್ಕುಮದು ಬೞಿಯಂಪತ್ತು ದಿನಮಂಗುರುವನಜದುಗ್ಧದಿಂದಂಯೆತ್ತಿ ಕುಡಿಸಲ್ ಪರೆಗುಮಲ್ತೆ ಕೆಯ್ಮಸಕಂ
ಹಿತ ಕೃನ್ಮಯೂರಶಿಖೆಯಂಕತಕದ ಬಿತ್ತುಗಳನೀಂಟುಗಾಡಿನ ಪಾಲಿಂಕ್ಷಿತಿಯೊಳ್ ಮೂಕೊಱತಿಯನೆಚ್ಚತಿಶಯದಿಂ ಕಣ್ಗೆ ಕೃತಕ ವಿಷಮದು ಕಿಡುಗುಂ
ಬಾದೇಂ ಮಯೂರಶಿಖಿಯಂಪಾದರಿಯಂ ಜನಿಸಿದುತ್ತರಾಸೆಯ ಬೇರಂಭೇದಿಸಿ ಪಾಲಿಂದೀಂಟಲ್ಕಾದರದಿಂ ಕೃತ್ರಿಮೋಗ್ರ ವಿಷಮಿರದೞಿಗುಂ
ಅರೆದೀಂಟು ಕೆಂಪಿನಗಸೆಯವರಮೂಲಮನೆಸೆವ ದುಗ್ಧದಿಂ ಪಾತಕಿಯರ್ಬೆರಸಿಕ್ಕಿದ ವಿಷಮೞಿಗುಂನಿರುಪಮಗುಣಿ ಮಂಗರಾಜನನುತಮತದಿಂದಂ
ಅಂಚಿತವಂ ಶ್ವೇತಾರ್ಕನಪಂಚಾಂಗಮನೆಸೆವ ತುಪ್ಪದಿಂ ಶರ್ಕರೆಯಿಂಸಂಚಿಸದೆ ಕುಡಿಸೆ ಕಿಡುಗುಂಪಂಚತಮನೀವ ಕುಲಟೆಯರ ಕೆಯ್ಮಸಕಂ
ಪೆರ್ಗುರುಟಿಗೆಗಳ ಬೇರಂತಗ್ಗಳದಿಂ ಬೆಳೆದ ಬಿಳಿಯ ಗುಳ್ಳದ ಬೇರಂ[ಕೊಗ್ಗಿ]ಲಳೆಯಂಬಲಿಯನಟ್ಟೆಗ್ಗಿಲ್ಲದುಣಲ್ಕೆ ಕೃತಕವಿಷಮಿರದೞಿಗುಂ
ಅಂಕೊಲೆಯ ಮೂಲಮಂ ನಿಶ್ಯಂಕತೆಯಿಂ ಕುಡಿವುದೊಪ್ಪುವಾಡಿನ ಪಾಲಿಂಭೋಂಕನೆ ವಾಂತಿಯದಕ್ಕುಂಸೋಂಕಿದರಂ ತಿನ್ಬ ಖಳೆಯ ಕೃತ್ರಿಮಮೞಿಗುಂ
ಭಾನುದಿನದಲ್ಲಿ ನಯದಿಂಮೌನದೊಳಂ ತಿಂಗೆ ಕಿಱಿಯ ಕಡಸಿಗೆಯದಱೊಳ್ಮಾನಿತ ಪರ್ಣಮನಾಗಳ್ಮಾನಿನಿಯರ ಕುಬುದ್ಧಿ ಜನಿತ ವಿಷಮಿರದೞಿಗುಂ
ಸಂಚಿಸಿ ತೊಱೆದವನಂಗಳಪಂಚಾಂಗಮನರೆದು ಕುಡಿಯೆಯುಂ ಮೇಣ್ ಜಂಭೀರಾಂಚಿತ ಬೀಜಂ ಪುಳಿ ಸಹಿತಂ ಚರಿಸಲ್ ಫಲಮನುೞಿಗುಮೇ ಕೆಯ್ಮಸಕಂ
ಮೂಕೊಱತಿಯ ರಸಮೊಂದಂಪ್ರಾಕೃತ ಶರ್ಕರೆಯೊಳಿಕ್ಕಿ ಕುಡಿಸಲ್ ಕಳೆಗುಂಶಾಕಿನಿಯರ್ ಬೆರಸಿಕ್ಕಿ ವಶೀಕರಿಸಿದ ಮರ್ದುಗಳುಮದುಂ ಪ್ರಶಮಿಸುಗುಂ
ಗುಳ್ಳದ ಮರವಸಲಂಗುರ[ದೊಳ್ಳೆ]ಯ ಬೇರ್ಗಳನೆ ತಂದು ಬೆನ್ನೀರಿಂದಂಉಳ್ಳುದನೆ ಕುಡಿಯಲದಱಿಂಕಳ್ಳೆಯರಿಂ ಪುಟ್ಟಿದಿಕ್ಕುಗುತ್ತಂ ಕಿಡುಗುಂ
ಉಲಿಗನ ಸೊಪ್ಪಿ ರಸದೊಳ್ತಿಲತೈಲಮನೊಂದುಗೂಡಿ ಕುಡಿಸಲ್ ಕಿಡುಗುಂಖಳ ಮಾಯಾವಿಗಳೆನಿಸಿದಲಲನೆಯರಿಕ್ಕಿದ ಮಹಾಮಯಂ ಗುಣನಿಲಯಾ
ಮೆಲುವುದು ಹುಳ್ಳಿಯ ವಿಲಸದ್ದಲಮಂ ಜಂಭೀರಫಲರಸಂಗೂಡಿ ಕೊಳಲ್ಕುಲಟೆಯರಾ ಪಾತಕಿಯರ್ಮೆಲಿಸಿದ ಭೋಜ್ಯದ ಮದಂಗಳದಱಿಂ ಕಿಡುಗುಂ
ಘನನಾದಿ ಪುನರ್ನವಿಯುಲಿಗನ ಬೇರ್ಗಳನೆಲೆಗಳಂ ಸಜಂಭೀರರಸಂತಿನಲದಱಿಂ ಪುಂಶ್ಚಳಿಯರ್ಕುನಯಗಳಿಂ ಸಮೆದ ಕೃತ್ರಿಮಂಗಳ್ ಕಿಡುಗುಂ
ರಾಗದೊಳಂ ಬೆರಸುಗೆ ಗಿಣಿಮೂಗನಗೆಡ್ಡೆಯನೆ ಬೆಣ್ಣೆಯೊಳ್ ತಿಂಬುದದಂಮೇಗಱಿಯದಬಳೆಯರ್ ಗತರಾಗಿಗಳಾಗಿಸಿದ ಕೃತ್ರಿಮಂಗಳ್ ಕಿಡುಗುಂ
ಮೆಲ್ಲಿದರಂತೆ ಬಂದು ಕರೆಯಲ್ ಖಳರುಣ್ಬೊಡೆ ಪೋಪೊಡಂತೆ ಕಾೞ್ಮೊಲ್ಲೆಯ ಬೀಜರಾಜಿಗಳ ನುಂಗುವುದುಣ್ಬುದು ಮೇಗೆಯಂತದಂನಿಲ್ಲದೆ ವಾಂತಿಯಕ್ಕುಮದಱಿಂದವರಿಕ್ಕಿದ ಕೃತ್ರಿಮೋತ್ಕರಂಪೊಲ್ಲಮೆಗೆಯ್ಯಲಾಱದಿದು ಮಂಗಬುಧಾಂಬುಜಭಾನುಭಾಷಿತಂ
ಕರ್ಪುರದೊಂಡೆಯ ಕನಕದವೊಪ್ಪುವ ಕೊಳುಗುಳಿಕೆಯೆಲೆಹುರಿಯ ತನಿರಸಮಂತಪ್ಪದೆ ಮರ್ದಿಸಿ ತನುವಿಂಗಪ್ಪಣೆಯಾದಂತೆ ಕೊಳಲಖಿಳ ಕೃತ್ರಿಮಮೞಿಗುಂ
ತೊಂಡಿನ ತೊೞ್ತಿರ್ ಪಾಪದಪಿಂಡಮೆನಿಪ್ಪಂಗನಾಜನಂ ಬೆರಸಲ್ ತಾಂಮುಂಡವಿಷಂ ಸಂಹರಿಕುಂತೊಂಡೆಯ ರಸಮಂ ಶರೀರದೊಳ್ ಮರ್ದಿಸಲುಂ
ಭಂಡೆಯರಂಡ ಖಂಡ ರುಧಿರಾದಿಗಳಂ ಬೆರಸಿಕ್ಕೆ ಭೋಜ್ಯದೊಳ್ಕೊಂಡಿರದಾಗಳಂತೆ ತಲೆಗೇಱಿದೊಡಂ ಮರುಳಾದವಂಗೆ ಮುಂಕೊಂಡರೆದೆಚ್ಚಿ ನೀಲಿಯ ರಸಂಗಳನೊತ್ತುವುದಂತೆ ನೆತ್ತಿಯೊಳ್ಕೊಂಡದರುಳ್ಳ ಮೂಲಮನೆ ನೀರೊಳಮೀಂಟಿಸೆ ತದ್ವಿಷಾಪಹಂ
ಬನ್ನಿಯ ಮೂಲಮಂ ಭರದೊಳರ್ಚಿಸಿ ಮೌನದೆ ಸಿದ್ಧಯೋಗದೊಳ್ಸನ್ನಿಧಿಯುತ್ತರಾಸೆಯ ತದೀಯ ಸುಕೋಮಳಮಪ್ಪ ಮೂಲಮಂಸನ್ನುತಮಪ್ಪ ಯಂತ್ರಮನಿದಂ ಬರೆದಿಂತಿದಱಿಂದೆ ರಕ್ಷೆಯಂನನ್ನಿಯೆನಲ್ಕೆ ಕಟ್ಟಿ ನಯಯೋಗದೊಳರ್ಚಿಸಿ ಭಾವಸಿದ್ಧಿಯಿಂ
ರಕ್ಷೆ:
ಶುದ್ಧಾಂತರಂಗನಾಗಿಯೆಸಿದ್ಧದಿನಂ ತಂದು ಕಾಡಮೊಲ್ಲೆಯ ಬೇರಂಬದ್ಧಮೆನೆ ಸಮೆದ ರಕ್ಷೆಯಸಿದ್ಧಂ ಕೆಯ್ಮಸಕದಂಗೆ ಹಿತಮಂ ಮಾೞ್ಕುಂ
ದುಷ್ಟ ದುರಿತಾರಿಯಂ ಹರಿವಿಷ್ಟರನಂ ಯಂತ್ರಮಧ್ಯದೊಳ್ ಸ್ಥಾಪಿಸುತುಂಅಷ್ಟೋತ್ತರ ಶತಸಮಮಂಸ್ಪಷ್ಟಮೆನಲ್ಕಿಕ್ಕು ತತ್ಪದಾಂಬುಜಯುಗದೊಳ್
ಯಂತ್ರ
ಕ್ರೋಂ ಕ್ರೋಂ ಕ್ರೋಂ ಯಂತ್ರಾಧಿಪತಿಗೆ ಪುಷ್ಪವನಿಕ್ಕುವ ಮಂತ್ರಂ.
ಕ್ರೋಂ ದೇ ಕ್ರೋಂ ಓಂ ಆಂ ಕ್ರೋಂ ಎಂದರ್ಚಿಸಿ ರಕ್ಷೆಯಿಂ ಕಟ್ಟಲಾ
ಗ್ರೋಂ ಗ್ರೋಂ ಗ್ರೋಂ ದರಹಿತ ಬುದ್ಧಿಯಿಂ ಮಾಡಿದ ಕುಟಿಲಂಗಳ್
(ಕ್ರೋಂ) (ಕ್ರೋಂ) (ಕ್ರೋಂ) ಕಿಡುಗುಂ
ಮನುಜರ ಕೃತ್ರಿಮದಿಂದಂದನಿಯೊಡೆಯಲ್ ತುಪ್ಪದೊಡನೆ ಗುಳ್ಳದ ಬಿತ್ತಂತಿನಲದಱಿಂದಾತಂ ಪಿಕನಿನಾದನೆನಿಕುಂ ಬುಧಾಬ್ಜವನಕಳಹಂಸಾ
ಪೆಱರ ಕುಚೇಷ್ಟಿತಂ ಜ್ವರಮದಾದೊಡೆ ವರ್ಣಮದೊಂದಱಾಕಳಂಕಱೆದದಱಾಜ್ಯಮಂ ತಲೆಯೊಳೊತ್ತಿ ಸಮಂತ್ರಕಮೞ್ತಿಯಾದಿಯಾದಱಿಕೆಯ ಪಾಲ್ಮರಂಗಳೆಸೆವ ತ್ವಗನಿಂದಿತಯುಕ್ತಮಾಗಿರಲ್ನೆಱೆ ತೊಳೆಯಲ್ಕಮಟ್ಟ ಕೞಿಯಿಂ ಬಿಡುಗುಂ ಜ್ವರಮಾತನಂಗದಿಂ
ತನ್ಮಂತ್ರಂ – ಓಂ ನಮೋ ಜ್ವಾಲಿನಿ ನೀರೇಜ (ವಾಸಿ)ನಿ (ಪಾ) ಪರಿಘೆ
ವಿಲಸಚ್ಚಂದನ ರಕ್ತಚಂದನ ರುಜಾವಾಳ ಪ್ರಿಯಂಗ್ವಾಖ್ಯಮಂಜಲದಿಂ ತೇದು ಸಮಂತ್ರಕಂ ತನುಗೆ ಲೆಪ್ಪಂಗೆಯ್ಯಲಾ ಪಾತಕರ್ಕೊಲೆಗೆಂದಿಟ್ಟಭಿಚಾರ ದುಷ್ಟತರಮುಂ ದಾಹಂ ಜ್ವರಂ ಸ್ಫೋಟಕಂನೆಲೆಗೆಟ್ಟೋಡುಗುಮೆಂದಿದಂ ತಿಳಿಸಿದಂ ಶ್ರೀಮಂಗರಾಜೋತ್ತಮಂ
ತನ್ಮಂತ್ರಂ – ಓಂ ನಮೋ ಭಗವತೇ ಓಡ್ಡಾಮರೇಶ್ವರಾಯ ಕಂ ಹಂ ನಿಮನಮುಕ್ತಂಚ
ದುರ್ಗಾಯ ಸ್ವಾಹಾ
ಮೊಸರಂ ಜೇನೆಯ್ಯಂ ಭಾವಿಸಿ ಪೂಸಲ್ ಕೃತ್ರಿಮೋದ್ಭವ ಸ್ಫೋಟಕಮುಂದೆಸೆಗಿಡುಗುಂ ದೇವಳಿಗೆಯವಸುಧಾಜನ ಮುಖ್ಯ ಮಂಗರಾಜನ ಮತದಿಂ
ಅತ್ತಿಯಪಣ್ಣಿನ ರಸಮಂಬಿತ್ತರದಿಂ ಬೆಳೆದ ಬಿಳಿಯ ಕರ್ವಿನ ರಸಮಂಮತ್ತೆನ್ನದೀಂಟಲಿಕ್ಕಿದಬತ್ತಲೆ ಪರಿಸುವ ಮರುಳ್ತನಂಗಳ್ ಕಿಡುಗುಂ
ಶಮರಹಿತರ್ ಖಳರಿಕ್ಕಲ್ಬಮೆಗೊಂಡ ನರಂಗೆ ಮೀಯಲೆಱೆವುದು ಪಾಲಿಂಕ್ರಮದಿಂ ಪಾಲಂ ಶರ್ಕರೆಯುಮನೀಂಟಲ್ ತಿಳಿಗುಮಖಿಳ ಬುಧಜನಮಿತ್ರಾ
ಅಣಕಿಸಿ ಕೆಲಬರ್ ಕೆರಹಿನಕುಣಿಕೆಯೊಳಟ್ಟೆಯೊಳೆ ಸವೆಯೆ ಪಾದದ ಪುಣ್ಣಂಕ್ಷಣದಿಂದಮಕ್ಕಿಗರ್ಚಿಂಗಣನೆಯೊಳಂ ತೊಳೆಯಲವರ ಕೃತ್ರಿಮಮೞಿಗುಂ
ಪಿರಿದುಂ ತಂಬುಲದೆಡೆಯೊಳ್ಪರಿಣಮಿಸಲ್ ಮರ್ದು ಮತ್ತದುಂ ತಲೆಗೇಱಲ್ಮರುಳಾದವಂಗೆ ಮಾಡುವಪುರುಷಾರ್ಥಪ್ರದಮಿದೊಂದನಾಂ ವಿವರಿಸುವೆಂ
ಘೞಿಲನೆ ನೇಱಿಲತೊಕ್ಕಂಪಿೞಿದ ರಸಂ ಗೋಘೃತಾನ್ವಿತಂ ಶರ್ಕರೆಯಿಂವಿಲಸಿತಮೆನಿಸಿದ ಪಾಲಂದಳೆದಾ ಮೊಘೆಯೆನಿತನಿತ್ತು ಕೊಂಡ ಬೞಿಕ್ಕಂ
ನೀಡಿರದೆ ತಲೆಯೊಳಂ ಹಿಮಗೋಡುವ ನೀರ್ಗಳನೆ ಪೊಯ್ಯಲಂತದು ತಿಳಿಗುಂಈಡಿತಮಿಂತಿರಲಿದಕಂನಾಡಾಡಿಯ ಮರ್ದದೇವುದಮಳಚರಿತ್ರಾ
ಎಳ್ಳೆಣ್ಣೆಯೊಳಂ ಕುಂದಿಸುವುದೊಳ್ಳಿಹ ಜಾತೀಫಲಂಗಳಂ ಮೂಮೆಯದಂಪುಳ್ಳಕ್ಷೀರದೊಳಂ ಸಿಗ್ಗಿಲ್ಲದವೋಲ್ ಕುದಿಸುಗಂತದುಂ ಪರಿಪಡುಗುಂ
ಕುದಿಗೊಂಡ ಪೊೞ್ತಱೊಳ್ ಮತ್ತದನಿೞಿಪಲದೊರ್ಮೆಗೊರ್ಮೆಯಂತದನಱಿಯಲ್ಕದನಿಳುಹಿ ಭಾಗಮಂ ಮಾೞ್ಬುದು ಮಡಗಿರಿಸುವುದು ಬೞಿಯಮಾ ಪೋೞ್ಗಳುಮಂ
ಉದಯಾಸ್ತಮಾನದಲ್ಲೀವುದು ಕೃತ್ರಿಮಜನ್ಯವಿಷದ ನೀಗುಣಂದಲ್ ಸತ್ಪದ ಪವಣಱಿದು ಬೞಿಕ್ಕುಣ್ಬುದು ಮಧುರಮೆನಿಪೃ ಭೋಜ್ಯಮಂ ಹಿತಮಕ್ಕುಂ
ಇದಖಿಳ ಕೃತ್ರಿಮೋಗ್ರವಿಷದರ್ಪಘನಾಶನ ಚಂಡಮಾರುತಂವಿದಿತ ತನುವ್ಯಥಾ ಭಯ ಸರೋರುಹಮತ್ತಗಜಂ ಬುಧಾಳಿಯಿಂತಿದನೊಲಿದೞ್ತಿಯಿಂ ಬರೆವುದಾದರದಿಂದಮೆ ನೋೞ್ಬುದೆಂದು ಕೋವಿದರಿಗಮೋಘಮಾಗಲೊರೆದಂ ವಿಭು ಮಂಗಬುಧಂ ಧರಿತ್ರಿಯೊಳ್
ಗದ್ಯ. ಇದು ಸಕಲವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿ ಪಾರಗ ಶ್ರೀ ಪೂಜ್ತಪಾದ ಮುನೀಂದ್ರ ಚಾರುಚರಣಾರವಿಂದ ಗಂಧ ಗುಣಾನಂದಿತಮಾನಸಂ ಶ್ರೀಮದಖಿಲ ಕಳಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ಕೃತ್ರಿಮವಿಷಹರಣ ಚಿಕಿತ್ಸಾಧಿಕಾರಂ ಚತುರ್ದಶಂ


