EN | KA

Menu

III

ಹದಿಬದೆಯ ಧರ್ಮ

ಶ್ರೀಭೂಮಿನೀಳಾನಾಥನಿಗನುಪಮವೈಭವ ವೈಕುಂಠಪತಿಗೆಸ್ವಾಭಾವಿಕ ಶುಭಗಣನಿಧಿಗಂಬುಜನಾಭನಿಗಾನೆರಗುವೆನು

ದೇವ ಮಾನವ ಮೃಗ ನಗರೂಪದ ವಾಸುದೇವನ ವಿಭವಂಗಳನುಆ ವಿಧದೊಡಲವೆತ್ತನುಸರಿಸುವ ಲಕ್ಷ್ಮೀವಧುವನು ವಂದಿಪೆನು

ಪತಿಪಾದಭಕ್ತೆಯರೆನಿಸಿ ಬಣ್ಣನೆವೆತ್ತಸತಿಯರೊಲಿದು ಸಮನಿಸುವಪತಿಶುಶ್ರೂಷೆಯ ಬಗೆಯನರಿತು ಸಂಗತಿಗೈದದನು ಬಣ್ಣಿಪೆನು

ಪತಿಯೆ ಪರಮಗುರು ಪತಿಯೇ ದೇವತೆಪತಿಯೇ ಸದ್ಗತಿಯೆಂದುಪತಿಯ ಪಾದಾಂಬುಜದೊಳು ಭಕ್ತಿಗೈವುದುಸತಿಯರ ಧರ್ಮದ ಸಾರ

ಪತಿಯನೊಲವರಿತು ಪತಿಯ ಸೇವೆಯೊಳಿದ್ದುಪತಿಯೂಳಿಗಗಳನೆಸಗಿಪತಿಯಾಣತಿಯ ಬಂದಿಯೊಳಡಗಿ‍ರ್ಪುದುಸತಿಯ ಧರ್ಮದ ಸರ್ವಸ್ವ

ವ್ರತ ಹೋಮ ನಿಯಮೋಪವಾಸ ದಾನಂಗಳೆಂದತಿಶಯವಡೆದ ಧರ್ಮಗಳುಪತಿಶುಶ್ರೂಷೆಗೆ ಪಡಿಯಲ್ಲೆಂದಿದರತಿಶಯವರಿತಾಚರಿಪುದು

ಪ್ರತಿಮೆಯ ರೂಪದ ಪಂಕಜನಾಭಗೆನತಿಗೈದು ನಲವೇರುವಂತೆಪತಿಯ ರೂಪದೆ ತನ್ನ ಪಾಲಿಗೆ ಬಂದ ಶ್ರೀಪತಿಯ ಪಾದವ ಭಜಿಸುವುದು

ಪಗಲಿರುಳೆನ್ನದೆ ಪತಿಯಾಣತಿಯೊಳುಮೊಗದಿರುಹದೆ ಮೊನೆಗೊಳದೆಬಗೆದೆಗೆಯದೆ ತನ್ನ ಭಾಗ್ಯದ ಫಲವೆಂದುಬಗೆದು ಭಕ್ತಿಯೊಳೆಸಗುವುದು

ಮಾಯವನನುಗೊಳಿಸದೆ ಮೈಮರಸದೆಕಾಯ ಮನೋವಚನಗಳಆಯಸದಿಂದಳವಳಿಯದೆ ಪತಿಯನುಪಾಯದಿಂದುಪಚರಿಸುವುದು

ಒಲಿದು ಪತಿಯ ಮನದೊಲವನಾರೈದು ತಾನಲಸಿಕೆಗೊಳದನುಸರಿಸಿಕುಲಸತಿಯರ ಧರ್ಮ ಕೊನರಿಡೆ ನೇಹವನೆಲೆಗಾಣಿಸಿ ನೆಗಳುವುದು

ಇದೊ ನಿನ್ನ ಪತಿ ಬಂದನೆಂಬ ನಲ್ನುಡಿ ಕೇಳಿಮುದವೇರಿ ಮೊಗಸಿರಿವಡೆದುಕದುಬಿಯವನ ಸೇವೆಗನುವಪ್ಪ ವಸ್ತುವನೊದವಿಪುದುರ್ವುಗೊಂಡೊಡನೆ

ಇಂತು ನೋಡುವೆನಿಂತು ನುಡಿವೆನಿಂತೆಸಗುವೆನಿಂತು ಸೇರುವೆನಿಂತಿರುವೆಇಂತು ಮನ್ನಿಪೆನಿಂತು ಮನಗರಗಿಪೆನೆಂದುಚಿಂತಿಪುದೇಕಚಿತ್ತದೊಳು

ಮನೆವಾಳ್ತೆ ಮೆಯ್ಯಲಸಿಕೆ ಮಕ್ಕಳ ಮುದ್ದುಬಿನದಂಗಳನು ಬಿಟ್ಟೆದ್ದುದನಿಗೇಳದ ಮುನ್ನ ತಾನಿದಿರ್ಗೊಂಡವನನುವರಿತನುಸರಿಸುವುದು

ಸೋಗೆ ಮುಗಿಲ ಕಂಡು ಸೊರ್ಕುವಂದದೊಳನುರಾಗರಸದ ಲಹರಿಯೊಳುಬಾಗಿಲಿನೊಳವೊಕ್ಕು ಬಂದನೆಂಬುದುಮತಿವೇಗದೊಳಿದಿರುಗೊಳುವುದು

ತಳುವದಚ್ಯುತನಿಗರ್ಚನೆಗೈವಂತಡಿದೊಳೆದು ತೊಡೆದು ದುಗುಲದೊಳುಬಳಿಕ ನಡೆದು ಬಂದು ಬಳಲಿಕೆಗಳೆವಂತೊಳುವಾತುಗಳನೊಡರಿಪುದು

ಪಸಿವಲಸಿಕೆಗಳ ಪರಿದು ಕೆಲದೆ ನಿಂದುನಸುನಾಣ್ಚುತ ನಲವಿನೊಳುಒಸೆದೊಲವರಿತೊಯ್ಯನುಚಿತೋಪಚಾರವನೆಸಗುವುದೇಕಚಿತ್ತದೊಳು

ಆವ ಪರಿಯ ದೇಸಿಯಾಣ್ಮಗೆ ಬಗೆವರ್ಪುದಾ ವಿಧಗಳನಾರೈದುಭಾವಿಸಿ ತಿಳಿದುಟ್ಟು ತೊಟ್ಟು ಬಣ್ಣಿಗೆಯಿಂದಭಾವವ ಬಂದಿಗೊಳುವುದು

ಇಷ್ಟದೇವತೆಯಿವನೆಂದು ಪತಿಯೊಳು ವಿಶಿಷ್ಟ ಭಾವವ ಬಗೆಗೊಳಿಸಿಕಷ್ಟ ಕಾ‍ರ್ಪಣ್ಯವ ಕಾಣಿಸಿ ಕನಲದೆತುಷ್ಟಿವಡಿಪುದೊಲವರಿತು

ಹಿತವಿದು ಶಾಸ್ತ್ರಿವಿಹಿತವಿದು ಮನಕೆ ಸಮ್ಮತವಿದೆಂದೆಂಬ ಮರ್ಮವನುಮತಿಯೊಳೆಣಿಸಿ ಮನದನ್ನನ ಸೇವೆಗುಚಿತ ವಸ್ತುಗಳನೆ ಚಿಂತಿಪುದು

ಮನೆವಾಳ್ತೆಯೆಸಗುವ ಮರ್ಯಾದೆಯನು ತನ್ನಿನಿಯನಿಗಿಂತೆಂದರುಹಿಮನದೊಲವರಿತೊಡಬಟ್ಟುದನೊಡರಿಸಿಮನಬಾರದುದನು ಮರೆವುದು

ಗ್ರಾಸ ವ್ಯಸನ ಪರಿಕರಮಿಲ್ಲದಿರೆ ಕಟ್ಟಾಸುರದೊಳು ಗಾಳುಗೆಡದೆಓಸರಿಸುತ್ತೊಯ್ಯನೇಕಾಂತದೊಳೊಮ್ಮೆಬೇಸರಿಸದೆ ಬಿನ್ನವಿಪುದು

ಗನ್ನ ಗದುಕುಗಳ ಕಳೆದು ಗರ್ವವ ಬಿಟ್ಟುಹನ್ನಸಗಳನು ಹಬ್ಬಿಸದೆತನ್ನ ಬಾಳಿಕೆ ಬಡತನದ ಬಗೆಯನೆಲ್ಲಬಿನ್ನವಿಪುದು ವಿನಯದೊಳು

ಮುನಿಯದಿನಿಯನ ಕಡುಮೊನೆವಾತಿಗೆ ನೊಂದುಕನಲದೆ ಗಾರುವಡೆಯದೆತನುಮನಗಳ ತನ್ನ ಬಸಗೈದು ದೈನ್ಯವಕೊನರಿಸಿ ತಂಪುಗೊಳಿಪುದು

ಪವಣಿಲ್ಲದೆ ಪಲವಗೆ ಮಾತನಾಡದೆಕವೆ ಕೋಡುಗಳನು ಕಾಣಿಸದೆನೆವವಿಲ್ಲದೆ ನೆಗ್ಗಿ ನೆಲಕಿಳಿದೊರಲದೆಸವನಿಸುವುದು ಸಂತಸವನು

ಆರಿ ಬೊಬ್ಬಿರಿದಾರಭಟೆಯನಾಚರಿಸದೆಪಾರದೆ ಪರಸಹಾಯವನುಪೋರದೆ ಪುರ್ಬುಗಂಟಿಕ್ಕದೆ ಪುಸಿಯದೆಸೇರಿ ಸೇವೆಯನೆಸಗುವುದು

ನೋಯಿಸಿ ನುಡಿಸದೆ ನೋಡದುಚಿತಗಳಬೀಯವೆಸಗಿ ಬೇಸರಿಸದೆಆಯವರಿತು ತರಲರಿಯದ ಪತಿಯೊಳಸೂಯೆಗೊಳದೆ ಸುಖಿಸುವುದು

ಪೆರತೊಂದು ನೆವದೊಳು ಬಿಸುಪೇರಿದ ಕೋಪದುರುಬಿನಿಂದೊದರುವ ಪತಿಗೆತರಿಸಂದು ತಾನಿದಿರುತ್ತರವೀಯದೆಪರದೆಗೆವುದು ಭೀತಿವಡೆದು

ಪತಿಯ ಬುದ್ಧಿಗೆ ಮೋಸ ಬಂದೊಡಮದರಿಂದಖತಿಗೊಂಡು ಗಲಗುವಡಿಸದೆಇತರರಿಯದಂತೇಕಾಂತಸಮಯದೊಳತಿಭಕ್ತಿಯಿಂದರುಹುವುದು

ಅನುಚಿತ ಕಾರ್ಯಮನವನೊಡರಿಸೆ ಕಂಡುನಿನಗಿದು ನೀತವಲ್ಲೆಂದುನೆನೆಯಿಪೆನಲ್ಲದೆ ನೇಮಿಪುದಿಲ್ಲೆಂದುವಿನಯವೆರಸಿ ಬಿನ್ನವಿಪುದು

ಅತಿಭೀತಿಯಿಂದನುಗೆಟ್ಟು ಪಿಂತೆಗೆಯದೆಮಿತಿಮೀರಿ ಮೇಲುವರಿಯದೆಇತರ ಜನರು ತನ್ನನೇಳಿಸಿ ನಗದಂತೆಪತಿಸೇವೆಗೈದು ಬಾಳುವುದು

ಪಿರಿಯರ ಮಗಳೆಂದು ಬಿಜ್ಜೆಗಲಿತೆನೆಂದುವರರೂಪವತಿ ತಾನೆಂದುಪರಮ ಪಾವನೆಯೆಂದು ಬರಿದೆ ಬೆರೆಯದನುಸರಿಸುವುದಾತ್ಮವಲ್ಲಭನ

ವ್ರತವೆಸಗುವೆನೆಂದು ಮಿಂದು ಬಂದಿಹೆನೆಂದತಿಶಯದಿಂದನುಗೆಡದೆಪತಿಯ ಪಡಿಗ ಪಾವುಗೆಗಳ ಪಿಡಿದುನ್ನತಿವಡೆವುದು ನಾರಿಯರು

ಗರತಿಗೆಲಸವೆಂದು ಗೆಲ್ಲಗೊಂಡುರ್ಬದೆಪರಿಚಾರವೆಂದು ಪಳಿಯದೆಪಿರಿದು ಕಿರಿದುಗಳ ಭೇದವೆಣಿಸದೆನಿರವಿಸಿದುದನೆಸಗುವುದು

ಮುಡಿಯೊಳು ಪೊತ್ತು ಮುದ್ದಿಸಿದೊಡೇನಡಿಗಳಿಂಪೊಡವಿಗಿಟ್ಟೊರಸಿದೊಡೇನುಒಡೆಯನಿಟ್ಟಂತಿರ್ಪುದೊಡವೆಗುಚಿತಮೆಂದುನಡೆವುದು ನಲ್ವೆಂಡಿರೊಲಿದು

ತನ್ನ ತವರುಮನೆಗೆಲ್ಲ ತಾನೊಡತಿಯೆಂಬುನ್ನತಿವಡೆವುದರಿಂದತನ್ನಿನಿಯನಿಗೂಳಿಗದವಳಪ್ಪುದು ಸಂಪನ್ನತೆಯೆಂದು ಬಗೆವುದು

ಆರಯ್ಯೆ ತಂದೆತಾಯಾದೊಡಮೇನುಪಕಾರಿಗಳಾದೊಡಮೇನುಆರಾದೊಡಮಾತ್ಮಪತಿಗಾಗದವರನುದೂರಮೆನಿಸಿ ತೊರೆದಿಹುದು

ಛಲವಿಡಿದೊಂದನೆಳಸಿ ಚಾರಿವರಿಯದೆನೆಲೆವಿಡಿದೊಂದರೊಳಿರದೆನೆಲೆನಿಂದ ನೀರ ತೆಪ್ಪದ ವೋಲು ತೆಗೆದೆಡೆಗಲೆಗೊಳದನುಸರಿಸುವುದು

ಕೊನಬಾದೊಡಮೇನು ಕೂರ್ಮೆಯಾದೊಡಮೇನುಬಿನದಮಾದೊಡಮೇನು ಬೇರೆಇನಿಯನೇಕಾಂತದೊಳೆಸಗಿದುದನು ತನ್ನಮನಮೊಳೆ ಮರೆಮಾಜುವುದು

ಸೆಜ್ಜೆವನೆಯ ಸೇವೆಯೊಂದನುಳಿದು ಮಿಕ್ಕುಜ್ಜುಗಗೈವ ವೇಳೆಯೊಳುಸಜ್ಜಾತಿ ಸತಿಯರಿನಿಯರ ಸನ್ನಿಧಿಯೊಳುಲಜ್ಜೆವೆರಸಿ ರಂಜಿಪುದು

ಪರದೇವತೆಯೆಂದು ಭಕ್ತಿಗೈವುದು ಬಲುದೊರೆಯೆಂದುಪಚರಿಸುವುದುಗುರುವೆಂದು ವಿನಯಗೂಡಿರ್ಪುದಿನಿಯನೊಳುನೆರವೆಂದು ನೆರೆ ನಂಬುವುದು

ಮುಳಿದಲ್ಲಿ ಮುಳಿದೆಳಸಿದುದನೆಳಸಿಯಲ್ಲಗಳೆದುದೆಲ್ಲವನಲ್ಲಗಳೆದುಬಳಿವಿಡಿದಿನಿಯರ ಪಾದಾರವಿಂದದನೆಳಲಂತೆ ನೇಮದೊಳಿಹುದು

ಕೆಳೆಗೊಳ್ಳುವುದು ಸೇವೆಗೈವುದು ನಲ್ಲನಬಳಿ ಸಲುವುದು ಭಜಿಸುವುದುಒಳಗುವೇಳುವುದೊಡನಾಡುವುದೊಲಿದೊಲ್ಮೆಗೆಳಸುವುದೇಕವೆನಿಪುದು

ಗಣಿಸುವುದವನರಿವೆಯ ಕೌಶಲಗಳಗುಣಿಸುವುದನವ ಗುಣಗಳಎಣಿಸುವುದವನೊಲಿದೆಸಗುವ ನಲ್ಮೆಯತಣಿಸುವುದಿಂತು ಚಿತ್ತವನು

ಕೇಳುವುದವನ ಕೀರ್ತಿಯನಾಲಿಪರಿಗೆಪೇಳುವುದವನ ಪೆರ್ಮೆಯನುಮೇಳಗೊಳುವುದವನೊಳು ಮೇರೆ ಮೀರದೆಬಾಳುವುದಿಂತು ಭಾಮೆಯರು

ಈ ತೆರದೊಳು ನಡೆದಿನಿಯನ ಮನಕೆ ಸಂಪ್ರೀತಿದೋರಿಸುವ ಪೆಂಡಿರಿಗೆಪಾತಿವ್ರತ್ಯದ ಬಗೆ ಬಣ್ಣವೇರಿ ವಿಖ್ಯಾತಿ ಬೆಳೆದು ಬಿತ್ತರಿಪುದು

ತಳುವದಡವಿಯೊಳು ತನ್ನ ತಪ್ಪಿಸಿ ಪೋದನಳನೊಳು ನಲ್ಮೆಯನೆಸಗಿಇಳೆಯ ಪೆಂಡಿರೊಳೆಣೆಯಿಲ್ಲದ ಕೀರ್ತಿಯತಳೆದೆಸೆದಳು ದಮಯಂತಿ

ಕಾನನದೊಳು ಕಡುಕಷ್ಟವಡೆದು ನೋವುಬೇನೆಗಳಿಗೆ ಬೇಸರಿಸದೆಸಾನುರಾಗದೊಳನುಸರಿಸಿ ತನ್ನಿನಿಯನಜಾನಕಿ ಜಸವ ಪಡೆದಳು

ದ್ಯೂತಕೇಳಿಯೊಳಜ್ಞಾತವಾಸದೊಳಂದುಧಾತುಗುಂದದೆ ಪಾಂಚಾಲಿಓತು ಪಾಂಡವರನೊಲಿಸಿ ಹದಿಬದೆಯರಬೈತಲೆವಣಿಯೆನಿಸಿದಳು

ಇಂತು ವಸಿಷ್ಠನೊಳಿರ್ದಳರುಂಧತಿಇಂತತ್ರಿಯೊಳನಸೂಯೆಇಂತಗಸ್ತ್ಯನೊಳು ಲೋಪಾಮುದ್ರೆ ಪೆರತೇನಿಂತಿರ್ದರೆಲ್ಲ ಸಾಧ್ವಿಯರು

ಇಂತು ನಡೆದು ಪತಿಗಂತರಂಗೆಯರಪ್ಪಕಾಂತೆಯರಿಗೆ ಕಯ್ಯೊಡೆನೆಸಂತಾನ ಸೌಭಾಗ್ಯ ಸಂಪತ್ತುಗಳನು ಶ್ರೀಕಾಂತನು ಕೈಸೇರಿಸುವನು

ಚೆನ್ನಿಗ ಚಿಕದೇವರಾಯನ ಸಂಚಿಯಹೊನ್ನಮ್ಮನುಸುರ್ದ ಕಬ್ಬದೊಳುಮನ್ನಣೆವಡೆದೆಸೆದುದು ಮೂರನೆಯ ಸಂಧಿಸನ್ನುತ ಗುಣಸಂಬಂಧಿ