X
ಖಗೇಂದ್ರಮಣಿದರ್ಪಣ
ಮಂಡಲಸರ್ಪ ಪ್ರಕರಣಂ
ಪುರುತೀರ್ಥಂಕರನಿಂದಮೀ ಧರೆಯೊಳಿಂತುಕ್ತಂಗಳಾಗಿರ್ದುವಂಗರಳಗ್ರಾಹಿಗಳಪ್ಪ ಗೋನಸಕುಳಪ್ರತ್ಯೇಕನಾಮಂಗಳಂತರದಿಂ ಮಂಡಲವರ್ಣಭೇದಮನಿತಂ ದಷ್ಟಾಂಗಚಿಹ್ನಂಗಳಿರ್ಪಿರವಂ ತತ್ಪರಿಹಾರಮಂ ತಿಳಿಪುವೆಂ ಕರ್ಣಾಟದೇಶೀಯದಿಂ
ಕ್ಷಿತಿಯೊಳ್ ಕ್ರೀಡಾರೂಪೋನ್ನತ ವಿಷ ಸೌವರ್ಣಕರ್ದಮಂ ಪೆಸರಿಂದಪ್ರತಿಮಾಗ್ನಿಮಾಲಿಕಂ ತಾಂಮತಿಗಿಡಿಸುವ ವಜ್ರ ವಕ್ರಮಾಲಿಗಳಕ್ಕುಂ
ಬಾಧಕ ವೇಣೀಕಂಠಂಗೋಧಾಸ್ಯಂ ಘೋಟಕಾಸ್ಯ ಶಕಟಾಜಮುಖಂಸಾಧಿತ ಮಹೋಗ್ರವಿಷಮೆನಲೀ ಧರೆಯೊಳ್ ನೆಗೞ್ದುವಲ್ತೆ ಮಾರ್ಜಾರಮುಖಂ
ವಚ್ಛಾಸ್ಯ ಮೇಷಮುಖನುಮತುಚ್ಛವಿಷಂ ಕುಕ್ಕುಟಾಸ್ಯ ಸಂದಷ್ಟಂಗಳ್ಸ್ವಚ್ಛಂದ ವೃತ್ತಿಗಳ್ ಕೊಲಲಿಚ್ಛೈಸುವ ವಜ್ರತುಂಡದಂತುರ ಮಿಶ್ರಂ
ಇಂತೀ ಗೋನಸಭೇದದೊಳಂ ತಾವೇಕೋನವಿಂಶತಿ ಪ್ರಥಿತಕುಲಂಸಂತತಮಿನ್ನಱಿವರ್ಗಂತಾಂ ತಿಳಿಪುವೆನೊಸೆದು ಪೇೞ್ದ ವರ್ಣಾದಿಗಳಂ
1. ಕ್ರೀಡಾಸ್ವರೂಪಂ
ಶಸ್ತಮೆನಿಸರ್ಪ ಮಂಡಲವಿಸ್ತರತಾವೃತ ಸುಪೀತಜಾತಂ ತನುವಿತ್ರಸ್ತಂ ಕ್ರೀಡಾರೂಪಂವ್ಯಸ್ತಸ್ಥೂಲಂ ಮಹೋಗ್ರವಿಷಮೆನಿಸಿರ್ಕುಂ
ಜ್ವರಪೀಡಾದಿಗಳಕ್ಕುಂಪರಿಗುಂ ತದ್ದಂಶದತ್ತಣಿಂ ಶೋಣಿತಮುಂಪಿರಿದಂ ಮೆಯ್ಮಱೆದಿರ್ಕುಂನಿರುತಂ ಕ್ರೀಡಾಸ್ವರೂಪನವಿತಥಚಿಹ್ನಂ
ಗಜಹಿಪ್ಪಲಿ ಮದನಫಲಂದ್ವಿಜಭೂರುಹಬೀಜ ಮಧು ಘೃತಾನ್ವಿತಮುಂ ತದ್ವಿಜಯಿಯಿದೆ ಪಾನ ಲೇಪದೆಸುಜನೋತ್ತಮನೆನಿಪ ಮಂಗರಾಜನ ಮತದಿಂ
ವ. ಸರ್ವ ಗೋನಸ ವಿಷಾಪಹಾರಮಂತ್ರಂ.
ಮಂತ್ರಂ. ಓಂ ನಮೋ ಭಗವತೇ ತತ್ವಗರುಡಾಯ ಹರ=ವಜ್ರಮುಷ್ಟಿ ಜಯಂ (ಯಾ)
ವಾ (ಮಾ)ನಸೀ (ಸೇ) ಸ್ವಾಹಾ
ವ. ಈ ಮಂತ್ರದಿಂ ಕ್ರೀಡಾ ಸ್ವರ್ಣಾಭ ವೇಣೀಕಂಠ ಘೋಟಕ ಶಕಟಾಜಾಮುಖಪ್ರಮುಖ
ವೆಂಬ ಗೋನಸ ವಿಶೇಷ ವಿಷಾಪಹಮಕ್ಕುಂ
2. ಸೌವರ್ಣಕಂ
ಅತಿರಕ್ತ ಮಂಡಳಂ ಪೀತತರಾಕೃತಿಯಿಂದೆ ವೇಷ್ಟಿಸಿರ್ಕುಂ ಸುತ್ತಂಮತಮಿದು ಸೌವರ್ಣಕನೆಂಬತಿಶಯನಾಮಂ ಸುದೀರ್ಘ ಪುಚ್ಛಾನಚ್ಛಂ
ನಾನಾಸ್ಯ ರೋಮಕೂಪದಿನಾ ನೆಗೞ್ದಾ ಕ್ಷತದ ದೆಸೆಯಿನೊಸರ್ಗುಂ ರುಧಿರಂತಾನೆ ಸುವರ್ಣಾಭಂ ಕೊಳಲಾ ನರನೆಸೆವಂಗಚಿಹ್ನಮೆಂಬರ್ ಮುನಿಗಳ್
ಕಣ ಮಧು ಸಿಂಧುವಾರ ತಗರಂ ಹಯಮಾರ ಮಹೀರುಹಂ ಲಸದ್ಗುಣಿ ಮಳಯೋದ್ಭವಂ ಮೆಱೆವುಶೀರ ಸಬಿಲ್ವಘೃತಂಗಳೆಂಬಿವಂಕ್ಷಣದೊಳೆ ಪಾನಲೇಪನದಿನಿತ್ತೊಡಮಾಗಳೆ ತದ್ವಿಷಾಪಹಂಗುಣಗಣ ಪಕ್ಷಪಾತನೆನಿಸಿರ್ಪ ದಯಾನಿಧಿ ಮಂಗನುಕ್ತಿಯಿಂ
ಮಂತ್ರ್ರಂ. ಓಂ ನಮೋ ಭಗವತೇ ಆದಿತ್ಯಾಯ ಸಾಂ ಸುಂ ಸಃ, ಓಂ ನಮೋ ಭಗವತೇ
ನಾಗೇಂದ್ರ ವೇತಾಳಿ ಹತಂ ವಿಷಂ ವಜ್ರಯೋಗೇನ ಬಲಂ ಸ್ವಾಹಾ
3. ಕರ್ದಮಂ
ಬಿಳಿದೆನಿಸಿರ್ಪ ಮಂಡಲದ ಸುತ್ತುವರಂ ಕರಿದಪ್ಪ ಮಂಡಲಂಗಳಿನೆಸೆದಿರ್ಪ ಗೋನಸಮೆ ಕರ್ದಮಮೆಂಬಭಿಧಾನಮಪ್ಪುದಾತೊಳಗುವ ದೀರ್ಘದೇಹದೊಳೆ ಶೋಭಿಸುಗುಂ ಪಟುವೇಗನಾ ವಿಶೃಂಖಳನುದಿತ ಪ್ರಕೋಪದೊಳೆ ಕೊಂಡೊಡೆ ಚಿಹ್ನಮನೊಲ್ದು ಪೇೞ್ದಪೆಂ
ವ್ರಣಮೊಸರ್ಗುಂ ಮಹಾಜ್ವರಮದಗ್ಗಲಿಕುಂ ತನು ತೋರಮಕ್ಕುಮುಲ್ಬಣತರ ಶೂಲೆಯಿಂ ವಮನದಿಂ ತೃಷೆಯಿಂ ಕರ ಮುಚ್ಚುಗಂಗಳಿಂಕ್ಷಣದೊಳೆ ತೋರ್ಕುಮಂತದಱ ನಾಶನದೌಷಧಮೆಂತೆನಲ್ಕೆ ರೋಹಿಣಿ ಮದಯಂತಿಕಾರ್ಜುನ ನಿಶಾದ್ವಯ ನಾಗರ ನಾಗಕೇಸರಂ
ಮಧು ರುಜೆ ಮದನ ಸಮಾಗಧಮಧುಕಾಜ್ಯಂ ದೇವದಾರುವೆರಸಿದ ಪಾನಂವಿಧಿಯುತ ಲೇಪಂ ಮಾೞ್ಪುದುಸುಧೆಯೆಂಬುದು ಬೇಱಿದರ್ಕೆ ದೊರೆ ಪೆಱತುಂಟೇ
ಮಂತ್ರಂ. ಓಂ ನಮೋ ಭಗವತೇ ರುದ್ರಾಯ ಹನ – ಹರ-ಫಟ್-ಭೂಮ್ಯಾಂ (ದಿ)ಗಚ್ಛ
ಮಹಾವಿಷ ಸ್ವಾಹಾ
4. ಅಗ್ನಿಮಾಲಿಕಂ
ಅಂಕದೊಳತಸೀಪುಷ್ಪ ಸುಸಂಕಾಶದ ಮಂಡಲಂಗಳೊಪ್ಪುವ ತನುವಿಂದಂ ಕರಮೊಪ್ಪುಗುಮಿಳೆಯೊಳ್ಶಂಕೆಯೊಳೆನಗ್ನಿಮಾಲಿಕಾಹ್ವಯನೆನಿಕುಂ
ಕಷ್ಟತರ ಜ್ವರ ದಾಹೋತ್ಕೃಷ್ಟತ್ವಂ ಛರ್ದಿಯುಂ ಶಿರಃಪೀಡನಮುಂನಷ್ಟತನುಕಾಂತಿ ಯಿವು ತದ್ದಷ್ಟನ ಚಿಹ್ನಂಗಳೆಂದು ಪೇೞ್ವರ್ ಮುನಿಗಳ್
ತಗರಂ ದಂತಿ ಪುನರ್ನವಂ ಮಳಯಜಂ ಪಾಠಾಖ್ಯಮಂಕೋಲಮುಂನೆಗೞ್ದಿರ್ದಾ ಕಟು ಸೋಮರಾಜಿಕಣಮುಂ ಮಧ್ವಾಜ್ಯಮುಂ ಕೇಸರಂಬಗೆಗೊಂಡೊಪ್ಪಿರಲಿಂತಿವಂ ಬೆರಸಿ ಪೂಸಲ್ಕೀಂಟೆಯುಂ ತದ್ವಿಷಂವಿಗತಂ ಭಾವಿಪ್ಪೊಡಕ್ಕುಮೆಂದಱಿಪಿದಂ ಸಾಹಿತ್ಯವಿದ್ಯಾಧರಂ
ಮಂತ್ರಂ. ಓಂ ನಮೋ ಭಗವತೇ ಆದಿತ್ಯಾಯ ಕರವೀರೋದರ ಸೋಮಾಯ ಹರ
ವಿಷಂ ಮುಂಚ ಸರಶ್ಮಿ ಜ್ಞಾಪಯತಿ ಸ್ವಾಹಾ
5. ವಜ್ರಮಾರಿ (ಲಿ)
ಸಲೆ ವಜ್ರ ಸುವೈಡೂರ್ಯಾವಲಿ ಸಂಕಾಶಾಂಗಮಾಗಿ ಪೊಳೆಯುತ್ತಿರ್ಕುಂಖಲ ವಜ್ರಮಾಲಿಯೆಂಬುದುಬಲುಪಿಂದಂ ಪಿಡಿಯಲದಱ ವಿಷದುಗ್ರತೆಯುಂ
ಭಾವಿಸೆ ತನ್ನ ಪೂರ್ವಕೃತ ಕರ್ಮಫಲೋದಯದಿಂದೆ ಶೋಣಿತಸ್ರಾವ ಮಹಾವ್ಯಥಾ ವಮನ ಮೂರ್ಛೆಗಳೆಂಬಿನಿತೆಯ್ದುಗುಂ ತೆರಳ್ಕಾ ವಿಷಮಂ ಸಮಂತ್ರಕ ಘೃತಂಗಳ ಧಾರೆಗಳಿಂದೆ ಕರ್ಚಿ ನೀಂಪಾವನಮಪ್ಪ ತಂತ್ರದೊಳೆ ವೃತ್ತಸುಮಂತ್ರಕನಾಗಿ ಬೇಗದಿಂ
ಮಂತ್ರಂ. ಓಂ ನಮೋ ಭಗವತೇ ಗರುಡಾಯ ಹನ-ವಜ್ರಮುಷ್ಟಿ ಪ್ರಹರಣಾಯ ನಮಃ
ಸಕ್ರಃ ವಾಸಃ ಮಿತಯ ಸ್ವಾಹಾ
6. ವಕ್ರಮಾಲಿ
ಪರಿಕಿಪೊಡರ್ಧಚಂದ್ರನವೊಲಿರ್ಪುವು ದಾಡೆಗಳಾವ ಗೋನಸೋತ್ಕರದೊಳೆ ನಿರ್ಗಂತಂಗಳತಿ ದೀರ್ಘಮೆನಿಪ್ಪುವು ತಚ್ಛಿರಂ ಗಡೀಧರೆಯೊಳತೀವ ತುಂಗಮೆನೆ ತೋರ್ಪುದು ನಾಮದೆ ವಕ್ರಮಾಲಿ ತಾಂಪಿರಿದೆನಿಸಿರ್ದ ಪಾಪದ ಫಲೋದಯದಿಂ ನರನಂ ವಿರೋಧದಿಂ
ಪಿಡಿಯಲ್ಕೆ ದಷ್ಟದೇಹಿಗಳೊಡಲೆಲ್ಲಂ ಬಾವುದೊಡನೆ ಮಾಱನೆಯ ದಿನಂತಡೆದೊಡಮಲ್ಲಿಂ ಬೞಿಯಂಮಡಿಗುಂ ಮಂತ್ರೌಷಧಂಗಳೇಂ ಕಾದಪುವೇ
7. ವೇಣೀಕಂಠಂ
ಕಪಿಳ ಶ್ಯಾಮಳ ಧವಳಂಲಪಿತಂ ತದ್ವರ್ಣಮೆಸೆವ ಕಂಠಂ ಹ್ರಸ್ವಂಕುಪಿತಂ ವೇಣೀಕಂಠಂಕಪಟ ಮಹಾಕಾಯದರ್ಪಿತಂ ಗೋನಸದೊಳ್
ದಂಶದಿನೊಸರ್ಗುಂ ರುಧಿರಂಸಂಶಯಮೇಂ ಸ್ಫೋಟಕಂ ಹಿಮಂ ಜನಿಯಿಸೆ ತದ್ದಂಶದೊಳಿರದೇೞ್ ದಿವಸಕ್ಕಂ ಶೋಚ್ಯಂ ತಾನೆನಿಪ್ಪನದಱಿಂ ದಷ್ಟಂ
ಎತ್ತಾನುಂ ಜೀವಿಸುಗುಂಮತ್ತೆನಿಸುವ ಮಂತ್ರತಂತ್ರಮುಳ್ಳೊಡೆ ದಷ್ಟಂಸತ್ತಪನೆ ಸಾಯನದಱಿಂದುತ್ತಮ ಜಾಂಗುಳಿಕರೊಸೆದು ಮಾೞ್ಪುದು ಮರ್ದಂ
ಬೇಗದೊಳಂ ಶೋಧಿಸುವುದುನಾಗಾಂತಕನೆಸೆವ ಪಕ್ಷದಿಂದಂ ವ್ರಣಮಂಪೋಗಲ್ ತಾಟಿಪುದೆಸೆವ ಮಹಾ ಗರುಡಾಧಿಪನ ನೆನೆವುದೀವುದು ಮರ್ದಂ
ಮಂತ್ರಂ. ಓಂ ನಮೋ ಭಗವತೇ ರುದ್ರಾಯ ಕಪಾಲಹಸ್ತಾಯ ನಿರ್ವಿಷಂ ಕುರು ಸ್ವಾಹಾ
8. ಗೋಧಾಸ್ಯಂ
9. ಘೋಟಕಾಸ್ಯಂ
ಸ್ಥೂಲನತಿ ದೀರ್ಘನಾ ದುಃಶೀಲಂ ವಿಕಟಾಂಗಮಸ್ತಕಂ ಗೋಧಾಸ್ಯಂಪಾಲಿಸಲರಿದದು ಶಿಖಿಯುರಿಮಾಲೆಯವೋಲ್ ಘೋಂಟಕಾಖ್ಯನಕ್ಕುಂ ಮತ್ತಂ
10. ಶಕಟಂ (ಶಕಟಾಸ್ಯಂ)
ಶಕಟಂ ಶಕಟಾಕೃತಿಯಿಂಪ್ರಕಟಂ ಮಾಡುತ್ತುಮಿರ್ಕುಮದಱ ವಿಷಂ ಪಾವಕನಿಂದಂ ಮಿಗಿಲೆನಿಕುಂಸ್ವಕೀಯ ಮಂಡಲ ವಿನೀಲ ಲೋಹಿತಮಕ್ಕುಂ
ವಿಲಸನ್ನಾಗರಮುಂ ಪಟೋಲ ಕಪಿಕಚ್ಚೂ ಬ್ರಹ್ಮದತ್ತಾಖ್ಯ ಗುಗ್ಗುಲ ಸರ್ಪಿರ್ಮಧು ನಿಂಬಬೀಜಮಿನಿತಂ ಕೂಡಲ್ ಕದಂಬಾನ್ವಿತಂವಿಲಯಂ ತದ್ವಿಷಮಾಗೆ ಮಾೞ್ಕುಮಿಳೆಯೊಳ್ ಪಾನಪ್ರಲೇಪಂಗಳಿಂದಲಘುಪ್ರಾಜ್ಞರೊಳಗ್ರಗಣ್ಯನೆನಿಪೀ ಶ್ರೀಮಂಗನಿಷ್ಟೋಕ್ತಿಯಿಂ
ಮಂತ್ರಂ. -ಓಂ ನಮೋ ಭಗವತೇ ನೀಲಕಂಠಾಯ ಚಿರಿ ಪಕ್ಷಿಣಿ ಮುಂಚ ಸ್ವಾಹಾ ಠಂ
11. ಅಜಾಮುಖಂ
ನೆಲಸಲ್ಕಾ ಪಾಟಲಂ ಮಂಡಲಮೆನಲಿದು ಚಿತ್ರಂ ಕರಂ ಶೃಂಗಯುಗ್ಮಂವಿಲಸತ್ಕರ್ಣಂಗಳುಂ ತೋರ್ಪುದುಮದು ಪೆಸರಿಂ ತಾನಜಾಸ್ಯಂ ಗಡಂ ತತ್ಕುಲಜಂ ತಾನಾಗಿಯುಂ ಚಿತ್ರಿಕೆಯ ಬಸಿಱೊಳಂ ಪುಟ್ಟುಗುಂ ಮತ್ತಮಂತಾವಿಲಚಿತ್ತಂ ಕೊಂಡವಂಗಂ ಭ್ರಮೆ ರುಧಿರ ಮಹಾಶ್ವಾಸ ಕಾಸಂಗಳಕ್ಕುಂ
ಕಿಂಬಹುನೋತ್ಪಲ ರುಜೆ ತಗರಂ ಬೆರಸಾ ಬ್ರಹ್ಮದಂಡೆ ಮಧುದಂತಿ ಕಣಾನಿಂಬ ಕಟುಪಾನಮೆ ವಿಷಾಡಂಬರಮಂ ಕಿಡಿಸುಗುಂ ವಿಲೇಪನವಿಧಿಯಿಂ
ಮಂತ್ರಂ. ಓಂ ನಮೋ ಭಗವತೇ ರುದ್ರಾಯ ಏಹಿ ಭಗವತಿ ಕಪಾಲಮಾಲಾಧರಿ
ಕಹಾ ಕಪಾಲೆ ಹನ ಸ್ವಾಹಾ
12. ಮಾರ್ಜಾರಾಸ್ಯಂ
ಮಂದಮತಿಯಾಗಿ ಬೀೞ್ಗುಂದುಂದುಭಿ ಸಂಭೂತಮಪ್ಪ ಮಾರ್ಜಾರಾಸ್ಯಂಬಂದು ಪಿಡಿಯಲ್ಕೆ ಲಾಲಾಸಂದೋಹಂ ಛರ್ದಿ ಗಳವಿಭಂಗಮಿವಕ್ಕುಂ
ತ್ರಿಕಟುಕಮುಂ ಬಜೆಯುಂ ಚಿತ್ರಕ ನಿಶಿ ಮಂಜಿಷ್ಠೆ ಸಘೃತಮಪ್ಪಾಕ್ಷೌದ್ರಂಸಕಳಮಿವೊಂದಲ್ ಪಾನಪ್ರಕಟಿತ ಲೇಪನದೆ ನಿರ್ವಿಷಂ ಪರಮಾರ್ಥಂ
ಮಂತ್ರಂ. ಓಂ ನಮೋ ಭಗವತೇ ಶಬರರಾಜಾಯ ಛೇದಯ ವಿಷಂ ಜೀವಯ ಮಹಾ
ಶ (ಬ)ರ ಹೂಂ ಸ್ವಾಹಾ
13. ವತ್ಸಾಸ್ಯಂ
ಭವಮಾ ಸರಟೀ ಗರ್ಭೋದ್ಭವಮೇ ವತ್ಸಾಸ್ಯಮೆಂಬುದಕ್ಕಕ್ಕುಂ ಸಂಭವ ಚಿತ್ರಮಂಡಲಂ ಹ್ರಸ್ವ ವಿರೂಪಾತ್ಯಂತ ತೀವ್ರ ವಿಷಮೆನಿಸಿರ್ಕುಂ
ಎಲ್ಲಾ ಮಂತ್ರಂ. ಮರ್ದುಂಸಲ್ಲವಿದಕ್ಕಧಿಕಮಪ್ಪ ಪಾಪಿಗೆ ಬರ್ಕುಂಮೆಲ್ಲನೆ ಬಂದು ತಿನಲ್ಕಂಕೊಲ್ಲದೆ ಮಾಣದು ವಿಧಾತ್ರನಾದೊಡಮವನಂ
14. ಕುಕ್ಕುಟಾಸ್ಯಂ
15. ಸಂದಷ್ಟಂ
ಧರೆಯೊಳ್ ಕುಕ್ಕುಟತನುವುಬ್ಬರಿಸಿರ್ಕುಂ ವಕ್ರತುಂಡಕಂ ಸಂದಷ್ಟಂಪರಿಕಿಪೊಡಿಂತಿವಸಾಧ್ಯಂವರ ವಿದ್ಯಾಭೇಷಜಂಗಳಿರ್ದುಂ ಪಿರಿದುಂ
16. ಶಂಖಾಸ್ಯಂ 17. ದಂತುರಂ 18. ಮಿಶ್ರಿತಂ
[ಮೊದಲಿಗೆ 19. ವಿಧ ಎಂದು ಹೇಳಿದೆ. ಆದರೆ 18. ಮಾತ್ರ ಕಂಡುಬರುತ್ತವೆ.
ಮೇಷಮುಖದ ವಿಷಯವು ಯಾವ ಪ್ರತಿಗಳಲ್ಲಿಯೂ ಇಲ್ಲ.]
ಶಂಖಾಖ್ಯತುಂಡ ದಂತುರನೆಂಬೆರಡುಂ ತಮ್ಮ ನಾಮದೊಳ್ ಸಮರೂಪಂಕಿಂ ಬಹುನಾ ಮಿಶ್ರಿತನಾಡಂಬರಮೆಲ್ಲವಱ ರೂಪನನುಕರಿಸಿರ್ಕುಂ
ಅನುಪಮರಕ್ತಸ್ರವವೇದನೆಯಂ ನಾನಾ ವಿಕಾರ ಮೂರ್ಛೆಗಳಂ ದಷ್ಟನೊಳಾಗಿಸುಗುಂ ವಿಷವೇದನೆಯಂ ಪಿಂಗಿಪೊಡಿದೊಂದು ಮಂತ್ರಂ. ಸಾಲ್ಗುಂ
ವ. ಅದೆಂತೆಂದೊಡೆ
ಮಂತ್ರಂ. ಓಂ ಹ್ರೀಂ ಫಟ್ ಸ್ವಾಹಾ
ಕಪಟಪ್ರಪಂಚರಹಿತಂತ್ರಿಪಥದೊಳೆಸೆದಿರ್ಪ ಮಣ್ಣನೊಪ್ಪಿರೆ ಪೂಸಲ್ಜಪಿಸುಗುಮುಪದೇಶಮಂತ್ರಮನಪಗತ ವಿಷಮಂತೆ ಸಪ್ತ ರಾತ್ರಂಬರೆಗಂ
ಸಮಸ್ತ ಮಂಡಲಂಗಳ್ಗಂ ಔಷಧಂ
ನಾನಾ ಮಂಡಲ ವಿಷಮಂನಾನಾ ಭೇಷಜ ಸಮಂತ್ರಕಾಲೇಪನದಿಂಜಾನಿಸೆ ಪರಿಹರಿಕುಮದಂಸೂನೃತ ಸಾಮಾನ್ಯವೈದ್ಯಮಂ ಪ್ರಕಟಿಸುವೆಂ
ವರಮೆನಿಪ ದೇವದಾಳಿಯನಿರುಪಮಮೆನಿಸಿರ್ದ ಸೋಮರಾಜಿಯ ಬೀಜೋತ್ಕರಮಂ ತುಪ್ಪದೊಳಂ ಮಧುಬೆರಸಿರಲೀವುದು ಸಮಸ್ತ ವಿಷಹರಮಕ್ಕುಂ
ಅಂಜನಂ
ಪಾರದೆ ಪೆಱತಂ ತಾಳಕಪಾರದಮಂ ದೇವದಾಳಿಯೊಪ್ಪುವ ರಸದಿಂಚಾರಿಸಿ ಕಣ್ಣೊಳೆಸಲ್ ಸಂಹಾರಿಸುಗುಂ ಪಲವು ಮಂಡಲಂಗಳ ವಿಷಮಂ
ಇಂಗುಳದೊಳ್ಳಿದಪ್ಪ ಗುೞಮಂ ಪೊರೆದೆಕ್ಕೆಯ ಪಾಲ್ಮರಂಗಳಾಸಂಗತಮಪ್ಪ ದುಗ್ಧದೊಳೆ ಕೂಡಿಯದಂ ಪಲವಪ್ಪ ಬಳ್ಳಿ ಪುಲ್ಲುಂ ಗಿಡುವೆಂಬಿವೆಲ್ಲವಱ ಸೋನೆಯುತಂಗಳದಾಗಿ ಮಾಡಿ ಮತ್ತೇಂ ಗಡಮೊಳ್ಳಿತಪ್ಪ ಪೊಸತುಪ್ಪದ ಪಾಕದೊಳಟ್ಟು ಮತ್ತದಂ
ಬೆರಸದಱೊಳ್ ಜೇಪಾಳದತಿರುಳಂ ನರಮೂತ್ರದಿಂದೆ ಕಣ್ಣೊಳಮೆಚ್ಚಲ್ಪರಿಹರಿಕುಂ ಫಣಿಗೋನಸದರಿದೆನಿಪ ವಿಷಂಗಳೆಲ್ಲಮುಂ ಪಱಿಪಡುಗುಂ
ಪಾನ ಲೇಪ ಯೋಗಂ
ಮಡುವಾಗಲ್‌ತ್ರಿಕಟುಕಮಂತೊಡವೆರಸಲ್ಕರೆದು ಸಲಿಲದಿಂ ಲೇಪಿಸದಂಕುಡಿಸಲ್ಕೆ ನಸ್ಯಕರ್ಮಮನೊಡರಿಸೆ ಕಿಡುಗುಂ ಸಮಸ್ತ ಮಂಡಲವಿಷಮುಂ
ಬೆೞಲೆಸೆವೆಕ್ಕೆ ಲೊಕ್ಕಿ ನೆಲದಾೞ್ ಕಣ ಚಂದನ ಬಿಲ್ವ ಧಾತ್ರಿ ಹಿಟ್ಟುೞಿಕ ಸುಗಂಧಿ ಬಾವುಜಿಗೆ ದಾಡಿಮ ಮೊಲ್ಲೆ ಲವಂಗಮೋಚ ಕಂದೞ ಕುಟಜಪ್ರಸೂನ ಮಧುಕಂಗಳಿವೊಂದೆ ಸಮಾನಮಾಗಲಾಕಳ ಪೊಸಪಾಲೊಳಂ ಘೃತಮನೊಪ್ಪಿರೆ ಕೂಡುವುದಲ್ಲಿ ರಾಗದಿಂ
ಬೆರಸಿರೆ ಪುಳ್ಳುಂಬುಣಿಸೆಯುಮರೆದವಱೊಳ್ ತುಪ್ಪಮುೞಿಯಲಟ್ಟಿೞಿಪುಗೆ ಶರ್ಕರೆವೆರಸದಱರ್ಧದನಿತ್ತಿರಲದಱಿಂ ಪಾನ ನಸ್ಯ ಲೇಪನ ವಿಧಿಯಂ
ಮಾಡುವುದು ಬೞಿಕ್ಕದಱಿಂಸೂಡಿನೊಳತ್ಯಧಿಕ ಸರ್ಪಮಂಡಳವಿಷಮುಂನೀಡಿರದೞಿಗುಂ ಬಗೆಯಲ್ನಾಡಾಡಿಯ ಮರ್ದಿದರ್ಕೆ ದೊರೆಯೆನಿಸುಗುಮೇ
ಚಿರಮೆಸೆವ ಕಾಗೆದೊಂಡೆಯನರೆದಂಬಿಲದಿಂದಮೀಂಟೆ ಪೂಸಲ್ ನಸ್ಯಕ್ಕಿರದೀಯಲ್ ವಿಷದುಗ್ರತೆಯರಳೆಯನುರಿಗೊಂಡ ಮಾೞ್ಕೆಯಿಂ ಪಱಿಪಡುಗುಂ
ದಾಗುಡಿ ಮಡುವಾಗಲ್ ಗಿಣಿಮೂಗನ ಗೆಡ್ಡೆಗಳೊಳಾವುದಾದೊಡಮೊಂದಂಬೇಗದೊಳರೆದೀಯಲ್ ವಿಷಮಾಗಳೆ ಕಿಡುಗುಂ ಸುಪಾನ ಲೇಪನವಿಧಿಯಿಂ
ಮರಿಚಂ ಮಡುವಾಗಲ್ ನಾಗರ ಮಾಗಧಮೆಂಬಿವೆಲ್ಲಮಂ ಜಳಯುತದಿಂದರೆದೆಯ್ದೆ ಕುಡಿಸೆ ಪೂಸುತ್ತಿರೆ ನಸ್ಯಂಗೆಯ್ಯೆ ಮಂಡಲೋಗ್ರವಿಷಘ್ನಂ
ನಿರುಪಮಮಪ್ಪ ಧಾತ್ರಿ ಮಡುವಾಗಲು ತಂಡಸೆ ಕಾಗಿದೊಂಡೆ ಪೆರ್ಗುರುಟಿಗೆ ಮಾದಲಂ ಪುಲಿಗಿಲೊಪ್ಪುವ ಮಂಡಲಮಾರಿಯೆಂಬಿವಂಪರಿಕಿಸಿ ಕೂಡೆ ಕೊಂಡರೆದು ಲೇಪಿಸೆ ಪಾನದೊಳೀಯಲಾಕ್ಷಣಂಪರಿಗುಮಶೇಷ ಮಂಡಲವಿಷಂ ಕವಿತಾರಮಣೀಯನುಕ್ತಿಯಿಂ
ಸುಷಮಮೆನಿಪ್ಪುದಿದೊಂದೇವಿಷಮುಂಗುರಿಯೆಸೆವ ಲೇಪನಕ್ರಿಯೆಯಿಂ ನಿರ್ವಿಷಮಕ್ಕುಂ ದಷ್ಟನೊಳಂತುಷಮಂ ತೂಱಿದವೊಲಖಿಳ ಮಂಡಲದ ವಿಷಂ
ಖ್ಯಾತಿವಡೆದಿಂದ್ರವಾರುಣಿಮಾತೇಂ ಪೆಱತಣ್ಣ ಕಾಗೆದೊಂಡೆಯಿವಂ ನಿರ್ಭೀತಂ ಕೞಿಯಿಂ ಪೂಸಲ್ಜಾತ ಮಹಾಮಂಡಲೋಗ್ರತರ ವಿಷಮೞಿಗುಂ
ಅರೆವುದಜಮೂತ್ರದಿಂದಂಗುರುಪಂಚಾಂಗಮನೆ ಸಣ್ಣಮಾಗಲ್ ಪೂಸುತ್ತಿರೆ ಪಾನದೊಳೀಯಲ್ಕಂಪರೆಗುಂ ಗೋನಸವಿಶೇಷ ವಿಷಮ ವಿಷಂಗಳ್
ಹೆಮ್ಮೆರನ ತಿಗುಡು ಹಲಿನಿಯುತಮ್ಮಂಡಲಮಾರಿ ವಜ್ರಲತೆ ತಿಂತ್ರಿಣಿಯೊಳ್ಸಮ್ಯಕ್ಪರ್ಣಂಗಳುಮಂಗಮ್ಮನೆ ಕೞಿಯಿಂದೆ ಬೇದಗಟ್ಟೆ ವಿಷಘ್ನಂ
ಹುಲಿಗಿಲು ಹುಣಿಸೆಯ ಸೊಪ್ಪೊಂದೆಲಗಂ ಭೂತಾಂಶಿ ತರಣಿಯೆಂಬಿನಿತಱೊಳಂದಲಸದೆ ಬೆರಸಂಕೋಲೆಯನೊಲವಿಂದಂ ಬೇದುಗಟ್ಟಲಖಿಳ ವಿಷಘ್ನಂ
ವ್ರಣಧೌತಂ
ಬೆಚ್ಚನೆ ಮಾೞ್ಪುದೊಪ್ಪುವಜಮೂತ್ರಮನಂತದಱಿಂದೆ ತೊಯ್ದು ನೀಂಬಿಚ್ಚತಮೊಪ್ಪುವಂತಲಸದಿರ್ಪುದುಮಂ ಕೊೞೆದಿರ್ದ ಚರ್ಮಮಂಪೆರ್ಚಿದ ಪುಣ್ಗಳಂ ತೊಳೆದು ಕೊಯ್ದ ಬೞಿಕ್ಕೆ ಜಲಾಶಯಂಗಳೊಳ್ಪಚ್ಚನೆಯಪ್ಪ ನೀರ್ಗಡವುಮಂ ಕರಿಮಾಡಿಡೆ ತದ್ವಿಷಾಪಹಂ
ಪುಣ್ಣಿನ ಸುತ್ತೆವರಂ ತೊಡೆಯಣ್ಣನೆ ಮಗ್ಗಾರೆವೆರಸು ನೀರ್ಗಡವಮುಮಂಸಣ್ಣಿಗೆಯೊಳಿಟ್ಟು ಭರದಿಂನುಣ್ಣನೆಯರೆದಮಳಚರಿತನನುಮತದಿಂದಂ
ಘೃತಕಜ್ಜಳಂ
ವಿಮಳಮೆನಿಪಿಂದ್ರವಾರುಣಿಯ ಮೂಲಮಂ ಘೃತದೊಳಟ್ಟು ಪೂಸುಗೆ ಬೞಿಯಂಕ್ರಮದಿಂ ನಾಯ್ವೇೞನ ಕರಿಯುಮರ್ವಿನೆಗಂ ತಳಿಯೆ ವಿಷದ ಪುಣ್ಗಳ್ ಕಿಡುಗುಂ
ರಕ್ತಮಂಡಲಕ್ಕೆ
ಎಕ್ಕೆಯ ಹಿಡುಹಿಡುಕೆಯುಮಂತೆಕ್ಕನೆ ತೀವಿರ್ದ ಕೞಿಯೊಳರೆದಿಡು ಪುಣ್ಣೊಳ್ನಿಕ್ಕುವಮರುಣಾಭನ ವಿಷಮಿರ್ಕುಮೆ ಪೇೞ್ ತನ್ಮುಹೂರ್ತಮವಿತಥವಚನಾ
ತೂರ್ಯನಾದವೆಂಬ ಪಾವಿನ ವಿಷಕ್ಕೆ
ಏನಯ್ಯ ಘೃತದೊಳರುಣ ಕೃಶಾನುವನೊಡವೆರಸಿ ಪೂಸೆ ಕಳ್ಳಿಯಪಾಲಿಂದೇನಸ್ಸ್ವರೂಪಮಹ ವಿಷಮೇನೞಿಯದೆ ತೂರ್ಯನಾದಜನಿತಂ ಕ್ಷಣದೊಳ್
ಬಿಲ್ಲುರಿಗನ ವಿಷಕ್ಕೆ
ಬಿಲ್ಲುರಿಗಂ ಕೊಂಡೊಡೆ ತಡವಿಲ್ಲದೆ ತೊಡೆ ಕಡವು ನೀಲಿ ನುಗ್ಗೆಯ ಬೇರಂತಲ್ಲಣಿಸದೆ ಮೊಲೆವಾಲಿಂದಲ್ಲದೊಡಂಬಿಲದೆ ಪೂಸೆ ನಿರ್ವಿಷಮಕ್ಕುಂ
ವರಮಿಟುಣಿ ಸುಗಂಧಿಗಳೆಂಬೆರಡಱ ಬೇರ್ಗಳನೆ ಚೂರ್ಣಿಸದಱೊಲ್ ತುಪ್ಪಂಬೆರಸಿರದೆ ಕುಡಿಸಲದು ಬಿಲ್ಲುರಿಗನ ವಿಷಮಂ ಕ್ಷಣಾರ್ಧದೊಳ್ ಪರಿಹರಿಕುಂ
ತೂರ್ಯನ ವಿಷಕ್ಕೆ
ಚೆಕ್ಕನೆ ಬಿಲ್ವಂ ಲೊಕ್ಕಿಯತ್ವಕ್ಕೊಂದಿರೆ ಕುಡಿಸು ಬದಣೆಯೆಲೆಗಳ ರಸಮಂತಕ್ಕನಿತಂ ಕೊಳ್ ಪೂಸಲ್ಕುಕ್ಕಲಿಕುಂ ತೂರ್ಯನುಗ್ರವಿಷಮಾಕ್ಷಣದೊಳ್
ಸೇರಿಪುದೀಶ್ವರಿಯಂ ಗೋಕ್ಷೀರದೊಳರೆದಂದು ಕುಡಿಸಲಾಕ್ಷಣದಿಂ ದುರ್ವಾರಮೆನಿಸಿರ್ದ ತೂರ್ಯನಘೋರವಿಷಂ ಕಿಡುಗುಮಿಂತಿದಿಳೆಯೊಳಮೋಘಂ
ಸಾರತರಮೆನಿಸಿ ಮೆಱೆವೀನೀರಸನಿಯನೊಪ್ಪಿಕೊಂಡು ಕೞಿಯಿಂದೀಂಟಲ್ಭೋರನೆ ತೂರ್ಯನ ವಿಷದ ನಿವಾರಣಮಕ್ಕುಂ ಸಮಸ್ತ ಗುಣಗಣನಿಳಯಾ
ಅರಿಸಿನಮಂ ಪಿಪ್ಪಲಿಯಂಮರಿಚಮನೊಡವೆರಸಿಕೊಂಡು ರವಿದುಗ್ಧದೆ ಬಿತ್ತರದಿಂ ಬಾರಿಸಿ ಪೂಸಲ್ಕಿರದೞಿಗುಂ ತೂರ್ಯನುಗ್ರವಿಷಮಾಕ್ಷಣದೊಳ್
ಪೞನೀರಿಂದುಂ ಮರ್ದಿಸಿಚಳೆಯದೊಳಂ ಪೂಸೆ ಕಿಱಿಯ ಕುಟಜದ ಬಿತ್ತಂಕೊೞೆವಾವಿನ ತೂರ್ಯನ ವಿಷಮೞಿಗುಂ ಗೋರಟೆಯ ಮೂಲಮಂ ಪೂಸಲೊಡಂ
ನವಿಲಕೊಟ್ಟು ಕರಂಜ ಪುಷ್ಪಫಲಂ ಘೃತಂ ಮಧು ಬೇವು ಸಾಸಿವೆಗಳೆಂಬಿವನಕ್ಕೆ ನೆಯ್ ಬಜೆ ಬಂಜೆವಾಗಲಮೂಲಮೆಂಬಿವನೆತಂಗೆ ತ್ರಿಶೂಲಿಯೆಂಬುದನಕ್ಕೆ ಸಂಭವಿಸಿರ್ದುದಂಕವಳಮಂ ಕುಡೆ ಪಿಂಗುಗುಂ ಕೊೞೆವಾವು ಕೊಂಡ ಮಹಾವಿಷಂ
ಪೞವದಣೆಯ ಮೂಲಮುಮಂಕೞಿಯಿಂದೀಂಟಿಸಿದೊಡೞಿಗುಮಾಕ್ಷಣದೊಳದುಂಕೊೞೆವಾವಿನ ವಿಷದುಗ್ರಂಪೞನೀರಿಂ ನಸ್ಯ ಲೇಪದಿಂ ಗೋರಟೆಯಾ
ಏಪಡೆವಾತಮರಿಯುತಂಜೇಪಾಳಮನಿತ್ತೊಡಲ್ತೆ ನಸ್ಯಾಂಜನದೊಳ್ಕೋಪದೆ ಪಿಡಿಯಲ್ ಕೊೞೆವಾವಾಪತ್ಕರಮೆನಿಸಿದುಗ್ರವಿಷಮಿದು ಕಿಡುಗುಂ
ಮಂಡಲಮಾರಿ ಸುವಾರುಣಿಮಂಡಿತಮೆಂದೆನಿಸಿ ತೋರ್ಪ ಬೆಳ್ವಾಗಲಿವಂಕೊಂಡರೆದು ಪೂಸೆ ಕುಡಿಸಲ್ಕಂಡಲೆವುದೆ ಕೊೞಕವಾವಿನುಗ್ರೋಗ್ರವಿಷಂ
ಮಂಡಲಮಾರಿಯುಮಂ ಭೂಮಂಡಲವಿಖ್ಯಾತಮಪ್ಪ ನವಣೆಯ ಪಿಟ್ಟಂಕೊಂಡೊಡನೆ ತೊಳಸಿ ತಿನಲತಿಮಂಡಿತಮದು ಕೊೞಕನುಗ್ರವಿಷಮಂ ಕಳೆಗುಂ
ಬೇಳೆಯ ಪತ್ರಂಗಳೊಳಂಬೇಳೆಯಗೆಡ್ಡೆಯನೆ ಕೂಡಿ ಮರ್ದಿಸಿ ಕುಡಲೇಂಪೇೞಲರಿದೆಂಬ ಕೊೞಕನಚೇೞಿನ ಪಾವರಣೆಯುಗ್ರ ವಿಷಮದನೞಿಗುಂ
ಬೆಂತರೋರಗನ ವಿಷಕ್ಕೆ
ಚಿಕ್ಕಣಿಕೆಯ ರಸಮಂ ಮೂತ್ರಕ್ಕಂ ಸರಿಯಾಗಿ ಬೆರಸಿ ನಸ್ಯಂಗೆಯ್ಯಲ್ಚೆಕ್ಕನೆ ಕಳೆಗುಂ ಬೆಂತರದಿಕ್ಕೆಯ ವಿಷಮಂ ಪಿಶಾಚಭಯಮಂ ನಯದಿಂ
ಮರಿಚಂ ಪಿಪ್ಪಲಿ ಪಾಟಲಿಕರವೀರಂ ಭಾನುಕುಸುಮಮೂಲಂಗಳಿವಂಬೆರಸಿ ಕೞಿಯಿಂದೆ ಪೂಸಲ್ಪರೆಗುಂ ವ್ಯಂತರ ಮಹೋರಗಂಗಳ ಗರಳಂ
ಪರಿಕಿಸಿ ನೋಡಿ ನೋಡಿ ತಿಳಿದೋದುವುದೋದಿ ಮನೋನುರಾಗದಿಂಬರೆವುದು ಮತ್ತದಂ ಬರೆದು ಭಾವಿಸಿ ಗೋನಸವರ್ಣಭೇದಮಂಧರೆಗಱಿವಂತೆ ದಷ್ಟವಿಷಭೇಷಜಮಂತ್ರಮನೆಯ್ದೆ ಪೇೞ್ದು ಮತ್ತುರುತರ ಕೀರ್ತಿಯಂ ಪಡೆವುದೆಂದುಸಿರ್ದಂ ಕವಿತಾರಮಾಪ್ರಿಯಂ
ವ. ಅದೆಂತೆಂದೊಡೆ
ವಸ್ತುಕಕೆ ತೆಗೆದು ನಾನಾಪ್ರಸ್ತುತವಹ ಮಂತ್ರ ಯಂತ್ರ ತಂತ್ರೌಷಧಿಯಂವಿಸ್ತರಿಸಿ ಪೇೞ್ದ ಸುಜನಜನೋತ್ತಮ ಮಂಗರಸ ಕಾವ್ಯಸಾರೋದಯಮಂ
ಗದ್ಯ. ಇದು ಸಕಲ ವಿದಮಲ ಜಿನೇಂದ್ರೋಕ್ತ ಸಿದ್ಧಾಂತ ಪಯಃಪಯೋನಿಧಿ ಪಾರಗ ಶ್ರೀ ಪೂಜ್ತಪಾದ ಮುನೀಂದ್ರ ಚಾರುಚರಣಾರವಿಂದ ಗಂಧ ಗುಣಾನಂದಿತ ಮಾನಸಂ ಶ್ರೀಮದಖಿಲ ಕಳಾಗಮೋತ್ತುಂಗ ಮಂಗವಿಭು ವಿರಚಿತಮಪ್ಪ ಖಗೇಂದ್ರಮಣಿದರ್ಪಣದೊಳ್ ಗೋನಸ ವಿಶೇಷ ಕ್ಷುದ್ರ ವಿಷಾಪಹಾರಣಾಧಿಕಾರಂ ದಶಮಂ


