VI
ಮದನತಿಲಕ
ವನಿತೆಯರುತ್ತಮ ಮಧ್ಯಮಕನಿಷ್ಠ ನಾಯಕಿಯರೆಂದು ಮೂಱುಂ ತೆಱದಿಂವನಿತೆಯರಪ್ಪರ್ ಜಗದೊಳ್ವಿನೂತೆ ನೀನವರ ಭೇದಮಂ ಕೇಳ್ ಪೇೞ್ವೆಂ
ಅಂಬೂದ್ಭೂತಾಸ್ಯಂ ಸನ್ಮಧ್ಯಂಕಂಬುಗ್ರೀವಂ ಪ್ರಾಕುಶ್ರೋಣೀಬಿಂಬಂ ಭೃಂಗಾಳೀವತ್ಕೇಶಂಬಿಂಬೋಷ್ಠಂ ಶ್ರೇಷ್ಠಸ್ತ್ರೀಗಕ್ಕುಂ
ನೆಗೞ್ದ ಚತುಃಷಷ್ಟಿಗಳೆರಡುಂ ನೆಟ್ಟಗೆ ವಿದಿತಂ ಕೂರ್ಮೆಗೆ ಮಿಗೆ ಕೂರ್ಪರ್
ಹಾವಭಾವವಿಲಾಸವಿಭ್ರಮಯುಕ್ತೆ ಚೆಲ್ವೆ ಮನೋಜ್ಞೆ ನಾನಾ ವಿಧೋಚ್ಛರತಿಪ್ರವೀಣೆ ಕಳಾಗಮಜ್ಞೆ ವಿದಗ್ಧೆ ನಿಃಕೇವಲಂ ಶುಚಿಯಕ್ಕುಮುತ್ತಮಮಪ್ಪ ನಾಯಕಿಯೆಂದು ಸದ್ಭಾವದಿಂದಱಿವಂ ಮನೋಭವನೆಂದುಮಿಂದುನಿಭಾನನೇ
ಇಂತೀ ಪೇೞ್ದ ಗುಣಂಗಳುಂ ನೆರೆಗೆ ಮೇಣ್ ಕುಂದಿರ್ಕೆ ಪೆರ್ಚಿರ್ಕೆ ಮೇಣಂತಾ ವೇಶ್ಯೆಯನಾವಗಂ ಗಣಿಕೆಯಂ ಮಾಡಿಟ್ಟು ನುಣ್ಮಾತಿನಿಂದಂತಾ ಬೋದರೊಳೊರ್ಬರಿರ್ಬರುಮದರ್ಕಿಕ್ಕೋಟಿಯೆಂಬಂತಿದೆಂದಂತಾಗಳ್ ನಿಜ ಕಾಂತೆಗೋತು ನುಡಿದಂ ಪ್ರತ್ಯಕ್ಷಪುಷ್ಪಾಯುಧಂ
ಉತ್ತಮವನಿತಾಗುಣಗಣವೆತ್ತಂ ತನಗಿಲ್ಲದಿರ್ದೊಡುಳ್ಳನಿತಂ ಸೋದಾತ್ತಂ ನಡೆವಳ್ ಮಧ್ಯಮೆವೃತ್ತಕುಚೆ ಕನಿಷ್ಠೆಯಿನಿತು ಗುಣಮಿಲ್ಲದವಳ್
ಎಲ್ಲಿದನೊಳ್ಳಿದಂ ಗುಣಿ ಸುರೂಪಿ ಕುಲಜ್ಞನುದಾರಚಿತ್ತನುಂಬಲ್ಲನೊಱಂಟನಲ್ಲನನೃತಂ ನುಡಿಯಂ ಪ್ರಭು ಶೌಚಿ ಪಾಸಮಂಕಲ್ಲದ ಮಾನಿ ಭೋಗಿ ಚದುರಂ ಸುಲಲಿತಾಕೃತಿ ಶೂರನಪ್ಪವಂಗಲ್ಲದೆ ಸೋಲ್ಗುಮೇ ಮನದೊಳುತ್ತಮನಾಯಕಿ ನೀಲಕುಂತಳೇ
ನಟ ವಿಟ ಹೀನ ದೀನ ವರಯಾಚಕ ಮಲ್ಲುಕ ಗೊಲ್ಲ ಧೀರ ಸದ್ಭಟ ಪಟು ಪುಷ್ಪ ಶಿಷ್ಟ ಸುಕವೀಂದ್ರ ಮುನೀಂದ್ರ ವಿದಗ್ಧ ಮುಗ್ಧ ನಿಚ್ಚಟ ನಟುವಾದಿ ವಂದಿಬುಧಮಾಗಧ ನಿತ್ಯನಿಕೃಷ್ಟ ಭಾವಲಂಪಟ ಕಟಕಸ್ಥ ಮಾನಧನನುಂ ಕುಡುವಂ ಗಡೆನಿಪ್ಪವಂ ಪ್ರಿಯೇ
ನಿನ್ನನ್ನಂ ನಿನ್ನನ್ನೆಂನಿನ್ನಾಂನುನನನ್ನ ನಿನ್ನನನ್ನೆಂ ನಿನ್ನಂನಿನ್ನನ್ನಾಂ ನಾಂ ನೀನೆನೆನಿನ್ನೆನ್ನಂ ನಿನ್ನೆನ್ನಂ ನನ್ನಿ ನಿನ್ನನಾನಿನನೆನ್ನೆಂ(?)
ದನುನಂದನನಿನನಂದನನಿನನಂದನನಿನನ ನಂದನನ ನಂದನನೆಂದಿನನಂದನನೆಂದನುದಿನದಿನನಿನನಾನನ್ನನಾದೆನಾದಂ ನಿನ್ನಿಂ (?)
ದಾನಾನಂದಂ ಮಾನಾಮಾನಂ ಮಾನಿನಿಮನೋಮುದ ಮದನನಿನನಂಮಾನಿನಿ ನಾನಾ ನಾಮದಿನೇನುದ್ದಾಮನನೆ ನೆನೆದೆನಿನಿದಾ ದಾಮಂ(?)
ಹರಹಾಸಧವಳಕಮಳಾಕರಶರಧವಳಾಭ್ರಹಾರತಾರಾಚಳಪಾಂಡುರಪತ್ರಖಂಡ ತಾರಾಂಬರಗಂಗಾನಳಶಶಾಂಕಶಂಕರವಲಯಂ
ಖರಕಿರಣನ ತನಯನ ಖರಕಿರಣನ ದಶರಥನ ನಳನ ಜಲಜಜನ ಧರಾವರನ ಶಶಿಧರನ ಶಕ್ರನಚರಿತೆಯೆ ನಿಜಚರಿತವೆನಿಸಿದಾತನನೊಲ್ಗುಂ
ಭೀತಂ ಲೋಭಂ ಶಠಂ ನಿರ್ಗುಣಿ ಕಿಸುಗುಳಿಗಂ ನಿರ್ಲಜ್ಜಂ ಪಾಪಿ ಕಳ್ಳಂಬೂತೆಗ್ಗಂ ಕಾತರಂ ನಾಣಿಲಿ ಕುಲಿ ಗೞಪಂ ಱೋಡಗಂ ನೀಚನುಗ್ರಂವಾತಾತ್ಮಂ ಚಿಲ್ಲನೂನಂ ಪಿಸುಣಿಗನಳಿಪಂ ಸಂಚಳಂ ಪಾಱೊಱಂಟಂಮಾತಂ ಕಾಯಂ ಜಡಂ ವಂಚಕನುರದೞಿಯಾಳ್ ಮೂರ್ಖನಾಚಾರಹೀನಂ
ಓವೋವೋವೋ ಕೋವೋ ಪೋ ಪೋಪೋವೋ ನೋಪೋ ಪೋಯ್ಪೋಳ್ಗೋಲೋಕೋವೋಲ್ಪೋಯ್ಪೋ ಸೋವೊಂ ಕೊಳ್ಗೊಳ್ನೋವೊಂ ನೊಂದೋ ನೋರ್ಪೋ ಪೋರ್ವೋ(?)
ಒಲೆದೋರೆ ಪೊೞೆವೋರೆಲೆ ತೋತೋ ಪೋಗೆಂಬೊಡೆಯೋಡೆಂದೊಡೆ ಪೋಬೆಳ್ವಲೆಗೊಲೆವೋ ಪೂಣ್ವಡೆಪೊಲೆವೊಲೆವೋಕೆಂದೋಳ್ಗೆ ಕೊಳ್ಳೆನೊಡವೋಂ ಬೆಳ್ಪೋ(?)
ಎನಿಪವನನುತ್ತಮಸ್ತ್ರೀಜನವೋತೊಡಗೂಡರರ್ಥದಾಪೇಕ್ಷೆಯೊಳಿಂಬಿನೆ ಕೂರ್ಪಂತಿರ್ಪರದೇಂಘನಕುತ್ತಕ್ಕಳ್ಕಿ ಕಯ್ಪೆಮರ್ದುಂಬರವೋಲ್
ಒಡನೊಡನೆ ಮುಳಿದು ತಿಳಿವಳ್ಗುಡುಗದೆ ಕಿಱಿಕಿಱಿದನಱಿದು ಕುಡುವಂ ಕುಡವಂಕುಡದಂಗೆ ಸುರತಸುಖಮಂಪಡೆವಂಗೆ ವಿಮುಗ್ಧೆ ಮಧ್ಯಮಾಂಗನೆ ಸೋಲ್ಗುಂ
ಅೞಲಿಪಂ ಜಡಿವಂ ಕಡುಕೆಯ್ವಂ ಕೆಮ್ಮನೆ ಖಂಡಿಸಿ ಕಾಡುವಂಮುಳಿದು ದಂಡಿಪನಾಗಳೆ ಮೇಗಂ ತೋಱುವನಂತೆಯೆ ಮುಂತೆ ತಾಂತಿಳಿವನಸ್ಥಿರನೀಯನೆನಿಪ್ಪಂಗೊಲ್ದು ಕನಿಷ್ಠ ವಧೂಜನಂಸುೞಿಗುಮೆಂದನೆ ಭೂಪನೆನಿಪ್ಪಾ ಮನ್ಮಥಸನ್ನಿಭವಲ್ಲಭಂ
ಇದು ಸಕಲವಿಬುಧಜನವಿನುತ ಕಾವ್ಯಾಲಂಕಾರನೀತಿನಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜವಿರಚಿತಮುಮಪ್ಪ ಮದನತಿಲಕದೊಳ್ ಉತ್ತಮ ಮಧ್ಯಮ ಜಘನ್ಯ ನಾರಿಯರ ವರ್ಣನಂ ಷಷ್ಠಾಧಿಕಾರಂ ಸಂಪೂರ್ಣಂ


