VIII
ಸಿದ್ಧರಾಮ ಚಾರಿತ್ರ
ಧಾತ್ರೀತಳದ ಜೀವಿಗಳ ನರಕದಿಂ ತೆಗೆದುನೇತ್ರತ್ರಯಾಧಿಪಗೆ ತುಪ್ಪದಭಿಷೇಕಮಂಕ್ಷೇತ್ರಪೂಜೆಯಲಿ ಮದುವೆಗಳ ಮಾಡಿದ ಜಗದ ಗುರು ಸಿದ್ಧರಾಮಯ್ಯನು
ಬಡತನಂ ಹೆಚ್ಚಿ ಸಾಲಂ ಹತ್ತಿ ದಾಯಾದರೊಡವೆಯೆಲ್ಲವನಿಱಿಕಿಕೊಂಡರವರುರವಣಿಸಿಹಿಡಿಹಿಡಿಯೆ ಮೀಱಿ ಮುಂಗೈಯ ಬಲುಹಿಂ ಕದ್ದು ಸೊನ್ನಲಿಗೆಗೋಡಿಬಂದುಅಡಗಿ ಬಿಲ್ಲೇಶ ಬೊಮ್ಮಯ್ಯನೆಂಬಂ ರೂಪಮಡಗಿ ಶಿವಸಿದ್ದಪತಿಯಂ ಕಂಡು ಕರುಣವಂಪಡೆದೆಕ್ಕವಿಂಡಿಂಗೆ ಸಲುವ ವೇಷವನಾಂತು ಗುಡ್ಡನಾಗಿರುತಿರ್ದನು
ನುಡಿಯ ನಯಮಂ ವೇಷದೊಪ್ಪಮಂ ತೋಱಿ ತನ್ನೊಡಲೊಳನ್ಯಾಯಶತಮಂ ಮಡಗಿಕೊಂಡು ನೆಱೆತೊಡೆದು ಹುಲುಹೊರೆದು ಮುಚ್ಚಿದ ಮಡಕೆಯಂದದಿ ಹೊಱಗೆ ಮೆಱೆಯುತಿರಲುಒಡವೆ ಹೋದಳಲಿಗರು ನಿಲಲಾಱದಾತನೀಯೆಡೆಯೊಳೀ ಪರಿಯೊಳಿರ್ದಪನೆಂದು ಕೇಳ್ದು ಘುಡುಘುಡಿಸಿ ನಡೆತಂದರೈತಂದು ಕಂಡರು ಕಂಡು ಪಿಡಿದರಾ ಪುರದ ನಡುವೆ
ನೆವವೊಡ್ಡಿ ನೀಂ ಕದ್ದು ಕೊಂಡುಬಂದೆಮ್ಮ ವಸ್ತು ಕೊಡೆಂದೇಕಾಂತದೊಳ್ ನುಡಿದಡೆನ್ನ ವಸ್ತುವನು ನಾಂ ತಂದೆನಲ್ಲದೆ ನಿಮ್ಮ ವಸ್ತುವಂ ತಂದೆನೇ ಎಂದಂಜದೆಭವಿಗಳಿಂದೆಕ್ಕವಿಂಡಿಂಗುಱುವ ಗುಡ್ಡನಹಶಿವಭಕ್ತನಹ ಸದಾಚಾರಿಯಪ್ಪೆನ್ನ ಮೇಲವಿಚಾರದಿಂ ಕಳವನಿಟ್ಟರೆಂದಾಕ್ರೋಶದಿಂ ಜಱಿದು ಜಂಕಿಸಿದನು
ಇಲ್ಲಿ ಬಾಯಾಲಿದಲ್ಲದೆ ಹೋಗದೆಂದು ನೆನೆದಿಲ್ಲದನ್ಯಾಯಮಂ ಎನ್ನ ಮೇಲಿಟ್ಟ ನಿಮ್ಮೆಲ್ಲರಂ ಕೊಲುವೆನೆನ್ನೊಡಲ ನಿಮಗೊಪ್ಪಿಸುವೆನೆಂದು ದಿಟಶುದ್ಧನಂತೆಕಲ್ಲ ಹಾಯ್ದಂತಿಱಿದುಕೊಂಬಂತೆ ಸಂಭ್ರಮಿಸುತಲ್ಲಲ್ಲಿ ಹೋಹರಂ ಕರೆಕರೆದು ದೂಱುತಿಹಘಲ್ಲಣೆಗೆ ತಲ್ಲಣಿಸಿ ಬಿಡ ಹೋಗಿ ಗಂಟಿಕ್ಕಿದಂತಾದರಾ ಬಡವರು
ಇನಿತುಗ್ರವೇಕೆ ಬೊಮ್ಮಯ್ಯ ನೀನೊಲಿದು ಕೊಟ್ಟನಿತೆ ಸಾಕೆನಲು ಕೊಡುವಂತಾಗಿ ಮುನ್ನ ಕೊಂಡೆನೆ ದಾನವಾಗಿ ಕೊಡು ಕೊಡುವಡೆನ್ನರ್ಥವಲ್ಲಲ್ಲದೊಡೆ ಬಳಿಕಾರರುಧನವೆಲ್ಲ ಮಲ್ಲಿಕಾರ್ಜುನನ ಧರ್ಮವ್ಯಯದದೆನೆ ಧರ್ಮದೊಳಗೆಮ್ಮ ಭಾಗೆಯರ್ಥದಲಿ ಬೆಳೆವನಿತು ಧರ್ಮವನಾದೊಡಂ ಕರುಣಿಸೆಮಗೆ ಕೈಮುಗಿದು ಬೇಡಿದೆವೆಂದರು
ಒಡಲಿಲ್ಲದುಸುರುಂಟೆ ನಿಮಗೆನ್ನ ಮೇಲೆ ಬಪ್ಪೊಡವೆಯಿಲ್ಲೆನೆ ಧರ್ಮವುಂಟೆ ಕೆಡುವೊಡವೆಯಂಕೊಡೆ ಕಂಡು ಕೆಡದ ಧರ್ಮವ ಕೊಡುವೆನೇ ಎನಲು ಕರುಣ ಹುಟ್ಟಿದ ದಿನದಲಿಕೊಡು ಕೊಡದೆ ಮಾಣಿನ್ನು ಹೋಹವೇ ಎನಲೆನ್ನಬಡವನಭಿಮಾನವಂ ಕೊಂಡು ಪೋದಪಿರೆಸಲುಬಿಡುವೆನೇ ಹೋದಿರಾದಡೆ ಭಕ್ತರಾಣೆಯೆಂದಿಟ್ಟ ತಡೆಯಂ ಮೂರ್ಖನು
ನಾವಂಜಿ ಬಿಟ್ಟಡಂ ತಾಂ ಬಿಡಂ ಕಂಡ ನಾವೀವೂರೊಳ್ಳದೆ ಮೊರೆಯಿಡುವೆವೆಂದಾ ಸಾಧುಜೀವಿಗಳು ಹುಲುವಿಡಿದು ಮೊರೆಯಿಟ್ಟಡಾ ಧ್ವನಿಯ ಕೇಳ್ದು ಸಿದ್ಧವರೇಣ್ಯನುಆವ ಪಾಪಿಷ್ಠನೂಳಿಗವೊ ನಮ್ಮೂರೊಳೆಂದೂವಿಲ್ಲ ಕರೆಯೆನಲು ಕರೆದುತಂದರು ಕವಿದಗಾವಳಿಯ ಗಜಬಜದ ಮೊರೆಕಾಱರಂ ಮೊರೆಗೆ ಗುಱಿಯಾದ ಪಾತಕನನು
ಹಲವುಪಾಸಂ ಪತ್ತಿ ಬಱತ ಬಸುಱಱತ ಬಾಯ್ಕುಳಿದ ಕಣ್ಣಿಳಿವ ಕಂಬನಿ ಹಿಡಿದ ಹುಲು ದರ್ಪವಳಿದ ನಡೆ ನಡುಗುವೆದೆವೆರಸು ಮೊರೆಯಿಡುವವರಿಗಭಯವಿತ್ತೋವಿ ನಿಲಿಸಿತಿಳಿಯ ಹೇಳೆನಲೀತ ಕದ್ದುತಂದೆಮ್ಮರ್ಥದೊಳಗೆಮ್ಮ ಭಾಗೆಯಂ ಕೊಡು ಕೊಡದೊಡದಱ ಬೆಂಬಳಿಯ ಧರ್ಮವನಾದೊಡಂ ಕೊಡೆಂದೆನೆ ಕೊಡಂ ದೇವ ಚಿತ್ತೈಸೆಂದರು
ಧನದಾಸೆಯಂ ಬಿಟ್ಟೆವಾವು ಹದುಳದೊಳೆಮ್ಮಮನೆ ಮುಖವ ಕಾಂಬಂತೆ ಕಳುಹಿಕೊಡು ಕರುಣಿ ಸಿದ್ಧ ನಿಧಾನಯೆಂದು ಬಾಯ್ವಿಟ್ಟಡೆಲೆ ಬೊಮ್ಮಯ್ಯ ನಿನ್ನ ಮೇಲಿವರ ದೆಸೆಯಎನಿತರ್ಥವುಂಟೆಲ್ಲವಂ ಕೊಡೆಂದೆನಲು ಕೊಡೆನೆನಗಿದು ನೀವಾಡಬೇಡೆಂದೊಡೆಮ್ಮಾಜ್ಞೆಯನು ಮೀಱಿದಾ ಎನಲಿದೊಂದಕ್ಕೆ ಮೀಱಿದಾತಂ ಕೊಡುವನಲ್ಲೆಂದನು
ಇವ ಮೂರ್ಖನೆಮ್ಮಿಂದ ತಿದ್ದದಾರಿಂದಪ್ಪುದವರ ಮುಂದಾಡಿಕೊಳಿ ಹೋಗಿ ತಲ್ಲಣಿಸದಿರಿಜವಗುಂದದಿರಿ ಇದಕ್ಕಾವಿದೇವೆಂಬ ಗುರುವಾಕ್ಯವಿಡಿದಾ ಖಳನನುಅವರು ಕೊಂಡಾವಾವ ಧರ್ಮಾಧಿಕರಣವುಂಟವಕೆಯ್ದಿ ಹೋಗೆ ಕಾಣುತ್ತ ಗುರುವಾಜ್ಞೆಗೆಟ್ಟವನ ನೋಡುವರಲ್ಲವಾವೆಂದು ಕಣ್ಮುಚ್ಚಿಕೊಂಡು ನೂಕಿಸಿ ಕಳೆದರು
ಅವರ ಸುಡುನುಡಿಗೆಲ್ಲ ನಾಚಿ ಹೇವರಿಸಿ ಜನವ ಸುಡುಸುಡೆಂದು ಮನನೊಂದು ನಡೆತಂದೊಂದುಶಿವನಿಳಯಮಂ ಪೊಕ್ಕು ಭೀತಿಯಂ ನೆಮ್ಮಿ ಕೂರಲಗನುಗಿದರವರಿಸದೆತಿವಿದುಕೊಂಡಂ ಕೊಂಡನೇಳೆಂಟು ಹತ್ತು ಫಾಯವನೊಡನೆಯವರಂಜಿ ಬೇಡವೇಡೆನಲು ಜೀವವನುಳಿದಧೋಗತಿಗೆ ಹೋದನೆನೆ ಗುರುವಾಜ್ಞೆಗೆಡಲದೇ ವಿಧಿಯಾಗದು
ಪ್ರತಿವಾದಿಗಳು ನಡುಗಿ ಬಾಯ್ದಿಡುತ ಬಂದು ದುರ್ಮತಿ ಮೂರ್ಖ ಬೊಮ್ಮಯ್ಯನಿಱಿದುಕೊಂಡಿಂದಿಂತುಹತವಾದ ನಮಗೇನು ಗತಿಯೆಂದಡಂಜಬೇಡೆಂದವರ ಧನವೆಲ್ಲವಅತಿ ಕರುಣದಿಂ ಕೊಟ್ಟು ಕಳುಹಿ ಘನಪಾಪ ಪೂರಿತನನೆಳೆದಗಳೊಳೀಡಾಡೆಂದು ಬೆಸಸಿ ಜಿತರತಿನಾಥನಪ್ರತಿಮನತುಳಬಳ ಸಿದ್ಧರಾಮಂ ಸುಖದೊಳಿರುತಿರ್ದನು
ಉತ್ತಮರನೋವುತ್ತ ಪೊದ್ದಿದವರಘವನಳಿಯುತ್ತ ಕೆಱೆಯಂ ತೋಡಿಸುತ್ತ ಹೋಮವನು ನಡಸುತ್ತ ಕವಿಲೆಗಳ ಹಿಂಡಂ ರಕ್ಷಿಸುತ್ತ ಕೈಲಾಸಗಿರಿಗೆಡೆಯಾಡುತ್ತನಿತ್ಯನೇಮವನು ನಡೆಸುತ್ತ ಧರ್ಮಂಗಳಿಗೆಚಿತ್ತವೀಯುತ್ತಖಿಳ ಸಾಮರ್ಥ್ಯವಂ ತೋಱಿಸುತ್ತ ಗುರುರಾಯನತಿ ಸುಖಸಂಕಥಾ ವಿನೋದದೊಳಿರುತ್ತೊಂದು ದಿನವು
ಎಂದಿನಂತುದಯದೊಳು ಕೈಲಾಸಗಿರಿಗೆ ತರುಣೇಂದುಧರನೆಡೆಗೆ ಸಿದ್ಧೇಂದ್ರನೈತರ್ಪಾಗಮಂದೈಸಿ ತಳಿತ ತಳೆಗಳ ತಂಪಿನೊಳು ಝಾಡಿಸುವ ಚಮರ ಸೀಗುರಿಗಳಸಂದಣಿಸಿ ಹಾಡುವಾಡುವ ನುಡಿವ ಕೀರ್ತಿಸುವವಂದಿಗಳ ವನಿತೆಯರ ವಾಹನದ ಪರಿಜನದಸಂದಣಿಯೊಳಿದಿರಾಗಿ ಬರುತಿರ್ದನೊರ್ವ ಗಂಧರ್ವ ಗಗನಾಂಗಣದೊಳು
ದೂರದಿಂ ಕಂಡುನ್ನತಾಸನವನಿಳಿದು ಮನವಾರೆ ಮೆಯಿಕ್ಕುತಿರೆ ಬೇಡ ಸುಕುಮಾರ ನೀನಾರಾವಲೋಕದರಸೆಮಗೇಕೆ ವಂದಿಸಿದೆಯೆಂದು ಸಿದ್ಧಂ ಕೇಳಲುಚಾರು ಗಂಧರ್ವನಾ ಪುರದೊಳು ಗಣೇಶ್ವರನವೈರದೊಳುಘೇ ಕಾಳನಾಗಿರ್ದು ನೆಱೆ ನಿಮ್ಮಕಾರುಣ್ಯದಿಂ ವಿಶಾಪಂಬಡೆದೆನೆಂದು ಬಿನ್ನೈಸಿ ಮತ್ತಿಂತೆಂದನು
ಎನಗೆ ನಿಜವಾಯ್ತಿನ್ನು ನರಕವಡೆದಿರ್ದೆನ್ನತನಯನಂ ನಿಮಗೆ ಬಿನ್ನವಿಸಿ ತೆಗೆಸಿದಪನೆಂದನುಗೈದು ತಾನುಂಡು ತನ್ನ ಗುಡ್ಡಂಗೆ ಹಾಳೆಯನಾಂತನೆನಿಸುಗೆಂದುನೆನೆದೆನ್ನ ಶಾಪವಂ ಕಳೆದ ದಾನವನೊಂದುಕನಕ ಕಳಸದಲಿ ಕೊಂಡೊಯ್ದಧೋಗತಿಯಲಿರ್ದನನೆತ್ತಿ ತರುತಂದುವೊಂದು ಹೊಸತಂ ಕಂಡೆನಯ್ಯ ಚಿತ್ತೈಸೆಂದನು
ಬಿಡೆ ನಿಮ್ಮ ಗುಡ್ಡ ಬಿಲ್ಲೇಶ ಬೊಮ್ಮಯ್ಯನೆಡೆವಿಡದೆ ನರಕದೊಳ್ಳದ್ದು ಕಡಿವ ಕಾಸುವ ಕೊಯ್ವಸುಡುವ ದಂಡಣೆಗಾಱದೆಲೆ ಸಿದ್ದರಾಮಯ್ಯ ರಾಮಯ್ಯ ರಾಮಯೆಂದುಅಡಿಗಡಿಗೆ ನೆನೆಯುತಿರ್ದಪನದನಲ್ಲಿಂದಬಿಡಿಸಿ ತರಬೇಕೀ ಮಹಾವೇಷವೀ ನಾಮವಿಡಿದು ಮತ್ರೀ ನರಕವೇಕಾದುದೆನಗಿದಂ ತಿಳುಹಿಕೊಡಬೇಕೆಂದನು
ತೊಡೆಯ ಹೊಡೆದಡೆ ಬಪ್ಪ ನಿದ್ರೆ ತೀವಿಹುದು ಮಾಣ್ದೊಡೆಗೆಯ್ದು ತಿವಿಯೆ ಕೆಡುವಂತೆ ಶಿವನಂ ನೆನೆಯುತೆಡೆಯೊಳನ್ಯಾಯಮಂ ಮಾಡಿ ಮತ್ತಂ ನೆನೆಯುತಿರ್ದೊಡಾ ಶಿವನ ನಾಮಂಹುಡುಕುನೀರದ್ದದಿಹುದೇ ಮಗನೆಯೆನೆ ದೇವಸೊಡರನಾವಗ ಪೊತ್ತಿಸಿದೊಡಂ ತಿಮಿರಮಂಕೆಡಿಸದೇ ನಾಮಕ್ಕೆ ಮಲೆವ ನರಕಗಳುಂಟೆ ತಂದೆ ನೀ ಹೇಳೆಂದನು
ದುರುಳನವನಿರ್ದಪಂ ತೆಗೆಯಲೇಕೆನೆ ಜಗದಗುರುವೆ ವತ್ಸನ ಗುಣವ ನೋಡಿತೇ ಧೇನು ಸುರುಚಿರ ಪಯಃಪಾನಮಂ ಕೊಡುವಳೆಂದಾಡಿದಾ ಗಂಧರ್ವವೆರಸು ನಡೆದುಹರನೋಲಗವನೆಯ್ದಿ ಮೆಯ್ಯಕ್ಕಿ ನಿಂದು ಪುರಹರ ಕೃಪಾಕರ ಶಿವಾವರ ಸುಖಂಕರ ಮಹೇಶ್ವರ ಸುರಾಸುರ ನಮಿತ ಚರಣ ಶರಣೆಂದು ಹೊಗಳ್ದನು ಸಿದ್ಧಕುಲತಿಲಕನು
ಬಸುಱೊಳಗೆ ಮೊಳೆತ ಗರ್ಭವನು ತದ್ವದನ ಸೂಚಿಸುವಂತೆ ಮನದ ಕಾರ್ಯವನು ತದ್ವದನ ಸೂಚಿಸುತಿದೆಯಿದೇನು ಹೇಳೇಳೆಂದು ಹಿಡಿದೆತ್ತಿ ತರ್ಕೈಸಿ ತೊಡೆಗೆ ತೆಗೆದುಬೆಸಗೊಳಲು ದೇವ ದೇವರ ಗುಡ್ಡನಜ್ಞಾನವಶದಿ ನರಕಂಬಡೆದನೆಂದೀತನಿಂ ಕೇಳ್ದೆನಸುಗತಿಯನಳಿದೆತ್ತುವುದಕೆ ನೇಮವನೀಯಬೇಕೆಂದನಪ್ರತಿಮನು
ಗುಣಿಯೆ ಸೈಪಿನ ಕಣಿಯೆ ಶಿವಸಿದ್ದ ಕುಲಶಿರೋಮಣಿಯೆ ಭಕ್ತರ ಋಣಿಯೆ ಸಾಮರ್ಥ್ಯದಯದ ಸಂದಣಿಯೆ ಇದಕೆನ್ನ ಕೇಳ್ವರೆ ನರಕದಿಂದವನನೆತ್ತು ಹೋಗೀಗಳೆಂದುಫಣಿಕಂಕಣಂ ಬೆಸಸೆ ತಿರುಗಿ ಮೇರುವಿನ ತೆಂಕಣ ದೆಸೆಯೊಳಿಹ ಯಮನ ಸಂಯಮಿನಿಯೆಂಬ ಪಟ್ಟಣದತ್ತ ನಡೆದನುಬ್ದೆದ್ದ ಕತ್ತಲೆಯತ್ತ ನಡೆವ ಭಾನುವಿನಂದದಿ
ಆ ಪುರದ ಬಟ್ಟೆಯೆನಿತಗಲದೊಳು ಪಾಪಿಗಳುಪೋಪಾಗ ಮುಳು ಕಲ್ಲು ಮೊಳೆ ಹುಲ್ಲು ನಡೆ ರಕ್ತಪೋಪವರನಾ ಪರಿಯಲೆಳೆಯುತ್ತ ಉರಿಬಿಸಿಲು ಹೊಡೆಯೆ ಡಗೆ ಸುತ್ತಿ ದೇಹತಾಪಿಸುವ ಕರ್ಮಿಗಳು ಕ್ಷುತಿಪಾಸೆಗಳಿಂದಜೀಪನಿತು ದುಃಖದಿಂ ಬಳಲುವರ ನೋಡುತಿರ್ಪಾ ಪೊತ್ತು ಸುಕೃತ ಜೀವಿಗಳಿಗಾ ಧರ್ಮದೂತರು ಕೊಂಡು ಬರುತಿರ್ದರು
ಹಸಿದೆಡೆಯೊಳಮೃತಾನ್ನಮಂ ಬಿಸಿಲ್ಗೆ ಕೊಡೆಯನತಿತೃಷೆಗೆ ಶೈತ್ಯೋದಕವ ನಡೆವೆಡೆಗೆ ಪಾದುಕೆಯಮಿಸುವ ಹಳಿಕರ್ಪುರದ ವೀಳೆಯವ ವಾಹನಂಗಳನಾಂತು ಕೊಂಡೊಯ್ಯುತಬೆಸಗೊಂಡು ಶೀತವಾತೋಷ್ಣಕುಪಚಾರಮಂವಶವರ್ತಿಯಾಗಿ ಮಾಡುವರಿಗಾವೇಂ ಹಗೆಯೆವಶವಹುದೆ ನಮಗೆನಲು ಮುನ್ನ ಮಾಡದೆ ಬಂದು ಬಯಸಲೆಲ್ಲಿಯದೆಂಬರು
ಆವಾವ ಧರ್ಮಪುರುಷರಿಗೆ ಆ ಕಾಲ ತಾನಾವ ರೂಪಾಗಿರ್ಪನೆಂದೆನಲು ಪಾಪಿಗಳಜೀವಮಂ ಕೊಂಬ ಯಮನಾಗಿಯೆ ಭಯಂಕರಾಕಾರಮಂ ತಾಳ್ದಿರ್ಪನುದೇವದ್ವಿಜಾದಿ ಪೂಜಾತತ್ಪರರಿಗಾವಭಾವವದಱೊಳು ತಾಳ್ದು ರೂಪಾಗಿ ಧರ್ಮನಂತಾ ವಿನಯ ಮೃದು ಮಧುರ ವಾಕ್ಯದಿಂದಿರುತ ಗುರುವಂ ಕಾಣುತಿದಿರೆದ್ದನು
ಹಿಂದೊಬ್ಬ ಸಾನಂದನೆಂಬ ಶಿವಯೋಗಿಯಿಂದಂದೊಮ್ಮೆ ನರಕವರೆಯಾಯ್ತು ಮತ್ತಿಂದೀತನಿಂದು ನೆಱೆ ಹಾಳಾಗದಿರದೆಂದು ನಡುಗುತಿದಿರೆದ್ದು ಪರಿವಾರವೆರಸುಬಂದು ಕಾಲ ಮೇಲೆ ಬಿದ್ದೆದ್ದು ಭಯಬಂದ ಕೈಗೊಟ್ಟು ಸಿದ್ಧಂದ್ರನಂ ತಪ್ಪಾಗಮುಂದೆ ನಾನಾ ಭಯಂಕರದೊಳಿಹ ನರಕವನದಾವ ಕವಿ ಬಣ್ಣಿಸುವನು
ಪರನಿಂದೆ ವಿಶ್ವಾಸಘಾತಕ ಸುರಾಪಾನಗುರುತಲ್ಪಕಂ ಪ್ರಾಣಿವಧೆ ಸುವರ್ಣಸ್ತೇಯಪರದಾರ ಗೋಹತ್ಯ ಮಿತ್ರವಂಚನಮಗಮ್ಯಾಗಮನ ನೀಚಸಂಗನಿರಪವಾದವಭಕ್ಷ್ಯ ಭಕ್ಷಣಂಗಳು ದುರಾಚರಣೆ ನಿರ್ದೈವತೆ ಕೃತಘ್ನತೆ ಬ್ರಹ್ಮವಧೆಹರಭಕ್ತವೈರ ಮಾಹೇಶ್ವರ ಪ್ರಹಸನದ ನರಕದಂಡನೆಯೆಸೆದುದು
ಅಱಿದಱಿದು ಪಾಪಮಂ ಮಾಡಿದಧಮರನು ಕೆಡೆಇಱಿಸು ಹೊಡೆ ಕಡಿ ಕೆತ್ತು ಕೀಸು ಕೊಱೆ ಕೆರೆ ಕುಸುರಿದಱಿ ಕಾಸು ಚುಚ್ಚು ಸುಡು ಹಿಂಡಿ ಹಿಳಿ ಹಿಕ್ಕು ಹರಹೆಂದೆಂಬ ಘಲ್ಲಣೆಗಳಮಱುಗಿ ಮೊರೆಯಿಡುವ ಕಿಂಕುರ್ವಾಣ ವಚನದಿಂದೊಱಲಿ ಬಾಯ್ವಿಡುವ ನರಳುವ ಚೀಱಿ ಮಾಣದಸುವಱೆಯಪ್ಪ ನರಕಿಗಳ ನಾನಾ ರವಂಗಳಿಂ ನರಕವದ್ಭುತವಾದುದು
ಕೊಂಕು ಸರಳಿಂ ಹೊಸೆವ ಚಕ್ರದಿಂದಿಡುವ ಕುರುಪಿಂ ಕೆರೆವ ಕಾದಂಬಿನಿಂದೆಸುವ ಹೆಗ್ಗೊಂಚಿಯಿಂ ಕೊಯ್ವ ಕೊಡಲಿಯಿಂ ತಱಿವ ಖಡ್ಗದಿ ಹೊಡೆವ ಹೇಂಟೆಯಿಂದಿಱುಬುವಅಂಕುಶದೊಳೆತ್ತುವಲಗಿಂದಿಱಿವ ಕತ್ತರಿಗಳಿಂ ಕತ್ತರಿಸುವ ಬಾಚಿಯಳು ಕೆತ್ತುವ ಕತ್ತಿಯಿಂ ಕಡಿವ ಕರಗಸದಿ ಕೊಱೆವ ರೌರವದ ನರಕಂ ಭಯಂಕರವಾದುದು
ಸೆಳೆವ ಸೇದುವ ಬೀಸುವೊಗೆವ ಕುಸುಕುವ ಹಿಂಡಿಹಿಳಿವ ಕೆಡಹುವ ಹೊರಜಿ ಹೊಸೆವ ತಿರುಹುವ ಮುರುಹುಬೆಳೆವ ನೇರುವ ತೆಗೆವ ತೇವ ಕಾಸುವ ಕೆರೆವ ಸುಡುವ ಸಂಧಿಸಿ ಚುಚ್ಚುವಕುಳಿಯೊಳಿಕ್ಕುವ ಮುದುಡಿ ಮುಚ್ಚಿ ಮುಗ್ಗುವ ಮುಳಿವಬಳೆಗಳೆವ ಹೋಳ್ವ ಸೀಳ್ವಾಱಿಸುವ ನೆಱೆ ಸುಲಿವಖಳಂ ಕಳಕಳದ ಕೋಳಾಹಳದೊಳಾ ರೌರವಂ ಭಯಂಕರವಾದುದು
ಕಾಹೇಱಿ ಕೆಂಗಲಿಪ ಕರ್ಬೊನ್ನ ಪುತ್ತಳಿಯನೇಹದಿಂ ನಿನ್ನ ಮನದೋಪಳೆಂದಪ್ಪಿಸುವರಾಹ ಎಂದಳುಕಿದಡೆ ಮುನ್ನ ಪರಸತಿ ಪುರುಷರಿಹಗೆಂದು ಕಾಣ್ಬುದೇನುಲೋಹರಸಮಂ ಕಾಸಿ ಮದ್ಯವಿದೆಯೆಂದೆಱೆಯೆದೇಹಮಂ ಸುಡುತೊಳಗನಿಳಿಯೆ ಚೀಱಿದೊಡೆ ಸುಖಬೇಹುದುಂ ಮಾಂಸಕ್ಕೆ ಕಾದ ಕಗ್ಗಲ್ಲ ಫಲವೆಂದವಂ ತಂದೀವರು
ಪರರ ಧನವಂ ರಾಜಚೋರ ಕೃತ್ಯದಿ ಕೊಂಡುಪರಿಪರಿಯ ವಸ್ತ್ರವಾಭರಣ ವಾಹನವನಾದರಿಸಿ ಸುಖಿಸಿದ ಸುಖಿಯ ಕಂಡು ಮಿಗೆಯುಡಿಸುವರು ತೊಡಿಸುವರು ಮುಡಿಯಿಸುವರುಹಿರಿದಪ್ಪ ಉರಿಯ ನಾಲಗೆಯ ವಸ್ತ್ರವ ಕಾದಸರಪಳಿಯ ಕಟಕ ಮುದ್ರಿಕೆ ಮಂಡನಂಗಳಂಬಿರಿಮುಗುಳ್ಗಳುಳ್ಳರಲ್ಗಳೆಂದು ಕೆಂಡವ ಮುಡಿಸುವರು ಲೋಗರೊಡವೆಯೆನುತ
ಪರಿಪರಿಯ ರೌರವಂಗಳ ನೋಡಿ ನೋಡಿ ಕೊಕ್ಕರಿಸುತ್ತ ಬರವರಲು ಮುಂದೆ ನಾಯಕನರಕದುರವಣೆಯ ದಂಡನೆಯನನುಭವಿಸಿ ಕಾದುಕ್ಕುವಧಮ ರಸಕೂಪದೊಳಗೆಗುರುಸಿದ್ಧರಾಮಯ್ಯ ವರಸಿದ್ಧರಾಮಯ್ಯಕರುಣಿಸೆಂದೊಱಲುತಡಿಗಡಿಗಾಳುತೇಳುತ್ತಇರದೆ ತಲೆಯೆತ್ತಿ ಕಂಡಂ ಜಗದ ಗುರುವನಾ ಬಿಲ್ಲೇಶ ಬೊಮ್ಮಯ್ಯನು
ದುರುಳತನದಿಂ ದೇವರಾಜ್ಞೆಯಂ ಮೀಱಿ ದುಸ್ತರ ನರಕದೊಳು ನವೆದೆನಿನ್ನಾಱೆನಖಿಳೈಕಗುರುವೆ ಪುಣ್ಯದ ಕರುವೆ ಭಕ್ತಸುರತರುವೆ ಎಂದತಿದೈನ್ಯದಿಂದೊಱಲಲುಕರಣಂ ಕಲಕಿ ಮತಿ ಮಾಸಿ ಮುದವದಿರಿ ಹಿರಿಯರ ಬಲ್ಲಹಂ ಧೈರ ಮೇರು ಕರುಣಾಬ್ಧಿ ನೆನೆವರ ನಿಧಾನಂ ಮಗನೆ ಬಾರೆಂದು ನೀಡಿದಂ ನಿಜಕರದ ಲಾಕುಳವನು
ವಿನುತ ಲಾಕುಳವನಾ ಬೊಮ್ಮಯ್ಯ ಪಿಡಿದೊಡಾತನ ಕಾಲ ಪಿಡಿದವನ ಕಾಲನೊಬ್ಬಾತನಾತನ ಕಾಲ ಪಿಡಿದವನ ಕಾಲನದಿದೆನ್ನದೆಲ್ಲಾ ನರಕಿಗಳು ತಪ್ಪದೆತನತನಗೆ ಪಿಡಿದು ತುಱುಗಿದ ನರಕ ಮಾಲೆಯಂವಿನಯದಿಂದೆತ್ತಿ ಮೆಱೆದಂ ನರರ ಮಾಲೆಯಭವಯನು ತುಡುಕಿ ನೆಗಪಿ ರುದ್ರಂಗೆ ಮಾಡುವ ಮಾಲೆಗಾಱನೆಂಬಂತಾಗಳು
ಭರವಸದಿ ತೆಗೆಯುತ್ತ ನೆನೆದು ಶಂಕಿಸಿ ತೆಗೆಯಲರಿದೆನುತ್ತಿಳುಹಲನುಗೈಯುತಿರೆ ಕಂಡಿದೇಂಮರಳಿ ಬಿಡದೆಲೆಲೆ ತೆಗೆ ತಂದೆ ಕಾಲ್ ಪಿಡಿದು ನೋಯುತ್ತಲಿವೆ ಕೈಬಿಡುತಿವೆತರಣಿ ಮೂಡಲು ತಿಮಿರವೇ ಅಯ್ಕ ದಮ್ಮಯ್ಯತರಹರಿಸಲಾಱದೀ ಬಿದ್ದೆವಯ್ಯೋ ದಯಾಶರಧಿ ಶಿವಧೋ ಕರುಣಿಸೆಂದು ನರಕದ ನರರ ಮಾಲೆ ನೆಱೆ ಮೊರೆಯಿಟ್ಟುದು
ನಸುನಗೆಯ ಸಿರಿಮೊಗದ ಕಾರುಣ್ಯಲೋಚನದವಸುಮತಿಯ ಶಶಿಮೌಳಿ ಸಿದ್ಧರಾಮಂ ದಯಾರಸಚಿತ್ತನಭಯಹಸ್ತವನೆತ್ತಿ ಹೆದಱಬೇಡೊಬ್ಬನಂ ತೆಗೆಯಬಂದುಅಸುಗತಿಯ ಜೀವರೆಲ್ಲರನೆತ್ತಿದೊಡೆ ವಿಷಮವಿಷಕಂಠನೇನೆಂಬನೆಂದಱಿಯೆನಿದ ಬಿನ್ನವಿಸಿ ಬಂದು ತೆಗೆವೆನೆಂದಾಡಿ ನಡೆದಂ ರಜತಗಿರಿಗೆ ಸಿದ್ಧರ ದೇವನು
ಬಂದು ಕಂದರ್ಪದರ್ಪಾಂಭೋಧಿ ಪರಿಮಥನಮಂದರಾಕಾರನಂ ಕಂಡು ವಂದಿಸಿ ತೊಲಗಿನಿಂದೊಡೇಂ ಕಂದ ನೀನೆಂದಂತೆ ಗುಡ್ಡನಂ ನರಕದಿಂ ತೆಗೆದು ತಂದಾಎಂದಡಾ ನರಕದೊಳಗುಳ್ಳ ನರಕಿಗಳೆಮ್ಮನಿಂದೊಡನೆ ತೆಗೆಯಬೇಕೆಂದು ಶಿವದಿಡೆ ಮನಂನೊಂದೆತ್ತುವಾರ್ತದಿಂ ಬಂದೆನನುಮತಿಗೊಡುವುದೆಂದನಚಳಿತಸಿದ್ಧನು
ಹಿಂದೆ ಸಂಚಿತ ಕರ್ಮವಿಲ್ಲದಿರ್ದೊಡೆ ದೋಷವೃಂದಮಂ ಮಾಡಿದಾ ದೋಷವಿಲ್ಲದೆ ನರಕದಂದುಗದೊಳಿಕ್ಕದಾ ನರಕದಿಂ ಶುದ್ಧರಾದಲ್ಲದೇಳಲ್ ಬಾರದುಇಂದು ನರಕಿಗಳೆಲ್ಲರಂ ನೀನು ತೆಗೆವಡೆಮಗೊಂದು ಲಂಚವನೀಯಬೇಕೆಂದು ಶರಣಕುಮುದೇಂದು ಲೀಲಾಲೋಭದಿಂ ನುಡಿದಡೇನು ಬೇಕೆಂದನಚಳಿತಸಿದ್ಧನು
ಮೇದಿನಿಯೊಳಾದಿಲಿಂಗಕ್ಕೆ ನತದುರಿತನಿರ್ಭೇದಿ ಲಿಂಗಕ್ಕೆ ಲೋಕದ ಯಂತ್ರವಿದ್ಯಾ ವಿನೋದಿ ಲಿಂಗಕ್ಕೆ ಹನ್ನೆರಡು ಸಾವಿರ ಸೊಲಿಗೆ ತುಪ್ಪವ ನೆರಪಿ ತಂದುಆದರದೊಳಭಿಷೇಕವಂ ಮಾಡಿ ನಿರ್ಧನಿಕರಾದರ್ಗೆ ಮದುವೆ ಸಾವಿರವನೊಂದೇ ಲಗ್ನದಾದಿಯೊಳು ಮಾಡಿದೊಡೆ ತೆಗೆವುದಿವಱಿಂದಲ್ಲದವರಘಂ ಕೆಡದೆಂದನು
ದೊರಕಿಸುವೆನೆಂದಡಿಳೆಯೆತ್ತ ಹನ್ನೆರಡು ಸಾವಿರ ಸೊಲಿಗೆ ಘೃತವೆತ್ತಲೊಂದೆ ಲಗ್ನದೊಳು ಸಾವಿರ ಮದುವೆಯೆತ್ತ ಮಾಡಿದರುಂಟೆ ಮಾಡಿಸಿಕೊಳಲ್ ಬಯಸಿದಧಿಕರುಂಟೆಭರದೊಳೊಂದಂ ಕೋಟಿಮಡಿಯಾಗಿ ಕೋಟಿಗಳನೊರಸಿಯೊಂದಾಗದಂತಾಗಿಸುವ ಮಹಿಮೆ ದೇವರಿಗೆ ನಿಜಮಾಡಿ ಮಾಡಿಸಿಕೊಂಬವಂ ನೀನೆ ನಾನೆನಿತವನೆಂದನು
ಎಂದ ಮಾತಿಗಿಂದುಜೂಟನತ್ಯಾನಂದಸಂದೋಹದಿಂದಪ್ಪಿ ಕಾವನೇ ಕೋಯೆಂದುನಂದಿಕೇಶನ ಕನಕರುಚಿರಚಿತ ವಾಳರೋಮದೊಳಗೊಪ್ಪಿಡಿಯನುಗಿದುಸಂದ ವಜ್ರದ ಕಟ್ಟನಿಕ್ಕಿ ಕೊಟ್ಟಿದನಾದಿಲಿಂಗದ ಶಿಖೆಯಲಿಟ್ಟು ತುಪ್ಪದಭಿಷವ ಮಾಡಲೊಂದೊಂದು ಬಿಂದು ಸಾವಿರ ಸೊಲಿಗೆಯಾಗಿ ಕೈಕೊಂಬೆನೆಂದನು ರುದ್ರನು
ಕಡೆಗೆ ದೊರೆಕೊಂಡೈಸು ಮದುವೆಯಂ ನೀ ಮಾಡಿದೊಡೆ ಕೋಟಿಮಡಿಯಾಗಿ ಕೈಕೊಂಬೆನೆನ್ನ ತೊಡೆಮಡದ ಮದಕರಿಯೆ ಭಕ್ತರ ಸಿರಿಯೆ ದುರಿತಗಜಹರಿಯ ಸಾಮರ್ಥ್ಯಗಿರಿಯೆನುಡಿದವರನೆತ್ತುವುದು ಗುಡ್ಡರಾದಪರು ನಡೆನಡೆಯೆಂದು ಶೂಲಿ ಕಳುಪಲು ಬಂದನೆರಡನೆಯಮೃಡ ಸಿದ್ಧರಾಮನಖಿಳಕಳಾಭಿರಾಮನಸ್ಖಲಿತ ಪುಣ್ಯಾರಾಮನು
ಆ ಮಹಾನರಕ ತೀರದೊಳಂದು ಶಿವಸಿದ್ಧರಾಮನಾಥಂ ನಿಂದು ಕೊರಳೆತ್ತಿ ಕಣ್ಮುಚ್ಚಿಕೈಮುಗಿದು ಪುಳಕಿಸುತ ಹಿಗ್ಗಿ ಹಾರೈಸಿಯುಚ್ಚರಿಸಲೆಂದಗಜೇಶನನಾಮಮಂ ಮಂಗಳನ್ನೊಮಮಂ ಭಕ್ತರಪ್ರೇಮಮಂ ಪುಣ್ಯಾಭಿರಾಮಮಂ ನೆನೆವರಕ್ಷೇಮಮಂ ಸುಕೃತ ವಿಶ್ರಾಮವೆಂದೆನಿಪ ಪಂಚಾಕ್ಷರಿಯನನುಗೈದನು
ಹರ ಮಹಾದೇವ ಶಂಕರ ಮಹಾದೇವ ಪುರಹರ ಮಹಾದೇವ ಸದ್ಗುರು ಮಹಾದೇವ ಸುಸ್ಥಿರ ಮಹಾದೇವ ಶಶಿಧರ ಮಹಾದೇವ ಲೋಕೈಕ ದೇವಾಧಿದೇವಹರಹರ ನಮಃಶಿವಾಯೆಂದೂರ್ಧ್ವರವದೊಳುಚ್ಚರಿಸೆ ನಾಮಂ ಹರಿದು ನರಕಿಗಳನುದ್ಧರಿಸಿಹೊಱವಂಡಿಸಲು ಕಂಡು ಹೊಱವಂಟುದಖಿಳ ನಾನಾ ಜೀವಜಾಲಂಗಳು
ಪರಿಪರಿಯ ದಂಡನೆಗಳುಳ್ಳಧೋಗತಿಯನುತ್ತರಿಸಿದೆವು ನಿನ್ನಿಂದ ತಂದೆ ಭರದಿಂದ ಪುರಹರಬಂದಿಕಾಱ ಕೈವಲ್ಯದಳವುಳಕಾಱ ಶುಭಸುಕೃತ ಸೂಱೆಕಾಱನರಕಮದಮಥನ ಮಾಯಾದಿಶಾಪಟ್ಟ ರತಿವರ ದರ್ಪದಳನ ಸದ್ಗುರು ಸಿದ್ಧರಾಮಯ್ಯಕರುಣಿ ಕೈಕೊಂಡಿನ್ನು ಜನನ ಮರಣಕ್ಕೆ ನೂಂಕದೆ ಸಲಹು ಸಲಹೆಂದರು
ಮೊದಲಲೇ ಜನನ ಮರಣಕ್ಕಾಱೆವೆಂದಡಾಗದು ವಸುಧೆಯೊಳಗೆ ನೀವೆಲ್ಲರುಂ ಹುಟ್ಟಿ ಬೇಗದಿ ಬಂದಡುಪದೇಶವಿತ್ತು ಗುಡ್ಡರ ಮಾಡಿ ಪುಣ್ಯಪಥಮಂ ತೋಱುವೆಂಅದಱಿಂದ ಜನನ ಮರಣವನು ಮಾಣಿಸಿ ಮುಕ್ತಿಪದವನೀವೆಂ ಹೋಗಿ ಬೇಗವೆಂದಾ ಸತ್ಯಸದನ ವರವದನ ಜಿತಮದನ ಬೀಳ್ಕೊಟ್ಟ ಬೊಮ್ಮಯ್ಯನೊಳಗಾದವರನು
ತನತನಗೆ ಪೊಡವಂಟು ಪೋದರಾ ತಂತಮ್ಮಜನನಸ್ಥಳಕತ್ತಲಿತ್ತ ನಡೆತಂದು ಮತ್ತನುನಯದಿ ತರುಣೇಂದುಶೇಖರಂಗೆಱಗಿ ಬಿನ್ನವಿಸಿ ಬೀಳ್ಕೊಂಡು ತಿರುಗಿವಿನುತ ಸಿದ್ಧರ ದೇವ ದೋಷವನದಾವನಾಬಿನದದಿಂದಂದು ಪೊಕ್ಕನು ಮೆಱೆವ ಸೊನ್ನಲಿಗೆಘನಪುರವ ಶಿವಲಿಂಗದಾಗರವ ಭಕ್ತವರ ಸಂತೋಷದೊಂದಿರವನು
ಮಲ್ಲಿಕಾರ್ಜುನನ ಮಹಮನೆಯ ಶೋಭನಕೆ ತಳುವಿಲ್ಲದೀ ವೈಶಾಖ ಪೌರ್ಣಮಿಗೆ ಬೇಗದಿಂದೆಲ್ಲವಳವಡಬೇಹುದಕ್ಕಿ ಕಣಿಕಂ ತುಪ್ಪ ಮೊದಲಾದ ಸಾಧನವನುಹೊಲ್ಲೆನಿಸದಂತೆ ಭರವಸವಾಗಲೆಂದು ಗುರುವಲ್ಲಭಂ ಬೆಸಸೆ ಕೈಕೊಂಡು ಗುಡ್ಡರು ಪೇಟೆಯಲ್ಲಿಯ ಶ್ರೀಕರಣಮಂ ಕೂಡಿ ಕೊಟ್ಟಣಮನಿಕ್ಕಿಸಿದರೇವೊಗಳ್ವೆನು
ಕಾರಿಕಪ್ಪಂ ಹಂಡಹುಂಡ ಕೆಂದಂ ಬೆಳ್ಳಿಹೋರಿಗಳು ವೊಳಗಾದ ಹಿಂಡಿಂಗೆ ಮೊದಲಿಗರದಾರಾರವರ್ಗೆ ಬೇಗದಲಿ ಬಹುದೆಂದು ಪ್ರಸಾದಮಂ ಕೊಟ್ಟು ಕಳುಹೆದಾರಿದಾರಿಯೊಳು ನಾಲ್ಕೆರಡು ಯೋಜನ ಮುಟ್ಟಬಾರಿಸುವ ಕೊಂಬು ಮದ್ದಳೆ ಘಂಟೆಯಂದುಗೆಯಘೋರತರ ರಭಸದಲಿ ಕಡಲ ಕರೆಯೊಡೆದುದೆಂಬಂತೆ ಕವಿದೆಯ್ತಂದರು
ಅಲ್ಲಲ್ಲಿ ಬಂದ ಬಟ್ಟೆಗಳ ಕೇರಿಗಳ ಜನರೆಲ್ಲರುಂ ಹರಿಹರಿದು ಹರದ ಹಾರುವರೆಯ್ದೆನೆಲ್ಲು ರಾಜಾನ್ನ ಗೋಧಿಯನು ಹೊತ್ತಡಕಿ ಕುಟ್ಟುತ್ತ ಬೀಸುತ್ತ ಕೂಡೆಭುಲ್ಲವಿಸಿ ಸರವೆತ್ತಿ ಗುರುವ ಹಾಡುವ ಸೊಗಸಿನಲ್ಲಿ ತಮ್ಮ ಮಱೆದು ಬಳಲಿಕೆಯ ತೊಱೆದು ತಳುಎಲ್ಲೆನಿಸಿ ಅಕ್ಕಿ ಕಣಕವ ರಾಸಿಮಾಡಿದರು ಮಹಮನೆಯ ಉಗ್ರಾಣಕೆ
ಬೆಳ್ಳಿ ಹಿಂಡುಗಳಂಧ್ರ ದೇಶದಿಂ ಹೇಱಿ ಬಂದೆಳ್ಳ ರಾಸಿಗಳ ತೆಲ್ಲಿಗರೊಯ್ದು ಗಾಣವಾಡೊಳ್ಳಿತೆನಿಸಿದ ತೈಲಕುಂಭಕೋಟಿಗಳ ತಂದರು ಹಿಂಡಿ ಕಚಡಿಗಾಗಿಬೆಳ್ಳಿಯರವುಡಿಯಂತಿರೆಸೆವ ಸೊಜ್ಜಿಗೆಗುಟ್ಟಿಬಳ್ಳಿಯಲಿ ತಿಱಿಸೇವಗೆ ರಾಸಿಗಳ ಮಾಡಿಹಳ್ಳಿಕಾರ್ತಿಯರಲ್ಲದರಸು ಮಕ್ಕಳು ಮಾಡಿದರು ಪರಡಿ ಸರವಳಿಗೆಯ
ಉಪ್ಪು ಸಾಸವೆಯ ಮಾಗಾಯ ಸೆಳ್ಳಂಬಟೆಯಹಪ್ಪಳಂ ಕುಂಬಳದ ಸಂಡಗೆಯ ಸೇವಗೆಯನಿಪ್ಪವಿವು ಮೊದಲಾಗಿ ನೊರೆಸಂಡಗೆಯನು ಹುರಿಸಂಡಗೆಯ ಬಾಳಕವನುತಪ್ಪದೆಲ್ಲಾ ಸಾಧನವನು ಸಂವರಿಸಿ ತಂದೊಪ್ಪಿಸಿದಡಪ್ರತಿಮ ಗುರುರಾಯ ಮೆಚ್ಚುತ್ತಕಪ್ಪುರದ ವೀಳೆಯವ ಮಲ್ಲಿಕಾರ್ಜುನಗಿತ್ತು ಕೊಟ್ಟನು ಪ್ರಸಾದಗಳನು
ಜಗಲಿಗಳ ಜಾಗದಂಕುರವೊಯಿದ ಕುಂಭಗಳಬಿಗಿದ ಬಿಂಗಾರಿಗಳ ಹಸುರ್ವಂದರವ ಮುಸುಕಿನೆಗೆದ ಮೇಲ್ಕಟ್ಟುಗಳ ಸೂಯಾಣ ಪಂಚವರ್ಣದ ಚೂಳಿಕೆಗಳೊಪ್ಪಲುಜಗ ಪೊಗಳೆ ಪುಲ್ಲಿಯ ಕಥಾಯಿ ಕಡೆಗಟ್ಟಿಂದಸೊಗಯಿಸಿದ ನೇತ್ರ ಸೂತ್ರಾವಳಿಗಳಿಂ ವಿವಾಹ ಗೃಹವೆಸೆಯಿತ್ತು ಗಿರಿರಾಜಸುತೆಯಸೆವ ಕಲ್ಯಾಣಶಾಲೆಯ ತೆಱದೊಳು
ರತಿಯ ಕಾಮನ ಸರಸ್ವತಿಯ ಬ್ರಹ್ಮನ ಸಿರಿಯಸತಿಯ ನಾರಾಯಣನ ಚಿತ್ರ ವೀಧಿಗಳಲ್ಲಿಅತಿಶಯದುಮಾಮಹೇಶ್ವರರ ಸಹಚಿತ್ರ ಕಂಗತಿ ಚಿತ್ರವಾಗಿ ತೋಱೆಲತೆಗಳಂ ಪತ್ರಂಗಳಂ ಸರ್ವತೋಭದ್ರತತಿಗಳಂ ಪುರುಷಮೃಗ ಪವನಸೂನುಗಳನಾಯತವಾಗಿ ಬರೆಸಿದಂ ಗುರುರಾಯ ತನ್ನ ನಿಷ್ಕಾಮತೆಯ ಕೀರ್ತಿಯಂತೆ
ಸುಣ್ಣಸೊದೆಗಳ ಸಾರಣೆಯ ಕಾರಣೆಯ ಪಂಚವಣ್ಣ ಭರಿತದ ರಂಗವಲ್ಲಿಗಳ ವೀಧಿಯೊಳುಹಣ್ಣಿರ್ದ ಮಕರತೋರಣ ರತ್ನಕಾಂಸ್ಯತೋರಣವೋರಣಂಗಳಾಗೆಕಣ್ಣೆರಡವರು ಈ ಪುರದ ರಚನೆಯ ನೋಡೆಕಣ್ಣು ಸಾವಿರವಾದಡಹುದೆಂಬರಾಯಿಂದ್ರಕಣ್ಣಸಂಖ್ಯಾತವಾದಡೆ ತಣಿಯಲಾರ್ಕುಮೇ ಎಂಬನಿನ್ನೇವೋಗಳ್ವೆನು
ಪಸುರ್ಮಡಿಯ ಬೆಳ್ಳಿಪಟ್ಟೆಯ ಚಿನ್ನದಾರಹೊಂಬಿಸಿಲ ಚೀನಂ ಸಂಧ್ಯಾರಾಗ ಚೂಳಿಯ ಬಳಿದುಕುಸುಮಗರ್ಭಂ ಗರ್ಭಸುಖಿ ವಜ್ರಪಟ್ಟ ಮಂಜಿಷ್ಠ ಪಟ್ಟ ಕ್ರಮವನುಹೋಸದೇಸಿಕಾಱತನ ಮಿಗಲು ಗಳೆಗಳಲು ಜೋಡಿಸಿ ಕಳಶ ಕನ್ನಡಿಯ ಗೊಂಡೆಯದ ಗುಡಿಯ ಸಂಧಿಸಿದರಿದ್ದೆಸೆಯಲ್ಲಿಯಂಬರವನಂತವಂಬರದ ವರ್ಣದಲೊಪ್ಪಲು
ಚಿತ್ರತರ ನರಕದೊಳಗಾಳುತೇಳುವ ಪ್ರಾಣಿಮಾತ್ರಮಂ ತೆಗೆದು ಪುಳುಗೊಂಡಮಂ ತೊಳೆವುದಕೆನೇತ್ರತ್ರಯಂಗೆ ಸಾವಿರ ಸೊಲಿಗೆ ತುಪ್ಪದಿಂ ಸ್ನಾನಮಂ ಮಾಡಿಸಿದಪಂಪುತ್ರರಿಗೆ ಮದುವೆ ಬೇಕಾದವರು ಕನ್ನಿಕೆಯಗೋತ್ರಜರು ಸಹಿತಾಗಿ ಬಹುದು ಗುರು ಮಾಡುವೀಕ್ಷೇತ್ರ ಪೂಜೆಯ ಜಾತ್ರೆಗೆಂದು ಸಾಱಿಸಲು ನೆರೆಯಿತ್ತು ಜನ ಜಗದಗಲಕೆ
ಅಂಗವಂಗ ಕಳಿಂಗ ಲಾಳ ಮಾಳವ ಚೋಳಕೊಂಗು ಮಲಯಾಳ ಹೊಯಿಸಳ ತುಳವ ದ್ರಾವಿಡ ತೆಲುಂಗ ದೇಶದ ಮಹಾರಾಷ್ಟ್ರ ಸೌರಾಷ್ಟ್ರ ಭಾಗದೊಳಿದು ಕೇಳು ನಲಿದುಜಂಗಮಂ ಬಂದುದೆತ್ತಿದ ವೃಷಧ್ವಜ ಮಿಳಿರೆಸಂಗಡಿಸಿ ಕರಿತುರಗ ವಸ್ತ್ರಂಗಳಿಂ ಬಂದುಮಂಗಳಂಬೆತ್ತು ನಾನಾ ವಿಧದ ಚೆಂದವಿಡಿದಿರ್ದ ಪಸರಗಳೆಸೆದವು
ಎಲ್ಲಿ ನೋಡಿದೊಡೆ ಊರೂರ ಬಟ್ಟೆಗಳೊಳಗೆಹುಲ್ಲಿಱುಹೆ ನುಸುಳಲೆಡೆಯಿಲ್ಲ ತುಪ್ಪದ ಕೊಡಂನಿಲ್ಲದೆಯ್ತಂದುವಾ ಮಲ್ಲಿಕಾರ್ಜುನನ ಮಹಮನೆಯ ಉಗ್ರಾಣದೆಡೆಗೆಎಲ್ಲವನುವಾಯ್ತೆಂದು ಬಂದು ಗುಡ್ಡರು ಸಿದ್ಧವಲ್ಲಭಗೆ ಬಿನ್ನವಿಸೆ ಲೇಸಾಯ್ತು ನಾಳೆ ತಳುವಿಲ್ಲದೆ ಮಹಾನೂಲು ಮುಂತಾಗಿ ಮಾಡುವೆಂ ಕ್ಷೇತ್ರಪೂಜೆಯನೆಂದನು
ಹಱೆಯ ಹೊತ್ತಱೆ ಮಲ್ಲಿನಾಥನವಸರದಿಂದಕೆಱೆಯ ಕೆಲಸವ ಮಾಡಿ ಅಳೆಯಂಬಕಳವನಾಹೆಱೆಧರಂಗರ್ಪಿಸುತ ಮಧ್ಯಾಹ್ನದೊಳು ಛತ್ರಶಾಲೆಯಿಂ ಬೋನ ಬರಲುಕಱೆಕಂಠಗಿತ್ತು ಹೋಮವ ಮಾಡಿ ರುದ್ರರಿಂತಱುವಾಯಿಗೊಂಡು ದಾನವ ನೆರಪಿ ತ್ರೈಲೋಕ್ಯದೆಱೆಯ ಗುರು ಚೌಕದಿಂ ಯೋಗಮಜ್ಜನ ಹಿರಿಯ ಪಡಿ ಮಹಾಬೋನವಿತ್ತು
ಪರಿವಿಡಿಯ ಕೇಳಿ ಪ್ರಸಾದವಸುಗೆಯನಿತ್ತುಹರಮಲ್ಲಿಕಾರ್ಜುನಂಗಷ್ಟ ಪೂಜೆಯ ಕೊಟ್ಟುಪರಿಸೂತ್ರದೊಳಗಿರ್ದ ಬಾದುಮೆಯ ಕಟ್ಟಿ ತನಗೊಡವರ್ಪ ಗುಡ್ಡರುಗಳಇರಹೇಳ್ದು ಮಧ್ಯರಾತ್ರಿಯೊಳು ಕ್ಷೇತ್ರವನು ಬಲವರುತ ಕೈಲಾಸಕ್ಕೆ ಹೋಗಿ ಶಿವಗೆಱಗಿ ಶ್ರೀಗುರು ನಾಳೆ ವೈಶಾಖ ಪೌರ್ಣಮಿಯ ಪೂಜೆಗೆಂದಿರದೆ ಬಹ ಸಮಯದೊಳಗೆ
ಕೂಡೆ ಪೂರೈಸಿದವು ಶಂಖ ಶಿವಭವನದೊಳುನಾಡೆ ಮೊಳಗಿದವು ಪ್ರಹಾರಭೇರೀನಾದಹಾಡುತಿರ್ದರು ಗುಡ್ಡರೊಲಿದು ಗುರುವಿನ ವಚನಮಂ ಶುದ್ಧಭೈರವಿಯಲಿಬಾಡುತಿರೆ ಕುಮುದ ಕಮಲಿನಿಯಿನನ ಬರವಿಂಗೆನಾಡೆ ಮುಖವರಳಿ ಕೆಂಬೆಳಗನೊಳಕೊಂಡಿರ್ಪಮೂಡುಗೆಡೆಯಿಂ ಮೂಡಿದಂ ದಿನಪನೀ ಕ್ಷೇತ್ರಪೂಜೆಯಂ ನೋಡುವಂತೆ
ಷಡು ಸಮಾರ್ಜನೆ ರಂಗವಲ್ಲಿ ತೋರಣ ಗುಡಿಯಸಡಗರಂ ವೀಧಿ ವೀಧಿಯೊಳು ಸಿಂಗರಿಸಲ್ಕೆಮೃಡಮೂರ್ತಿ ಸಿದ್ಧಪತಿ ಮಲ್ಲಿನಾಥಂಗೆಸೆವ ಒಸಗೆಯವಸರವ ನಡಸಿಗಡಣದಿಂ ಕೇಳಿಕೆಯ ವಾದ್ಯರವದೊಳು ಭಕ್ತರೊಡನೆ ನಂದಿಯನೇಱಿ ಹಾಟಕೇಶ್ವರನು ಹೊಱವಡಲು ಭಂಡಿಯ ಮೇಲೆ ನವನೂಲಿನಿಂಡೆ ಗಂಗಾತರಂಗಂ ಹೇಱಿತು
ಮಲ್ಲಿಕಾರ್ಜುನ ಮೊದಲು ನಾಲ್ಕು ದ್ವಾರಂಗಳಲಿನಿಲ್ಲದೆಲ್ಲಾ ದೇವರಿಗೆ ನೂಲನಿಕ್ಕುತ್ತಬಲ್ಲೆವೆಂಬಧಿಕರಾರೋ ಸಿದ್ಧಸಂಕೇತ ಹೊನ್ನು ಬೆಳ್ಳಿಯ ನಾಳದಿಂಎಲ್ಲಿಯುಂ ಎಡೆಬಿಡದೆ ಸೂತ್ರ ಸುತ್ತಲು ಸಿದ್ಧವಲ್ಲಭಂ ಕ್ಷೇತ್ರಪೂಜೆಯ ಮಾಡಿಯಾಗಳೇಭುಲ್ಲವಿಸುತೈತಂದು ಸ್ನಪನಕ್ಕೆ ಘೃತದ ಕೊಡನೆಲ್ಲವಂ ತರಿಸುತಿರಲು
ಧಾರೆಗಹಳೆಯ ಕೊಂಬು ಶಂಖ ಧ್ವನಿಗಳೊಳಗೆಬಾರಿಸುವ ಭೇರಿ ಮುರಜಂ ಕರಡೆ ಕಂಸಾಳಭೋರೆಂಬ ಜನದ ಕಳಕಳವುಘೇ ಚಾಂಗು ಬೊಲ್ಲೆಂಬ ಜಯಜಯರವದಲಿವಾರಿಧಿಯ ಘೋಷಕ್ಕೆ ಪಡಿಯಾಗೆ ಗುರುವಾಜ್ಯವಾರಾಶಿಯಂ ತರಿಸಿದನೊ ಲಿಂಗಸ್ನಪನಕ್ಕೆಆರಱಿವರಲ್ಲದೊಡೆ ಈ ಲೋಕದಳಗಿಲ್ಲ ಈ ತುಪ್ಪವೆನುತಿರ್ದರು
ಸುರಪನೀ ಸಿದ್ಧೇಂದ್ರ ಬೆಸಸಲ್ಕೆ ಮೇಘದಿಂಸುರಿದನೋ ಧೃತಕುಂಭ ಕೋಟಿಯನದಲ್ಲ ಮಾಣ್ಸುರಭಿ ಬಂದಿರದಲೇ ಬಾಣಸುಗ್ರಾಣದೊಳಗಲ್ಲದಿನಿಸೊಂದು ತುಪ್ಪನೆರೆದುದುಂಟೇ ಸರ್ವಸಾಧನಂ ಬಗೆವಡೀಶರಧಿ ತಾನಿನಿತಾದ ತೆಱನೆಂದು ಜಗದ ಜನಶಿರವನಲ್ಲಾಡಿ ಹೊಡವಂಟು ಹೊಗಳುತ್ತಿರ್ದುದೇನೆಂದು ಬಣ್ಣಿಸುವೆನು
ಮಿಸುಪ ಚೌಕದ ಹಟ್ಟಿಯಿಂದಾದಿಲಿಂಗತನಕುಸುರು ನುಸುಳುಲಿಕೆ ತೆಱಹಿಲ್ಲೆನಿಸಿ ತುಪ್ಪಮಂಕುಸಿಯುತ್ತ ಹೊತ್ತಡುಕುತಿರ್ದರು ಮಹಾಭಕ್ತರಾನಂದಮಯರಾಗುತದೆಸೆದೆಸೆಯೊಳುಲಿವ ನಾನಾ ವಾದ್ಯರವದೊಳಗೆಮಿಸುನಿಯಲಿ ಕಟ್ಟರ್ದ ವೃಷಭ ವಾಲಜದಲ್ಲಿಅಸಮಾಕ್ಷಲಿಂಗಕ್ಕೆ ಸಿದ್ಧನಾ ಸ್ನಪನಕ್ಕೆ ಸಂಕಲ್ಪ ಮಾಡಲೆಂದು
ದೇವ ದಾನವ ಮಾನವರು ಮುಖ್ಯವಹ ಸರ್ವಜೀವಮಂ ನರಕದಿಂ ತೆಗೆದುದಕೆ ಘೃತಬಿಂದುಸಾವಿರ ಸೊಲಿಗೆಯಾಗಿ ಕೈಕೊಳ್ಳು ತಂದೆಯಿಂದಿನ ಮದುವೆಯೆನಿತಾದವಂದೇವ ದೇವರೆ ನೀವೆ ಚಿತ್ತೈಸುವುದು ಎಂದುಭಾವಜಾಂತಕನೆನಿಪ ಶಿವಸಿದ್ಧರಾಮಯ್ಯಪಾವನಕರಂಗಳಿಂ ಹೊಂಗೊಡವ ತುಂಬಿಯುಘೆಯುಘೆಯೆಂದು ಸುರಿಯುತಿರಲು
ಗಂಗಾಳ ಕೊಪ್ಪರಿಗೆಯೊಳು ಮೊಗೆದ ಘೃತಧಾರೆಯಂಗಕೆ ಸುಖೋಷ್ಣವಂ ಪರಿಮಳವ ನಾಸಿಕಕೆಕಂಗಳಿಗೆ ಚೆಲುವ ರಭಸವ ಕಿವಿಗೆ ಸೊಗಸೆಯೆಲ್ಲಾಜ್ಯ ಪ್ರವಾಹದಿಂದಗಂಗಾನದಿಯ ಭಂಗವಡಗಿತಂದಾದಿ ಶಿವಲಿಂಗ ಕವಕವಿಸಿ ನಗೆ ಜಿಹ್ವೆಗಿನಿದಾಗಲಾಮಂಗಳವೆನಿಪ್ಪ ಮಹಮಜ್ಜನಂ ಶಿವನ ಪಂಚೇಂದ್ರಿಯಕ್ಕೆ ಸೊಗಸಿರ್ದುದು
ಪಂಚಮಹಪಾತಕವು ವುಪಪಾತಕಂ ಮಿತ್ರವಂಚನಂ ಗೋಘ್ನತೆ ಕೃತಘ್ನತೆ ಬರೆದ ಸಿವುಡಿಸಂಚಗೆಟ್ಟುದು ಕಲಿಮಲಕ್ಕೆ ನಿರುಹರಣ ಕಾರಣನಾದ ಸಿದ್ಧೇದ್ರನಿಂಇಂಚೆವೋಯಿತ್ತು ನಮ್ಮಯ ತೇಜವಿನ್ನೇನುಲಂಚಗುಳಿಯಾದ ಶಿವ ವಿವಾಹವಡೆಯದಂತೆಮಿಂಚುಧಾರೆಯ ತುಪ್ಪವಿನಿತೆಱೆಯ ನರಕವಱೆಯಾಯ್ತೆಂದು ಜವ ಜಱಿದನು
ಮಂಡಳಿಕರುದ್ದಂಡನಾಯಕರು ಸಾಮಂತದಿಂಡೆಯರು ಅಧಿಕಾರಿ ಸಜ್ಜನರು ರಾಯರುಂಕಂಡುಗ ಕೊಳಗ ಬಳ್ಳಮಾನ ಸೊಲ್ಲಿಗೆಯಿನಿತು ಮೊದಲಾಗಿ ಸ್ನಪನಕೆಂದುಕೊಂಡು ಬಂದವರ ಕುಲಕೋಟಿ ನರಕದೊಳಪ್ಪದಂಡಣೆಯನುಳಿದು ವೈತರಣಿಯಂ ಕಳಿದು ದಿವಮಂಡಳಕ್ಕೆಯ್ದೆಯಾ ನರಕ ಹಾಳಾಗಲೆಱೆದರು ಗವ್ಯಘೃತವನಂದು
ಆದಿಲಿಂಗಕ್ಕಮೃತಮಜ್ಜನವ ಗುರುವೆಱೆದುಆ ದಿನಂ ಮಾಡೆ ದಣ್ಣನೆ ದಣಿದು ಶಾಂತಮಯವಾದತ್ತು ನೊಸಲ ಕಣ್ಣಲ್ಲದೊಡೆ ಇನಿತು ತುಪ್ಪವನೆಱೆಯೆ ಭುಗುಭುಗಿಸುತಾಮೇದಿನಿಗೆ ಪ್ರಳಯವನೊಡರ್ಚುವುದು ಲಿಂಗಮುಖವೇದ ಕೋಟಿಗಳಱಿಯದಪ್ರತಿಮ ಮೂರ್ತಿಯನುಸಾಧಿಸಿದ ಶಿವಸಿದ್ಧಗಾರು ಸರಿಯೆಂದು ಸಾಧುಗಳು ಶಾಂತರು ನುಡಿದರು
ಆದಿಲಿಂಗಕ್ಕೆ ಹರಿಯಜರುದ್ರರಿಂದ ಮುನ್ನಾದಲಿಂಗಕ್ಕಷ್ಟ ತನುಗಳಿಂ ಮುಂಚೆ ತಾನಾದಲಿಂಗಕ್ಕಂಡ ಷಂಡ ಕೋಟಿಗಳನೊಳಕೊಂಡ ಮಹದಾಕಾಶದಆದಿಲಿಂಗಕ್ಕೆ ವೇದದ ಬೋಧೆ ನಿಲುಕದ ಮಹಾದಿಲಿಂಗಕ್ಕೆ ಸ್ವಪನಂ ಮಾಡಿ ಶಿವಸಿದ್ಧಕಾದಗ್ಧವಣಿಯಟ್ಟ ಕಳಿ ಕರುಟು ಚಂದನಂಗಳನೊರಸಿ ಮಜ್ಜನವನು
ಹೊರೆದಗ್ಧವಣಿಯ ಮಜ್ಜನಕೆಱೆದು ಚಂದನಕೆಪರಿಮಳಂ ತಂಪುಳ್ಳ ಪನ್ನೀರ ಕರ್ಪುರವಬೆರಸಿ ಕಸ್ತೂರಿಯಿಂದುದ್ವರ್ತನಂ ಮಾಡಿ ಕರಿಯ ಮರುಗವನೆ ಸೂಡಿಪರಿಪರಿಯ ನವರತ್ನದಾಭರಣ ಪೂಜೆಯಂವಿರಚಿಸಿ ಸುಗಂಧ ಧೂಪಾರತಿಯನೆತ್ತಿ ಶಂಕರ ಕರುಣಿಯಿರುಳು ತವಗದ ಮೇಲೆ ಜಂಗಮದೊಳಾರೋಗಿಸುವುದೆಂದನು
ಪೊಡವಿಯೊಳಗುಳ್ಳ ದುಷ್ಕರ್ಮಿಗಳನಂತಕಂಹಿಡಿದು ಕಾಸಲು ಕೊಯ್ದು ಸುಡಲು ಕುಂಭಂಗಳೊಳಗಿಡಿದಿಡಿದು ಕುದಿಸಲ್ಕೆ ಗುಣನಾಮ ಚಿತ್ತದಾಪತ್ತುವೀ ಸಿದ್ಧೇಂದ್ರನಿಂಬಿಡುಗಡೆಯದಾಯ್ತು ಪುಳುಗೊಂಡ ತೊಳೆಯಿತ್ತು ಮುಂದೊಡರಿಚದ ಮುನ್ನ ಶರಧಿಯೊಳಿಪ್ಪ ವಡಬ ಶಿಖಿಯೊಡಗೂಡಿ ಸುಖದೊಳಿಹೆನೆನುತ ನರಕಾಗ್ನಿ ಪೋಪಂತಬುಧಿಗಿನನಿಳಿದನು
ಕೆಂಬೆಳಗಿನೊಳು ಮೊಳೆವ ಶಶಿಯ ಕಾಣುತ್ತಿನನಬಿಂಬವೆಂದಾ ಚಕ್ರಚಯ ನಲಿಯೆ ಕಮಳವರಳಂ ಬಡೆದ ವಿಕಳ ಹರುಷಕ್ಕೆ ನಸುನಗುವಂತಿರೆ ಬಿರಿದು ಕುಮುದವರಳೆಅಂಬರಕ್ಕೊಗೆವ ಹರಿಣಾಂಕನಂ ತಾರಾಕದಂಬಮಂ ಕಾಣುತ್ತ ಕೋಕ ಪದ್ಮಿನಿ ಕಾಮನಂಬುಗೂಡಾಗಿ ಮೊಗ ಕಂದಿತೆನೆ ವಿರಹಿಗಳ ಚಿತ್ತವಾರಂ ನಗಿಸದು
ಪುರದೊಳಗೆ ಸರ್ವ ಜೀವಾಳಿಗುಚಿತಾನ್ನಮಂಪರಿಕಲ್ಪನಂ ಮಾಡಿ ನೆರೆದೀ ಚಕೋರಿ ಹಸಿದಿರಲಾಗದೆಂದು ಸುರಪತಿ ಸೋಮನಂ ಕಳುಪಲೆನ್ನುತಾಜ್ಞಾಪಿಸಿದೊಡೆಪರಮಾಮೃತವ ಸುಧಾಪಿಂಡದೊಳು ತೀವಿ ಕಸ್ತುರಿಯಿಂದ ಮೇಲಕ್ಕರಕ್ಕೆ ಕುಱುಪಿಟ್ಟು ಶ್ರೀಗುರುವಿನೆಡೆಗಟ್ಟಿದನೊ ಸಂಧ್ಯಾಂಗನೆಯ ಕೈಯೊಳೆಂಬಂತೆ ಶಶಿಯೆಸೆದನು
ಆಸುರದೊಳಲ್ಲಲ್ಲಿ ಶಿವಭವನದೊಳಗೆ ಸಂಧ್ಯಾಸಮಯ ಭೇರಿ ಶಂಖಂ ವಾದ್ಯಕುಳ ನಾದಸೂಸುತಿರ್ದವು ಹೊಱನಿವಾಳಿ ಮಂಗಳವುಘೆಯಲಿಡಿದಿಡಿದು ಚೆಲುವು ಮಿಗಲುಆ ಸಮಯದೊಳಗಾದಿಲಿಂಗದಿಂ ಚೌಕದ ನಿವಾಸದೊಳು ಗುರು ಬಂದು ಸಿಂಹಾಸನದೊಳಿಹ ವಿಳಾಸಮದನೇನೆಂಬೆನಮರಗಣ ಮಧ್ಯದೋಲಗದ ಶಿವನಂತಿರ್ದನು
ಹಾಡುತಿಹ ಗುರುನಿರೂಪಿತದ ವಚನಂಗಳಿಂಹಾಡುತಿಹ ಪೇರಣೆಯ ವೇಡಾಂಕ ಕೇಳಿಕೆಯನೋಡುತಿಹ ಪೃಥ್ವಿಯ ಮಹಾಭಕ್ತ ಜನದ ಸಮ್ಮರ್ದನವ ಕೆಲವಿಂಗಿಸಿಮಾಡುತಿಹ ಷಡುರಂಗವಲ್ಲಿಯಂ ಚೌಕಕ್ಕೆಕೂಡುತಿಹ ಗುಡ್ಡರಿಂದರ್ಚಿಸಲು ಸಿಂಗರವಸೂಡುತಿಹ ವಿಸ್ತರವನಾವ ಕವಿ ಬಣ್ಣಿಸುವ ದೇವ ಚಾರಿತ್ರವೆನಲು
ಉನ್ನತವೆನಿಪ್ಪ ಕೃತಪುಣ್ಯರಾಗಿದ್ದವರುತನ್ನ ಕುಲಕೋಟಿಯುದ್ಧಾರಕ್ಕುಪಾಯಂಗಳನ್ನೆನೆದು ಕ್ಷೇತ್ರಪೂಜೆಯಲು ಚೌಕದ ವರಾರಾಧನೆಯ ಮಾಳ್ಪೆವೆಂದುಹೊನ್ನ ಕಟಕಂ ಮಕುಟ ವಸ್ತ್ರಾಭರಣ ಕಳಶಕರ್ಣಕುಂಡಲ ಕೀರ್ತಿಮುಖವ ತೋಳೊಳು ತೊಡಿಸಿಚೆನ್ನಾಗಿ ಪೂಜಿಸುವರಖಿಳ ರಾಯರು ಮಂಡಳಿಕರು ದಂಡಾಧೀಶರು
ಶಿವ ವಿಶ್ವತೋಮುಖನು ಎಂದು ಸೂಚಿಸುವಂತೆಚವುಕದೊಳಗೆತ್ತ ನೋಡಿದಡತ್ತ ಮುಖವಾಗಿಹವಣಿಸಿದ ದೀವಿಗೆಯ ನವನವ ನವೀನ ಗತಿಗಳ ವಾದ್ಯ ಕೇಳಿಕೆಯೊಳುತವತವಗುಘೇಯೆಂದು ನಮಿಸುವರ ಕುಲಕೋಟಿದಿವಮಂಡಲವನಡರೆ ಲಾಕುಳೇಶ್ವರವಿಡಿದುಅವಿರಳ ಜ್ಞಾನ ಪ್ರಭಾಮಯನು ಸಿದ್ಧಮಲ್ಲಯ್ಯನಲ್ಲಿಗೆ ಬಂದನು
ಯೋಗಿಜನ ಹೃತ್ಕಮಲ ಕರ್ಣಿಕಾಸೀನಂಗೆಯೋಗಮಜ್ಜನದಶಾಮೃತವನೊಲವಿಂ ಮಾಡಿಭೋಗಿಕುಳಭೂಷಂಗೆ ಗಂಧವಕ್ಷತೆ ಪುಷ್ಪ ಪಟ್ಟಪದಕವನು ಸೂಡಿರಾಗದಿಂ ಧೂಪಾರತಿಯ ನಿವೇದ್ಯವನಿತ್ತುಈಗಳೀ ತವಗದಾರಾಧನೆಯ ಕೈಕೊಳಲ್ಬೇಗ ಬಹುದೆಂದು ಬಿನ್ನೈಸೆ ಸಿದ್ಧೇಂದ್ರನಾ ತವಗಕ್ಕೆ ನಡೆತಂದನು
ಇಂದಿನೀ ತವಗದಾರಾಧನೆಯ ಚೌಕದವರೆಂದುವುಂ ತಪ್ಪದಿರೆ ವಂಶಕ್ಕಿದೇ ತೇಜವೆಂದು ಬೆಸನಿತ್ತು ಶಿವಶಕ್ತಿ ಸಂಪುಟವಾಗಿ ದಿಕ್ಕುದಿಕ್ಕುಗಳೊಳಿರಿಸಿಚಂದನಾಕ್ಷತ ಪುಷ್ಪ ಧೂಪ ದೀಪವನಿತ್ತುಮಂದೈಸಿ ಭೋರೆಂಬ ವಾದ್ಯಘನರವದೊಳಗೆತಂದು ಹೊಸ ಪರಿಯಾಣ ಭರತವೆನೆ ಬಡಿಸುತಿಹ ಸಡಗರವನೇನೆಂಬೆನು
ಉಪಮೆಗೆ ಅತೀತನಾರೋಗಣೆಯ ಸಾಧನಕೆಉಪಮೆಯಂ ಕೊಡಬಹುದೆ ರುಚಿಯ ಮನದೊಳು ತಾಳ್ದುವಪರಾಧಮಂತಿರ್ಕೆ ಪರಿಪರಿಯ ಭಕ್ತ ಪಾಯಸವನೋಗರ ತುಪ್ಪವಅಪರಿಮಿತ ಸಕ್ಕರೆಯ ಮೇಲೋಗರಂಗಳಂತೃಪುತಿಯನುಳಿದು ತಣಿಯದಾರೋಗಿಸುತ್ತಿರ್ದಕಪಿಲಸಿದ್ಧೇಂದ್ರಮಲ್ಲಯ್ಯಲಿಂಗಂ ಜಂಗಮದ ಮುಖದೊಳೇವೊಗಳ್ವೆನು
ತಱಗು ಚಕ್ಕುಲಿ ಹೂಸಣಂಬ ಹೂರಿಗೆಗಳಂಅಜುಬೋನ ಫೇಣಿ ಗಾರಿಗೆ ಇಡ್ಡಲಿಗೆ ಅವುಗುತಿಱಿಸೇವಗೆಯನು ಸರವಳಿಗೆ ಪರಡಿಗೆಯ ನಖಮಿತ್ತೆಲ್ಲ ಲಡ್ಡುಗೆಯನುತುಱುಹೆಮ್ಮೆ ಕಱಿದ ಹಾಲುಂಡೆ ಹೂರುಂಡೆಯನುತೆಱಹಿಲ್ಲೆನಿಸಿ ಗಡಣಿಸುತ್ತ ಗುಡ್ಡರುಗಳಿಗೆಕಱೆಕಂಠನಾರೋಗಿಸಿದೊಡೆ ಇನಿದಾವರಿಸಿ ಗರಳ ಸುಧೆಯಂತಿರ್ದುದು
ಹೆಡಗೆ ಹೆಡಗೆಯಲಿ ಭಕ್ಷ್ಯಂಗಳಂ ತುಪ್ಪಮಂಕೊಡಕೊಡಂಗಳೊಳಡಕಿ ತರಲು ತವಗದ ಮೇಲೆಗಡಣಿಸುತ್ತಿರ್ದರಾ ಸಿದ್ಧೇಂದ್ರನಾಜ್ಞೆಯಲಿ ಆರೋಗಣೆಯ ಸಮಯದಹೊಡೆವ ನಾನಾಭೇರಿಗಳ ವಾದ್ಯಸಂಕುಳದಸಡಗರದ ಕೇಳಿಕೆಯ ನೋಡುತಿಹ ಭಕ್ತರೆಡೆಯುಡುಗದುಘೆಯುಘೆಯೆಂಬ ಮಂಗಳರವಂಗಳೊಳು ಮದುವೆಯ ಮನೆಯೊಳಿತ್ತಲು
ಲಿಂಗದ ಸಮಕ್ಷದೊಳು ಗುರುವಿನೊಕ್ಕುದನಿಕ್ಕಿಮಂಗಳ ವಿವಾಹವನು ಮಾಳ್ಪೆವೆಂದವರೆಯ್ದೆಸಿಂಗರಿಸಿ ಮದುವಕ್ಕಳಿಗೆ ಬಾಸಿಗಂ ದಂಡೆ ವಸ್ತ್ರವಾಭರಣದಿಂದಕಂಗೆ ಕೌತುಕವೆನಲು ಆರತಿಗಳಂ ಬೆಳಗಿಯಂಗನೆಯರಲ್ಲಲ್ಲಿ ಧವಳಮಂ ಪಾಡುತಿರೆಜಂಗಮವ ತಣಿಪಿ ಶಿವಸಿದ್ಧ ವಿಘ್ನಹ ಲಗ್ನವೆಂದು ಓಂ ಪುಣ್ಯವೆನಲು
ಅಲ್ಲಲ್ಲಿ ಹಿಡಿದ ತೆರೆಗಳು ಸರಿಯಲವರವರುಚೆಲ್ಲಿದರು ಒಬ್ಬರೊಬ್ಬರಿಗೆ ಜೀರಿಗೆವೆರಸುಬೆಲ್ಲವಂ ಕೈಧಾರೆಯೆಱೆದು ಮೆಟ್ಟಕ್ಕಿಯಿಡೆ ತಂಡುಲಂ ಧೃತಮೂರ್ಧ್ವರುತೆಲ್ಲಯಿಸಿ ಮಂಗಳಾರತಿಯ ವನಿತೆಯರೆಲ್ಲಭುಲ್ಲಯಿಸಿ ಹಾಡಿ ಹರಸುವ ಹೊತ್ತು ಮೆಱೆದು ಸಿರಿವಲ್ಲಭಂ ಗೋಪಿಯರ್ಗೊಲಿದು ಪ್ರತ್ಯೇಕರೂಪಾಗಿ ನೆರೆದಂತಿರ್ದರು
ಇತ್ತಲಾರೋಗಿಸಿದವರ್ಗೆ ಕೈಘಟ್ಟಿಯಂಕತ್ತುರಿಯ ಪನ್ನೀರ ಹದನ ಚಂದನವನೊರಸುತ್ತ ಪುರುಷರು ಮಲ್ಲಿನಾಥನಂ ಪ್ರಕೃತಿಗಳು ವೃಷಭವದನವ ಮುಟ್ಟಲುಅತ್ಯಂತ ಹರುಷರಸದೊಳಗೆ ಅವಗಾಹನವಿರುತ್ತ ಸಿದ್ಧೇಂದ್ರನು ವಿವಾಹಗೇಹವನು ನೋಡುತ್ತ ಬರಬರಲಲ್ಲಿ ಮಂಗಳಾರತಿವಿಡಿದು ಧವಳಮಂ ಹಾಡುತಿರಲು
ಶಿವಶಕ್ತಿಸಂಪುಟದಸಂಖ್ಯಾತ ಮಿಥುನಮಂಶಿವಮೂರ್ತಿ ಸಿದ್ಧಪತಿ ನೋಡುತ್ತ ಪಾಡುತ್ತಶಿವಶಿವೋತ್ಸಾಹದೊಳು ಭೂಮವಿಡಿಸಿದನು ಬಣ್ಣಿಸಲೇನು ಬಾಯಬಱನುತವಿಲಾಗೆ ತಣಿಪಿ ಮಲ್ಲಯ್ಯನಲ್ಲಿಗೆ ಬಂದುಭವ ಶರ್ವ ಶಂಕರನೆ ಅವಧರಿಸು ಸರ್ವಜೀಭವ ನರಕದಿಂ ತೆಗೆದ ನೇಮಪೂಜೆಯನು ನೀನೇ ನೋಡಿ ಕೈಕೊಂಬುದು
ಆ ಸಮಯದೊಳಗೆ ಅರುಣೋದಯದ ಕೆಂಬೆಳಗುಲೇಸಾಗಿ ತುಡುಕಿತ್ತು ಚಂದ್ರಿಕೆಯ ಕುಮುದಿನಿಯಫಾಸಿಮಾಡಿತ್ತು ತಾರಾಸತಿಯರಿನನ ಕರಘಾಸಿಯೊಳು ರೂಪಳಿದರುಈಸೊಂದು ಮಾನಹತಿಯಾಯ್ತಂದು ಶಶಿ ಕಂದಿವಾಸಿಯಿಂ ವೈರಾಗ್ಯವೆಡೆಗೊಳಲು ಅಂಬರವಬೀಸಾಡುವಂತೆ ನಭವಂ ಬಿಟ್ಟು ಅಪರವಾರಾಶಿಯೊಳು ಮೈಗರೆದನು
ಇತ್ತಲಾ ಪುರದ ಮಹಮನೆಯ ಬಾಗಿಲೊಳು ಮೊಳಗಿತ್ತು ಪ್ರಹಾರಭೇರಿಯ ಶಂಖನಾದ ಪೊಣ್ಮಿತ್ತು ಪ್ರಾತಃಕಾಲ ಪೂಜೆ ವಚನಾಧ್ಯಾಯ ಸ್ತೋತ್ರ ಪಠನಂಗಳಿಂದಬಿತ್ತರಂಬಡೆದ ಶರಣಾಳಿ ಹಾಡುತ ನೆನೆವಹೊತ್ತು ತ್ರೈಲೋಕ್ಯ ಜೀವಿಗಳ ಜ್ಞಾನಜ್ಯೋತಿಯಿತ್ತಲುಂ ಪುಟ್ಟತೆಂಬಂತೆ ರವಿಯುದಯಾಚಲಾಗ್ರದೊಳು ಬೆಳಗುತಿರಲು
ನಿತ್ಯಪೂಜೆಯ ಮಾಡಿ ಗುರು ಬಂದು ನೋಡುತಿರೆಭತ್ತವಂ ತವನಿಧಿಗೆ ಕವಿಲೆಯಂ ಕಱೆವೆಡೆಗೆಎತ್ತುಗಳ ಬಣ್ಣಿಗೆಯ ಹಿಂಡಿಗೆಂದಖಿಳ ನೃಪರೋಲೈಸೆ ಪಾವುಡವನುಚಿತ್ತೈಸಿಯುಗ್ರಾಣದೆಡೆಗಟ್ಟಿ ಮದುವೆಯ ಚತುರ್ಥಿಯಂ ಮಾಡಿ ಬಂಡಿಯೊಳು ಮದವಕ್ಕಳಂಬಿತ್ತರಂಬಡೆದು ಹಾಡುತ್ತ ಮಹಮನೆಯಿಂದ ಆದಿಲಿಂಗಕ್ಕೆ ತಂದನು
ಧರೆಯಱಿಯೆ ಸರ್ವ ಜೀವಾಳಿ ಹರುಷಂಬಡೆಯೆಸುರರು ತುಷ್ಟಿಯನೆಯ್ದೆ ವಿಶ್ವತೋಮುಖನೆನಿಪಹರಗೆ ಆಜ್ಯಸ್ನಪನ ಪೂಜೆ ತವಗಾರ್ಚನೆಯ ಜಂಗಮದ ತೃಪ್ತಿ ಮದುವೆನೆರೆದವಂ ಲೇಸೆನಿಸಿ ಮಾಡಿ ತ್ರಿಲೋಕೈಕಗುರುವೆನಿಪ ಸಿದ್ಧರಾಮಯ್ಯ ಬಾಯಿನವಿತ್ತುಪುರಜನಕೆ ಮದುವೆಯೌತಣವಿಕ್ಕಿ ಕ್ಷೇತ್ರಪೂಜೆಯ ಮೂರುವರುಷಕೊಮ್ಮೆ
ಈ ಪರಿಯ ಕ್ಷೇತ್ರಪೂಜೆಯ ಮಾಡಿ ದಿನದಿನವ್ಯಾಪಾರದೊಳು ಲಿಂಗಪೂಜೆ ಕೆಱೆಯೊಳು ಖನನವಾಪೊತ್ತು ಕಲ್ಲಕೆಲಸಂ ಸತ್ರಹೋಮ ಚೌಕಂ ಪ್ರದಕ್ಷಿಣ ಸಮಾಧಿಶ್ರೀ ಪಾರ್ವತೀಶನೋಲಗಕೈದಿ ಬಂದಖಿಳವ್ಯಾಪಕಂ ಶಿವಸಿದ್ಧನನುದಿನಂ ನಡಸುತಿರೆಭೂಪ ಬಿಜ್ಜಳನಳಿದ ವೀರಜಗದೇವನಿಂ ಸಿದ್ಧಸಂಕೇತದಂತೆ


