EN | KA

Menu

III

ಮದನತಿಲಕ

ಸುರಮುನಿಯಕ್ಷರಾಕ್ಷಸಪಿಶಾಚಗಣಾಂಶಕಕಾಮಿನೀಜನಾಂತರದೊಳನೂನದಾನ ಮೃದುವಾಕ್ಯ ಮಹಾಮಹಿಮಾತಿವಕ್ತ್ರೆ ಸೌಂದರತರಪುಷ್ಪವಸ್ತ್ರವರಭೂಷಣೆ ಸತ್ಯರತೇಚ್ಛೆ ಸದ್ಗುಣಾದರೆ ಪತಿಭಕ್ತೆಯಾಗೆ ದಿವಿಜಾಂಶಕೆಯೆಂದಱಿ ನೀಂ ತಳೋದರೀ

ವಿನಯಂಗುಂದದೆ ಪಾಪದತ್ತೆಱಗದೊಳ್ಪಂ ತಾಳ್ದಿ ಪೆಂಪಿಗೆ ನೆಟ್ಟನೆ ತಾನಾಗರಮಾಗಿ ದಾನಗುಣಮುಂ ಶೌಚತ್ವಮುಂ ದೇವತಾರ್ಚನಮುಂ ಸದ್ಗುರುಭಕ್ತಿ...................................................................................... ಕಂಗನೆಯವಳ್ ನೀರೇಜಪತ್ರೇಕ್ಷಣೇ

ಶೃಂಗಾರಾನ್ವಿತೆ ಲುಬ್ಧೆ ಬೆಡಂಗಿನ ........................................................................ ರಂ ಸೊಬಗಿಂಗಾಗರಮಾದೊಡಱಿಗೆ ಯಕ್ಷಾಂಶಕೆಯಂ

ಪ .................................... ಕರಂ ಕೋಪಮುಂ ಪುಸಿಯುಂ ವಿಡಂಬದ ಪಾಱುಗೆಯ್ತನಮುಗ್ರವಿದ್ರೂಪಮುಂ ಕ ....... ರಾಕ್ಷಸಾಂಶಕೆಯೆಂದು ನೀನಱಿ ಧೂರ್ತೆಯಂ

ಪಿಸುಣಿ .........................................................ಚಾರಿಣಿ ಮದ್ಯಾವಸಥೆ ಪಿಶಾಚಾಂಶಕೆ ಭಾವಿಸು ನೀನವಳಂ ಮನೋ ......

(?)....................................ನೆಗೆತದಂಶಕ ತತಿ ನುಡಿ ಕೂಡಿ ಬಂದೊಡೆಸಂಕೀರ್ಣಾಂಶಕೆಯೆಂದಱಿಯುಧನಾ …

ಇದು ಸಕಲವಿಬುಧಜನವಿನುತ ಕಾವ್ಯಾಲಂಕಾರನೀತಿನಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜವಿರಚಿತಮುಮಪ್ಪ ಮದನತಿಲಕದೊಳ್ ದಿವಿಜಾಂಶಕಾದಿ ಷಡ್ವಿಧ ಸ್ತ್ರೀವರ್ಣನಂ ತೃತೀಯಾಧಿಕಾರಂ ಸಮಾಪ್ತಂ