EN | KA

Menu

ಅಭಿಜಾತ ಕನ್ನಡ ಡೇಟಾಬೇಸ್‌ ಯೋಜನೆಯ ಪ್ರಾರಂಭ

ಅಭಿಜಾತ ಕನ್ನಡ ಡೇಟಾಬೇಸ್‌ ಯೋಜನೆ ‘ಕರ್ಣಾಟ’ ಸಂಸ್ಥೆಯ ಆದ್ಯತೆಯನ್ನು ಪ್ರತಿನಿಧಿಸುತ್ತದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯು ೯ ರಿಂದ ೧೯ ನೇ ಶತಮಾನದವರೆಗಿನ ಕನ್ನಡ ಸಾಹಿತ್ಯದ ಸಮಗ್ರ ಡಿಜಿಟಲ್ ಕ್ಯಾಟಲಾಗನ್ನು ತಯಾರಿಸಲು ಪ್ರಯತ್ನಿಸುತ್ತದೆ, ಇದು ಸಂಸ್ಕೃತ ಸಾಹಿತ್ಯಕ್ಕೆ ಹೆಚ್ಚಿಗೆ ಮೀಸಲಾದ ‘ಪಂಡಿತ್’ ಯೋಜನೆಯನ್ನು ಹೋಲುತ್ತದೆ. ಕೃತಿಕಾರರು, ಅವರ ಕೃತಿಗಳು, ಕೃತಿಯ ಪ್ರಕಾರ, ಛಂದಸ್ಸು, ಕೃತಿಯ ಸ್ವರೂಪ, ಆಶ್ರಯದಾತ, ಕೃತಿಯ ಕಾಲ ಮೊದಲಾದ ವಿವರಗಳನ್ನು ಪಟ್ಟಿಮಾಡಲು ಡೇಟಾಬೇಸ್ ಗುರಿಯನ್ನು ಹೊಂದಿದೆ. ಇದಲ್ಲದೆ ಕೃತಿ ಯಾವ ಅಧ್ಯಯನ ವಿಭಾಗಕ್ಕೆ ಸೇರಿದ್ದು, ಧಾರ್ಮಿಕ ಸಂಬಂಧಗಳ ವಿವರ ಮೊದಲಾದವನ್ನೂ ಸೇರಿಸಲಾಗುತ್ತದೆ.

ವಿವಿಧ ಕನ್ನಡ ವಿಶ್ವಕೋಶಗಳಲ್ಲಿ ಈ ಮಾಹಿತಿ ಲಭ್ಯವಾಗುತ್ತಿದ್ದರೂ, ಅಗತ್ಯ ವಿವರಗಳನ್ನು ಒದಗಿಸುವುದರೊಂದಿಗೆ ಪೂರಕವಾದ ಡಿಜಿಟಲ್ ಪಟ್ಟಿಯ ರಚನೆಯನ್ನು ಮಾಡಿದಾಗ ವಿದ್ವಾಂಸರು ಮತ್ತು ಉತ್ಸಾಹಿಗಳಿಗೆ ಸಂಪನ್ಮೂಲಗಳನ್ನು ಗಣನೀಯವಾಗಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಯೋಜನೆಯು ಮೂವರು ಪ್ರಸಿದ್ಧ ಕನ್ನಡ ವಿದ್ವಾಂಸರ ಪರಿಣತಿಯಿಂದ ಪ್ರಯೋಜನ ಪಡೆಯುತ್ತದೆ:

ಸಿ.ಎಸ್.ಪೂರ್ಣಿಮಾ ಅವರು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅನುವಾದ ಅಧ್ಯಯನ ಬೋಧನ ಮತ್ತು ಸಂಶೋಧನ ಮಾಡುತ್ತಿದ್ದಾರೆ. ಕನ್ನಡ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಲು ತೊಡಗಿದ್ದಾರೆ. ಅವರ ಶೈಕ್ಷಣಿಕ ಅನ್ವೇಷಣೆಗಳ ಜೊತೆಗೆ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿ.ವೆಂಕಟರಾಮಣ್ಣ ದಕ್ಷಿಣ ಭಾರತೀಯ ಅಧ್ಯಯನದಲ್ಲಿ ಎಂ.ಎ. ವಿದ್ಯಾರ್ಥಿಗಳಿಗೆ ಇತಿಹಾಸವನ್ನು ಕಲಿಸುವುದರೊಂದಿಗೆ ದಕ್ಷಿಣ ಭಾರತದ ಇತಿಹಾಸ ಮತ್ತು ತುಲನಾತ್ಮಕ ಸಾಹಿತ್ಯದಲ್ಲಿ ಕೆಲಸ ಮಾಡಿದ್ದಾರೆ.

ಆರ್.ವಿ.ಎಸ್‌. ಸುಂದರಂ ಅವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ, ಈ ಯೋಜನೆಯನ್ನು ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಇದು ಅಭಿಜಾತ ಕನ್ನಡ ಸಾಹಿತ್ಯದ ಡಿಜಿಟಲ್ ಸಂರಕ್ಷಣೆ ಮತ್ತು ಪ್ರವೇಶಕ್ಕೆ ದಾರಿಮಾಡಿಕೊಡುತ್ತದೆ.

ಇನ್ನಷ್ಟು ಪ್ರಕಟಣೆಗಳು

Announcing the Upcoming Book Publications from karṇāṭa

ಜನವರಿ 8, 2026

ಪಂಪ ಭಾರತದ ಇಂಗ್ಲಿಷ್ ಅನುವಾದವನ್ನು ಕುರಿತ ಪ್ರಕಟನೆ

ಮಾರ್ಚ್ 7, 2025

ಶಾಸ್ತ್ರೀಯ ಕನ್ನಡ ಅಧ್ಯಯನದ ಅಂತಾರಾಷ್ಟ್ರೀಯ ಶಿಬಿರ ೨೭-೨೯ ಸೆಪ್ಟೆಂಬರ್‌೨೦೨೪

ಅಕ್ಟೋಬರ್ 2, 2024