VIII
ನಳಚರಿತ್ರೆ
ಸುರರ ದುಂದುಭಿ ಮೊಳಗೆ ಧರಣೀಸುರರುಲಿಯೆ ಮುರಹರನ ಕರುಣದಿತರುಣಿ ದಮಯಂತಿಯಳನೊಡಗೂಡಿದನು ನಳನೃಪತಿ
ಕೇಳಿದೈ ರಾಜೇಂದ್ರ ಧರ್ಮನೃಪಾಲ ತೊರೆದಳು ಸಕಲ ವಿಭವವಧೂಳಿ ಮುಸುಕಿದ ಮುಡಿಯ ಮಾಸಿದ ವಸನಗಳ ನೋಡಿಕೇಳಿದಳು ಪೂರ್ವೋತ್ತರವ ಭೂಪಾಲನವನಿಯನುಳಿದು ನಿನ್ನವನಾಲಯದೊಳೆಂತಗಲಿದನು ಹೇಳೆಂದಳಾ ಜನನಿ
ಕಪಟದಲಿ ಪುಷ್ಕರನು ರಾಜ್ಯವನಪಹರಿಸಿದನು ಜೂಜಿನಲಿ ನಳನೃಪತಿ ಸೋತಾರಣ್ಯಕೈದಿದನೊಂದು ವಸ್ತ್ರದಲಿಗುಪಿತದಿಂ ಬರೆ ಮುಂದೆ ಪಕ್ಷಿಗಳುಪಮೆಯಲಿ ಕೊಂಡೊಯ್ಯೆ ವಸನವಕೃಪಣತನದಲಿ ತನ್ನ ಸೀರೆಯೊಳೊಯ್ದನರ್ಧವನು
ಮರೆದು ಮಲಗಿದೆ ರಾತ್ರಿಯಲಿ ಎಚ್ಚರಿಸದೇ ನೃಪ ತೆರಳಿದನು ಕಾತರಿಸಿ ಕಂಬನಿಯೊಳಗೆ ಬಂದೆನು ಚೈದ್ಯನಗರಿಯಲಿಕರುಣಿ ಚಿಕ್ಕಮ್ಮನಲಿ ತಿಂಗಳುಹೊರೆದೆನೀ ದೇಹವನು ಇಲ್ಲಿಗೆಕರೆಸಿದಿರಿ ನೀವೆನುತ ಕಂಬನಿದುಂಬಿದಳು ತರಳೆ
ಏನನೆಂಬೆನು ತನ್ನ ಪುಣ್ಯದಹಾನಿಯನು ಎಲೆ ತಾಯೆ ಲೋಕದಮಾನಿನಿಯೊಳಾರುಂಟು ಎನ್ನವೊಲ್ ತೊಳಲಿ ಬಳಲಿದರುದಾನವಾಮರರೊಳಗೆ ಕಾಣೆ ಸಮಾನರನು ನಳನೃಪಗೆಯಿನ್ನಿದಕೇನ ಮಾಡುವೆನೆನುತ ಕಂಬನಿದುಂಬಿದಳು ತರುಣಿ
ಆರಿಗೆರಡೆಣಿಸಿದೆನೊ ಹಿರಿಯರಗಾರುಗೆಡಿಸಿದೆನೋ ವೃಥಾ ಮುನ್ನಾರ ನೋಂಪಿಗಪಾರವಿಘ್ನವ ಮಾಡಿ ಕೆಡಿಸಿದೆನೊಆರನಳಲಿಸಿದೆನೊ ತಪೋವ್ರತನಾರ ಜರೆದೆನೊ ತನ್ನ ನಿಜಸಂಸಾರವೀ ತೆರನಾಯ್ತು ಶಿವಶಿವಯೆನುತ ಮರುಗಿದಳು
ಕ್ಷಿತಿಯೊಳೆಲ್ಲಿಹನೋ ಪರಸ್ತ್ರೀರತಿಗೆ ಮನಸೋತನೋ ತಪಸಿನವ್ರತವ ಕೈಕೊಂಡನೋ ದನುಜರ ಬಲೆಗೆ ಸಿಲುಕಿದನೊವಿತಳಕಿಳಿದನೊ ಚೆಲುವಿನಮರಾವತಿಗೆ ನಡೆದನೊ ತೊರೆದು ನಳಭೂಪತಿಯ ಕಾಣೆನು ತನಗೆ ಗತಿಯೇನೆಂದಳಿಂದುಮುಖಿ
ಪತಿವಿಹೀನೆಗೆ ಸಲುವುದೇ ಸುವ್ರತ ಸುಭೋಜನ ಸೌಖ್ಯ ಸುಖಸಂಗತಿಗಳುಂಟೇ ತಾಯೆ ಭಾವಿಸಿ ನೋಡು ಚಿತ್ತದಲಿಸತಿಯರಿಗೆ ಪತಿದೈವವೆಂದಾಶ್ರುತಿವಚನವಾಡುವುದು ತನಗಾಪತಿಯನಗಲಿದ ಬಳಿಕ ಗತಿಯಿಲ್ಲೆಂದಳಿಂದುಮುಖಿ
ಧರೆಯೊಳೆಲ್ಲಿಹನೋ ವಿಚಾರಿಸಿಕರೆಸಿಕೊಡು ಎಲೆ ತಾಯೆ ಎನ್ನಯಪುರುಷನಿಲ್ಲದ ಬಳಿಕ ಬಿಡುವೆನು ತನುವನೆಂದೆನಲುಮರುಗಿದಳು ಮಗಳೆಂದ ಮಾತಿಗೆಕರಗಿ ಕಂಬನಿದೊಡೆದು ತನ್ನಯಪುರುಷನೊಡನಿಂತೆನಲು ಭೀಮನೃಪಾಲ ಚಿಂತಿಸಿದ
ಅರಸ ಕೇಳು ವಿದರ್ಭಭೂಪತಿಕರೆಸಿದನು ಭೂಸುರರನವರಿಗೆಪರಮವಸ್ತುವನಿತ್ತು ಕಳುಹಿದ ನಿಷಧಪತಿಯಿರವಶರಧಿಮೇರೆಯೊಳೆಲ್ಲ ಭೇದಿಸಿಕರೆದು ತಾರೆನಲವರು ಬರುತಿರೆಕರೆಸಿದಳು ದಮಯಂತಿಯವರೊಡನೆಂದಳೀ ಮಾತ
ನಳನೃಪತಿ ನಿಜರಾಜತೇಜವನುಳಿದು ತಾ ಪ್ರತಿರೂಪುದಾಳಿಹನಿಳೆಯೊಳಗ್ಗದ ಸಭೆಯೊಳಗೆ ನೀವೆಂಬುದೀ ನುಡಿಯುಹಳುವದಲಿ ಸತಿಯುಟ್ಟ ಸೀರೆಯಸೆಳೆಯುತರ್ಧವ ಕೊಂಡು ನಾರಿಯಕಳೆದು ಹೋದವರುಂಟೆಯೆನಲುತ್ತರವ ಪೇಳುವನು
ಆ ನುಡಿಯ ತಂದೆನಗೆ ನೀವನುಮಾನವಿಲ್ಲದೆ ಪೇಳೆನುತ ಸನ್ಮಾನದಿಂ ಬೀಳ್ಕೊಟ್ಟಳಂಗನೆ ತೆರಳಿದರು ಬಳಿಕಮಾನವೇಂದ್ರರ ಸಭೆಯ ನೋಡಿ ನಿಧಾನಿಸುತ ನಾನಾ ದಿಗಂತಸ್ಥಾನದಲಿ ನಗರಿಗಳ ಭೇದಿಸುತೈದಿದರು ಪಥವ
ಇಳೆಯಮರರಲ್ಲಲ್ಲಿ ಗಿರಿವನಗಳ ನಿರೀಕ್ಷಿಸಿ ಕೆಲವು ಋಷಿಗಳನಿಳಯಗಳ ನೋಡುತ್ತ ಕಾನನಗಳೆದು ಬೇಗದಲಿಜಲಧಿ ಮೇರೆಯ ಮಧ್ಯದಲಿ ಭೂವಳಯವೆಲ್ಲವ ಶೋಧಿಸುತ ತನುಬಳಲಿಕೆಯ ಭಾವಿಸದೆ ನಡೆದರು ಮುಂದೆ ಪಥವಿಡಿದು
ಮುಂದೆ ಬರುತಿರೆ ಕಂಡರೊಬ್ಬನಸಂದ ಯಾಚಕ ಭೂಸುರನನೆಲ್ಲಿಂದ ಬಂದಿರಿಯೆನಲಯೋಧ್ಯಾನಗರದಿಂದೆನಲುಕುಂದದಲ್ಲಿ ವಿಶೇಷವೇನುಂಟೆಂದೆನಲು ಪೇಳಿದನು ಮಖವಹುದೆಂದ ವಿಪ್ರನ ಮಾತಿನಿಂದೈದಿದರಯೋಧ್ಯೆಯನು
ಮರುದಿವಸ ಋತುಪರ್ಣ ಮುನಿಮುಖ್ಯರು ಸಹಿತಲೋಲಗದೊಳಿರೆ ಕಂಡರು ಮಹಾಸಭೆಯೊಳಗೆ ಹೊಕ್ಕರು ಎಂದು ಕೈನೆಗಹಿಹಿರಿಯರಿದೆ ಸಾಮಾಜಿಕರು ಸಚ್ಚರಿತರಿದೆಲಾ ಕೇಳಿ ನೀವೆಂದುರುತರವ ಗಂಭೀರವಾಕ್ಯದೊಳೆಂದನಾ ವಿಪ್ರ
ಹಳುವದಲಿ ಬಂದಲಸಿ ಮಲಗಿದಕುಲಸತಿಯ ವಸನಗೊಳಗರ್ಧವಕಳೆದುಕೊಂಡೊಯ್ದಗಲಿ ಪೋದವರುಂಟೆ ರಾತ್ರಿಯಲಿಇಳೆಯನಾಳುವ ನೃಪರ ಸತ್ಯದಬಳಕೆಗಿದು ಲೇಸಲ್ಲವೆನೆ ಮನವಳುಕಿ ನಸುನಗೆಯಿಂದ ನುಡಿದನು ಒಲಿದು ಬಾಹುಕನು
ಕ್ಷಿತಿಯಮರರೆಲ್ಲಿಂದ ಬಂದಿರಿಸತಿಯನಗಲಿದ ಬಾಹಿರನು ಅವಪತಿಯೆ ಸಾಕಂತಿರಲಿ ಬಿಡು ಋತುಪರ್ಣನೋಲಗದಿಅತಿಶಯದ ನುಡಿಗೇಳ್ದೆವಕಟಾಸತಿಗೆ ವಂಚನೆಯಲ್ಲವದು ನಿಜಪತಿಗೆ ಕೊರತೆಯದೆಂದು ಸೂಚಿಸಿ ನುಡಿದ ವಿಪ್ರರಿಗೆ
ಈತನಾರು ಕುರೂಪಿ ನೈಷಧನೀತನೋ ಸಭೆಯೊಳಗೆ ತಾನೀಮಾತನಾಡಲದೇಕೆ ಸಂಶಯವೆನುತ ಮನದೊಳಗೆದೂತರಾಲೋಚಿಸುತ ಬಂದರುಭೂತಳಾಧಿಪ ಭೀಮನೃಪ ಸಂಜಾತೆಯನು ಕಂಡೆರಗಿ ಕೈಮುಗಿದೆಂದರೀ ಹದನ
ದೇವಿಯರು ಚಿತ್ತೈಸುವುದು ಭುವನಾವಳಿಗಳೆಲ್ಲವನು ನೋಡಿದುನಾವು ಮುಂದೈತರಲು ಕಂಡೆವಯೋಧ್ಯೆನಗರಿಯನುಭೂವರನ ಋತುಪರ್ಣರಾಯನಸೇವೆಯಲ್ಲಿ ಕುರೂಪಿಯೋರ್ವನುಜೀವಸಖನಾತಂಗೆ ಬಾಹುಕನೆಂಬ ನಾಮದಲಿ
ತುರಗನಿಕರದ ಶಿಕ್ಷೆಯಲಿ ಮಂದಿರದ ಬಾಣಸಿತನದ ಕೆಲಸದಿನೆರೆ ನಿಪುಣನೆಂದೆನಿಸಿಕೊಂಡಿಹ ನೃಪನ ಸಭೆಯೊಳಗೆಪರುಠವಿಸಿ ನೀವೆಂದ ಮಾತನುವರಸಭಾಮಧ್ಯದಲಿ ನುಡಿಯಲ್ಕಿರದೆ ತಾನೀ ಮಾತನೆಂದನು ನಗುತ ಬಾಹುಕನು
ಸತಿಗೆ ವಂಚನೆಗೈದ ಪತಿ ತಾಮತಿವಿಕಳನಂತಿರಲಿ ಭೂಸುರಪತಿಯೆ ಕೇಳಾ ಸತಿಗೆ ಭಂಗವೆ ಪತಿಗೆ ಕೊರತೆ ಕಣಾಪತಿವ್ರತವನಾಚರಿಸುವಳು ನಿಜಪತಿಯ ಗುಣದೋಷಗಳನೆಣಿಪಳೆಗತಿಗೆ ಕಾರಣ ಸತ್ಯವೇ ತನಗೆಂದನವ ನಗುತ
ಪತಿಯ ತಪ್ಪೆಣಿಸುವ ಸತಿ ಪತಿವ್ರತೆಯೆ ಧರಣಿಯ ಪಾಲಿಸುವ ಜನಪತಿಯ ನಿಂದಿಸುವಾತ ಸೇವಕನೇ ನಿಧಾನಿಸಲುಪಿತನ ವಾಕ್ಯವನತಿಗಳೆವವನುಸುತನೆ ಗುರುವಿನ ಮಾತನೆಣಿಸದಪತಿತ ಪಾತಕಿ ಶಿಷ್ಯನೇ ತಾನೆಂದ ಬಾಹುಕನು
ಎನಲು ತಲೆದೂಗಿದಳು ಈ ಮಾತಿನಲಿ ಸಂಶಯವಿಲ್ಲದಿಹುದೆಂದೆನುತ ಕಬನಿದುಂಬಿದಳು ದಮಯಂತಿ ಮನದೊಳಗೆಇನಿಯನಹುದಾತನ ಪರೀಕ್ಷೆಗೆನೆನೆಯಬೇಕೆಂದನುವನೆಂದಾವನಿತೆ ತಂದೆಯನುಜ್ಞೆಯಲಿ ಕರೆದಳು ಸುದೇವನನು
ಇಳೆಯಮರ ಬಾರೆಂದು ವಿವರವತಿಳುಹಿ ಪಯಣವ ಮಾಡಿ ಕಳುಹಲುಹೊಳಲ ಹೊರವಂಟನು ಸುದೇವನು ಹಲವು ಯೋಜನವಕಳೆದು ಬರುತಿರೆ ಮುಂದೆ ಕಂಡನುಲಲಿತರತ್ನಪ್ರಭೆಯ ಗೋಪುರಹೊಳೆವಯೋಧ್ಯಾಪುರವನೀಕ್ಷಿಸಿ ಹೊಕ್ಕನವನಂದು
ಇಟ್ಟ ಫಣೆಯೊಳಗೆಸೆವ ಮಟ್ಟಿಯತೊಟ್ಟ ಹೊಸ ಯಜ್ಞೋಪವೀತದಕಟ್ಟಿಯಿರುಕಿದ ಕಕ್ಷಪಾಳದ ಬೆರಳ ಜಪಸರದಉಟ್ಟ ಧೋತ್ರದ ಬಳಲುಗಚ್ಚೆಯಪಟ್ಟುಗಚ್ಚರಿರೂಪಿನಲಿ ಪರಮೇಷ್ಠಿಯಂದದಿ ಬಂದನಾ ಋತುಪರ್ಣನೋಲಗಕೆ
ಆರು ನೀವೆಲ್ಲಿಂದ ಬಂದಿರಿದೂರದೇಶದ ಹಿರಿಯರಿಳೆಯೊಳುಕಾರಣವದೇನಿರುವುದಲ್ಲಿ ವಿಶೇಷವೇನೆನಲುಭೂರಮಣ ಕೇಳವನಿಯಲಿ ಸಂಚರಿಸುತ ಬಂದೆವು ವಿದರ್ಭಕೆಭೂರಿನೃಪರೈ ತರುತಲಿದೆ ಚತುರಂಗಬಲಸಹಿತ
ದೇಶದೇಶದ ಯಾಚಕರು ಧರಣೀಶರುನ್ನತ ತುರಗ ಗಜ ರಥಭೂಸುರರು ಮಂತ್ರಿಗಳು ದೈವಜ್ಞರು ಸುಗಾಯಕರುಭಾಸುರದ ತೇಜದಲಿ ಜನ ಸಂತೋಷದಲಿ ನಡೆತರುತಲಿದೆ ಪರವಾಸುದೇವನೆ ಬಲ್ಲ ದಮಯಂತಿಯ ಸ್ವಯಂವರವ
ಶಯನದಲಿ ಮಲಗಿದ ಸತಿಯನಡವಿಯಲಿ ನಳನೃಪನಗಲಿ ಹೋದನುನಯವಿಹೀನಳಿಗಾಗಿ ರಚಿಸಿದರಾ ಸ್ವಯಂವರವಪಯಣ ನಿಮಗುಂಟೀಗಳೆನೆ ನೃಪಬಯಸಿ ಹೆಣ್ಣಿನ ಮೋಹದಲಿ ವಾಜಿಯ ವರೂಥಕೆ ಹೂಡಬೇಳಿದ ಕರೆಸಿ ಬಾಹುಕನ
ಹೈಹಸಾದವೆನುತ್ತ ವಂದಿಸಿಬಾಹುಕನು ಮಂದಿರಕೆ ಬಂದು ವಿವಾಹವುಂಟೇ ಮರಳಿ ದಮಯಂತಿಗೆ ಜಗನ್ನಾಥಈ ಹದನವಾರಿಂದಲಾದುದೊದ್ರೋಹಿಯಾ ದಮಯಂತಿಯಿದು ಸಂದೇಹವಾಗಿದೆ ಎನುತ ಚಿಂತಿಸಿ ಬಂದನರಮನೆಗೆ
ಲಾಯದೊಳಗುತ್ತಮದ ತೇಜಿಯನಾಯ್ದು ಹೂಡಿದ ರಥಕೆ ಸೇರಿಸಿವಾಯುವೇಗದ ತೇರ ನಿಲಿಸಿದ ತಂದು ನೃಪನೆಡೆಗೆರಾಯನೇರಲು ಕರಿ ತುರಗ ರಥಪಾಯದಳ ಸಂದಣಿಸಿದುದು ನೆಲಬಾಯ ಬಿಡೆ ಹೊರವಂಟ ನೃಪ ಘನವಾದ್ಯರಭಸದಲಿ
ಜನಪನೆಂದನು ಬಾಹುಕಗೆ ಮಾನಿನಿಯನೀಕ್ಷಿಸಬೇಕು ನಿಲ್ಲದುಮನವಿದೊಂದೇ ದಿನಕೆ ನಡೆಸು ವಿದರ್ಭಪುರವರಕೆಎನಲು ನಕ್ಕನು ಮನದೊಳಗೆ ತನ್ನಿನಿಯಳಿಗೆ ವಿಧಿ ಬರೆದನೇ ಶಾಸನವ ಮೀರುವರಾರೆನುತ ಮರುಗಿದನು ನಳನೃಪತಿ
ಕರದ ವಾಘೆಯ ಸಡಿಲ ಬಿಡೆ ಮುಂಬರಿದು ಚಿಮ್ಮಿದುವಡಿಗಡಿಗೆ ರಥತುರಗ ಹಾಯ್ದುದು ತೇರು ಮುಂದಕೆ ಪವನವೇಗದಲಿಭರದೊಳೈತರೆ ನೃಪನ ಹಚ್ಚಡಧರೆಗೆ ಬೀಳಲು ಸಾರಥಿಯನೆಚ್ಚರಿಸಿದನು ಋತುಪರ್ಣನಿದಕಿನ್ನೇನು ಹದನೆನುತ
ಜೀಯ ಚಿತ್ತೈಸುರವಣಿಸಿ ನಿರ್ದಾಯದಲಿ ಹಿಂದುಳಿದುದಂಬರವಾಯುಗತಿಯಲಿ ದಾಟಿ ಬಂದೆವು ಹಲವು ಯೋಜನವಹೋಯಿತಾ ಮಾತೇಕೆ ನಡೆಯೆನೆರಾಯ ಮೆಚ್ಚಿದ ಸಾರಥಿಯ ಬಿರುದಾಯಕನು ನೀನೆಂದು ಕೊಂಡಾಡಿದನು ಬಾಹುಕನ
ಮುಂದೆ ಕಂಡನು ಬರುತಲಡವಿಯೊಳೊಂದು ತಾರೆಯ ಮರನನದರೊಳುಸಂದ ಫಲಪರ್ಣಂಗಳೆಣಿಸದೆ ಸೂತ ಪೇಳೆನಲುಇಂದೆನಗೆ ಮತಿದೋರದವನಿಪಕುಂದದೆನಿಸಿದ ಪೇಳು ನೀನೆನಗೆಂದೊಡಾ ಸಾರಥಿಗೆ ಲೆಕ್ಕವನರುಹಿದನು ನೃಪತಿ
ಇಳಿದು ರಥವನು ಬಂದು ವೃಕ್ಷದಬಳಿಗೆ ನಿಂದಾ ಶಾಖೆಗಳಲಿಹಫಲದ ಪರ್ಣಂಗಳೆಣಿಸಿದನಾ ಪದ್ಯಸಂಖ್ಯೆಯಲಿಒಲಿದು ಲೆಕ್ಕವ ಕಂಡು ತಾ ಮನನಲಿದು ನಳನೃಪ ಪುಷ್ಕರನ ತಾದೆಲುವ ಹದನಾಯ್ತೆನುತ ಬರೆ ಕಲಿಪುರುಷನಿದಿರಾದ
ಎಲೆ ನೃಪಾಲಕ ನಿನ್ನ ಸತ್ಯದನೆಲೆಯನೀಕ್ಷಿಸಬೇಕೆನುತ ಬಂದಳಲಿಸಿದೆ ಹಿರಿದಾಗಿ ನೋಯದಿರಿನ್ನು ಚಿತ್ತದಲಿತೊಲಗಿದೆನು ಇಂದಿನಲಿ ಶುಭಮಂಗಳಕರವು ನನಗಪ್ಪುದೆನಲಾನಳನೃಪತಿ ಖತಿಗೊಂಡು ಶಾಪವ ಕೊಡದೆ ಮನ್ನಿಸಿದ
ಮಾನವಾಧಿಪ ಕೇಳು ಲೋಕಕೆದೀನಜನಬಾಂಧವನು ನಳನೃಪಕಾನನದೊಳವನತ್ತ ಕಳುಹಿಸಿ ಬಂದು ರಥವೇರಿಆ ನರೇಂದ್ರಗಶ್ವಹೃದಯವತಾನರುಹಿ ಆತನಲಿ ಪಡೆದನುಸಾನುರಾಗದಿ ಭೂರುಹದ ಹೃದಯವನು ನಿಮಿಷದಲಿ
ಕರದ ವಾಘೆಯ ಕೊಂಡು ನೃಪಗೆಚ್ಚರಿಸಿ ನೂಕಿದ ತೇಜಿಗಳು ಹೂಂಕರಿಸಿ ಮನ ಮುಂಕೊಂಡು ಹಾಯ್ದುದು ಬಿಟ್ಟ ಸೂಟಿಯಲಿಭರದ ಗಮನವನೇನನೆಂಬೆನುನೆರೆದ ಜನವಲ್ಲಲ್ಲಿ ನಿಂದುದುಧರೆಯೊಳೀ ಸಾರಥಿಗೆ ಸರಿಯಾರರಸ ಕೇಳೆಂದ
ತುರಗಹೇಷಾರವದ ಗಾಲಿಯಧರಧುರದ ಚೀತ್ಕೃತಿಯ ಸಾರಥಿಯುರವಣೆಯ ರಥದಚ್ಚುಗಳ ಝೇಂಕಾರನಾದದಲಿಭರದಿ ಕೆಂಧೂಳಿಡುತ ಬರಲಾಪುರಜನರು ಸಂದಣಿಸಿ ನೋಡಲುಪರಿಚರರು ಬಂದರು ವಿದರ್ಭನೃಪಾಲಗರುಹಿದರು
ಬದನೇ ಋತುಪರ್ಣನೆನುತಾನಂದ ಮಿಗೆ ಕರೆಸಿದನು ಸಚಿವರಮಂದಿಯನು ಕಳುಹಿಸಲು ಕರೆತಂದರು ನಿಜಾಲಯಕೆಸಂದಣಿಯ ಪರಿಹರಿಸಿ ನೃಪ ಮುದದಿಂದ ಬೇರರಮನೆಯೊಳುಲುಪೆಗಳಿಂದಯೋಧ್ಯಾಪತಿಯ ಸತ್ಕರಿಸಿದನು ಭೀಮನೃಪ
ಕೇಳಿದಳು ದಮಯಂತಿ ವಾರ್ತೆಯತಾಳಿದಳು ಹರುಷವನು ಮನದಲಿಫಾಲಲೋಚನದಿಂದ ಫಲಿಸಿತು ಪುಣ್ಯವೆನಗಿಂದುಬಾಲೆ ಕೇಳೆನಗಿಂದು ಶೋಕಜ್ವಾಲೆ ಪರಿಹರವಾಯ್ತು ಮಂಗಳದೇಳಿಗೆಯು ಪಸರಿಸಿತು ಶುಭಕರವೆಂದಳಿಂದುಮುಖಿ
ಖಿನ್ನನಾದನು ಚಿತ್ತದಲಿ ಋತುಪರ್ಣ ಭೂಸುರನೆಂದ ಮಾತಿನಬಿನ್ನಣಕೆ ಮರುಳಾಗಿ ಬಂದೆನು ಮೂಢನಾದೆನಲಭಿನ್ನವಿಲ್ಲದೆ ಕೊಂಡ ನಾಚಿಕೆಗಿನ್ನು ಹದನೇನೆನುತ ಗುಣಸಂಪನ್ನ ಮರುಗಿದ ತನ್ನ ಮನದ ದುರಂತಚಿಂತೆಯಲಿ
ಓಲಗವನಿತ್ತನು ವಿದರ್ಭನೃಪಾಲ ಕರೆಸಿದ ಮಂತ್ರಿ ಬಾಂಧವಜಾಲವನು ಋತುಪರ್ಣ ಬಂದನು ಬಾಹುಕನು ಸಹಿತಸಾಲಮಣಿಪೀಠದಲಿ ಕುಳ್ಳಿರೆಬಾಲೆಯರ ಸಂಗೀತನೃತ್ಯದಕೇಳಮೇಳದಿ ರಂಜಿಸಿತು ಭೂಪಾಲನಾಸ್ಥಾನ
ನಾರಿಯರ ಮರೆಗೊಂಡು ಸಭೆಯಲಿಸಾರಥಿಯ ಕುಬ್ಜಾವತಾರವನೋರೆಗಣ್ಣಿನೊಳೀಕ್ಷಿಸುತ ದಮಯಂತಿ ಮನದೊಳಗೆಆರಿವನು ನಳನೃಪನ ಹೋಲುವಚಾರುಚಿನ್ನೆಗಳಿಲ್ಲ ತೋರ್ಕೆ ವಿಕಾರವಾಗಿದೆ ರೂಪೆನುತ ಚಿಂತಿಸಿದಳಿಂದುಮುಖಿ
ಒರೆದೊರೆದು ನೋಡಿದಳು ಸೂತನಸಿರಿಮೊಗದ ಕಾಂತಿಯನು ಕಳೆಗುಂದಿರುವ ಕಾಯವ ಕಪ್ಪಿನಿಂದುದುರಿರ್ದ ರೋಮದಲಿಪರಿಕಿಸಲ್ಕೀ ರೂಪು ಕೈಕೊಂಡಿರುವನೇ ನಳನೃಪತಿ ಶಿವಶಿವಮುರಹರನು ತಾ ಬಲ್ಲನೆಂದುಮ್ಮಳಿಸಿದಳು ತರಳೆ
ಹರೆದುದೋಲಗವಲ್ಲಿ ನಿಜಮಂದಿರಕೆ ಬಂದಾಲೋಚಿಸುವ ಮಿಗೆತರುಣಿಯರ ಕಳುಹಿಸಲು ಬಂದರು ಬಾಣಸಿನ ಮನೆಗೆಇರವ ಕಂಡರು ಪಾಕದಲಿ ಕೈಕರಣವನು ನೆರೆ ಸೂಪಕಾರನಪರಿಯ ಹೊಗಳುತ ಬಂದು ಬಿನ್ನೈಸಿದಳು ಭಾಮಿನಿಗೆ
ತಾಯೆ ಚಿತ್ತೈಸಿನ್ನವನ ಕರಣಾಯತನವೇನೆಂಬೆ ಲೋಕದಸ್ತ್ರೀಯರೊಳಗಿನ್ನಿಲ್ಲ ರಚಿಸುವ ಶಾಕಪಾಕದಲಿಮಾಯವನು ಮಿಗೆ ತಿಳಿಯಲರಿಯದುಪಾಯಂದಿದೀಕ್ಷಿಸಲು ಸಕಲ ರಸಾಯನವು ಪರಿಪಕ್ವವಾಗಿದೆ ಪೇಳಲರಿಯದೆಮಗೆ
ದಾದಿಯರು ಬಾಹುಕನ ಗುಣಗಳಭೇದಿಸಿದರೊಂದೊಂದು ಬಗೆಯ ತಳೋದರಿಗೆ ಬಿನ್ನೈಸೆ ನಿಶ್ಚೈಸಿದಳು ದಮಯಂತಿಆದಡವ ನಳನಹುದು ಗುಣದಲಿಭೇದಿಸುವೆನಿನ್ನೊಮ್ಮೆಯೆನುತ ವಿನೋದದಿಂದಾಡುವ ಕುಮಾರರ ತರಿಸಿದಳು ತರುಣಿ
ತರಳರಿಗೆ ನೀರೆರೆದು ಕಾಂಚನವರದುಕೂಲವನಿತ್ತು ದಿವ್ಯಾಭರಣಭೂಷಿತರಾದ ತನಯರ ದಾದಿಯರ ಕೈಯಪಿರಿದು ಕಳುಹಲು ಬಾಣಸಿನ ಮಂದಿರದ ಬಾಗಿಲ ಮುಂದೆ ಬಿಡೆ ಸಂಚರಿಸಿ ಸುಳಿದಾಡುವರ ಕಂಡನು ನೃಪತಿ ಹರುಷಿಸುತ
ತರಳರನು ಪಿಡಿದೆತ್ತಿ ತೊಡೆಯೊಳಗಿರಿಸಿ ಮುದ್ದಾಡಿದನು ನೋಡುತಸುರಿವ ಕಂಬನಿಗಳಲಿ ಬಾಹುಕ ಮರುಗುತಿರಲಂದುಮರೆಯ ಜಾಲಂಧ್ರದಲಿ ಕಂಡಳುತರುಣಿ ನಳನೃಪನೀತನಹುದೆಂದುರುತರದ ಪ್ರೇಮದಲಿ ಬಂದಳು ಜನನಿಯರಮನೆಗೆ
ತಾಯೆ ಸಂಶಯವಿಲ್ಲ ನೈಷಧರಾಯನೀತನು ಸೂತನಲ್ಲ ವಿಡಾಯದಲಿ ಬಂದಿಹನು ನೋಡು ಕುರೂಪಿವೇಷದಲಿರಾಯರೊಳಗಗ್ಗಳೆಯ ನಳನೃಪಮಾಯವನು ತೋರಿಹನು ಇವನ ನಿಜಾಯತವ ತಾ ಬಲ್ಲೆ ಕರೆಸೆಂದಳು ಸರೋಜಮುಖಿ
ಧರಣಿಪತಿಯನುಮತದೊಳಾತನಕರೆಸಿದಳು ನೃಪನರಸಿ ಬಾಹುಕನಿರದೆ ಬಂದನು ರಾಜಮಂದಿರದಲಿ ಕುಳ್ಳಿರಲುತರಳೆ ಮಾಸಿದ ಸೀರೆಯಲಿ ಗರಗರಿಕೆ ತಪ್ಪಿದ ಚೆಲುವಿನಲಿ ನಿಂದಿರಲು ಕಂಡನು ಸತಿಯ ತಲೆಬಾಗಿದನು ಲಜ್ಜೆಯಲಿ
ಹಿಮಕರಾನ್ವಯತಿಲಕ ವಸುಧಾರಮಣ ಪುಣ್ಯೋದಯ ಸುಭಾಷಿತವಿಮಲಗುಣ ಚಾರಿತ್ರಸನ್ನುತ ಸತ್ಯಸಂಚಾರಕುಮತಿ ಪುಷ್ಕರ ಮುನಿದನೇ ವಿಕ್ರಮದರಿದ್ರತೆ ಬಂದುದೇ ಸಾಕಮಿತಭುಜಬಲ ಪಾಲಿಸೆಂದಳು ಪತಿಗೆ ದಮಯಂತಿ
ಮುನ್ನ ಮಾಡಿದ ಕರ್ಮಫಲ ಋತುಪರ್ಣನಲಿ ಸೇವೆಯನು ಮಾಡುವುದುನ್ನತಿಕೆಯಲಿ ಬಂದುದೇ ಮಿಗೆ ಸಾರ್ವಭೌಮರಿಗೆತನ್ನ ಪುಣ್ಯದ ಹಾನಿ ತಾನಿದಕಿನ್ನು ಬಳಲುವುದೇನು ಗುಣಸಂಪನ್ನ ರಕ್ಷಿಸು ಸತಿಯನೆಂದೆರಗಿದಳು ಪದಯುಗಕೆ
ತುರುಬ ಹಿಡಿದೆತ್ತಿದನು ಸತಿಯಳಸುರಿವ ಕಂಬನಿದೊಡೆದು ನುಡಿದನುಬರಿದೆ ಚಿಂತಿಸಲೇಕೆ ಮಾನಿನಿ ಬಿಡು ಮನೋವ್ಯಥೆಯಅರಿಯದವಳೇಂ ನೀನು ಲೋಕದಸರಸಿಜಾಕ್ಷಿಯರೆಲ್ಲರಿಗೆ ವರಗುರುವಲಾ ಬರಿದೆನ್ನ ಬಯಸಲು ಬೇಡ ಹೋಗೆಂದ
ವಿನಯಹೀನನು ತಾನು ಮನದಲಿನೆನೆದು ತಪ್ಪಿದ ನಿರ್ದಯನು ಕಾನನದಿ ನಿನ್ನನು ಬಿಸುಟು ಕಳೆದ ದುರಾತ್ಮ ಬಾಹಿರನನೆನೆವರೇ ಬಿಡು ಮರುಳೆ ನಿನಗಿಂದಿನಲಿ ಮಾಳ್ಪಪುನಸ್ಸ್ವಯಂವರಮನಕೆ ಸರಿಬಂದವನ ನೀನೊಲಿಸೆಂದನಾ ನೃಪತಿ
ಎನಲು ಕರ್ಣಂಗಳಿಗೆ ಸಬಳದಮೊನೆಗಳಿರಿದಂತಾಗೆ ಸತಿ ಕಣ್ಣಿನಲಿ ತುಂಬಿದಳುದಕವನು ಹರಹರ ಶಿವಾಯೆನುತಎನಗೆಯಿನ್ನುಪುನಸ್ಸ್ವಯಂವರಮನದೊಳುಂಟೇ ನೀವು ಬರಬೇಕೆನುತ ವಾರ್ತೆಯ ಕಲ್ಪಿಸಿದೆ ಕೇಳೆಂದಳಿಂದುಮುಖಿ
ನಂಬಿದೆನು ಲೇಸಾಗಿ ಮನದೊಳಗಿಂಬುಗೊಂಡುದು ವಿಕೃತಿರೂಪಿನಡೊಂಬಿಯೇಕಿದು ಸಕಲಧರ್ಮವಿಚಾರವಂತರಿಗೆಅಂಬುಜಾಕ್ಷನ ರೂಪಿನಲಿ ಪ್ರತಿಬಿಂಬವಲ್ಲದೆ ನೀವು ಬಯಲಾಡಂಬರದ ನುಡಿಯೇಕೆ ಸಾಕಿನ್ನೆಂದಳಿಂದುಮುಖಿ
ನಡೆಯುತೆಡಹಿದ ಪಟ್ಟದಾನೆಯಪಿಡಿದು ಕೊಲ್ಲುವರುಂಟೆ ನಂಬಿದಮಡದಿಯಲ್ಲವೆ ತಾನು ಬಿರುನುಡಿಯೇಕೆ ನಳನೃಪತಿಅಡವಿಯಲಿ ಕಡುನೊಂದು ದೇಹವಬಿಡದೆಯುಳುಹಿದೆನಿನ್ನು ಪ್ರಾಣದಗೊಡವೆಯಿನ್ನೇಕೆನುತ ಕಂಬನಿದುಂಬಿದಳು ತರಳೆ
ನೋಯೆ ನೊಂದಿಹ ಸತಿಯನಾಡಲುನ್ಯಾಯವೇನಿದು ನಿಮಗೆ ಕೇಳೆಲೆರಾಯ ನಿಮ್ಮನು ನೋಡೆ ಕಳುಹಿದ ಚರರ ದಿಕ್ಕಿನಲಿಮಾಯರೂಪಿದ ಕಾಣಲಾರದೆಬಾಯ ಬಿಡುತಿರಲಿನ್ನಯೋಧ್ಯೆಯರಾಯನಲಿ ನೂತನದ ಸಾರಥಿಯೆನಲು ಕೇಳಿದೆನು
ಆಗ ಭೂಸುರಪತಿ ಸುದೇವನಬೇಗಲಟ್ಟಿದೆ ನಿಮ್ಮ ಬಳಿಗೆ ಸರಾಗದಿಂದುತ್ತರಕೆ ಪ್ರತ್ಯುತ್ತರವ ಪೇಳ್ದಿರಲಈಗಲಿದು ಸಂಶಯವೆ ತಾನದಕಾಗಿ ಕರೆಸಿ ಸ್ವಯಂವರವ ನಿಮಗಾಗಿ ಪೇಳಿದೆನಿದರ ತಪ್ಪೇನೆಂದಳಿಂದುಮುಖಿ
ಜನನುತನೆ ಕೇಳಾದಿಯಲಿ ಯೌವನವ ನಿನಗೊಪ್ಪಿಸಿದೆನಲ್ಲದೆತನುಮನೋವಾಕ್ಕಾಯಕರ್ಮಂಗಳಲಿ ತಾನೆರಡನಿನಗೆ ನೆನೆದವಳಲ್ಲ ನೀನೇನನಗೆ ಗತಿಯೆದಿಹುದನರಿಯಾಜನಪ ರಕ್ಷಿಸು ಕೈಪಿಡಿದು ಸಲಹೆಂದಳಿಂದುಮುಖಿ
ಇದಕೆ ಯಮ ವರುಣಾನಿಲೇಂದ್ರರುಮದನಜನಕನೆ ಸಾಕ್ಷಿಯೆನೆ ಮೇಘದಲಿ ನುಡಿದನು ವಾಯು ನಳನೃಪನೊಡನೆ ಸತ್ಯವನುಚದುರ ಕೇಳ್ ದಮಯಂತಿ ಲೋಕದಸುದತಿಯೇ ತಿಳಿ ಲೋಕಪಾವನೆಯಿದಕೆ ಸಂಶಯವೇಕೆ ಪಾಲಿಸು ಸತಿಯ ನೀನೆಂದು
ಪವನನಾಡಿದ ನುಡಿಯ ಕೈಕೊಂಡವನಿಪತಿ ಬಿನ್ನೈಸಿದನು ಕೈತವಕದಲಿ ಕಲಿಯಿಂದ ನೊಂದೆನು ನಿಮ್ಮ ದರುಶನದಿಬವಣೆ ಹಿಂಗಿ ಕೃತಾರ್ಥನಾದೆನುಭುವಿಯೊಳಿನ್ನೇನೆನುತ ಪಕ್ಷಿಯಹವಣ ಮನದಲಿ ನೆನೆಯೆ ಬಂದುದು ದಿವ್ಯಮಯವಸನ
ಧರಿಸಿದನು ನಳನಾ ದುಕೂಲವಪರಿಹರಿಸಿತಾ ರೂಪು ಮುನ್ನಿನಪರಮತೇಜದ ದಿವ್ಯತನುವಿನೊಳೆಸೆದು ರಂಜಿಸಲುಸುರರ ದುಂದುಭಿ ಮೊಳಗೆ ಮಲ್ಲಿಗೆಯರಲ ಮಳೆ ಸೂಸಿದರು ಗಗನದಿಸುರಸತಿಯರಕ್ಷತೆಯ ತಳಿದರು ಹರಸಿ ನಳನೃಪೆಗೆ
ಸುರರು ಕೊಂಡಾಡಿದರು ಯಮ ಭಾಸ್ಕರ ವಿರಿಂಚಾದಿಗಳುಲಿಯೆ ವರತರುಣಿ ಬಂದೆರಗಿದಳು ಪತಿಯಂಘ್ರಿಯಲಿ ದಮಯಂತಿಹರುಷದಲಿ ಬಿಗಿಯಪ್ಪಿದನು ಭೂಸುರರು ಸಂಭ್ರಮಿಸಿದರು ವರಪುರದರಸ ಚೆನ್ನಿಗರಾಯ ಸಲಹಿದನವರ ಕರುಣದಲಿ


