XIII
ಖಗೇಂದ್ರಮಣಿದರ್ಪಣ
ಸರ್ವ ಜಂಗಮವಿಷಮವಿಷಚಿಕಿತ್ಸಾ ಪ್ರಕರಣ
ಶ್ರೀಮನ್ಮುಕ್ತಿರಮಾಪ್ರಿಯಂ ವಿಗತರಾಗದ್ವೇಷಮೋಹಾಧಿಕಂಕ್ಷೇಮಾಂಗಂ ಕಮಠೋಗ್ರ ನಿರ್ಮಿತ ವೃಕ ವ್ಯಾಘ್ರೇಭ ವಾರಾಹರ್ಗೋಮಾಯು ಪ್ರಮುಖೋಗ್ರ ಸರ್ವವಿಜಯಂ ಭವ್ಯೌಘಕಲ್ಪದ್ರುಮಾರಾಮಂ ಪಾರ್ಶ್ವಜಿನೇಶ್ವರಂ ನಮಗೆ ಮಾೞ್ಕಿಷ್ಟಾರ್ಥಸಂಯೋಗಮಂ
ವೃಕ ಶಾರ್ದೂಲ ಮದೇಭ ಸೂಕರ ಚಲದ್ಗೋಮಾಯು ಮುಖ್ಯಂ ಮೃಗಪ್ರಕರಂ ಕಚ್ಛಪ ಶಿಂಶುಮಾರ ಮಕರಾದ್ಯಂಭಶ್ಚರಾನೀಕ ಲಾವಕ ಪಾರಾವತಮಾದಿಯಾದ ಖಗಸಂತಾನಂ ರಟನ್ಮಕ್ಷಿಕಾದಿಕಮುಂ ಕ್ಷುದ್ರಪಿಪೀಲಿಕಾ ತ್ರಸಕುಲಂ ಸರ್ವಂ ವಿಷಪ್ರಾಣಿಗಳ್
ಸುಖಸಂಗೋಷ್ಠಿಯೊಳಂ ನೃಕಾಮುಕಿಯರುಂ ಕ್ರೋಧಾಂಗದಿಂದಂ ನಖಾನಖಿಯಂ ಬಾಲಕರುಂ ಕರಂ ಮುಳಿದು ದಂತಾದಂತಿಯಂ ಮಾಡಲಾನಖ ದಂತಾಹತಿಯೊಳ್ ವಿಷಂಗಳೊಳವಿಂತೆಲ್ಲಂದದಿಂದೆಲ್ಲರಾಮುಖದಿಂದಾದ ವಿಷಕ್ಕೆ ನಾಂ ತಿಳಿಪುವೆಂ ತತ್ತತ್ಪ್ರತೀಕಾರಮಂ
ಕರಡಿ ಪುಲಿ ಕುದುರೆ ತೋಳಂನರಿ ನಾಯ್ ಮೊದಲಾದುವಡಸಿ ಪಿಡಿದೆಡೆಯೊಳ್ ನೆತ್ತರನೊತ್ತಿ ಕಳೆದು ಬೞಿಯಂಭರದಿಂ ಚುರ್ಚುವುದು ಕಾಯ್ದ ಕರ್ಬುನದಿಂದಂ
ಮಂತ್ರಂ. ಓಂ ನಮೋ ಭಗವತೇ ಪಾರ್ಶ್ವತೀರ್ಥಂಕರಾಯ ಧರಣೇಂದ್ರಪದ್ಮಾವತೀ ಸಹಿತಾಯ ಓಂ
ಗ್ರಾಂ ಗ್ರ ಗ್ರಂಥಿನಿ ನಮೋ ವ್ಯಾಘ್ರಚೋರಾರಿ ಮಾರಿಸ್ಪೋಟಕ ಬಾಧಾ ಪ್ರಶಮನಕರಿ ಪದ್ಮಾವತಿ ಹ್ರೀಂ ಸ್ವಾಹಾ
ಹುಲಿ ಕಚ್ಚಿದ ವಿಷಕ್ಕೆ
ಸವಿನಯದಿಂದೆ ಮಂತ್ರಮನಿದಂ ಪಠಿಸಿರ್ದು ತರಕ್ಷುದಷ್ಟನಂವಿವರಿಸಿ ನೋಡಿ ತನ್ಮುಖನಕ್ಷತಮಂ ನವಸಿಂಧುವಾರದೊಪ್ಪುವದಳದಿಂದಮೊಂದಧಿಕಮಾಗಿಹ ವಿಂಶತಿಸೂೞ್ವರಂ ಕರಂತವಕದೊಳಂದು ಮಂತ್ರಿಸಿ ಬೞಿಕ್ಕಿಡೆ ಮರ್ದನದುಂ ಶುಭಾವಹಂ
ಹಾಲೆಯ ಪರ್ಣಮಂ ಮೆೞಸುಮಂ ಬೆರಸಿಕ್ಕಿ ದಿನತ್ರಯಂಬರಂಮೇಲೆ ಬೞಿಕ್ಕದಂ ತುೞಿದು ಪೂಸುವುದಾ ಮೊೞಗೆಂಬ ಭೂಜದೊಳ್ಳ್ಮೂಲಮನಂತು ಮೂಱುದಿವಸಂ ಬಿಡದೈದೆಲೆನಾಗನೆಂಬುದುಂಟಾ ಲತೆಯೊಳ್ದಳಂಗಳುಮನಿಕ್ಕುವುದಂತಿರೆ ತದ್ವಿಷಾಪಹಂ
ಕುರುಟಿಗ ವರತುತ್ಥಂ ದಾರ್ವಿ ಸರ್ಪಾಕ್ಷಿಮೂಲಂಬೆರಸಿದ ಮಧುಕಾಖ್ಯಂ ರೌಹಿಣೇಯಂ ಪಟೋಲಂಜರಠಘೃತದೊಳಟ್ಟೀಯೆಲ್ಲಮಂ ಪೂಸಿ ಮತ್ತಂಕರಿಯನಿಡೆ ಬೞಿಕ್ಕಂ ವ್ಯಾಘ್ರದಷ್ಟಂಗೆ ಸೌಖ್ಯಂ
ಮರಿಚಂ ದೊಗ್ಗಳೆ ಮಾಲತೀದಳ ಚಲದ್ವೃಂತಾಕಪತ್ರಂ ಲಸತ್ತರು ಚಿಂಚಾತ್ವಗನಿಂದ್ಯ ಕಾಚೆನಿಪಿವಂ ಕೂಡಿರ್ದು ದುಸ್ಪರ್ಶಮಂಬೆರಸಲ್ ಟಂಕಣಮೊಪ್ಪೆ ಮಾಡಿ ಕರಿಯಂ ತಂದಿಕ್ಕಲಾ ಪುಣ್ಗಮಾಸುರದಿಂದಂ ಪುಲಿ ಕರ್ಚಿದಂಗೆ ಹಿತಮೀ ವಿಶ್ವಂಭರಾಚಕ್ರದೊಳ್
ಎರಡರಿಸಿನಮಂ ಜಾಜುಮನರೆದು ಚಮೂರೋಗ್ರದಂತ ನಖಜಕ್ಷತದೊಳ್ಪರಿಕಿಸಿಡೆ ಮಾಣ್ಗುಮದು ಸತ್ಪುರುಷಮನೋಗೇಹರತ್ನದೀಪವಿಲಾಸಾ
ಹತ್ತರಿಕೆಯ ರಸಮೊಂದಂಮತ್ತಂ ಮಧುಯುಕ್ತಮಾಗೆ ಪೂಸಲೊಡಂ ಪಲ್ಲೊತ್ತಿದ ಪುಣ್ಗಳ್ ನಖದಿಂದೊತ್ತಿದ ಪುಣ್ಣೆಯ್ದೆ ಮಾಣ್ಗುಮಿಂತಿದು ಸಿದ್ಧಂ
ನಿಂಬದ ಪರ್ಣಮಂ ಸೊಗದೆಯಂಗುರು ಹಾಲೆಯಸೊಪ್ಪಿದಲ್ತೆ ಲೇಸೆಂಬಿನಮಿರ್ದ ಬಂಜೆ ಮಡುವಾಗಲುಮೊಪ್ಪುವ ಭದ್ರಮುಸ್ತೆಯೆಂತುಂ ಬಿಳಿಯಂದದೊಳ್ಗಣಜಿಲೆಂಬಿವನೊಪ್ಪಿರೆ ಕೂಡಿ ಪೂಸೆ ತಾಂನಿಂಬೆಯ ಪಣ್ಣೊಳಿರ್ಪ ಪುಳಿಯಂ ಪುಲಿ ಕೊಂಡೊಡೆ ಮಾಣ್ಗುಮಾಕ್ಷಣಂ
ಕರಡಿ ಪುಲಿ ಬೆಕ್ಕು ನಾಯ್ ಸೂಕರ ನಕುಲ ಹಯಾದಿ ನಖಮುಖಕ್ಷತದೆಡೆಯೊಳ್ಮರದರಿಸಿನಮಂ ಪೂಸಲ್ಪರಿಹರಿಕುಂ ತದ್ವಿಷಂ ವಿವರ್ಜಿತಕುಮತಾ
ಕ್ರೂರಮೃಗಂಗಳ ವಿಷಮಂವಾರಿಸುಗುಂ ಬಿಳಿಯ ಗಣಜಿಲೊಂದಱ ಬೇರಂ[ಚಾರಿಸಿ] ಪೂಸಿದೊಡೆಂದೀಧಾರಿಣಿಗಱಿವಂತೆ ಪೇೞ್ದನುಭಯಕವೀಂದ್ರಂ
ರಜನಿ ಸುದಾರ್ವಿ ಬಾವುಜಿಗೆ ಬೇವಿನಬಿತ್ತು ರಸಾಂಜನಂ ತಿಲವ್ರಜ ತುಳಸೀ ಗುಡೂಚಿಯಿವಱೊಳ್ ಬೆರಸೊಪ್ಪೆ ಕಱುಂಕೆ ಸರ್ಷಪಂನಿಜದೆ ಸಮಾನಮಾಗರೆದು ಲೇಪಿಸೆ ಸರ್ಪ ಮೃಗಾದಿಯಿಂದಮಂಡಜಕುಲದಿಂದಮಗ್ಗಲಿಸಿದುಗ್ರವಿಷಂ ಪರೆಗುಂ ಬುಧೋತ್ತಮಾ
ಹರಿ ಕರಿ ಬಭ್ರು ಬೆಕ್ಕು ಮುಸು ಮಾನವನಾಖು ವೃಕಂ ವರಾಹ ಕುಕ್ಕುರ ಪುಲಿ ಮುಖ್ಯಮಾದ ಚರಸತ್ವದ ದಂತ ನಖಾದಿ ನಟ್ಟು ನಿತ್ತರಿಸಲಶಕ್ಯಮೆಂದೆನಿಪ ಪುಣ್ಗರೆದಿಕ್ಕುವುದೞ್ತಿಯಿಂದೆ ಪಾಲ್ವೆರಸಿದ ಪುತ್ರಜೀವಿಯನೆ ಪಾನಮನೀಯೆ ವಿಷಾಪಹಾರಕಂ
ಕರಿ ಮೊದಲಾಗಿರುಂಪೆ ಕಡೆಯಾದ ಚರಾಂಗವಿಷಂಗಳೆಲ್ಲಮಂಪರಿಹರಿಸಲ್ಕೆ ಬಂಜೆ ಮಡುವಾಗಲನಿಂಬಿನೊಳಂಬುವಿಂದದಂಬೆರಸರೆದೊಪ್ಪುವಂಜನದೊಳಂತೆ ವಿಲೇಪನ ನಸ್ಯ ಪಾನದೊಳ್ಪರಿಕಿಸಲೊಂದೆ ಸಾಲದೆ ವಿದಗ್ಧಶಿರೋಮಣಿ ಮಂಗನುಕ್ತಿಯಿಂ
ವ. ಇನ್ನು ಲೋಕದೊಳುಳ್ಳ ಸರ್ವ ಜಂಗಮ ವಿಷಾಪಹರಣಕ್ಕಮೊಪ್ಪುವ ಅಮೃತಧಾರಾ
ಮಂತ್ರಮಂ ಪೇೞ್ವೆನದೆಂತೆಂದೊಡೆ
1. ಓಂ ನಮೋ ಭವಗತೇ ಪಾರ್ಶ್ವಚಂದ್ರಾಯ ಧರಣೇಂದ್ರ ಪದ್ಮಾವತೀ ಸಹಿತಾಯ
ಅಷ್ಟಮಹಾಸಿದ್ಧಿಪ್ರದಾಯಕಾಯ ಲೂತಿ ಜಾಳ ಗರ್ದಭ ಕರ್ಣಶೂಲ ನೇತ್ರಶೂಲ
ಮೂಲವ್ಯಾಧಿ ದುಷ್ಟವ್ರಣ ವಿನಾಶನಾಯ ಅನೇಕ ವಿಷಸಂಹರಾಯ ಛಿಂದ ಭಿಂದ
ಚಂಡೋಗ್ರ ದಾಹಸಂತಾಪಂ ಹನ ರಣ ಋಣ ಇಳಿ ಶಿಳಿ ಚಿಳಿ ಮಿಳಿ ಕಿಳಿ ಓಂ
ಹ್ರಾಂ ಹಂ ಸಃ ಓಂ, ಹ್ರೀಂ, ಹಂ ಸಃ, ಓಂ ಹ್ರೂಂ ಹಂ ಸಃ, ಓಂ ಹ್ರೌಂ ಹಂ ಸಃ,
ಓಂ ಹ್ರಃ ಹಂ ಸಃ ಗ್ಲೌಂ ಕ್ಷಾಂ ಠ ಫಟ್ ಸ್ವಾಹಾ
2. ಓಂ ನಮೋ ಭಗವತೇ ಚಂದ್ರಪ್ರಭ ಶಂಕರಚಂದ್ರಾಯಹನ ಹರ ಹರ ಮಾರಯ
ಸ್ಥಾವರ ಜಂಗಮವಿಷಂ ಹರ ಠ್ಮ್ಲ್ಯ್ರೂಂಪಿ (ಸಿ)ಂ ಸ್ವಾಹಾ
ಇಳೆಯೊಳಿವೆ ಸಿದ್ಧಮಂತ್ರಂ.ಗಳೆನಲ್ ಮುನಿಗದಿತಮಮೃತಧಾರಾಮಂತ್ರಂ.ಗಳೆನಿಕ್ಕುಂ ತನ್ಮಂತ್ರಿತಜಳಮಂ ಕುಡಿಯಲ್ಕೆ ತಳಿಯೆ ನಿರ್ವಿಷಮಕ್ಕುಂ
ವ. ಈ ಮಂತ್ರದ್ವಯದೊಳೋರೊಂದಱಿಂ ಇಪ್ಪತ್ತೊಂದು (21) ಸೂೞ್ವರಂ ಮಂತ್ರಿತ ಜಲದಿಂ
ಸ್ನಾನ ಪಾನ ಔಷಧಿಯಂ ಮಂತ್ರಿಸಿಯಿಕ್ಕಲ್ ಸರ್ವ ವಿಷಹರಣಂ
ಕರಡಿಯ ವಿಷಕ್ಕೆ
ನಿರುಪಮಮಪ್ಪ ಕೊಗ್ಗಿ ವರಲಕ್ಷ್ಮಿ ಪುನರ್ನವಿಯೆಂಬ ಮೂಱುಮಂಬೆರಸಿರೆ ಕಲ್ಲೊಳಿಟ್ಟರೆದು ತುಗ್ಗಿಲಣಂಬೆಯುಮಂ ಪರೀಕ್ಷಿತಂನಿರುಪಮಮಪ್ಪ ತಕ್ರದೊಳಮೀಂಟೆ ವಿಷಂ ಕಿಡುಗುಂ ಕ್ಷಣಾರ್ಧದೊಳ್ಕರಡಿಯ ದಂತಪಂಕ್ತಿಜ ನಖಾವಳಿಜಂ ಮನುಜಾಂಗಬಾಧಕಂ
ಬರಿವದಣೆಯ ಕೆಂಬಱುಹೆಯಕರಮೊಪ್ಪುವ ಮೂಲದೆಸೆವ ಕರಿಯಂ ಸುಣ್ಣಂಬೆರಸಿರದಿಕ್ಕಲ್ ಮಾಣ್ಗುಂಕರಡಿಯ ನಖಮುಖದಿನಾದ ಪುಣ್ಗಳಮೋಘಂ
ಹಂದಿಯ ವಿಷಕ್ಕೆ
ಹಂದಿಯ ವಿಷಕ್ಕೆ ಮುಸಲಿಯಕಂದ ಲಸತ್ಪಾನ ನಸ್ಯ ಲೇಪನವಿಧಿ ನಿಸ್ಸಂದೇಹಂ ಪರಮೌಷಧಿಯೆಂದಂ ಶ್ರೀಪಂಚಗುರುಪದಾಂಬುಜಭೃಂಗಂ
ತೋಳನ ವಿಷಕ್ಕೆ
ಎರ್ಗಿಲ್ಲದೆ ಪಾದರಿಯೆಲೆಪೆರ್ಗುರುಟಿಗೆ ಯೆಸೆವ ಬೇರುಮಂ ಖರ್ಜೂರದೊಳೊರ್ಗಿರೆ ಜಲದಿಂದೀಂಟಲ್ಕಗ್ಗಲಿಸಿದ ವೃಕವಿಷಂಗಳೞಿಗುಮಮೋಘಂ
ಮನುಜರ ರದನಮುಮಂ ತಾಂಸ್ತನದುಗ್ಧದೆ ತೇದು ಕಣ್ಣೊಳೆಚ್ಚುಗೆ ತೋಳಂತಿನಲಾದ ವಿಷಂ ಕಿಡುಗುಂಜನಹಿತಕರಚರಿತ ಮಂಗವಿಭುವಿನ ಮತದಿಂ
ಸೀೞ್ನಾಯ ವಿಷಕ್ಕೆ
ಪಾಲಿಂ ಮರ್ದಿಸಿ ಪುಷ್ಕರಮೂಲಮನಲ್ಲದೊಡೆ ಬಂಜೆ ಮಡುವಾಗಲುಮಂಪಾಲಿಂದರೆದೀಂಟುಗೆ ತಾಂಸೋಲಿಸೆ ಸೀೞ್ನಾಯ ವಿಷಮನಂತದೆ ಸಾಲ್ಗುಂ
ಪೆಂಕುಳಿನಾಯ ವಿಷಕ್ಕೆ
ಕನಕದ ಬೇರುಂ ಶರ್ಕರೆಯನುಪಮಮೆನಿಸಿರ್ದ ತುಪ್ಪಮಿಂತಿವನೊಸೆದಿಂಪಿನ ಪಾಲೊಳ್ ಕುಡಿಸಿದೊಡಂಶುನಕನ ಪೆಂಕುಳಿಗನಧಿಕ ವಿಷಮನದೞಿಗುಂ
ಸಿತಮಾಹಿಷಮಂ ಘೃತದೊಳ್ಸಿತ ಗುಡಮಿಶ್ರಂಗಳಾಗೆ ತಿಂಬುದು ಮೇಣ್ಸಿತ ಕೂಷ್ಮಾಂಡದ ಫಲರಸಯುತ ಮರಿಚನಮನಕ್ಕೆ ತಿಂಗೆ ತದ್ವಿಷಮೞಿಗುಂ
ಎಕ್ಕೆಯ ಕೋರಕಮಂ ತಂದಿಕ್ಕುಗೆ ದುಗ್ಧದೊಳಮರೆದು ಕದಡೀಂಟಲೊಡಂದೊಕ್ಕನೆ ಮಾಣ್ಗುಂ ಪೇಂಕುಳಿಯುಕ್ಕಿದ ಶುನಕನ ವಿಷಂ ವಿವರ್ಜಿತ ಕುಪಥಾ
ಅತ್ತಿಯ ಪಣ್ಣಾಜ್ಯಂ ಮೇಣುತ್ತರಣೆಯುಮೆಸೆವ ಮಧುವಿವಂ ಕುಡು ಮೇಣಾಮತ್ತಿಯ ಮೂಲಮನುದಕದೊಳಿತ್ತೊಡೆ ಪೇಕುಳಿಯ ನಾಯ ವಿಷಮಿರದೞಿಗುಂ
ಕನಕದ ರಸಮಂ ಗುಡಮಂವಿನುತ ಕ್ಷೀರದೊಳಮಿರ್ಪಲಮನೀಂಟಲ್ಕಂಶುನಕಂ ಪೇಕುಳಿಗೊಂಡುದುತಿನೆ ತದ್ವಿಷಮೞಿಗುಮುಭಯಕವಿಕಮಲಾರ್ಕಾ
ನೀಲಿಯ ಕನಕದ ಬೇರಂಕೋಲೆಯ ಬೇರೆಂಬಿವಂ ಸಮಂಗೊಂಡರೆ ನೀಂಪಾಲಿಂದೆ ಕುಡಿಸಲಂತದುಸೋಲಿಸುಗುಂ ಪುರ್ಚುಗೊಂಡ ನಾಯ್ಗಳ ವಿಷಮಂ
ಕನಕದ ಬೀಜಶತಂಗಳನನುನಯದಿಂ ಕುಡಿಸಲಂತೆ ಪೇಕುಳಿಗೊಂಡಾಶುನಕನ ವಿಷಮೞಿಗುಂ ತನುಧನಮುಂ ಸ್ತ್ರೀವ್ಯಸನಿಗೞಿವ ತೆಱದಿಂ ಧರೆಯೊಳ್
ಬೆಲ್ಲದೊಳೆಕ್ಕೆಯ ಪಾಲಂನಿಲ್ಲದೆ ಬೆರಸೆಣ್ಣೆಯಂ ಕೊಳಲ್ಕದು ಕಳೆಗುಂಕ್ಷುಲ್ಲಕ ಶುನಕಂಗಳ ವಿಷಮೆಲ್ಲಮನಕಳಂಕಮಾನಸೈಕಮರಾಳಾ
ಎಕ್ಕೆಯ ಪಾಲೆಣ್ಣೆ ಗುಡಂಚೆಕ್ಕನೆ ದುಗ್ಧದೊಳೆ ಬೆರಸಲದನೀಂಟಲೊಡಂಮೊಕ್ಕಳಮೞಿಗುಂ ನಾಯ್ಗಳ್ಸೊರ್ಕಿಂ ಪಿಡಿದಡಸಿ ಕಡಿದ ವಿಷಮಾಕ್ಷಣದೊಳ್
ಎಲವದ ಬಂದಣಿಕೆಯನಿಂತಲಸದೆ ಕುಡಿಸಲ್ಕೆ ನಾಯವಿಷಮಿೞಿಗುಂ ಮೇಣ್ಎಲವದ ಬಂದಣಿಕೆಯುಮಂವಿಲಸತ್ ಘೃತದಿಂದೆ ಕುಡಿಸಲಂತದಱಿಂದಂ
ನೆಲದಾೞ್ ಮಧುವೆರಸಿರೆ ತಾನಲೆಗುಂ ತದ್ವಿಷಮನಲ್ಲದೊಡೆ ಕುಂಬಳದೊಳ್ಪಳರಸಮಂ ಮೆಣಸಂ ಕೊಳಲಲಂಘ್ಯಮೆನಿಸಿರ್ದ ನಾಯ್ಗಳತಿವಿಷಮೞಿಗುಂ
ಕುರ್ಕುರನ ಬೀಜ ಮರಿಚಂಶರ್ಕರೆ ತಿಲಮೆಮ್ಮೆಯೆಸುವ ಬೆಣ್ಣೆಯುಮಂ ಕೊಂಡರ್ಕನ ಪಾಲೊಳ್ ಕುಡಿಸಲ್ಕುರ್ಕುರದಷ್ಟಂಗೆ ಕಿಡುಗುಮದಱಿಂದೆ ವಿಷಂ
ಕವಳಂ
ಕುರ್ಕುರದಷ್ಟಂಗಂ ಮೆಲಲಿಕ್ಕುಗೆ ಮಾದಲದ ಪಣ್ಣೊಳಂ ಖೈರದ ಬಿತ್ತಕ್ಕುಮೆನೆ ಕೂಡಿ ತಿನೆ ತಲೆದೋರ್ಕುಮೆ ತದ್ವಿಷಮಿಳಾತಳಾಗ್ರದೊಳಿನಿಸುಂ
ಲೇಪಂ
ಎರಡರಿಸಿನಮುಂ ಜಾಜುಂಬೆರಸು ತದೀಯ ಕ್ಷತಂಗಳೊಳ್ ಪೂಸುಗೆ ಕುರ್ಕುರನ ವಿಷಂ ಪಱಿಪಡುಗುಂನಿರುಪಮ ಸುಶ್ರುತ ಪಯೋಧಿಯನುಮತದಿಂದಂ
ಸಿರಿಸದ ಪಂಚಾಂಗದೊಳಂಬೆರಸಿದ ವರನೀಲಿ ಜಾಜು ಹಯಗಂಧಿಯಿವಂಭರದಿಂ ಪೂಸಲೊಡಂ ತಾಮಿರಲೀಗುಮೆ ರಾತ್ರಿ ಜಾಗರಾಖ್ಯದ ವಿಷಮಂ
ತೈಲ ಗುಡಂಗಳೊಳೆಕ್ಕೆಯಪಾಲಂ ಬೆರಸಿರದೆ ನಾಯ್ ಕರ್ದುಂಕಿದ ಪುಣ್ಣೊಳ್ಕಾಲದೊಳೆ ಪೂಸಲದು ನಿರ್ಮೂಲಿಸುಗುಂ ತದ್ವಿಷಂಗಳಂ ಗುಣನಿಳಯಾ
ಪಿರಿದೌಷಧಗಳನಱಸಿಯೆತಿರುಗುತ್ತಿರಲೇತಕಣ್ಣ ನಾಯವಿಷಕ್ಕಂಸಿರಿಸದ ಬಿತ್ತನೆ ಕೊಂಡಂತರೆ ದಷ್ಟಂಗಿರದೆ ಪೂಸೆ ತದ್ವಿಷಮೞಿಗುಂ
ಬೇಳಾಗದೆ ಜಿಹ್ವಾಪಂಮೇಳಿಸಿ ಬಂದಡಸಿ ಪಿಡಿಯಲೊಡನಾ ದಷ್ಟಂಗೇಳಿಸದಿರದಂ ಗಡ ನೀಂಕೋೞಿಯ ವಿಷ್ಠೆಯನೆ ಪೂಸೆ ತದ್ವಿಷಮೞಿಗುಂ
ತಿಲಜಮುಮಂ ಗೊಬ್ಬರದೊಳಗಲಸದೆ ಬೆರಸರೆದು ಪೂಸಲತಿಪಾತಕ ಮಂಡಲಿಗಳ್ ಕರ್ಚಿದ ವಿಷಮಂತೊಲಗಿಸುಗುಮುದಾರಚಾರುತರಗುಣನಿಳಯಾ
ರಕ್ಷಿಸು ರಕ್ಷಿಸು ಎಂದು ವಿವಕ್ಷಿಸಿ ಪಲರ್ಗಣ್ಣ ಬಾಯ್ವಿಡುತಿರದೆ ಬೇಗದಿಂ[ದಕ್ಷದ] ಬೀಜಮನೆಣ್ಣೆಯನೀಕ್ಷಿಸಿ ಪೂಸಲ್ಕೆ ಮಂಡಳಿಯ ವಿಷಮೞಿಗುಂ
ಬೇದುಗಟ್ಟುವುದು
ವಿಲಸತ್ಕುಮಾರಿಯೊಪ್ಪುವದಲಮಂ ಸೈಂಧವಸಮೇತಮಂ ಬಿಸಿಮಾಡಿಂತಲಸದೆ ಕಟ್ಟಲೊಡಂ ಮಂಡಲಿಗಳ್ ಪಿಡಿದಾದ ಪುಣ್ಗೆ ಹಿತಕರಮಕ್ಕುಂ
ಧೂಪಂ
ಯೋಗದೊಳೇನೆಲ್ಲಱೊಳುದ್ಯೋಗಂ ಹುಲಿಗಿಲೆಲೆಯನೊದವಿಸಿ ಪೊಗೆಯಂರಾಗದೊಳಿಕ್ಕುವುದಂದು ಪುರೋಗತಿ ತಿಂದೆಡೆಗೆ ವಿಷಮನಂತದು ಕಳೆಗುಂ
ತಂತ್ರಂ
ಸಾರಮಿದೊಂದನೆ ಪೇೞ್ವೆಂನೀರಂ ಮುಕ್ಕುಳಿಸಿಕೊಂಡು ನಾಯ್ ತಿಂದೆಡೆಗಂಭೋರೆಂದುಗುೞ್ವುದು ಮೂಱುಂಬಾರಿಯೊಳಂ ತದ್ವಿಷೋಗ್ರಮಂ ಪರಿಹರಿಕುಂ
ನರಿಯ ವಿಷಕ್ಕೆ
ಕುರಟಿಗೆ ಬುಗುಡಿಯ ದಳಮೆಂಬೆರಡಂ ಜಂಭೀರರಸದೊಳರೆದೀಂಟಲೊಡಂನರಿಗಳ ಪಲ್ಗಳ್ ನಟ್ಟಾಸುರದ ವಿಷಂ ತೊಲಗುಗುಂ ವಿವೇಕನಿಧಾನಾ
ಮರಿಚಂ ದಾಗುಡಿಯೆಂಬಿವನೆರಡಂ ಜಂಭೀರ ರಸದೊಳರೆದೀಂಟಲೊಡಂನರಿಯ ವಿಷಂ ಮರುದಗ್ನಿಗಳೆರಡಕ್ಕೊಳಗಾದ ಯವಸದೊಟ್ಟಿಲೆನಿಕ್ಕುಂ
ಬೆಕ್ಕಿನ ವಿಷಕ್ಕೆ
ಜಲಜದ ಕುಟಜದ ಬೀಜಮನಲಸದೆ ನೀರಂದಮರೆದು ಪೂಸಲೊಡಂ ತಾನಳಿಗುಂ ಬೆಕ್ಕಿನ ವಿಷಗಳ್ಪಲವಱೊಳೇಂ ಮರ್ದಿದರ್ಕೆ ದೊರೆ ಪೆಱತುಂಟೇ
ಪರಿಹರಿಕುಂ ಬೆಕ್ಕಿನ ವಿಷಮರೆದೀಂಟಲ್ ನೀಲಿಯೊಡನೆ ಸಿತಪರ್ಣಿಯನೀಶ್ವರಿಯಂ ಮೇಣ್ ನೀರಿಂದಂಸುರುಚಿರಮತಿ ಮಂಗರಾಜನನುಮತಿಯಿಂದಂ
ಮಲಯರುಹ ನಿಂಬಬೀಜಂವಿಲಸಜ್ಜಂಬೂತ್ವಚಂಗಳಂ ಬೆರಸಿರೆ ಪೂಜಲದಿಂದಮರೆದು ಪೂಸಲ್ಕೞಿಗುಂ ಬೆಕ್ಕಿನ ವಿಷಂ ವಿದಗ್ಧಾಭರಣಾ
ಬೆರಸಿ ಫಲತ್ರಯಂಗಳ ಕಷಾಯದೊಳಂತೆ ಸಿತಾರ್ಕಮೂಲಮಂನಿರುಪಮ ಕೋಕಿಲಾಕ್ಷಿಯ ಸುಬೀಜದ ಪಚ್ಚೆಯ ನಿಂಬವೃಕ್ಷದಿಂಚರಿಸಿದ ಸಾರಮಪ್ಪ ಪಗಿನೊಪ್ಪುವ ಲಾಂಗಲಿಯ ಪ್ರಯುಕ್ತಮಂಪೊರೆದಿರೆ ಮಾಡಿದೊಳ್ಳುರುಳಿಯಂ ಮಡಗಿಟ್ಟು ಬೞಿಕ್ಕಮಂತದಂ
ಪೊಸತೆನಲಿಕ್ಕಿದ ಗೋಮಯರಸದಿಂ ಪೂಸಿದೊಡಮಿರದೆ ಬೆಕ್ಕಿನ ವಿಷಮುಂದೆಸೆಗಿಡುಗುಂ ಕ್ಷುದ್ರಭಯಂವಸುಧಾಪತಿಯಾಜ್ಞೆಯಿಂದಮೆಂತಂತೆ ವಲಂ
ಅಂಜನಂ
ಬಹ್ವಾಲಾಪದೊಳೇಂ ಗಳವಿಹ್ವಳನಾಗದೆ ಬಿಡಾಲನಿಂ ಕ್ಷತಮಾಗಲ್ಬಿಹ್ವಾಪನ ಪಲ್ ಸ್ತ್ರೀದುಗ್ಧಾಹ್ವದೊಳೆಚ್ಚಲ್ಕೆ ಕಣ್ಗೆ ತದ್ವಿಷಮೞಿಗುಂ
ಹೆಬ್ಬಳಬೆಕ್ಕಿನ ವಿಷಕ್ಕೆ
ಪುಣುಗಿನ ಬೆಕ್ಕಗಿದೊಡೆ ಚಿಕ್ಕಣಿಕೆ ಕುಬೇರಾಕ್ಷಿ ತೀಬು ಮಡುವಾಗಲಿವಂಕ್ವಣಿತಂ ಗ್ರಾವದೆ ಹಿಂಗಿಂಕಣಯುತ ವಗ್ಗರಣೆಯಿಂ ಕೊಳಲ್ ವಿಷಮೞಿಗುಂ
ಪಲತೆಱದ ಮರ್ದುಗಳೊಳೇಂಫಲಮದು ಹೆಬ್ಬಳೆಯ ಬೆಕ್ಕು ಕಡಿದೆಡೆಯ ವಿಷಂಎಲವದ ಪಾನದೊಳಂ ತಾಂತೊಲಗುಗುಮಂತದಱ ನಸ್ಯ ಲೇಪನವಿಧಿಯಿಂ
ಮುಂಗುರಿಗೆ
ಎರಡರಿಸಿನಮಂ ಜಾಜುಮನರೆದೊಂದಿಸಿ ಪೂಸೆ ನಕುಲ ದಷ್ಟಾಂಗದೊಳಂಪರೆಗುಂ ತದ್ವಿಷಮಾಕ್ಷಣಮುರಿಯ ಶಿಖಾಗ್ರದೊಳೆ ನಿಂದ ಸೂತದ ತೆಱದಿಂ
ನಾಗರ ಪುತ್ರಜೀವಿ ಪೊಸಮಂಚಿ ಸಲೋಧ್ರಕಮೆಂಬಿವೆಲ್ಲಮಂಬೇಗದೊಳೊಪ್ಪುವ ಸ್ತನಪಯಃಪ್ರಯುತಂಗಳೊಳಾದುವಂ ಸಮಂತಾಗಿರಲಕ್ಷಿಗಳ್ಗೆಸಲು ಬಭ್ರುಕುಲಂಗಳ ತೀಕ್ಷ್ಣದಂತೆ ಸಂಯೋಗಜಮಪ್ಪ ತೀವ್ರವಿಷವೇದನೆಯಂ ಪರೆಗುಂ ಬುಧೋತ್ತಮಾ
ವಾನರನ ವಿಷಕ್ಕೆ
ಕುರುಟಿಗೆಯೆಲೆಯಂ ಮೆೞಸಂಪರಿಮರ್ದಿಸಿ ಸಲಿಲದಿಂದೆ ಪೂಸಲೊಡಂ ವಾನರನ ವಿಷಂ ಪಱಿಪಡುಗುಂಪರಮಾರ್ಥಂ ಪಂಚಗುರುಪದಾಂಬುಜಮಧುಪಾ
ಮುಸುವಿನ ವಿಷಕ್ಕೆ
ಮಂದಾರ ಸಿಂಧುವಾರಂಸಂದಾವಲ್ ದ್ರಾಕ್ಷೆಯಾಚ ದಾಗುಡಿಯಂ ಬೇರೊಂದಾಗಿರೆ ಜಲದಿಂ ಪೂಸಂದೊದವಿದ ಮುಸುಗಳಗಿದ ವಿಷಮಂ ಕಳೆಗುಂ
ಆನೆಯ ವಿಷಕ್ಕೆ
ವಿಳಸಿತ ಲುಂಗನೀರಯುತ ಪಾನಮನಾಗಿಸು ಬಳ್ಳಿಸೊಂಡೆಯುಂಸುಲಲಿತ ಸಿಂಹ ಕೇಸರಿಯ ಬೀಜದೊಳಂತೆಸೆವಾ ಪ್ರಯುಕ್ತದಿಂಕಲಸಿದುದಂ ಕೊಳಲ್ ಮದಗಜಂಗಳ ದಂತನಖಾಗ್ರಘಾಯದಾವಿಲವಿಷಮೆಲ್ಲಮಂ ಕಿಡಿಸುಗುಂ ಬುಧಬಾಂಧವನಿಷ್ಟಸೂಕ್ತಿಯಿಂ
ಸಿಂಗಳೀಕನ ವಿಷಕ್ಕೆ
ಸೊಗಯಿಪ ಟಂಕಣಮುಂ ಕುರುಟಿಗೆಯುಂ ಕಣ ವೃಶ್ಚಿಕಾಳಿಯುಂ ಲೋಯಿಸರಂಸಗುಣಂ ಕುಡಿ ಜಲದಿಂದೀಜಗತಿಯ ಸಿಂಗಳಿಕನುಗ್ರತರ ವಿಷಮೞಿಗುಂ
ಅಮ್ಮಾವಿನ ವಿಷಕ್ಕೆ
ಕರ್ಕಾಟಕಿಯವರೋಧಂಶರ್ಕರೆಯುಂ ಪುತ್ರಜೀವಿ ತಾವರೆ ಬೇವು (ರ)ಂನೀರ್ಕಲಸಿರದೀಂಟಲ್ಕಿರಲಾರ್ಕುಮೆಯಮ್ಮಾವಿನನುಪಮಾನ ವಿಷಂಗಳ್
ಅಶ್ವದ ವಿಷಕ್ಕೆ
ಕರವೀರಂ ಮಡುವಾಗಲ್ಬೆರಸಿರೆ ನಸ್ಯಮನೊಡರ್ಚುಗಾಕ್ಷಣದೊಳವಂನರಮೂತ್ರದಿಂದಮಶ್ವೋತ್ಕರ ದಂತಾವಳಿಯ ವಿಷಮದಾಗಳೆ ಕಿಡುಗುಂ
ಬೆರಸಿರೆ ಪುತ್ರಜೀವಿ ಸಿತಮೊಪ್ಪುವ ದುಗ್ಧದೊಳಂ ಪ್ರಮೋದದಿಂದರೆದು ಕುಡಲ್ಕಮೀಂಟಿದ ನರಂಗೆ ತುರಂಗಮದಿಂ ಕ್ಷತಂಗಳಾಗಿರಲರಿದಪ್ಪ ತದ್ವಿಷಮದಾಕ್ಷಣದೊಳ್ ಪರೆಗುಂ ನೃಪೇಶ್ವರಂವಿರಚಿಸಿದಾ ತೃತೀಯ ಸಮುಪಾಯದೊಳಂ ಪರೆವಂತೆ ಶತ್ರುಗಳ್
ಒಂಟೆಯ ವಿಷಕ್ಕೆ
ಬಜೆಯಜಮೋದಮಂ ಕಣಮುಮಂ ಬೆರಸೊಪ್ಪುವ ಹಸ್ತಿಕರ್ಣಿಯಂಸುಜನವರೇಣ್ಯರಿಂ ನಱುವಲಂವನದೊಳ್ ಮೆಱೆವಗ್ನಿಯೆಂಬಿವಂವೃಜಿನ ವಿದೂರಮಪ್ಪಹಿತಯೋಗಮೆನಿಪ್ಪುವಿವಿಂತಿರಲ್ಕೆಯುಂಗುಜುಗುಜುದೇವುದೌಷ್ಟ್ರಿಕವಿಷಂ ಪರೆಗುಂ ಜಲದಿಂದಮೀಂಟಿವಂ
ಕತ್ತೆಗಳ ವಿಷಕ್ಕೆ
ಕತ್ತಗಿರಿಯವಱ ಮೂಲಂಮತ್ತಂ ರುದ್ರಾಕ್ಷಿ ಸೊಡರಿ ಚಂದನಮಿವನತ್ಯುತ್ತಮದಳೆಯಿಂ ಕುಡಿಸಲ್ಕತ್ತೆಗಳ ವಿಷಂಗಳೆಲ್ಲಮುಂ ಪಱಿಪಡುಗುಂ
ತುಲಸಿಯ ರಸದಿಂ ಪಾಲಿಂದಲಸದೆ ರುದ್ರಾಕ್ಷಿ ಪುತ್ರಜೀವಿಯ ಬಿತ್ತಂಸುಲಲಿತಮಾಗರೆದೀಂಟಲ್ತೊಲಗುಗುಮಾ ಖರವಿಷಂ ನಿರನ್ವಯದಿಂದಂ
ದೊಡ್ಡಿನ ಮೃಗದ ವಿಷಕ್ಕೆ
ಬೆರಸಿರೆ ನರಮೂತ್ರದೊಳಂತ್ವರಿತದೊಳಂಗಾರವಲ್ಲಿಯುಂ ಸೈಂಧವಮುಂಪರಿಹರಿಕುಂ ದೊಡ್ಡಿನ ಮೃಗದುರುವಿಷಮಂ ನಸ್ಯ ಲೇಪನಾಂಜನದಿಂದಂ
ಕಡವಿನ ವಿಷಕ್ಕೆ
ಮರಿಚ ತವಕ್ಷೀರಮನಿಂತರೆದೊಪ್ಪುವ ಜೇನುತುಪ್ಪದಿಂ ನಯನಕ್ಕಂವಿರಚಿಸಿದಂಜನಮದು ಸಂಹರಿಕುಂ ಕಡವಿನ ವಿಷಂಗಳಂ ಗುಣನಿಳಯಾ
ಮುರಿಕೆಯ ಕಾಯ್ ಮಡುವಾಗಲ್ಬೆರಸಿದ ಮಧುವಂ ವಿಲೋಚನಂಗಳೊಳೆಚ್ಚಲ್ಪರೆಗುಂ ಕಡವಿನ ವಿಷಮುಂಪರಮಾಗಮದಿಂದೆ ಸುಶ್ರುತಿಗಳುನ್ನತಿವೋಲ್
ಮರೆಯ ವಿಷಕ್ಕೆ
ಅರಿಸಿನಮಿಂದ್ರಾಕ್ಷಂ ಮಗಧರುಹಂ ಬಜೆ ಗುಂಜಿಯೆಂಬಿವಂ ಸದೃಶದೊಳಿಂತರೆದೀಂಟಲ್ ಪಾಲಿಂದಂಮರೆಯ ವಿಷಂ ಪರೆಗುಮಖಿಳ ವಾಕ್ಫ್ರೀನಿಳಯಾ
ಹುಲ್ಲೆ ಸಾರಂಗ ವಿಷಕ್ಕೆ
ನಿಲ್ಲದೆ ಮೊಲೆವಾಲಿಂ ಪುಲಿವಲ್ಲಂ ತೇದೆಚ್ಚೆ ತಿಳಿಗುಮಾಕ್ಷಣದಿಂದಂಪುಲ್ಲೆಯ ಸಾರಂಗದ ವಿಷಮೆಲ್ಲಂ ಶ್ರೀಪಂಚಗುರುಪದಾಂಬುಜಮಧುಪಾ
ಕಾಡೆಮ್ಮಕೋಣಗಳ ವಿಷಕ್ಕೆ
ಘಮ್ಮೆನಲಶ್ವಗಂಧಿಯಜಮೋದ ಕುರಂಟಗೆ ಕೋಕಿಲಾಕ್ಷಿಮೂಲಮ್ಮಡುವಾಗಲಂ ಕುಡಿಸುಗಲ್ಲಿ ತೃತೀಯ ಸುವರ್ಣಮಾತ್ರಮಂಕೆಮ್ಮನೆ ಬಂದು ಪಾಯ್ದೊದೆದು ಕಚ್ಚಿದ ಕೋಣನ ತೀವ್ರಮಪ್ಪ ಕಾಡೆಮ್ಮೆಯ ಘಾಯದಿಂದೊಗೆದುದಂ ವಿಷಮಂ ಕಳೆಗುಂ ಬುಧೋತ್ತಮಾ
ಹಸುವಿನ ವಿಷಕ್ಕೆ
ಆವಿನ ಮೊಲೆವಾಲಿಂದಂಭಾವಿಸಿ ಕಾೞ್ನುಗ್ಗಿಯೆಸೆವ ರಸಮಂ ಕುಡಿಸಲ್ಗೋವಿನ ವಿಷಮಂ ಕಳೆಗುಂಕೇವಳಿಯ ವಚೋವಿಳಾಸಮೆಂತಘತತಿಯಂ
ತಗರ ವಿಷಕ್ಕೆ
ಇಂಗುಳದ ಪಣ್ ನಿಶಾನ್ವಿತಹಿಂಗುಂ ತ್ರಿಕಟುಕಮಿವೆಲ್ಲಮಂ ಲೊಕ್ಕಿಯ ಪರ್ಣಂಗಳ ರಸದಿಂ ನಸ್ಯಂಕಂಗಳೊಳೆಚ್ಚಲ್ಕೆ ತಗರ ವಿಷಮಂ ಕಳೆಗುಂ
ಆಡು ಹೋತು ಕುಱಿಗಳ ವಿಷಕ್ಕೆ
ಕಡಸಿಗೆಯುಂ ನೆಯ್ದಿಲ್ ದಾಗುಡಿಯಿವಱೊಳಮೊಂದನರೆವುದಾಡಿನ ಪಾಲಿಂಕುಡಿಯಲೊಡಂ ಪರಿಹರಿಕುಂತಡೆಯದೆ ಪೋಂತಾಡುಕುಱಿಗಳುಗ್ರವಿಷಂಗಳ್
ಮೊಲನ ವಿಷಕ್ಕೆ
ಮೊಲಗಿವಿಗನ ಗೆಡ್ಡೆಯುಮಂಜಲದಿಂದರೆದದಱ ಪಾನ ಲೇಪಾದಿಗಳಿಂತೊಲಗುಗುಮಾಗಳೆ ತನುವಿಂಮೊಲನ ವಿಷಂ ದ್ವಿಜಸಕಾಶದಿಂ ಪೊಲೆಯನವೋಲ್
ಎಯ್ಯಮೃಗದ ವಿಷಕ್ಕೆ
ಕಡುಮುಳಿದೆಯ್ ಪಿಡಿದೆಡೆಯಂಸುಡುವುದದಂ ಗೇರತುಪ್ಪದಿಂ ಕಾದುದಱಿಂತಡೆಯದೆ ಬೞಿಯಂ ಮರ್ದಂಕುಡುವುದು ಪಾನಾಂಗಲೇಪನಾಂಜನ ವಿಧಿಯೊಳ್
ನೆಲದಾಳ್ ಕಟುಕರೋಹಿಣಿಯಂತೆ ಲವಂಗದ ಮೂಲಮಾಟರೂಷಕಮಿವನಂಬಿಲ ದೇವದಾಳಿವೆರಸೀಂಟಲದುಂ ನಸ್ಯಾದಿಯೆಯ್ಯವಿಷಮಂ ಕಳೆಗುಂ
ಕೆಂಬಣಿಲ ವಿಷಕ್ಕೆ
ಆಸಡಿಯಂ ಲಕ್ಷ್ಮಿಯುಮಂಲೇಸೆನಿಸಿದ ವಿಷ್ಣುಕ್ರಾಂತೆಯುಂ ಸಮನಾಗಲ್ಕೋಸರಿಸದೆ ಕೞಿಯಿಂ ಕುಡೆಸಾಸದೆ ಕೆಂಬಣಿಲು ತಿಂದ ವಿಷಮಂ ಕಳೆಗುಂ
ಸಣ್ಣಣಿಲ ವಿಷಕ್ಕೆ
ಮೊಲಗಿವಿಗನನಜದುಗ್ಧದೊಳಲಸದೆ ಕುಡಲೞಿಗುಮಣಿಲ ವಿಷಕುಳಮೆಲ್ಲಂವಿಲಸನ್ಮಧುಸಮಯದೊಳಂತೊಲಗುವ ತೆಱದಿಂದೆ ಶಿಶಿರಮವನೀತಳದೊಳ್
ಉಡುವಿನ ವಿಷಕ್ಕೆ
ಭಲ್ಲಾತಕ ತರುಮೂಲಂಸಲ್ಲಲಿತ ಗುಡೂಚಿ ಭದ್ರಮುಸ್ತೆಯಿವಂ ತಾಂನಿಲ್ಲದೆ ನೀರಿಂ ಕುಡಿಯಲ್ನಿಲ್ಲದು ಹೇರುಡುಗಳಗಿದು ತುಡುಕಿದ ಗರಳಂ
ಕನಕದ ರಸಮುಂ ಗರ್ದುಗುಂಜನಹಿತಕರಮೆನಿಸಿ ಪರ್ವಿದೆಯ್ದೆಲೆ ನಾಗಂಸುನಯದಿನರೆದು ವಿಲೇಪಿಸಲನುಪಮಮೆನಿಪುಡುಗಳುಗ್ರವಿಷಮದು ತಿಳಿಗುಂ
ಅತಿಬಜೆ ಕರ್ಪುರ ಗುಂಜಾನ್ವಿತಮಪ್ಪಭಯಂಗಳೆಂಬಿವಂ ಪಾಲಿಂದಾಯತಮಾಗೆ ಕಣ್ಣೊಳೆಚ್ಚಲ್ಪ್ರತಿಮಮೆನಿಪ್ಪುಡುವಿನುಗ್ರ ವಿಷತತಿಯೞಿಗುಂ
ಓತಿಯ ವಿಷಕ್ಕೆ
ವಿಲಸತ್ ಸಾಮುದ್ರಮೆನಿಪ್ಪ ಲವಣಮಿಶ್ರಿತದೆ ಪದ್ಮಕೇಸರಮಂ ತಾಂಜಲದಿಂ ಪಾನಂ ಮಾಡಲ್ತೊಲಗುಗುಮಾ ಸರಟನಡಸಿ ಪಿಡಿದ ವಿಕ್ಷೌಘಂ
ಗೋಸುಂಬೆಯ ವಿಷಕ್ಕೆ
ಆಸಡಿ ನೆಲದಾೞ್ ಗುಳಮಂಸಾಸಿವೆ ಹಿಪ್ಪಲಿಗಳಿಕ್ಕಿ ಪಾಲಿಂ ಕುಡಿಯಲ್ಗೋಸುಂಬೆಯ ವಿಷಮೞಿಗುಂವಾಸುಗಿಯ ಮದಂ ಗರುತ್ಮನೆನೆ ನಿಲ್ಲದವೋಲ್
ಪಾವರಣೆಯ ವಿಷಕ್ಕೆ
ಮೆಣಸಿನೊಳಂ ಬೆರಸೊಪ್ಪುವಕಣಮಂ ರವಿದುಗ್ಧದಿಂದೆ ಪೂಸಿದೊಡಂತಾಕ್ಷಣದಿಂ ಪಾವರಣೆಯ ವಿಷಕಣವೞಿಗುಂ ಪುಳಿಗೆ ದುಗ್ಧಮೞಿವಂತೆ ವಲಂ
ಹಿಂಗೊಂದನೆ ಲೇಪಿಸಲದುಪಿಂಗುಗುಮಿರದಣ್ಣ ಪರಿವ ಪಾವರಣೆ ತಿನಲ್ಪಿಂಗದ ವಿಷಮೆಂತನೆ ಮುಖಭಂಗಂ ಕೊಳೆ ಖಳನ ಮದವದೞಿವಂತೆವೊಲಂ
ಪಲ್ಲಿಯ ವಿಷಕ್ಕೆ
ತಲ್ಲಣಿಸಲೇಕೆ ಪಲ್ಲಿಯಹಲ್ಲವಿಷಂ ಗಹನಮೆಂದು ಭಾವಿಸಿ ಜಲದಿಂದಿಲ್ಲಣಮಂ ಪೂಸಲೊಡಂಸೊಲ್ಲಿಂದೞಿವಂತೆ ಮಂತ್ರಮಂತದು ಕಿಡುಗುಂ
ಕಂಚಿನ ಕಿಲುಬಂ ಪೂಸಲ್ಸಂಚಳಿಸುವ ಪಲ್ಲಿಯಾನನದ ವಿಷಮೞಿಗುಂಸಂಚಿಸಿ ಕಳ್ಳಂಗಡಲೆಯುಮಂ ಚೆಲ್ವಿಂ ಲೇಪಿಸಲ್ಕೆಯುಂ ಗುಣನಿಳಯಾ
ಇಂಬಿನೊಳೆ ಕೈಪೆಸೊರೆಯುಮನಂಬಿಲದಿಂದರೆದು ಲೇಪಿಸಲ್ಕಿರದೞಿಗುಂಕಿಂ ಬಹುನಾ ಪಲ್ಲಿಯ ವಿಷಮೆಂಬುದು ಗುಣನಿಳಯ ಮಂಗವಿಭುವಿನ ಮತದಿಂ
ಎರಡರಿಸಿನ ನುಗ್ಗಿಗಳೊಳ್ಬೆರಸಿದ ಕಟುಕತ್ರಯಂಗಳಂ ಪೂಸಲೊಡಂಪರಿಹರಿಕುಂ ಪಲ್ಲಿಯ ವಿಷಮರಿಸಿನದೊರೆ ಬಿಸಿದೊಳಿರ್ದ ತೆಱದಂತಾಗಳ್
ತ್ರಿಕಟುಕ ದಾರ್ವಿ ನುಗ್ಗಿ ಬೆಱಲಿಟ್ಟಿಯ ಬೀಜ ವಿಮಿಶ್ರವಪ್ಪಿವಂಪ್ರಕಟಮೆನಿಪ್ಪನಾವಿಲ ಜಲಾಂತರದಿಂ ಕ್ಷತದಲ್ಲಿ ಲೇಪಿಸಲ್ಸಕಳ ಜನಪ್ರಸಿದ್ಧ ಗೃಹಕೋಕಿಳನುಗ್ರವಿಷಂಗಳಿಂಗುಗುಂಪಿಕರವದಿಂದೆ ಮಾನಿನಿಯ ಮಾನವಿಘಾತಮದಪ್ಪ ಮಾೞ್ಕೆಯಿಂ
ಹಿಂಗಿನೊಳಂ ಬೆರಸುವುದಾಯಿಂಗುಳದ ಗುಳಂಗಳಂ ಜಳಂ ಬೆರಸಿರದೀಂಟುಂ ಗಡಮಾಗಳೆಯದು ತಾಂಪಿಂಗಿಸುಗುಂ ಪಲ್ಲಿಗಳ್ ಕರ್ದುಂಕಿದ ವಿಷಮಂ
ಮೊಸಳೆಯ ವಿಷಕ್ಕೆ
ಸುಲಲಿತ ದೇವದಾರು ಬಜೆ ಲೊಕ್ಕಿ ಕಟುತ್ರಿಕಮೆಂಬಿವೆಲ್ಲಮಂಜಲದೊಳೆ ಸಣ್ಣನಪ್ಪ ತೆಱದಿಂದರೆದಂತದಱೊಳ್ ಪ್ರಮೋದದಿಂದೊಲಿದೊಡಗೂಡು ಮತ್ತೆ ಮಧುವಿಂ ಕೃತಪಾನದೆ ನಸ್ಯದಿಂದೆ ತಾಂತೊಲಗುಗುಮುಗ್ರಮಪ್ಪ ಶಿಶುಮಾರವಿಷಂ ಕವಿಪದ್ಮಭಾಸ್ಕರಾ
ಮೀನ ವಿಷಕ್ಕೆ
ಮಂಡಿತ ಗುಣಮೆನಿಸಿದ ಕಣಮುಂಡಿಗಳೊಳ್ ಬೆರಸಿದಿಂದ್ರವಾರುಣಿಯಂ ಮುಂಕೊಂಡಿಲು (ಲಿ) ಮುಚ್ಚೆಯ ರಸದಿಂಕೊಂಡೊಡೆ ಕಳೆಗುಂ ಝಷಂ ಕರ್ದುಂಕಿದ ವಿಷಮುಂ
ತಲೆನವಿರಂ ಜವೆಯೆಳ್ಳುಮನಲಸದಿರೊಡಗೂಡಿ ಧೂಪಿಸಂತಾಗಳೆ ತಾಂಜಲದೊಳಗಣ ತಿಮಿಯ ತಿಮಿಂಗಿಲನ ವಿಷಂ ತೊಲಗುಗುಂ ಮಹಾಪ್ರಭುತಿಲಕಾ
ಅಂಕೋಲಮೂಲದಿಂ ಪೊಗೆಶಂಕೆಯೊಳೇಂ ತಿಮಿಕುಲಂ ಕರ್ದುಂಕಿದ ವಿಷಮುಂಭೋಂಕನೆ ಕಳೆಗುಂ ರವಿದುಷ್ಪಂಕಮನೞಿವಂತೆ ಸರ್ವಜನಹಿತಚರಿತಾ
ತೊಡೆವುದು ಮೀಂಗಳ್ ಕಡಿದಾಯೆಡೆಗಂ ಪೞದೆನಿಪ ತುಪ್ಪದುಪನಾಹದೊಳಂಹಿಡಿಹಿಡಿಕೆಯನಲ್ಲದೊಡಂಹೆಡೆಗಳ್ಳಿಯ ಯೆಲೆಯನಿಕ್ಕಿ ಕಟ್ಟುವುದು ಹಿತಂ
ಏಡಿಯ ವಿಷಕ್ಕೆ
ಕೂರಿದುವೆನಿಸಿದ ಕಾಲ ಕುಳೀರಕಮೌಂಕಲ್ ತದೀಯ ವಿವರದ ಮಣ್ಣಂನೀರೊಳಮೃತಮಂ ಹಾಲೆಯಬೇರಂ ಪೂಸಿದೊಡೆ ತದ್ವಿಷಂ ಪರಿಹರಿಕುಂ
ಕಪ್ಪೆಯ ವಿಷಕ್ಕೆ
ತುಲಸಿ ಮರಮಿಟಿಲ ಹತ್ತಿಯಯೆಲೆಯಿಂತಿವನರೆದು ದುಗ್ಧದಿಂ ಲೇಪಿಸೆ ಗಂಟಲು ಮಿಡುಕುವ ಭೇಕಂ ಕಚ್ಚಲೊಡಂ ಪರ್ವಿದ ವಿಷಂ ಕ್ಷಣಾರ್ಧದೊಳ್ ಪರಿಹರಿಕುಂ
ಯೋಜಿಸಿ ಖರ್ಜೂರಂಗಳಬೀಜದೊಳಂ ಸರ್ಷಪಂಗಳಂ ಪೂಸಲದವ್ಯಾಜಂ ಭೇಕವಿಷಘ್ನಂರಾಜಿತ ಗುಣನಿಲಯ ಮಂಗರಾಜನೆ ಬಲ್ಲಂ
ಸಿರಿಸದ ಬಿತ್ತುಗಳಂ ತಂದರೆವುದು ಪೂಸುವುದು ಪೊರೆದು ಕಳ್ಳಿಯಪಾಲಿಂಪರಿಹರಿಕುಂ ವಟವಟರವದುರುತರ ಭೇಕನ ವಿಷಂ ವಿವರ್ಜಿತ ಕುಮತಾ
ಹಿಂಗು ಫಲತ್ರಯಂ ಮಧುಕ ಮುಸ್ತೆ ರುಜಾನ್ವಿತಮಿಂತಿವೆಲ್ಲಮಂಸಂಗತಮಾದೊಡಾ ಕ್ವಥಿತಮಪ್ಪ ಕಷಾಯಮನೀಂಟಿಸಲ್ಕೆ ಗೂಢಾಂಗದ ಬಿಟ್ಟ ಕಣ್ಣ ನಿಡುವುರ್ವಿನ ಭೇಕವಿಷಂಗಳಾಕ್ಷಣಂಪಿಂಗುಗುಮೆಂದು ಪೇೞ್ದನೊಲವಿಂ ವಿಭು ಮಂಗರಸಂ ದಯಾರಸಂ
ವಿಧಿಯಿಂದಂಗುರಮಂ ತಾಂಸದಮಳ ರುದ್ರಾಕ್ಷಿಯಂ ಸಮಂಗೊಂಡೊಲವಿಂದಧಿಯಿಂ ಕುಡಿಸಲ್ ಭೇಕಂಕ್ಷುಧೆಯಿಂ ತುಡುಕಿದ ವಿಷಾಗ್ನಿಯುಪಶಮಮಕ್ಕುಂ
ಜಿಗುೞೆಯ ವಿಷಕ್ಕೆ
ಕಟ್ಟುಮೊಸರಂ ಜಳೂಕಂಮುಟ್ಟಲ್ ವಿಷವೇಱಿದೆಡೆಗೆ ತೊಡೆವುದು ಮೇಣ್ ತಾಂಸುಟ್ಟೆಳ್ಳಕರಿಯನಿಕ್ಕಲ್ತೊಟ್ಟನೆ ಪರಿಹರಿಕುಮದಱ ವಿಷಮಾಕ್ಷಣದೊಳ್
ಸರ್ವ ಪಕ್ಷಿಯ (ಮಲಮೂತ್ರ) ವಿಷಕ್ಕೆ
ಕುರುಟಿಗೆಯತಿಬಜೆ ನುಗ್ಗಿಯೊಳರೆವುದು ಸರ್ಪಾಕ್ಷಿಯಂ ಮನೋರಾಗದೊಳಂದಿರದೀಂಟೆ ಪಾಲೊಳೞಿಗುಂಗರುಡಾದಿ ಖಗಾಳಿ ಮೂತ್ರವಿಷ್ಠೆಯ ವಿಷಮಂ
ತುಂಬಿಯ ವಿಷಕ್ಕೆ
ಅಳಿನಿಕರಮೂಱಿದೆಡೆಗಂವಿಳಸತ್ಕುಸುಮಿತಮೆನಿಪ್ಪ ಚಂಪಕಪುಷ್ಪಾವಳಿಯೊಳ್ ಪೊಸವೆನಿಪಲರ್ಗಳನಲಸದೆ ಕಟ್ಟುವುದು ಹಿತಮಿದೆಂಬರ್ ಪಿರಿಯರ್
ಅಸಹಿಷ್ಣುತನದೊಳಂ ನೀಂಬಸವೞಿಯಲದೇಕೆ ತುಂಬಿಯೂಱಿದೊಡಾಗಳ್ಪೊಸತೆನಿಪ ಬೆಣ್ಣೆಯಂ ಭಾವಸಮೇತಂ ಪೂಸೆ ತದ್ವಿಷಂ ಪಱಿಪಡುಗುಂ
ಕಡಂದುಱು ವಿಷಕ್ಕೆ
ಕಡದುಱುಗಳ್ ಕಡಿದಂತಾಯೆಡೆಗಾಕ್ಷಣದಿಂದಮದಱ ಗೂಡಿನ ಮಣ್ಣಂತಡೆಯದೆ ನೀರಿಂ ಪೂಸಲ್ಕಿಡುಗುಂ ತದ್ವಿಷಮದಲ್ತೆ ಬುಧಜನಮಿತ್ರಾ
ಷಡ್ಬಿಂದುಹುೞು ವಿಷಕ್ಕೆ
ಘೃತಮಂ ಪಾಲಂ ಕುಡಿಸಲ್ಕತಿಶಯ ಷಡ್ಬಿಂದು ಕೀಟಕಂಗಳ ವಿಷಮಂಕ್ಷಿತಿಯೊಳಮಾಗಳೆ ಕಿಡಿಸುಗುಮತರ್ಕ್ಯ ಗುಣನಿಳಯ ಮಂಗರಾಜನ ಮತದಿಂ
ಜೇನನೊಣವಿನ ವಿಷಕ್ಕೆ
ಭೂನುತಮಪ್ಪ ಬಂಜೆ ಮಡುವಾಗಲನಿಂಗಿತಮಾಗಿ ಶೋಭಿಪಾಕಾನನದೊಳ್ ಕರಂ ಮೆಱೆವ ತಾಣದ ಕತ್ತರಿಗುಬ್ಬಿ ಗುಳ್ಳಮಂಜಾನಿಸಿ ನೀರೊಳಲ್ಲದೊಡೆ ನಿಂಬೆಯ ಪಣ್ಪುಳಿಯಿಂದಮಾದೊಡಂಜೇನನೊಣಂಗಳೂಱಿದೆಡೆಗಂ ತೊಡೆಯಲ್ಕೆ ವಿಷಂಗಳೋಡುಗುಂ
ನೊಣದ ವಿಷಕ್ಕೆ
ಮೆಣಸುಂ ಹೊಮ್ಮುಗುಳುಂ ತತ್ಕ್ಷಣದೊಳ್ಬೆರಸರೆದು ಪೂಸಲಂತದು ಕಿಡುಗುಂನೊಣವೂಱಿದ ವಿಷಮೆಲ್ಲಂಗುಣನಿಧಿಯೆಂದೆನಿಪ ಮಂಗರಾಜನ ಮತದಿಂ
ನಂದ್ಯಾವರ್ತದ ಪೂವಂತಂದುಱೆ ನೊಣವೂಱಿದೆಡೆಗೆ ಪೂಸುಗದಂ ಮೆಣಸಿಂದಂ ನಾಗರದಿಂ ಕರಮೊಂದಲ್ ನೊಣವೂಱಿದೆಡೆಗೆ ಹಿತಕರಮಕ್ಕುಂ
ತುಪ್ಪದೊಳಂ ಬೆರಸುವುದೆಸೆವುಪ್ಪಂ ಸದೆಗುಪ್ಪೆಯೊಡನೆ ಪೂಸುಗೆ ಮೇಣ್ ಬೆಳಲೊಪ್ಪುವ ಫಳದೊಂಡಿಯವೞಿಯೊಪ್ಪಿರಲದುರೆ ಕಿಡಿಸುಗುಂ ನೊಣಂಗಳ ವಿಷಮಂ
ಸೆಲಂಬೆ ವಿಷಕ್ಕೆ
ಅರಿಸಿನ ಸುಗಂಧಿ ಶಾಲ್ಮಲಿವೆರಸಿದ ಸಾಸಿವೆಯನಶ್ವಗಂಧಿಯುಮಂ ತಾನಿರದರೆದಂಬಿಲದಿಂದಂನಿರುತಂ ಪೂಸಲ್ ಸೆಲಂಬೆಗಳ ವಿಷಮೞಿಗುಂ
ತಿಲಸಂಯುಕ್ತಮನಾಗಳೆವಿಲಸನ್ನಿಶೆಯಂ ಪ್ರಯತ್ನದಿಂ ಪೂಸಲೊಡಂ ತಾಂತೊಲಗುಗುಮಂತಾಕ್ಷಣದೊಳ್ಸೆಲಂಬೆಗಳ ವಿಷಕುಲಂ ವಿವರ್ಜಿತಕುಮತಾ
ಕಂಬಳಿಹುೞುವಿನ ವಿಷಕ್ಕೆ
ನಸುಗುನ್ನಿಯ ಕರಿಯಂ ಭಾವಿಸುವುದು ಗೋಮೂತ್ರದಿಂದೆ ಪೂಸುಗೆ ಬೞಿಯಂದೆಸೆಗಿಡುಗುಂ ಕಂಬಳಿಯತ್ರಸದ ವಿಷಂ ಬುಧಜನೈಕಮಿತ್ರನ ಮತದಿಂ
ಕೋಡಹುೞುವಿಂಗೆ
ಅಂಗುರದ ಮೂಲದೊಳ್ ತಾಂಸಂಗತಮಪ್ಪಮರ್ದುವಳ್ಳಿಯಂ ಪೂಸಲೊಡಂಪಿಂಗಿಸುಗುಮದಾಕ್ಷಣದಿಂಭಂಗುರಮೆನಿಸಿರ್ದ ಕೋಡಹುೞುವಿನ ವಿಷಮಂ
ತಗುಣೆ ಮತ್ತು ಇರುವೆಗಳ ವಿಷಕ್ಕೆ
ಉಗುನಿಯ ಪಾಲಂ ಪೂಸಲ್ತಗುಣೆಯ ವಿಷಮೞಿಗುಮೆಸೆವ ಜಂಭೀರರಸಂನಿಗದಿತಮುತ್ತರಣೆಯೊಳೊಂದೆ ಗಡಂ ಪೂಸಲ್ಕಿಱುಂಪೆಗಳ ವಿಷಮೞಿಗುಂ
ಕೆಂಜಿಗ ವಿಷಕ್ಕೆ
ರಾಜಿಪ ಸಮುದ್ರಫಲಮಂಯೋಜಿಸು ಕಂಗೊಗನ ಬೇರುಮಂ ಮಜ್ಜಿಗೆಯಿಂಪೂಜಿತರಿತ್ತೊಡೆ ಕೊಳೆ ನಿರ್ವ್ಯಾಜಂ ಪೂಸದನೆ ಕೆಂಜಿಗೆಯ ವಿಷಮೞಿಗುಂ
ಬಚ್ಚಲಪುೞುವಿನ ವಿಷಕ್ಕೆ
ಬೆಚ್ಚಿರೆ ದಾಗುಡಿ ಬಜೆಯಂಪಚ್ಚನೆ ನೀರ್ಗಡವುಮೆಂಬಿವಂ ನೀರಿಂದಂಬೆಚ್ಚರದೊಳೀಂಟೆ ಲೇಪಿಸೆಬಚ್ಚಲಪುೞುಗಳ ವಿಷಂಗಳೆಲ್ಲಂ ಕಿಡುಗುಂ
ನೊಱಜು (ಗುಂಗುಱು) ವಿಷಕ್ಕೆ
ಪೊಕ್ಕಿರೆ ಕಣ್ಣೊಳ್ ನೊಱಜುಂಚೆಕ್ಕನೆ ಬೆಣ್ಣೆಯೊಳೆ ತೇದು ನುಗ್ಗೆಯ ಬೇರಂತಕ್ಕರ್ ಕುಡಲಾಕ್ಷಣದೊಳಮಿರ್ಕುಮೆ ಇರದಿರದು ಸುಜನವನಜವನಾರ್ಕಾ
ನೀರ್ಕಲಸಿರರೆದು ವಂಧ್ಯಾಕರ್ಕೋಟಕಿಯಂ ತದಂಗದೊಳ್ ಪೂಸಲೊಡಂತರ್ಕಿಸಲೇಂ ಗುಂಗುಱವಿಷಮಿರ್ಕುಮೆ ವಿಭು ಮಂಗರಾಜನನುಮತದಿಂದಂ
ಪಲಪುೞುಗಳ ವಿಷಕ್ಕೆ
ದರಿಗಳ ಕೋಷ್ಠಾಗಾರದವರ ಮೃತ್ತಿಕೆಯಂ ಸರಾಗದಿಂ ಪೂಸಲೊಡಂಪರೆಗುಂ ಪೊಲ್ಲದುವೆನಿಸುವಪರಿದಾಡುವ ಪಲವುತೆಱದ ಪುೞುಗಳ ವಿಷಮುಂ
ಪೊಲ್ಲದುವೆನಿಸುವ ಪುೞು ಕಡಿದಲ್ಲಿಯೆ ನವನೀತ ಮಾತ್ರಮಂ ಪೂಸಲೊಡಂನಿಲ್ಲದೆ ಪರೆಗುಂ ತದ್ವಿಷಮೆಲ್ಲಂ ಗುಣರತ್ನರೋಹಣಾಚಲಸದೃಶಾ
ಮನುಷ್ಯರ ಹಲ್ಲ ವಿಷಕ್ಕೆ
ಸನ್ನುತ ಕಳಮಾಕ್ವತ ಸೀವನ್ನಿಯೊಳಂ ನಿಂಬಬೀಜ ಕುಟಜ ಸಿರೀಷಂಛನ್ನಮೆನಲರೆದು ಪೂಸಲ್ಬಿನ್ನಣಮೇಂ ಮನುಜದಶನದತಿ ವಿಷಮೞಿಗುಂ
ಬೇವಿನ ಬನ್ನಿಯ ಬೀಜಮನಾವಿಲ ಸದ್ವಟಫಲಂಗಳಂ ಜಲದಿಂದಂಕೋವಿದರೀಂಟಿಸೆ ಪೂಸಲ್ಭಾವಿಸಲೞಿಗುಂ ಮನುಷ್ಯದಂತ ವಿಷೋಗ್ರಂ
ಉಗುನಿಯ ಪಾಲ್ ಮಡುವಾಗಲ್ಸುಗಂಧಿ ವರಪುತ್ರಜೀವಿಯೆಂಬಿವನೊಡಲೊಳ್ಪುಗೆ ಕುಡಿಸೆ ನರಂ ಕೋಪದೊಳಗಿದುಗ್ರದ ದಂತವಿಷಮದಾಗಳೆ ಕಿಡುಗುಂ
ಮನುಷ್ಯರ ಉಗುರಿನ ವಿಷಕ್ಕೆ
ಕೆಣಕಿ ನಖಾನಖಿಯಿಂದಾಕ್ಷಣ ರೌದ್ರದೊಳಾದ ನಖದ ಘಾಯದ ವಿಷಮಂಕ್ಷಣದೊಳಮೞಿಗುಂ ಪೂಸಲ್ಮೆಣಸುಮನರೆದುಗುನೆಯೆಸೆವ ಪಾಲಿಂದೆ ವಲಂ
ಸರ್ವ ಸ್ಥಾವರ ಜಂಗಮ ಕೃತ್ರಿಮ ವಿಷಂಗಳ್ಗೆ
ಗೋವಿನ ತುಪ್ಪದೊಳಂ ತಾಂಭಾವಿಸಿ ಕುಡಿಸಲ್ಕೆ ಮೇಘನಾದಿಯ ಬೇರಂಸ್ಥಾವರ ಜಂಗಮ ಕೃತ್ರಿಮದಾವಾವ ವಿಷಂಗಳಾದೊಡಂ ಪಱಿಪಡುಗುಂ
ಕೀಟಕ ವಿಷಕ್ಕೆ
ಬಜೆಯತಿಬಜೆ ಯೆರಡರಿಸಿನಗಜಹಿಪ್ಪಲಿ ಹಿಂಗು ಸೈಂಧವಂ ತ್ರಿಕಟುಕಮಂನಿಜಮೊಂದಲರೆದು ಪೂಸಲ್ಸೃಜಿಸಿದ ಕೀಟಕದ ವಿಷಮದೆಲ್ಲಂ ಕಿಡುಗುಂ
ಸರ್ವ ಕೀಟಕ ವಿಷಕ್ಕೆ
ಅಗರುಂ ಬೋೞಂ ವಿಳಂಗಂತಗರಾಕ್ಷಂ ಕುಡುಗೆ ಕುಂಕುಮಂ ಸಜ್ಜರಸಂಮಿಗೆ ಚಾತುರ್ಜಾತಕ ಮಾಂಸಿಗಳೆಂಬಿವು ಕಳೆಗುಮಖಿಳ ಕೀಟಕವಿಷಮಂ
ಮಲ್ಲಿಕಾಮಾಲೆ. ದೇವದಾಳಿ ವಚೇಂದ್ರವಾರುಣಿ ಕೋಷ್ಠವರ್ಕ ಸುಪತ್ರಮುಂಬೇವು ಕನ್ನೆಕುಮಾರಿಯೀಶ್ವರಿ ಬೊಮ್ಮದಂಡೆ ನಿಶಾಯುತಂಭಾವಸಂಯುತಮಾಗೆ ವಾಕುಚಿಮಿಶ್ರಿತಂ ಮಡುವಾಗಲುಂಸೇವಿಸಿಂತಿವನಾಜ್ಯದಿಂ ಕಳೆಗುಂ ಸಮಸ್ತ ವಿಷಂಗಳಂ
ಸಾಲದೆ ಪಾಲ್ಮರನೈದಱಪಾಲೊಂದನೆ ಪೂಸಲದುವೆ ಕೀಟಕ ವಿಷಮಂಸೋಲಿಸುಗುಂ ಮೇಣ್ ತುಳಸಿಯನಾಲೋಚಿಸಲೇಕೆ ಕುಡಿಸೆ ತಂಡುಲಜಲದಿಂ
ಒಪ್ಪುವ ಪೞ್ತಿಯ ಪರಳಂಕಪ್ಪಾಗಿರೆ ಕರಿದು ಕರಿಯನೊಂದಿಸಿ ಬೞಿಯಂತುಪ್ಪದೊಳಂ ತೊಡೆಯುತ್ತಿರಲಿರ್ಪುದೆ ಕೀಟಕವಿಷಂ ವಿದಗ್ಧಾಭರಣಾ
ಗಿರಿಕನ್ನೆಯ ಸೀವನ್ನಿಯಯೆರಡುಂ ಗುಳ್ಳಂಗಳೆಸೆವಪಾಮಾರ್ಗದ ಬೇರ್ವೆರಸಿದ ನೀಲಿಯುಮೊಂದಾಗಿರೆ ಯೆಸೆವಂಕೋಲೆ ಮೇಘನಾದಿ ಸಮೇತಂ
ಪರಿಮರ್ದಿಸಿ ಕೈಪೆಯೆನಿಪ್ಪರೆವೀರೆಯ ಸೊರೆಯ ಕಾಯ ರಸದಿಂ ಶೃಂಗಾಂತರದೊಳ್ ತಿಂಬಿ ಬೞಿಕ್ಕಂತಿರೆ ಲೇಪಿಸೆ ಕುಡಿಸಲೊಡನೆ ನಸ್ಯಂಗೆಯ್ಯಲ್
ಅಷ್ಟಕುಲ ಸರ್ಪ ಕೀಟಕದುಷ್ಟಮಹಾಮಂಡಲೋಗ್ರ ವಿಷಮಂ ಕಳೆಗುಂದುಷ್ಟಗ್ರಹ ಪೀಡೆಗಳುಮರಿಷ್ಟಂಗಳ್ ಕಿಡುಗುಮದಱಿನನುಪಮ ಯೋಗಂ
ಅಂಕೋಲ ಚವ್ಯ ಮರಿಚಂಕುಂಕುಮ ಚಂದನ ರಸಾಂಜನಂ ಕ್ರಿಮಿಹಂ ತಾಂಟಂಕಣಮಭಯಾಭಿಖ್ಯಮಿವಂ ಕುಡಿಸಲೊಡೞಿಗುಮಖಿಳಜಂಗಮವಿಷಮುಂ
ಸರ್ವ ಜಂಗಮ ವಿಷಕ್ಕೆ
ಎರಡರಿಸಿನಮುಂ ಪಿಪ್ಪಲಿವೆರಸಿ ರಸಾಂಜನಮಿವೆಯ್ದೆ ಪಾನದೊಳಂ ತಾಂಪರಿಕಿಸೆ ಚರಜೀವ ವಿಷೋತ್ಕರಮಂ ಕಳೆಗುಂ ಸಮಸ್ತ ವಿದ್ಯಾನಿಳಯಾ
ತಗರಂ ಜಾತುರ್ಜಾತಕಮಗುರಂಕೋಲ ಕುಸುಂಬೆ ಮಧುಕಂ ಬೋೞಂಸೊಗಯಿಪ ಸಜ್ಜರಸಾರುಣಮಗಣಿತ ವಿಷಮೞಿಗುಮಿಂತಿವಂ ಪೂಸಲೊಡಂ
ಕಾರಸಿ ಱಂಚಿಗೆ ಬಿಲ್ವದಬೇರೀಶ್ವರಿ ಹತ್ತರಿಕ್ಕೆ ಕರಪರ್ಣಿಯಿವಂನೀರಿಂ ಕುಡಿಯಿಸೆ ನಸ್ಯದೊಳಾರಾನುಂ ಪೂಸಲಖಿಳ ವಿಷಮಂ ಕಳೆಗುಂ
ಸುರಸಿಯ ಬೇರ್ ನಿಶಿ ವಾಕುಚಿಮರದರಿಸಿನಮೆಳ್ಳುಸರ್ಷಪಂ ಬೇವಿನ ಬಿತ್ತಿರಲಿಂತಿವೆಲ್ಲಮಂ ಕೂಡಿರೆ ಲೇಪಿಸೆ ಸರ್ವವಿಷಮದಾಕ್ಷಣಮೞಿಗುಂ
ಬೆೞಲೆರಡರ ಬೇರಂ ಮೇಣ್ಕುಳಿಮಾವು ಸಮುದ್ರದಫಲ ಮಿಲುಮಿಚ್ಚಿಯ ಪಣ್ಪುಳಿಯಿಂ ಪಾನಮನಾಗಿಸೆಕಳೆಗುಂ ಜಂಗಮವಿಷಂಗಳಂ ಗುಣನಿಳಯಾ
ಬೆಳೆದು ನಳನಳಿಸುತಿರ್ಪಾಬೆೞಲೊಪ್ಪುವ ಬಂದಣಿಕೆಯುಮಂ ಸಿದ್ಧದಿನಂಗಳೊಳೊಪ್ಪೆ ತಂದು ನಿಂಬೆಯಪುಳಿಯಿಂ ಕುಡಿಸಲ್ ಸಮಸ್ತ ಚರವಿಷಮೞಿಗುಂ
ಕರಮೆಸೆವಾಜ್ಯಂ ಕೞಿಯುಂನರಮೂತ್ರಂ ವಾರಿಯಿವಱೊಳೋರೊಂದು ಮತ್ತಿರದೆ ಬಿಸಿಮಾಡಿ ಧಾರೆಯನುರುಮುದದಿಂ ಪಿಡಿಯೆ ವಿಷದ ಶೋಭೆಗಳೞಿಗುಂ
ಸಿರಿಸದ ಪಂಚಾಂಗಂ ಸಿತಗಿರಿಕರ್ಣಿಕೆ ನೀಲಿಯಶ್ವಗಂಧಿಗಳೊಂದಾಗಿರಲರೆದು ಪೂಸಲೆಲ್ಲಾಗರಳಂಗಳ ಬಾಧೆ ಪಿಂಗುಗುಂ ಗುಣನಿಳಯಾ
ನೀಲಿ ಸುದೇವದಾಳಿ ಗಿರಿಕನ್ಯಕೆಯೀಶ್ವರಿಯಿಂದ್ರವಾರುಣೀಮೂಲ ಸುಗಂಧಿಯೆಕ್ಕೆ ತಗರಂ ಕರಮೊಪ್ಪುವ ಕೈಪೆವೀರೆ ತತ್ಕಾಲಹಿತೋತ್ಥ ಕೈಪೆಸೊರೆಯೆಂಬಿವನೊಪ್ಪಿರೆ ಕೂಡಿ ಪೂಸೆ ನಿರ್ಮೂಲಿಸುಗುಂ ಸಮಸ್ತ ಖಳಜಂಗಮಜೀವಿವಿಷಂಗಳಂ ಬುಧಾ
ಬಜೆಯೆರಡುಂ ಪಿಪ್ಪಲಿಯುಂನಿಜಮೆನಿಪ ರಸಾಂಜನಂ ಪ್ರಯುಕ್ತಂ ಪಾನಂತ್ಯಜಿಯಿಸುಗುಂ ಚರವಿಷಮಂಸುಜನ ಮನೋಮಾನಸಾಂತರಾಳ ಮರಾಳಾ
ಅರಿಸಿನ ಕಾಗಿದೊಂಡೆ ಬಜೆ ವಾಕುಚಿ ಕನ್ನೆಕುಮಾರಿ ಕೋಷ್ಠಮೀಶ್ವರಿ ವರಪುತ್ರಜೀವಿ ಮಡುವಾಗಲುಮಂಗುರು ಬೊಮ್ಮದಂಡೆ ಭಾಸ್ಕರ ಪಿಚುಮಂದಬೀಜ ನುತ ಮಲ್ಲಿಗೆ ಯೆಕ್ಕೆಯೆನಿಪ್ಪುವೆಲ್ಲಮಂಬೆರಸಿರೆ ದೇವದಾಳಿ ಘೃತಸಂಯುತಮಟ್ಟುದನೋವೆ ತದ್ಘೃತಂ
ಅಂಗವಿಲೇಪನದಿಂ ಪಾನಾಂಗದೊಳಂ ತಾಂ ಪ್ರಯೋಗಿಸಲ್ ಕಳೆಗುಂ ತಜ್ಜಂಗಮವಿಷಮೆನಿತನಿತಂತುಂಗಗುಣಾಭರಣ ಮಂಗರಾಜನ ಮತದಿಂ
ವರ ವೈದ್ಯಶಾಸ್ತ್ರದೊಳ್ ತಾಂಪರಿಕಿಸಿ ಪಲತೇಱದೊಳಿಂತು ಜಂಗಮ ವಿಷಮಂಪರಿಹರಿಪೌಷಧ ಮಂತ್ರೋತ್ಕರಮಂ ವಿರಚಿಸಿದನಿಂತು ಮಂಗಕವೀಂದ್ರಂ
ರುಚಿರಮಣಿ ಪಿನದ್ಧಸ್ವರ್ಣಸಿಂಹಾಸನಸ್ಥಂವಚನ ನುತ ಸುಧಾಸಾರಾರ್ಪಿತಾಶೇಷ ಭವ್ಯಂಪ್ರಚಲದಮಲ ಶೋಭಾ ಚಾಮರಚ್ಛತ್ರಚಿಹ್ನಂರಚಿತ ಮಣಿನಿವಾಸಂ ಪಾಲಿಸುತ್ತಿರ್ಕೆ ನಮ್ಮಂ
ಗದ್ಯ. ಇದು ಸಕಲವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿ ಪಾರಗ ಶ್ರೀ ಪೂಜ್ತಪಾದ ಮುನೀಂದ್ರ ಚಾರುಚರಣಾರವಿಂದ ಗಂಧ ಗುಣಾನಂದಿತಮಾನಸಂ ಶ್ರೀಮದಖಿಲ ಕಲಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ಸರ್ವ ಜಂಗಮ ವಿಷ ಚಿಕಿತ್ಸಾಧಿಕಾರಂ ತ್ರಯೋದಶಂ


