EN | KA

Menu

I

ಸಿದ್ಧರಾಮ ಚಾರಿತ್ರ

ಭೂವಲಯದೊಳಗುಳ್ಳ ಸರ್ವಜೀವಾಳಿಗಳಪಾವನಂ ಮಾಡಲೆಂದನುಗೆಯ್ದ ಶಿವಸಿದ್ಧಜಾವಳನೆ ದೇವಕುಲಕರ್ತ ಮರ್ತ್ಯದೊಳುದಿಸಿದನು ಸುರರುಘೇಯೆನುತಿರೆ

ಶ್ರೀ ಮಹಾಗುರು ಬಿಲ್ಲೋದಗ್ರ ವಿಗ್ರಹನಚಳಸೋಮಧಾಮಾವೃತ ಜಟಾಪಟ್ಕಲವೇಷನಾಶಾಮಯ ಭಯಾತೀತ ನೂತನಾಂಗಂ ಮಂಗಳೋದಯ ದಯಾಭರಿತನುಪ್ರೇಮದಿಂದೆಮಗೆ ಭಕ್ತಿಯನೀಗೆ ಶಿವಸಿದ್ಧರಾಮನಭಿರಾಮನುದ್ದಾಮ ಜಿತಕಾಮನತಿಭೀಮ ಸುಖಧಾಮ ಮಾಯಾಮಥನಸಂಗ್ರಾಮ ಸೋಮಧರ ಸಲಹುಗೆಮ್ಮ

ಇವರೆನ್ನ ಸರ್ವಸಾಮರ್ಥ್ಯ ಶಾಸನರೂಪರಿವರೆನ್ನ ಮಹಿಮಾ ಸುಧಾಪಾನ ಸಂತುಷ್ಟರಿವರೆನ್ನ ಪುಣ್ಯಕೀರ್ತಿ ಪ್ರಭಾವನಧಿ ವರ್ಧನ ತುಹಿನಕರ ರೂಪರುಇವರೆನ್ನ ಸಮಯದಾಜ್ಞಾಪಾಲನಾವಿಷ್ಟರಿವರು ಲೋಕದ ದುರಿತ ಮಥನ ಕಥನೋದ್ಯೋಗರಿವರೆಂದು ಸಂತಸದೊಳೆಕ್ಕವಿಂಡಂ ಸಲಹುಗಾ ಸಿದ್ಧಚಕ್ರೇಶನು

ಹಸಿಯದುಣ್ಣದ ಬೆಮರದವೆಯಿಕ್ಕದಾಗುಳಿಸದುಸಿರಿಕ್ಕದನುಗೆಡದ ವಿಣ್ಮೂತ್ರಮಂ ವಿಸರ್ಜಿಸದ ಕಾಮಿಸದ ಕೋಪಿಸದ ಕರ್ಮದ್ವಯಂ ರೂಪಿಸದ ನಿರ್ಮಾಯನುನೊಸಲಕಣ್ ನಿಜಮಕುಟ ಸಹಜ ಕುಂಡಲವೆಸೆವರಸೆಯ ಶಂಕರನೆನಿಪ ಸಿದ್ಧರಾಮಯ್ಯನಂತೊಸೆದು ತನ್ನಂ ಪೊಗಳ್ವ ಬೂತೀತನೆಂದೆನ್ನ ಮತಿಗೆ ಮಂಗಳವಾದನು

ವರಸುಧಾರೋಗಣೆಗೆ ಮಾಧುರದ ಹಂಗೇಕೆತರಣಿಯೋಲಗಕೆ ಸೊಡರಂ ಪಿಡಿವ ತೊಡಕೇಕೆಪರುಷದಾಭರಣಗೆಲಸಕ್ಕೆ ಮಿಸುನಿಯನಱಸಿ ತೊಳಲುವಾಯಸವೇತಕೆನೆರೆದ ಸೊಗಸಿನ ಸುಗ್ಗಿ ರಸದ ಮಡು ಪುಣ್ಯದಾಗರವೆನಿಪ ಸಿದ್ಧರಾಮನ ಕಥೆಗೆ ಕಾವ್ಯಮಂವಿರಚಿಸುವಡಷ್ಟಾದಶಸ್ಥಲವ ಪೊಗಳಲೇಕಗ್ಗದ ಸಮರ್ಥ ಕವಿಗೆ

ಸಲ್ಲಲಿತವಹ ಪುಣ್ಯಕಾವ್ಯ ಕಥನದೊಳು ಮುನ್ನಿಲ್ಲದುದ ನುಡಿದುಳ್ಳುದಂ ಪೂಳ್ದು ಹುಲ್ಲು ಹೊಲನೆಲ್ಲವಂ ಪೊಗಳಿ ಸುಧೆಯೊಳಗೆ ನಂಜಿಡುವಂತೆ ಮೇಳವಿಸಿ ಪೇಳೆ ನಾನುಬಲ್ಲಂತೆ ಮರ್ತ್ಯಾನುಸಾರದಿಂ ಶಿವಸಿದ್ಧವಲ್ಲಭನ ಮಹಿಮೆಯಂ ಸರ್ವರಱಿಯಲು ನಟ್ಟಕಲ್ಲೆನಿಸದಿಳೆಯೊಳಗೆ ಸುಳಿವ ಶಾಸನವೆನಿಸಿ ಪೇಳ್ವೆನೀ ಸತ್ಕೃತಿಯನು

ಸಾದರಂ ಮಿಗೆ ಕಥಾನಾಯಕಂ ದುರ್ವ್ಯಸನಿಯಾದೊಡಂ ನಿಷ್ಕಾಮನೆಂದೆಂದು ದುರ್ನೀತನಾದೊಡಂ ನೀತಿವಿದನೆಂದಜ್ಞನಾದೊಡಂ ಸಲೆ ಶಿವಜ್ಞಾನಿಯೆಂದುಮೋದದಿಂ ಕವಿ ಕಾವ್ಯದೊಳ್ ಪೊಗಳಬೇಕೆಂಬಹಾದಿಯಿಂ ಪೊಗಳ್ವಡೀಶ್ವರನಾಣೆ ಶಿವಸಿದ್ಧರಾದಿತ್ಯ ಸಿದ್ಧರಾಮ ಚರಿತ್ರವನೆಯ್ದೆ ಪೊಗಳಲಾನೆನಿತಱವನು

ಅರರೆ ತನುವೆರಸಿ ಮನವೆರಸಿ ನಂಟರುವೆರಸಿಪುರವೆರಸಿ ನಾಡುಗಳ್ವೆರಸಿ ರಾಜ್ಯಂವೆರಸಿಹರನನೆಯ್ದಿದ ಪುರಾತನರ ಕಥೆಗಳು ಪುರಾಣಂಗಳೊಳಗಲ್ಲದಿಲ್ಲಧರೆಯಱಿಯಲಿಂತು ಸೊನ್ನಲಿಗೆಯಲಿ ನಡೆಯುತಿಹಸಿರಿಯಾಗಿ ಸಾಮರ್ಥ್ಯರೀತಿ ಪೇಳುವೆ ಜಗದಗುರು ಸಿದ್ಧರಾಮನಾಥಂ ಮನುಜನಲ್ಲ ಕಾರಣರುದ್ರನೆಂಬ ಬಗೆಯ

ಧರೆಗೆ ಸೊನ್ನಲಿಗೆಪುರ ಕೈಲಾಸವಾ ಜಗದಗುರು ಸಿದ್ಧರಾಮನೀಶ್ವರನಲ್ಲಿ ಮೆಱೆವ ಗುಡ್ಡರು ಗಣೇಶ್ವರರಖಳ ಜನವಮರರವರ ಸತಿಯರು ರುದ್ರಕನ್ಯಕೆಯರುನೆರೆದ ಶಿವಭವನಂಗಳಷ್ಟಷಷ್ಠಿ ಕ್ಷೇತ್ರನಿರುತವೆಂದೆತ್ತಿದೆನು ಕಯ್ಯನಿದನಲ್ಲೆಂಬ.ಪರವಾದಿಯಾರವನ ಶಿರದೊಳಿಳುಹುವೆನೆನ್ನ ವಾಮಪದಪಾದುಕೆಯನು

ನಾರು ಬೇರಂಜನಂ ಘುಟಿಕೆ ಮೂಲಿಕೆ ಬಿಲದ್ವಾರ ರಸಸಿದ್ಧಿ ಧಾತೂವಾದ ವಶ್ಯ ಕುಟಿಲಾರಾಧನಂ ವಲಿತ ಪಲಿತನಾಶಂ ಕಾಲವಂಚನಾಭ್ಯಾಸಯೋಗಂಮಾರಣಾದಿ ವಿಕರ್ಮ ಮಂತ್ರಯಂತ್ರಂ ತಂತ್ರಸಾರ ಪರಕಾಯ ಪ್ರವೇಶಮಂ ಬಯಸುವ ವಿಕಾರಿ ಸಿದ್ಧರು ಸರಿಯೆ ಸಿದ್ದರಾಮಂಗೆ ಶಿವಸಿದ್ಧಕುಲಕಮಲರವಿಗೆ

ಉರಿಯೊಳಳಿದಂ ವ್ಯಾಳಿ ಕೆಱಿವೊಕ್ಕ ಕೋರಾಂಟನಿರದೆ ಚಕ್ರಕ್ಕೆ ತಲೆಗೊಟ್ಟ ನಾಗಾರ್ಜುನಂಪಿರಿಯಕೆಸಱೊಳಗದ್ದ ರತ್ನಘೋಷಂ ಸರಿಯೆ ಕೇಳೆಮ್ಮ ಸಿದ್ಧೇಂದ್ರಗೆಉರಿಯ ಹಾಳಾಹಳದ ದಿವ್ಯಮಂ ಗೆಲಿದನಾಕೆಱಿಯನಾದರಿಸಿ ಕಟ್ಟಿಸಿ ಧರಾಚಕ್ರದೊಳುಮೆಱೆದು ಗುಡ್ಡರ ಪಾಪಗೆಸಱ ತೊಳೆದಂ ಸಿದ್ಧರಾಮ ಪುಣ್ಯಾರಾಮನು

ಭಸಿತವೇ ಘುಟಕೆ ರುದ್ರಾಕ್ಷೆ ಮೂಲಿಕೆ ಸಿದ್ಧರಸ ಮೂಲಮಂತ್ರ ನಿಜಹಸ್ತ ಮೂಷಿಕೆ ನಿಯಾಮಿಸುವಾಜ್ಞೆಯಿಂಧನಂ ಜ್ಞಾನಾಗ್ನಿಯಗ್ನಿಯುಪದೇಶ ಕಣ್ಣಿಡುವುದಾಗಿಹೊಸಪಾಪಗಂಧ ಕಾಳಿಕೆ ಕೆಡಲು ಭವಿಲೋಹವಿಸರಮಂ ಕಳೆದಾ ಮಹಾಮಹೇಶ್ವರರೆನಿಪಮಿಸುನಿಯಂ ಮಾಡಿ ರುದ್ರಂಗೆ ಮಾಱುವ ಸಿದ್ಧನಾ ಸಿದ್ಧರಾಮಯ್ಯನು

ಕೃತಿವೆಸರು ಶ್ರೀ ಸಿದ್ಧರಾಮಚಾರಿತ್ರವೀಕೃತಿಗೊಡೆಯನಾ ಜಗದ ಗುರು ಸಿದ್ಧರಾಮನೀಕೃತಿಯ ಪಾಲಕರು ಗುರುಭಕ್ತರೆನಿಪೆಕ್ಕವಿಂಡುಗಳಿದಂ ಪೇಳ್ದಾತನುಚತುರ ಕವಿರಾಯ ಹಂಪೆಯ ಹರೀಶ್ವರನ ವರಸುತನುಭಯಕವಿ ಕಮಲರವಿ ರಾಘವಾಂಕ ಪಂಡಿತನೆಂದಡೀ ಕಥಾಸಾರದ ಲಹರಿಯನು ಬಣ್ಣಿಸುವರಾರೀ ಧರೆಯೊಳು

ಹೇಳಲಾರಳವು ಗುರುಕಘನವಿಳೆಯಂ ಬಳಸಿವೇಳಾತಟಂಗಳಿಂ ಶೈಲದಿಂ ಕಲ್ಲೋಲಮಾಲೆಯಿಂ ಶೈವಾಳಗರ್ತದಾವರ್ತದಿಂ ತಿಮಿತಿಮಿಂಗಲ ಕಮಠದಿಂವ್ಯಾಳ ಕರಿಮಕರ ನೀರಾನೆ ಯಾದೋಜಾತಿಜಾಳ ವಿದ್ರುಮರತ್ನ ಬುದ್ಬುದಾಫೇನಂಗಲೋಳಿಯಿಂದೆಸೆವ ನೀರಾಕರಂ ಭೂಮಂಡಲಕ್ಕೆ ಪರಿವೇಷದಂತೆ

ಆ ರುಚಿರ ವನನಿಧಿಯೊಳಿಟ್ಟ ವಸುಮತಿಯೆಂಬಚಾರುನಾವೆಯ ಕೂವಕಂಬಮೆಂಬಂತೆಸೆವಮೇರುವಿಂಗುತ್ತರಾಶೆಯೊಳು ಕಪ್ಪಳಿವಂತೆ ಲೇಸಾಗಿ ಕೀಸಿ ಕಡಿದಸಾರ ಶತಿಬಿಂಬದೊಟ್ಟಿಲ ತೆಗೆದು ತಿರುಳೆತ್ತಿಕೋರೈಸಿ ಪುಟವಿಟ್ಟ ಪುಣ್ಯದೊಬ್ದುಳಿಯೊ ಪೇಳಾರಱಿರೆಂಬಂತೆ ಮೆಱೆವ ಕೈಲಾಸನಗದೊಪ್ಪವನದೇವೊಗಳ್ವೆನು

ಕಣೆಯ ಕಣೆಯದ ದಾರವಟ್ಟ ವಜ್ರದ ಕದದಫಣಿಯಗಳಾಕಲ್ಪದಿಂದೆಸೆವ ರುದ್ರರ ಕಾಹನೆಣಿಸಬಾರದ ವೃಷಭಕೇತನಂಗಳ ಅಟ್ಟಣೆಗಳ ಕೊತ್ತಳದೊತ್ತಿನಮಣಿಗಳಸ ಕೋಂಟೆಗಳ ಘಳಿಯಾರಭದ್ರೆಗಳಗಣನೆಗಳನಾರ್ ಬಲ್ಲರೈ ಹೊನ್ನರನ್ನ ಕೇವಣದ ತೆನೆಗಳಲಿ ಮೆಱೆಯಿತು ತ್ರಿಣಯನಾವಾಸಪರ್ವತವಗುರ್ವಿಸುತಲಿ

ಗಿರಿಯಸಾನುಗಳಿಂದ ಪರಿವ ರಸದೊಜ್ಜರದಪರಿಕಾಲ ನೀರುಂಡು ಬೆಳೆವ ಸುರಕುಜವನದ ಹೊರೆಯಮರುಜೇವಣಿಯ ಮೆಳೆಯ ಮಱೆಯೊಳು ಮೇವ ಸುರಭಿವಿಂಡಿನ ತೆಕ್ಕೆಯಪರುಷದರಿಗೊಂಡು ಚಿಂತಾಮಣಿಯ ಮೊರಡಿಗಳಪರುಷಮೃಗದಿಕ್ಕೆ ಚಮರೀಮೃಗದ ತೋರ್ಕೆಗಳವಿರಚಿಸಿತು ಕಿನ್ನರ ವಿಹಂಗ ಪನ್ನಗಕೋಟಿ ಬಳವೆತ್ತ ವನಚರದೊಳು

ಆ ನಗೇಂದ್ರನ ಮಕುಟಮಣಿನಿಕರವೆಂಬಂತೆಭಾನುಶತಕೋಟಿ ಪ್ರಭಾಪಟಲದಿಂ ಮೆಱಿವನಾನಾವಿತಾನ ನೂತನ ರಚನ ಕರ್ಮನಿರ್ಮಿತದ ನವನಿಳಯಂಗಳಏನನೆಂಬೆನು ನೆನೆವ ಮನಕೆ ಘನವೆನೆ ಕೀರ್ತಿಸಾ ನಾಲಗೆಗೆ ನಿಘ್ರವೆನೆ ನಡುವೆ ಗಿರಿಶನ ಸಭಾ ನವ್ಯಸದನವೆಸೆದುದು ಜಗದ ಚೋದ್ಯಮಂ ಕಡೆದು ಕರುವಿಟ್ಟಂದದಿ

ಆ ಸಭಾಸದನ ಮಧ್ಯದೊಳಿಟ್ಟ ರತ್ನ ಸಿಂಹಾಸನದ ಮೇಲೆ ದರ್ಪಿಷ್ಠ ದರ್ಪಕಕರಿ ಮೃಗೇಶನಗಜಾತೆವೆರಸೋಲಗಂಗೊಟ್ಟನಾಯೆಡವಂಕ ಬಲವಂಕದಿಕೇಶವಾಂಬುಜಪುತ್ರರಿಂದ್ರಾಗ್ನಿ ಯಮನಿರುತಿಪಾಶಧರರನಿಲವಿತ್ತಪನೀಶನೆಂಬ ದಿಗಧೀಶರಿರ್ದರು ಬಹಳ ಮನ್ನಣೆಯ ತೇಜಿಷ್ಠಗುಣವಿರ್ದುದೇವೊಗಳ್ವೆನು

ಮೃಡನ ನಡುಗಣ್ಣೆನಿಸಿ ಹಿಡಿವ ಕೈದುಗಳೆನಿಸಿಕುಡುವ ಕೈಯೆನಿಸಿ ನೆನೆವೊಡೆ ಮನಂ ತಾನೆನಿಸಿಯೆಡಬಲದ ಹರಿಯಜರ ಸುರಪತಿಯ ಲೆಕ್ಕಿಸದೆ ಶಿವನ ಹರಿವಿಷ್ಟರವನುಅಡಸಿ ಕುಳ್ಳಿರ್ದ ಸಾಲೋಕ್ಯ ಸಾಮೀಪ್ಯಗಳೊಡೆತನದ ಸಾರೂಪ್ಯ ಸಾಯುಜ್ಯಪದವಡೆದಕಡುಗಲಿ ಗಣೇಶ್ವರರ ಸಾಮರ್ಥ್ಯದಳವ ಬಣ್ಣಿಪಡೆ ಫಣಿಪತಿಗಾಗದು

ಏಳು ಕಡಲೊಡಲೆಡೆಯಲಡಗಿರ್ದ ಶೈಲಮಂಹೋಳುವರು ವಡಬಶಿಖಿ ತಣ್ಣಿತೆನೆ ಕೋಪಮಂತಾಳುವರು ಕಾಳೆಗದೊಳಿದಿರಾಗೆ ಕೀಳುವರು ಜವನ ಕೋಣನ ಕೋಡನುತಾಳಗುಟ್ಟುವರು ರವಿಶಶಿಗಳನಜಾಂಡ ಕುಳಜಾಳಮಂ ಮಣಿ ಮಾಡಿ ಕೊರಲೊಳಿಕ್ಕುವ ಕದನಕೋಳಾಹಳರು ಅಸಂಖ್ಯಾತಗಣ ನೆರೆದರಾ ಶೂಲಿಯೊಡ್ಡೋಲಗದೊಳು

ಅಜನನಲ್ಪಾಯುಷ್ಯನೆಂಬರಾತನ ಪಿತನನಿಜರೂಪ ಬಿಡಿಸಿ ಹತ್ತವತಾರದೊಳ್ ಬರಿಸಿಸೃಜಿಸಿ ಬೇಱೊಂದು ಸೃಷ್ಟಿಯನು ಶಕ್ರನ ಸಿರಿಯನೊರಸಿ ವಾರಿಧಿಯ ಕುಡಿದುಭಜಿಸಿ ಶಿವನಂ ಪಾಲ್ಗೆ ಕ್ಷೀರವಾರ್ಧಿಯ ಪಡೆದುಭುಜಗ ತಲ್ಪಂಗನುಗ್ರಹವಿತ್ತ ಸಾಮರ್ಥ್ಯವ್ರಜಕೋಟಿಯಂ ತಳೆದು ಶಿವನನೊಲಿಸಿದ ಮುನೀಶ್ವರರಿರ್ದರಾ ಸಭೆಯೊಳು

ಭಾಳಾಕ್ಷದಿಂ ಪುದಿದ ಶಶಿಕಳಾಕಿರಣದಿಂಶೂಲತ್ರಯಂಗಳಸಿಲತೆಗಳ ತಳರ್ಪಿನಿಂವ್ಯಾಳಶಿರರತ್ನದೀಧಿತಿಕಾಯದುದ್ಧೂಳ ಭಸಿತದುಜ್ಜಳಕಾಂತಿಯಿಂಮೇಳೈಸಿ ದಿವಿಜಮಕುಟದ ಮಣಿಗಳಾಕಲ್ಪಜಾಳದಿಂದೆಸೆವ ಸುರರಂಗನೆಯರಕ್ಷಿಗಳೊಳಾಳೋಕಿಸಲು ಬೆಳೆದ ಬೆಳಗು ಬಳಸಿರಲೆಸೆದನೀಶನಗಜೇಶನಂದು

ಸುರರ ಸಂದಣಿಯ ಕಿನ್ನರರ ದೊಂದುಳಿಯ ಖೇಚರರ ಗುಂಪಿನ ಪನ್ನಗರ ಪಂಕ್ತಿಯಿಂ ಗರುಡರ ಗಡಣ ಯಕ್ಷರಾಕ್ಷಸರ ಕಳವಳವ ಜಡಿಯುತ್ತಿರ್ಪ ಪಡಿಹಾಱರಿಂನೆರೆದು ಕೇಳಿಸುವ ತುಂಬುರ ರಂಭ ಭೃಂಗಿಯಂಪರಿಕಿಸಿ ಪಸಾಯಮಂ ಪಾರುಖಾಣೆಯ ಕೊಡಲುನೆರೆದಿರ್ದ ಹರನ ಸಭೆ ಸುಖದ ಸೊಗಸಿನ ಜೊಮ್ಮುವಿಡಿದು ಮೆಱೆದಿರಲಲ್ಲಿಗೆ

ಗಾನದೊಳು ವಿದ್ಯದೊಳು ಪ್ರಾಯದೊಳು ಚೆಲುವಿನೊಳುಮಾನದೊಳು ಪದವಿಯೊಳು ಭೋಗದೊಳು ಶಿವಭಕ್ತಿಯಾನಂದದೊಳು ಶಿವನ ಕರುಣದೊಳು ಪ್ರತಿಯಿಲ್ಲೆನಿಪ್ಪ ಪುಣ್ಯವನೆ ತಳೆದುಜ್ಞಾನಮಯರದ್ರಿಶಿರರೂರ್ಧ್ವಶಿರರೆನಿಸುವಭಿಧಾನದಿಂದೆಸೆವ ಗಂಧರ್ವರಗಜೇಶನಾಸ್ನಾನಕ್ಕೆ ಬರುತಲವರಿದಿರಾಗಿ ಬಹ ಭಂಗಿಯಂ ಕಂಡು ನಸುನಕ್ಕರು

ಇಂದೆನ್ನನಱಿತಱಿಯದಂತೆ ನಕ್ಕುದಱ ದೆಸೆಯಿಂದವಜ್ಞಾನಮಯವಪ್ಪ ನರಜನ್ಮದೊಳುಬಂದು ಭವಿಸತಿಪತಿಗಳಾಗಿ ನೀವೆಂದು ಮುನಿದಾತ ಶಾಪವನಿತ್ತಡೆಮುಂದುಗೆಟ್ಟಱಿವುಗೆಟ್ಟಳುಕುತ್ತ ಬಳುಕುತ್ತತಂದೆ ಕರುಣಿಸು ವಿಶಾಪವನೆಂದು ಬಾಯ್ಬಿಡುವಮಂದಮತಿಗಳಿಗೆ ದೊರಕದ ಲೇಸನೀಯಬೇಕೆಂದು ಮನದೊಳು ನೆನೆದನು

ಎವೆಯಿಕ್ಕದುಸಿರಿಕ್ಕದುಣ್ಣದ ಜಿತೇಂದ್ರಿಯತ್ವವ ತಳೆದ ನಿರ್ಮಾಯನೆನಿಸುವ ಶಿವಜ್ಞಾನಿನಿವಗೆ ಮಗನಾಗಿ ಪುಟ್ಟಲು ವಿಶಾಪವೆನಲೆ ಗುಣವಿನಿಸನುಳ್ಳಾತನುಭವನದೊಳಗಿಲ್ಲ ಮೇಣುಳ್ಭೊಡಿಂತಪ್ಪಾತನೆವಗೆಂತು ಮಗನಪ್ಪನೆಂದಡದನನಂಬಿಕಾಧವನ ಕೇಳೆಂದು ಬಹ ಗಂಧರ್ವರಂ ಕಳುಪಿ ಹೋದನಾ ಭೃಂಗೀಶನು

ವಿಷಮತರ ಶಾಪರಾಹುಗ್ರಸ್ತರಾಗಿ ಮುಖಶಶಿಮಂಡಲಂ ಕಂದಿ ಕಳೆಗುಂದಿ ಬಂದು ವಂದಿಸುವ ಗಂಧರ್ವರಾಕಾರಮಂ ಕಂಡು ಕರೆದಂತಸ್ಥಮಂ ಕೇಳಲುವಸುಧೆಯೊಳು ಪೊಡಮಡಲು ದೇಗುಲಂ ಬಿರ್ದ ನುಡಿಪಸರಿಸುವ ನಾಡಗಾದೆಯ ತೆಱದಿ ನಿಮ್ಮ ಸೇವಿಸಬಂದ ನಮಗಾಯ್ತು ನರಕವಂಗಜದರ್ಪದಲ್ಲಣನೆ ಕೇಳೆಂದರು

ಆರಿಂದ ನರಕವಾದುದು ಭೃಂಗಿಯಿಂದದೇಂಕಾರಣಂ ಕಂಡು ನಕ್ಕುದಱಿದವೇನೆಂದಘೋರತರ ಭವಿಗಳಹ ನರರಾಗಿಯೆಂದ ಮೇಲೇಂ ವಿಶಾಪವ ಕೊಟ್ಟನುಕ್ರೂರನಲ್ಲದ ನಿತ್ಯತೃಪ್ತಂ ಜಿತೇಂದ್ರಿಯಂಶೂರನೇಕೋನಿಷ್ಠನಕ್ಷಯಂ ಮಂಗಳಾಕಾರ ಶಿವಯೋಗಿ ಮಗನೆನಿಸಿ ಪುಟ್ಟಲು ನಿಮಗೆ ನರಜನ್ಮ ಪೋಪುದೆಂದ

ಇಂತಪ್ಪ ಮಹಿಮನುಂಟೇ ಸುಕೃತಮುಳ್ಳೊಡೆಮ್ಮಂತಪ್ಪ ಪಾಪಿಗಳಿಗೊಗೆವನೇ ತಂದೆಯೆನಲಂತದಂ ಶಿವನ ಕೇಳೆಂದಡಿನ್ನೇಗೆಯ್ವೆವೆಂದು ದೈನ್ಯದಿ ನುಡಿಯಲುಕಂತುಮದಹರನವರಿಗಭಯವಿತ್ತಾತನೆಂದಂತೆಯಾಸಱನಳಿವೆನಖಿಳಮಂ ಹೊರೆವೆ ನಿಮ್ಮಂ ತೆಗೆದು ತಪ್ಪೆನುಮ್ಮಳಿಸಬೇಡಂಜಬೇಡೆಂದು ನಂಬುಗೆಗೊಟ್ಟನು

ಧಾರಿಣಿಯೊಳಗೆ ಜನಿಸಿ ಹೋಗಿ ನೀವೆಂದಡಾವೂರೊಳಗೆ ಸೊನ್ನಲಿಗೆಯೊಳಗೆಂದಡೆಮಗೆಂದುಕಾರುಣ್ಯನಿಧಿ ಜನಿಸುವೆಯೆನೆ ದೇಹವಿಕಾರ ವಿಷಯಂಗಳಱತ ಬಳಿಕಪಾರದ ಸಮೀಪದೊಳಜಾತನೆನಿಸುವ ಬಿರುದುತೀರದಂತೊಗೆದು ನಿಮ್ಮಂ ಕಾವೆನೆನಲು ಗಿರಿಜಾರಮಣನಡಿಗೆಱಗಿ ಬೀಳ್ಕೊಂಡರತುಳ ಸಂಭವ ಕಾರಣೋದ್ಯೋಗರು

ನಡೆತಂದು ಧರೆಯೊಳು ವಿಶಾಲತೆಯೊಳತಿ ಪೆಸರ್ವಡೆದಿರ್ಪ ಪುರ ಪಟ್ಟಣ ಗ್ರಾಮ ಸಂಕುಳದನಡುವೆ ಕಿಱುವಳ್ಳಿಯಾಗಿಯು ಕಣ್ಗೆ ಮೆಱೆದು ಹೆಂಪಿನೊಳಿರ್ಪುದೆಂತೆಂದಡೆಒಡಲೊಳತಿ ತೋರವೆತ್ತಿರ್ಪವಯವಂಗಳೊಳುನಡು ಸಣ್ಣನಾಗಿಯುಂ ಕಣ್ಣಿಗೆಸೆವಂತೊಪ್ಪವಿಡಿದಿಹ ಸುವರ್ಣವಲ್ಲಿಯ ಪುರಕ್ಕೆಯ್ತಂದರಾ ಗರುವ ಗಂಧರ್ವರು

ಧರೆಯ ಕುಡಿಯರ ಕುಲಶಿರೋಮಣಿಗಳೆನಿಪ ಗೌಡರ ಬಸಿಱೊಳೊಗೆದ ಸುಮುಹೂರ್ತದೊಳು ಕಱಲು ಕಲ್ಮೊರಡಿ ಬೆಳೆಯಲು ತಂದೆ ಬಾಲಂಗೆ ಪೆಸರ ಮೊರಡಿಯ ಮುದ್ದನೆಂದಿಟ್ಟನುತರುಣಿಯಂ ತಂದೆ ಸುಗ್ಗವ್ವೆಯೆಂದಿಟ್ಟನಿಬ್ಬರ ಮನೆಯೊಳಿಬ್ಬರತಿ ಗಳಗಳನೆ ನವ ವನಾಂತರದ ಕೊಳನೊಳಗೆ ಮಱಿದುಂಬಿಯುಂ ಸಣ್ಣನನೆಯುಂ ಬೆಳೆದವೊಲ್ ಬೆಳೆದರು

ಘನವಿದ್ಯದೊಳು ವಿನಯ ಕುಲದೊಳಾಚಾರ ರೂಪಿನೊಳು ಗುಣ ಭಕ್ತಿಯೊಳು ಭಯಭಾಗ್ಯದೊಳು ದಾನವಿನುತ ಸತ್ಯದೊಳು ಸಾಹಸ ತಪದೊಳಗೆ ಶಾಂತಿ ಕೂಡಿ ಧರೆಗೊಪ್ಪುವಂತೆನೆನಹು ನಿಲುಕದ ಪುಣ್ಯಪುಂಜೆಯಹ ಸುಗ್ಗವ್ವೆಗನುರೂಪನಪ್ಪ ಮೊರಡಿಯ ಮುದ್ದಗೌಡನೆಂದೆನಿಪವಂ ಪತಿಯಾಗೆ ಸಮಕಳಾಸಂಪತ್ತಿನಿಂದಿರ್ದರೇವೊಗಳ್ವೆನು

ವನಿತೆಯ್ಯದಾಱು ಸೂಲಂ ಗೆಲಿದಳುಱೆ ತನ್ನತನುವಿನೈದಾಱವಗುಣಂಗಳಂ ಗೆಲಿದಂತೆಜನನ ಮರಣದ ಸೂತಕಂ ಕೆಡುವ ತೆಱದಿ ಕೆಟ್ಟವು ಹೊಲೆಗಳಾ ದಿವಸಕೆಮನದ ಶುದ್ಧತಿಕೆ ತಲೆದೋರ್ಪವೊಲು ನರೆ ಮೊಳೆತುದನುನಯದೊಳೀ ತೆಱದಲಾಕೆಯಿರುತಿರಲೊಂದುದಿನ ಬರುತ್ತಿರ್ದನಾವೂರತ್ತಲಪ್ರತಿಮಸಿದ್ಧಕುಲಚಕ್ರೇಶನು

ಹರುಷದಿಂದಲಗನಾಹುತಿಗೊಂಡು ದೇವ್ಯರೆಲ್ಲರನಾಳಿಸುತ್ತ ಧ್ಯಾನದೊಳಿರ್ದು (?) ನೆಱೆ ಕೇಳ್ದುಹರಿತಂದು ನದಿಯ ನಡುವಣ ಸುರಿಗೆವಿಡಿದು ತೆಗೆದ ಮಾಸನೂರ ನೆರೆದತರುಣಿಯರ ಹರಣಮಂ ಕಾಯ್ದೊಂದು ಭಿಕ್ಷದಿಂಧರಣಿಪನ ಕಟಕವೆಲ್ಲವನೂಡಿದಪ್ರತಿಮಗುರು ರೇವಣಾಚಾರ್ಯನಾವೂರ ಸೀಮೆಯೊಳು ದಂಡಿಗೆಯನೊಲಿದಿಳಿದನು

ಹಾವುಗೆಗಳಂ ಕಳೆದು ಮೆಯ್ಯಿಕ್ಕಿ ಪುಳಕಿಸುತೆಭಾವಿಸುತೆ ಕಂಪಿಸುತ್ತಡಿ ನೆಲನ ತಾಗದಂತೋವಿ ನಡೆನಡೆದು ನಿಂದಡಿಗಡಿಗೆ ನೆನೆದು ಹಾರೈಸಿ ಬೆಱಗಾಗುತಿರಲುದೇವ ನೀವಿನಿತುಂ ಕೃತಾರ್ಥತೆಯನೆಯ್ದುವುದಿದಾವ ಕಾರಣವೀ ಪ್ರದೇಶಂಗಳೊಳು ಮಹಾದೇವ ಗೃಹಮಿಲ್ಲಾರ್ಯರಿಲ್ಲ ತೀರ್ಥಂಗಳಿಲ್ಲೆಂದು ಕೇಳ್ದರು ಶಿಷ್ಯರು

ಉದಕವಿಲ್ಲದ ತೀರ್ಥ ನೆಲೆ ಶಿಲಾನಾಮವಿಲ್ಲದ ಶಿವಂ ತನುಧರ್ಮ ಕರ್ಮ ಕಲ್ಮಷತೆಯಿಲ್ಲದ ಹಿರಿಯನೆನಿಪ ಶಿವಸಿದ್ಧನೀ ಪುರದೊಳಗೆ ಜನಿಸಿದಪನಾತನಿಂದಇದು ಲಿಂಗಬೀಡಾಗಿ ಸಿರಿಗೆ ಕರುವಾಗಿ ಪುಣ್ಯದ ಪುಂಜವಾಗಿ ಮುಕ್ತಿಕ್ಷೇತ್ರವಾಗಿ ಧರ್ಮದ ದಾನಿಯಾಗಿ ಧರೆಯಱೆಯೆ ಮೆಱೆದಪ್ಪುದೀ ಸೊನ್ನಲಿಗೆ ಕೇಳೆಂದನು

ಎಂದುದಯವಾದಪ್ಪನಯ್ಯಯೆಂದೆನೆ ವರುಷದಿಂದೊಳಗದಾವೂರೊಳೀ ವೂರೊಳಾರ ಬಸಿಚೆಂದ ಮೊರಡಿಯ ಮುದ್ದಗೌಡನಂಗನೆಯ ಬಸಿಱಿಂದವರ್ಗಳೀವೂರೊಳುಇಂದಿರ್ಪರೇ ಇರ್ಪರೆಮಗೆ ತೋರ್ಷಿರೆ ತೋರ್ಪೆವೆಂದಡಲ್ಲಿಗೆ ಪೋಗಬೇಕೆಂದ ನಿಜಶಿಷ್ಯವೃಂದವೆರಸೆಯ್ತಂದು ಪೊಕ್ಕಂ ತ್ರಿಕಾಲೋಚಿತಜ್ಞಾನಿಯಾ ಪುರವನು

ಭರವಸದಿನೆಯ್ತರುತ್ತಿರಲ್ ತನ್ನ ಮಂದಿರದಪಿರಿಯ ಬಾಗಿಲ ಮುಂದೆ ಶಿವಶಿವ ಮಹಾ ಕಲ್ಪತರುವಿನಗೆಯೊಗೆಯಲನುವಾಗಿರ್ದ ವನದಂತೆ ಫಳವುದಯವಾಗಲಿರ್ದಮರನಂತೆ ಕಂಪೊಗೆಯಲಿರ್ದ ಮುಗುಳಂತೆ ಸಿಂಗರಿಸಿರ್ದ ಸುಗ್ಗವ್ವೆಯುದರಮಂ ಮುಟ್ಟಿ ಸಿದ್ಧರ ದೇವನೆಱಗಿದಡೆ ಹೆದಱಿ ಕೇಳ್ದಳು ರಾಣಿ ಹೊಡವಂಟ ಕಾರಣವನು

ಎಂದುವುಂ ಸುಖದುಃಖವೆಂದಿಲ್ಲ ಶೀತೋಷ್ಣವೆಂದಿಲ್ಲ ಹಗೆ ಕೆಳೆಗಳೆಂದಿಲ್ಲ ಪುರವಡವಿಯೆಂದಿಲ್ಲ ಹಸಿವು ತಣಿವೆಂದಿಲ್ಲ ಹರುಷಂ ವಿಷಾದಂಗಳೆಂಬವಿಲ್ಲನಿಂದೆ ನುತಿಯೆಂದಿಲ್ಲ ನಾರಿಪುರುಷವ್ರಾತವೆಂದಿಲ್ಲ ದಿವರಾತ್ರೆಯೆಂದಿಲ್ಲ ಮೃದು ಕಠಿನವೆಂದಿಲ್ಲದಪ್ರತಿಮ ಶಿವಯೋಗಯುತ ನಿಮಗೆ ಪುತ್ರನಾದವನೆಂದನು

ಎನ್ನ ಹರೆಯಂ ಬಿಟ್ಟು ಜರೆವಟ್ಟು ಹೊಲೆಗೆಟ್ಟುಕೆನ್ನೆ ನರೆದೊಟ್ಟು ಶಿಥಿಲತ್ವವಳವಟ್ಟು ನೆಱೆಮುನ್ನಿನಂಗವಿಕಾರಮಂ ಬಿಟ್ಟು ಹೋಗಿ ಧಾತುಗಳು ಪಲ್ಲಟವಾದವುಇನ್ನು ನಾನೆತ್ತ ಮಗನ ಹಡೆವುದೆತ್ತಲಾತಂ ನೆಱೆದು ಕುಲವಳಿದು ಯೋಗಿಯಹುದೆತ್ತ ಲೋಕಂ ನಗುವ ಮಾತನಾಡಿದಿರಿ ಹುಟ್ಟುವಡೆ ಹುಟ್ಟನೆ ಹಿಂದೆ ಹೇಳೆಂದಳು

ಪುರುಷರೆಲ್ಲಂ ಕಂಡು ಕೂಡಲೆಳಸುವ ನಿನ್ನಹರೆಯದೊಳು ಹೊಲೆಗೆ ನೆರೆಯಪ್ಪ ಋತುಕಾಲದೊಳುಪರಮದಂಪತಿಗಳ ವಿಕಾರದನುಭವದ ಹೇಯದ ಶುಕ್ಲಶೋಣಿತದೊಳುಬೆರಸಿ ಜನಿಯಿಸಲಾರ್ಪನೇ ಮರುಳೆ ಜನಿಸಿಯುಂಹಿರಿಯನೇ ಎಂದಡಿನ್ನೆಂದೊಗೆವನೆಂದಡೊಂದೆರಡು ಮಾಸಕ್ಕೆಂದಡಾತನ ಚರಿತ್ರವೆಂತೆಂದು ಕೇಳ್ದಳು ಗುರುವನು

ಜಡನೆಂದು ಕೇಳನೆಂದಳನೆಂದು ನಗನೆಂದುನುಡಿಯನೆಂದುಣ್ಣನೆಂದುಸಿರಿಕ್ಕನೆಂದು ಧೃತಿಗೆಡದಿರುಮ್ಮಳಿಸದಿರು ನಾಮವಂ ಶಿವಸಿದ್ಧರಾಮನೆಂದಿಡು ಮಱೆಯದೆಮಡದಿಯರ ಮಾಣಿಕವೆ ಹೋಹೆನೇ ಎಂದೊಡಲತಡವಿ ಬಲಗೊಂಡು ಪೊಡಮಟ್ಟು ಚಾಮಲದೇವಿಯೊಡನಱಿದಿರಾ ಎಂದು ಕಾಣ್ಬುದೆಂದಾಡಿ ಪೋದಂ ಸಿದ್ಧರಾದಿತ್ಯನು

ಆನೆತ್ತಲಿನ್ನು ಮಗನಂ ಪಡೆವುದೆತ್ತಲಜ್ಞಾನಿಗೆನಗೆತ್ತ ದಿವ್ಯಜ್ಞಾನಿಯೊಗೆವುದೆತ್ತೀ ನೆಲದೊಳಂಗನೆಗೆ ಪುರುಷಸಂಗಂ ಸಮನಿಸದೆ ಗರ್ಭವಪ್ಪುದೆತ್ತಏನಸಂಭಾವಿತನಾದೊಡಂ ವೃದ್ಧರನುಮಾನವಿಲ್ಲದೆ ನುಡಿವರೆಂದು ತನ್ನೊಡನಿರ್ದಮಾನಿನಿಗೆ ನುಡಿದುದಾಸೀನದಿಂ ಮಱೆದಳಾರ್ಯನ ಪುಣ್ಯಸೂಚನೆಯನು

ಒಂದೆ ನುಡಿ ಸಾಕು ಹುಸಿಯಿಲ್ಲ ವೃದ್ಧರೊಳದೆಂತೆಂದಡಱುವತ್ತು ತುಂಬಿದೊಡೆ ಮಱುಮಾತು ಬೇಡೆಂದು ನಾಣ್ಣುಡಿಗಳುಂಟದೇಳುನೂರ್ವರುಷವಱಿಯದೇಳ್ವೂರು ವರುಷಸಂದ ರೇವಣಸಿದ್ಧನಾಡಿ ತಪ್ಪುವನೆ ಆನಂದದೊಳೆರಡು ಮೂಱು ತಿಂಗಳಂದಿಂಗೆ ತರುಣೇಂದುಮುಖಿಗಂಕುರಿಸಲನುವಾದ ಗರ್ಭವನದಾವ ಕವಿ ಬಣ್ಣಿಸುವನು

ಅತ್ತಲಭವಂ ನೆನೆದು ತನುವಂ ಸುತ್ತಿಮುತ್ತಿ ಸೇವಿಸುತಿರ್ಪ ಸಮತೆಯಂ ಸತ್ವಮಂನಿತ್ಯತ್ವಮಂ ತೃಪ್ತಿಯಂ ದಯೆಯತುಳ ಭಕ್ತಿಜ್ಞಾನ ವೈರಾಗ್ಯಮಂಎತ್ತಿ ಸದ್ಗುಣಶತವನಾಯ್ದುಕೊಂಡೊಂದು ಕಿಱುಪುತ್ತಳಿಯ ಮಾಡಿ ನಿಜಸಾಮರ್ಥ್ಯಸಂಕುಳವನಿತ್ತು ತಂದಿರಿಸಿದಂ ಸುಗ್ಗವ್ವೆಯುದರದೊಳು ಸುರರು ಜಯಜೀಯಯೆನಲು

ಮದನಂಗೆ ಚಿಂತೆ ಮಾಯೆಗೆ ದುಗುಡವಂತಕಂಗೆದೆಗುದಿಹವಾಶಾದಿ ವಿಷಯ ಷಡುವರ್ಗಕ್ಕೆಹೆದಱು ದುಷ್ಕರ್ಮಕ್ಕೆ ನಡುಕವಜ್ಞಾನಕ್ಕೆ ತಲ್ಲಣಂ ತಲೆದೋಱಲುಸುದತಿ ಸುಗ್ಗವ್ವೆಗೊಗೆಯಿತ್ತು ನವಗರ್ಭ ಲೋಕದ ಗರ್ಭದಂತಲ್ಲದನುಪಮಂ ಬೀಜವಿಲ್ಲದೆ ಮೊಳೆತ ಸಸಿಯನಾವಂ ಬಲ್ಲನಾತನೀ ಗರ್ಭದನುವ ಬಲ್ಲನು

ಮಾಗೆಯಟ್ಟುಳಿಯಿಂದ ಬಱತ ವನವಂ ವಸಂತಾಗಮಂ ಪುಗಲೊಡಂ ಮಂಗಳದ ಮನೆದೈವವಾಗಿ ಮೆಱೆವಂತೆ ಜರೆಯಂಡಲೆಯೊಳೊಪ್ಪವಳಿದಂಗಸಮುದಾಯಶೋಭೆಯೋಗಿಪತಿ ಗರ್ಭದೊಳ್ ಮೊಳೆಯೆ ಮುನ್ನಿನ ಗುಣಂಪೋಗಿ ಹರೆಯದ ಚೆಲುವನೈವಡಿಸಿದಂತೆ ಚೆಲುವಾಗಿ ತೊಳತೊಳಗಲಾ ವನಿತೆಯೊಪ್ಪಿದಳಿಂದುವಂ ತಳೆದ ರಾತ್ರಿಯಂತೆ

ತುಂಗವಿಕ್ರಮ ಸಿದ್ಧರಾಮನಂ ಷಡ್ವರ್ಗಮಂ ಗೆಲಲು ನಡೆವಡಜನಿಟ್ಟ ಗೂಡಾರಮಾಕಂಗೊಳಿಸಿತೆನೆ ತೆಳುವಸಿಱ್ ಪೆರ್ಚಿತಿಂದುಮೊದಲಿಕ್ಕೆಯಿಂ ತಾಪತ್ರಯಂಪಿಂಗಿದವೆನಲು ವಳಿತ್ರಯವಡಂಗಿದವು ಮೇಗಂಗವಿಸಿ ಕವಿದ ಭವಱೂಟಳದ ಬಾವಿ ಘಾತಂಗೆಟ್ಟು ಪೂಳ್ದಪುದೊ ಎಂಬಂತೆ ಗಂಭೀರನಾಭಿ ನೆಱೆ ಗುಣ್ಪಳಿದುದು

ಬಟ್ಟ ಮೊಲೆಯೊಪ್ಪಕ್ಕೆ ದಿಟ್ಟಿಯಕ್ಕೆನ್ನುತಜನಿಟ್ಟ ಕಾಪಿನ ಕರಿಯ ಬೊಟ್ಟುಗಳೊ ಗರ್ಭದೊಳುಪುಟ್ಟುವ ಶಿವಜ್ಞಾನಿಗಂಜಿ ಪೊಱಮಟ್ಟೋಡಲೆಂದುರೋಜದ ಧಾರೆಯಬಟ್ಟಗಾತಿರ್ದ ಮಾಯಾತಮವೊ ತಮ್ಮೊಳಳವಟ್ಟು ತನಗೆಂದಿಟ್ಟ ಪಾಲನೀ ಶಿಶು ಮುಂದೆಮುಟ್ಟನೆಂದುಮ್ಮಳಿಸಿ ಮುಖ ಕಂದಿದಂತೆ ಕುಚಚೂಚುಕಂ ಕಪ್ಪಾದುವು

ಪಂಚಮುಖನೇಕಮುಖದಿಂದೊಗೆದನೀತ ಜಿತಪಂಚಶರ ಪಂಚೇಂದ್ರಿಯಾಧೀನನಲ್ಲಲಾಪಂಚವಾಯುಗಳ ಹಂಗುಗಳಿಲ್ಲ ಪಂಚಭೂತದಿನಾದ ಕಾಯವಲ್ಲಪಂಚಮುದ್ರಾನ್ವಿತಂ ಪಂಚಾಕ್ಷರೀಪ್ರಿಯಂಪಂಚವರ್ಣಂ ಬಗೆವೊಡೀ ಬಸಿಱ ಶಿಶುವೆಂದುವಂಚಿಸದೆ ಪೇಳ್ವಂತೆಯಯ್ದು ತಿಂಗಳಲಿ ನವಮಾಸಚಿಹ್ನಂ ಬಲಿದುದು

ಬಸಿಱೊಡನೆ ಬಾಸೆ ಬಲಕೊಲೆಯೆ ತೆಳುಗುರುಳ ಕೂಡುಸಿರು ಭಾರೈಸೆ ನಡೆಯೊಡನೆ ನುಡಿ ಬಾಡಲಿರ್ದೆಸೆಯುಳ್ಳೆಯೊಡನೆ ಕಣ್ ಕುಳಿಯೆ ಮೊಲೆಗುಡಿಯೊಡನೆ ಕಕ್ಷಪುಟವಸಿತಮಾಗೆಮಿಸುಪ ಮುಖದೊಡನೆ ತನುಕಾಂತಿ ನಳನಳಿಸೆ ಸಂತಸದೊಡನೆ ಪುಣ್ಯಕಳೆ ನಿಮಿರೆ ವಕ್ಷಾಂಕಿತಪ್ರಸವಸಮಯದ ಕೂಡೆ ಸುಮುಹೂರ್ತವನುವಾದವೈದು ತಿಂಗಳೊಳಬಲೆಗೆ

ಹರನ ಬಲಗಣ್ ಕೆತ್ತೆಯಂಬಿಕೆಯ ಕುಚಯುಗಂತೊರೆದವಮರರು ಗುಡ್ಡರಾಗಲನುಗೆಯ್ದರುರ್ವರೆಗೆ ನಲಿವಾಯ್ತು ಸೊನ್ನಲಿಗೆ ಪುಳಕಿಸಿತು ಭಕ್ತಿಜ್ಞಾನ ವೈರಾಗ್ಯದಭರಕೆ ಬಲವಾಯ್ತು ಸುಗ್ಗವ್ವೆ ಮುದ್ದಯ್ಯಗಳನೆರೆದ ಕುಲಕೋಟಿ ಶಿವಲೋಕಕ್ಕೆ ನಡೆಗೊಂಡುದರಿವಿಜಯ ಶಿವಸಿದ್ಧರಾಮಯ್ಯನುದಯವಾಗಲು ಮನಂದಂದಾಗಳು

ಇಂದೊಗೆವ ತೇಜಿಷ್ಠ ಸಿದ್ಧಚಕ್ರೇಶ್ವರನಮುಂದೆನ್ನ ತೇಜವೇನೆಂದು ಪೋಪಂತೆ ರವಿಬಂದನಸ್ತಾಚಲಕ್ಕುದಯಕಾಲಕ್ಕೆ ಸುತ್ತಿದ ಕರಿಯ ತೆರೆಯೊ ಎನಿಸಿಹಿಂದೆ ಕತ್ತಲೆ ಕವಿದು ತೆತ್ತಿಸಿದ ಮೇಲ್ಕಟ್ಟಿದೆಂದೆನಿಸಿ ತಾರೆ ತಳಿತವು ಹಿಡಿದ ಹೆಜ್ಜೊಡರನಿಂದುಬಿಂಬಂ ಪೋಲ್ತುದಾಹ ಸುಗ್ಗವೆಯ ಪುಣ್ಯವನೇನ ಬಣ್ಣಿಸುವೆನು

ನೇಲೆಯಂ ಹಿಡಿವ ಕಪ್ಪಡಮುಡುವ ನಿಂದಿರಲುಸಾಲದಳವಳಿವ ಬಾಯ್ವಿಡುವ ಸಂಕಟವಿಲ್ಲಸೂಲಿಸುವ ಬಗ್ಗಿಸುವ ನೋಯಿಸುವ ನುಲಿವ ಮರ್ಮಸ್ಥಾನಮಂ ನಿಗುಚುವಬಾಲೆಯರ ಹಂಗಿಲ್ಲ ಮೇಲೆ ನಾಣ್ಗೆಡುವ ನಿಘ್ರಾಲಂಬಮಿಲ್ಲ ಮಧ್ಯಮರಾತ್ರಿ ಮೆಯ್ದೆಗೆದಕಾಲ ಶಯನಸ್ಥಳದೊಳೆಂದಿನಂದದಿ ನಿದ್ರೆಗಟವಟಿಸುತಿರ್ಪಾಗಳು

ಕೆಲಬಲದೊಳಿದ್ದಿರ್ದು ದುಂದುಭಿಗಳೆಸೆಯ ಪೂಮಳೆ ಸುರಿಯೆ ಜಯಜಯವುಥೇಯೆನುತ ತಮತಮಗೆಫಳವಿಡಿದು ಮಂಗಳಾರತಿವಿಡಿದು ಸೇಸೆವಿಡಿದಮರಕಾಮಿನಿಯರೈದೆಬಳಸಿ ಕಮಳದ ಮಧ್ಯದಿಂ ಹಂಸಶಿಶು ಮೇಘದೊಳಗಿಂದ ತರುಣಶಶಿಯೊಗೆವಂತೆ ಸತಿಯ ನಿರ್ಮಳಗರ್ಭದಿಂದುದಯವಾದನಾ ಮಹಮುಕುತಿ ಸತಿಯ ನಚ್ಚಿನ ನಲ್ಲನು

ಮಾಸಿಲ್ಲ ಮಲವಿಲ್ಲ ದುರ್ಗಂಧವಿಲ್ಲೊಡಲಪೂಸಿದಧಮದ್ರವಂ ತಾನಿಲ್ಲ ತೊಳಗುವೆಳನೇಸಱೋ ಎಂಬಂತೆ ಕಣ್ಗೆ ಮಂಗಳವಾದ ಕೈವಲ್ಯದಳವುಳಿಗನಆ ಸತಿಯರೊಲಿದು ಬಲಗೊಂಡೆಱಗಿ ಪೊಗಳುತಿರ್ಪಾ ಸಮಯದೊಳು ಶಿವನ ತೋಳ ತೊಡವಾನತರಮೀಸಲ ಮನೋರಥವು ಸಿರಿಸರಸ್ವತಿವೆರಸಿ ಗಿರಿಜೆ ಬಿಜಯಂಗೈದಳು

ಸಕಲ ಲೋಕಗಳಂ ಹೆತ್ತ ಮುತ್ತೈದೆ ಬಾಲಕತನದ ನಟನೆಯಂ ನೋಡಿ ದುಷ್ಕರ್ಮ ಬಾಧಕನೆ ಬಾ ಲೀಲಾವತಾರ ಬಾ ಜಂಗಮಜ್ಯೋತಿ ಬಾಯೆಂದು ಗುಣವಪ್ರಕಟಿಸುತ್ತೆತ್ತಿ ತೂಪಿಱಿದು ಕೊಂಡಾಡಿ ಮೋಹಕೆ ಮೊಲೆಯನೂಡಿ ಬಾಯಿನವನೊಡನಿರ್ದ ರುದ್ರಕುಮಾರಿಯರ್ಗಿಕ್ಕಿ ತೊಟ್ಟಿಲೊಳು ಪಟ್ಟಿರಿಸಿ ಜೋಗುಳಂ ಪಾಡಿಸಿದಳು

ಹಸಿದು ಬಯಲಿಂಗಾಹುತಿಯನೀವ ಬಾಳ ಜೋಸಸಿಯ ಕೊರಗಿಸಿ ರಸವ ಹಿಳಿದುಕೊಂಡಿಳೆಗೊಗುವಹಸುಳೆ ಜೋ ಒಡಹುಟ್ಟಿದರನಗಲ್ವ ನಿರ್ಮೋಹಿ ಜೋ ಪರಾಂಗನೆಗೆ ಕೂರ್ತುಒಸೆದು ತಾಯಂ ತೊಱೆವ ಬೆಸನಿ ಜೋ ಸುಖಗೆಟ್ಟುಕುಸುಮಕ್ಕೆ ಕೋಪಿಸುವ ಸ್ಥಾಣುವಂ ಹೊರೆವ ನಿಪ್ಪಸರ ಜೋ ಎಂದು ಕಟಕಿಯನಾಡಿ ಸೂಚಿಸಿದಳಾ ಬಯಲ ಬಾಲಕಂಗೆ

ಪ್ರೇಮದಿಂ ಸಿದ್ದರಾಮಯ್ಯನೆಂದಾತಂಗೆನಾಮವಂ ಕಟ್ಟಿಕೊಟ್ಟೆನ್ನ ಗಂಡನ ಸರ್ವಸಾಮರ್ಥ್ಯವಳವಡಲಿ ನಿನಗೆಂದು ಹರಸಿ ಹಾರೈಸಿ ಪಟ್ಟಿರಿಸಿ ತಿರುಗಿಹೈಮವತಿ ಕೈಲಾಸಗಿರಿಗೆ ತೆರಳಿದಳಿತ್ತಲಾ ಮಹೋತ್ಸವದ ಸಂಭ್ರಮದನಂತರ ಪುಣ್ಯಧಾಮೆ ಸುಗ್ಗವ್ವೆ ಕಡುಸುಖದ ಸೊಗಸಿನ ಜೊಮ್ಮು ತಿಳಿದು ಮೈಮುರಿದೆದ್ದಳು