EN | KA

Menu

VI

ಹದಿಬದೆಯ ಧರ್ಮ

ಆವನಿಗಿಳೆಯುಮಾಗಸಮುಮಳತೆಗೊಳುವಾವೇಳೆಯೊಳಡಿಗಳಿಗೆಪಾವುಗೆಯಂತಳವಟ್ಟು ತೋರಿದುವಾದೇವನಿಗಾನು ವಂದಿಪೆನು

ಕಡಲೆಡೆಯೊಳು ಮಲಗಿದನಾವಳಿಗಾಗಿಕಡಲ ಕಡೆದು ಬಳಲಿದನುಕಡಲೊಳು ದಾರಿಗೈದನು ಶೌರಿಯಾ ಸಿರಿಮಡದಿಯಡಿಗೆ ವಂದಿಪೆನು

ಎಳೆಜವ್ವನಜೊಳೆಡೆಜವ್ವನದೊಳು ಮತ್ತಿಳಿವ ಜವ್ವನದೊಳಿನಿಯಳಒಳಗರಿತುಪಚರಿಸುವ ನಲ್ಲನಿಗವಳೊಳಗಪ್ಪ ಬಗೆಯ ಬಣ್ಣಿಪೆನು

ಎರವೆಳ್ಳೆನಿತಿಲ್ಲದೊರ್ವರೊರ್ವಳೊಡವೆರೆದಿರ್ಪ ಸತಿಪತಿಗಳಿಗೆದೊರೆಕೊಂಬುದು ಸಂಸಾರ ಸುಖದ ಸುಗ್ಗಿಪರದೊಳಾನಂದ ಪರ್ಬುವುದು

ಸತಿ ಪತಿಯರ ಸೌಹೃದದಿಂದ ಸಂಸಾರವತಿಶಯವಡೆದು ತೋರುವುದುಇತರೇತರ ವೈರದಿಂದಿರ್ವರಿಗೆ ದುರ್ಗತಿಯಂತೆ ಕಂಗೊಳಿಸುವುದು

ಒಳತೋಟಿಯೊಡರಿಪ ಗಂಡ ಪೆಂಡಿರ ಮನೆನೆಳಲ ಸೇರರು ನೀತಿವಿದರುಬಳಿಕ ಮಾತೇನಿನ್ನು ಬಸುರೊಳು ಬಂದ ಮಕ್ಕಳುಮಲ್ಲಗಳೆದು ನಡೆವರು

ತೋಟಿಗೊಳುವ ದುಷ್ಟದಂಪತಿಗಳು ಬೂತಾಟಗಳಿಂದನುಗೆಟ್ಟುಊಟ ನಿದ್ದೆಗಳೊಂದರೊಳು ಸುಖಮಿಲ್ಲದೆಕೋಟಲೆಗೊಂಡು ಕುಗ್ಗುವರು

ದಂಪತಿಗಳ ಪಗೆತನದಿಂದಿರ್ವರಪೆಂಪಿನ ಬೇರು ಪರಿವುದುಸೊಂಪುಗೆಡುವುದು ಸೊಬಗು ಸಂಸಾರದಜಂಪು ಸಡಿಲಿ ಜಾರುವುದು

ಕಡುಮೂರ್ಖತನದೊಳು ಕಡೆಗಣಿಸುವಬಿಡುನುಡಿಗಳ ಬಿತ್ತರಿಸುವಬಿಡದೆ ಕಾದುವ ಗಂಡಪೆಂಡಿರನೇತಕೆಪಡೆದನಕಟ ಪದ್ಮಭವನು

ಒರ್ವರೊರ್ವರನೊಡಬಡಿಸದಗರ್ವಿತ ದಂಪತಿಗಳನುಇರ್ವರನಿಳೆ ನುಂಗದೆ ಪೊರುವುದರಿಂದಸರ್ವಂಸಹೆಯೆನಿಸುವುದು

ತಿಳಿದದರಿಂದಿನಿಯರು ದಿಟ್ಟವೆಂಡಿರಬಳಿಸಂದೊಡಬಡಿಸುವುದುತಿಳಿಪುದೆದೆಗೊಳಿಸುವುದಿಂಪುದೋರುವುದೊಳಗುಗೈದೊಂದುವೆರೆವುದು

ಒಲುಮೆಯನೊಳಕೊಂಡು ನಾಣ್ಚಿಯೊಲಿದಂತೆಚಲಪೋರುವೆಳಜವ್ವನದಕುಲಸತಿಯೊಳು ಕೋಪಿಸದೆ ಕೋಟಲೆಗೊಳದಲಸದೆಯನುಸರಿಸುವುದು

ಏನೆಂದರಿಯದೆಳವೆಯೊಳಿನಿಯಳಭಿಮಾನಗೊಂಡಿರೆ ಮಚ್ಚರಿಸದೆಮೋನದೊಳಿರದೆ ಮೋಡಿಯ ಕಾಣಿಸದೆ ಸನ್ಮಾನದಿ ಮನಗರಗಿಪುದು

ನಲ್ಲನಿಗೊಲಿದು ನಾಣ್ಚುವ ಮುದ್ದುವೆಣ್ಣಿನಮೆಲ್ಲೆರ್ದೆ ಕಲ್ಲೆರ್ದೆಯೆನಿಸೆಬಲ್ಲವನವಳ ಬಲುಮೆಗೈದು ಬಳಲದೆಚಲ್ಲವಾಡುವುದು ಜಾಣ್ಮೆಯೊಳು

ನಿಟ್ಟಿಸೆ ತಲೆವಾಗುವ ನೇಹದೊಳು ಮನಮುಟ್ಟಿ ಮರಳಿ ನಿಟ್ಟಿಸುವದಿಟ್ಟಿದಿಟ್ಟಿಗಳೊಡವೆರೆಯೆ ನಾಣ್ಚುವರೊಳಗುಟ್ಟರಿತುಪಚರಿಸುವುದು

ಮೀರಲೆಳಸಿ ಮೇಲುವರಿದು ಮನದ ಮಿತಿಮೀರಲಂಜಿಕೆಗೊಂಬ ಮೆಯ್ಯಏರುವ ಪುರ್ಬಿನೆರಗುವೊಳ್ಮೊಗದೆಳೆನೀರೆಯ ನೆಲೆಯ ತಿಳಿವುದು

ಪೆರತೊಂದು ಪೆಂಪೇರುವೆರ್ದೆಯ ಮಿರುಪ ಮೆಯ್ಯನಿರಿಗೊಂಬ ನಿಡುವುರ್ಬುಗಳಕುರಿತು ನೋಡುವ ನೋಟದ ಕೊಮರಿಯ ಬಗೆಯರಿತೆರಕದೊಳೆರಗಿಪುದು

ಕೊಂಕುಗಲಿವ ನೋಟ ಕುಣಿಯಲೆಳಸುವ ಪುರ್ಬಂಕೆಗೆ ನಿಲದಭಿಲಾಷೆಬಿಂಕವಡೆವ ನಡೆವೆತ್ತೆಳೆವೆಂಡಿರಸೋಂಕುವುದವರೊಲವರಿತು

ಪೊದೆಯಲೆಳಸುವೆರ್ದೆ ಪುಸಿಯೆನಿಸುವ ನಡುಮದವೇರುವ ಮನದಿರವುಪದುಳಗೊಳುವ ನಡೆ ಬಗೆಗೊಂಬ ಬಾಲೆಯಬೆದರಿಸದೊಡ ಬಡಿಸುವುದು

ಸಣ್ಣನೆನಿಪ ನಡು ಸನ್ನಾಹವಡುವೆರ್ದೆಬಣ್ಣವೇರುವ ಬಡಬಾಸೆಬಣ್ಣಿಗೆಗೊಳುವ ಬಗೆಯ ಪೊಸವರೆಯದಪೆಣ್ಣಿನೊಲುಮೆಯ ಪೆರ್ಚಿಪುದು

ಗಾಡಿಗಲಿವ ನಡೆ ಗನ್ನವೇರುವ ನುಡಿಮೋಡಿದೋರುವ ಮುದ್ದುನೋಟಮೂಡುವ ಲಜ್ಜೆಯೆಸೆವ ಮುದ್ದುವೆಣ್ಗಳನೀಡುಗೊಳುವುದಿರವರಿತು

ಇಂಗಿತಗಳಿನಿದಿರಿಡಲೆಳಸುವ ನೋಟವಂಗಹಾರದೊಳೆಸೆವಂಗವ್ಯಂಗ್ಯವ ಕಲಿವ ಒಳ್ನುಡಿ ಬಗೆಗೊಳೆ ಕೋಮಲಾಂಗಿಯ ಕೂರ್ತೆರಗಿಪುದು

ಗಲಗೆಸಗದೆ ಗಾಬರಿಗೊಳಿಸದೆ ಮಿಗೆಕಲಹವ ಗಂಟುವಡಿಸದೆಬಲುಮೆಗೈಯದೆ ಬಾಲೆಯ ಬಣ್ಣವಾತಿನಿಂದೊಲಿಸಿಯೊತ್ತಿಗೆ ಬರಿಸುವುದು

ನಸುನಾಣ್ಚುವೆಳೆವೆಂಡಿರ ನಲವೇರಿಸಿಬಸಗೈಯದೆ ಬಲ್ಮದೋರೆಪೊಸಪೂವ ಸರಗೈದು ಮುಡಿಯದೆ ನಲುಗಿಸಿರಸದೆಗೆವೆಸಕವೆನಿಪುದು

ಬೆದರುವ ಮುದ್ದುವೆಣ್ಣಿಗೆ ಭೀತಿಗಳೆವಂತೆಪದುಳಗೈಯದೆ ಬಲ್ಮೆದೋರೆಸೊದೆಯುಂಡು ಸೊಕ್ಕುವ ಜೊನ್ನವಕ್ಕಿಗೆ ಬಿಸುಗದಿರನೂಡುವ ಗೈಮೆಯಂತೆ

ಅರಿಯದ ಪೆಣ್ಣನಾದರಿಸಿ ಅಂಜಿಕೆಗಳಪರಿವುಗೈಯದೆ ಬಲ್ಮೆದೋರೆತರಿಸಂದು ಮಳೆಗೆ ಬಾಯ್ದೆರೆವ ಚಾದಗೆಯೊಳುಬರಸಿಡಿಲೆರಗಿತೆಂಬಂತೆ

ಮುಗುದೆ ನಾಚಿಕೆಗೊಳೆ ಮುದ್ದಿಸಿ ತಿಳುಪದೆಪಗೆ ಸಾಧಿಸಿ ಬಲ್ಮೆದೋರೆಉಗುರೊಳು ಬಾಜಿಪ ಬೀಣೆಗೊನಕೆಗೊಂಬಬಗೆಯೆನಿಪುದು ಭಾವಿಪೊಡೆ

ಎರಗಿ ಎರಗದೆಳೆವೆಣ್ಣನೆರಗಿಸದೆಬರಿದೆ ಮುನಿದು ಬಲ್ಮೆದೋರೆಎರೆವ ತಣ್ಣೀರನೆಳಸುವೆಳೆವಳ್ಳಿಗೆತರಿಳಗೆಂಡವ ತಳಿವಂತೆ

ತರತಮಭಾವವರಿತು ತರುಣಿಯೊಳೊಡವೆರಸಿ ಬಿನದವೆಸಗುವುದುತರವರಿಯದೆ ತಲೆಯೊಳು ಪೊತ್ತು ಲಾಲಿಸೆಪರಿಭವಗೈದು ಪಳಿವಳು

ತಿಳಿಯದಿನಿಯಳನುವನು ತೀವರವಟ್ಟಳವಳಿ ದಾಲಿ ಪರಿಯದೆಒಳಗರಿತೊಯ್ಯನೊಯ್ಯನೆ ಸೇರುವಿನಿಯನಬಳಿ ಸಲುವರು ಬಾಲೆಯರು

ಎರವಿನಿತಿಲ್ಲದಂತೆಳೆವಯದ ಪೆಣ್ಣಸರಿಗೊಂಡು ಸರಸವಾಡುವುದುಸರಿಯಲ್ಲೆಂದುಳಿದಿರೆ ಮರವಡುವಳುಮರದ ಬೊಂಬೆಯ ಮಾಟದೊಳು

ಒತ್ತಿಗೆ ಬರಿಸುವುದೊಮ್ಮೊಮ್ಮೆ ಬಿನದವಾಡುತ್ತ ಭೀತಿಯ ಬಿಡಿಸುವುದುಮತ್ತೆ ಮೆಯ್ವಳಿಯೊಳು ಮನ್ನಿಸುವುದು ಚಿತ್ತವೃತ್ತಿಯ ಸೆರೆಯ ಪಿಡಿವುದು

ಬಿನದವಾತನು ಬೆಸಗೊಳೆ ಪೆರಸಾರದೆಮುನಿಯದೆ ಮೋಡಿಯೊಳಿರದೆಇನಿಸು ನಾಚಿಕೆಗೊಂಡೆರಗಿದ ನುಣ್ಮೊಗದಿನಿಯಳನೆದೆಗರಗಿಪುದು

ಮುಂಜೆರಗನು ಪಿಡಿದೊಡನೆ ಬಾಗಿದ ಮುಖಕಂಜದ ಪದುಗುವೊಡಲಿನಅಂಜುವ ಮನದೆಳವರೆಯದ ನೀರೆಯನಂಜಿಸದನುಸರಿಸುವುದು

ಸರಸವೆಸಗಿ ಕೈಸಾರ್ಚಿದೊಡನೆ ಮಿಗೆಮೊರೆದೇಳುವ ಮೈನವಿರಮುರಿಗೊಳುವಂಗದ ಮೊಳೆವ ಬೆಮರ ವರತರುಣಿಯನೆದೆಗರಗಿಪುದು

ಒದವಿ ಕೈಸೋಂಕಿದೊಡನೆ ಹದುಗುವ ಮೆಯ್ಯಕದುಬುವ ಸಕಲ ಕರಣದಬೆದರುವ ಕಣ್ಣ ಬೆಚ್ಚುವ ಮನದೆಳೆಯಳಎದೆಗರಗಿಪುದಿಚ್ಛೆಯರಿತು

ಪಿಡಿಯೆ ಮುಂಗೈಯ ಜಡಿದು ಮುರಿದಲಸುವಕುಡುವುರ್ಬುಗಳ ಗುಡಿಗೊಳಿಪಬಿಡು ಬಿಡೆಂದೊಮ್ಮೊಮ್ಮೆ ಬೆಚ್ಚಿ ಬಿನ್ನವಿಪೆಳೆವಡದಿಯನೊಡಬಡಿಸುವುದು

ಜಡೆಯ ತುಡುಕಿ ಪಿಡಿದೊಡನೆ ಘರಿಕ್ಕನೆಮಡಮುರಿದೆಸೆವೊಳ್ಮೊಗದಅಡವಾಯುವ ಕೂರ್‌ನೋಟದ ಕೊಮರಿಯನೊಡಬಡಿಸುವುದೊಲಿಸುವುದು

ಸೋಂಕಲೆಳಸೆ ಸುಕ್ಕುವ ಪೊಂಜೆಳೆಮೆಯ್ಯಕೊಂಕಿದ ಕುಡುವುರ್ಬುಗಳಭೋಂಕನೇಳುವ ನವಿರುಗಳೆಳವರೆಯದಬಿಂಕಗಾತಿಯ ಬೆರಸುವುದು

ಕನಲಿ ಕಲ್ಲೆರ್ದೆಯವಳೆಂದಲ್ಲಗಳೆಯದೆಮನಮುರಿಯದೆ ಮಚ್ಚರಿಸದೆಅನುನಯ ವಚನದಿಂದನುಗೊಳಸುವನಿಗೆಮನವೀವರೆಳೆವಡದಿಯರು

ನೆರೆಜವ್ವನದ ನೀರೆಯೊಳೆರವೆಣಿಸದೆಮರೆಮಾಜಿ ಮನಮುರಿಯಿಸದೆಎರಕವೆರಸಿ ಮನೆವಾಳ್ತೆಯ ಭಾರವಪೊರಿಸಿ ಪುದುಗುವಡಿಸುವುದು

ಆಯಿತಾಯಿತು ಎಂದಲ್ಲಗಳೆಯದೆ ತನ್ನಾಯವನವಳಿಗರುಹದೆಆಯ ಬೀಯವನವಳೊಡನಾಳೋಚಿಸಿಕೈಯಡಕದೊಳಿರಿಸುವುದು

ಎನ್ನವಳೆಂದೆರಕದೊಳೀವುದು ಪೊನ್ನರನ್ನವ ಪೊಸದುಗುಲಗಳತನ್ನ ಶಕ್ತಿಯ ವಂಚಿಸದೆ ಮನದನ್ನಳನುನ್ನತಿವಡಿಸುವುದೊಲಿದು

ತನ್ನ ಪೆರ್ಚುಗೆಯೊಳು ಪೆರ್ಚುಗೆಗೊಂಡುರೆತನ್ನ ಕುಂದಿನೊಳು ಕುಂದುವಳತನ್ನ ಮೆಯ್ಯೊಳಗರೆಮೆಯ್ಯೆನಿಸುವ ಮನದನ್ನಳ ಮನ್ನಿಪುದೊಲಿದು

ಉಡದಿರೆ ಮಡಿಯುಡದುಣದಿರೆ ಸರಿಯುಣದೊಡವೆಯ ತೊಡದಿರೆ ತೊಡದೆಎಡವಿಡದಿನಿಯನಡಿಯ ನೆಳಲನು ಪಡಿವಿಡಿವ ಮಡದಿಯ ಮನ್ನಿಪುದು

ನಿನ್ನದೆನ್ನದು ನೀ ನಾನು ನಿನ್ನವರಿವರೆನ್ನವರಿವರುಗಳೆಂದುತನ್ನಿನಿಯಳ ತನ್ನೊಡವೆಯ ಮೈ ಬಳಗವಭಿನ್ನಗೈಯದೆ ಬೆರಸುವುದು

ಮನದೊಳು ಮನ ನೆನಹಿನೊಳು ನೆನಹು ಮತ್ತೆತನು ತನುವಿನೊಳೊಡವೆರಸಿಅನುಗೊಳೆ ಪಾಲುನೀರುಗಳಂತಿನಿಯನುಮಿನಿಯಳುಮೇಕವೆನಿಪುದು

ಎಳೆಜವ್ವನ ಮೊದಲಿಂದುವರೆಗಮೆನ್ನಬಳಿಸಂದು ಬಾಳಿದಳೆಂದುಇಳಿವ ಜವ್ವನದೊಳಗೆರವುದೋರದೆಯೆಂದಿನೊಳು ನೇಹವನೊಡರಿಪುದು

ಎಣಿಕೆಗೈವೊಡೆ ರೂಪು ಜವ್ವನಮಿದ್ದೇನುಗುಣಮಿಲ್ಲದ ಕುಲಸತಿಗೆಗುಣಕರುಗೊಂಡಿರೆ ಕೂರ್ತೆಂದೆಂದಿಗುಮೆಣೆ ಬಿಚ್ಚದೇಕವೆನಿಪುದು

ಎರವಿಲ್ಲದೇಕವೆನಿಸಿ ಧರ್ಮದೊಳು ಸಂಸರಿಸುವ ಸತಿಪತಿಗಳಿಗೆಪುರುಷೋತ್ತಮನಡಿಗಳ ಪೂಜೆಯಿಂದಿಹಪರಸುಖ ಪದುಳಗೊಳುವುದು

ಚೆನ್ನಿಗ ಚಿಕದೇವರಾಯನ ಸಂಚಿಯಹೊನ್ನಮ್ಮನುಸುರ್ದ ಕಬ್ಬದೊಳುಉನ್ನತಿವಡೆದೊಪ್ಪಿದುದಾರನೆಯ ಸಂಧಿಸನ್ನುತ ಗುಣಸಂಬಂಧಿ