VIII
Madanatilaka
ಲಲನಾಜನದೊಳ್ ಕುಲವಧುಕುಲಟಾಂಗನೆ ವೇಶ್ಯೆಯೆಂದು ಮೂಱುಂ ತೆಱದಿಂಲಲಿತಾಂಗಿಯರಪ್ಪರ್ ಕೋಮಲೆ ನೀನಿನ್ನಿವರ ಭೇದಮಂ ಕೇಳ್ ಪೇೞ್ವೆಂ
ರತಿಗೆಣೆಯೆನಿಸಿದ ಗುಣಸಂತತಿಯುಳ್ಳಾ ದೇವತಾಂಶಕೆಯನಂತಂತಾಸತಿಯಂ ಕೊಂಡಾಡುಗೆ ತತ್ಪತಿಗಂ ಧರ್ಮಾರ್ಥಕಾಮಭೋಗಂ ನೆಗೞ್ಗುಂ
ಸತಿ ಗುಣವತಿ ದೊರೆಕೊಂಡೊಡೆಪತಿಗಾ ಸ್ತ್ರೀ ರತ್ನಮೆಂಬ ಪೆಸರಂ ಪಡೆಗುಂಸತಿ ದುರ್ಗುಣೆ ದೊರೆಕೊಂಡೊಡೆಪತಿಗಾ ಸ್ತ್ರೀ ವ್ಯಾಧಿಯೆಂಬ ಪೆಸರಂ ಪಡೆಗುಂ
ಇದುವೆ ದಂಡಕಮಕ್ಕುಂ-
ದೂಱುತ್ತಿರ್ಪಳ್ ಪೆಂಪಂತೋಱಳ್ ತಡಮಡಿಸಿದೊಡಣಮಱಿದಿನಿಸಂ ತಾಂನೂಱೆಂಟಂ ಬಯ್ವಳ್ ತಾಂಬೇಱೊಂದಣಕದೆ ಸೆಣಸುವಳೊಡನೆ ಕಿನಿಸುವಳ್
ಪಾಱೆಂದುಂ ಕಂಡಿರ್ಪಳ್ಜಾಱೇಂ ಕುಹಕವೊಡರಿಪಳನುಭವಿಪಳಳಿಪಿಂದೂಱಿಸುವಳ್ ಸುಯ್ವಳ್ ಪೊಯ್ವಳ್ ತಾಂ ಕುಲವಧುವಾದೊಡೆ ಕುಲವನಿತೇ(?)
ಧರ್ಮಕ್ಕರ್ಥಕ್ಕತಿಥಿಗೆಪೆರ್ಮೆಯ ಪಿತೃಗಳ್ಗೆ ದೇವಕಾರ್ಯಕ್ಕೆಂದುಂನಿರ್ಮಳಸಂತತಿಗಳ್ಗಂಕೂರ್ಮೆಯ ಕುಲವನಿತೆ ಮುಖ್ಯವಾಕೆಯೆ ಪೂಜ್ಯಂ
ಗುರುಗಳ ತಾಯಿತಂದೆಯ ಮಹಾಮುನಿಪರ್ಕಳ ವಿಪ್ರವರ್ಗದಿಷ್ಟರ ನಿಜಬಾಂಧವಪ್ರಕರದಗ್ನಿಯ ಸನ್ನಿಧಿಯಲ್ಲಿ ತಂದ ಸತ್ಪುರುಷನನೊಲ್ಲದನ್ಯರೊಡಗೂಡಿ ಗುಣೋನ್ನತಿಗೆಟ್ಟು ಗೋತ್ರಮಂನರಕದೊಳೞ್ದಿ ಬೞ್ದ ವಧು ಸಜ್ಜನಮೇ ತರಳಾಯತೇಕ್ಷಣೇ
ಕಿಸುಗುಳೆ ಕಳೆ ಮೂರ್ಖೆ ಶಠೆ ಪಾಪಿ ಕುರೂಪಿಯಸತ್ಯವಾದಿ ಸಾಹಸಿಗೆ ಕನಿಷ್ಠೆ ನಿಷ್ಠುರೆ ಮದೋದ್ಧತೆ ಸಂಚಳೆ ಪಾಱು ಚಾರಣಂಪಿಸುಣೆ ದುರಾತ್ಮೆ ದುಶ್ಚರಿತೆ ದುರ್ಭಗೆ ದುರ್ಮತಿ ದುಷ್ಟೆ ದುಸ್ಥೆ ದುರ್ವ್ಯಸನೆ ದುರಾತ್ಮೆಯಪ್ಪ ವಧು ಸಜ್ಜನಮೇ ತರಳಾಯತೇಕ್ಷಣೇ
ನಯವಿದೆ ಶೌಚೆಯಲ್ಪವಚೆ ಸಾಧು ಸುರಾಳಿಸುಪೂಜ್ಯೆ ಸಂತತಂಭಯಯುತೆ ಪೂರ್ಣಭಕ್ತೆಯನುಕೂಲೆ ವಿದಗ್ಧೆ ಮನೋಭವೋತ್ಸವಪ್ರಿಯೆ ಮನದನ್ನಳುಂ ಮನವನಿರ್ಕುೞಿಗೊಳ್ವ ಸುನಿಃಪ್ರಪಂಚೆ ನಿರ್ಭಯಯುತೆ ದೇವಬಂಧುಜನವತ್ಸಲೆ ಸಜ್ಜನನಾರಿ ಮತ್ಪ್ರಿಯೇ
ಅಱಿಯದೆ ಪೆಱರುಂತೆ ಜಱುಚುವರ್ಸುರತಮೇತಱ ಲೇಸೊ ಕಷ್ಟಂ ಮಹಿವಳಯದೊಳೆಂದುಂನೆರೆಯೆ ಸಜ್ಜನದ ರತಿ ಲೇಸು
ಅನಿವಾರ್ಯಮಬಾಹ್ಯಮನಂಜನಮಚ್ಯುತಮಾನುಕೂಲ್ಯಮವಿರುದ್ಧಮದೋಷನಮನವದ್ಯಮನಿಂದಿತಮನಾಕುಳಂ ಕುಲನಿತಂಬಿನೀಸಂಭೋಗಂ
ನಯನಮೋಹನಮೇಳಮನೊಳ್ಪಂ ನಲ್ಮೆಯನೞ್ಕಱನಾಗಳುಂಪ್ರಿಯದೆ ಮಾತಿನ ಭಂಗಿಗಳಂ ಕೊಂಡಾಟಮನೊಪ್ಪುವ ಕೂಟಮಂಬಯಸಿ ಬಾಲೆಯ ಚಿತ್ತಮನೆತ್ತಂ ಸಂತಮಡಂಗಿಸುವೋಜೆಯುಂನಿಯತದಿಂದಱಿವಾತನೆ ಕಾಮಂ ಭಾವಿಸು ಪಂಕರುಹಾನನೇ
ವಂಚಿಸದೆ ಪುಸಿಯದಳಿಪದೆಸಂಚಳಿಸದೆ ಪುರುಡುಗೆಯ್ಯದುಱದಿರದೆ ಕರಂಬಂಚಿಸದೞಲಿಸದುೞುಗಿಸುವಂ ಚದುರಂ ಸಜ್ಜನಂಗಳಂ ಮೃಗನಯನೇ
ಮನವಾರ್ತೆಯ ತೋಟಿಯೊಳಂಜನಪದಗಮನಂಗಳೆಡೆಯೊಳಂಗಜರಾಗಂಜನಿಯಿಕ್ಕುಮೆಂದು ಕೆಲರ್ ಸಜ್ಜನದಿಂ ಮನೆವಾರ್ತೆಗೆಯ್ಸಲೊಲ್ಲರ್ ಚದುರರ್
ಉಂತುಂ ಪೆಂಡಿರಮುಖ್ಯತೆಯೆಂತುಂ ಗುಣಮಾಗಲರಿದಯಸಮುಮದುೞಿಗುಂಭ್ರಾಂತೇಂ ಲೋಭತೆಯುಂ ಪೞಿಯುಂ ತನಗಿಂ ಪೊರ್ದದಿರ್ಕುಮೇ ಚಚ್ಚರದಿಂ
ಗುರುಗಳ ನಂಟರ ಕೆಳೆಯರಪೊರೆವಾಳ್ದನ ಮೆಚ್ಚದವರ ಸವತಿಯ ಕೆಲದೊಳ್ಪರಿಭವಿಸಲ್ ನೆಱನೆತ್ತಲ್ಕರಮೞಲಿಸಲಾಗದಾತ್ಮಸತಿಯಂ ಚದುರಂ
ಸುದತಿಯರಾರುಂ ಸಂಸರ್ಗದ ಕತದಿಂ ದೋಷಮಂ ಗುಣಂಗಳುಮಂ ಮಾಣದೆ ಕೈಕೊಳ್ವುದಱಿಂದಂಮೊದಲೊಳ್ ಯೋಜಿಸುಗೆ ನೀತಿಯಂ ಧರ್ಮಮುಮಂ
ಲತೆ ಮೊದಲಾಗಿ ಸಮೀಪಸ್ಥಿತ ವೃಕ್ಷಮನೆಂತುಟಾದೊಡಂ ಪರ್ಬುಗುಮಾಸ್ಥಿತಿಯಿಂ ಸತಿ ಸಾಂಗತ್ಯದಕತದಿಂ ಕೆಟ್ಟಾರೊಳಾದೊಡಂ ಪುದುವಾೞ್ಗುಂ
ಮತಿವಂತೆಯ ಧರ್ಮಜ್ಞೆಯಪತಿಭಕ್ತೆಯ ಸಂದ ಶೌಚವಂತೆಯ ಸತ್ಯಾನ್ವಿತವಚನೆಯ ಕಥೆಯನೆ ಪೇೞ್ಗತಿಶಯದಿಂ ತನ್ನ ಸತಿಗೆ ಪಂಡಿತನಪ್ಪಂ
ಗುಣಮುಂ ಸುಂದರರೂಪಮುಂ ವಿಭವಮುಂ ಸೌಭಾಗ್ಯಮುಂ ಭಾಗ್ಯಲಕ್ಷಣಮುಂ ಚಾರುಚರಿತ್ರಮುಂ ಕುಲಮುಮೊಳ್ಪುಂ ಸತ್ಯಮುಂ ಧರ್ಮಭೂಷಣಮುಂ ಸಂದ ಪತಿವ್ರತಾಮಹಿಮೆಯುಂ ದಾನತ್ವಮುಂ ಬಂಧುಲಕ್ಷಣಮುಂ ಪೆಂಡಿರೊಳಕ್ಕುಮೆಯ್ದೆ ಪುರುಷಂ ಯೋಜಿಪ್ಪುದೊಂದೋಜೆಯಿಂ
ಸತಿಯಂ ವಿಚಾರಿಪಾಗಳ್ಯತಿ ಗಂಗೆಯೊಳವನಿಪತಿ ಭಗಂದರದೊಳ್ ಮುಂಪ್ರತಿದಿನಮಿಟ್ಟನ್ನಮನುಂಡ ತೆಱಂ ತನಗಕ್ಕುಮದಱಿನಗುೞ್ದೆಡಪುವುದೇ
ಜನಿಯಿಸಿತಿಲ್ಲದ ರಾಗಮನಿನತನುಜೆಗಮಂತೆ ಪತಿಯ ಕೃತಮಂ ಸತಿ ಪೊಲ್ಲೆನಿಕುಮತಿ ಘನತಿ ಸರ್ಪಂಖನತಿಯ ಕಥೆಯಂ ಮೃಗಾಕ್ಷಿ ನೀಂ ಕೇಳ್ದಱಿಯಾ
ನಿನಗೆ ಬೇಟಂಗೊಂಡಿರ್ದಪಳ್ ನಯದಿಂ ಕೇಳ್ ಕಡುಚೆಲ್ವೆ ರತಿಯಲ್ಲಿ ರತಿಯನ್ನಳೆನಿನಗೆ ಬೇಟಂಗೊಂಡಿರ್ದಪನ್ ಕಡುಚೆಲ್ವಂ ಕಾಮದೊಳ್ ಕಾಮನನ್ನಂಮನದೊಳಿನಿಸುಂ ಕರುಣಮಿಲ್ಲದೊಡಮೆನ್ನೊಳೊಂದು ಚೋದ್ಯದ ರತಿಸುಖಮಾವಿನುತ ಧಾಮಸಂಯೋಗಮುಂಟೆಂದಿಂತು ದೂದವರ್ ಕಲಿಸುವರುಪಾಯಮಂ
ಕುದಿರ ರೂಪಿನ ದೆಯ್ವದೊಳಂ ಕೇರೋವರಿಯೊಳ್ ನೆಲೆಮಾಡದೊಳ್ಪುದಿದ ಕಾಂಡಪಟಂಗಳೊಳಂ ಮೇಲ್ಗಟ್ಟಿನೊಳಟ್ಟದ ಕೋಣ್ಗಳೊಳ್ಬಿದಿರ ಪೋೞಲೊಳಂ ನೆಲೆಗಲ್ಲೊಳ್ ಭೂಗೃಹದೊಳ್ ಕುಱುಪಿಟ್ಟು ಮೇಣ್ಸುದತಿಯರ್ಕಳ ರೂಪಿನೊಳಂ ಮೇಣ್ ವಂಚಿಸಿ ಪಾಣ್ಬನೊಳಾಡುವರ್
ತನ್ನ ರೂಪಿನ ಪೋಲ್ವೆ ಬರ್ಚಿಸಿ ದಾಸಿಯಂ ಪಡವೇೞ್ದು ತಾಂಚೆನ್ನನಲ್ಲಿಗೆ ದಾಸಿಯಂದದಿ ಪೋಗಿ ರಾತ್ರಿಯೊಳಾಡುವರ್ಭಿನ್ನಪಂಕಜವಕ್ತ್ರೆ ಕೇಳ್ ವಧುವರ್ಕಳಾರುಮನಾವಗಂಬಿನ್ನಣಂ ಪೆಱತೇನೊ ನಂಬದೆ ನಂಬಿದಂತೆಸೆವಂ ವಿಟಂ
ಮನುಮತಮಂ ವೇದಾಂತಾದ್ಯನೇಕಧರ್ಮಾಗಮಂಗಳಂ ಕಲ್ತಿರ್ದಾಮುನಿಪರುಮಳಿಪುವರೆಂದೊಡೆವನಿತೆಯರಳಿಪುವುದದೊಂದು ಚೋದ್ಯಮೆ ಜಗದೊಳ್
ಗೊರತಿಯ ಕಂತಿಯ ಕುಂಟಣಿಯರ ಮುಂಡೆಯ ಮಾಲೆಗಾರ್ತಿಯಸಗಿತಿ ಯೋಗೀಶ್ವರಿಯರ ಕಿಡಿಕಿಯ ನಾದಿತಿಯರ ಮುಂದಂ ನುಡಿಯಲೀಯಲಾಗದು ಮಧುವಂ
ಗೊರವರ ಸವಣರ ದೊಂಬರತಿರಿವರ ತೆಲ್ಲಿಗರ ವಾದದವರ್ಗಳ ದೆಯ್ವಜ್ಞರ ಖಳರ ಜೂದುಗಾಱರನೆರವಿಗಳಂ ಪೊರ್ದಲೀಯಲಾಗದು ವಧುವಂ
ಬಳರಿಯ ನೋಂಪಿಗೆ ಬೀಡಿಗೆಮುಳಿವರ ಮನೆಗಳ್ಗೆ ಮದ್ಯಪಿಗಳಲ್ಲಿಗೆ ಕೋಮಳೆಯಂ ಪೋಗಲ್ಕಿತ್ತೊಡೆಬಳರಿಗೆ ಪುಯ್ಯಲ್ಚ ಬಂದ ಕುಱಿಯಂತಕ್ಕುಂ
ಕೊೞಲ ಬೆದಂಡೆಯ ಪಗರಣದೞಿಗಳ ವರ ದೆಯ್ವಮಾಡುವವರ್ಗಳ ಮಾತಿಂಗೆಳಪರ ಪರಜಾತಿಯವರತಳಿಗಳ ದೆಸೆವೋಗಲೀಯಲಾಗದು ವಧುವಂ
ಬಡತನಮಾದೊಡಂ ಸತತಮೊಲ್ಲದೊಡಂ ಸಮಸತ್ವರೂಪಮಂಪಡೆಯದೊಡಂ ಕರಂ ಪಲವುಕಾಲಮಗಲ್ದೊಡೆ ಮುಂದೆ ಕಾಪು ಮಾಣ್ದೊಡೆಮಣಮೇವಮುಂ ಭಯಮುಮಾಳ್ದೊಡಮಾಗಳೆ ಮೃಗ್ಯನಾದೊಡಂಮಡದಿಗಮನ್ಯಚಿತ್ತಮೆ ದಲಕ್ಕುಮಿದಂ ಬಗೆ ಸೋಪದೇಶಮಂ
ದೂತರುಂ ಕ್ಷಣವುಮೇಂ ಕರಂ ಮನಃಪ್ರೀತಿಯಂ ಪೆಱದೆ ದಲ್ ಪತಿವ್ರತಾನ್ವೀತೆಯರ್ ಕುಲವಧೂಜನಂಗಳೇಮಾತೊ ಪೇೞ್ ಶುಚಿಗಳಾರ್ ನಿರಂತರಂ
ಪಲಬರೊಡನಿರ್ಪ ಬೆಲೆವೆಣ್ಗಳ್ ತಾಂ ಬಯಸರಾವಗಂ ಪೆಱನನೊರ್ವನಂಕುಲವಧೂವ್ರಜಂ ಬಯಸುಗುಮೆಂತೆನೆ ಮಧುವನುಂಬರ್ ಕಯ್ಪೆಗಳಂಚಲದೆ ಬಯಸುವರಂತೇನುಮಾದೊಡಂ ಪರಪುರುಷರತಿಯಂ ಕಾಂಕ್ಷಿಸುತುಮಿರ್ಪರ್ಜಲಜವದನೆ ಕೇಳದಱಿಂದಂ ಸತಿಗೆ ಯತ್ನದಿಂ ಕಾಪಂ ಮಾಡುಗೆ ಚದುರಂ
ಲಲನೆಯರ್ಗೆ ರೂಪಹೀನಂಕುಲಹೀನಂ ವೃದ್ಧನೆಯ್ದೆ ಪೞೆಯಂ ಶುಚಿ ಮೆಯ್ಗಲಿ ದಕ್ಷನೆನಿಸುವವನಂನಿಲಿಸುಗೆ ಕಾಪಿಂಗೆ ಬುದ್ಧಿವಂತನನೆಂದುಂ
ರತಿಹೀನ ಪೆೞವ ಕುಬ್ಜಂಮತಿವಂತಂ ನಾಡೆ ವೃದ್ಧ ಕೃಶ ಗರ್ಹಿತನುಂಸತಿಯಂ ಕಾಯಲ್ಕಕ್ಕುಂರತಿರಾಗಿಗಳುೞಿದ ಕಾಪಿನಿಂ ನಿಂದಪರೇ
ಸರಾಗಚೌಪದಿಗೆಯುಮಕ್ಕುಂ-
ರತಿಹೀನಂ ಪೆೞವಂ ಕುಬ್ಜಂಮತಿವಂತಂ ಕೃಶನತ್ಯಂತನೃತವಾಕ್ಯಂ ಸತಿಯಂ ಕಾಯಲ್ಕತಿಶಿಷ್ಟಂ ಪೆಱತೇಂ ಶ್ರೇಷ್ಠಂ
ರೂಪಸ್ವಭಾವಯುತೆಗೊಳ್ಳಿದ ಕಾಪಿನಾಳ್ ತಾಂರೂಪಸ್ವಭಾವಯುತನಲ್ಲದ ಪಾಣ್ಬನಿಂದಂಕಾಪಾಳಮಾಳಮಱಿಯೆಂದಿನಿಯಳ್ಗೆ ಪೇೞ್ದಂಕಾಪಾಳಶೂಲಾಯುಧಪಾದಸರೋಜಭೃಂಗಂ
ಚೆನ್ನಿಗನಂ ಯೌವನನಂಕೊನ್ನಿಗನಂ ಪಾಣ್ಬನಂ ಕರಂ ಸೊಬಗನುಮಂತನ್ನಯ ಸುದತಿಗೆ ಕಾಪಿಟ್ಟನ್ನಲ್ಲಳೆ ತನ್ನ ಮನೆಯೊಳಿಟ್ಟಂ ಕಿಚ್ಚಂ
ಚಚ್ಚನೆ ಗುಜುಗುಜು ಲೋಗರೊಳಚ್ಚೊತ್ತಿದ ತೆಱದಿ ನೆರವುತೊೞ್ತಿರೊಳಾಗಲ್ಪರ್ಚುವ ಕಾಮಿನಿ ತಪ್ಪದೊಡರ್ಚುವಳಟ್ಟಟ್ಟೆ ಪೆಱರೊಳಾದೊಡಮಬಲೇ
ಏಗೆಯ್ದುಂ ಕೂರ್ಪಂತೆವೊಲಾಗಿರ್ಪರ್ ಪಾಣ್ಬೆಯರ್ಕಳುಂ ತಪ್ಪಲ್ತುದ್ಯೋಗಂಗೆಯ್ದವಳುಂ ಕಾರ್ಯಾಗಮದಾಪೇಕ್ಷೆಯಾಕೆಯುಂ ಮೃಗನಯನೇ
ಪರಪುರುಷಸಮಕ್ಷದೆ ಕಚಭರಮಂ ನೀವುವೊಡೆ ವಾಮಕರದಿಂ ಮುಡಿಯಂಹರಿಣಾಕ್ಷಿ ಬಿಟ್ಟು ಮುಡಿವೊಡೆನಿರುತಂ ನೀಂ ಪಾಣ್ಬೆಯೆಂದು ಬಗೆಗಾ ವಧುವಂ
ಉಡೆಯಂ ಸಡಿಲಿಸಿವುಡುವೊಡೆನಡೆ ನೋೞ್ಪೊಡೆ ತನ್ನ ತಲೆಯುಮಂ ಕಿವಿಯುಮನಂತಡಿಗಡಿಗೆ ತುಱಿಸಿಕೊಳ್ವೊಡೆಪಡಿಮಾತೇಂ ನಿರ್ವಿಚಾರದಱಿ ಪುಂಶ್ಚಲಿಯಂ
ಬಾಲಾಲಿಂಗನ ಚುಂಬನವಾಲೋಕಂ ಹಾಸ್ಯ ತಕ್ಕೆ ಸನ್ನೆ ಪದಿರ್ ಬಹ್ವಾಳಾಪಂ ಪುಟ್ಟುಗುಮಱಿಲೋಲೇಕ್ಷಣೆ ಪಾಣ್ಬನಿದಿರೊಳಸತಿಗಮೋಘಂ
ವಿವಿಧಾನ್ನಪಾನ ಖಾನಾದಿ ವಸ್ತ್ರ ಲೇಪನ ಸುಗಂಧ ಕುಸುಮಾದಿಗಳಂನೆವಮಿಟ್ಟು ಪೆಱರ್ಗೆ ಕೊಡಲಟ್ಟುವ ಪಾಣ್ಬೆಯ ತೆಱನನಱಿಗೆ ಪಾಲಿಸೆ ಚದುರಂ
ಮೊಲೆಯಂ ತೋಳಂ ನಾಭಿಯನಲಘುನಿತಂಬಮನನೇಕಭೂಷಣಮಂ ಭ್ರೂವಿಲಸಿತಮಂ ತೋಱುವೊಡಂಸುಲಭಾಲ್ಪದ್ರವ್ಯವಸ್ತುವಂ ಬೇಡುವೊಡಂ
ಕೇಂಕರಿಸಿಯುಗುೞ್ವೊಡಂ ಬಿಡೆಮಾಂಕರಿಪೊಡಮಾಸನಪ್ರಶಯ್ಯಾತಳದಿಂದಂ ಕಾಂತೆಯಿೞಿದೊಡಂ ಮೆಯ್ಯಂ ಕೆಮ್ಮಗೆ ಮೂರಿಯಿಡುವೊಡಂ ಪರ್ಚುವೊಡಂ
ಇರವಂ ಬಯಸುವೊಡಂ ಪರಪುರುಷಸಮಕ್ಷದೊಳವೆಲ್ಲವಸತೀಭಾವಂಪುರುಷಂಗಿಂತಿನಿತುಮನಾದರದಿಂ ಸಲೆ ತೋಱೆ ರಕ್ತಭಾವಂ ವನಿತೇ
ಪರಪುರುಷರಲಿಂಗಿತಮಂನಿರಂತರಂ ಮಱಸಲೆಂದು ತನ್ನಯ ಸತಿಗಂಪರನೆನಿಪೆಱೆಯನನಾ ಬೊಮ್ಮರಕ್ಕಸಂ ಕ್ಷೇತ್ರಪಾಲನೆಂಬರ್ ಪೆಂಡಿರ್
ಎಲವೊ ನಲ್ಲನೆ ಕೇಳೊಂದು ಚೋದ್ಯಮಂ ಮೊಲೆಯಂ ಕೂಸುಣದು ಪಯನೀಯದುತಲೆಬೇನೆಯದು ಮೊಕ್ಕಳವಾಯಿತೀಗಳ್ ನಿನ್ನ ಮೊಗಂ ಕಂದಿ ಕುಂದಿರ್ದುದುಪಲವು ಕನಸಂ ಪೊಲ್ಲವಂ ಕಂಡೆಪೆಂ ತೈತೈಯನೆಱೆಯಪಂ ಮನೆಯ ದೆಯ್ವಂಜಲಜಕ್ಕಿಯರ್ ಸೋಂಕಿದರೆಂದಿಂದು ನೋಂಪಿಯ ನೆವದಿಂ ದೂರ್ತುಗೆಯ್ವರ್ ಸತಿಯರ್
ಪುಸಿ ಕಿಟ್ಟಮೆಯಂ ಮಾೞ್ಕುಂನಿಸದಂ ಕಿಟ್ಟಮೆಯನೆಯ್ದಲೊಗಸುಗುಮತ್ತಂತೆಸೆಗುಂ ತನ್ನಂ ತೇೞ್ವಾವು ಸೋಂಕಿತೆಂದೞ್ತು ಜಾರೆ ತೆಱಪಂ ಪಡೆಗುಂ
ಅಸವನೆಗೆ ಕೆಯ್ಗೆ ತೋಂಟಕ್ಕೆ ಸಮ್ಮಗಾಱಗೃಹಕ್ಕೆ ಪೊಲವನೆಗಳ್ಗಾಂಬೆಸವೋದೆನೆಂದು ಪುಂಶ್ಚಲಿಸುಸಿಲ್ಗೆವೋಗುತ್ತಮಿರ್ಕುಮದನಱಿಯಬಲೇ
ಬಡತನಕೆ ಚಿಂತೆ ಪಣಮುಳ್ಳೊಡೆ ತನಗತಿದರ್ಪಮನ್ವವಾಯಕ್ಕೆ ಗುಣಂಕಡುಲಲ್ಲೆಗೆ ಮುಳಿಸು ಸತಿಗೆವಿಡಂಬಮಿವು ಸಹಜಮಲ್ತೆ ಭಾವಿಪೊಡೆಂದುಂ
ಕೂಡಲ್ಪಡೆಯದೊಡಂ ಮಾತಾಡಿ ಮೊಗಂ ನೋಡಿಯವನ ಗುಣವರ್ಣನಮಂಪಾಡಿಸಿ ತಣಿಗುಂ ಮಾತಿಂನಾಡಾಡಿಯ ಪಾಣ್ಬೆಗೊಳವು ಕುಟಿಲಮನೇಕಂ
ನಗೆಯಿಂ ನೋಟದಿನೊಳ್ಪಿನಿಂ ವಿಭವದಿಂ ಸೌಂದರ್ಯದಿಂ ಧೈರ್ಯದಿಂಬಗೆಯಿಂ ಮೆಲ್ಪಿನಿನಿಂಬುಕೆಯ್ವ ರತಿಯಿಂ ಚಾತುರ್ಯದಿಂ ಶೌರ್ಯದಿಂಮಿಗಿಲೀತಂ ಪೆಱರ್ಗೆಂದು ತನ್ನ ವಧು ಮೆಚ್ಚುತ್ತಿರ್ಪಿನಂ ಮಾೞ್ಕೆ ಭಾಷೆಗಳಿಂ ಪ್ರೇರಕದಿಂ ಕುಲಾಂಗನೆಗೆ ಹೃತ್ಸಂತೋಷಮಂ ಸದ್ಬುಧಂ
ಒರ್ಬಳೆ ಸಾಲ್ಗುಂ ಸಜ್ಜನಮಿರ್ಬರ್ ನಿರ್ಬುದ್ಧಿಗಕ್ಕುಮತ್ತಂ ಮೇಣ್ ಪನ್ನಿರ್ಬರುಮಂ ಕುಲವಧುವಂನೂರ್ಬರುಮಂ ಪಡೆದೊಡೆ ಕರಂ ಸುಖಂಬಡೆದಪನೇ
ನರಪತಿಗಪರಿಮಿತಂ ಪೆಂಡಿರದಂತೆನೆ ರಾಜಕಾರ್ಯಸಂವರಣಾರ್ಥಂದ್ವಿರದಗತಿವನಿತೆಯರನೇಕರಂ ಧರೆಯೊಳುಚಿತಮೆಂದಱಿ ಕಮಲಮುಖಿ ನೀಂ
ಅನುಪಮಗುಣಗಣಯುಕ್ತೆಯನನುಕೂಲೆಯನಧಿಕಪುಣ್ಯಲಕ್ಷಣೆಯಂ ಮಾನಿನಿಯಂ ಸುರೂಪವತಿಯಂಜನಪಂ ಮಾೞ್ಕೆಂದುಮಾ ಕುಲಾಂಗನೆ ಸತಿ ಕೇಳ್
ನಿರುಪಮಲಕ್ಷಣಯುತೆಯರ್ಸುರೂಪೆಯರ್ ನೃತ್ಯಗೀತವಾದ್ಯಾದಿ ಕಳಾಪರಿಣತೆಯರನೂನಾಂಗಿಯರರಸಿಯರತಿಮುಗ್ಧೆಯರ್ಕಳಾಗಲೆ ವೇೞ್ಕುಂ
ಲಲನೆಯೊರ್ವಳೆ ವರನೊರ್ವನಾಗಿಯುಂ ಸುರತದೊಳಾಕೆಯಂ ತಣಿಪಲಾಱಂಪಲಬರಬಲಾಜನಂಗಳ್ಗೆ ವರನೊರ್ವನಿನ್ನುರೆ ತೃಪ್ತಿಯೇನಾದಪುದೇಜಲಜವದನೆಯರ್ ಬಾಲೆಯರುಂತುಂ ನಿರೋಧಗಾಮಿಗಳಪ್ಪ ಕಾರಣದಿಂಕುಲಮನೊಳ್ಪುಮಂ ಬಗೆಯದೆ ಲೌಲ್ಯೆಯಂ ತುರಿಪಂ ಕಾಪಂ ಮಾೞ್ಕೆ ಯತ್ನದಿಂ
ಅನುಪಮಮವರ್ಗಳ ಕಾಮಂಮನಕ್ಕೆ ಸುಖಮಿಲ್ಲ ನೆರೆಯೊಳಿರ್ಪುದಱಿಂದಾವನಿತೆಯರಿನಪಾಯಂಗಳ್ಜನಿಯಿಕ್ಕುಮಱಿದಾತ್ಮವಂತನಪ್ಪುದು ಭೂಪಂ
ಮಜ್ಜನದಡಪದ ಕರಗದಸೆಜ್ಜೆಯ ಬಾಣಸಿನ ಬೆಸನುಮಂ ಕೋಶಮುಮಂಬೆಜ್ಜತನದೆಡೆಯುಮಂ ಪೆಱತುಜ್ಜುಗಮಂ ಕೂರ್ತು ವಧುಗೆ ಕೊಟ್ಟಂ ಕೆಟ್ಟಂ
ಸೂಳೆ ಪಲರ್ವಿಟರೊಳ್ ನೆರೆದಿರ್ದುಂಡಾಳಿಪಳೊಲ್ವವೊಲೆಲ್ಲರುಮಂ ಭೂಪಾಲನುಮಂತೆ ನಿಜಾಂಗನೆಯರ್ಗಂಸೂಳೆಗನಾಗೆ ಸುಖಂ ದೊರೆಕೊಳ್ಗುಂ
ಒಲವೆಂದುಂ ನಿಲಲಱಿಯದುಕೆಲವು ದಿನಂ ನಡೆಗುಮದಱಿನೊಲ್ದಾಗಳ್ ತಾಂಲಲನೆಗೆ ಪುರುವೃದ್ಧಿಯುಮಂಪಲವಾಯಮುಮಿತ್ತೊಡದುವೆ ತಾಂ ಬಗೆಯಲ್ತೇ
ಕಡುಗೂರ್ತೊರ್ಮೆಯೆ ಮೊಕ್ಕಳಂ ಕನಕಮಂ ತಾನೀಯಲಾಗಲ್ ಕರಂಕೊಡುಗತ್ಯುತ್ತಮವಸ್ತ್ರಮಂ ಫುಸೃಣಮಂ ಕಸ್ತೂರಿಯಂ ಪುಷ್ಪಮಂಮುಡಿಯಂ ಚಂದನಮಂ ಫಲಾವಳಿಗಳಂ ಕರ್ಪೂರಮಂ ನಿಚ್ಚಲುಂಪಡಿಮಾತೇಂ ಪರಿರಕ್ಷಮಾಗಿ ವನಿತಾಸಂಘಕ್ಕೆ ಭೂಪಾಲಕಂ
ಪಲತೆಱದ ತೊಡುಗೆ ಬಿಡುದಂಬುಲಮೊಳ್ಳುಣಿಸುಗಳನೆಯ್ದೆ ಸಲಿಸುಗೆ ಕೂರ್ತಂತಲಸದೆ ಸಂಭೋಗದೊಳಂಪಲವುಂ ಬಿನದದೊಳವರ್ಗೆ ಕಳೆವುದು ಪೊೞ್ತಂ
ಅವರವರ ಸೂೞ ಪಾೞಿಯಸವಿಶೇಷಾನುಕ್ರಮಂಗಳಂ ದಾಯಮನುಕ್ಕೆವಿಸದೆ ಮನೆವಾೞಂ ಬಾಳ್ವವನೆ ಕರಂ ಚದುರನವನಿವಳಯದೊಳೆಂದುಂ
ಅವರ್ಗೆ ಬಹುವ್ಯಾಪಾರಮುಮವರ್ಗೆ ಪರಿಸ್ಪಂದಮುಂ ಪರಿಗ್ರಹಮುಂ ಬೇಡವರಂ ಸಂಕುಚಿತದೆ ಸಂತವಿಡಿಸಿ ಸಂತುಷ್ಟರಾಗೆ ಮಾೞ್ಪುದು ನರಪಂ
ನಸು ಸೋಂಕಿಯುಮೊಲ್ದುಂ ಬಂದೆಸಗುವೊಡಂ ನೋಂಪಿ ಋತುಮಹೋತ್ಸಾಹದೊಳಂಪಸದನದೊಳಮೊಡಗೂಡುವುದಸಿಯಳ ಸೂೞಲ್ಲದೆನ್ನದೆಂದುಂ ಚದುರಂ
ಇದು ಸಕಲವಿಭುದಜನವಿನುತ ಕಾವ್ಯಾಲಂಕಾರನೀತಿನಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜ ವಿರಚಿತಮುಮಪ್ಪ ಮದನತಿಲಕದೊಳ್ ಪುಣ್ಯಾಂಗನಾವರ್ಣನಂ ಅಷ್ಟಮಾಧಿಕಾರಂ ಸಮಾಪ್ತಂ


