EN | KA

Menu

IX

ನಳಚರಿತ್ರೆ

ಕದನದಲಿ ಪುಷ್ಕರನ ಬಲವನುಸದೆದು ಜೂಜಿಂ ಗೆಲಿದು ರಾಜ್ಯವಮುದದಿ ಪಾಲಿಸುತಿರ್ದನಾ ಸತಿಸಹಿತ ನಳನೃಪತಿ

ಕೇಳು ಪಾಂಡುಕುಮಾರ ನಳಭೂಪಾಲನಭ್ಯುದಯವನು ಮಂಗಳದೇಳಿಗೆಯನೇನೆಂಬೆ ದಮಯಂತಿಯ ಮಹೋತ್ಸವವಲೀಲೆಯಲಿ ಮಜ್ಜನವ ಮಾಡಿ ದುಕೂಲಮಣಿಭೂಷಣವ ಧರಿಸಿ ಚಡಾಳಿಸುವ ಕಾಂತಿಯಲಿ ಸಿಂಹಾಸನದಿ ಕುಳ್ಳಿರ್ದ

ಈತನಾರು ಪಿತಾಮಹನೊ ಪುರುಹೂತನೋ ಮನ್ಮಥನೋ ಲಕ್ಷ್ಮೀನಾಥನೊ ಚಂದ್ರಮನೊ ಶಂಕರನೋ ಮಹಾದೇವಈತನೇ ನಳನೃಪತಿ ಭೂವಿಖ್ಯಾತನೆಲ್ಲಿಂದಿಲ್ಲಿ ಬಂದನುಪೂತು ಮಝರೇ ಎನುತ ಕೊಂಡಾಡಿತು ನೃಪಸ್ತೋಮ

ಬಂದು ಕಂಡುದು ನಿಖಿಳಪುರಜನವಂದು ಕಾಣಿಕೆಗೊಟ್ಟು ಮುದದಲಿಸಂದಣಿಸೆ ಋತುಪರ್ಣ ಬಂದನು ಮಂತ್ರಿಜನಸಹಿತಸಂದ ಮಣಿಕಾಂಚನ ಸುವಸ್ತುವತಂದು ಸಮುಖದೊಳಿರಿಸಿ ವಿನಯದಿನಿಂದು ಬಿನ್ನೈಸಿದನು ಕರಗಳ ಮುಗಿದು ನಳನೃಪಗೆ

ಸೋಮಕುಲ ನೃಪಸಾರ್ವಭೌಮ ಸನಾಮ ಮಂಗಳನಿಳಯ ಜಿತಸಂಗ್ರಾಮ ಧೀರ ವಿರೋಧಿಸಾಮಜಸಿಂಹ ದಯಾಶೀಲತಾಮಸನು ಮತಿಗೇಡಿ ಮಾನವಪಾಮರನ ಗುಣದೋಷವೆಣಿಸದೆಪ್ರೇಮದಿಂದೊಲಿದೆನ್ನ ನೀ ಸಲಹೆಂದು ಕೈಮುಗಿದ

ರೂಢಿಯಲಿ ನಾ ನಿಮ್ಮನರಿಯದಮೂಢಮತಿಯವಿವೇಕಿ ತುರಗವಹೂಡಿದಾಗಲೆ ರಥಕೆ ಆದಿಯೊಳರಿದೆನೇ ತಾನುಮಾಡಿದಪರಾಧಗಳನೊಂದನುನೋಡಲಾಗದು ಚಿತ್ತದಲಿ ಖಯಖೋಡಿಯಿಲ್ಲದೆ ಸಲಹಬೇಕೆಂದೆರಗಿದನು ಪದಕೆ

ಈ ಪರಿಯೊಳೆನಲಾ ನೃಪನ ಸಂತಾಪವನು ಪರಿಹರಿಸಿ ನಳನೃಪತಾ ಪಿರಿದು ಮಣಿಭೂಷಣಂಗಳನಿತ್ತು ನಸುನಗುತಕೋಪವಿನಿಸಿಲ್ಲೆಂದಯೋಧ್ಯಾಭೂಪನನು ಮನ್ನಿಸುವ ಸಮಯದಿತಾಪಸರನೊಡಗೊಂಡು ಬಂದನು ಒಲಿದು ಮೈತ್ರೇಯ

ಬಂದ ಮುನಿಗವನೀಶ ಚರಣದ್ವಂದ್ವದಲಿ ಚಾಚಿದನು ಮಕುಟವನಂದು ಪಿಡಿದೆತ್ತಿದನು ನಸುನಗುತಲ್ಲಿ ಕುಳ್ಳಿರ್ದಎಂದನೆಲೆ ನಳನೃಪತಿ ನಿನಗೆ ಮುಕುಂದನೊಲುಮೆಯು ಆವ ಕಾಲದಿಸಂದಿರಲುಯಿನ್ನಾವುದರಿದಿಲ್ಲೆಂದನಾ ಮುನಿಪ

ಕಲಿಪುರುಷನಿಂದಾದುದುಪಹತಿಲಲನೆ ಪುತ್ರರನಗಲಿ ಕಷ್ಟವಬಳಸಿದೆಯಲಾ ನೊಂದು ಸತ್ಯವ ಬಿಡದೆ ಸಂಚರಿಸಿಸುಲಭನಾದೆ ಕುಲಾಂಗನೆಯ ವ್ರತಫಲದ ಪುಣ್ಯೋದಯದಿ ನಿಜಸಿರಿಫಲಿಸಿತಿನ್ನೀ ಲೋಕದಲಿ ನಿನಗಾರು ಸರಿಯೆಂದ

ಹರಿಯ ನೆಲೆಗೆಡಿಸಿದನು ಪರಮೇಶ್ವರನ ಭಿಕ್ಷವನೆತ್ತಿಸಿದ ಸರಸಿರುಹಭವ ತಾ ಶಿರವ ಪೋಗಾಡಿದನು ಪೂರ್ವದಲಿಕರುಣಹೀನನು ನಿನ್ನ ಸೋಂಕಲುತೆರನ ಕಾಣದೆ ಹಲವು ದಿನ ಕಾತರಿಸಿ ಛಲದಲಿ ತೊಡಚಿಬಿಟ್ಟನು ಮನದ ಭೀತಿಯಲಿ

ಎಲ್ಲ ನೃಪರಂತಲ್ಲ ಲಕ್ಷ್ಮೀವಲ್ಲಭನ ಪ್ರತಿಬಿಂಬ ನಿನ್ನಲಿನಿಲ್ಲಬಲ್ಲನೆ ಕಲಿಪುರುಷನತಿ ಬೇಗ ತೆರಳಿದನುಸಲ್ಲಲಿತ ಸಾಮ್ರಾಜ್ಯಪದವಿಂದೆಲ್ಲ ನಿನಗಹುದೆಂದು ಧರಣೀವಲ್ಲಭನ ಸತ್ಕರಿಸಿ ಕೊಂಡಾಡಿದನು ಮೈತ್ರೇಯ

ಎಂದು ಹರಸಿದನವನಿಪಗೆ ಮುದದಿಂದ ಮಂತ್ರಾಕ್ಷತೆಗಳಲಿ ಮುನಿವೃಂದ ಸಂತೋಷಿಸಿತು ನೃಪ ಸಿಂಹಾಸನದೊಳಿರಲುಇಂದುವದನೆಯರಾರತಿಯ ನಲವಿಂದಲೆತ್ತಿದರಲ್ಲಿ ಸತಿಯರುಸಂದಣಿಸಿ ಪಾಡಿದರು ಶೋಭಾನವನು ಮನವೊಲಿದು

ಊದಿದುವು ಕಹಳೆಗಳು ಶಂಖವುನಾದಿಸಿತು ಭೇರೀ ಮೃದಂಗ ವಿನೋದದಿಂ ರಂಜಿಸಿತು ನಾನಾ ವಾದ್ಯರಭಸದಲಿಮೇದಿನೀಶ್ವರರಾಗ ಮುಯ್ಗಳನೋದಿಸಿದರವನಿಪಗೆ ಸತಿಗಿನ್ನೈದೆತನ ಮಿಗಲೆಂದು ಹರಸಿತು ಮುನಿವಧೂನಿಕರ

ಅರಸ ಕೇಳು ವಿದರ್ಭಪತಿ ಮುನಿವರನುಪಚರಿಸಿದನು ಧರಣೀಸುರರಿಗಿತ್ತನು ಗೋಹಿರಣ್ಯ ಸುವಸ್ತುದಾನವನುಕರೆಸಿ ಕೊಟ್ಟನು ನೃಪತಿಗಖಿಲಾಭರಣಗಳ ಕರಿ ತುರಗ ರಥವನುಪುರಜನರ ಸಂತೈಸಿ ಕಳುಹಿದನಖಿಳಬಾಂಧವರ

ಹರೆದುದೋಲಗವಲ್ಲಿ ಯಾಚಕವರರು ಕೊಂಡಾಡಿದರು ಧರಣೀಶ್ವರರು ಕಳುಹಿಸಿಕೊಂಡು ಹೊಕ್ಕರು ತಮ್ಮನಗರಿಗಳಮರುದಿವಸ ಋತುಪರ್ಣ ನಳನೃಪಗೆರಗಿ ಕಳುಹಿಸಿಕೊಂಡಯೋಧ್ಯಾಪುರವ ಹೊಕ್ಕನು ಚೈದ್ಯಭೂಪತಿ ಮರಳಿದನು ಪುರಕೆ

ಇಂದುಮುಖಿ ದಮಯಂತಿಯೊಡನಾನಂದದಲಿ ನಳನೃಪತಿ ಮಾವನಮಂದಿರದಿ ತಾನೊಂದು ವತ್ಸರವಿದ್ದವಿಭವದಲಿಮುಂದೆ ನಮ್ಮಯ ನಿಷಧಪುರಿಗಾವಿಂದು ಗಮಿಸಲು ಬೇಕೆನುತ ತಾನಂದು ಭೀಮನೃಪಾಲನೊಡನಾಲೋಚಿಸಿದ ಹದನ

ದಂಡು ನಡೆಯಲಿ ನಿಷಧಪುರಿಗಾಭಂಡ ನೃಪ ಪುಷ್ಕರನ ಮಾತೇನಂಡಲೆದು ಫಲವಿಲ್ಲ ಸಾಕಿನ್ನೇಳಿಯೆಂದೆನುತಮಂಡಲಾಧಿಪನೆನಲು ಭೂಪರತಂಡವೆದ್ದುದು ಕೂಡೆ ಭಟರುದ್ದಂಡ ಕೈದುವ ಕೊಂಡು ನಡೆದರು ನಳನ ಸನ್ನೆಯಲಿ

ತುರಗ ಹಲ್ಲಣಿಸಿದುದು ರಥ ಮೋಹರಿಸಿ ತೆರಳಿತು ಸಂಗರಕೆ ಮದಕರಿಗಳಿಟ್ಟಣಿಸಿದುದು ಕಾಲಾಳಿರದೆ ಸಂದಣಿಸೆನೆನೆದುದಗಣಿತ ಸೈನ್ಯ ಸಾಗರಮೊರೆವವೋಲ್ ಗಂಭೀರಭೇರಿಗಳುರವಣಿಸೆ ಹೊರವಂಟ ನಳನೃಪನರಸ ಕೇಳೆಂದ

ತುರಗಚಯ ವೆಂಟಣಿಸಿ ಹೂಡಿದವರರಥಕೆ ಬಲವದು ಕೈದುವಧರಿಸಿಯೇರಿದನರಸ ಮಂಗಳವಾದ್ಯರಭಸದಲಿತೆರಳಿತಲ್ಲಿ ಮಹಾರಥರು ಸಂಹರಕೆ ಮುಂಚುವ ಭಟರ ಗಡಣದಿಧುರಕೆ ನಡೆದರು ಮುಂದೆ ಸಾರುತ ಗೌರುಗಹಳೆಯಲಿ

ಇದು ಕಣಾ ನಳನಂದು ವನವಾಸದ ಪಯಣವಾದಲ್ಲಿ ಮಕ್ಕಳಪದುಳದಿಂದೇರಿಸಿ ವಿದರ್ಭಕೆ ಕಳುಹಿಬಿಟ್ಟ ರಥಗದಗದಿಪ ನವರತ್ನನಿಚಯದೆದೊಳುದಿಸಿ ಮೆರೆವ ಸುವರ್ಣಕಲಶವಮದನ ನೆಲೆವೀಡೆನಿಸಿ ಮೆರೆದುದು ವರವರೂಥವದು

ಹೊಳೆವ ಸಿಂಧದ ಸಾಲ ಝಲ್ಲರಿಗಳ ಪತಾಕದ ಛತ್ರ ಚಮರಾವಳಿಗಳಿಂದಲಿ ಧಾತುಗುಂದಿದುದಭ್ರತಳ ಮುಸುಕಿಉಲಿದ ಮಂಗಳಪಾಠಕರ ಕಳಕಳಿಕೆ ಮಿಗೆ ಹೆಬ್ಬಲ ಛಡಾಳಿಸೆನೆಲ ಬಿರಿಯಲೈತಂದು ಬಿಟ್ಟುದು ನಿಷಧನಗರಿಯಲಿ

ದಾಳಿಯಿಟ್ಟರು ಹರಿದು ದಿಕ್ಕಿನಮೂಲೆಯವರಂಜಿದರು ಮುಮ್ಮೊನೆಯಾಳು ಕವಿದುದು ಹಿಡಿದರಗ್ಗದ ಸೆರೆಯ ಸೂರೆಗಳಕೇಳಿದನು ಪುಷ್ಕರನು ನಿಷಧನದಾಳಿ ಬರುತಿದೆ ಖತಿಯ ಭರದಲಿಕಾಳಗಕೆ ನಳನೃಪತಿ ಬಂದನೆನುತ ಮುಳಿದೆದ್ದ

ಆಗಲಿದಕೇನೀಗ ರಾಜ್ಯವನೀಗಿದಳಲಿನೊಳೊಮ್ಮೆ ಕದನಕೆತಾಗಿದನು ತಪ್ಪೇನು ಬರಹೇಳೆಮ್ಮ ಸೈನಿಕರಈಗಲೀತನ ಕಡಿದು ಸೆರೆಗಳಬೇಗ ಹಿಡಿಯೆಂದೆನುತ ನಿಜಬಲಸಾಗರವ ನೆರಹಿದನು ಕಳುಹಿದ ತನ್ನ ದಳಪತಿಯ

ಹರಿಗೆ ಖಡ್ಗ ಕಠಾರಿ ತೋಮರಪರಶು ಮುದ್ಗರ ಕುಂತ ಬಲ್ಲೆಹಪರಿಘ ಚಕ್ರ ತ್ರಿಶೂಲ ಕಕ್ಕಡ ಭಿಂಡಿವಾಳಚಯಸುರಗಿ ಸಬಳ ಮುಸುಂಡಿ ಮೊದಲಾದುರುತರದ ಕೈದುಗಳ ಪಟುಭಟರುರವಣಿಸಿ ತಾಗಿದರು ರಿಪುಮೋಹರವನನುಗೊಳಿಸಿ

ಹೊಕ್ಕರಾಹವದೊಳಗೆ ಮೊನೆಯಲ್ಲಿಕ್ಕಲಿಸಿ ಬರೆ ಕಂಡು ಮಝರೇಚುಕ್ಕಿಗಳಿರಾ ಎನುತ ಹೊಯ್ದರು ಬೆರಸಿ ಪಟುಭಟರಇಕ್ಕಿದರು ಸುರಗಿಯಲಿ ಕರಿಗಳತಿಕ್ಕಿ ತಿವಿದರು ತೇರುಗಳ ಮುರಿದಿಕ್ಕಿ ಪರಿಘದೊಳೊರಸಿದರು ಕಾಲಾಳ ಮೂದಲಿಸಿ

ಇಟ್ಟಣಿಸಿ ಬರೆ ತೇಜಿಗಳ ನೆರೆಕಟ್ಟಿ ಖಂಡಿಸಿ ಭಟರನಾ ಬೆನ್ನಟ್ಟಿ ಕಡಿದರು ಬೆರಸಿ ಬಹ ಬಲು ವೀರನಾಯಕರಹೊಟ್ಟುಗುಟ್ಟಿದರರುಣಜಲ ಸಾಲಿಟ್ಟುದವನಿಯೊಳಮಮ ನೆರೆ ಜಗಜಟ್ಟಿಗಳು ಕಾದಿದರು ರಣದಲಿ ಸುರರು ಬೆರಗಾಗೆ

ಸಾರಥಿಯನೆಚ್ಚರಿಸಿ ರಥಿಕರುತೋರಿದರು ಕೈಗುಣವ ಸರಳಿನಸಾರದಲಿ ರಿಪುಭಟರ ತಲೆಗಳ ತರಿದರಲ್ಲಲ್ಲಿಕಾರಿದರು ರಕುತವನು ತೇರಿನವಾರುವಂಗಳು ಮುಗ್ಗಿದುವು ರಣಧೀರರೆಚ್ಚಾಡಿದರು ಗಾಯದೊಳೊರಲಿತುಭಯಬಲ

ಕೆಡೆದ ತಲೆಗಳ ಸಿಡಿದ ಹುಬ್ಬಿನಕಡಿದ ತೋಳ್ಗಳ ನೆಗ್ಗಿದೆಲುಗಳಉಡಿದ ತೊಡೆಗಳ ಮಿದುಳ ಖಂಡದ ಹರಿದ ಕರುಳುಗಳಒಡೆದ ನೆತ್ತಿಗಳಿಂದ ರಕುತದಮಡು ಹರಿಯೆ ತರಹರಿಸಲಾರದೆಪಡೆಮುರಿದು ಬರುತಿರಲು ಕಂಡನು ಖಾತಿಯೊಳು ನಳನು

ಕರೆದು ಸಾರಥಿಗರುಹಿದನು ಪುಷ್ಕರನ ಬಲ ಕೈಮೀರಿ ಬರುತಿರೆತಿರುಹು ತೇಜಿಯನಿತ್ತಲಿವದಿರನೊರಸಿ ಬೆನ್ನಿನಲಿಕರುಳ ತೆಗೆವೆನೆನುತ ಚಾಪಕೆತಿರುವನೇರಿಸಿ ಸರಳಿನಲಿ ಬೊಬ್ಬಿರಿಯೆ ಧರೆ ತಲ್ಲಣಿಸಿತವನೀಪಾಲ ಕೇಳೆಂದ

ಮುರಿದ ಬಲ ಸಂವರಿಸಿಕೊಂಡುದುಮೊರೆವ ಕಹಳಾರವದ ಸನ್ನೆಯೊಳುರುಬಿತಾ ಬಲದೊಳಗೆ ಬೆರಸಿತು ನಳನ ಪರಿವಾರಅರಸನಾ ಸಮಯದಲಿ ಹೂಡಿದಸರಳ ಕೆನ್ನೆಗೆ ಸೇದಿ ಬಿಡೆ ಕತ್ತರಿಸಿ ಬಿಸುಟುದು ರಿಪುನೃಪರ ಶಿರಗಳನು ಖಂಡಿಸುತ

ಇಳೆ ಸರಳಮಯವಾಯ್ತು ಕೆಂಡದಮಳೆ ಕರೆದುದೆನೆ ಪುಷ್ಕರನ ಬಲದೊಳಗೆ ಬಿದ್ದುದನೇಕರಿಪುನೃಪಸೈನ್ಯ ಸಾಗರವುಮಲೆತವರ ಶಿರಗಳನು ಖಂಡಿಸಿತಲೆಯ ಚೆಂಡಾಡಿದರು ರಥಿಕರುಬಲುಗುದುರೆ ಕಾಲಾಳು ನೆಗ್ಗಿತು ನಳನ ಶರಹತಿಗೆ

ತೆರಹುಗೊಟ್ಟೊಳಹೊಗಿಸಿ ಸದೆದನುಬರಸಿಡಿಲು ಬಡಿವಂತೆ ರಿಪುಬಲಮುರಿದು ನಿಂದುದು ಗಾಯವಡೆದರು ವೀರಪಟುಭಟರುಹುರಿಯೊಡೆದು ಮೈದೆಗೆದು ಸಲೆ ಕೈಮುರಿಯೆ ಕೈದುವ ಬಿಸುಟು ಪಡೆ ಮೊಗದಿರುಹಲೆಚ್ಚನು ಕೊಚ್ಚಿದನು ಪುಷ್ಕರಚತುರ್ಬಲವ

ಗಾಳಿ ಮುರಿದೌಕಿದಡೆ ಘನಮೇಘಾಳಿ ನಿಲುವುದೆ ನಿಷಧಪತಿ ಶರಜಾಲದಲಿ ಕಡಿವಡೆದು ಬಿದ್ದರು ರಾಯರಾವುತರುಆಳು ಮುರಿದುದು ಕಂಡ ಮುಖದಲಿಹೇಳಲೇನಾನವರ ವಿಧಿಯನುಸೋಲದಲಿ ಮನಗುಂದಿ ಹಾಯ್ದರು ಬಿಟ್ಟ ಮಂಡೆಯಲಿ

ಆರು ಸಾಸಿರ ತೇರುಗಳು ಹದಿನಾರುಸಾಸಿರ ಕರಿಗಳಿಪ್ಪತ್ತಾರುಸಾವಿರ ತುರಗ ಕಾಲಾಳೊಂದು ಲಕ್ಷದಲಿಸೇರಿತಂತಕಪುರಿಗೆ ಸರಳಿನಸಾರದಲಿ ರಿಪುಸೇನೆ ಮುರಿದುದುಆರು ಬಲ್ಲರು ಮಿಕ್ಕ ಸೇನೆಯನರಸ ಕೇಳೆಂದ

ಮರನ ಹುತ್ತವನೇರಿದರು ಸಂಗರದಿ ಕೈದುವ ಬಿಸುಟು ಸಲೆ ಮೈಮರೆದು ತೇಜಿಯನಿಳಿದು ರಾವ್ತರು ಕೊರಳ ಸಲಹೆನುತಕರವ ಮುಗಿದರು ಜೋದರರು ಕೈಮರೆದು ಕದನದ ಗಾಯದಲಿ ನೊಂದೊರಲಿ ಬಾಯಲಿ ಬೆರಳನಿಟ್ಟುದ್ದ ವೈರಿ ಪಾಯದಳ

ಮುರಿದು ಬರುತಿದೆ ಜೀಯ ಬಲ ನಿಲಲರಿದು ನಮ್ಮದು ನಳನೃಪಾಲನಸರಹತಿಗೆ ನೆರೆ ಮುಗ್ಗಿ ಕೆಡೆದುದು ತಾರುತಟ್ಟಿನಲಿತರಹರವ ನಾ ಕಾಣೆನೀ ಮೋಹರಕೆ ಗತಿಯೇನೆನಲು ಪುಷ್ಕರಭರದಿ ಕೋಪದೊಳಂದು ಕರೆಸಿದನಾಗ ನಿಜಬಲವ

ಅರಸ ಕೇಳರಮನೆಗೆ ಬಂದನುಉರುತರದ ಕೈದುಗಳ ತರಿಸಿಯೆಧುರವಿಜಯರಿಗೆ ಕರೆಸಿಕೊಟ್ಟನು ಚಾಪಮಾರ್ಗಣವಕರಿತುರಗ ಕಾಲಾಳು ನೆರೆದುದುಮೊರೆವ ವಾದ್ಯದ ರಭಸದಲಿ ಸಂಗರಕೆ ಪಯಣವ ಮಾಡುತಿರ್ದನು ನೃಪತಿ ಕೇಳೆಂದ

ತೆಗೆದು ಹಿಂದಕೆ ನಿಷಧಪತಿ ಕಾಳಗದಿ ಹಿಡಿಸಿದ ಧರ್ಮಗಹಳೆಯವಿಗಡಪುಷ್ಕರನಿತ್ತ ಕೋಪಾಗ್ನಿಯಲಿ ಖತಿಮಸಗಿಹಗೆಗೆ ಜಯವಾಯ್ತಿದಿನಲಿ ತಾಹೊಗುವೆನಹಿತರ ಮುರಿವೆನೆನೆ ಕೈಮುಗಿದು ಬಿನ್ನೈಸಿದನು ವರಮಂತ್ರೀಶ ಪುಷ್ಕರಗೆ

ಅರಿಭಯಂಕರ ನೈಷಧನ ಸಂಗರದಿ ಗೆಲುವವರಾರು ದೇವಾಸುರರು ನಿಲಲರಿದರಸ ಮಿಕ್ಕಿನ ನರರ ಪಾಡೇನುಮರುಳುತನ ಬೇಡಿನ್ನು ನೃಪನನುಕರೆಸಿ ಸಂಧಿಯ ಮಾಡಿ ಜೂಜಿನಮರುವಲಗೆಯಲಿ ಗೆಲುವುದುಚಿತವಿದೆಂದನಾ ಮಂತ್ರಿ

ವೀರಸೇನನ ತನಯ ನಿಷಧನಸೇರಿಹಳು ಜಯಲಕ್ಷ್ಮಿ ಸೇನಾಭಾರದಲಿ ಋತುಪರ್ಣ ಚೈದ್ಯ ವಿದರ್ಭ ಮೊದಲಾದಭೂರಿನೃಪರೋಲೈಸುತಿದೆ ಸರಿಯಾರು ಸಂಗ್ರಾಮದಲಿ ನಳನಲಿಮೀರಿ ಕೈಮಾಡಿದರೆ ತಪ್ಪದು ಮರಣ ನಿನಗೆಂದ

ಎನಲು ಕೇಳ್ದಾ ಮಾತಿನಲಿ ಬಂದನು ನಳನ ಕಂಡನು ಮಹೀಪತಿಯೆನಗೆ ನಿಮ್ಮಲಿ ಕದನವೇತಕೆ ಸಾಕದಂತಿರಲಿಜನಪತಿಗಳೀಕ್ಷಿಸಲಿ ಮರುಜೂಜಿನಲಿ ನಿಪುಣರು ನಾವು ನಿಮ್ಮಲಿಮನಕೆ ಹರುಷಿತವಾಗಲಾಡುವೆನೆಂದ ನಸುನಗುತ

ಎಲವೊ ಕೇಳಿನ್ನಾದುದಾಗಲಿಕಲಹಕಂಜುವೆ ನೀನು ಜೂಜಿನಬಳಕೆಯಲಿ ಬಲ್ಲಿದನು ನಮ್ಮನು ಕರೆದೆ ತಪ್ಪೇನುಕಲಹವಾಗಲಿ ಜೂಜದಾಗಲಿಗೆಲುವೆ ನಿನ್ನನು ಕುಟಿಲಹೃದಯದನೆಲೆಯ ಬಲ್ಲೆನು ನಿನಗೆ ಮನವೊಲಿದುದನು ಮಾಡೆಂದ

ಅರಸ ಕೇಳಾ ಪುಷ್ಕರನು ತನ್ನರಮನೆಗೆ ಕರೆತಂದನಾ ಕಲಿಪುರುಷನಿಂದಲಿ ಮುನ್ನ ಗೆಲಿದಗ್ಗಳಿಕೆಯಲಿ ನೃಪನಪಿರಿದು ತಾ ಗೆಲಬಲ್ಲೆನೆಂದಾಪ್ತರನು ಕರೆಸಿದನೋಲಗದಿ ಕುಳ್ಳಿರಲು ತಂದರು ಸಾರಿಗಳನಿರಿಸಿದರು ಸಮ್ಮುಖದಿ

ನಳನೃಪತಿ ನೀ ಗೆಲಿದೊಡೀ ಭೂಲಲನೆಯನು ತಾ ಬಿಡುವೆ ಸೋತರೆಬಳಿಕ ದಮಯಂತಿಯನು ನನಗೊಪ್ಪಿಸುವುದೆಂದೆನಲುಇಳೆಯೊಳಿಹ ಭೂರುಹದ ಹೃದಯದನೆಲೆಯ ಬಲ್ಲಗ್ಗಳಿಕೆಯಲಿ ತಾಗೆಲುವೆನೆಂದೊಪ್ಪಿದನು ಮನದಲಿ ಧೈರ್ಯಪರನಾಗಿ

ಹೂಡಿದರು ಸಾರಿಗಳ ನೆತ್ತವನಾಡಿದರು ಮನ ನಲಿದು ಖಾಡಾಖಾಡಿಯಲಿ ದುಗ ಬಾರ ಇತ್ತಿಗವೆಂಬವ ರಭಸದಲಿಬೇಡಿದರೆ ಬೀಳುವುದು ದಾಯದರೂಢಿ ಜಳುಪಿಸ ಹೊಳೆವ ದಾಳದರೂಢಿಗಚ್ಚರಿಯಾಗೆ ನಳನೃಪ ಗೆಲಿದು ಬೊಬ್ಬಿರಿದ

ಖಿನ್ನನಾದನು ಪುಷ್ಕರನು ಹರುಷೋನ್ನತಿಯ ಬೀಳ್ಕೊಡಲು ಗುಣಸಂಪನ್ನನೇರಿದ ರತ್ನಸಿಂಹಾನವ ನಳನೃಪತಿಪನ್ನಗಾರಿಧ್ವಜನ ಕೃಪೆ ನಿನಗಿನ್ನು ಸಿದ್ಧಿಸಲೆಂದು ಮುನಿಜನರುನ್ನತದಿ ಕೊಂಡಾಡಿ ಹರಸಿದರೆಲ್ಲ ಧರಣಿಪನ

ದೇವದುಂದುಭಿ ಮೊಳಗಿದುದು ದಿವಿಜಾವಳಿಗಳಭ್ರದಲಿ ಸಂಧಿಸಿಹೂವಿನಲಿ ಮಳೆಗರೆದರಾಗ ನೃಪಾಲನಂಗದಲಿಕೋವಿದರು ಸುಜನಾವನೀಶರುಸೇವಿಸಲು ಧರೆ ನಲಿಯೆ ನೃಪ ರಾಜೀವಲೋಚನನಂತೆ ಸಿಂಹಾಸನದಿ ರಂಜಿಸಿದ

ಬಂದು ಕಂಡರು ಪುರಜನರು ನಲವಿಂದ ಕಾಣಿಕೆಗೊಟ್ಟು ಸುರಕುಲವೃಂದ ನಲಿಯಲು ಮಂತ್ರಿಬಾಂಧವರೆಲ್ಲ ಕೈಮುಗಿದುವಂದಿಸುತ ಕುಳ್ಳಿರಲು ಸಭೆಯಲಿತಂದರಾರತಿಗಳನು ನೃಪಗರವಿಂದಮುಖಿಯರು ಹರುಷದಿಂದೆತ್ತಿದರು ಮನವೊಲಿದು

ನಲವು ಹಿಂಗಿದ ಪುಷ್ಕರನ ಮನವೊಲಿದು ಮನ್ನಿಸಿ ಕರೆದು ನಳನೃಪಕಲಿಪುರುಷನಿಂದಾದುದುಪಹತಿ ನಿನ್ನ ತಪ್ಪೇನುಹಲವ ಹಂಬಲಿಸದಿರು ನಿನ್ನಲಿಚಲವು ನಮಗಿನಿತಿಲ್ಲ ಮುನ್ನವೊಲಿಳೆಯ ಪಾಲಿಸು ನಮ್ಮ ನೀನೋಲಗಿಸು ಹೋಗೆಂದ

ಎನಲು ಲಜ್ಜಿತನಾಗಿ ಪುಷ್ಕರವಿನಯದಲಿ ತಾನೆರಗಿ ನಿಮ್ಮಡಿವನಜದೆಡೆಗಪರಾಧಿಯಾದೆನಗಾವ ಗತಿಯಹುದೊಜನಪ ಸಲಹು ಕೃತಘ್ನನನು ಸಜ್ಜನಶಿರೋಮಣಿ ನೀನು ಗುಣಹೀನನನು ಕೃಪೆಯಲಿ ರಕ್ಷಿಸೆಂದೆರಗಿದನು ಪದಯುಗಕೆ

ತನುವ ಸೈಗೆಡೆದಿಹನನೆಬ್ಬಿಸಿಜನಪನೆಂದನು ಪೂರ್ವಫಲ ಸಂಜನಿಸಿತಿದಕಿನ್ನಾರು ಮಾಡುವುದೇನುಯೆನುತವನವಿನಯವಚನಕೆ ಮೆಚ್ಚಿ ಕೊಟ್ಟನುಕನಕಮಣಿಭೂಷಣಗಳನು ಕಾಂಚನವರೂಥವನಿತ್ತು ಮನ್ನಿಸಿ ಕಳುಹಿದನು ಮನೆಗೆ

ಕರೆಸಿದನು ಬಾಂಧವರ ಮಂತ್ರೀಶ್ವರರ ವಿದ್ವಾಂಸರ ನೃಪಾಲರಕರಣಿಕರನಾಪ್ತರನು ಹಿರಿಯರ ವೀರಪಟುಭಟರವರಸಚಿವ ಸಾಮಂತ ಮಲ್ಲರತರುಣಿಯರ ನಟ ಗಾಯಕರ ಸುಜನರಿಗೆ ಮನ್ನಿಸಿ ಕೊಟ್ಟನುಡುಗೊರೆಗಳ ಮಹೀಪಾಲ

ಕನಕರತ್ನಪ್ರಭೆಯ ಸಿಂಹಾಸನದೊಳೊಪ್ಪಿದನುಭಯಪಾರ್ಶ್ವದಿವನಿತೆಯರು ಚಿಮ್ಮಿದರು ಸಿತಚಾಮರಪವನಾ ನೃಪಗೆಜನಪತಿಗಳಿಕ್ಕೆಲದಲಿ ಮಂತ್ರಿಜನ ಪುರೋಹಿತ ಮಲ್ಲ ಗಾಯಕವನಿತೆಯರ ಗಡಣದಲಿ ಮೆರೆದುದು ನೃಪತಿಯಾಸ್ಥಾನ

ಚಿಂತೆ ಬಲಿದು ವಿದರ್ಭದಲಿ ದಮಯಂತಿ ಕೆಳದಿಯರೊಡನೆ ನುಡಿದಳುಪಂತದಲಿ ಪುಷ್ಕರನ ಗೆಲಿದನೋ ಸೋತನೋ ನೃಪತಿಕಂತುಪಿತನ ಕೃಪಾವಲೋಕನವೆಂತಿಹುದೊ ತನಗೆಂಬ ಸಮಯದೊಳಂತರಿಸದೈತಂದರಲ್ಲಿಗೆ ನಳನ ಮಂತ್ರಿಗಳು

ತಾಯೆ ಬಿನ್ನಹವಿಂದು ನಮ್ಮನುರಾಯನಟ್ಟಿದ ನಿಮ್ಮ ಬಳಿಗೆ ನಿರಾಯಸದಿ ಪುಷ್ಕರನ ಗೆಲಿದನು ಸಕಲರಾಜ್ಯವನುನ್ಯಾಯದಲಿ ಕೈಕೊಂಡು ನಿಮ್ಮನುಪ್ರೀಯದಿಂ ಬರಹೇಳಿದನು ಕಮಲಾಯತಾಂಬಕಿ ಬಿಜಯಮಾಡೆಂದೆರಗಿದರು ಪದಕೆ

ಕೇಳಿ ಹರುಷಿತೆಯಾದಳವರಿಗೆಪಾಲಿಸಿದಳಾಭರಣವಸ್ತುವಲೋಲಲೋಚನೆ ಬಂದು ತಂದೆಗೆ ನಮಿಸಿ ವಿನಯದಲಿನಾಳೆ ಪಯಣವ ಮಾಡೆ ನಿಷಧನೃಪಾಲನಲ್ಲಿಗೆ ತನ್ನ ಕಳುಹೆನೆಬಾಲಕಿಯ ನುಡಿಗೇಳಿ ತೆಗೆದಪ್ಪಿದನು ಭೀಮನೃಪ

ತೆಗೆಸಿದನು ಭಂಡಾರದಲಿ ಬಗೆಬಗೆಯ ವಸ್ತುವ ಸುಭಟರಿಗೆ ಝಗಝಗಿಪ ಹೊನ್ನಾಯುಧವ ನವರತ್ನಗಳ ತೊಡಿಗೆಗಳಸುಗುಣೆಯರು ಮೊದಲಾದ ಪರಿವಾರಗಳಿಗಿತ್ತನು ಪಯಣದಲಿ ತೇರುಗಳ ಶೃಂಗರಿಸಿದರು ಬಿರುದಿನ ಸಿಂಧುಗಳ ನೆಗಹಿ

ಬಿಗುಹನೇರಿಸಿ ಹಯಗಳನು ರೆಂಚೆಗಳ ಹಮ್ಮಿದರಾನೆಯಲಿ ಸತ್ತಿಗೆಗಳನು ಪಲ್ಲೈಸಿದರು ಮೇಲೆಸೆವ ಕಳಶದಲಿಸೊಗಸುದೋರುವ ಭಟರ ನೆರೆ ಕೈದುಗಳ ಹೊರಹಿನ ನೃಪರ ಬಳಿಯಲಿನೆಗಹಿ ಬೀಸುವ ಚೌರಿಗಳ ಸಂಭ್ರಮದೊಳೊದಗಿದರು

ಮಣಿರಥಂಗಳ ನಡುವೆ ಸುಳಿವಂದಣದ ಸಾಲಿನ ಮಧ್ಯದಲಿಯುರವಣಿಪ ಮತ್ತಗಜಂಗಳಲಿ ಮಾವುತರ ಕಳಕಳದಕುಣಿವ ತೇಜಿಯ ರಾವುತರ ಸಂದಣಿಗಳಲಿ ಚತುರಂಗಬಲವಿಟ್ಟಣಿಸಿ ನಡೆದುದು ಸಾಲುಸತ್ತಿಗೆಗಳ ವಿಡಾಯಿಯಲಿ

ನಾರಿಯರ ಸಂದಣಿಯು ನೆರೆದುದುತೇರಿನಲಿ ಕೆಲರಂದಣದಿ ಕೆಲರೇರಿದರು ವಾಜಿಗಳ ಗಜಕಂಧರದ ಗದ್ದುಗೆಯಸೇರಿ ನಡೆದರು ಮುಂದೆ ಘನಗಂಭೀರವಾದ್ಯದ ರಭಸ ತಾನದುಭೋರಿಡಲು ಹೊರವಂಟಳಂಗನೆ ಸಕಲ ವಿಭವದಲಿ

ಬಂದಳಾ ದಮಯಂತಿ ದೇವ ಮುಕುಂದ ರಕ್ಷಿಸುಯೆನುತ ತನ್ನಯನಂದನರ ಸಹಿತೇರಿದಳು ಮಣಿಮಯವರೂಥವನುಹಿಂದೆ ಮುಂದಿಕ್ಕೆಲದ ನಾರೀವೃಂದ ನಡೆಯಲು ಮನದ ಹರ್ಷಾನಂದದಲಿ ನಡೆತಂದು ಹೊಕ್ಕಳು ನಿಷಧಪಟ್ಟಣವ

ನೋಡುತಿರ್ದರು ಪುರಜನರು ನೆಲೆಮಾಡದುಪ್ಪರಿಗೆಯಲಿ ಮಿಗೆ ಕರುಮಾಡದೆಡೆಯಲಿ ಸೌಧಗಳ ಜಾಲಂಧ್ರಶಿಖರದಲಿನೋಡುವರ ತಾ ನೋಡಿ ನಸುನಗುತಾಡುವರ ನೃತ್ಯದಲಿ ಗಾನವಪಾಡುವರ ಕಂಡಲ್ಲಿ ನಲಿಯುತ ಬಂದಳರಮನೆಗೆ

ಬಾಗಿಲಲಿ ರಥವಿಳಿದು ಬಳಿಕ ಸರಾಗದಿಂದೊಳಹೊಗುತಿರಲು ಪುಣ್ಯಾಂಗನೆಯರಾರತಿಯನೆತ್ತಿದರತುಳವಿಭವದಲಿಭೋಗಿಶಯನನ ಕರುಣ ನಿಮಗುಂಟಾಗಿ ಸುಖಿಯಾಗೆಂದು ಹರಸಿದರಾಗ ಮುನಿನಿಕುರುಂಬವಕ್ಷತೆ ತಳಿದರಂಗನೆಗೆ

ಹರಕೆಗಳ ಕೈಕೊಳುತ ಸತಿ ಬಂದರಮನೆಯ ಹೊಕ್ಕಳು ನೃಪಾಲನಚರಣಕಮಲಕೆ ನಮಿಸಿ ಪಡೆದಳು ಪತಿಯ ಚಿತ್ತವನುಅರಸ ಕೇಳೈ ನಿಷಧಪತಿ ನಿಜತರುಣಿ ಸುತರೊಡಗೂಡಿ ಮಂಗಳಕರದೊಳೊಪ್ಪಿದ ಸಕಲದೇವಾಮರರು ಕೊಂಡಾಡೆ

ಪರಮಪುಣ್ಯೋದಯನು ಸದ್ಗುಣಭರಿತ ಸತ್ಯಸುಭಾಷಿತನು ಸಂಗರಸುಧೈರ್ಯನು ನಿತ್ಯನಿರ್ಮಲ ನಿಗಮಕೋವಿದನುಅರಸುಕುಲಪಾವನನು ನಳಭೂವರನು ಸಿಂಹಾಸನದಿ ರಂಜಿಸಿಧರೆಯನಾಳಿದ ವರಪುರದ ಚೆನ್ನಿಗನ ಕರುಣದಲಿ

ಮುನಿಕುಲಾಂಬುಧಿಚಂದ್ರ ರೋಮಶಮುನಿಪ ವಿಸ್ತರಿಸಿದನು ನಳಭೂಪನ ಚರಿತ್ರೆಯ ಕೇಳಿ ತಲೆದೂಗಿದನು ಯಮಸೂನುಮನಕೆ ಹರುಷಾನದವಾಯ್ತೆಲೆಮುನಿಪ ನಿಮ್ಮಡಿ ಕರುಣದಲಿಯಿಂದೆನಗೆ ಫಲಿಸಿತು ಪುಣ್ಯವೆಂದೆರಗಿದನು ಚರಣದಲಿ

ದೇವಮುನಿಗಳು ನೀವು ನಮ್ಮನುಪಾವನವ ಮಾಡಿದಿರಿ ನಮಗಿನ್ನಾವುದರಿದುಂಟಿನ್ನು ಪಾರ್ಥನ ಹದನವೇನರಿಯೆಆ ವಿವರವೆನಗಿನ್ನು ತಿಳುಹೆನೆದೇವನಗರಿಯೊಳಿಂದ್ರನಲಿ ಗಾಂಡೀವಿ ಸುಸ್ಥಿರನರಸ ಚಿಂತಿಸಬೇಡ ನೀನೆಂದ

ಎಲೆ ಯುಧಿಷ್ಠಿರ ಕೇಳು ಲೋಕದಲಲನೆಯರ ಪರಿಯಲ್ಲ ನಾಲ್ವರುಚೆಲುವೆಯರು ಗುಣಶೀಲಸಂಪನ್ನೆಯರು ಭುವನದಲಿನಳಿನಮುಖಿ ದಮಯಂತಿ ಸೀತಾಲಲನೆ ದ್ರೌಪದಿ ಚಂದ್ರಮತಿ ಕೋಮಲೆಯರಚ್ಯುತನಚ್ಚುಮೆಚ್ಚಿನ ರಾಜವನಿತೆಯರು

ನಿನಗೆ ಪಟ್ಟದ ಮಹಿಳೆ ದ್ರೌಪದಿವನಿತೆಯರ ಸಾಮ್ರಾಜ್ಯಸಂಪದವಿನಿತು ಸತಿಯಿಂದಾಗುವುದು ಕಾಮ್ಯಗಳು ಸಿದ್ಧಿಪುವುಜನಪ ಚಿಂತಿಸಬೇಡ ನಾಳಿನದಿನದಿ ಬಹ ನಿನ್ನನುಜನರ್ಜುನಮನದ ಚಿಂತೆಯ ಬೀಳುಕೊಡು ಸುಖಿಯಾಗು ನೀನೆಂದ

ಹರನು ನಿಮಗೆ ಸಹಾಯ ದೇವಾಸುರರು ನಿಮಗೊಳ್ಳಿದರು ಲಕ್ಷ್ಮೀವರನು ನಿಮಗಿನ್ನಂತರಂಗದ ಪರಮಸಖನಿರಲುಮರುಗಲೇಕಿನ್ನಾವುದರಿದೆಲೆಧರಣಿಪತಿ ಸಾಕಿನ್ನು ರಾಜ್ಯದಸಿರಿ ನಿನಗೆ ಬಂದಪುದು ರಿಪು ಸಂಹಾರವಹುದೆಂದ

ಎಂದು ಬುದ್ಧಿಯ ಪೇಳಿ ಮುನಿ ಯಮನಂದನನ ಬೀಳ್ಕೊಂಡು ತಾಪಸವೃಂದಸಹಿತಲ್ಲಿಂದ ಹೊರವಂಟನು ನಿಜಾಶ್ರಮಕೆಅಂದು ಯಮಳರು ಧೌಮ್ಯ ದ್ರೌಪದಿಸದ ಮುನಿಜನಸಹಿತ ಯಮಸುತಬಂದು ಹೊಕ್ಕನು ಪರ್ಣಶಾಲೆಯನಧಿಕ ಹರುಷದಲಿ

ಈ ಕಥೆಯನಾಲಿಸುವ ಜನರಿಗನೇಕ ಸುಖಸಾಮ್ರಾಜ್ಯ ಪದವಿಯನಾ ಕಮಲಲೋಚನನು ವರಪುರದರಸ ಪಾಲಿಸುವಲೋಕಪಾವನ ನಳನ ಕಥೆಯ ನಿರಾಕರಿಸಿದವರಧಿಕನರಕದಲೋಕವಾಳುವರೆಂದು ರೋಮಶ ನುಡಿದನರಸಂಗೆ

ಮೇದಿನಿಯೊಳೀ ಪುಣ್ಯಚರಿತೆಯನಾದರಿಸಿ ಬರೆದೋದಿ ಕೇಳುವಸಾಧುಸಜ್ಜನರಾದವರಿಗಹುದಖಿಳ ಕೈವಲ್ಯವೇದಗೋಚರ ಕೃಷ್ಣವರಪುರದಾದಿಕೇಶವನಮರವಂದಿತನಾದಿನಾರಾಯಣನು ಸಲಹುವನಖಿಳಸಜ್ಜನರ