VII
Naḷacaritre
ಮಗಳ ಕಾಣದೆ ಭೀಮನೃಪ ಮೂಜಗವ ಭೇದಿಸಿ ಚೈದ್ಯಭೂಪನನಗರದಲ್ಲಿರೆ ಕಂಡು ಕರೆಸಿದ ತನ್ನ ನಿಜಸುತೆಯ
ಕೇಳು ಧರ್ಮಜ ರತ್ನ ನಿರ್ಮಿತದಾಲಯದ ಸೊಬಗಿನಲಿಯೋಲಗಶಾಲೆಯಲಿ ಋತುಪರ್ಣನಿದ್ದನು ಸಿಂಹಪೀಠದಲಿಸಾಲ ಮಕುಟದ ನೃಪರು ಭೂಸುರಜಾಲ ಮಂತ್ರಿ ಪುರೋಹಿತರು ಗುಣಶೀಲರುನ್ನತಸತಿಯರಿಂದೆಸೆದಿರ್ದುದಾಸ್ಥಾನ
ಇದು ಸಮಯ ತನಗೆಂದು ನಳನೃಪಮುದದಿ ವೇಷವ ತಾಳ್ದು ಹರಿಯಂದದಲಿ ಬಂದನು ಸಭೆಯ ಕಂಡನು ನೃಪಗೆ ಕೈಮುಗಿದುಸದಮಲಾಸ್ಥಾನದಲಿ ರಿಪುಭಟಕದನಗಲಿಗಳು ಜೀಯೆನಲು ನಯಹೃದಯದಲಿ ಬಿನ್ನೈಸಿದನು ಋತುಪರ್ಣಭೂಪತಿಗೆ
ಅವನಿಪತಿ ಕೇಳ್ ನಿಮ್ಮ ಪದಕಮಲವನು ಭಜಿಸುವೆ ಜೀಯ ಚಿತ್ತದಿಸವಡಿನುಡಿ ತನಗಿಲ್ಲ ಬಾಹುಕನೆಂಬುದಭಿಧಾನಭುವನದೊಳು ತಾನಶ್ವಕುಲಹೃದಯವನು ಬಲ್ಲೆನು ಶಾಕಪಾಕದಿಸವಿಗೊಳಿಪ ವರವಿದ್ಯೆ ತನಗುಂಟೆಂದನವ ನಗುತ
ಸೂಪಕಾರದೊಳಗ್ಗಳನು ಕಡುರೂಪಿನವ ತಾನಲ್ಲ ಚಿತ್ತದಿಕಾಪುರುಷನೆನ್ನದಿರು ನೋಡಾ ತನ್ನ ಪೌರುಷವಭೂಪ ಮುಂಗೈಗಂಕಣಕೆ ಕುಲದೀಪ ಕನ್ನಡಿಯೇಕೆ ತರಿಸು ಪ್ರತಾಪವಾಜಿಯನೆಂದು ಬಿನ್ನೈಸಿದನು ನಸುನಗುತ
ಪೊಡವಿಪತಿ ಋತುಪರ್ಣ ಬಾಹುಕನುಡಿದ ವಚನಕೆ ಮೆಚ್ಚಿ ಮನದುಗ್ಗಡದ ತೇಜಿಯ ತರಿಸಿ ಕೊಡಲೇರಿದನು ಬೀದಿಯಲಿಮಡದ ಸನ್ನೆಗೆ ಕುಣಿದು ರವೆಗಾಲಿಡುತ ಜೋಡಣೆಯಿಂದ ಹಯವಡಿಗಡಿಗೆ ಚಿಮ್ಮಿತು ವಾಯುವೇಗದೊಳರಸ ಕೇಳೆಂದ
ಕರದ ವಾಘೆಯ ಸಡಿಲ ಬಿಡೆ ನಿಬ್ಬರದ ಗಮನದೊಳೈದಿತವನಿಯೊಳುರವಣಿಸಿ ಕೆಂಧೂಳಿ ಮುಸುಕಿದುದಂಬರವ ಬಿಡದೆಧರಣಿ ತಲ್ಲಣಿಸಿದುದು ಗಗನದಿಸುರರು ಕೊಂಡಾಡಿದರು ರಾವುತರರಸನಹುದೋ ಭಾಪು ಭಾಪೆಂದುದು ಸಮಸ್ತಜನ
ಮುರುಹಿ ಹಿಡಿಯಲು ಮಡದ ಸನ್ನೆಗೆತಿರುಗಿತತಿವೇಗದಲಿ ಹಯವೋಸರಿಸಿ ಕಿರುಬೆಮರಿಡಲು ನಿಲಿಸುತ ವಾರುವವನಿಳಿದುಕರವ ಮುಗಿಯಲು ನೃಪತಿ ಮೆಚ್ಚುತತರಿಸಿ ಕೊಟ್ಟನು ಭೂಷಣಂಗಳಹಿರಿದು ಸಂಬಳವಿತ್ತು ನಿಲಿಸಿದನರಸ ಬಾಹುಕನ
ಜನಪ ಕೇಳ್ ಬಾಹುಕನು ವಾಲಾಖ್ಯನಲಿ ಸಖ್ಯವ ಬೆಳೆಸುತಾತನನನುದಿನವು ಕೂಡಿರ್ದನೊಂದಾನೊಂದುದಿನ ರಾತ್ರಿವನಜಮುಖಿ ದಮಯಂತಿಯೊಳು ಚುಂಬನ ಸರಸ ಸಲ್ಲಾಪದಿಂದಿಹಕನಸ ಕಂಡೆಚ್ಚರದಿ ಕಾಣದೆ ಸತಿಗೆ ಹಲುಬಿದನು
ಹಾ ತರುಣಿ ನಳಿನಾಕ್ಷಿ ನಯಸುಪ್ರೀತಿಪೂರ್ವಕದಿಂದ ಕನಸಲಿಮಾತುದೋರಿದೆ ಬಂದು ನನ್ನಲಿ ಕರುಣದಿಂ ನೀನುಧಾತುಗುಂದಿದೆನಕಟ ಅಸುರಾರಾತಿ ಬಲ್ಲನೆನುತ ಮನದಲಿಕಾತರಿಸಿ ನಿಜಸತಿಗೆ ಹಲುಬಿದ ಮದನನೆಸುಗೆಯಲಿ
ವಿಕಳವನು ವಾಲಾಖ್ಯ ಕೇಳಿದುಪಕಪಕನೆ ನಗುತೆಂದನೆಲೆ ಬಾಹುಕನೆ ಹಲುಬುವುದೇನು ಕಾಂತೆಗೆ ತಕ್ಕ ಬೊಂತೆಯನುಅಕಟ ನೀನತಿ ಚೆಲುವನೇ ಬಾಲಕಿ ನಿನಗೆ ತಕ್ಕವಳೊ ಲೋಕದಿಮಕರಕೇತನ ಮರುಳನೆಂದಪಹಾಸ್ಯ ಮಾಡಿದನು
ಎಂದು ಹಾಸ್ಯವ ಮಾಡಿದವನೊಡನೆಂದನಾ ಬಾಹುಕನು ಪೂರ್ವದೊಳಂದು ಬ್ರಾಹ್ಮಣನೊಬ್ಬ ನಿಜಸತಿಯಗಲಿಯೆನ್ನೊಡನೆನೊಂದು ನುಡಿದನು ವಿರಹದಲಿಯದನಿಂದು ಕನಸಲಿ ಕಂಡು ಭ್ರಾಂತಿಯೊಳೆಂದಡದು ತಪ್ಪೇನು ಸತಿಸುತರಿಲ್ಲ ತನಗೆಂದ
ಅರಸ ಕೇಳಾ ಪುರದೊಳೊಬ್ಬರಿಗರಿಯದಂದದಿ ನಳನಿರಲು ಭೂಸುರರ ಮತದಲಿ ಕೇಳ್ದ ಭೀಮನೃಪಾಲನೀ ಹದನಧರೆಯನೆಲ್ಲವ ಜೂಜಿನಲಿ ಪುಷ್ಕರಗೆ ಸೋತು ನಳನೃಪನಡವಿಗೆತೆರೆಳಿದನು ಸತಿಸಹಿತವೆನೆ ಹೊರಳಿದನು ಶೋಕದಲಿ
ಹಾ ಮಗಳೆ ದಮಯಂತಿ ನಿಷಧಸನಾಮನನು ಕೈ ಹಿಡಿದು ಬಾಳುವನೇಮವನು ಬಿಸುಟಡವಿಗಟ್ಟಿತೆ ವಿಧಿ ವಿಕರ್ಮಫಲಭೀಮನೃಪನುದರದಲಿ ಜನಿಸಿ ವಿರಾಮವಾದುದೆ ನಿನ್ನ ಸಿರಿಮುಖತಾಮರಸವನು ಕಾಣೆ ತೋರೆಂದರಸ ಹಲುಬಿದನು
ಮಗಳೆ ಮೋಹದ ಸುತರನಾರಿಗೆತೆಗೆದು ಬಿಸುಟೆ ನಿರಾಸೆಯಲಿಯೀಬಗೆಗೆ ತಂದುದೆ ವಿಧಿಯು ನಿನ್ನನು ಹರಮಹಾದೇವಹೋಗಲುಬಹುದೇ ಕಾನನದೊಳಿಹಮೃಗಗಳಿಂದೇನಾದಳೋ ಪತಿಯಗಲಿದನೊ ಭೇತಾಳ ನುಂಗಿತೊಯೆನುತ ಹಲುಬಿದನು
ಬಡವರುದರದೊಳುದಿಸಿ ಸುಖವನುಪಡೆಯಲೊಲ್ಲದೆ ಬಂದು ನೀನೀಪೊಡವಿಪತಿಯುದರದಲಿ ಸಂಜನಿಸುವರೆ ಎಲೆ ತಾಯೆಗಿಡಮೆಳೆಗಳಾರಣ್ಯದಲಿ ತನುವಿಡಿದು ಸೈರಿಪುದೆಂದು ಮಗಳೇಸುಡು ತನುವನಿದನೆಂದು ಮರುಗಿದಳವಳ ನಿಜಜನನಿ
ಸತಿಪತಿಗಳೀಪರಿಯ ಶೋಕೋನ್ನತಿಯ ಸೈರಿಸಲಾರದಾ ಮಾರುತನ ಸಖನೊಳು ಪುಗುವೆವೆಂದುರವಣಿಸಿ ನಡೆತರಲುಕ್ಷಿತಿಪ ಕೇಳಿಂತವರು ಬರುತಿರೆಮತಿಯುತನೆ ಚಿಂತೆಯನು ಬಿಡು ಪತಿವ್ರತೆಗೆ ಹಾನಿಯೆ ಸುಖದೊಳಿಹಳೆಂದುದು ನಭೋನಿನದ
ಎಂದ ವಾಕ್ಯವ ಕೇಳಿ ಭೂಸುರವೃಂದದಲಿ ಮುನಿಯೋರ್ವ ನುಡಿದನುಸಂದ ಪರಮಾನಂದಜ್ಯೋತಿರ್ಮಯನ ವಾಕ್ಯವಿದುಇಂದುಮುಖಿ ದಮಯಂತಿ ನಳನೃಪರೆಂದಿಗೂ ಸುಕ್ಷೇಮಿಗಳು ನೀವಿಂದು ಕಳುಹಿಸಿ ಚರರ ಭೇದಿಸಲೆಂದನಾ ಮುನಿಪ
ಎನಲು ಮುನಿಪನ ಮಾತಿನಲಿ ಅರಮನೆಗೆ ಬಂದು ವಿಶಾಲಚಿಂತೆಯಮನದಲಿರಲಿನನಿಳಿದನಸ್ತಾಂಬುಧಿಗೆ ವಹಿಲದಲಿಜನಪನಾ ರಾತ್ರಿಯಲಿ ನಿದ್ರಾಂಗನೆಯನುಳಿಯಲು ಪೂರ್ವಶೈಲದಿದಿನಪ ತಲೆದೋರಿದನು ಹರೆದುದು ರಜನಿಯಾಕ್ಷಣಕೆ
ಅರಸ ಕರೆಸಿದ ವಿಪ್ರರನು ಭೂಸುರರಿಗೆಂದನು ನೀವು ಕರುಣದಿಧರೆಯೊಳೆಲ್ಲಿಹಳೆನ್ನ ಸುತೆ ದಮಯಂತಿ ನಳನೃಪರಇರವ ಕಾಂಬುದು ಕಂಡು ಕರೆತಂದರಿಗೆ ಕೊಡುವೆನು ಧರೆಯೊಳರ್ಧವನಿರುತವೆಂದುಪಚರಿಸಿ ಕಳುಹಿದ ಭೀಮನೃಪನವರ
ಹರಿದರರಸಾಳುಗಳು ಪಶ್ಚಿಮಶರಧಿ ದಕ್ಷಿಣಶರಧಿ ಪೂರ್ವದಶರಧಿಯುತ್ತರ ಕುರುನರೇಂದ್ರರ ಸೀಮೆ ಪರಿಯಂತಪುರಗಳಲಿ ವನವೀದಿಯಲಿ ತದ್ಗಿರಿಗಳಲಿ ನಾನಾ ದಿಗಂತದೊಳರಸಿ ಕಾಣದೆ ಮುಂದೆ ನಡೆದರು ಹಲವು ದಿವಸದಲಿ
ಪುರನಗರ ಬೀದಿಗಳ ಮಧ್ಯದಿನೆರೆದ ಸಭೆಯಲಿ ಮಾರ್ಗದಲಿ ಸಂಚರಿಸುವವರನು ಕಂಡು ಕೇಳುತ ಬಂದರಲ್ಲಲ್ಲಿಇರವ ಕಾಣದೆ ಬಳಲಿ ಚಿಂತಿಸಿಮರುಗುತವನೀಸುರರು ಭೇದಿಸುತಿರಲು ಮೂವರು ಬೇರೆ ಹೊಕ್ಕರು ಚೈದ್ಯನಗರಿಯನು
ಅಲ್ಲಿ ವಾರ್ತೆಯ ಕೇಳಿದರು ಬೂವಲ್ಲಭನ ಕ್ರತುಸಮಯವೆಂದವರೆಲ್ಲ ಗಮನಿಸಲು ಕಂಡು ಮೂವರು ಕೂಡುತವರೊಡನೆನಿಲ್ಲದೈದಿದರರಮನೆಗೆ ತಮಗಲ್ಲಿ ದಕ್ಷಿಣೆ ತೃಪ್ತಿಭೋಜನವೆಲ್ಲ ಸಿಗಲಹುದೆನುತ ಹೊಕ್ಕರು ಯಜ್ಞಮಂಟಪವ
ಜನಪನವನೀಸುರರ ಮಂತ್ರದಲನಿಲಸಖನಾರಾಧಿಸಲು ನೃಪತನುಜೆಯಾದ ಸುನೀತೆಯೊಳು ದಮಯಂತಿ ಭಾವಿಸುತವನಿತೆಯಿರೆ ಕಂಡನು ಸುದೇವನುಮನದೊಳನುಮಾನಿಸಿದನೀ ಮಾನಿನಿ ಮಹಾಸತಿಯೆನುತ ವಿಸ್ಮಯಗೊಂಡ ಮನದೊಳಗೆ
ಮುಗಿಲು ಮುಸುಕಿದ ಚಂದ್ರಬಿಂಬವೊಪಗಲೊಳೆಸೆವ ಸುದೀಪಕಾಂತಿಯೊಹೊಗೆಯೊಳೆಸಗಿದ ಚಿತ್ರಪ್ರತಿಮೆಯೊ ಹೇಳಲೇನವಳಉಗಿದು ಬಿಸುಟ ವಿಭೂಷಣದ ಮೈಲಿಗೆಯ ಸೀರೆಯ ಮಲಿನತನು ಕಳೆತೆಗೆದು ಕೈಗಲ್ಲದಲಿ ನಿಂದಿರೆ ಕಂಡನಾ ಸತಿಯ
ಇದು ಪತಿವ್ರತಧರ್ಮವಹುದೀಸುದತಿ ತೊರೆದಿಹಳೆಲ್ಲವನು ನೃಪವಧುವ ಕಾಣಿಸಿಕೊಂಬೆನೆಂದು ಸುದೇವ ನಡೆತಂದುಹದನಿದೇನೌ ತಾಯೆ ನಿಮ್ಮಯವದನಕಮಲವು ಬಾಡಿ ಕುಡುಮಾಸಿದುಡಿಗೆಯಲಿಹುದೇನು ಕಾರಣವೆನುತಲಿಂತೆಂದ
ಇಂದುವದನೆ ವಿದರ್ಭಪಟ್ಟಣದಿಂದ ಬಂದೆನು ತಾನು ಭೂಸುರವಂದ್ಯನೆನ್ನಭಿಧಾನ ಕೇಳು ಸುದೇವನೆಂಬುವುದುಇಂದು ನಿಮ್ಮನು ನೋಡ ಕಳುಹಿದತಂದೆ ಭೀಮನೃಪಾಲನಾತನನಂದನಗೆ ತಾ ಸಖನು ಚಿತ್ತೈಸೆನ್ನ ಬಿನ್ನಪವ
ಕ್ಷಿತಿಪ ಭೀಮನೃಪಾಲನಾತನಸತಿಸುತರು ಬಾಂಧವ ಸಹೋದರರತಿಶಯರು ನಿಮ್ಮಯ ಕುಮಾರರು ಕುಶಲರಿಂದಿನಲಿಕ್ಷಿತಿಯನಗಲುತ ನಳನೃಪತಿ ನಿಜಸತಿಸಹಿತ ವನಕೈದಿದುದ ಕೇಳುತಲಿ ನಿಮ್ಮವರೆಲ್ಲ ಶೋಕಾಬ್ಧಿಯಲಿ ಮುಳುಗಿಹರು
ಘೋರತರಶೋಕವನು ಸೈರಿಸಲಾರದಾ ಸತಿಪತಿಗಳಿಬ್ಬರುಸೋರುತಿಹ ಕಂಬನಿಗಳಲಿ ಕರೆದೆಮ್ಮ ಕಳುಹಿದರುಧಾರಿಣಿಯಲರಸುತಲಿ ಬಂದೆವುವಾರಿಜಾನನೆ ನಿಮ್ಮ ಕಂಡೆವುಸೇರಿತೆಮ್ಮಯ ಪುಣ್ಯವೆಂದು ಸುದೇವ ಕೈಮುಗಿದ
ವನಿತೆ ಕೇಳುತ ಶೋಕಜಲದಲಿನೆನೆದು ಬುಧಕುಲತಿಲಕನನು ಬಾರೆನುತ ಮನ್ನಿಸಿ ತನ್ನವರನಡಿಗಡಿಗೆ ಬೆಸಗೊಳಲುವನಿತೆ ನೋಡಿದಳಾ ಸುದೇವನಜನನಿಗರುಹಲು ಬಂದಳಾ ವಿಪ್ರನನು ನೀವಾರೆನಲು ನುಡಿದನು ಬಂದ ಸಂಗತಿಯ
ಕೇಳು ತಾಯೆ ವಿದರ್ಭಪತಿ ಭೂಪಾಲನಾತ್ಮಜೆ ಪತಿಯೊಡನೆ ತನ್ನಾಲಯವನುಳಿದು ವನಕೈದಿದಳೆನಲು ನೃಪ ಕೇಳಿತಾಳಲಾರದೆ ನೋಡಿ ಕರೆತರಹೇಳಿ ಕಳುಹಲು ಬಂದೆನಿಲ್ಲಿಗೆಬಾಲೆ ದಮಯಂತಿಯಳ ಕಂಡೆನೆನುತ್ತ ಕೈಮುಗಿದ
ಕೇಳಿ ಶಿವಶಿವಯೆನುತ ಶೋಕವತಾಳಿ ತೆಗೆದಪ್ಪಿದಳು ಮಗಳೆ ವಿಟಾಳಿಸಿತೆ ಸಿರಿ ರಾಜ್ಯಸಂಪದವೀ ಮಹಾವ್ಯಥೆಯಭಾಳದಲಿ ವಿಧಿ ಬರೆದನೇ ಜನಪಾಲ ನಳನೃಪನೆತ್ತ ಸರಿದನೊಕಾಲಗತಿಯಿಂತಾಯಿತೇ ಹಾಯೆನುತ ಮರುಗಿದಳು
ಬಾಲೆ ಬಿಡು ಶೋಕವನು ಭೀಮನೃಪಾಲನರಸಿಗೆ ತಂಗಿ ತಾ ತನ್ನಾಲಯದಿ ಕಡುನೊಂದೆ ಮಗಳೇ ಸಾಕು ನಮ್ಮೊಡನೆಪೇಳದಿಹರೆ ಸುನಂದನೆಗೆ ಸಮಪಾಳಿ ನೀನೆಮಗೆಂದು ತಳ್ಕಿಸಿಪಾಲಿಸಿದಳತಿಕರುಣದಲಿ ದಮಯಂತಿಯನು ಜನನಿ
ಕಿರಿಯ ತಂದೆ ಸುಬಾಹು ಮರುಗಿದವರಕುವರಿ ದಮಯಂತಿ ನಿನ್ನಯಪುರುಷನಿಲ್ಲದೆ ಚಿಂತೆಯಿಂದೆಲ್ಲವನು ನೀ ತೊರೆದುಕರಗಿ ಕಂದಿದೆ ಮಗಳೆ ತಾನಿಂತರಿದುದಿಲ್ಲಲ ನಿನ್ನ ಪುರುಷನಕರೆಸಿ ಕೊಡುವೆನು ನಾನು ಚಿಂತಿಸಬೇಡ ನೀನೆಂದ
ತರಳೆ ಬಾರೆಂದೆನುತ ಕಣ್ಣಿನೊಳೊರೆವ ಕಂಬನಿಗಳನು ಸೆರಗಿನೊಳೊರಸಿ ದಮಯಂತಿಯನು ಮನ್ನಿಸಿ ಬಂದನೋಲಗಕೆಕರೆಸಿದನು ಭೂಸುರ ಸುದೇವನನಿರುತ ಮಣಿಭೂಷಣಗಳಿಂದುಪಚರಿಸಿ ಕಳುಹಲು ಬಂದ ಭೀಮನೃಪಾಲನೋಲಗಕೆ
ಅರಸ ಕೇಳು ವಿದರ್ಭಪತಿ ಮನಮರುಗುತಿರಲಾ ಸಮಯದಲಿ ಭೂಸುರ ಸುದೇವನು ಬಂದು ಕೈ ಮುಗಿದೆಂದನೀ ಹದನತರುಣಿ ದಮಯಂತಿಯನು ಕಂಡೆನುಹರುಷ ಮಿಗಲಾ ಚೈದ್ಯಪುರದಲಿವರಜನನಿ ಚಿಕ್ಕಮ್ಮನಲ್ಲಿಹಳೆಂದನಾ ವಿಬುಧ
ಕಂಡು ಮಾತಾಡಿದೆನು ಸತಿಯಳಮಂಡೆ ಮಾಸಿದೆ ಮಲಿನ ವಸನದೆಗಂಡನಗಲಿದ ಚಿಂತೆಯಲಿ ಮುಖ ಬಾಡಿ ದೇಹವನುದಂಡಿಸಿದಳನ್ನದಲಿ ಮನ ಮುರಿಗೊಂಡುದಾ ಸತಿಗಿನಿಯನನು ನೆರೆಕಂಡು ಹೇಳುವರಾರೆನುತ ಮರುಗುವಳು ಮನದೊಳಗೆ
ಕೇಳುತರಸನ ವದನಕಾಂತಿ ವಿಶಾಲವಾದುದು ಮನದಿ ಹರುಷವತಾಳಿ ಹೊಂಪುಳಿವೋಗಿ ಭೀಮನೃಪಾಲ ಕರೆಸಿದನುಬಾಲೆಯರ ತನ್ನಾಪ್ತಸಚಿವರಮೇಳದಲಿ ನಿಜಸುತೆಯ ಕರೆತರಹೇಳಿ ರತ್ನಾಭರಣಗಳನ್ನಿತ್ತವರ ಕಳುಹಿದನು
ಬಂದರಲ್ಲಿಗೆ ಚೈದ್ಯನೃಪತಿಯನಂದು ಕಾಣಿಸಿಕೊಂಡರವರನುಮಂದಿರದ ಸುಕ್ಷೇಮವನು ಕೇಳಿದರೆ ಹೇಳಿದರುಇಂದುಮುಖಿ ದಮಯಂತಿಯನು ಕಳುಹೆದು ಭೀಮನೃಪಾಲ ಹರುಷದೊಳಿಂದು ನಿಮಗುಡುಗೊರೆಗಳನು ಕಳುಹಿದನು ಕೇಳೆಂದು
ಅರಸ ಕೇಳು ಸುಬಾಹು ಭೂಪತಿಕರೆಸಿದನು ಮಂತ್ರಿಗಳ ಭೀಮನಪುರಕೆ ಪಯಣವ ಮಾಡಿದನು ದಮಯಂತಿಯನು ಕರೆದುತರುಣಿ ನೀ ನಮ್ಮಲ್ಲಿ ತಿಂಗಳುಹೊರೆದೆ ದೇಹವ ಕಷ್ಟದಲಿಯೆಂದುರುತರದ ಪ್ರೇಮದಲಿ ಕೊಟ್ಟನು ಸಕಲಭೂಷಣವ
ತರಿಸಿದನು ದಂಡಿಗೆಯೊಳಗೆ ಕುಳ್ಳಿರಿಸಿ ಸತಿಯರ ಗಡಣದಲಿ ಮಂದಿರವ ಹೊರವಂಟರಸನೇರಿದ ಗಜದ ಕಂಧರವಮೆರೆವ ನಾನಾ ವಾದ್ಯರಭಸದಿಕರಿ ತುರಗ ಕಾಲಾಳ ಸಂದಣಿಯುರವಣಿಸೆ ನಡೆತದು ಹೊಕ್ಕ ವಿದರ್ಭಪಟ್ಟಣವ
ದೂತರೈದಿದರೊಸಗೆಯಲಿ ಜನಜಾತ ನಲಿಯಲು ಬಂದು ಬೇಗದಿಭೂತಳೇಂದ್ರಗೆ ಕೈಮುಗಿದು ದಮಯಂತಿ ಬಂದಳೆನೆಮಾತ ಕೇಳಿದನದನು ಬಲಸಂಗಾತಲೈತದವರ ಕಂಡತಿಪ್ರೀತಿಯಿಂ ತಕ್ಕೈಸಿ ಕರೆತಂದನು ನಿಜಾಲಯಕೆ
ಅವನಿಪತಿ ಕೇಳಾ ಪುರದೊಳುತ್ಸವವನದನೇನೆಂಬೆನಂದಿನದಿವಸದೊಳಗರಮನೆಯೊಳಾ ದಯಂತಿಯನು ಜನನಿತವಕದಿಂ ಬಿಗಿಯಪ್ಪಿದಳು ಬಾಂಧವರು ಸಂತೋಷಿಸಿದರನಿಬರುಯುವತಿಯರು ನಿಜತನಯರಾಲಿಂಗಿಸಿದರಂಗನೆಯ
ಮಗನ ನೋಡಿದಳಿಂದ್ರಸೇನನತೆಗೆದು ತಕ್ಕೈಸಿದಳು ಕರೆದಳುಮಗಳ ಚಂದ್ರಾಸ್ಯಳನು ತೊಡೆಯೊಳಗಿಟ್ಟು ಮಮತೆಯಲಿಮೊಗವನೀಕ್ಷಿಸಿ ಮೊಲೆಗಳಲಿ ತೊರೆದುಗುವ ಹಾಲಿನ ಜನನಿ ಮಿಗೆ ನೀರೊಗುವ ಕಣ್ಣೀರಿನಲಿ ಸಂತೈಸಿದಳು ನಿಜಸುತರ
ಕಂತುಪಿತನೊಲುಮೆಯಲಿ ಧರಣೀಕಾಂತ ಭೀಮನೃಪಾಲ ಬಾಂಧವಸಂತತಿಯನಾದರಿಸಿ ಕಳುಹಿದನವರನುಚಿತದಲಿಸಂತಸವು ನಿಜಪತಿಯನಗಲಿದಚಿಂತೆಯಲಿ ಮನಗುಂದಿದಳು ದಮಯಂತಿ ನೆನೆಯುತಲಿರ್ದಳಾ ವರಪುರದ ಚೆನ್ನಿಗನ


