EN | KA

Menu

IV

ಖಗೇಂದ್ರಮಣಿದರ್ಪಣ

ಸಂಗ್ರಹಾದಿ ಗಾರುಡಮಂತ್ರಾಧಿಕಾರಂ

ಶ್ರೀವರ ಸಪತ್ನಿತೋರಗದೇವಸಮೇತಾಂಗ ಪಾರ್ಶ್ವತೀರ್ಥಂಕರನಂಭಾವಯುತಂ ಬಂದಿಸಿ ತದ್ದೈವತದ ವಿಷಾಪಹಾರಮಂತ್ರಮನುಸಿರ್ವೆಂ

ಮಣಿಯುಂ ಮಂತ್ರಂ. ಮರ್ದುಂಫಣಿದಷ್ಟ ವಿಷಾಪಹಾರಮೆಂಬರದೆಲ್ಲಂಕ್ಷಣಿಕಂ ನನ್ನಿ ಜಿನೇಂದ್ರನಗುಣನಾಮಾಕ್ಷರ ವಿತರ್ಕ ಸಂಬಂಧತೆಯಿಂ

ವ ಎಂಬೀ ನಿಶ್ಚಯಬುದ್ಧಿಯಿಂ ಶೌಚ ಸ್ನಾನಾದ್ಯಂಗಳಿನಂಗಶುದ್ಧನೆ ವಲಂ ತಾನಾಗಿ ಮುನ್ನಂ ಲಸ

ನ್ಮೌನಂ ಶುದ್ಧಸಿತಾಂಬರಂ ಕ್ರಮದಿನಂತೆಯ್ತಂದು ಸಮ್ಮಾರ್ಜನ ಸ್ಥಾನಸ್ಥಂ ಸಕಲಕ್ರಿಯಾ ಪರಿಣತಂ ಸ್ವಚ್ಛಾಂತರಂಗಂ ಶುಭಧ್ಯಾನಂ ಮಾಂತ್ರಿಕನಂದು ಮಾೞ್ಪುದು ಬೞಿಕ್ಕಂ ನ್ಯಾಸಮಂ ಶ್ವಾಸದಿಂ

ವಾಮಕರಾಂಗುಷ್ಠದಿನಿಂಹ್ರಾಮೆಂಬಕ್ಕರವ ನಿಲಿಸಿ ತಕ್ಕ್ರಮದಿಂದಂಹ್ರೀಮೆಂಬುದು ಹ್ರೂಂ ಮಹಿತಂಹ್ರೌಮಾಹ್ರಃ ಪರಿಮಿತಂಗಳಂ ಬರೆ ಬೆರಲೊಳ್‌

ಮಂತ್ರಂ. ಹ್ರಾಂ ಹ್ರೀಂ ಹ್ರೂಂ ಹ್ರೌಂ ಹ್ರಃ ಇತ್ಯಂಗುಳಿನ್ಯಾಸಃ

ಪಂಚನಮಸ್ಕಾರದ ಪದಸಂಚಯಮಂ ಪ್ರಣವಪೂರ್ವಕಂ ಹೋಮಾಂತ್ಯಂಸಂಚಳಿಸದೆ ಪೂರ್ವೋಕ್ತ ಸುರಾಂಚಿತ ಶೂನ್ಯಂಗಳಂ ತದಗ್ರದೊಳಱಿವಂ

ಮುದದಿಂ ಕ್ರಮದಿಂ ಶೀರ್ಷಂವದನಂ ಹೃದಯಂ ಸ್ವನಾಭಿಯೆಸೆವಂಘ್ರಿಸ್ವಾಸ್ಪದ ರಕ್ಷ ರಕ್ಷಯೆಂಬೀಪದಂಗಳಂ ಪಠಿಸುವುದು ಯಥಾಕ್ರಮದಿಂದಂ

ಮಂತ್ರಂ. ಓಂ ನಮೋ ಅರಹತ್ತಾಣಂ ಹ್ರಾಂ ಶೀರ್ಷಂ ರಕ್ಷ ರಕ್ಷ – ಸ್ವಾಹಾ ಇತ್ಯಂಗನ್ಯಾಸಃ

ವ. ದಿಗ್ಭಂಧನಂ

ದ್ವಿ ಚತುರ್ಥಂ ಷಷ್ಠಮೆಂಬೀ ಸ್ವರದೊಳೆ ಪದಿನಾಲ್ಕಂತಿಮಸ್ಥಾನಮೆಂಬೀವಿಚಯಂ ತದ್ಬಿಂದುಯುಕ್ತಂಗಳನೆ ದೆಸೆಗಳೊಳ್‌ ನ್ಯಾಸಮಪ್ಪಂತೆ ಮಾೞ್ಪಂಗಚಲಧ್ಯಾನೈಕನಿಷ್ಠಂಗಿದುವೆ ಮೊದಲ ದಿಗ್ಬಂಧನಂ ಸರ್ವ ಕಾರ್ಯಕ್ಕುಚಿತಂ ತಾನೆಂದು ಪೇೞ್ದಂ ಪರಮಜಿನಪದಾಂಭೋರುಹದ್ವಂದ್ವಭೃಂಗಂ

ವ. ಅವಾವುವೆಂದೊಡೆ

ಮಂತ್ರಂ. ಆಂ, ಈಂ, ಊಂ (ಎಂ) ಔಂ, (ಅಂ) ಅಃ, ತತ್ಸಂಯುಕ್ತಾಕ್ಷರಂ, ಕ್ಷಾಂ, ಕ್ಷೀಂ, ಕ್ಷೂಂ,

(ಕೈಂ) ಕ್ಷೌಂ, (ಕ್ಷ್ಯೋಂ) ಕ್ಷಃ, ಇಂತಿದು ದಿಗ್ಭಂಧನಕ್ರಮಂ

ಮಿಸುಪ ಸುವರ್ಣ ಪ್ರಾಕಾರಸಮುತ್ತುಂಗತ್ವಮದುವೆ ವಿಂಶತಿಹಸ್ತಂಎಸೆವ ಚತುರಸ್ರಮದು ಭಾವಿಸು ನೀಂ ಸ್ವರಸಂಗಸಂಯುತಂ ಶೂನ್ಯಯುತಂ

ವ ಅದೆಂತೆಂದೊಡೆ

ಮಂತ್ರಂ. ಹ ಹಾ ಹಿ ಹೀ ಹು ಹೂ ಹೃ ಹೃ ಹೇ ಹೈ ಹೋ ಹೌ ಹಂ ಹಃ

ವ ಈ ಮಂತ್ರದಿಂ ಸುವರ್ಣಪ್ರಾಕಾರಂ ತನ್ನ ಸುತ್ತಿರ್ದುದೆಂದು ಭಾವಿಸುವುದು

ಎಲ್ಲಾ ಸ್ವರಕೂಟಂಗಳಿನೊಳ್ಳಿದುದೆನಿಸಿರ್ಪ ಖಾತಿಕಾಕೃತಿಯಂ ನೀನಲ್ಲಿಯೆ ನೆನೆಯಮಳಿನ ಜಳಮುಳ್ಳತಿಭೀಕರ ತಿಮಿಂಗಿಲಾದಿ ಸಮೇತಂ

ವ ಅದೆಂತೆಂದೊಡೆ

ಮಂತ್ರಂ. ಕ್ಷ ಕ್ಷಾ ಕ್ಷಿ ಕ್ಷೀ ಕ್ಷು ಕ್ಷೂ ಕ್ಷೃ ಕ್ಷೆ ಕ್ಷೇ ಕ್ಷೈ ಕ್ಷೊ ಕ್ಷೋ ಕ್ಷೌ ಕ್ಷಂ ಕ್ಷಃ

ವ ಈ ಮಂತ್ರದಿಂದಗೞಂ ಧ್ಯಾನಿಸುವುದು

ಜ್ವಲದೋಂಕಾರ ರಕಾರೋಪಲಕ್ಷಿತಾನಲನೊಳಿರ್ದು ತನ್ನಂ ತಾಂ ನಿಶ್ಚಲದಗ್ಧನಾಗೆ ಭಾವಿಸಿಬೞಿಕ್ಕಮಮೃತಾಖ್ಯಮಂತ್ರದಿಂ ಶುಚಿದೇಹಂ

ವ ಅದೆಂತೆಂದೊಡೆ

ಓಂಕಾರ ರಕಾರಂಗಳೆಂಬ ಜ್ವಾಲೆಯನುಳ್ಳ ಅಗ್ನಿಮಂಡಲದೊಳ್‌ ತನ್ನಂ ಶುಚಿಯಾಗಿ ಧ್ಯಾನಂ ಮಾಡಿ

ಬೞಿಕ್ಕಮೃತಮಂತ್ರದಿಂದಮೃತಮಯಸ್ನಾನಮಂ ಮಾೞ್ಪುದು, ಅದೆಂತೆನೆ

ಅಮೃತ ಮಂತ್ರಂ :

ಓಂ ಅಮೃತೇ ಅಮೃತೋದ್ಭವೇ ಅಮೃತವರ್ಷಿಣೀ ಅಮೃತಂ ಸ್ರಾವಯ ಸಂ ಕ್ಲೀಂ ಬ್ಲೂಂ ದ್ರಾಂ

ದ್ರೀಂ ದ್ರಾವಯ ಹಂ ಝಂ ಝಿಂ ಕ್ಷಿಂ ಹ (ಹಂ) ಸಸ್ವಾಹಾ

ವ ಇದಱಿಂ ಸ್ನಾನಂ ಮಾಡಿ ಬೞಿಯಂ

ಸನ್ನುತಮಪ್ಪ ತನ್ನ ಶಿರಸ್ಸುರಭೂಧರದಗ್ರದಲ್ಲಿ ದೇವನ್ನಿಲೆ ಪಾರ್ಶ್ವತೀರ್ಥಕರನೊಪ್ಪದೊಳಿಂದ್ರಸಮೂಹಮೞ್ತಿಯಿಂಮುನ್ನೆ ಸದುಗ್ಧವಾರ್ಧಿಯ ಪಯೋಮಯದಿಂ ನೆಱೆ ಮಜ್ಜನಂ ಕರಂನನ್ನಿಯೆನಲ್ಕೆ ಮಾೞ್ಪವೊಲಮೀಕ್ಷಿಸು ಚಿತ್ತದೊಳಂದು ನಿನ್ನುಮಂ

ತಜ್ಜಲಸೇಕದಿಂದೆ ಸುಪವಿತ್ರತೆವೆತ್ತುದು ದೇಹಮೆಂಬ ತನ್ನುಜ್ಜುಗದಿಂದೆ ಚಿಂತಿಸೆ ಪುರಾಕೃತಪಾಪಸಮೂಹಮಾಗಳುಂಲಜ್ಜಿತನಂತಿರೋಡುಗುಮೆನಲ್ಕುೞಿದಾ ಗ್ರಹ ಸರ್ಪಶಾಕಿನೀದುರ್ಜ್ಜಯರೂಪಮಾದ ಬಹುಕಂಟಕಮೇಂ ನಿಲಲಾರ್ಕುಮೇ ಚಿರಂ

ಎಸೆವಾಹ್ವಾನಂ ಸ್ಥಾಪನಮಸದೃಶ ದೇವತೆಯ ಸನ್ನಿಧೀಕರಣಂ ಸುಪ್ರಸವಯುತಾರ್ಚನೆಯುಂ ತದ್ವಿಸರ್ಜನಾಖ್ಯಂಗಳೈದುಮುಪಚಾರಂಗಳ್‌

1 ಆಹ್ವಾನಂ

ಮಂತ್ರ ಓಂ ಹ್ರೀಂ ನಮೋಸ್ತು ಭಗವತಿ ಪದ್ಮಾವತಿ ಏಹಿ ಸಂ ವೌಷಟ್‌

ವ. ಈ ಮಂತ್ರದಿಂದೆ ದೇವತೆಯಂ ಸ್ಮರಿಸಿಯಾಹ್ವಾನಂ ಮಾಡುವುದು

2 ಸ್ಥಾಪನಂ

ಮಂತ್ರಂ. ಓಂ ಹ್ರೀಂ ನಮೋಸ್ತು ಭಗವತಿ ಪದ್ಮಾವತಿ ಅಕ್ರ ತಿಷ್ಠ ಠ (ಂ)

ವ ಈ ಮಂತ್ರದಿಂ ಸ್ಥಾಪನಂ ಮಾಡಿ ಪ್ರಾಕ್ಕಥಿತ ಮಂತ್ರಾಗ್ರದೊಳ್‌ ಮಮ ಸನ್ನಿಹಿತಾ ಭವ

ವೌಷಟ್‌ ಎಂಬೀ ಪದಮಂ ಯೋಜಿಸುವುದದೆಂತೆನೆ

3 ಸನ್ನಿಧೀಕರಣಂ

ಮಂತ್ರಂ. ಓಂ ಹ್ರೀಂ ನಮೋಸ್ತು ಪದ್ಮಾವತಿ ಮಮ ಸನ್ನಿಹಿತಾಭವ ವೌಷಟ್‌

ವ ಎಂಬೀ ಮಂತ್ರದಿಂ ಸನ್ನಿಧೀಕರಣದೊಳ್‌ ಪ್ರಯೋಗಿಸುವುದು.

4 ಅರ್ಚನಂ

ಬೞಿಯಂ ನಿರ್ಮಳವಾರಿಯಿಂ ಹಿಮಕರ ಶ್ರೀಗಂಧದಿಂ ಶುಭ್ರತಂಡುಳದಿಂ ಪುಷ್ಪಸಮೂಹದಿಂ ಮಧುಕರಘ್ರಾಣಾಂಗಧೂಪಂಗಳಿಂವಿಳಸದ್ದೀಪದಿನೊಳ್ಳಿತಪ್ಪ ಚರುವಿಂದಂ ಸತ್ಫಲವ್ರಾತದಿಂನಳಿನಾವಾಸೆಯನರ್ಚಿಪಂಗಭಿಮತಾರ್ಥಂ ಸಿದ್ಧಿಯಕ್ಕುಂ ದಿಟಂ

ವ. ಅದಱಿಂ ಭಕ್ತಿಪೂರ್ವಕಂ ಸೌಗಂಧ್ಯಮುಂ ಮನೋಹರಮುಮಪ್ಪರ್ಚನಾಸಮೂಹದಿಂದ

ರ್ಚಿಸುವುದಕ್ಕೆ

ವ ವಿಸರ್ಜನಂ

ಮಂತ್ರಂ. ಓಂ ಹ್ರೀಂ ನಮೋಸ್ತು ಭಗವತಿ ಪದ್ಮಾವತಿ ಸ್ವಸ್ಥಾನಂ ಗಚ್ಛ ಜಃ

ಇಂತಿದು ವಿಸರ್ಜನಂ

ಪೂರಕಮಾಹ್ವಾನಕ್ಕಾಧಾರಂ ಸ್ಥಾಪನವಿಧಾನ ಮುಖ್ಯಂಗಳ್ಗಂಸಾರಂ ಕುಂಭಕಮಕ್ಕುಮದಾರಯ್ಯೆ ವಿಸರ್ಜನಕ್ಕೆ ರೇಚಕಮಕ್ಕುಂ

ವ ಆಹ್ವಾನಕ್ಕೆ ಪೂರಕಮಾಧಾರಮಪ್ಪುದಱಿಂ ಪೂರಕಯೋಗದಿಂದಾಹ್ವಾನಂ ಮಾೞ್ದುದು ಸ್ಥಾಪನ

ಸನ್ನಿಧೀಕರಣ ಪೂಜೆಗಳೆಂಬಿವರ್ಕೆ ಕುಂಭಕಮಪ್ಪುದಱೆಂ ಕುಂಭಕದಿಂ ಸ್ಥಾಪನ ಮುಖ್ಯ

ಸನ್ನಿಧೀಕರಣಂಗಳಂ ಮಾೞ್ಪುದು. ವಿಸರ್ಜನಕ್ಕೆ ರೇಚಕಮಪ್ಪ ಕಾರಣದಿಂ ರೇಚಕಯೋಗದಿಂ ವಿಸರ್ಜನೆಯಂ

ಮಾೞ್ಪುದು – ಇದು ದೇವತಾರಾಧನಕ್ರಮಂ

ಶುಭ ಕಮಲಾಖ್ಯೆ ತಾನೆ ದಿಟಮಲ್ತೆ ಸುಬಿಂದುಕರಂ ವಿರಾಜಿತಂವಿಭವಸಮೇತನಪ್ಪ ಧರಣೇಂದ್ರನ ರೇಖೆ ಸುಲಕ್ಷಣಾನ್ವಿತಂತ್ರಿಭುವನವಲ್ಲಭಂ ವಿಮಳಪಾರ್ಶ್ವಜಿನಂ ಚರಮೋದಕ್ಷವರ್ಣಮಮಿಂತಭಿಹಿತ ಮಂತ್ರಿಯಂ ಬಿಡದೆ ರಕ್ಷಿಸಲಕ್ಷರಮೊಂದೆ ಸಾಲದೇ

ವಿದ್ಯಾದೇವತೆಯಿದೆ ತಾಂಹೃದ್ಯಂ ಹ್ರೀಂಕಾರಮಿದನನುಷ್ಠಿಸುವರ್‌ ಸಾವದ್ಯವಿದೂರರ್‌ ಗಡದೇಂಚೋದ್ಯಂ ಬುಧರಾತ್ಮಹಿತನೊಲ್ಲದರೊಳರೇ

ತ್ರಿಭುವನಜನಮೋಹನಕರಿಯಭಯಂ ತತ್ವಣವಪೂರ್ವಕಂ ನಮಯೆಂಬೀಯುಭಯಾಕ್ಷರಾಂ (ಕ)ತಮಪ್ಪೀವಿಭವಯುತಾಕ್ಷರದ ಮಹಿಮೆ ಸಾಧಾರಣಮೇ

ಸುಪಥನಭಿಮಾನಿಯಪ್ಪಂವ್ಯಪಗತ ಮದ ರಾಗ ಲೋಭ ದೋಷನೆನಿಪ್ಪಂಜಪಿಸೆ ಫಲದಾಯಿಯಕ್ಕುಂಸ್ವಪರಹಿತಂ ಪಠಿತ ಮಂತ್ರನಪ್ಪುದು ವಿಧಿಯಿಂ

ವ. ತನ್ಮಂತ್ರೊದ್ಧಾರಮೆಂತೆಂದೊಡೆ

ಮಂತ್ರಂ. ಓಂ ಹ್ರೀಂ ನಮಃ

ಪಂಚೋಪಚಾರವಿಧಿಯಿಂದಾ ದೇವತೆಯನಾರಾಧಿಸಲಾ ದೇವತೆಯಿಂದಭಿಲಷಿತಾರ್ಥಸಿದ್ಧಿಯಕ್ಕುಂ

ವ ಆ ದೇವತೆಯ ಮೂರ್ತಿಧ್ಯಾನಂ

ಜಿತರತಿರೂಪೆಯ ವಿತತ ಪನ್ನಗಶೇಖರಮೂರ್ತಿ ಲೋಚನತ್ರಿತಯ ಲಸಲ್ಲತಾಂಗಿಯೆನಿಪಂಬುಜವಿಷ್ಟರೆ ಕುಕ್ಕುಟಾಹಿ ರಾಜಿತ ವರ ವಾಹನಾರುಣತನುಪ್ರಭೆಯಂ ನುತ ಪಾಶ ಸತ್ಫಲಾಂಕಿತ ವರದಾಂಕುಶಪ್ರಥಿತ ಹಸ್ತೆಯನೀಕ್ಷಿಸು ಭಾವಶುದ್ಧಿಯಿಂ

ಶ್ರೀ ಜಿನಪದಾಬ್ಜ ಮಧುಕರರಾಜಿತ ಫಣಿನಿಕರರಾಜವಲ್ಲಭೆಯೆನಿಪೀಯಾಜಕವರ ಖಚರಾಮರಪೂಜಿತ ಪದಕಮಳೆ ಕಮಳೆ ಪಾಲಿಸುಗೆಮ್ಮಂ

ಕುಂದ ಕುವಲಯದರಲ್ಲಳಿಂಮಂದಾರಾದ್ಯಂಗಳಿಂದೆ ಪೂಜಿಸಿ ಬೞಿಯಂವಂದಿಪೆನನಿಂದ್ಯ ನರ ಸುರವಂದಿತ ಪದಪದ್ಮೆ ಪದ್ಮೆ ಪಾಲಿಸುಗೆಮ್ಮಂ

ವಿಕಸಿತ ಕಮಳನಿವಾಸೆಯನಕುಟಿಳ ಮಾನಸದೊಳೊಸೆದು ಬೇೞ್ಪುದು ವರಮಂಪ್ರಕಟಿತ ಭವ್ಯತ್ವ ಗುಣಂಸಕಳ ಕಳಾವತಿಯೆನಿಪ್ಪ ಪದ್ಮಾವತಿಯಂ

ವ. ಮೂರ್ತಿಧ್ಯಾನಪುರಸ್ಸರಂ ಭವ್ಯತಾಗುಣಯುಕ್ತಂ ಭಾವಶುದ್ಧಂ ಪ್ರಾರ್ಥಿಸಲಾ ದೇವತಾಪ್ರಸನ್ನತೆ

ಯಿಂದಿಷ್ಟಾರ್ಥಸಿದ್ಧಿಯಕ್ಕುಂ

ಅಂಗನ್ಯಾಸಮುದ್ರೆ-ಪ್ರಾಣಪ್ರತಿಷ್ಠಾಂತಮಂತ್ರಂ.

ಇಂತಶೇಷ ವಿಷಾಪಹರಣಕಾರಣಮೂರ್ತಿಯಪ್ಪ ಪಾರ್ಶ್ವತೀರ್ಥಂಕರನ ನಾಮಸಾಮರ್ಥ್ಯಮುಂ, ತದೀಯ

ಧ್ಯಾನಮಾಹಾತ್ಮ್ಯಮುಂ, ಮುದ್ರಾಸಮೇತಾಂಗನ್ಯಾಸ ದಿಗ್ಬಂಧನಾಂಗ ಶುದ್ಧ್ಯಮ್ನೃತ ಸ್ನಾನರ್ತಮಂತ್ರ ಸ್ವಕೀಯ

ಪವಿತ್ರತಾ ಶ್ರೀಪಾರ್ಶ್ವತೀರ್ಥಂಕರ ಶಾಸನ ಸಮಾರಾಧನ ಕ್ರಮಮಂ ತದೀಯ ಪ್ರತಿಷ್ಠಾವಿಧಿಯಂ ಪೇೞ್ವೆಂ

ಮಂತ್ರ ಓಂ ಹ್ರೀಂ

ವ. ತದೀಯ ಸ್ವರೂಪ ಬೀಜಾಕ್ಷರದ ಮಹಿಮೆ. ತದ್ದೇವೀ ಪ್ರಾರ್ಥನೆಯಿಂ ಯಾಜಕಂಗಿಷ್ಟ

ಸಿದ್ಧಿಯಕ್ಕುಮೆಂಬುದು ನಿರೂಪಿತಮಾಯ್ತು. ಇನ್ನಾ ಸರ್ವ ಸಾಧಾರಣಮಪ್ಪಂಗನ್ಯಾಸ ಮುದ್ರೆ

ಪ್ರಾಣಪ್ರತಿಷ್ಠಾವಿಧಿಯಂ ಪೇೞ್ವೆಂ

ಮಂತ್ರಂ. ಓಂ ಹ್ರೀಂ ಝಂ (ಕ್ವೀಂ), ವಂ ಮಂ ಹಂ ಸಂ ತಂ ಪಂ ದ್ರಾಂ ದ್ರಿಂ

ದ್ರಾವಯ ಹಂ (ಸ) ಸ್ವಾಹಾ. ಇತ್ಯಂಗನ್ಯಾಸಃ

ಮಂತ್ರಂ. ಝಂ ವಂ ಲಾಂ (ಲಃ) ಹ್ವಃ (ಹಃ) ಫಟ್‌ (ಲಕ್ಷ್ಮೀಂ) ಕ್ಷಿಂ ಹಃ ಅಸಿ ಆ ಉ ಸಾ

ಸ್ವಾಹಾ. ಇತಿ ಮುದ್ರಾ

ಮಂತ್ರಂ. ಓಂ ಆಂ ಕ್ರೋಂ ಹ್ರೀಂ ಅಸಿ ಆ ಉ ಸಾ ಯ ರ ಲ ವ ಶ ಷ ಸ ಆಯುಷ್ಯಪ್ರಾಣಾ ಇಹಪ್ರಾಣ

ಅಮುಷ್ಯಜೀವಾ ಇಹಸ್ಥಿತ (ಃ) ಅಮುಷ್ಯ ಯಂತ್ರ ಮಂತ್ರ ತಂತ್ರಸ್ಯ ಸರ್ವೇಂದ್ರಿಯಾಣಿ ಕಾಯ

ವಾಙ್ಮನಶ್ಚಕ್ಷುಃ ಶ್ರೋತ್ರ ಘ್ರಾಣ (ಪ್ರಾಣಾ) ಇಹೈವಾಯಾಂತು ಅಹಂ ಸುಖಂ ಚಿರಂ ತಿಷ್ಠಂತು ಸ್ವಾಹಾ.

ಇತಿ ಪ್ರಾಣಪ್ರತಿಷ್ಠಾ

ಮಂತ್ರಂ. ಓಂ ನಮೋ ಭಗವತೇ ಶ್ರೀ ಪಾರ್ಶ್ವತೀರ್ಥಂಕರಾಯ, ಧರಣೇಂದ್ರ ಪದ್ಮಾವತೀ ಸಹಿತಾಯ, ಸಂಸಾರಸಾಗರೋತ್ತರಣಾಯ, ಅಷ್ಟಲೋಕಪಾಲಪೂಜಿತಾಯ, ಅಷ್ಟವಿಧ ಕರ್ಮನಿರ್ಮೂಲನಕರಾಯ, ರಾಜತಸ್ಕರ ಕ್ರೂರಾರಿಮಾರಿ ಸಮಸ್ತ ಕ್ಷುದ್ರೋಪದ್ರವಾನ್‌ ಛಿಂದಿ, ಜ್ವರದಾಹಸಂತಾಪ ಅಕ್ಷಿರೋಗ ಕುಕ್ಷಿರೋಗ ವ್ರಣ ಸ್ಫೋಟಕಾದಿ ಸರ್ವ ರೋಗಾನ್‌ ಛಿಂದಿ, ಕೃತ್ರಿಮಾಕೃತ್ರಿಮ ಅಷ್ಟಕುಲಸರ್ಪ ಅಷ್ಟಾದಕ ವೃಶ್ಚಿಕಾಷ್ಟಾದಶ ಮೂಷಕವಿಷಾನ್‌ ಛಿಂದಿ, ಸ್ಥಾವರ ಜಂಗಮ ಕೃತ್ರಿಮವಿಷಾನ್‌ ಛಿಂಧಿ, ದೇವಗ್ರಹ ಭೂತಗ್ರಹ ಯಕ್ಷ ರಾಕ್ಷಸಗ್ರಹ ಸರ್ವಗ್ರಹ ಪೀಡಾನ್‌ ಛಿಂದಿ, ಶತಸಹಸ್ರಕೋಟಿ ಪಿಶಾಚ ರಾಕ್ಷಸ (ಸಂ)ಗ್ರಹ ಕೃತೋಪಸರ್ಗಾನ್‌ ಛಿಂದಿ, ಏಕಾಹಿಕ ದ್ವ್ಯಾಹಿಕ ಸಾಂವತ್ಸರಿಕಾದಿ ನಾನಾ ಜ್ವರಗ್ರಹಾನ್‌ ಛಿಂದಿ- ಆಂ ಹ್ರೀಂ ಕ್ರೋಂ ಫಟ್‌ ಸ್ವಾಹಾ- ಹೂಂ ಫಟ್‌ ಸ್ವಾಹಾ, ಠಂ.

ಈ ಪಠಿತ ಮಂತ್ರದಿಂದಂಶ್ರೀ ಪಾರ್ಶ್ವಜಿನೇಂದ್ರನಡಿದಳಿರ್ಗಳೊಳಂ ಸಲ್ಲಾಪಂ ಪುಷ್ಪಮನಿಕ್ಕಲ್ಕಾ ಪೂರ್ಣಂ ಮಂತ್ರಸಿದ್ಧಿಯಕ್ಕುಮಮೋಘಂ

ವ. ಈ ಮಂತ್ರದಿಂ ಪಾರ್ಶ್ವದೇವರ ಮುಂದೆ ನೂಱೆಂಟು ಪುಷ್ಪಮನಿಕ್ಕುವುದು, ಸರ್ವಸಿದ್ಧಿ

ಸ್ಮರರಿಪು ಜಿನೇಂದ್ರಚಂದ್ರಸ್ಮರಣೆಯೊಳಂ ಪಱಿವ ಮಾೞ್ಕೆಯಿಂ ಭವತಾಪಂಗರುಡಾಧಿಪತಿಧ್ಯಾನದಿನುರಗ ಮಹೋಗ್ರೋಗ್ರತರ ವಿಷಂಗಳ್‌ ಕಿಡುಗುಂ

ಗರುಡಮೂರ್ತಿಧ್ಯಾನಂ

ವ. ಅದೆಂತೆಂದೊಡೆ

ಕಪಿಳಾಕ್ಷಂ ಕಳಧೌತವರ್ಣನೆ ವರ (ಲ)ಂ ಪಾತಾಳಲೋಕಸ್ಥಿತಸ್ವಪದಾಗ್ರಂ ಜಗದಗ್ರಿಮಾಗ್ರ ಮಕುಟಾಗ್ರಂ ದೀರ್ಘ ಬಾಹುದ್ವಯಂಕುಪಿತೋಗ್ರಾಹಿ ವಿಭೂಷಣಂ ಗರುಡನಂತಾ ದೇವನಕಾರಮಂಸಪದಿ ಧ್ಯಾನಿಸೆ ಮಂತ್ರಿ ತನ್ಮಯನೆನಲ್‌ ಬಿಟ್ಟೋಡುಗುಂ ತದ್ವಿಷಂ

ವ. ಮತ್ತಮದಲ್ಲದೆಯುಂ

ವದನಂ ನೀಲೋತ್ಪಲಾಭಂ ಗಳಮೆಸೆವರುಣಚ್ಛಾಯೆಯಕ್ಕುಂ ವಲಂ ತೋರ್ಪಧರಂ ಧಾವಳ್ಯಮಾ ಮಧ್ಯಮೆ ಪರಿಕಿಸೆ ಬಾಲಾರ್ಕತೇಜಂ ವಿಲಾಸಾಸ್ಪದಮೂರುದ್ವಂದ್ವಮುಂ ನೀರದನಿಭಮೆಸೆವೀ ಜಂಘೆಗಳ್‌ ಶ್ವೇತವರ್ಣಂಪದಯುಗ್ಮಂ ಸ್ವರ್ಣವರ್ಣಂ ಗರುಡಪತಿಗಿಳಾಚಕ್ರದೊಳ್‌ ಧ್ಯೇಯರೂಪಂ

ವ. ಅಂತಾದೊಡಂ

ಮಾಲಿನೀ. ಸುರುಚಿರ ಗರುಡೇಂದ್ರಂ ಸ್ತೋಭನಾಶ್ಚರ್ಯಕರ್ಮಕ್ಕರುಣಮಯತನು ಸ್ವರ್ಣಾಭಮಾ ಸ್ತಂಭನಕ್ಕಂಸ್ಮರಿಸು ಮನುಜ ಮೇಘಶ್ಯಾಮನಾವೇಶದೊಳ್‌ ನೀಂಗರಳಹರಣಕಾರ್ಯಕ್ಕಂದು ಕುಂದೇಂದುವರ್ಣಂ

ವ. ಮತ್ತಂ

ತನ್ನುಮನಿಂದುವೆಂದು ಬಗೆದೊಪ್ಪುವ ತೋಳು ಭವಾಮೃತಂ ದಿಟಂಪನ್ನಗದಷ್ಟಮಸ್ತಕಮನೆಯ್ದುವ ಧಾರೆಯೆನಲ್ಕೆ ಭಾವಿಸುತ್ತುನ್ನತ ಮಂತ್ರಿ ಮಂತ್ರಿಸೆ ವಿಷಂ ನಿಲಲಾರ್ಕುಮೆ ಚಂದ್ರಿಕಾ ಸಮೂಹನ್ನಲಿದಿರ್ಪ ತಾಣದೊಳದೇಂ ನಿಲಲಾರ್ಕುಮೆ ಪೇೞ್ ತಮೋಗಣಂ

ವ. ಮತ್ತಂ

ರಜತಾದ್ರಿಯಂತೆ ಭಾವಿಸಿನಿಜದೇಹಮನೆಸೆವ ಮಂತ್ರದಿಂ ಮಂತ್ರಿಸು ಮೇಣ್ದ್ವಿಜರಾಜನಂತೆ ಭಾವಿಸೆವೃಜಿನಂ ಜಿನನಿದಿರೊಳಿರದವೋಲ್‌ ವಿಷಮೞಿಗುಂ

ಮಂಗವಿಭು ರಚಿತಮಿಂತಿದುಸಾಂಗಂ ಸಂಗ್ರಹಮೆನಲ್ಕೆ ಪೇೞ್ದಿಂತು ಬೞಿಕ್ಕಂಗನ್ಯಾಸಾದಿಯನಾಂಸಂಗತಮಪ್ಪಂತು ಪೇೞ್ದಪೆಂ ಜನಹಿತಮಂ

ಅಂಗನ್ಯಾಸವಿಧಾನಂ

ಉದ್ಧರಿಸುವುದಮೃತಾಕ್ಷರಪದ್ಧತಿಯಿಂ ಮಂತ್ರಿ ತನ್ನ ವರ ಕರತಳಮಂಶುದ್ಧಸ್ಫಟಿಕಾಕೃತಿಯಿಂಬುದ್ಧಿಯುತಂ ಬಗೆದು ಮಂತ್ರಿಸಲ್‌ ವಿಷಮೞಿಗಂ

ವ. ಅದೆಂತೆಂದೊಡೆ

ಊಹಾಪೋಹಾಭಿಯುಕ್ತರ್‌ ಪರಿಕಿಸೆ ಹುತಭುಗ್ಜೀವನಕ್ಷ್ಮಾಮರುತ್ಖಂಮಾಹಾತ್ಮ್ಯಸ್ಥಾನದೋಂಕಾರಮುಮೆಸೆವ ಪಕಾರಂ ಕ್ಷಕಾರಂ ಹಿತಾಂತಂಸ್ವಾಹಾಕಾರಂಗಳಕ್ಕುಂ ಕ್ರಮದಿನುದಿತ ಬೀಜಾಕ್ಷರಂ ನಾಮದಿಂ ತದ್ದೇಹಾಂಗನ್ಯಾಸ ರಕ್ಷಾವಿಧಿಗಳಿಗೆ ವಿಷಸ್ತಂಭನಾದ್ಯಕ್ಕೆ ಯೋಜ್ಯಂ

ಕ್ಷಿಪ ಓಂ ಸ್ವಾಹಾಕ್ಷರಂಗಳ್‌ ಸಕಳ ಹರಿ ಹಯಸ್ತುತ್ಯನಪ್ಪಾ ಜಿನಶ್ರೀಲಪನಾಂಭೋಜಾತ ಜಾತಂಗಳೆ ಪರಿಕಿಸೆ ತತ್ಪೀತಮುಂ ಶ್ವೇತವರ್ಣಂತಪನೀಯಾ ಭಾಸಿತೇಂದ್ರಾಯುಧನಿಭಮೆನಿಕುಂ ಪಾದಮುಂ ಪೊರ್ಕುೞುಂ ಹೃಲ್ಲಪನಂ ಶೀರ್ಷಂಗಳೆಂಬೀಯೆಡೆಗಳೊಳಱಿದುಂ ಸ್ಥಾಪನಂ ಮಾೞ್ಕೆ ಸಂಜ್ಞಂ

ವ. ಅದೆಂತೆಂದೊಡೆ

ಕ್ಷಿಪ ಓಂ ಸ್ವಾಹಾ ಎಂಬೀ ಪಂಚ ಬೀಜಾಕ್ಷರಂಗಳ್‌ ಯಥಾಕ್ರಮದಿಂ ಹಾರಿದ್ರ ಶುಭ್ರ ಸುವರ್ಣ ಕೃಷ್ಣ

ಸುರಚಾಪನಿಭಂಗಳಪ್ಪುವು. ಅವಂ ಮನದೊಳ್‌ ಭಾವಿಸಿ ದಷ್ಟನ ಪಾದದ್ವಯ ನಾಭಿ ಹೃದಯ ಮುಖ ಮಸ್ತಕಂಗಳಲ್ಲಿ ಯಥಾಕ್ರಮದಿಂ ಬರೆವುದು. ಇದು ಅಂಗನ್ಯಾಸ ವಿಧಾನಂ

ವ. ಇಲ್ಲಿಂದ ಮೇಲೆ ರಕ್ಷಾವಿಧಾನಮುಂ ಪೇೞಲ್ಪಟ್ಟುದು, ಅದೆಂತೆಂದೊಡೆ

ರಕ್ಷಾವಿಧಾನಂ

ಪೂತಾಂಗಂ ಬರೆ ಮಂತ್ರದಿಂ ಕಮಳಮಂ ಚಾತುರ್ದಳೋಪೇತಮುಂಭೂತಾಂತಂ ವಲಮೆಂಬುದಂ ನಡುವೆ ನೀಂ ವಿನ್ಯಾಸಮಂ ಮಾಡು ಮತ್ತಾತಂಗೊಪ್ಪುವ ನಾಮಮೊಂದಿ ನಿಲೆಯುಂ ಬಾಹ್ಯಸ್ಥ ಪತ್ರಂಗಳೊಳ್ಪ್ರೀತಂ ಮಿಕ್ಕಿನ ನಾಲ್ಕು ವರ್ಣಮನವಂ ನಿಕ್ಷೇಪಮಪ್ಪಂದದಿಂ

ವ. ಅಂತು ಚಾತುರ್ದಳೋಪೇತಮಪ್ಪ ಕಮಳಮಂ ಬರೆದು ತನ್ಮಧ್ಯದೊಳ್‌ ಪಂಚಭೂತಂಗಳಂ

ವರಹಕಾರಮಂ ಬರೆದು ಅದಱೊಳಗೆ ದೇವದತ್ತನಂ ಬರೆದು ತದ್ಬಾಹ್ಯದಳ ಚತುಷ್ಕದಲ್ಲಿ ಮಿಕ್ಕ ಕ್ಷಿ

ಪ ಓಂ ಸ್ವಾಹಾ ಎಂಬ ನಾಲ್ಕಕ್ಷರಂಗಳಂ ಲಿಖಿತಂ ಮಾಡಿ ಮತ್ತಾ ಕಮಳಮಂಮಾಯಾಸ್ವರೂಪ

ಹ್ರೀಂಕಾರದಿಂ ತ್ರಿಪ್ರಕಾರಂ ಪರಿವೇಷ್ಟಿತಂ ಮಾಡಿ ಬರೆವುದು

ಅಷ್ಟದಳ ಬದ್ಧಮಾಗಿರಲಿಷ್ಟಮದಲ್ಲದೊಡೆ ಚಂದನಾಲೇಪನದಿಂಸ್ಪಷ್ಟಮೆನೆ ಬರೆವುದೆರ್ದೆಯೊಳಭೀಷ್ಟಂ ಶ್ರೀಮಂಗರಾಜನನುಮತದಿಂದಂ

ಇದು ರಕ್ಷಾವಿಧಾನಂ

ವ. ಇಲ್ಲಿಂ ಮೇಲೆ ಸ್ತೋಭನಕರಣಂ ಪೇೞಲ್ಪಡುವುದದೆಂತೆಂದೊಡೆ

ದಹನಾದ್ಯಂಗಳ ಮುಂದೆ ಯೋಜಿಸು ಬೞಿಕ್ಕಿಮ್ಮಿಮ್ಮೆ ಪೇೞ್ದಂತಿದಂದಹ ಎಂದುಂ ಪಚ ಎಂದು ಯೋಜಿಸಿ ಬೞಿಕ್ಕಂ ಸ್ತೋಭನಾಖ್ಯಂ ಪದಂವಿಹಿತಂ ತತ್ಕ್ರಮದಿಂ ಪ್ರಯೋಗಿಸೆ ವಿಶೇಷೋತ್ಕೃಷ್ಟಮೃಷ್ಟಾಕ್ಷರಂಮಹಿತಂ ತಾಡಿಸೆ ಮಧ್ಯಮಾಂಗುಲಿಯೊಳಂ ತಚ್ಚಾಲನತ್ವಾದಿಯುಂ

ದಷ್ಟಾವೇಶಂ ತಾನುಪದಿಷ್ಟಂ ಪೂರ್ವಪ್ರಸಿದ್ಧ ಪಂಡಿತಜನದಿಂದೃಷ್ಟಂ ವಿಚಾರಿಪಂದಹಿದಷ್ಟನನಕ್ಷತೆಯನಿಡುಗೆ ಮಂತ್ರಸಮೇತಂ

ವ. ಆ ಮಂತ್ರೋದ್ಧಾರಮೆಂತೆಂದೊಡೆ

ಮಂತ್ರಂ. -ಓಂ ಕ್ಷಿಪ ಸ್ವಾಹಾ ದಹ ಪಚ ಸ್ತೋಭಯ

ವ ಇಂತು ಸ್ತೋಭನಮಂತ್ರಮಿದು, ದಷ್ಟಸ್ತೋಭನವಿಧಾನಮೆಂದಱಿವುದು. ಇನ್ನು

ವಿಷಸ್ತಂಭನಕ್ರಮಮೆಂತೆಂದೊಡೆ

ಸ್ತಂಭನಮಂತ್ರಮೆಂತನೆ ತದಾದಿಯೊಳಂತದೊಳಂತೆ ಯೋಜ್ಯಮಾಕುಂಭಿನಿಯೆಂಬುದಲ್ಲಿ ಜಲವಹ್ನಿ ಸದಾಗತಿಯುಕ್ತಮಾಗಿರಲ್ಸ್ತಂಭನಯುಗ್ಮಮಂ ನಡುವೆ ನೀಳ್ದು ಸಮಂತ್ರಕಮಾಗೆ ನಿಷ್ಠೆಯಿಂದಂ ಭವದಂಗುಲಿ ಪ್ರಥಿತಚಾಲನದಿಂ ವಿಷಮೇಱಲಾರ್ಕುಮೇ

ಭೂಮಿಹಿತಂ ಸ್ತಂಭನಮಿದುವಾಮಕರಾಂಗುಳಿಯ ಚಾಲನಂಗಳಿನೆಸೆಗುಂಕಾಮಿತ ಫಲದಾಕ್ಷರದ ಮಹಾಮಹಿಮೆಯನಂತುಟಿಂತುಟೆನೆ ಬಲ್ಲವರಾರ್‌

ವ ಆ ಮಂತ್ರೋದ್ಧಾರಕ್ರಮಮೆಂತೆಂದೊಡೆ

ಮಂತ್ರಂ. ಕ್ಷಿಪ ಓಂ ಸ್ವಾಹಾ ಸ್ತಂಭಯ ಕ್ಷಿ

ಇದು ವಿಷಸ್ತಂಭನಮಂತ್ರ ವಿಧಾನಂ- ಇನ್ನು ನಿರ್ವಿಷೀಕರಣಮುಂ ಪೆೞಲ್ಪಡುಗುಂ, ಅದೆಂತೆನೆ

ಶರ ಭೂಮಿ ವಹ್ನಿ ಮರುದಂಬರಮೆಂಬಿವನಿಂಬಿನಿಂ ಯಥಾಕ್ರಮಮಾಗುಚ್ಚರಿಸುಗು ಸಂಪ್ಲಾವಯಗತಚರಮದೊಳೆಡರಾಗಿರಲ್ಕೆ ಜಪಿಸುವುದು ಬುಧಂ

ಸಂಗಳಿಸಿದ ಬೀಜಾಖ್ಯಪದಂಗಳನೋದುತ್ತೆ ಮತ್ತೆ ತನ್ನಯ ತರ್ಜನ್ಯಂಗುಲಿಯ ಚಾಲನಂಗೆಯ್ನೀಂ ಗರಳಂ ತಡೆದಿೞಿವುದಮಲಚರಿತ್ರಾ

ವ. ತನ್ಮಂತ್ರೋದ್ಧಾರಂ

ಮಂತ್ರಂ. ಕ್ಷಿಪ ಓಂ ಸ್ವಾಹಾ ಸಂಪ್ಲಾವಯ

ಇಂತಿದು ವಿಷಾಪಹಾರಂ

ವ. ಇನ್ನು ವಿಷಸಂಕ್ರಮಣ ಕೌತುಕಂಗಳಂ ಬೇಱೆವೇಱೆ ಪೇೞ್ವೆನದೆಂತೆಂದೊಡೆ

ಮರುದಗ್ನಿ ಜಲಧರಾಂಬರಮಿರೆ ಸಂಕ್ರಮಮಾಗಿಯುಂ ವ್ರಜದ್ವಿತಯಂಗಳ್ವೆರಸಿ ತದಗ್ರದೊಳಂದುಚ್ಚರಿಪುದನಾಮಿಕೆಯ ಬೆರಳ ಚಾಲನಸಹಿತಂ

ವ. ತನ್ಮಂತ್ರೋದ್ಧಾರಂ

ಮಂತ್ರಂ. ಸ್ವಾ (ಹಾ) ಓಂ ಕ್ಷಿಪ ಸ್ವಾಹಾ ಸಂಕ್ರಮ, ವ್ರಜ

ವ. ಈ ಮಂತ್ರದಿಂ ಮಂತ್ರವಾದಿ ತನ್ನ ವಾಮಕರಾನಾಮಿಕಾಂಗುಲಿಯಂ ಚಾಲನಂ ಮಾಡುತ್ತೆ ಮಂತ್ರಿಸೆ

ಪಿರಿದುಂ ವಿಷಸಂಕ್ರಮಮಕ್ಕುಂ. ಈ ತೆಱದಿಂ ಪ್ರತಿವಿಷಸಂಕ್ರಮಮಕ್ಕಂ. ಅದೆಂತೆನೆ ದಷ್ಟನಂ ತೃಣಕಾಷ್ಠಂಗಳಿಂ

ಮಸ್ತಕದಿಂ ಪಾದಂಬರಮಿೞಿಯ ಮಂತ್ರಿಸಿ ಮತ್ತೊರ್ವನ ಪಾದದಿಂ ಮಸ್ತಕಕ್ಕೇಱಿಸೆ ಅವಂ ಬೀೞ್ಗುಂ.

ಮತ್ತವನಂ ಮಸ್ತಕದಿಂದಿೞಿಯ ಮಂತ್ರಿಸಿ ನೆಲದಮೇಲೆ ಹಾಕೆ ನಿರ್ವಿಷಮಕ್ಕುಂ.

ಇಂತು ವಿಷಸಂಕ್ರಮಕೌತುಕಮಕ್ಕುಂ

ವ. ಇನ್ನು ನಾಗಾವೇಶಮಂತ್ರಮಂ ಪೇೞ್ವೆನದೆಂತೆಂದೊಡೆ

ಈಕ್ಷಿಸಿ ನಭೋಂಬುವಹ್ನಿ ಮರುತ್‌ ಕ್ಷಿತಿ ಪಠನಂಗಳಿಂದಮಾವೇಶಂ ತಾಂಸಂಕ್ಷಿಪ ಹಃ ಪ ಕ್ಷಿಪ ಹಃಶಿಕ್ಷಿತಯುಗದಿಂ ಕನಿಷ್ಠಿಕಾಚಾಲನದಿಂ

ವ ಇದಱಿಂದಾವೇಶಂ ಬರ್ಕುಂ

ತನ್ಮಂತ್ರೋದ್ದಾರಂ

ಮಂತ್ರಂ. ಹಾ ಪ ಓಂ ಸ್ವಾಹಾ ಸಂಕ್ಷಿಪ ಹಾ ಕ್ಷಿಪ ಹಾ

ವ. ಈ ಮಂತ್ರದಿಂ ತನ್ನ ಕನಿಷ್ಠಾಂಗುಲಿಯಂ ಚಾಲನಂ ಮಾಡುತ್ತಮಕ್ಷತೆಯಂ ಮಂತ್ರಿಸಿ

ದಷ್ಟನ ಮೇಲೆ ಇಡಲು ನಾಗಾವೇಶಂ ಬರ್ಕುಂ. ಇನ್ನು ಭೇರುಂಡವಿದ್ಯೆ ಸುವರ್ಣರೇಖಾ

ವಿದ್ಯೆಗಳೆಂಬೆರಡುಂ ನಿರ್ವಿಷೀಕರಣಮಂತ್ರಂ. ಗಳವಂ ಪೇೞ್ವೆನದೆಂತೆಂದೊಡೆ

ಭೇರುಂಡಾಖ್ಯೆ ವಿಷಘ್ನೆಯೆಂಬರಿಳೆಯೊಳ್‌ ತದ್ದಷ್ಟನಾ ಕರ್ಣದೊಳ್ಭೋರೆಂಬಂತಿರೆ ಪೇೞಿ ಮತ್ತಮಚಿರಂ ಸೌವರ್ಣರೇಖಾಖ್ಯೆಯುಂಧಾರಾಶೋಭಿತ ವಾರಿಸೇಚನದೊಳಂ ಸಂಹಾರಮಂ ಮಾೞ್ಕುಮಿನ್ನಾರಿಂದಂ ಪೆಱಪಿಂಗದೆಂಬ ವಿಷಮುಂ ಶ್ರೀಶಿಷ್ಟಚಿಂತಾಮಣೀ

ಭೇರುಂಡ ಮಂತ್ರೋದ್ಧಾರಂ

ಮಂತ್ರ ಓಂ ಪಕ್ಷಿ ಏಹಿ ಮಾಹೆ ಭೇರುಂಡ ವಿಜ್ಞಾ ವಿಜ್ಞಾಭರಿಯಕರಂಡೆ ತಂತು

ಮಂತಃ ಆಘೋಷ ಯಿ ಹೂಂಕಾರ ವಿಷಂ ನಾಶಯ ಸ್ಥಾವರ ಜಂಗಮ ಕೃತ್ರಿಮ

ವಿಷಂ ಅಂಗಜ (ಹೂಂ ಫಟ್‌) ದೇವದತ್ತಸ್ಯ ವಿಷಂ ಹರ ಹೂಂ ಫಟ್‌ ಸ್ವಾಹಾ

ಈ ಭೇರುಂಡ ಮಹಾವಿದ್ಯಾಭೇದಮನೊಸೆದು ದಷ್ಟಕರ್ಣದೊಳಾಗಳ್ಶೋಭಿಸೆ ಪಠಿಸಲ್‌ ವಿಷದ ಮಹಾಭಯಮಾ ಕ್ಷಣದೊಳೞಿಗುಮೆಂಬುದು ಪುಸಿಯೇ

ಇನ್ನು ಸುವರ್ಣರೇಖಾಮಂತ್ರೋದ್ಧಾರ

ಮಂತ್ರಂ. ಓಂ ಸುವರ್ಣರೇಖಾ ಕುಕ್ಕುಟವಿಗ್ರಹರೂಪಿಣಿ ಸ್ವಾಹಾ

ಈ ಮಂತ್ರದಿಂ ಕಳಶೋದಕಮಂ ಇಪ್ಪತ್ತೊಂದು (21) ಸೂೞ್ವರಂ ಮಂತ್ರಿಸಿ ದಷ್ಟಂಗಭಿಷೇಕಂ

ಮಾಡೆ ನಿರ್ವಿಷಮಕ್ಕುಂ

ಇದು ತಾಂ ಸುವರ್ಣರೇಖಾಹ್ವದ ವಿದ್ಯಾಮಂತ್ರಮಿದಱಿನಿಪ್ಪತ್ತಱೊಳೊಂದಿದುದೊಂದು ಸೂೞ್ವರಂ ಜಪಿಸಿದ ಜಲದಭಿಷೇಕಮಹಿಮ ವಿಷಮಂ ಕಳೆಗುಂ

ಧರೆಯೊಡನೆ ವಾರಿ ಮರುದಂತರಿಕ್ಷಮಿರೆ ತದ್ಭಟಾಂಬು ಮಂತ್ರಿತದಿಂದಂಚರಣಾದಿ ವಿಹಿತ ಧಾರೆಯಪರಿಪಾತನದಿಂ ವಿಷಕ್ಕೆ ನಾಶನಮಕ್ಕುಂ

ವ. ತನ್ಮಂತ್ರೋದ್ಧಾರಂ

ಮಂತ್ರಂ. ಕ್ಷಿಪ ಸ್ವಾಹಾ

ವ. ಈ ಚತುರಕ್ಷರಮಂತ್ರದಿಂ ಕುಲಶೋದಕಮುಮುಂ ಇಪ್ಪತ್ತೊಂದು (21) ಸೂೞ್ವರಂ

ಮಂತ್ರಿಸಿ ಆಪಾದಮಸ್ತಕಾವಧಿಕೃತ ಜಲಧಾರಾನಿಪಾತಮಾಗಿರಲೆಱೆಯೆ ದಷ್ಟವಿಷನಾಶನಮಕ್ಕುಂ

ಕ್ರೋಶಪಟಹತಾಡನಂ

ಕ್ರಮದೋಂ ನಮೋ ಭಗವತಿಪ್ರಮುಖಾಕ್ಷರಮಂ ಜಪಂಗೆ [ಯಲ್‌ ನೀಂ] ನೂಱೆಂಟಮರ್ದಿರೆ ಬೞಿಯಂ ತಾಡಿಸುಡಮರುಗಮಂ ದಷ್ಟಪಾರ್ಶ್ವದೊಳ್‌ ಸಾಕ್ರೋಶಂ

ವ. ತನ್ಮಂತ್ರೋದ್ಧಾರಂ

ಮಂತ್ರಂ. ಓಂ ನಮೋ ಭಗವತಿ ವೃದ್ಧ ಗರುಡಾಯ ಸರ್ಪವಿಷನಾಶಿನಿ ಛಿಂದಿ ಛಿಂದಿ

ಗೃಹ್ಣ, ಭಗವತಿ ವಿದ್ಯೆಹರ ಹೂಂ ಫಟ್‌ ಸ್ವಾಹಾ

ವ. ಈ ಮಂತ್ರಮಂ ನೂಱೆಂಟು ಬಾರಿ ಜಪಿಸುತ್ತೆ ಡಮರುಗಮಂ ದಷ್ಟನ ಪಾರ್ಶ್ವದೊಳ್‌

ಪಿರಿದುಂ ಪೊೞ್ತು ಬಾಜಿಸುವುದು

ಮತ್ತರ್ಧಚಂದ್ರಮುದ್ರೆಯನಿತ್ತಂತಾ ಕ್ರೋಶಪಟಹಮಂ ದಕ್ಷಿಣದಿಂಬಿತ್ತರದಿಂ ದಷ್ಟನನಿರ್ದೊತ್ತಿನೊಳಿಂತೆಂದು ನುಡಿವುದೊಳ್ನುಡಿಕಾರಂ

ವ. ಅದೆಂತೆಂದೊಡೆ

ಎಲೆ ನಿನ್ನ ಗೋವನೀಗಳ್ಘೞಿಲನೆ ಕೊಂಡೊಯ್ದರಕಟಾ ತಸ್ಕರರೇೞೆಂದುಲಿದೊಡೆ ಬಲಗಾಲಿಂ ವಿಷಮಿೞಿಗುಂ ಕುಳ್ಳಿರ್ದುಮೆೞ್ದು ನಡೆವಂ ದಷ್ಟಂ

ವ. ಇದು ಕ್ರೋಶಪಟಹತಾಡನಂ, ದಷ್ಟೋತ್ಥಾಪನ ವಿಧಾನಂ

ಇನ್ನು ದೂತಪಾತನವಿಧಾನಂ ಪೇೞಲ್ಪಡುಗುಂ- ಅದೆಂತೆಂದೊಡೆ

ಉರಗ ಸುದಷ್ಟನಾದನೆನುತುಂ ಭರದಿಂ ನಡೆತಂದು ಪೇೞ್ವನಂಪರಿಕಿಸಿ ವಕ್ಷ್ಯಮಾಣ ವರಮಂತ್ರಮನುಚ್ಚರಿಸುತ್ತೆ ದಷ್ಟನೊಳ್ಪೊರೆದ ವಿಷಂಗಳಂ ತೆಗೆದು ದೂತಶರೀರಮನೆಯ್ದುವಂತೆ ತಾಂಸ್ಮರಿಸಿ ಲಲಾಟದಿಂದೊಸರ್ವ ಸೋಮದೆ ನೀಂ ತೊಳೆದೆಯ್ದುವಂದದಿಂ

ಸುಸ್ವರದಿಂ ಜಪಿಸುತ್ತಂದೋಂ ಸ್ವಾಹಾ ಎಂಬ ಮಂತ್ರಮುಖ್ಯಂಗಳವೇಕಸ್ವಾಮ್ಯದಿಂದಿರಲ್ಕವನಾ ಸ್ವಾಂಗಸಮೇತನಾಗಿ ದೂತಂ ಬೀೞ್ಗುಂ

ವ. ತನ್ಮಂತ್ರೋದ್ಧಾರಂ

ಮಂತ್ರಂ. ಓಂ ಸ್ವಾಹಾ ಎಂಬ ಮಂತ್ರದಿಂ ವಿಷಮನಾಕರ್ಷಿಸಿ ಓಂ ನಮೋ ಭಗವತೇ ವಜ್ರತುಂಡಾಯ ಸ್ವಾಹಾ

ರಕ್ತಾಕ್ಷಿ ಕುನಖಿದೂತಂ ಪಾತಯ ಮರ ದರ ಹೂಂ ಫಟ್‌ ಫೇ [ಮೆ]- ಇಂತಿದು ದೂತಪಾತನ

ಮಂತ್ರಂ.

ವ. ಇನ್ನು ದಷ್ಟಪಟಾಚ್ಛಾದನ ಕೌತುಕಮಂತ್ರಮಂ ಪೇೞ್ವೆಂ

ಸಿದ್ಧಮಿದೀಂ ಲೋ ಮೋಂ ಫಟ್ಬದ್ಧಾಕ್ಷರದಿಂದೆ ಬೀೞ್ವನಹಿಕೊಂಡಾತಂಉದ್ಧರಿಸೋಂ ಹೋಮಾದಿ ಪಿನದ್ಧ ಷಡಂತದೊಳೆ ತತ್ಪಟಾಚ್ಛಾದನಮಂ

ವ ಇನ್ನಾ ವಕ್ಷ್ಯಮಾಣ ಮಂತ್ರದಿಂ ಓಂ ಸ್ವಾಹಾ ಫಟ್‌ ಅಂತಮಪ್ಪುದಱಿಂ ಪಟಾಚ್ಛಾದನಮಂ

ಮಾೞ್ಪುದಾ ಮಂತ್ರಕ್ರಮಂ ಎಂತೆಂದೊಡೆ

ಮಂತ್ರಂ. ಈಂ ಲೋಂ ಓಂ (ಸ್ವಾಹಾ) ಫಟ್‌. ಇದು ದಷ್ಟಪಾತನ ಮಂತ್ರಂ.

ಮಂತ್ರಂ. ಓಂ ಸ್ವಾಹಾ (ಝ) ರು ರು ಹಷ್ಣಂ ಸರ್ವಂ ಸಂಹಾರಯ ಓಂ ಯಾಂ ಜೀಂ

ಗರುಡಾಕ್ಷಿ ಓಂ ಫಟ್‌. ಇದು ದಷ್ಟ ಪಟಾಚ್ಛಾದನ ಮಂತ್ರಂ.

ಪವನವ್ಯೋಮಯುತಾಕ್ಷರ ಪ್ರಥಿತ ಮಂತ್ರೋಚ್ಚಾರಣಂಗೆಯ್ಯುತಂತವನಂಗಾಶ್ರಿತ ವಸ್ತ್ರಮಂ ತೆಗೆದುಕೊಂಡೋಡಲ್ಕೆ ಬೆಂಬತ್ತೆ ಮತ್ತವನಿರ್ದಲ್ಲಿಯೆ ನಿಲ್ವುದಿಕ್ಕೆ ಪಟಮಂ ಭೂಭಾಗದೊಳ್‌ ಬೀೞ್ವನಂತವನುಂ ತದ್ಧರೆಯಲ್ಲಿ ಯಿಂತು ಕುತುಕವ್ಯಾಪಾರಸಾರೋಕ್ತಿಯೊಳ್‌

ವ. ಆ ಮಂತ್ರಮೆಂತೆಂದೊಡೆ

ಮಂತ್ರಂ. ಸ್ವಾಹಾ, ಇದು ದಷ್ಟಪ್ರಚ್ಛಾದಿತಪಟಾಕರ್ಷಣ ಮಂತ್ರಂ.

ಫಣಿವಿಷಮುಕ್ತನಾಗಿ ಸುಖಿಯಪ್ಪನವಂ ಗಡಮೊಪ್ಪೆ ಮಂತ್ರಿಸಲ್ಕ್ಷಣದೊಳಶೇಷ ದುಷ್ಟವಿಷವಿರ್ದೆಡೆಯಿಂ ನಿಲಲಣ್ಮದೋಡುಗುಂಭಣಿತಮೆನಿಪ್ಪ ಮಂತ್ರದ ಮಹತ್ವಮಿರಲ್ಕದು ಸಂಕ್ರಮಕ್ಕೆ ತಾನಣಮಿರವಿಲ್ಲಮೆಯ್ದೆ ಘನಮಾ ಪವನಂಗಿದಿರಾದ ಮಾೞ್ಕೆಯಿಂ

ಆ ನಿರ್ವಿಷೀಕರಣ ಮಂತ್ರೋದ್ಧಾರಂ

ಮಂತ್ರಂ. ಓಂ ನಮೋ ಭಗವತೇ ಪಾರ್ಶ್ವತೀರ್ಥಕರಾಯ ಸಂ ಹಂ ಸಃ (ಮಹಾಹಂಸಃ, ಪದ್ಮಹಂಸಃ,

ಶಿವಹಂಸಃ, ಕೊಹಂಸಃ) ಊಂ ಕ್ರಹಂಸಃ ಝಂ ಝಿಂ ಹಂಸಃ ಕ್ಷಿಪ ಮಹಾವಿಷಂ ಭಕ್ಷ ಹೂಂ ಫಟ್‌ ಸ್ವಾಹಾ

ವ. ಇಂತೀ ಪೇೞ್ದ ಮಂತ್ರಸಾಮರ್ಥ್ಯದಿಂ ಸ್ಥಾವರ ಜಂಗಮ ಕೃತ್ರಿಮ ವಿಷಂಗಳೆಲ್ಲಂ ಕಿಡುಗುಂ. ಮುಂ

ಪೇೞ್ದ ವೃತ್ತದೊಳೀ ಮಂತ್ರಸಾಮರ್ಥ್ಯಂ ಪ್ರರೂಪಿತಮಾಯ್ತು

ಅವರಿವರನ್ನರಿನ್ನರುಸಿರ್ದರ್‌ ಗಡಮೆಂಬುದಿದಲ್ತು ಸರ್ವವಿದ್ಭವಹರನಪ್ಪ ವೀರಜಿನಪುಂಗವನಾಗಮದಲ್ಲಿ ಪೇೞ್ದಿದಂಸವಿನಯ ಮಲ್ಲಿಷೇಣ ಬುಧನಿಂದೆ ನಿರೂಪಿತಮಾಯ್ತದಿಂತು ಸತ್ಕವಿ ವಿಭು ಮಂಗರಾಜ[ಕೃ]ತ ಮೆಂದೆನಿಸಿತ್ತಿಳೆಯೊಳ್‌ ನಿರಂತರಂ

ವ. ಇಂತಿದೊಂದು ಮಂತ್ರಂ. ಶ್ರೀಗುರುಭ್ಯೋ ನಮಃ

ದೇವೇಂದ್ರಸ್ತುತ್ಯ ಪೀತಾಂಬರಧರನುಮನಾಹ್ವಾನಿಸಲ್‌ ತಾನೆ ಸಾಲ್ಗುಂಲಾಂ ವಾಂ ಯಾಂ ಹ್ರಾಂ ಎನಿಪ್ಪೀ ದ್ವಿಗುಣಯುಗಳ ಸಂಖ್ಯಾವಿಶೇಷಂಗಳಾಗಿರ್ಪಾ ವರ್ಣಂಗಳ್‌ ಕರಂ ಭಾವಿಸೆ ವಿತತ ವಿದೂರಂಗಳಕ್ಕುಂ ಲಸದ್ವಿದ್ಯಾವಷ್ಟಂಭ ಪ್ರಭಾವ ಪ್ರಭವ ಭವನನಾಮಂತ್ರಣಂ ಮುಖ್ಯಕಾರ್ಯಂ

ಶುಂಭದ್ಗುಣನೆನಿಸಿದ ಗರುಡಂ ಭಾವಸಮೇತಮಿಂತಿರಲ್‌ ಗರಳದ ದೆಸೆಯಿಂ ಭಯಮೇವುದೊ ಬಿಡದಂಸ್ತಂಭಾದಿಗೆ ಮಂತ್ರಮುಖ್ಯಮುಂ ತದ್ಧ್ಯಾನಂ

ವ. ಸ್ತಂಭನ ಸ್ತೋಭನ ನಿರ್ವಾಹ ನಿರ್ವಿಷೀಕರಣಂ ಮಂತ್ರಿಯಿಂ ಕರ್ತವ್ಯಮಪ್ಪುದಱಿಂ ಶೀಘ್ರದಿಂ

ತತ್ಕಾರ್ಯಮಂ ಕಾರಣಮನಱಿದು ಪ್ರಯೋಗಿಸುವುದು

ತನ್ಮಂತ್ರೋದ್ಧಾರಂ

ಮಂತ್ರಂ. ಲಾಂ ಬ್ವ್ರೋಂ (ಭಾಂ) ಲಾಂ

ವ. ಈ ಮಂತ್ರದಿಂ ಶೀತಘಟಾಭಿಮಂತ್ರಿತಂಗಳಿಂ ವಿಷಾತುರನ ಮಸ್ತಕದೊಳಿರಿಸೆ ವಿಷಮಾಕ್ರಮಿಸದು.

ಇದು ಸ್ತಂಭನಂ

ಮಂತ್ರಂ. ಯಾಂ ಬ್ವ್ರೋಂ ವಾಂ

ವ. ಈ ಸ್ತೋಭನ ಮಂತ್ರದಿಂ ವಿಷಾತುರನ ಶಿಖೆಯಂ ಕಟ್ಟುವುದು, ಮಂತ್ರಂ. ವಾಂ ಬ್ವೋ ವಾಂ,

ಇದು ಸ್ತೋಭನಂ

ವ. ಈ ಮಂತ್ರದಿಂದರ್ಕದಂಡಮಂ ಕೊಂಡು ಅಲ್ಲದೊಡೆ ದುತ್ತೂರ ಕಾಷ್ಟದಂಡದಿಂದಾದೊಡಂ

ಅಭಿಮಂತ್ರಿಸಿ ವಿಷಾತುರನ ಸರ್ವಾಂಗದೊಳ್‌ ವಿಷಮಂ ನಿರ್ವಹಿಸುವುದು. ಇದು ನಿರ್ವಹಣಂ

ಮಂತ್ರಂ. ಹ್ರಾಂ ಬ್ರೋಂ ಹ್ರಾಂ

ವ. ಈ ಮಂತ್ರದಿಂ ನಿರ್ವಿಷೀಕರಣಾರ್ಥಂ ವಿಷಾತುರನಂತುದ್ದಂಡದಿಂ ಸಮ್ಮಾರ್ಜಿಸುವುದು ತತ್ಸಮ್ಮಾರ್ಜಿತಂ

ಸ್ವಸ್ಥನಾಗಿರ್ಪಂ. ಇದೊಂದು ಗರುಡಮಂತ್ರಂ.

ವ. ಮತ್ತಂ ತನ್ಮಂತ್ರಾಂತರಮೆಂತೆಂದೊಡೆ ಮಂತ್ರಂ. ರಾಂ ಬ್ರೋಂ ರಾಂ

ವ. ಈ ಮಂತ್ರದಿಂ ಸರ್ಪದಷ್ಟನ ಶಿಖಾಬಂಧನಮಂ ಮಾೞ್ಪುದು

ಮಂತ್ರಂ. ತಾಂ ಬ್ರೋಂ ತಾಂ

ವ. ಈ ಮಂತ್ರದಿಂ ಶರದಂಡಮನಭಿಮಂತ್ರಿಸಿ ದಷ್ಟನಂ ಮುಟ್ಟಿಸೆ ವಿಷಸ್ತಂಭನಮಕ್ಕುಂ.

ಇದು ಸ್ತಂಭನಂ

ಮಂತ್ರಂ. ದ್ರಾಂ ಬ್ರೋಂ ದ್ರಾಂ

ವ. ಈ ಮಂತ್ರದಿಂ ಸರ್ವಾಂಗಮಂ ಮುಟ್ಟಿಸೆ ವಿಷಂ ಸ್ತೋಭಿಸುಗುಂ. ಇದು ಸ್ತೋಭನಂ

ಮಂತ್ರಂ. ದ್ರಾಂ ಬ್ವೋಂ ದಾಂ

ವ. ಈ ಮಂತ್ರದಿಂ ವಿಷದಷ್ಟನಂ ನಿರ್ಮಾರ್ಜಿ (ಮೂರ್ಛಿ) ತನಪ್ಪಂತೆ ಮಾೞ್ಪುದು. ವಿಷಂ

ಪರೆಗುಂ. ಇದು ನಿರ್ವಹಣಂ

ಮಂತ್ರಂ. ದ್ರಾಂ ಬ್ರೋಂ ದ್ರಾಂ

ವ. ಈ ಮಂತ್ರದಿಂ ಸಪ್ತಾಭಿಮಂತ್ರಿತ ಜಲಾಭಿಷೇಕದಿಂ ನಿರ್ವಿಷಮಕ್ಕುಂ

ಹ್ರೀಂಕಾರಮೊಂದುಮಂ ಹರಿಣಾಂಕ ಸಮಾಕ್ಷರಮನೊಪ್ಪೆ ದಷ್ಟಾನನದೊಳ್ಸಂಕಿಸದೆ ಧ್ಯಾನಿಸೆ ಜವದಿಂ ಕಳೆಗುಂ ಸಕಳ ವಿಷಧರಂಗಳ ವಿಷಮಂ

ವ. ಇದೊಂದು ಗಾರುಡಂ

ತನ್ನಂಗಂ ಖಗರಾಜನೆಂದು ಮನದೊಳ್‌ ತಾಂ ಧ್ಯಾನಿಸುತ್ತುಂ ಸಮುತ್ಪನ್ನ ಪ್ರಜ್ಞರೊಳಗ್ರಗಾಮಿಯೆನಿಪ ಶ್ರೀರಾಮಚಂದ್ರಾಂಘ್ರಿಗಳ್ತನ್ನಂತಃಕರಣಾರವಿಂದದೊಳಿರಲ್‌ ಸಲ್ಲಕ್ಷಣೋಪೇತ ನಿರ್ಭಿನ್ನೋದ್ಯಚ್ಛರ ದಂಡದಿಂದಿೞಿಪಲೆಲ್ಲಂ ನಾಶಮಕ್ಕುಂ ವಿಷಂ

ಉತ್ತಮಮೆಂದೆನಿಸುವುದಿಪ್ಪತ್ತೇೞುಂಗುಳದ ವಿಲಸದನುಪಮ ದಂಡಂಮತ್ತಮದಲ್ಲದೊಡಂ ಮೇಣ್ಪತ್ತೆರಡಂಗುಳಸಮೇತಮಪ್ಪುದುವೆ ವರಂ

ವ. ಅಂತಪ್ಪ ಶರದಂಡಮಂ ಪಿಡಿದಿೞಿಯೆ ಮಂತ್ರಿಸುವುದಾ ಮಂತ್ರಮೆಂತಪ್ಪುದೆಂದೊಡೆ ಮಂತ್ರಂ.

ಓಂ ಕ್ಷಾಂ ಹಃ, ಓಂ ಕ್ಷಾಂ ಕ್ಷೀಂ ಕ್ಷೂಂ, ಓಂ ಹೂಂ ಓಂ ಹಂಸಃ ಸಂಕ್ಷೋಭಯ =ಹರ=

ನಿರ್ವಿಷಾಪಯ = ಸ್ಥಾವರ ಜಂಗಮ ಭುಜಂಗದಷ್ಟಸ್ಯ ವಿಷಂ ಭಕ್ಷಯ ತ್ರಿಶೂಲೇನ ಗ್ರಹಾನ್‌

ಭೇದಯ = ವಿಷಂ ನಾಶಯ = ಗಚ್ಛ = ನಿವರ್ತಯ = ಓಂ ಹ್ರೀಂ ಫಟ್‌ ಸ್ವಾಹಾ

ವ. ಈ ಮಂತ್ರದಿಂ ಶರದಂಡಮನಭಿಮಂತ್ರಿಸಿ ವಿಷಧರದಷ್ಟನಂ ತೊಡೆವುದು.

ಇನ್ನು ಅನಿರ್ಮಾರ್ಜನ ಮಂತ್ರಮೆಂತೆಂದೊಡೆ

ಮಂತ್ರಂ. ಓಂ ಭೂರ್ಭುವಾಯ ನಮಃ, ಓಂ ಕ್ಷಾಂ ಹೂಂ ಹಂಸಃ, ಓಂ ಹಾಂ ಹೂಂ ಹಂಸಃ, ಓಂ

ಪಃ ಹಂಸಃ ಅಮೃತೇ ಅಮೃತವರ್ಷಿಣಿ ಚಂದ್ರಾಂಶು ಶೀತಳೆ ಈಡಾಂಶು ಶೀತಳೆ, ವಿಷಂಸಂಹರ, ಅಮೃತ

= ಅಮೃತಧಾರಾಮುಖೇ ಚಂದ್ರಮಂಡಲ ಗಗನಧಾರಿಣಿ, (ರಂ) ಜಂ ಕ್ರೀಂ ಹ್ರೀಂ (ಹ್ರೀಂ ಹ್ರೀಂ)

ಹ್ರೂಂ ಹ್ರಂ ಹ್ರಾಂ ಹ್ರಃ ಅಮೃತ ಸಂಜೀವನವಿದ್ಯಾ ವಿಷನಿರ್ನಾಶಿನೀ ನಮಃ

ಪರಿಪೂರ್ಣೇಂದು ಸಮಾನವಾರಿಯದು ಮತ್ತತ್ಯಂತ ಶೈತ್ಯಂ ಸುಧಾಕ್ಷರಪೂತಂ ವಿಮಲಂ ವಿಲೋಚನಸುಖಂ ಈಡಾಪ್ರಭಾಸಂಯುತಂವರಮೆಂದುಂ ಸ್ಥಿರನಾಗಿ ಜಾನಿಸಿ ಕುಡಲ್‌ ತದ್ವಾರಿಯಿಂ ನಿರ್ವಿಷೋತ್ಕರನಂ ಮಾಡುಗೆ ಕರ್ಣಜಾಪ್ಯಮೆ ವಲಂ ತತ್ತದ್ವಿಷಘ್ನಂ ದಿಟಂ

ಅರಿದೆನಿಸಿದ ವೃಶ್ಚಿಕವಿಷಧರ ದಷ್ಟವಿಷಂಗಳೆಯ್ದೆ ಕಿಡುಗುಮಮೋಘಂಪರಿಪೀತಮಾದೊಡಂತುರ್ವರೆಯೊಳ್‌ ಸಪ್ತಾಭಿಮಂತ್ರಿತಂ ವಿಮಲಜಲಂ

ವ. ಇದೊಂದು ಮಂತ್ರಂ.

ಓಂ ಹ್ರೂಂ, ಫಟ್‌ ಸ್ವಾಹಾ, ಅಮೃತೇ, ಅಮೃತವರ್ಷೇ ಪಾರ್ಶ್ವೇ ಸೋಮಕ್ಷೋಭಿತ ಶೀತಳೇ

ಆಸ್ವಾದಿತಿಯಸ್ತೇ ಅಮುಕಸ್ಯ ವಿಷಮಪಹರಣೀಯಂ ಸಃ ಹೂಂ ಫಟ್‌ ನಿರ್ವಿಷಾಪಯ ಪಾತ್ರಂ

ರಕ್ಷ ಸ್ವಾಹಾ

ಈ ವಿದ್ಯೆಯಧಿಕತೇಜಂಭಾವಿಸೆ ವಿಷನಾಶನಕ್ಕೆ ತಾನಿದೆ ಸಾಲ್ಗುಂಭೂವಳಯದೊಳಂ ಮೃತಸಂಜೀವಿನಿ ಕುಡಿಯಲ್ಕೆ ಜಲಮನಭಿಮಂತ್ರಿತಮಂ

ವ. ಇಂತಿದೊಂದು ಪ್ರಕಾರಂ

ಸರ್ವ ಸುಖಾಂಬುರಾಶಿಯೆನಿಸಿರ್ಪ ಜಿನೇಂದುವಿನಾಗಮಾಂಗದೊಳ್ನಿರ್ವಿಷದಾಯಕರ್‌ ಗರುಡನೊಪ್ಪುವ ಪಕ್ಷಿಪನಭ್ರಮಾಲೆಯಿನ್ನೊರ್ವನುಮಿರ್ವರೆಂಬ ಪರಿಸಂಖ್ಯೆಯದೇವುದಿವರ್ಗಳಾದಿಯಾಗುರ್ವರೆಯಾ ಪ್ರಸಿದ್ಧ ಸುರರೊಪ್ಪುವ ಮಂತ್ರಮನಿಲ್ಲಿ ಪೇೞ್ದಪೆಂ

ಮಂತ್ರಂ. -ಓಂ ನಮೋ ಭಗವತೇ ಪಾರ್ಶ್ವನಾಥಾಯ ಧರಣೇಂದ್ರ ಪದ್ಮಾವತೀ ಸಹಿತಾಯ

ಪರವಿದ್ಯಾಚ್ಛೇದನಾಯ – ಓಂ ಹ್ರೂಂ, ಹ್ರಃ, ಓಂ ವಾಸುಗಿ ಶಂಖಪಾಳ ಜಯ ವಿಜಯ, ಓಂ,

ಲಾಂ, ಹ್ವಃ ಪಲಕ್ಷಿಂ, ರ್ಕೀಮ್ಮ್ಲ್ವ್ಯಂ, ಕ್ಷ್ಮ್ಲ್ವೂ ರ್ಯ್ಯ್ರಂ, ಹ್ಮ್ಲ್ವ್ಯೂರ್ಯ್ರಂ, ಭ್ಲ್ವ್ರೂರ್ಯಂ

ಮ್ಮ್ಲ್ವ್ಯೂರ್ಯ್ರಂ, ಯ್ಮ್ಲ್ವ್ಯೂರ್ಯ್ರಂ, ಘ್ಮ್ಲ್ವ್ಯೂರ್ಯ್ರಂ, ರೂಮ್ಮ್ಲ್ರರ್ಯಂ

ಝ್ಮ್ಲ್ವ್ಯೂ ರ್ಯ್ರಂ, ಖ್ಮ್ಲ್ವ್ಯೂ ರ್ಯ್ರಂ, ಠ್ಮ್ಲ್ವ್ಯೂ ರ್ಯ್ರಂ, ವ್ಮ್ಲ್ವೂ ರ್ಯಂ,

ಸ್ಥಾವರ ಜಂಗಮ ಕೃತ್ರಿಮ ವಿಷಮವಿಷಾಣಾಂ ಸರ್ವವಿಷಾಣಾಂ ಭಕ್ಷಯ, ಛೇದಯ, ಛಿಂದ, ಹನ,

ಪಚ, ಶೀಘ್ರ, ನಿರ್ವಿಷಾ ದಾಹೋತ್ತರ ದೇವರಾಜಾ (ಯಾ)ಜ್ಞಾ- (ವಿಷೋಪವಿಷಂ ವಾಯುವೇಗಂ

ಚಾಳಯ) ಅಮೃತೇ, ಅಮೃತೋದ್ಭವೆ, ಅಮೃತಂ ಸ್ರಾವಯ ದಷ್ಟಸ್ಯ ವಿಷಂ ಹೂಂ ಫಟ್‌ ಸ್ವಾಹಾ,

ಕ್ಷಿಪ ಓಂ ಸ್ವಾಹಾ, ಅವತಿಂ ಸ್ವಾಹಾ, ಓಂ ದೇವದತ್ತ, ದುಷ್ಟಪ್ರದುಷ್ಟಾನಾಂ ಕ್ರೋಧಗತಿ ಮತಿಮುಖ

ದೃಷ್ಟಿ ಹೃದಯಜಿಹ್ವಾಗಾತ್ರಂ ಸ್ತಂಭಯ, ಓಂ ದೇವದತ್ತಸ್ಯ ಬಾಹತ್ತರನಿಯೋಗ ಸರ್ವದುಷ್ಟ ಪ್ರದುಷ್ಟಾನಾಂ

ಕ್ರೋಧಗತಿ ಮತಿಮುಖದೃಷ್ಟಿಹೃದಯ ಜಿಹ್ವಾಗಾತ್ರಂ ಸ್ತಂಭಯ ಓಂ ದೇವದತ್ತಸ್ಯ ಚತುರಂಗಸೇನಾ

ದ್ವಾತ್ರಿಂಶತ್‌ ಖಡ್ಗಸ್ತಂಭನಂ ಕುರು ಸ್ವಾಹಾ-

ನಿರುಪಮ ಗುಣ ಪಾರ್ಶ್ವಜಿನೇಶ‍್ವರನಂಘ್ರಿದ್ವಯದೊಳಿಕ್ಕೆ ಕುಸುಮಮುಮಂ ಸಾಸಿರದೆಂಟಂ ಸಿದ್ಧಿಪುದೀಯರಿವಿಜಯಮೆನಿಪ್ಪ ಮಂತ್ರಮಿದು ಪರಮಾರ್ಥಂ

ಪ್ರಸ್ತುತಮಿದುವೆ ವಿಷಘ್ನಂವಿಸ್ತರದರಿಬಲದ ಖಡ್ಗಜಿಹ್ವಾಸ್ತಂಭಂಶಸ್ತಮಿದೆ ಸರ್ವರಕ್ಷೆ ಬುಧಸ್ತುತಿಶತಭಾಜನಂ ಜನಾನಂದಕರಂ

ಮಂತ್ರಂ. ಓಂ ನಮೋ ಭಗವತೇ ಪ್ರಚಂಡ ಗರುಡಾಯ, ಖಗೇಂದ್ರಪಕ್ಷಿರಾಜಾಯ ತೀಕ್ಷ್ಣದಂಷ್ಟ್ರಾಯ

ರೋಮಹರ್ಷಣಾಯ ಭಯಂಕರಾಕಾರಾಯ ವಿಷ್ಣುವಾಹನಾಯ ಸುಪರ್ಣಜಿಹ್ವಾಯ ಅನಂತ ವಾಸುಕಿ ತಕ್ಷಕ

ಕಾರ್ಕೋಟಕ ಪದ್ಮ ಮಹಾಪದ್ಮ ಶಂಖಪಾಳ ಕುಳಿಕ ಜಯ ವಿಜಯ ನಾಗಾನ್‌ ಏಹಿ

ಆವೇಶಯ=ಹನ=ಪಚ=ರಮ=ದ (ವ)ರ =ಛಿಂದ = ಭಿಂದ – ರ ರ ರ ರ ರ ರ, ರಂ ರಂ ರಂ

ರಂ ರಂ ರಂ, ರಾ ರಾ ರಾ ರಾ ರಾ ರಾ, ಕ್ಷುಂ ಕ್ಷುಂ ಕ್ಷುಂ ಕ್ಷುಂ, ಹಾಂ ಹಾಂ ಹಾಂ ಹಾಂ, ಏಹಿ

ಹ್ರೀಂ ಹ್ರೀಂ ಹ್ರೀಂ ಹ್ರೀಂ, ಹ್ರ್ಯೂಂ ಹ್ರ್ಯೂಂ ಹ್ರ್ಯೂಂ ಹ್ರ್ಯೂಂ ಹ್ರ್ಯೂಂ, ಘೇ ಘೇ ಘೇ ಘೇ ಘೇ,

ಸಕಲ ನಾಗಗ್ರಹಾನ್‌ ಘೆ, ಸಂ, ವೌಷಟ್‌, (ಸ್ವಾಹಾ)

ಭೂಭುವನಾಗ್ರದೊಳ್‌ ಫಣಿಕುಲಂಗಳುಮಂ ಬರಿಸಲ್ಕೆ ದಾ (ಂ) ಷ್ಟ್ರಿಕಸ್ತೋಭನದಲ್ಲಿಗಂ ಘಟಮಹೋರಗನಂ ಜಯಿಸಲ್ಕೆ ದುಷ್ಟವಿದ್ಯಾಭಯಭಂಗಿತಂಗೆ ಹಿತಕಾರ್ಯದೊಳಂ ಸಲೆ ಮಾಂತ್ರಿಕರ್ಗಿದೇಶೋಭಿತಮೆಂದು ಪೇೞ್ದನಭಯಪ್ರದ ಮಂತ್ರಮನಿಂತಿದಂ ಬುಧಂ

ಸ್ತೋಭನಮಂತ್ರಂ. (1) ಓಂ ನಮೋ ಭಗವತೇ ಪಾರ್ಶ್ವತೀರ್ಥಕರಾಯ ದುಂದುಭಿಸ್ವನ ಮೇಘವಾರಣ

ಧುಂ (ದಂ)ನ, ಕಂಪ, ಶೀಘ್ರ, ಆವೇಶಯ, ರ ರ ರಾ ರಾ ಹ್ಮ್ಲ್ವ್ಯೂಂ ಕ್ಷಿತಿ ಸರ್ವ

ವಿಷಂ ನಿರ್ವಿಷಂ ಕುರು ಸ್ವಾಹಾ – ಸ್ತೋಭನ ಮಂತ್ರಂ. ಗಳ್‌

2) ಇಲೆ ಜಯ ವಿಜಯ ಜ ಸ್ವಾಹಾಂ ಓಂ ನಮೋ ಭಗವತೇ ಪಾರ್ಶ್ವನಾಥಾಯ ಧರಣೇಂದ್ರ

ಪದ್ಮಾವತೀಸಹಿತಾಯ ಔಂ ಹ್ಮ್ಲ್ವ್ಯೂ ಹ್ರಾಂ ಹ್ರೀಂ ಹ್ರೂಂ ಹ್ರೌಂ ಹ್ರಃ ಅನಂತ ವಾಸುಕಿ ತಕ್ಷಕ

ಕಾರ್ಕೋಟಕ ಪದ್ಮ ಮಹಾಪದ್ಮ ಶಂಖ ಕುಳಿಕ ಜಯ ವಿಜಯ ನಾಗಾನ್‌ ಏಹಿ ಆವೇಶಯ ದಹ

ಪಚ ಧು (ಮ)ನ ಕಂಪ ಶೀಘ್ರಂ ಸ್ತೋಭಯ ಘೇ ಸಂ ವೌಷಟ್‌

(3) ಓ ನಮೋ ಭಗವತೇ ಪಾರ್ಶ್ವನಾಥಾಯ ಧರಣೇಂದ್ರ ಪದ್ಮಾವತೀಸಹಿತಾಯ ಘೋರೋಪಸರ್ಗ

ವಿನಾಶನಾಯ ಸಂಸಾರ ಪ್ರಮರ್ದನಾಯ ಅರಿ ಇರಿ ಊರೀ (ಷ) ಡರಿ ಮುರಿ ಪಿರಿ ಮರಿ

ಆವೇಶಯ. ಶೀಘ್ರಂ ಕಂಪ ಛಿಂದ ಸರ್ವರೋಗ ವಿನಾಶಿನಿ ಪರಮಂತ್ರಚ್ಛೇದಿನಿ ಹೂಂ ಫಟ್‌ ಸ್ವಾಹಾ

ವ ಇಂತೀ ಪೇೞ್ದ ಸ್ತೋಭನಮಂತ್ರತ್ರಯದೊಳ್‌ ಆವುಂದಾನುಮೊಂದಱಿಂ

ಇಡೆ ದಷ್ಟಂಗೆಸೆವಿಷ್ಟಮಂತ್ರಸಹಿತಂ ಶಾಲ್ಯಕ್ಷತವ್ರಾತದಿಂಜಡಿವುತ್ತಾತನನೀಕ್ಷಿಸುತ್ತೆ ಜವದಿಂ ತನ್ಮಂತ್ರಸಾಮರ್ಥ್ಯದಿಂಪಿಡಿಗುಂ ಸ್ತೋಭಮ (ನ)ದಾ (ಮಾ)ತನಂ ವಿಕೃತಿಯಿಂದೆೞ್ದಾಡಿ ಮಾತಾಡುಗುಂಗಡಮೇಂ ಚೋದ್ಯಮೊ ಸಿದ್ಧಮಂತ್ರಚಯದಿಂದಂ ತೀರದರ್ಥಂಗಳೇಂ

ಅಮೃತಧಾರಾಮಂತ್ರಂ.

1) ಓ ನಮೋ ಭಗವತೇ ಪಾರ್ಶ್ವನಾಥಾಯ ಧರಣೇಂದ್ರ ಪದ್ಮಾವತೀ ಸಹಿತಾಯ ಅಷ್ಟಮಹಾ ಸಿದ್ಧಿಪ್ರದಾ

ಯಕಾಯ ಊತಿಜ್ವಾಲಾ ಗರ್ಭಕರ್ಣಶೂಲ ನೇತ್ರಶೂಲ ಮೂಲವ್ಯಾಧಿ ದುಷ್ಟವ್ರಣನಾಶನಾಯ ಅನೇಕ

ವಿಷಸಂಹರಾಯ ಛಿಂದ ಭಿಂದ ಚಂಡೋಗ್ರದಾಹಸಂತಾಪಂ ಕ್ಷನ, ರ (ಣ)ನ, ರುಣ ಮಣ ಶಿಳಿ ಚಿಳಿ

ಮಿಳಿ ಕಿಳಿ ಓಂ ಹ್ರಾಂ ಹಂಸಃ ಓಂ ಹ್ರೀಂ ಹಂಸಃ ಓಂ ಹ್ರೂಂ ಹಂಸಃ ಓಂ ಹ್ರೌಂ ಹಂಸಃ ಓಂ

ಹ್ರಃ ಹಂಸಃ ಓಂ ಗ್ಲಾಂ ಕ್ಷಾಂ ಠಂ ಸ್ವಾಹಾ

3) ಓಂ ನಮೋ ಭಗವತೇ ಚಂದ್ರಪ್ರಭ ಶಂಕರ ಚಂದ್ರಾಯ ಹರ ರ ರ ರ ಮಾ (ರಾ)ರಯ ಸ್ಥಾವರ

ಜಂಗಮವಿಷಂ ಹರ ಠ್ಮ್ಲ್ವ್ಯೂಂ ಪಿಬ (ಂ) ಸ್ವಾಹಾ

ಇಳೆಯೊಳಿವೆ ಸಿದ್ಧಮಂತ್ರಂ.ಗಳೆನಲ್‌ ಮುನಿಗದಿತಮಮೃತಧಾರಾಮಂತ್ರಂ.ಗಳೆನಿಕ್ಕುಂ ತನ್ಮಂತ್ರಿತಜಳಮಂ ಕುಡಿಯಲ್ಕೆ ಕೂಡೆ ನಿರ್ವಿಷಮಕ್ಕುಂ

ಅಮೃತಧಾರಾಮಂತ್ರಂ.

ಈ ಮಂತ್ರಂ. ಗಳೊಳೊಂದಂ ಇಪ್ಪತ್ತೊಂದು ಸೂೞ್ವರಂ ಮಂತ್ರಿಸಿ ಆ ಮಂತ್ರೋದಕಸ್ನಾನದಿಂ ಸರ್ವ

ಸ್ಥಾವರ ಜಂಗಮವಿಷಂ ಕಿಡುಗುಂ

ಮತ್ತಂ ಸರ್ವ ನಿರ್ವಿಷೀಕರಣಮಂತ್ರಂ.

(1) ಓಂ ನಮೋ ಭಗವತ್ ಪಾರ್ಶ್ವನಾಥಾಯ ಧರಣೇಂದ್ರ ಪದ್ಮಾವತೀ ಸಹಿತಾಯ ಓಂಹನ ಪದ್ಮಹನ

ಶಿವಹನ ಕೋಹನ ಹುನ ಅರೆ ಹಂಸಃ ಆಮಿ ಉಝರಿರಿ ಹಂ ನಃ ಪಕ್ಷಿ ಮಹಾವಿಷಂ ನಿರ್ವಿಷಂ

ಓಂ ಹ್ರಾಂ ಹಂಸಃ ಓಂ ಹ್ರೀಂ ಓಂ ಹ್ರೂಂ ಹಂಸಃ ಓಂ ಹ್ರೌಂ ಹಂಸಃ ಓಂ ಹ್ರಃ ಹಂಸಃ ಸ್ವಾಹಾ

(2) ಓಂ ನೀಲಕಂಠಿ ನಿರ್ಮಳಾಕ್ಷಿ ನಾಗದೂತಿ ನಾಗ (ಸರ್ಪ) ಕುಲಮಾರಿ ಶೀಘ್ರ ಆವೇಶಯ ಹರ

ಹರ ಹಂಸಃ ಹಿಂಸ ಅಂಧವಿಷ ದೃಷ್ಟಿವಿಷ (ಪ್ರ) ಹರಿ ತ್ರಾಂ ಹ್ರೂಂ ಸ್ರೋಂ ಸ್ವಾಹಾ

ಪಕ್ಷಿರಾಜಮಂತ್ರಂ.

ಓಂ ನಮೋ ಭಗವತೇ ರುದ್ರಾಯ ಪವನವೇಗಾಧಿಪತಯೇ ಮಹಾಪಕ್ಷಿರಾಜಾಯ ಪಕ್ಷವಾತೇನ ಹರ

ವಿಷಂಜ (ಚ) ಸ್ವಾಹಾ

ಭ್ರಾಮರೀಮಂತ್ರಂ.

(ಓಂ) ಭ್ರಮರಿ ಭ್ರಾಮರಿ ಸರ್ವ ವಿಷನಾಶಿನಿ ಸ್ವಾಹಾ

ಈಶ್ವರೀಮಂತ್ರಂ.

ಹ್ರೂಂ

ನೀಲಕಂಠಮಂತ್ರಂ.

ಓಂ ಕ್ರೋಂ ಪ್ರೋಂ ತ್ರೀಂ ಠಃ ನೀಲಕಂಠಾಯ ಸ್ವಾಹಾ

ಮಂಗಳಾಖ್ಯವಿದ್ಯೆ

ಓಂ ನಮೋ ಭಗವತಿ ಪರಮಸತ್ವೇ ಪರಮಾಕ್ಷರೇ ವಿದ್ಯೆ ಮಹಾವಿದ್ಯೆ ಚಂದ್ರ ಕಾಪಾಳಿನಿ ಘೋರಶ್ಮಶಾನ ಪರಿಭ್ರಮಣಿ ಅಷ್ಟಾಟ್ಟಹಾಸಿನಿ ಉಜ್ಜೇನಿಪೀಠನಿವಾಸಿನಿ ಏಹಿ ಭಗವತಿಪೀಠೆ ಮಹಾಪೀಠೆ ಓಂ ಶ್ರೀಂ ಮಂಗಳಾದೇವ್ಯೈ ನಮಃ ಸರ್ವಕಾಮ್ಯಾರ್ಥದಾಯಿನಿ (ಸರ್ವ) ಯಿಚ್ಛಾಪ್ರದಾಯಿನಿ ಯೋಗಿನಿ ಯೋಗಪೀಠಸ್ಥೆ ತ್ರಿಪುರೆ ತ್ರಿಯಕ್ಷರೆ ತ್ರಿಪದೆ

ತ್ರಿಕೋಣವಾಸಿನಿ ವೇತಾಳ ಅಪಸ್ಮಾರ ಯಕ್ಷ ರಾಕ್ಷಸ ಭೂತಪ್ರೇತಪಿಶಾಚನಿವಾರಿಣಿ ಸ್ಥಾವರ ಜಂಗಮ ಕೃತ್ರಿಮವಿಷ ನಿರ್ನಾಶಿನಿ ಸರ್ವ ಜ್ವರವಿನಾಶಿನಿ ಏಹಿ ಮಮ ಸಪುತ್ರಪೌತ್ರ ಪಶುಬಾಂಧವ ಭ್ರತ್ಯ ಕಳತ್ರ ಪರಜನಸಹಿತಸ್ಯ ರಕ್ಷ. ವಜ್ರಶರೀರಂ ಕುರು = ಸ್ವಕುಲೇಸ್ಥಿತಂ ಪರಕುಲೇಸ್ಥಿತಂ ರಾಜಕುಳೇಸ್ಥಿತಂ ಸುಪ್ತಸ್ಥಿತಂ ಜಾಗ್ರತ್‌ಸ್ಥಿತಂ ಪಥಿಸ್ಥಿತಂ ಗೃಹಸ್ಥಿತಂ ಬಾಹ್ಯಸ್ಥಿತಂ ರಕ್ಷ. ಸರ್ವಶಂಕಾನ್‌ ನಿರ್ನಾಶಯ ಸರ್ವ ದುಷ್ಟಕ್ಷುದ್ರಾಂ ಭಂಜಯ, ಏಕಾಕ್ಷರಿ, ದ್ವ್ಯಕ್ಷರಿ, ತ್ರ್ಯಕ್ಷರಿ ಚತುರಕ್ಷರಿ ಪಂಚಾಕ್ಷರಿ ಕಾಲ ರುದ್ರಂ ನಿವಾರಯ. ಬಂಧ ಆಕ್ರಾಮಯ, ಒಡ್ಯಾಣ ಪೀಠ ಪ್ರಸಾದೇನ (ಅನ್ಯ (ಸ್ಯ) ಉಪಪೀಠಪ್ರಸಾದೇನ) ದೇವಿ ಜಾ (ಬ)ಳಾಂದರಪೀಠಪ್ರಸಾದೇನ ಪೂರ್ಣ ಗಿರಿಪೀಠಪ್ರಸಾದೇನ ಕಾಮರೂಪಪೀಠಪ್ರಸಾದೇನ, ಏವಂ ಚತುಃಪೀಠಪ್ರಸಾದೇನ ಅನ್ಯಮುಪಪೀಠ ಪ್ರಸಾದೇನ ದೇವಿ ಮಮ (ಸಾಧ್ಯಂ) ಪ್ರಸಾದಂ ಕುರು ಏಕಾಹ್ನಿಕಂ, ದ್ವ್ಯಾಹ್ನಿಕಂ ತ್ರ್ಯಾಹ್ನಿಕಂ ಚಾತುರ್ಥಿಕಂ ಸಂಧ್ಯಾಜ್ವರಂ, ರಾತ್ರಿಜ್ವರಂ ವಿಷಮಜ್ವರಂ, ಸನ್ನಿಪಾತಜ್ವರಂ ಸರ್ಪಜ್ವರಂ ನಿರ್ನಾಶಯ ಸರ್ವಾಶನಿ ವಜ್ರಂವಾರಯ, ಸರ್ವವಿಷಂ, ಭಕ್ಷಯ, ಏಹಿ ಇಂದ್ರವಜ್ರೇಣ ಯಮದಂಡೇನಗರುಡ ಪಕ್ಷಪಾತೇನ ಮಹಾಕಾಳರೂಪಿಣಿ ಸರ್ವವಾದಾನ್‌ ವಿಧ್ವಂಸಯ ನಿರ್ಭಯಂ ಕುರು ರಕ್ಷ ಮಂತ್ರಸಿ (ದ್ಧಿಂ) ದ್ಧಂ ದದಾತು-ಓಂ ಹ್ರೀಂ ಶ್ರೀಂ ಕ್ರೂಂ ಫಟ್‌-ನಿರ್ವಿಷದೃಷ್ಟಿಪ್ರತ್ಯಯಂ.

ಮೇಘಮಾಲಾಮಂತ್ರಂ.

ಮಂತ್ರಂ. ಓಂ ಮೇಘಮಾಲೆ, ವಿಮಳೆ ಹರ ವಿಷವೇಗಂ ಹಾಂ, ಹಂ ಶಂಬರಿ ಅ (ಚರಿ)

ಚಿ (ಆಚರಿ) ಲೆಚಿ ಸರ್ವವಿಷನಾಶಿನಿ ಮಹಾಮಾಯೆ ಹಂ (ಹಂ)ಸಃ (ಉಂ)ಠ (B) ಸ್ವಾಹಾ, (ಜ)

ಮಂತ್ರಂ. ಓಂ ನಮೋ ಅನಂತಾಯ ಮಹಾನಾಗಹೃದಯಾಯ ಸರ್ವ ನಾಗವಶಂಕರಾಯ ಸ್ವಾಹಾ

ಸಂತರ್‌ ಮುಂ ಮಂತ್ರವಾದಜ್ಞರೊಳಧಿಕಗುಣರ್‌ ಪೇೞ್ದು ಶಿಷ್ಟೇಷ್ಟಮಾಗಿರ್ಪಿಂತೀ ಮಂತ್ರಂ. ಗಳೊಳ್‌ ಭಾವಿಸಿ ತನಗುಚಿತಾರ್ಥಕ್ಕೆ ತಕ್ಕೊಂದಱಿಂದೇಕಾಂತಸ್ಥಾನಂಗಳೊಳ್‌ ಮುಂ ಜಪಿಸಿರಲಹಿದಷ್ಟಂಗೆ ತನ್ಮಂತ್ರಪೂತಾತ್ಯಂತ ಸ್ವಚ್ಛಾಂಬುವಿಂ ನಿರ್ಗತವಿಷಮೆನಿಕುಂ ಸ್ನಾನಪಾನಂಗಳಿಂದಂ

ಬಡಬಾನಳ ಭೈರವ ಮಂತ್ರೋದ್ಧಾರಂ

ಓಂ ನಮೋ ಭಗವತೇ ನಮೋಯ ರುದ್ರಾಯ ಮಹಾಪ್ರಳಯಕಾಲ ತಾಂಡವ ಭೈರವಾಡಂಬರಾಯ ತ್ರಿಶೂಲ ಡಮರುಗ ಖಟ್ವಾಂಗ ಕಪಾಲಮಾಲಾಧರಾಯ, ಸೋಮಸೂರ್ಯಾಗ್ನಿ ನೇತ್ರತ್ರಯಾಯ, ಶಶಾಂಕಾಲಂಕೃತ ಶೇಖರಾಯ ಕೃಷ್ಣಸರ್ಪಜ್ಞೋಪ ವೀತಾಯ ಅನೇಕ ಕಾಲ ನಿರ್ನಾಶನಾಯ, ಯುಗಯುಗಾಂತರಾಳಪ್ರಳಯಾ, ಪ್ರಚಂಡ ಹ್ರೀಂ ಹ್ರೂಂ ಮಾರ್ತಂಡ ಮಹಾಭೈರವ ಲಳ, ಚಳ, ವಳ ಹು (ಳು) ಗರ್ಜ ಹಂಸ, ಜರ ಜ್ವಲ ಮಲ ಮೋಟಯ ತ್ರೋಟಯ, ಸರ್ವ ದುಷ್ಟಗ್ರಹಾ ನ್ನಿವಾರ (ಣಾ)ಯ ಶಿರೋ ಲಲಾಟ ಕರ್ಣ ನಾಸಿಕಾ ಚಕ್ಷುರ್ಮುಖೋಷ್ಠ ತಾಲು ಹನುಗ್ರೀವ ಭಾಳ ಬಾಹು ಕರ ವಕ್ಷಸ್ಥಳೋರೂದರ ಪೃಷ್ಠ ನಾಭಿ ಗುದ ಗುಹ್ಯ ಜಾನು ಜಂಘಾಪಾದ ಪಾದಾಂಗುಷ್ಠಾನ್‌ ಛಿ (ಸ)ಂದಿ, ಭಿಂದಿ ಮುಹುಃ, ಮೂಷಯ, ತ್ರೋಟಯ ಓಂ ಹ್ರಾಂ ಕ್ಷ್ಮ್ಲ್ಯೂಂ ಹಂಸಕ್ಷ್ಮ್ಲೂ ಕೂ ಐಂ ಯೂಂ ಹಂಸ ಕ್ಷ್ಮ್ವೂ ಯ್ಯ್ರಂ ವಂಯೂಂ ಗ್ಮ್ಲ್ದೂಯ್ಯ್ರಂ ರ್ದ್ರಿಯೂಂ ಕ್ಷ್ಮ್ಲ್ವಐಂ ಯೂಹಂಸಕ್ಷ್ಮ್ಲೂ ಯೂಂ ವಂಯೂಂ ಗ್ಮ್ದ್ಲ್ರೂಂ ರ್ದ್ರಿಯೂಂ ಕ್ಷ್ಮ್ಲ್ವೂಂ ಐಂ ಯೂಂ ಹಂಸಕ್ಷ್ಮ್ಲ್ವೂಂ ಐಂ. ಯಾಂ ಯೂಂ ಕ್ಷ್ಮ್ಲ್ವೂಂ ಐಂ. ಯಿಂ ಹಂಸ ಕ್ಷ್ಮ್ಲ್ವೂಂ ಐಂ ಯೂಂ ಠಠ ಕ್ಷ್ಮ್ವ್ಲೂಂ ಐಂ ಯೂಂ ಹೂಂ ಫಟ್‌, ಘೇ ದಷ್ಟ ಆವೇಶಯ ಅವತರ ಅಗಭ್ರ ಕಹ ಕಂಪ ಗ (ದ)ದಾ ಮುದ್ಗರ ತೋಮರ ಪರಶುಹಸ್ತಾಯ ಫಲಪುಷ್ಪ ತಾಂಬೂಲ ಸುವರ್ಣ ಕೃಷ್ಣಾಯ ಓಂ ಐಂ ಕ್ಲೀಂ ಹ್ರೀಂ ಸ್ತ್ರೀಂ ಆಂ ಕ್ರೋಂ (ತ್ರೋಂ) ದ್ರಾಂ, ದ್ರಿಂ, ಕ್ಷೀಂ ಮ್ಲಾಂ (ಕ್ಷೂಂ ಕ್ಷಂ ಕ್ಷಃ) ಹಂಸಃ, ಪರ ಮಂತ್ರ ಯಂತ್ರ ತಂತ್ರ ಶತಸಹಸ್ರ ಲಕ್ಷಕೋಟಾನ್‌ (ಕೋಟಿನ್‌) ಛೇದಯ, ಆತ್ಮ ಮಂತ್ರ ತಂತ್ರ ಯಂತ್ರ ಕೋಟಾನ್‌ ಪೂಜಯ, ದಿಶಾಬಂಧಂ, ತತ್ರ ಸರ್ವದಿಶಾಬಂಧ ಓಂ ನಮೋ ಭೈರವ ಬಡಬಾನಳಾಯ ಆಂ ಕ್ರೋಂ ಹ್ರಾಂ ಹ್ರೀಂ ಹ್ರೂಂ ಹ್ರೌಂ ಹ್ರಂ ಹ್ರಃ ಕ್ಷಂ ಕ್ಷಾಂ ಕ್ಷಿಂ ಕ್ಷೀಂ, ಕ್ಷುಂ, ಕ್ಷೂಂ, ಕ್ಷೆಂ, ಕ್ಷೇಂ, ಕ್ಷೈಂ (ಕ್ಷೊ) ಕ್ಷೋ ಕ್ಷೌ, ಕ್ಷಂ, ಕ್ಷಃ

ಎಂಬೀ ಮಂತ್ರಮಂ ಬರೆದು ಅಷ್ಟವಿಧಾರ್ಚನೆಯಿಂದರ್ಚಿಸಿ ಯಂತ್ರಂ

ಕ್ಷೇತ್ರಾಧಿಪತಿಯ ಮುಂದೆ ಪವಿತ್ರಾರುಣ ಕುಸುಮಮಂ ಸಹಸ್ರ ಸಮೇತಂಸ್ತೋತ್ರಯುತಮಷ್ಟಸಂಖ್ಯಾಮಾತ್ರಮನರ್ಚಿಸಲದಾತನೊಳ್‌ ಸಿದ್ಧಿಸುಗುಂ

ವಿನುತಂ ಗ್ರಹತತಿಗುಚ್ಚಾಟನಮಕ್ಕುಂ ಸಕಳ ವಿಷಹರಂ ತಾನೆನಿಕುಂಜನತಾವಂದ್ಯಮಿದಾವೇಶನಮುಖ್ಯಂಗಳ್ಗೆ ಯೋಜಿಪುದು ಮಂತ್ರಜ್ಞಂ

ಇನ್ನಾ ವಿಸರ್ಜನಮಂತ್ರಮಂ ಪೆೞ್ವೆಂ

ಮಂತ್ರ – ಓಂ, ಐಂ ದ್ಪ್ಮ್ವ್ಯೊಂ ಕ್ಲೀಂ, ಹ್ರೀಂ, ಸ್ತ್ರೀಂ ಅಂ, ಕ್ರೋಂ, ದ್ರಾಂ, ದ್ರಿಂ ಕ್ಲೀಂ, ಹ್ಲಿ (ಜಂ)

ಸ ಯಾ, ರಿ – ಜಃ ಜಾ ಎಂದು ವಿಸರ್ಜನಮಂತ್ರ

ಇದು ಸರ್ವಾ (ರ್ಪಾ)ವೇಶಕ್ಕಂ ವಿಸರ್ಜನಂ

ಉರ್ವಿಯೊಳಹಿದಷ್ಟಂಗಂನಿರ್ವಿಷಮಕ್ಕುಂ ವಿಧಿಜ್ಞಮಂತ್ರದ ದೆಸೆಯಿಂಸರ್ವವಿಷಂಗಳ್ಗದಱೆಂನಿರ್ವೃತಿಯಕ್ಕುಮೆಯಿದಲ್ಲದುೞಿದೌಷಧದಿಂ

ವಿಲಸದ್ಜ್ಞಾ ನದೃಗಾದಿ ಲಕ್ಷಣನ ನೇಕಾಂತಾತ್ಮನತ್ಯಂತ ನಿರ್ಮಲ ನಿರ್ವಾದ ನಿರಾಮಯಂ ನಿರುಪಮಂ ತಾನಂದು ತಾಂ ತನ್ನೊಳಂನೆಲೆಗೊಂಡಾತ್ಮ ವಿನಿಷ್ಟನಾಗಿರೆ ಮಹಾಪೂತಾತ್ಮನಕ್ಕುಂ ಬಱಿಕ್ಕೞಿಗುಂ ಸರ್ವವಿಷಾಧಿ ತತ್ತನುಲಸತ್ಸಾನ್ನಿಧ್ಯ ಮೃಣ್ಮಾತ್ರದಿಂ

ತನು ತಾನಲ್ಲೆಂ ಬಾಧೆಗಳೆನಗಿಲ್ಲಂ ಸರ್ಪ ಕೀಟಕಾದಿಗಳಿಂದಿಂದೆನುತುಂ ಭಾವಿಸೆ ತನ್ನಂಜನಿತಾತ್ಮಸುಖಂ ವಿಷಾದಿ ಘಾ ತನೆನಿಕ್ಕುಂ

ಉರಗವಿಷಹರಂ ತತ್ಸಿದ್ಧಮಂತ್ರಪ್ರಯೋಗಂಸ್ಮರವಿಷಹರಮಕ್ಕುಂ ನೋಡೆ ಶುದ್ಧೋಪಯೋಗಂಧರೆಯೊಳನುಪಮಂ ತದ್ದಂದ್ವಮೆಂತದಱಿಂದಂವಿರಚಿಸಿದೆನಿದಂ ನಾಂ ನೋಡೆ ಸದ್ಭಾವದಿಂದಂ

ಇದು ಸದ್ವಿಧ್ಯಾನಿಧಾನಂ ಸಕಳಜನಹಿತಂ ಸಂಗ್ರಹಾದಿ ಪ್ರಸಿದ್ಧಾಸ್ಪದಮೆಲ್ಲಂ ಮಂತ್ರಶಾಸ್ತ್ರಂಗಳ ತಿರುಳುಪಮಾತೀತ ಭೀತಿಪ್ರಣಾಶಂಸದಯರ್‌ ಮುಂಕೊಂಡು ನೋೞ್ಪಾ ಪರಮವಿಧಮಿದಂ ಲೋಕ ಮೆಚ್ಚಲ್ಕೆ ಪೇೞ್ದಂಬುಧಮಿತ್ರಂ ಮಂಗರಾಜಂ ಸಕಳ ಜನನುತಂ ಪುಣ್ಯಭೂಜಾತಬೀಜಂ

ಗದ್ಯ. ಇದು ಸಕಲ ವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃ ಪಯೋನಿಧಿಪಾರಗ ಶ್ರೀ ಪೂಜ್ಯಪಾದ ಮುನೀಂದ್ರ ಚಾರುಚರಣಾರವಿಂದ ಗಂಧ ಗುಣಾನಂದಿತ ಮಾನಸಂ ಶ್ರೀಮದಖಿಲ ಕಲಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್‌ ಸಂಗ್ರಹಾದ್ಯಷ್ಟವಿಧ ಗಾರುಡ ಮಂತ್ರಾಧಿಕಾರಂ ಚತುರ್ಥಂ