IX
Madanatilaka
ಕುಲವಿಭ್ರಂಶೆಯರೊಳ್ ಮನೋಜಸುಖಮಂ ಮಾೞ್ಪಂಗೆ ಪೆಂಪೆಯ್ದದುಜ್ವಲವೃತ್ತಂ ಕಿಡುಗುಂ ಪರತ್ರೆಯೞಿಗುಂ ಶೌಚಂ ಕಿಲುಂಬಕ್ಕುಮಾಕುಲಟಾಸಂಗಮದಿಂದಮಾದತನುರಾಗೋತ್ಸಾಹಮಂ ಪೇೞಲಾಗಿಳೆಯೊಳ್ ಪೂರ್ವಮುನೀಂದ್ರಸಮ್ಮತಮಿದೆಂದಾಂ ಪೇೞ್ದಪೆಂ ಕಾಮಿನೀ
ಪರವಧುವಂ ನಪುಂಸಕಿಯರಂ ಗುರುಭಾರ್ಯೆಯರಂ ಮುನೀಂದ್ರಸೌಂದರಿಯರನಂತ್ಯಜಾತಿಯವಳಂ ವ್ರತಮುಳ್ಳಳನಂಗಹೀನೆಯಂತಿರಿವವಳಂ ಕುಲಕ್ಷಯೆಯನಾ ಕೊಡಗೂಸುಗಳಂ ವಿದಗ್ಧನಾದರದೊಳೆ ಕೊಡಲುಂ ಬಯಸಿ ನೋಡಲುಮಾಗದು ಕೂರ್ತು ಬಂದೊಡಂ
ಮೊಱೆಯಿಲ್ಲದಳಂ ಗುಲ್ಮಿಯದುಱುದುಂಬೆಯ ಪೋರ್ಕುಳಿರ್ದಳಂ ಯೋಗಿನಿಯಂನೆಱೆ ಮೀಹಂದಪ್ಪಿದಳಂಪೆಱತೇನೊ ವಯೋಧಿಕೆಯುಮನಾಗದು ಕೂಡಲ್
ರಂಡೆಯೊಳಂ ಭ್ರಷ್ಟೆಯೊಳಂಮುಂಡೆಯೊಳಂ ವ್ಯಾಧಿಯುತೆಯೊಳಂ ಲಲನೆ ಮರುಳ್ಗೊಂಡಳೊಳಂ ಲಿಂಗಿಯೊಳಂಗುಂಡನೊಳಂ ನೆರೆದೊಡೞಿಗುಮಾಯುಂ ಶ್ರೀಯುಂ
ಪೆಱರಾರುಂ ವಧುವಿಲ್ಲ ಮುಪ್ಪಡಸಿತಿನ್ನೊಂದಕ್ಕೆ ಮೇಣರ್ಥಮೀತೆಱದಿಂದೀ ಸತಿಯಿಂದೆ ಸಾರ್ಗುಮೆನಗಿನ್ನೊಂದಕ್ಕೆ ರೂಪುಳ್ಳವಳ್ಕಿಱಿಯಳ್ ನಂಟರನೇಕರಪ್ಪೊಡಮಿದಕ್ಕುಂ ನಾಲ್ಕು ಭೇದಂಗಳಿಂಮಱುವಾೞಂ ಮನೆವಾೞ್ತೆಯೊಳ್ ಸಲಿಸುವಂ ಪ್ರೌಢಂ ಸರೋಜಾನನೇ
ಕುಲಟಾನಾರಿಯ ನಾಣಮುನ್ನತಿಯುಮೊಳ್ಪುಂ ಶೌಚಮುಂ ಧರ್ಮಮುಂಚಲಮುಂ ಮುನ್ನಮೆ ಕೆಟ್ಟು ಪೋದುದಱಿನಾರಾರೋಲೆಯುಂ ತಾಂ ನಿರುಮ್ಮಳಮುಂತುಂ ಕಡುಕೆಟ್ಟು ಪೋಕುಮದಱಿಂದಂ ಯತ್ನದಿಂ ಕಾಪುಮಾಡಿ ಲಸತ್ಕಾಮಸುಖಂಗಳಂ ಸಲಿಸುಗುಂ ಚಂದ್ರಾಸ್ಯೆಯೊಂದಿಚ್ಛೆಯಿಂ
ಮನಮಂ ಬೇಸಱನಾಸಱಂ ಬಗೆಗಳಂ ಕ್ಷುದ್ರಂಗಳಂ ತನ್ನ ವಂಚನಮಂ ನಿರ್ಗುಣಮುಳ್ಳುದಂ ಸತಿಗೆ ಪೇೞಲ್ವೇಡವಾ ನಾರಿ ಸಂಹನನಂ ಸಂಕಟಮುಕ್ಕೆವಂಗಳುಮನಾ ಭಾವೇಂಗಿತಾನೀಕಮಂಮನದೊಳ್ ತುಂಬಿರೆ ಮಾೞ್ಕುಮೊಪ್ಪಿನೊಳೆ ದಲ್ ಕಾಮೋಚಿತೋಪಾಯಮಂ(?)
ರೂಪಂ ಪೞಿಯದೆ ಕೆಮ್ಮಗೆಕಾಪೞಿದಿಳಿಕೆಯ್ದು ಬೞಿಕೆ ಬಯ್ಯದೆ ಮುಖದೊಳ್ಕೋಪಂಗೆಯ್ಯದೆ ಮಧುರಾಳಾಪದೆ ಸುತ್ತುವುದು ನೆಱನನೆತ್ತದೆ ವಧುವಂ
ಹರಿಣಾಕ್ಷಿಗೆ ಪದೆಪುಂ ರಾಗರತೋತ್ಸಾಹಮುಮನೆಯ್ದೆ ಪಡೆದಿಂ ಬೞಿಕಾತುರನಾಗದೆ ಕೂಡಿರ್ದಾದರಿಪುದು ಚದುರಿಂಗೆ ಬೇಱೆ ಬಿನ್ನಣಮುಂಟೇ
ಮೇಗಂ ತೋಱದೆ ನಲ್ಮೆಯನಾಗಳುಮೊಲಿದಂತೆ ಮಾಡಿ ಸುರತೋತ್ಸವದೊಳ್ರಾಗಮನೆ ಪಡೆದು ಗೆಯ್ವುದುಬೇಗಂ ಮನೆವಾೞ್ತೆಯೊಪ್ಪವಂ ಚದುರವಿಟಂ
ಇದು ಸಕಲವಿಬುಧಜನವಿನುತ ಕಾವ್ಯಾಲಂಕಾರನೀತಿನಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜವಿರಚಿತಮುಮಪ್ಪ ಮದನತಿಲಕದೊಳ್ ಕುಲಸ್ತ್ರೀವರ್ಣನಂ ನವಮಾಧಿಕಾರಂ ಸಂಪೂರ್ಣಂ


