X
Madanatilaka
ಪಲರ್ಗಂ ಕಾಮಸುಖಾರ್ಥಮಿತ್ತಿನನೊಳಿರ್ಪಂತುಂ ಸಮಂತಾರೊಳಂಚಲಮುಂ ತೋಟಿಯುಮಾಗದಂತೆ ಪಡೆದಂ ಪದ್ಮಾಸನಂ ವೇಶ್ಯೆಯಂಸಲೆ ಲೌಲ್ಯತ್ವದೆ ನಾಲ್ಕು ವರ್ಣದವರ್ಗಳ್ಮಾರ್ಗಂಗಳಂ ಲಜ್ಜೆಯಂಕುಲಮಂ ದಾಂಟಿ ಕೆಲರ್ ವಿಳಾಸಿನಿಯರಾದರ್ ವಿಶ್ವಭೂಭಾಗದೊಳ್
ಮೊದಲೊಳಷ್ಟಕುಳದೇವತಾಪ್ಸರೋಭ್ಯುದಯಮಂ ಕಮಳಯೋನಿ ಮಾಡೆ ಪುಟ್ಟಿದರವರ್ಗೆ ಕೆಲಬರ್ ಧರಿತ್ರಿಯೊಳ್ಸದಮಳಾಂಶಕೆಯರಿಂತು ವೇಶ್ಯೆಯರ್
ಚದುರರ್ ಪಲಬರ್ ಮುನ್ನಂಪದವಿಟ್ಟರ್ ಸೂಳೆಯರ್ ಸಮಂತವರಂ ಗೆಲ್ವುದು ಕರಮರಿದಬಲೆಯ ಗೆಲ್ವುದು ಸಲೆ ಮದನಾಭಿರಾಮನೋಜೆಯೊಳೆಂದುಂ
ಪರಿಯಣದ ಪಡಿಗದಡಪದಕರಗದ ಬಾಣಸದ ಮಜ್ಜನದ ನಾರಿಯ ತೊೞ್ತಿರ ಪೆಂಡವಾಸದೊಳ್ವೆಂಡಿರ ತಂಡಮನೊಲ್ದು ನೆರೆದವಂಗೞಿವಕ್ಕುಂ
ಉಂತುಂ ಸ್ವೇಚ್ಛಾರತಿ ತನಗೆಂತುಂ ದೊರೆಕೊಳ್ಳದಂತು ಮೆಚ್ಚಿಸಲಾರಂಭ್ರಾಂತೇಂ ಪ್ರಾಣದಿನರ್ಥದಿನಂತಾತಂ ಕಿಡುಗುಮಳಿಪಿ ನೆರೆದಂದವರಂ
ಇದುವೆಯರ್ಧಪದಾಂತಯಮಕಮಕ್ಕುಂ-
ಕನಿಷ್ಠೆಯಂ ನಿಷ್ಠುರೆಯಂ ಸಕೋಪೆಯಂನ್ಯೂನಾಂಗಿಯಂ ಪೋಪುದೆ ಬುದ್ಧಿವಂತನುಂ
ದೂಱುಂ ದೂರ್ತುಂ ದುಷ್ಟುಂನೂಱುಂಟು ಕುರೂಪು ಕುತ್ಸು ಮುದುಗುಱುಗುಱುಗುಂಸೂರುಳು ತುಂಟುಂ ಕುಷ್ಠುಂದೂಱುವುದುಂ ಮುಂದುಮುಂಟು ಸುಡು ಬೂತುಂತುಂ
ತೆಱಪನೆ ಪಾರ್ವಳ್ ಪೊಲ್ಲಮೆಯಱಿದೊಡೆ ಪರದರ್ಗೆ ಪೇೞ್ದು ಛಿದ್ರಿಸುವಳ್ ಬೇಸಱಿಪಳ್ ಕೊಂಡುೞಿವಳ್ ಕಡುಮಱುಗಿಲಿಯೆನಿಪಾಕೆ ಮೃತ್ಯುವಲ್ಲದೆ ವಧುವೆ
ಎಡಱಡಸಿದೊಡೊಡಮೆಯೊಳೞಿವೊಡಱಿಸಿದೊಡೆ ತನ್ನನಿತ್ತು ಕಾವಳ್ ತಪ್ಪಂಕಡೆಗಣಿಪಳ್ ಪೊಲ್ಲಮೆಗಳನಡಂಗಿಪಳ್ ಶಕ್ತಿಯೆನಿಪ ಸೂಳೆಯೆ ಪೂಜ್ಯಂ
ಕೆಳೆಯರ ನಂಟರ ನೆವದಿಂಪೞಿವವಳಂ ಪೋಗಲಾಗದವರ್ಗಳನಳಿಪಿಂಕೆಳೆಯನ ಸಖನಂ ಬೆರಸದೆಕಳಿಪುವ ಲಂಜಿಕೆಯೆ ಪೂಜ್ಯವಬ್ಜದಳಾಕ್ಷೀ
ಇದುವೆ ಗತಪ್ರತ್ಯಾಗತಮುಂ ಮುರಜಬಂಧಮುಂ ಕಿಱಿಯ ಸರ್ವತೋಭದ್ರಮುಂ ಮಹಾಯಮಕಮುಮಕ್ಕುಂ-
ಕುಸುಮಾಮನೋಹರಂಕುಸುಮಾಮನೋಹರಂಕುಸುಮಾಮನೋಹರಂಕುಸುಮಾಮನೋಹರಂ
ವಸುಮತಿರಾಜಿತಂವಸುಮತಿರಾಜಿತಂವಸುಮತಿರಾಜಿತಂವಸುಮತಿರಾಜಿತಂ
ಇದುವೆ ಗತಪ್ರತ್ಯಾಗತಮುಂ ವೃತ್ತಬಂಧಮುಂ ಅರ್ಧಜತ್ತರಟ್ಟಮುಮಕ್ಕುಂ –
ತನುಪರನರಹದಿನರಪತಿಮನುನಯನಶುಭಾಶುಭಂ ನಿಜಧನದಂಧನದಜನಿಭಂ ಶುಭಾಶುನ |ಯನನುಮತಿಪರನದಿಹರ ನರಪನುತಂ(?)
ಎಂದು ನುಡಿವವಳೆ ಪೂಜ್ಯಂಮಂದಸ್ಮಿತವದನೆ ಭಾವಿಸತಿಶಯದಿಂದಂ
ಉಪ್ಪಡಂ ತುಡುಗೆ ಜವ್ವನಮಾದಂಕಪ್ಪುರಂ ಮೃಗಮದಂ ಸುಲಿಪಲ್ ಲೇಸಪ್ಪ ಸಾದು ಬಿಡುದಂಬುಲಮೆಂದುಂತಪ್ಪದುಳ್ಳವನೆ ಸಂದ ಭುಜಂಗಂ
ವಿವಿಧಗುಣಂ ನಾಗರಿಕ ವಿಟ ವಿದೂಷಕ ಪೀಠವರ್ಧನಂ ಪರಿವೃಟ್ ತ್ಯಾಗಿ ವಿವೇಕಿ ಭೋಗಿ ಚೆಲ್ವಂನವಯೌವನನರುಜನರ್ಥಪತಿ ವೃಷಸತ್ವಂ
ಇದುವೆ ಎರಡು ಕಂದಮುಂ ದ್ವಿಪದಿಕೆಯುಂ ಗೀತಿಕೆಯುಮಯ್ದುಮಕ್ಕರಮುಮಕ್ಕುಂ- ಮಯೂರಕ್ರೀಡೆ (?)
ಧುರದೊಳಗಿಂದ್ರಸುತನೆನಲ್ಪರನಾರಿಗೆ ವಾಯುಜಂ ಸ್ವಯಂ ತಾನೆನಲುರ್ವರೆಗೆ ಗಿರಿಜಾತ್ಮಭವನೆನೆವರವಿಕ್ರಮನುನ್ನತೋನ್ನತಂ ತಾನೆನಿಕುಂ
ಪರಮ ಹರಭಕ್ತನಿವನೆನೆದೊರೆಯುಂ ಗುಣಿಯೂರ್ಜಿತಂ ನಯಜ್ಞಂ ಸುಭಟಂಕರಮೆ ಚರಿತಾರ್ಥನತಿರುಚಿಹರಿಸಾಹಸನೀಶ್ವರಂ ಸ್ಮರಂ ಸಚ್ಚರಿತಂ
ದೀಪಮಂಜನಂ ಮುಖವಾಸಮಗಿಲುಂ ಲವಣಮಂತರ್ವರ್ತಿ ಘುಟಿಕೆ ಸುಣ್ಣಂಧೂಪಮೆಲೆಸಿಂಟು ಹಸ್ತದ್ರಾವಣಯಂತ್ರದಿನುರುಳಿ ಮಾೞ್ಪ ನಶ್ಯಪಾನಂಲೇಪಮಂಗಜೋದ್ಭವಮುದ್ರೆ ತಿಲಕಂ ಭೂಪುಟಮಿವು ಮೊದಲಾಗೆ ಸಂಧಿಸೋಪದೇಶಮಂ ಮನುಮಾರ್ಗಮನೋದಿನೊಳ್ ಕೇಳ್ದು ಕಲ್ತಱಿವುದು ಚದುರನಪ್ಪಂ(?)
ಒಡನಾಡಲ್ ಪಾಡಲ್ ಮೆೞ್ಪಡಿಸಲ್ ಕೊಳಲೊಸೆದು ಕುಡಲು ನಗಿಸಲ್ ಕೂಡಲ್ನುಡಿಯಲ್ ಜೂದಾಡಲ್ ಕೂರ್ತಡೆ ಕೂಡಲ್ ಮನಮನಱಿಯಲಱಿವುದು ಚದುರಂ
ವರಸೂಪಶಾಸ್ತ್ರ ಭೃಗು ಚಿತ್ರ ರಸಾಳಂಕಾರ ಗಣಿತ ಗಜ ಹಯ ವೈದ್ಯಂಸ್ವರ ಶಕುನ ಕಾವ್ಯನಾಟಕಭರದಿ ಕಳಾವಿದನೆನಿಪ್ಪುದತಿ ಚದುರವಿಟಂ
ವನಿತಾಜನಮಂ ಬರಿಪುದುಮನೆಗೆ ತದಾವಾಸಗಮನಮಂ ಮಾಣ್ಬುದದೇಕೆನೆ ತನಗಪಾಯಬಹುಳಂಜನಿಯಿಕುಮಭಿಮಾನಮುಂ ವಿವೇಕಮುಮೞಿಗುಂ
ತನಗೆ ಮನೆಯಿಲ್ಲದಿರ್ದೊಡಮನೇಕ ದೇಶಪ್ರವಾಸಮಂ ಮಾೞ್ಪೊಡಮಾೞ್ದನೆ ಮನೆತನಕ್ಕೆ ಕೆಯ್ಗೆಯ್ದು ನಿಳಯಮದನಱಿದು ನೆರೆದು ಗೆಯ್ವುದು ಚದುರಂ
ಸಂದಣಿಯಿಲ್ಲದೆ ಸೋಂಕಿನೊಳೊಂದದೆ ನಡುಬೀದಿಯಲ್ಲದಿರ್ದುದನೆಂದುಂಬೆಂದವರಲ್ಲದೆ ಸೌಷ್ಠವದಿಂದೊಪ್ಪುವ ದೆಸೆಯೊಳೆಸೆಯೆ ಮಾಡುಗೆ ಮನೆಯಂ
ಧವಳಿಸೆ ಮೇಲ್ಕಟ್ಟು ಕಟ್ಟಿವಿವಿಧದ ದೇವಾಂಗವಸ್ತ್ರಮಂ ಸೆಳೆಮಂಚಂಕವುಳುಡೆ ಧವಳಚ್ಛತ್ರಮುಮಿವೊಪ್ಪೆ ಪಾಸಂ ಸಮಂತು ಪಾಸುವುದದಱೊಳ್
ತಲೆಗಿಂಬನೆರೆಡು ದೆಸೆಯೊಳ್ನಿಲಿಸುಗೆ ಶೋಭಿಪಿನಮೆಲೆಯ ಪಡಲಿಗೆಗಳುಮಂತಲೆದೆಸೆಯ ಕೆಲದೊಳಿರಿಸುಗೆಫಲ ತಾಂಬೂಲಾನುಲೇಪ ಕುಸುಮಮನದಱೊಳ್
ಇದುವೆ ಗೋಮೂತ್ರಿಕೆಯುಂ ಮುರಜಬಂಧಮುಂ ಯಮಕಮುಂ ನಾಲ್ಕು ವೃತ್ತಮು ಮಕ್ಕುಂ-
ಹರಿಯುಂ ಹರಿಯುಂ ಹರಿಯುಂಹರಿಯುಂ ಖಚರಂ ಸಮಾಧಿಪನುಮಾ ರತಿಯುಂಹರಿಸುತನುಂ ಮಾರುತಿಯುಂಮಾರುತಿಯುಂ ಧರ್ಮಗುಣಶಿಳೀಮುಖತತಿಯುಂ
ಇದುವೆ ಗೋಮೂತ್ರಿಕೆಯುಂ ಮುರಜಬಂಧಮುಂ ಚಕ್ರಾಹ್ವಯಮುಂ ಮಕರವ್ಯೂಹ ಮುಂ ಶಂಖಾವರ್ತಮುಮಕ್ಕುಂ -
ಮಾರಾ ಮಾನಿನಿ ಮಾರಾಮಾರಾಜಮಾತೃಕ್ರಮಾಜರಾಮಾ ಮಾ ಮಾ ಶತ ಮಾ ಮಾ ಮಾಸತ್ವ ಸತ್ವತ್ವ ಸತ್ವನಿ (?)
ಸಿರಿಯಂ ಕಳಶಮನುನ್ಮದಕರಿಯಂ ನಂದನವನದಲರ್ದ ತಾವರೆಗೊಳನಂಸುರದಂಪತಿಯಂ ನವಕಿನ್ನರಿಯಂ ಕರಮೆಸೆಯೆ ಬರೆಗೆ ನಾಲ್ಕುಂ ದೆಸೆಯೊಳ್
ಮಗಮಗಿಪ ಧೂಪದಿಂ ಜೊಂಡೆಗರ್ಬಿನಿಂ ಪಣ್ಫಲಂಗಳಿಂದುಣಿಸಿಂ ದೀವಿಗೆಯಿಂ ಕರಗದ ನೀರಿಂಬಗೆಗೊಳಿಕುಂ ಚಿತ್ರಶಾಲೆ ಪೂವಳ್ಳಿಗಳಿಂ
ನಸುಬೆಳಗುಗೆ ಸೊಡರಂ ಲಜ್ಜಿಸುವಾಕೆಗೆ ಕರಮೆ ಲಜ್ಜಿಪಳ್ಗೆ ಸೊಡರ್ ನೀರಸಮೆಂದು ಕಳೆಗೆ ರಾಗಂಪಸರಿಸುಗುಂ ರತಿಯವಳ್ಗೆ ಕೞ್ತಲೆಮನೆಯೊಳ್
ಚಂದನಮುಂ ಚಂದ್ರಿಕೆಯುಂಸಾಂದುಂ ತಂಬುಲಮುಮೆಸೆವ ಕುಸುಮಮನದಱೊಳ್ಕುಂದದೆ ತೋಱಿದೊಡಲ್ಲಿಯೆಬಂದಿರುಳುಂ ಪಗಲುಮಗಲದಿರ್ಪರ್ ಪೆಂಡಿರ್
ಚದುರಂಗದ ನೆತ್ತದ ಗೌಪ್ಯದ ಗೊಟ್ಟುಗುೞಿಯೆನೆ ಪಲವು ಮುಟ್ಟಂ ಮನೆಯೊಳ್ಪದೆದಿರಿಸುಗೆ ತಾನುಂ ಕಲ್ವುದು ಗಣಿಕೆಗಮದನೆ ಕಲಿಪುದತಿನಯದಿಂದಂ
ಕೆಲದೊಳ್ ನೆಲವಾಳಿಗೆಯುಂನೆಲವಾಸುಂ ಕಾಂಡಪಟದೆ ನಿಮಿರ್ದೊಪ್ಪುವ ಸೀತಳವನಮುಂ ನವಿಲುಯ್ಯಲುಮೊಲವರಮಂ ಕಳೆದು ಪಡೆವುದಬಲೆಯರ್ಗೊಲವಂ
ಇನಿತುಂ ವಿಳಾಸದಿಂದಂವನಿತೆಯರೊಳ್ ನೆರೆವವಂಗೆ ಕೆಳೆಯರ್ ನಾಲ್ವರ್ವಿನಯಪರ ಭೃತ್ಯರುಂ ಸಜ್ಜನನುತರುದ್ಯುಕ್ತರಪ್ಪರತಿಚಾತುರ್ಯರ್
ನಾಗರಿಕಂ ಕರಂ ವಿಟ ವಿದೂಷಕನೊಪ್ಪುವ ಪೀಠವರ್ಧನಂಭೋಗಿಗೆ ಕೇಳ್ ಸಖಾಯರವರೆಂತೆನೆ ಕರ್ವಿನ ಬಿಲ್ಲುಮಾನಿಳಂಕೋಗಿಲೆ ಚಂದ್ರಮಂ ಕುಸುಮಬಾಣಗಳಾ ಝಷಕೇತನಂ ವಸಂತಾಗಮಮಿಲ್ಲದೇನೊಲಿಸಲಾರ್ತಪನೇ ವಧುವಂ ಮನೋಭವಂ
ಅರಿನೃಪರಂ ಪಡಲ್ವಡಿಸಿ ಕೊಂದು ಧರಿತ್ರಿಯನಾಳ್ವರಸನುಮಂಗನಾಜನುಮನೊಲ್ದೊಲಿಪಂ ವಿಟನುಂಪರಿಣತರಂ ಸುಸಂಹಿತರನೊಳ್ಳಿದ ದೂತರನೊಲ್ದಿರಿಸುಗೆ ಸಂತತಂ ಪಡೆವೊಡಲ್ತೆ ಮನೋರಥಮಂ
ಅದಱಿಂ ಭೃತ್ಯರ್ ನಾಲ್ವರ್ಚದುರರವರೊಳಲ್ಲಿ ಪುಸಿಯನಿನಿಸೊಲ್ಲದನುಂಪದೆದಿರ್ದ ನಯನಿಪುಣನುಂಸದಮಳನಿರ್ಮಳನುಮಂತೆ ವಿನಯಾಸ್ಪದನುಂ
......................................................................ಕರಂ ಸಮಂಜಸಿಕೆಯನೆ ಪಾಟಿಪಂ ಯೋಜಿಪಂಸ್ಮರರಾಗಮುಮನಂತೆ ಮಂತ್ರಕುಹಕಾದಿ ತಂತ್ರಂಗಳಿಂ ನಿಃಪರಿಗ್ರಹಂ ಸಕಾಮಿ ನಾಗರಿಕನಾಗಿಯುರೆ ಸಂದವಂ (?)
ಎನಿಪಾ ನಾಗರಿಕಂ ಮುನ್ನಿನ ವಿಭವಂ ಕೆಟ್ಟೊಡಂ ಪೆಸರ್ ಕೆಡದುವದೆಂತೆನೆ ಪುಣ್ ಕೆಟ್ಟೊಡೆ ಕಲೆ ಕೆಡದೆನಿಪಂತದನಱಿದು ಯೋಜಿಪುದರಸನವರಂ
ಅತಿಚದುರಂ ಮದನಾಗಮಯುತನದಟಂ ವರಕಳತ್ರಯುತನುಂ ಸುಜನಂಸತತಗುಣೋಪಾಯಾರ್ಜಿತನುತನಾಪ್ತಂ ವಿಟನೆನಿಪ್ಪವಂ ಮೃಗನಯನೇ
ನಿಪುಣಂ ಕೂರ್ಪವನಿಂಗಿತಜ್ಞನೆನಸುಂ ಕ್ಲೇಶಕ್ಷತಂ ಶೌಚಿ ನೀತಿಪರಂ ದಕ್ಷನವಂಚಕಂ ನುಡಿದು ಜೊತ್ತಿಂ ಸುತ್ತುವಾತಂ ವಿರೂಪಿ ಪುರಾಣಂ ನಗೆಕಾಱನೆಯ್ದೆ ಮರುಳಿರ್ಪಂತಿರ್ಪನಾಪ್ತಂ ವಿನಿಃಕುಪಿತಂ ಸಂದ ವಿದೂಷಕಂ ಸ್ಮರಕಳಾರಾರಾಜಿತಂ ಪೂಜಿತಂ
ಪೀನಕ್ಷು ರಕ್ತಕರ್ದಮಸೂನಸುಗಂಧಾದಿ ಕ್ಷಾರಮರ್ದನಕುಶಲಂತಾನಿಂಗಿತಜ್ಞನುಂ ಕವಿಜ್ಞಾನಹಿತಂ ಶೌಚಿ ಪೀಠವರ್ಧನನೆನಿಕುಂ
ಇಂತೀ ನಾಲ್ವರ ನುಡಿಯಿಂಸಂತಂ ತಾಂ ನುಡಿದು ನಡೆವುದಾಗಮದೊಂದಂಗಂ ತಳ್ತು ಪೋಲೆ ಜೊತ್ತಿಂಕಾಂತೆಯರಂ ಭ್ರಾಂತುಗೊಳಿಪುದೊಂದಚ್ಚರಿಯೇ
ಕೂಡಿದ ನಾಲ್ವರ್ ಗಾವಿಲರಾಡಂ ನಾಯ್ಮಾಡಿ ತಿಂದರೆಂದೊಡೆ ಚದುರರ್ಕೂಡಿದೊಡೆ ಸತಿಯರಂ ಕೊಂಡಾಡದೆ ಗೆಲ್ದಂದಮರಿದೆ ಮದನಲತಾಂಗೀ
ಕೆಯ್ವಾರದೆ ಕೆಯ್ಮತದಿಂಕೆಯ್ವಾರದೆ ಗೆಲ್ದೆ ಲಜ್ಜಿತೆಯನೆಂತೆನೆ ಕೇಳ್ದೆಯ್ವರ್ ಕೂಡಿದೊಡೆತ್ತಂದೆಯ್ವಂ ಮರುಳಾದುದೆಂಬುದಂ ಕೇಳ್ದಱಿಯಾ
ಪುಸಿವುದು ಸತ್ಯವಾದಿಯೆನೆ ಪೆರ್ಚಿ ಕರಂ ಪಿರಿದೀಯ ವೇಡೆ ಭಾವಿಸೆ ಕಡುಚಾಗಿ ತಾನೆನಿಪುದೊಲ್ಲದೊಡಂ ಕರಮೊಲ್ದ ಮಾೞ್ಕೆಯಿಂದೆಸಪುದು ಕೂರೆ ಕೂರ್ಪೂದಣಮೊಲ್ದೊಡಮಾತುರನಾಗದಿರ್ಪುದೀವಸುಧೆಯೊಳಿಂತಿರಲ್ ಪೆಱತು ಬಿನ್ನಣಮಾವುದು ಸೂಳೆವಿನ್ನಣಂ
ಅಗಲದ ಗೋಷ್ಠಿಯಿಂ ಬಿನದಮುಂ ಬಿಡುದಂಬುಲಮುಂ ವಿಭೋಗಮುಂಬಗೆಯಱಿದೞ್ಕಱಿಂ ನುಡಿವ ಮಾತುಗ(ಳುಂ) ಪದೆಪುಂ ವಿಳಾಸಮುಂನೆಗೞ್ವಿನಮಿಂಬುಕೆಯ್ದ ಮದನೋತ್ಸವಮಂ ಪಿರಿದಾಗಿ ಮಾಡಿ ಮೆಲ್ಲಗೆ ರತಿಯಂ ಪೊಣರ್ಚುವೊಡವಂ ಚದುರಂ ಕಳಹಂಸಗಾಮಿನೀ
ಕುಂದಿ ಜುಮ್ಮನೆ ಪೋಪುದುಂ ಮನಮಿಕ್ಕಿ ಚಿಂತಿಸುತಿರ್ಪುದುಂಕಂದಿ ಬಂಬಳಬಾಡಿ ಕಂಬನಿ ಮೊಕ್ಕಳಂ ಸುರಿತರ್ಪುದುಂನಿಂದು ನಿಂದಮರ್ದಪ್ಪುವಂದಮನೞ್ಕಱಿಂ ನುಡಿವಂದಮುಂಸುಂದರಾಂಗಿಯಗಲ್ಕೆಯೊಳ್ ಮಿಗೆ ತೋರ್ಕು ತಾಂ ಬಿಸುಸುಯ್ವುದುಂ
ನೀನೀತನೊಳಿರ್ದೊಡವೆರೆಮಾನಿನಿ ಧನಪುತ್ರಲಾಭಮಕ್ಕುಂ ನಿನಗೆಂದಾ ನಾರಿಗೆ ಸಂಕೇತಜ್ಞಾನಂಗಳನಱಿಪುಗುಚಿತಶಕುನಾದಿಗಳುಂ
ನೆಱನೆತ್ತಿ ಬಯ್ವ ಪುರುಡಿಪಜಱುಚುವ ಪಿರಿದಲಸಿ ಕೂಡೆ ಲಟಲಟಿಸುವ ಮೆಲ್ಪಱಿಯದೆ ಸೋಂಕುವ ಕೂರದೊಡೆಱಗುವ ವಿಟನೆಗ್ಗನಲ್ತೆ ಮದಗಜಗಮನೇ
ತೆಱಪಂ ಕಿಸುಗುಳಿತನಮಂಪೆಱನಿರ್ದುದನೆಗ್ಗತನಮನಾಡಿಗತನಮಂನೆಱೆಯೆ ವಿರಸೇಂಗಿತಂಗಳನಱಿವುಳ್ಳಂ ಕಾಣಲೀಯಲಾಗದು ವಧುವಂ
ಮೂರಿಯಿಡುವೊಡಂ ಸುಱಿವೊಡಂ ಸಿಂಗರಂಗೆಯ್ವೊಡಂ ತಂಬುಲಂ ಮೆಲುವೊಡಂನೀರಂ ಕುಡಿವೊಡಂ ನುಡಿವೊಡಂ ಶೃಂಗಾರಂಗೆಯ್ವೊಡಂ ಪಲ್ಸುಲಿವೊಡಮುಣ್ಬೊಡಂಭೋರೆಂದಾರ್ವೊಡಮಾಣತಿಗೆಯ್ವೊಡಮಾಗುಳಿಸುವೊಡಮೆಂತುಂ ವಾರಿಜಾನನೇನೀರೆ ವಿರಸೇಂಗಿತಂಗಳನಱಿವುಳ್ಳಂ ಕಾಣಲೀಯಲಾಗದು ವಧುವಂ
ಅರಸಂ ಸ್ತಬ್ಧಂ ಪೆರ್ಗಡೆಮರುಳಂ ತದ್ವರ್ತಿ ಪಿಸುಣನಾಪ್ತಂ ಪುಸಿವಂಪರದಂ ವ್ಯಾಳಂ ಪೆಂಡಿತಿದುರಾತ್ಮೆ ವಿಟನೆಗ್ಗನಾದೊಡರಸುವ ಪುರುಳೇಂ
ತನ್ನಿಂದಧಿಕನೀತನೇತಱೊಳಮೆಂಬಾತನೊಳ್ ಸೂೞ್ನುಡಿನುಡಿವಾತನೆಗ್ಗಂತನ್ನಿಂದಧಿಕೆಯೇತಱೊಳಮಿಂತೀಕೆಯೆನೆ ಪುಸಿವಾತ ಗೞಪುತ್ತಿರ್ಪನೆಗ್ಗಂತನ್ನ ಪೆಂಡಿರ ದೂಱುತ್ತಿರ್ಪನೆಗ್ಗಂ ನೆವಮಿಲ್ಲದಾಗುಳುಂ ಮುನಿವನೆಗ್ಗಂತನ್ನಂ ತಾನೆ ಬಣ್ಣಿಸುವ ವಿಟನೆಗ್ಗಂ ಪೆಱರ್ಗೋತ ವಧುವ ಕೂಡುವನೆಗ್ಗಂ
ತನಗೆ ಕೂರ್ಪಾಕೆಗೀಯದ ವಿಟನೆಗ್ಗಂ ಪೆಱರ ವಧುಗೋತು ಕೂಡುವನೆಗ್ಗಂಕಿನಿಸುವ ವಸ್ತುವನಿತ್ತಪೆನೆಂದಾಸೆದೋಱಿ ಮತ್ತೀಯದೆ ಪುಸಿವನೆಗ್ಗಂವನಿತೆಗಿತ್ತುದನುಗ್ಗಡಿಸುವವನೆಗ್ಗಂ ರೋಷದಿಂ ಕಾಲಮಂ ಕಳೆವಾತನೆಗ್ಗಂಮನಮನಱಿಪುವಂ ಕರಮೆಗ್ಗಂ ಪೞಿದೊಡೆ ಸುೞಿದಣಂ ಮುಂದಟ್ಟಿ ಪುಗುವನೆಗ್ಗಂ
ದಿನದಿನದ ಸಂಜೆಯೊಳ್ ಸುರಾಗನಾಗಿರ್ದು ನೋಟಕ್ಕೆ ತಾನೇಳಿದನಾಗಿರ್ದು ಕಾಂತಾನಿಕರಮೇಂ ಕುಂದುಗೆಂದುಂಮನೋಜಾತರಾಗೋತ್ಸವಂ ಕೂಡದಲ್ತೇ (?)
ಛಾಂದಸನಭಿಮಾನಿ ಕರಂಪಂದೆ ಜಡಂ ಶ್ರೋತ್ರಿಯಂ ಗಡಿವನೆಂಬವರಂಸೌಂದರ್ಯದೊಲ್ಲರೇಳಿಪರೆಂದುಂ ವ್ಯಾಧಿತನುಮಂ ಸರೋಜದಳಾಕ್ಷೀ
ಪದನಂ ಚಿತ್ತಮನೆಯ್ದೆ ಕಲ್ತವನ ನಾಣುಂ ಜಾಣುಮಂ ಕೂಡೆ ಮೇಳದೊಳಂ ಸೋಂಕಿನೊಳಂ ಕೞಲ್ಚಿ ಮನದೊಂದಾದೞ್ಕಱಿಂದೆಲ್ಲಿಯುಂಪದುಳಂ ಮೆಲ್ಲನೆ ಮಾೞ್ಕುಮೊಳ್ಪಿನೊಳೆ ದಲ್ ಕೂರ್ಪ ಸಖಾಯರ್ಕಳಿಂತಿದೆ ಸತ್ವಂ ಸಲೆ ಮೆಲ್ಪು ಬಲ್ಪನೞಿಗುಂ ಪಂಕೇಜಪತ್ರೇಕ್ಷಣೇ
ಕುಡುವಿಲ್ಲೆಂದುಂ ಮುಳಿದುಂಕಡು ಗೆಂಟಪ್ಪೆಡೆಗೆ ಪಯಣಮಾಯ್ತೆಂದುಂ ತೂಂಕಡಸಿಯುಮಲಸಿಯುಮೀಗಳ್ಜಡತ್ವಮಾಯ್ತೆಂದು ಮನಮನಱಿಗಬಲೆಯರಾ
ಸುದತಿ ಪೆಱತೂರ್ಗೆ ಪೋದೊಡೆಚದುರಂ ಚರ್ಚಿಸುಗೆ ವನಿತೆ ಮೇಣ್ ಬರ್ಚಿಸೆ ಸಾಯದೆ ಸತ್ತರೆಂಬ ವಾರ್ತೆಗೆಪದಪಿಂ ಮನಗುಡದೆ ಚದುರನಕ್ಕುಕ್ಕೆವದಿಂ
ಉಡೆಯಂ ನಡೆಯಂ ನುಡಿಯಂಪಡೆಪಂ ತೊಡವಂ ಬೆಡಂಗನೆಡೆಯುಡುಗದೊಡಂಬಡುಮನೊಡನಿಳಿಸಿ ಱೋಡಿಸೆಕಿಡುಕುಮೊಡಂಬಡದವಂಗೆ ತಾಯ್ಮಗಳೊಲವಿಂ
ಉೞಿವಿಂಗಿರದಿತ್ತೊಡಲೞ್ದೊಡಣಂಪೞಿಯಂ ಗಣಿಸಿದೊಡಲೞ್ದೊಡೆ ತನ್ನೊಳಗಂ ಸಲೆ ತೋಱಿದೊಡಂಗನೆ ಮೆಯ್ವೞಿಯಂ ಮನಮಂ ಬಗೆಯಳ್ ಪ್ರಿಯನಾ
ಇದುವೆ ದಯಾಪಸಂಪುಟ ವರ್ಗತ್ರಿಯಕ್ಷರಂ-
ಬಾ ಪೋಪಂ ಪೋಪಮೆಂಬಾಪಾಪಿ ಪಾಪಂ ಮೋಪಿ ಪೋ ಪಾಣ್ಬ ಪೋ ಪೋಪೈ(?)
ವಚನ. ಎಂಬ ಮಗಳ ಕೂಂಟಣಿ ನುಡಿಗುಮಂತುಮಲ್ಲದೆಯುಂ-
ವಾರವಧೂಜನಕ್ಕೆ ಮುದುಗೂಂಟಣಿ ಹೇಮಮನಾವ ಮಾೞ್ಕೆಯಿಂಪ್ರೇರಿಸುತಿರ್ಪೊಡಾ ಗೞಿಗೆಯೇ ಕೆಡುಗುಂ ಕಡುಗೂರ್ಮೆ ಕೂರ್ತವೋಲ್ವಾರಮನಾಕೆಗಳ್ಗೆ ಪಡೆದೊರ್ಬರನೊರ್ಬರೆ ಗೆಲ್ವ ಭೇದಮಂವಾರಿಜವಕ್ತ್ರೆ ಯೋಜಿಸುವವಂ ಚದುರಂ ಮನುಮಾರ್ಗನೋಜೆಯಿಂ
ನಿನಗಾಂ ಕೂರ್ತೊಡೆ ಕುಂಟಣಿಮುನಿದೆನ್ನಂ ಬಡಿದು ತೊಡವನಿರ್ಕುೞಿಗೊಂಡಳ್ಮನೆಯಿಂ ಕಳೆದಳ್ ಶರಣಾಗೆನಗೆಂಬರ್ ಬಂದು ಕಪಟದಿಂ ಲಂಜಿಕೆಯರ್
ಬರೆಪದೊಳರ್ಘದೊಳಿರ್ಮಡಿಪರಿವಂತಿರೆ ಪರದನೊಡನೆ ಕೈತವದಿಂದಂದೊರೆಕೊಂಡು ತಿಂದು ಲೆಕ್ಕಂಪಿರಿದಾದೊಡೆ ಸಬ್ಬತಿರುಗೆ ತಾ ತೆತ್ತಪನೇ
ಕಡನುಂ ಬಡ್ಡಿಯುಮೆಂದವಳೊಡಮೆಯನವಳೀಯೆ ಕೊಳ್ಗೆ ಪುಸಿಸಾಲಕ್ಕಂನುಡಿದು ಪೊಣೆಯಕ್ಕೆ ಬೞಿಕಂಕಡಂಗಿ ಪಿಡಿದೆೞೆದು ಕಳೆದೊಡಂ ಪೋಗಳವಳ್
ಸೂಳೆಯ ತೊಡವಂ ಕಳಿಪಿದೊಡಾಳೋಚಿಸಿ ಕೊಟ್ಟೊಡೞಲದಿರ್ಪೆಡೆಯೆಂದಾಬಾಳೆಗೆ ಕೊಟ್ಟನಿತಂ ಕುಡೆಗಾಳುಮನಂಗೊಳ್ಗುಮವನಿಯೆಲ್ಲಂ ಪೊಗೞಲ್ (?)
ಮಿಗಲಣ್ಮದೆ ಸಿಗ್ಗಿಂ ರೂವುಗುಂದಿ ಮನವಿಕ್ಕಿ ನಾಣ್ಚಿ ಪೊನ್ಗಳೆದಿರ್ಪರ್ಪಗೆವಂಗೋಡಿದ ನೃಪನುಂಮಗನಂ (ಪೆ)ತ್ತಂದು ಸೂಳೆಯುಂ ಮೃಗನಯನೇ
ವೃತ್ತಕುಚೆ ಮೆಱೆದು ನುಡಿದೊಡಿದೆತ್ತಣ ಮಾತೆನ್ನದಿರ್ಕೆಯವರೊರಸಿದೊಡಂಚಿತ್ತದ ಕಜ್ಜಂ ನಾಲಗೆಗೊತ್ತಂಬದೆ ಬರ್ಕುಮಱಿಗೆ ಮಾತಿನ ಕಾಲಂ
ಕಿಚ್ಚಂ ನೀರಂ ಪೊಕ್ಕುಂನಿಚ್ಚಂ ಕಾಲ್ವಿಡಿದುಮೞ್ತು ಲಲ್ಲೈಸಿ ಕರಂಬೆಚ್ಚನೆ ಸುಯ್ದುಂ ನಂಬಿಪರಚ್ಚರಿಯೇ ವೇಶ್ಯೆಯರ್ಕಳೆಂತಪ್ಪರುಮಂ
ಹರಿಯಂ ಬಗೆಯಿಂ ನಯದಿಂಸುರಗುರುವಂ ಕೃತಕದಿಂದೆ ಶುಕ್ರನನೆಂದುಂಸರಸಿರುಹದಳಾಕ್ಷಿಯರಾವರಾಂಗಿಯರ್ ಗೆಲ್ವರೆಂದು ಬಗೆ ನಿಶ್ಚಯದಿಂ
ಪಾಱುವ ಪಕ್ಕಿಯ ಸಂಚರಮಂಜಾಱಿನೊಳೇ ನೆಱೆ ಬರ್ಪೆಲರಂದೂಱುವುದೊಪ್ಪುವ ಲಂಜಿಕೆಯಂಪಾಱುಗಳಂ ಮಿಗೆ ನಂಬುವುದೇ
ಪಿಂಗಿರ್ದು ಕಾಯಲ್ಕೆ ಕಾಲಂಗಸಾಧ್ಯಂಗಂಗಾಧರಂ ನಂಬಿದರ್ಧಾಂಗಿಯಿರ್ದುಂತುಂಗಾತ್ಮನಾದೊಡಂ ತಾಂ ಪೆಂಡಿರೊಳ್ಪಂತುಂಗಸ್ತನೇ ಕೇಳ್ ಮರುಳ್ ನಂಬುವಾತಂ
ಅಸುರವೈರಿ ಬಗೆಯಿಂದೆ ಲಕ್ಷ್ಮಿಯಂಮಿಸುಪ ಪೇರುರದೊಳೊಪ್ಪಿ ತಾಳ್ದಿಯುಂಬಸವಿಯಾಗಿ ಪೆಱರ್ಗೋತಳೆಂದೊಡೀವಸುಧೆಯೊಳ್ ವಧುವನೆಂತು ನಂಬುವರ್
ಪುಸಿ ಶಠಂ ಕಡುಸಾಹಸಮುಕ್ಕೆವಂಬೆಸನಮಿಲ್ಲದುದುಂ ದಯೆಯುಂ ಕರಂಪಿಸುಣುಮೆಂದುಮಶೌಚಮುಮೀಯದಿರ್ಪೆಸಕಮುಂ ಸಹಜಂ ವಧುವರ್ಕಳೊಳ್
ಮೇಗುದೋಱುವರೞ್ತೞ್ತು ಪಣನೊಯ್ವರ್ ಮೆೞ್ಪಡಂ ನುಡಿವರ್ ಛಿದ್ರಮನೆ ಪಾರ್ವರ್ಬೇಗಂ ಕೂರ್ತಂತೆ ಭಕ್ತಿಯಂ ಪೊಸಯಿಪರ್ ಕಾಲಮಂ ಕಜ್ಜಮಂ ಬಗೆಯುತಿರ್ಪರಂಪೋಗಿಮೆಂಬರಿಂಬಾದೊಡಗಲ್ವ ನಿನ್ನಿಂದಂ ಪರೋಕ್ಷದೊಳ್ ಬಾೞೆನೆಂಬರ್ರಗಳೆಗೆಯ್ದುಂ ಕಳಹಂಸಗಾಮಿನೀ ಸೂಳೆಯುಂ ಹರಿಯಿಲ್ಲದ ಭೃತ್ಯನುಂ
ಸ್ವರಮನಱಿಗೆ ತಾಂ ಭರತಜ್ಞನಂದದಿಂದಾಸನಮನಱಿಗೆ ಜಾತ್ಯಶ್ವದಂತೆಪರಿಯನಱಿಗೆ ಮತ್ತದ್ವಿಪಪತಿಯಂತೆ ಬಗೆಯನಱಿಗಾಹಾರಕುಶಲನಂತೆಕರಮುಖಚೇಷ್ಟೆಯನಱಿಗೆ ತಾಂ ಶಕುನಿಗನಂತೆಱಕಮಱಿಗೆ ತುಂಬಟಿಗನಂತೆಸ್ಮರಕಳಾಗಮಕಿದೆ ತತ್ವಂ ಸದ್ವಿಟಂ ಸೊಮ್ಮನಱಿಗೆವೋದಾಳಿಯಂತೆ
ಅರಿಯನಪ್ಪಂಗಂ ಬೆಟ್ಟಿದನಪ್ಪಂಗಂ ನಖರೇಖೆಯ ಬೀಱಿ ಬೆಸೆವಂಗಂಕರಮೆ ಪುಸಿವಂಗಂ ಕಂಡಲ್ಲಿ ಸಿಡಿವಂಗಂ ಕಳ್ಳೊತ್ತೆಯಿಡುವಂಗಮೇಳಿದಂಗಂಪಿರಿದನೀವಂಗಂ ಮುನ್ನಮೆ ಕೂರ್ಪಂಗೆ ಪೞಿಯಂ ಸೈರಿಪಂಗೞಲಿಪಂಗಂಕರೆಯಿಮೆಂಬಂಗಂ ಕಿಸುಗುಳನಪ್ಪಂಗಂ ಸೂಳೆಸುಖಂ ಸಲ್ವುದಲ್ತೇ
ಒಲವುಂ ಸದ್ಭಾವಮುಂ ನಿಶ್ಚಯಮೆರಡೆ ವಲಂ ಕಾಮತತ್ವಕ್ಕೆ ಸಾರಂಲಲನಾವ್ರಾತಕ್ಕಿದಂ ನಟ್ಟನೆ ಪಡೆದೊಡೆ ಕಂದರ್ಪನಂತಲ್ಲಿ ನಿರ್ವ್ಯಾಕುಳೆ ಮುಗ್ಧಸ್ತ್ರೀ ಸುಸಾಧ್ಯಂ ಚತುರಯುವತಿ ಸಕ್ಲೇಶಸಾಧ್ಯಂ ನಿತಾಂತಂದಳಿತಾಂಭೋಜಾಸ್ಯೆ ಕೇಳೆಂದಬಲೆಗೆ ನುಡಿದಂ ನೀತಿಮಾಂಧಾತಭೂಪಂ
ತನ್ನ ತವಕಕ್ಕೆ ನೆರೆವಾತನತಿಕಷ್ಟನೊತ್ತಂಬದಿಂ ಕೂಡುವಾತಂ ಮೂರ್ಖಂಮುನ್ನ ಮೇಲಿಕ್ಕಿ ನೆರೆವಾತಂ ಕಾತರಂ ಮನಮನಱಿದೊಡಗೂಡುವಂ ಭಾವಕಂಸನ್ನುತಂ ದ್ರವಂಬಡೆವೊಡಾತಂ ರಸಿಕಂ ರತೋತ್ಸಾಹದೊಳ್ ರಂಜಿಪಾತಂ ರಂಜಕಂಮುನ್ನ ರಾಗಂಬಡೆದು ಸಂಭೋಗದಲ್ಲಿ ತಣಿವಂ ಮಾಡುವಾತನೆ ಕಾಮದೇವಂ
ಮುಳಿದಾಕೆಯನೊತ್ತಂಬದೊಳೆಳಸುಗೆ ಲಜ್ಜಿತೆಗೆ ಬಾಲೆಗಂ ಮೇಳದ ಕೋಮಳೆಗಂ ಮನಮಱಿದಿಂಬಱಿದೆಳಸುಗೆ ಮೇಲಿಕ್ಕಿ ನೆರೆಯೆ ನೆಱೆಗುಂ ಸುಖಮುಂ
ಕುಟಿಲತೆಗಂ ಕುಟಿಲತೆಯಂದಿಟಕೆ ದಿಟಂ ಕೂರೆ ಕೂರ್ಪುದೞಲಿಪೊಡೞಲಂಘಟಿಯಿಪುದಿಂತೀಯೆರಡೇವಿಟತತ್ವದ ಸಾರವಿದುವೆ ಘಟಕುಚಯುಗಳೇ
ಕಾಲನೊತ್ತೆನ್ಗುಂ ತುಂಬಲಮಿಕ್ಕೆನ್ಗುಂ ತಲೆಯನುಗುರಿಸೆನ್ಗುಮಾಗುಳಿಕುಂಮೇಲೆ ನೆಮ್ಮುಗುಮುರಿಗುಂ ಬೀಸೆನ್ಗುಮಪ್ಪಿಕೊಳ್ ಚುಂಬನಂಮಾಡು ನೀಂ ಬೇಗಮೆನ್ಗುಂಸೋಲೆ ನಿಡುಸುಯ್ಗುಂ ನಡುಗುಗುಂ ಮೇಲ್ವಾಯ್ಗುಂ ಪೊಡಮಡುಗುಂ ಕಥೇವೇೞೆನ್ಗುಂಬಾಲೆ ಸೊಡರಂ ಮಗುೞ್ಚೆನ್ಗುಂ ಕೆಮ್ಮನೆ ಮನಮಱಿಯಲ್ಕೆಂದುಮಾ ವಿಟಂ
ಪಡಿಯನೆಯ್ದೆ ತೆಱೆ ಘರ್ಮಮಿದೆನ್ಗುಂನಡುಗಿ ಕುತ್ತಮಡಸಿತ್ತೆನಸೆನ್ಗುಂಮಿಡುಕದುಂತೆ ಮರಲುಂದಿದ ಪಾಂಗಿಂಮಡದಿ ಱೋಡಿಸುಗುಮೆಗ್ಗನನೆಂದುಂ
ಏಕಾರಾಂತಮಕ್ಕುಂ-
ಎಲೆಯೇಕೇಲೆಗೇ, ಕೇಳೆನೆ, ಕೇಳೆಂ; ನೆನೆಯೆನೆ ನೆನೆಯೆಂ; ಏಕೆಂಬೆನೆ,ನೆನೆದೇವೆಂ, ಕೇಳೆಡೆಗೆಯ್ದೆಂ; ನೆಲೆಯೆಂ, ನೆರೆಯೆಂ; ನೆಱೆವೇೞ್ವೆಂ
ವಚನ. ಎಂದು ಬೇಱೂರ್ಗೆ ಪೋದನಂ ಪೋಗಿ ಬಂದನಂ ಪುರುಡಿಸುವರಂತು ಮಲ್ಲದೆ-
ಕುಡುವನನೊಲ್ದವೊಲೊಲ್ದನನೆಡಂಬಡಿಂದೊಲ್ಲದಂತೆವೋಲೆತ್ತೆಯವಂಬಿಡನೊಡನೊಲ್ವವೊಲಿರ್ಪರ್ಮಡದಿಯರಿದನಱಿದು ನೆಗೞ್ದೊಡಾತನೆ ಚದುರಂ
ಇಳಿಯನಪ್ಪನಂ ಕೊಱಚಾಡಿ ಕಾಡುವರರಿಯನಂ ಪೊರ್ದಲೀಯದನನೊಲ್ಲರ್ಜಳಜವದನೆಯರ್ ಪಿರಿಪಿರಿದನೀವಾತನಂ ತವೆ ಕೊಂಡು ಖಂಡಿಪರದಱಿಂದಿಳಿಯನರಿಯನೆಂಬೆರಡು ಭೇದದೊಳಿರ್ಪುದವಳೊಲ್ದೆಡೆಗೆನೆಯಱಿದಿನಿತಿನಿತುಪೞಿಯದಂತೀವುದು ಮನಮಂ ಕಾಣ್ಬುದು ವಿಟಂ ಸ್ಥಿರನಾಗೆ ಲುಲಿತಾಳಕೀ
ಪದನಱಿದೀವನನೊಲ್ವರ್ಸುದತಿಯರೀಯದೊಡಮಧಿಕಮಿತ್ತೊಡಮೊಲ್ಲರ್ಪದವೞೆಯಿಂ ಧಾರಿಣಿ ಬೆಳೆವುದು ಭರದಿಂದಧಿಕವೃಷ್ಟಿಯಿಂ ಬೆಳೆಯದವೋಲ್
ತೊಡವಂ ವಸ್ತ್ರಗಳಂ ನೆಱೆತೊಡಲುಂ ಮೆೞ್ಪಟ್ಟು ಬಯ್ಕೆಗುಡಲುಂ ದ್ರವ್ಯಕ್ಕೆಡೆಯಾಗಲ್ಮಾಡದವಳ್ಗೆರಡುಮಂ ದುಃಖದೊಳಮೀಗೆ ವಸು ಕಿಱಿಕಿಱಿದಂ
ನಂಬೆ ಪುಸಿದಿರ್ದನದೆ ಪಂಬಲದೊಳಾಗಳೆನಸುಂ ಬಗೆಗೆ ತೋರ್ಪಳಿಳಿ ಕೆಯ್ವಳಿವಕಂಟಿರ್ಪಂಬುರುಹನೇತ್ರೆಯಱಿ ಡಂಬಮಿವು ಪಂಚವಿಧಮೆಂಬುದನದಂ ಕ್ರಮದೆ ಭಾವಿಸಿ ವಿದಗ್ಧಂನಂಬದದನಾಲಿಸದೆ ತಾಂ ಬಗೆಯದಳ್ಕದೆ ಕರಂ ಬಲಿದೊಡೆಂತವರ ನಲ್ಲೆಯರೊಡಂ ಪೊಕ್ಕಿಂಬೞಿಯನೆಂದುದನೊಡಂಬಡುವರಂಗನೆಯರೆಂಬಿದು ತತ್ವಮನಱಿ ನೀರರುಹನೇತ್ರೇ
ಇದು ನಿಖಿಳವಿಬುಧಜನವಿನುತ ಕಾವ್ಯಾಲಂಕಾರನೀತಿನಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವ ಶ್ರೀ ಚಂದ್ರರಾಜವಿರಚಿತಮುಮಪ್ಪ ಮದನತಿಲಕದೊಳ್ ವೇಶ್ಯಾವರ್ಣನಂ ದಶಮಾಧಿಕಾರಂ ಸಂಪೂರ್ಣಂ


