IV
ನಳಚರಿತ್ರೆ
ಮರುಗೆ ಪುರಜನ ಜೂಜಿನಲಿ ಪುಷ್ಕರಗೆ ರಾಜ್ಯವ ಸೋತು ನಳಭೂವರನು ನಿಜಸತಿಸಹಿತ ಹೊರವಂಟನು ವನಾಂತರಕೆ
ಕೇಳಿದೈ ರಾಜೇಂದ್ರ ಧರ್ಮನೃಪಾಲ ನೈಷಧನತುಳಸಂಪದದೇಳಿಗೆಯನೇನೆಂಬೆ ಸಪ್ತದ್ವೀಪದವನಿಪರಮೌಳಿಗಳು ನೃಪನಂಘ್ರಿಕಮಲವನೋಲಗಿಸುತಿಹುದವನ ಕೀರ್ತಿ ಚಡಾಳಿಸಿತು ತ್ರೈಜಗವನವನೀಪಾಲ ಕೇಳೆಂದ
ಇಂತೆಸೆದ ಸಂಪತ್ತಿನಲಿ ಭೂಕಾಂತ ನಳಚಕ್ರೇಶನಲಿ ದಮಯಂತಿ ಪಡೆದಳು ಪುತ್ರಕನ ವರಪುತ್ರಿಯೊರ್ವಳನುಸಂತಸದೊಳಿರಲಾ ವಿದರ್ಭ ಪುರಾಂತರದಿ ನೆರೆದಖಿಳಜನ ಭೂಕಾಂತರೊಡನೈತಂದು ಹೊಕ್ಕರು ತಮ್ಮ ನಗರಿಗಳ
ಸುರಪನಾಗ ವಿದರ್ಭಪುರವನುತೆರಳುತಮರಾವತಿಗೆ ದಿಕ್ಪಾಲರು ಸಹಿತ ನಲವಿಂದೆ ದಮಯಂತಿಯ ಚರಿತ್ರೆಯನುಹರುಷಮಿಗೆ ಕೊಂಡಾಡುತೈತರುತಿರಲು ಮಾರ್ಗದಿ ಕಂಡರಾ ಕಲಿಪುರುಷನನು ಕುಟಿಲಾತ್ಮಕನ ನಿಸ್ಸಾರಹೃದಯನನು
ಕುರುಳು ಜುಂಜುರು ತಲೆಯ ತಗ್ಗಿದಕೊರಳ ಕೆಂಗರಿಗಣ್ಣ ಮೋರೆಯಹರಕುಗಡ್ಡದ ಕೆಂಚುಮೀಸೆಯ ಮಲಿನವಸನದಲಿನೆರೆದ ವೀರ ಕರಾಳಭಟರಿತ್ತೆರದೊಳುಕ್ಕಿನ ತೇರಿನಲಿ ಕಲಿಪುರುಷ ಕಾಣಿಸಿಕೊಂಡನಮರೇಶ್ವರನ ನಸುನಗುತ
ಆರು ನೀ ಜಂಭಾರಿಯೋ ಇವರಾರು ಯಮ ವರುಣಾದ್ಯರೋ ಸಂಚಾರವೆತ್ತಲು ನಿಮಗೆಯೆನಲಮರೇಂದ್ರ ನಸುನಗುತತೋರಹತ್ತದೊಳೆಂದ ನಳನಿಗೆನಾರೆ ದಮಯಂತಿಯನು ಮದುವೆಯಧಾರೆಯೆರೆಯಿಸಿ ಬಂದೆವೆನೆ ಖತಿಗೊಂಡ ಕಲಿರಾಯ
ಅನಿಮಿಷರು ನೀವಧಿಕಬಲರಾವನಿತೆಯನು ಕೈಕೊಳ್ಳಲಾರದೆಜನಪ ನಳನೃಪಗಿತ್ತು ಬಂದಿರಿ ಹರಮಹಾದೇವಎನಗೆ ನೇಮಿಸಿ ಕಳುಹಿ ನಿಮ್ಮಯಮನದ ಬಯಕೆಯ ಸಲಿಸುವೆನು ಕೇಳೆನಲು ಸುರಪತಿ ನಸುನಗುತ ಕಲಿಪುರುಷಗಿಂತೆಂದ
ಲೇಸನಾಡಿದೆ ಕಲಿಪುರುಷ ನಿನಗೀಸು ಪೌರುಷವುಂಟೆ? ನಮಗಿನ್ನಾ ಸರೋರುಹಗಂಧಿಯಲಿ ಮನವಿಲ್ಲ ನಳನೃಪತಿಆ ಸಮಸ್ತನೃಪಾಲರಲಿ ಸದ್ಭೂಷಣನು ಶೌರ್ಯೋನ್ನತನು ಕಮಲಾಸನನಿಗಳವಲ್ಲ ನಿನ್ನಲಿ ಹರಿವುದೇನೆಂದ
ಎನಲು ಖತಿಗೊಂಡೆಂದ ಕೇಳೆಲೆಯನಿಮಿಷಾಧಿಪಯೆನ್ನನರಿಯಾದಿನಪನಿದಿರಲಿ ತಮದ ಹಾವಳಿಯೇ ಮಹಾದೇವಎನಗೆ ಸರಿಯಾರನ್ನು ತಹೆನಾವನಿತೆಯನು ಕುಹಕದಲಿ ನಳಭೂಪನನು ಕೆಡಿಸಿಯೆ ಕಾನನಕೆ ಕಳುಹುವೆನು ನೋಡೆಂದ
ಹರಿ ಹರ ಬ್ರಹ್ಮಾದಿ ದೇವರುನರರುರಗ ಸುರ ಯಕ್ಷ ಕಿನ್ನರಗರುಡ ಗಂಧರ್ವಾದಿ ಸುಮನಸರೆಲ್ಲರನು ಬಿಡದೆಹುರುಳಗೆಡಿಸುವೆ ಸಾಕು ನಳಭೂವರನ ಮಾತೇನಿನ್ನು ಲೋಕಾಂತರದೊಳೆದುರಿಲ್ಲೆನಗೆ ನೀವಂತರಿಯಿರೇ ಎಂದ
ನಿಮಗೆ ಪೌರುಷವಿಲ್ಲ ನಳನಾಕ್ರಮಿಸಿಕೊಂಡನು ಸತಿಯ ಪುರುಷಾಧಮರು ನಿಮಗಿನ್ನೇಕೆ ಕೊಡಿ ವಟುವೇಷವನು ನಮಗೆಕಮಲಮುಖಿಯನು ನಿಮಗೆ ಪಟ್ಟದರಮಣಿಯನು ಮಾಡುವೆನುಯೆಂದುದ್ಭ್ರಮಿಸಿ ನುಡಿದನು ಗರ್ವದಲಿ ಕಲಿಪರುಷ ಸುರಪತಿಗೆ
ಕೇಳಿ ಕಿವಿಮುಚ್ಚಿದರು ಹರಹರಭಾಳಲೋಚನಯೆನುತ ಸಭೆಯಲಿಖೂಳನಾಡಿದ ನುಡಿಗೆ ಸುರಪತಿ ಕನಲಿ ಖತಿಗೊಂಡುಬೀಳು ಮಾತುಗಳೇಕೆ ನಿನಗಿದುನೀಳಮೇಘಶ್ಯಾಮನಿಗೆ ಸಮಪಾಳಿಯೆನಿಸುವ ನಳನೃಪಗೆ ಎರಡೆಣಿಸುವುದೆಯೆಂದ
ಬವಣೆಯೇಕೆ ಹಿಮಾಂಶುಕುಲಸಂಭವನು ಸುಜನಾಧಾರ ನೃಪಕುಲನಿವಹದೊಳು ವಿಖ್ಯಾತ ನಿತ್ಯೋದಾರ ನಿರ್ಮಳನುಇವಗೆ ವರವಿತ್ತೆವು ಸದಾ ನೆನೆದವರ ಪಾತಕ ಹರಿವುದಿನ್ನಾಭುವನಪತಿಗೆಣೆಯಾರು ಲೋಕದೊಳೆಂದನಮರೇಂದ್ರ
ಹಿಡಿಯೆ ಛಲವನು ಹಿಡಿದ ಬಳಿಕದಬಿಡೆನು ಮತವೆನ್ನಲ್ಲಿ ನಿಷಧನನಡವಿಗಟ್ಟದೆ ಮಾಣೆ ಮಾತಾಡದಿರಿ ನೀವೆನಲುಮಿಡುಕಿದರು ಕಡುಪಾಪಿಯಿವ ತಾಬಿಡನೆನುತ ಮನನೊಂದು ಸುರಪತಿತಡೆಯದೈದಿದನಮರಪುರಕವನೀಶ ಕೇಳೆಂದ
ಇಳಿದನವನೀತಳಕೆ ಖಳಕುಳತಿಳಕನೆಂದನು ತನ್ನ ಭಟರಿಗೆನಲನೃಪನ ಕಟ್ಟುವಡಸಾಧ್ಯವಿದೆನಗೆಯಾತನಲಿಒಲಿದಿಹಳು ಜಯವಧು ಸುಶೀಲತೆನೆಲಸಿದುದು ದುಶ್ಶೀಲ ದುರ್ಗುಣಬಳಸದರಸನೆನುತ್ತ ಹೊಕ್ಕನು ನಿಷಧಪಟ್ಟಣವ
ಮಲ್ಲಿಗೆಯ ವನ ಸಂಪಿಗೆಯ ಬನವೆಲ್ಲ ಕೇತಕಿಕುಸುಮಮಯ ಮೆಳೆಯೆಲ್ಲ ರುದ್ರಾಕ್ಷಿಗಳು ಸರಸೀರುಹದ ಕೊಳಗಳವುಬೆಲ್ಲವತ್ತಗಳಿಕ್ಷುದ್ರಾಕ್ಷಿಗಳೆಲ್ಲ ಖರ್ಜೂರಾದಿ ವಸ್ತುಗಳಲ್ಲದಿಲ್ಲ ವೃಥಾ ನೆಲನಿಲ್ಲ ನಳನ ರಾಜ್ಯದಲಿ
ಇಲ್ಲವೆನ್ನರು ಬೇಡಿದರೆ ಬಿಡರಲ್ಲಿ ಪಾಡಿನ ಪಂಥಗಳ ನುಡಿಯಿಲ್ಲವನೃತವನಾಡರಗ್ಗದ ಸತ್ಯನಿರ್ಮಳರುಎಲ್ಲರೊಳಗತಿಹಿತರು ಕ್ರೋಧಗಳಿಲ್ಲದಿಹ ಸದ್ಧರ್ಮಜೀವಿಗಳಲ್ಲಿ ಮೆರೆದರು ಸುಜನರಾ ನಳನೃಪನ ರಾಜ್ಯದಲಿ
ಪತಿಯೆಡೆಗೆ ವಂಚಿಸರು ಸತಿಯರುಸುತರು ಪಿತೃಗಳ ನುಡಿಗಳನು ತಾವತಿಗಳೆಯರಾಚಾರ ವರ್ಣಾಶ್ರಮದ ಧರ್ಮದಲಿಮತಿಯುತರು ಹರಿಭಕ್ತಿಭಾವವ್ರತನಿಯಮನಿಷ್ಠೆಯಲಿ ಜನಸಮ್ಮತದೊಳೊಸೆದೊಪ್ಪುವರು ನೈಷಧನೃಪನ ರಾಜ್ಯದಲಿ
ಅಲ್ಲಿ ತಿರುಗಿದ ಬೀದಿಬೀದಿಗಳಲ್ಲಿ ಪುರಜನವರಿಯದಂತಿರಲಲ್ಲಿ ಮಾಯಾರೂಪಿನಿಂದ ಪಿಶಾಚನಂದದಲಿಸಲ್ಲಲಿತರಹ ವಿಷ್ಣುಭಕ್ತರಿಗೆಲ್ಲ ನಯವಿದನಾಗಿ ಕುಜನರನೆಲ್ಲ ಕಾಡುತ ಬಂದನರಮನೆಗಾಗಿ ಕಲಿರಾಯ
ಮುರಿದು ನೋಡಿದನಲ್ಲಿ ತೆಂಗಿನಮರಗಳುನ್ನತ ವಿವಿಧವೃಕ್ಷದಹೊರಿಗೆಯಲಿ ಕಣ್ಗೆಸೆವ ನಗರೋದ್ಯಾನವೀದಿಯಲಿಉರುತರದೊಳಿಹ ಅರ್ಕಪತ್ರದತರುವಿನಗ್ರದೊಳಿರ್ದ ಬಹುದಿನವರಸ ಕೇಳ್ ಕಲಿಪುರುಷನಿತ್ತಲು ರಾಜಭವನದಲಿ
ಕರೆಸಿದನು ನಳನೃಪತಿ ಮುನಿಮುಖ್ಯರನು ಭೂಸುರವರ್ಗವನು ಸತ್ಕರಿಸಿ ಜಪತಪಹೋಮಯಜ್ಞಾದಿಗಳನನುಗೊಳಿಸಿಸುರರ ಸಂತರ್ಪಣೆಯೊಳಿರುತಿಹನರಸನನುದಿನ ಪೂರ್ವಜನ್ಮಾಂತರದ ಫಲವದನರಿಯೆ ಬಂದುದು ಕಾಲಗತಿ ನೃಪಗೆ
ಒಂದು ದಿವಸದೊಳಾಗ ನೃಪನಿಗೆಬಂದುದಲ್ಪಾಚಮನಕಾಲದೊಳಂದು ಶುದ್ಧಾಚಮನವಿಲ್ಲದೆ ನಿಂದು ನೀರ್ಗುಡಿಯೆಇಂದು ತನಗಿದೆ ಸಮಯವೆಂದಾನಂದದಲಿ ಕಲಿಪುರುಷ ರಾಯನಸಂಧಿಸಿದ ವಿಧಿವಶವ ತಪ್ಪಿಸಲಾರ ಹವಣೆಂದ
ಕಪಟಭೂಸುರವೇಷದಲಿ ನಿಷ್ಕಪಟ ನಳಭೂವರನ ಕೆಡಿಸುವಯುಪಮೆಯನು ತಾ ನೆಗಳಿ ಬಂದನು ಪುಷ್ಕರನ ಹೊರಗೆನಿಪುಣನೆಂದನು ನಿನಗೆ ನಳಭೂಮಿಪನು ಸಖನೆನೆ ಕೇಳಿ ಬಂದಿಹೆನಪಯಶಕೆ ಹೆದರದಿರು ನಿನಗಹುದಖಿಳಸಾಮ್ರಾಜ್ಯ
ಬಲ್ಲೆಯಾ ನೀನೆನ್ನ ಲೋಕಕೆಬಲ್ಲಿದನು ತಾ ಕಲಿಪುರುಷ ನಳನಲ್ಲಿ ದ್ಯೂತವನಾಡಿ ಗೆಲಿಸುವೆ ನಿನ್ನ ನೆತ್ತದಲಿಒಲ್ಲೆನೆನದಿರು ಸಕಲರಾಜ್ಯದವಲ್ಲಭನ ಮಾಡುವೆನು ನಡೆ ಹುಸಿಯಿಲ್ಲ ನಿಷಧನ ಕಿತ್ತು ಬಿಸುಡುವೆ ನಂಬು ನೀನೆಂದ
ನಂಬಿದನು ಲೇಸಾಗಿ ಭಾಷೆಯನಿಂಬುಗೊಂಡುದು ಹೃದಯ ಪುಷ್ಕರನೆಂಬ ಖಳ ಸಂತೋಷದಲಿ ಕಲಿಪುರುಷನೊಡಗೊಂಡುಅಂಬುಜಾಕ್ಷನ ಕಳೆಗೆ ತಾ ಪ್ರತಿಬಿಂಬನೆನಿಸುವ ನರನ ಬಳಿಗತಿಸಂಭ್ರಮದೊಳೈತಂದರಿಬ್ಬರು ರಾಯನೋಲಗಕೆ
ಮಿಸುನಿ ರತ್ನಪ್ರಭೆಗಳಲಿ ರಂಜಿಸುವ ಮಂಟಪದೊಳಗೆ ರಾಜಪ್ರಸರಸಹಿತವನೀಶನಿದ್ದನು ಸಿಂಹಪೀಠದಲಿಶಶಿಮುಖಿಯರೆಡಬಲದಿ ಕೈವಾರಿಸುತ ಸಿತಚಾಮರವ ಚಿಮ್ಮಲುನಸುನಗುತ ಕೈ ಮುಗಿದು ಪುಷ್ಕರನೆಂದನಾ ನಳಗೆ
ಅರಸ ಕೇಳೀ ವಿಪ್ರನತಿ ಭಾಸುರ ಸುತೇಜದೊಳೆಸೆವ ನೆತ್ತವನೆರಡ ಕಾಣಿಕೆಗೊಟ್ಟ ನನಗಿದರಲ್ಲಿ ಮನವಾಯ್ತುಹರವು ಹಾಸಂಗಿಗಳನಾಡುವೆವಿರದೆ ಸೋತವನಾವನಾಗಲಿಧರೆಯನುಳಿದು ವನಾಂತರಕೆ ತೆರಳುವುದು ಸತಿಸಹಿತ
ಧರಣಿಪತಿ ನಿನಗಿನಿತು ಚಿತ್ತಕೆಹರುಷವಾಗಿರಲಿನ್ನು ಮನದಲಿಕೊರತೆದೋರಲು ಮಾಣುಯಿದು ಪಾರ್ಥಿವರ ಪಂಥ ಕಣಧುರಕೆ ಬೇಂಟೆಗೆ ಜೂಜಿಗೆಂದಡೆಕರೆದಡೋಸರಿಸುವುದು ನೀತಿಯೆನಿರುತವಿದು ಚಿತ್ತೈಸುಯೆಂದನು ನೃಪಗೆ ಕೈಮುಗಿದು
ಮೇದಿನೀಪತಿ ಕೇಳು ಸಜ್ಜನಸಾಧು ಬಲ್ಲನೆ ನಳನು ಹೃದಯವನಾ ದುರಾತ್ಮನ ನುಡಿಯ ಕೈಕೊಂಡಾಡಿದನು ನೃಪತಿಭೇದದಲಿ ಕಲಿಪುರುಷ ಮಾಯೋಪಾಧಿಯಲಿ ಪುಷ್ಕರನ ಜೂಜಿನವಾದದಿಂದರೆಗಳಿಗೆಯಲಿ ಗೆಲಿಸಿದನು ವಸ್ತುಗಳ
ದುಗನು ಪಂಚಗ ಬಾರವೆರಡಿತ್ತಿಗೆಯ ಬೇಡಿದಡಲ್ಲಿ ಬೀಳ್ವುದುವಿಗಡ ಪುಷ್ಕರನೃಪನು ಗೆಲಿದನು ಹಲಗೆಯೊಂದರಲಿಬಗೆಬಗೆಯ ರತ್ನಗಳ ಧನಧಾನ್ಯಗಳ ಗಜರಥತುರಗ ಮೊದಲಾದಗಣಿತ ಸುವಸ್ತುಗಳ ಸೋತನು ನೃಪತಿ ಪುಷ್ಕರಗೆ
ಆಡಿದನು ಜೂಜಿನಲಿ ನೃಪ ಹೋಗಾಡಿದನು ರಾಜ್ಯವನು ಕೋಶವಕೇಡುಗರ ಕೈ ಮೇಳವಿಸಿದುದು ದೈವಗತಿಯಿಂದಬಾಡಿತರಸನ ವದನ ಸಭೆಯಲಿನೋಡಿದರು ಸಜ್ಜನರು ಮರುಗಿದರಾಡಲೇನದನರಸ ಸೋತನು ವಿಧಿಯ ಘಟನೆಯಲಿ
ತೀರಿತಿನ್ನೇನವನಿಪತಿ ಭಂಡಾರವಸ್ತು ಸುವಸ್ತುವೆಲ್ಲವುಸೇರಿತೆನಗಿಂದಿನಲಿ ಪಣವೇನಿನ್ನು ಪೇಳೆನಲುಭೂರಮಣ ಚಿಂತಿಸಿದ ಮನದಲಿನಾರಿಯಳನೊಡ್ಡುವೆನು ಸೋತಿಹಧಾರಿಣಿಯ ನೆರೆ ಗೆಲುವೆನೆನ್ನುತ ತನ್ನ ಮನದೊಳಗೆ
ಅರಸನಾಪ್ತಪುರೋಹಿತನು ಮನಹರುಷವಿಳಿದೆಯ್ತಂದನಂತಃಪುರವ ಹೊಕ್ಕನು ರಾಜವದನೆಯ ಸಭೆಗೆ ತಾ ಬಂದುತರುಣಿಯರ ಮೇಳದಲಿ ಶೋಭಿಪಪರಮರತ್ನದ ಪೀಠದಲಿ ತಾಹರುಷಮಿಗೆ ರಂಜಿಸುವ ಸತಿಯಳ ಕಂಡು ಕೈ ಮುಗಿದು
ತಾಯೆ ಬಿನ್ನಹವಿಂದು ನಿಮ್ಮಯರಾಯ ಸೋತನು ಜೂಜಿನಲಿ ನಿರ್ದಾಯದಲಿ ಪುಷ್ಕರನು ಗೆಲಿದನು ಸಕಲರಾಜ್ಯವನುನೋಯಲಾಗದು ಚಿತ್ತದಲಿ ನೆರೆಬೀಯವಾದುದು ಸಿರಿಯುಯಿನ್ನಿದರಾಯತವ ನೀವ್ ಬಲ್ಲಿರೆಂದನು ವಿಪ್ರ ಕೈಮುಗಿದು
ಕಮಲವನದಲಿ ಮಂಜು ಸುರಿದಾಕ್ರಮದ ಬಗೆಯಲಿ ಸತಿಯಳಿಗೆ ಮುಖಕಮಲ ಬಾಡಿತು ನುಡಿಯ ಕೇಳುತ ಮನದ ಚಿಂತೆಯಲಿಕಮಲನಾಭನ ಕರುಣಕವಚವುಸಮೆದರಾರೇಗುವರು ಹರಹರಕುಮತಿ ಪುಷ್ಕರನಿಂತು ಮುನಿದನೆಯೆನುತ ಮರುಗಿದಳು
ಕಮಲಮುಖಿ ನಳನೃಪಗೆ ರಾಜ್ಯಭ್ರಮಣವಾಯಿತೆಯೆನುತ ಸತಿ ಭೂರಮಣನೆಡೆಗೈತದು ಕಡಳು ಕಾಂತನಿಂಗಿತವತಮದ ರಾಹುಗ್ರಹವು ಸೋಂಕಿದದ್ಯುಮಣಿಯಂತಿರೆ ಕಂಡು ಧೈರ್ಯದಿಕಮಲಮುಖಿ ಕೈಮುಗಿದು ಬಿನ್ನೈಸಿದಳು ನಿಜಪತಿಗೆ
ಶಶಿಕುಲಾಂಬುಧಿಚಂದ್ರ ರಿಪುನೃಪನಿಶಿತ ಭಾಸ್ಕರತೇಜ ನಿಮಗೀವ್ಯಸನ ತೋರಿತೆ ಜೂಜಿನಲಿ ಶಿವಶಿವ ಮಹಾದೇವಬಿಸರುಹಾಕ್ಷನ ಕರುಣವಿದು ಸೋಲಿಸಿದನೇ ಪುಷ್ಕರನುಯಿದು ವಿಧಿವಶವಲಾ ತಪ್ಪೇನು ಸಾಕಿನ್ನೆದಳಿಂದುಮುಖಿ
ಲಲನೆಯಾಡಿದ ನುಡಿಗೆ ಸಭೆಯವರಳಲಿ ಬೈದರು ಪುಷ್ಕರನ ಕೇಳೆಲವೊ ಬಾಹಿರ ಸಾಕು ತೆಗೆ ಚಾರಿಗಳನೆಂದೆನುತೆಹೊಲಬುದಪ್ಪಿದ ಹುಲ್ಲೆ ಬೇಡನಬಲೆಗೆ ಬಿದ್ದಂತಾಗೆ ನಳನೃಪತಿಲಕನೆಂದನು ಮನದ ದುಗುಡದಿ ತನ್ನ ನಿಜಸತಿಗೆ
ತರುಣಿ ಕೇಳಪಜಯದ ನಾರಿಯಸೆರಗ ಹಿಡಿದೆನು ರಾಜ್ಯಲಕ್ಷ್ಮಿಯಪರರಿಗಿತ್ತುಳುಹಿದೆನು ದೇಹವನಿದಕೆಯಂಜದಿರುತರುಣಿ ನೀ ಕಾನನದಿ ಗಿರಿಗಹ್ವರಗಳಲಿ ಬಿಡದೆಂತು ತೊಳಲುವೆಹರಹರಾಯೆಂದೆನುತ ಸತಿಯನು ನೋಡಿ ಬಿಸುಸುಯ್ದ
ಚಿತ್ತವಿಸು ಶಶಿಕುಲಶಿರೋಮಣಿಹೆತ್ತವರು ಸತಿಸುತರು ಮನೆ ಮನೆವಾರ್ತೆ ಬಾಂಧವ ಧರಣಿಪರ ಭೋಗೈಕಸಂಪದವುನಿತ್ಯವಲ್ಲ ಶರೀರಸುಖಗಳನಿತ್ಯವೆಂಬುದ ತಿಳಿಯುತೀ ನಿಜಸತ್ಯವನು ಕೈಹಿಡಿದು ಸಲಹೆಂದಳು ಸರೋಜಮುಖಿ
ಚಿಂತೆ ಬೇಡೆಂದರಸನನು ಸತಿಸಂತವಿಟ್ಟಳು ನೀತಿಯಲಿ ದಮಯಂತಿ ನಿಜಮಂದಿರಕೆ ಸರಿಯಲು ಕಂಡು ಪುಷ್ಕರನುಇಂತು ಜೂಜಲಿ ಸೋತು ತಿರಿಗಿನ್ನೆಂತು ರಾಜ್ಯದಿ ನಿಲುವಿರೆನೆ ಭೂಕಾಂತ ವನವಾಸಕ್ಕೆ ನಿಜಸತಿಸಹಿತಲನುವಾದ
ತಳಿತ ಮಣಿಭೂಷಣಗಳೆಲ್ಲವಕಳಚಿ ಬಿಸುಟನು ಗುರುವಿನಂಘ್ರಿಗೆನಳಿನಮುಖಿಸಹಿತೆರಗಿ ಹೊರವಂಟನು ನಿಜಾಲಯವಬಳಿಕಲೈದಿದರಖಿಳಪುರಜನಜಲದ ಕಣ್ಗಳ ಧಾರೆಯಲಿ ಗಾವಳಿ ಮಸಗಿ ಮಿಗೆ ಶೋಕರವ ತುಂಬಿದುದು ಪಟ್ಟಣವ
ಸಾಲುಕಂಬನಿಗಳಲಿ ನೆನೆದರುಊಳಿಗದ ಪರಿಜನರು ಮಂತ್ರಿಗಳೋಲಗದ ಸಾಮಂತಸಚಿವರು ಮಲ್ಲಗಾಯಕರುಬಾಲೆಯರು ಬಾಲಕರು ಪುರಜನಜಾಲವೆಲ್ಲವು ಶೋಕದಲಿ ಕ್ಷಿತಿಪಾಲನರಸಿಯ ಕಂಡು ಮರುಗಿತು ಮಂದಿ ಗೋಳಿಡುತ
ಮನದಿ ಮುನ್ನವೆ ತಿಳಿದು ನೃಪಸತಿತನಯರನು ರಥದೊಳಗೆ ತಂದೆಯಮನೆಗೆ ಕಳುಹಿದಳಾಪ್ತರೊಡನೆ ವಿದರ್ಭಪಟ್ಟಣಕೆಜನಪ ಕೇಳಿತ್ತಲು ಮಹಾರೋದನದಿ ಪಟ್ಟಣವೆಲ್ಲ ಮರುಗಲುವನಿತೆ ಪತಿಯೊಡನೈದಿದಳು ನಿಜಭಾವಶುದ್ಧಿಯಲಿ
ಏನನೆಂಬೆನು ಜೀಯ ಲೋಕದಮಾನಿನಿಯೆ ದಮಯಂತಿ ಸತ್ಯಜ್ಞಾನಿಯಲ್ಲಾ ಸತಿಯರಿಗೆ ಗುರು ಪತಿವ್ರತಾಗುಣದಿಮೌನದಲಿ ಪತಿಯಂಘ್ರಿಕಮಲಧ್ಯಾನದಲಿ ಮನಸಂದು ಘನಸತಿಕಾನನಕೆ ಗಮನಿಸಿದಳು ವರಪುರದರಸನಾಜ್ಞೆಯಲಿ


