EN | KA

Menu

V

Naḷacaritre

ಅಡವಿಯಲಿ ಪತಿ ಕಳೆದು ಬಿಡೆ ಫಣಿಯೊಡಲಿಗಿಳಿಯದೆ ಮುಂದೆ ಕರಿಗಳಪಡೆಗೆರಗಿ ದಮಯಂತಿ ಹೊಕ್ಕಳು ಚೈದ್ಯನಗರಿಯನು

ಕೇಳು ಕುಂತೀತನಯ ನಳನೃಪಬೀಳುಕೊಟ್ಟನು ಪುರವನಲ್ಲಿಂಮೇಲೆ ನಡೆದರು ಪಯಣಗತಿಯಲಿ ಹಲವು ಯೋಜನವಹೇಳಲೇನದನವರ ವಿಧಿಯನುತಾಳಿಗೆಗಳೊಣಗಿದವು ಸತಿಯಳಕಾಲೊಡೆದು ಸುರಿವರುಣಜಲದಲಿ ಬಟ್ಟೆ ಕೆಸರಾಯ್ತು

ಎಳೆಯ ಬಾಳೆಯ ಸುಳಿಯು ಅನಲನಜಳದ ಹೊಯ್ಲಲಿ ನೊಂದವೊಲ್ ಕಡುಬಳಲಿದಬಲೆಯ ಕಂಡು ನೃಪ ಮರುಗಿದನು ಮನದೊಳಗೆಲಲಿತಹೇಮದ ತೂಗುಮಂಚದಹೊಳೆವ ಮೇಲ್ವಾಸಿನಲಿ ಮಲಗುವಲಲನೆಗೀ ವಿಧಿ ಬಂದುದೇ ಹಾಯೆನುತ ಬಿಸುಸುಯ್ದ

ಮರುಗಲಿನ್ನೇಕರಸ ಬಿಡು ವಿಧಿಬರೆದ ಬರೆಹವ ತಪ್ಪಿಸಲು ಹರಿಹರವಿರಿಂಚಾದಿಗಳಿಗಳವೇ ನಮ್ಮ ಪಾಡೇನು?ಹರೆವುದಾಕ್ಷಣ ತುಂಬುವುದು ಗೋಚರಿಸುವುದು ಸಿರಿ ನಿತ್ಯವೇನಿದನರಿಯದವನೇ ನೋಯಲೇಕೆಂದಳು ಸರೋಜಮುಖಿ

ನುಡಿಯ ಕೇಳುತ ಮನದಿ ಮಿಡುಕುತಪೊಡವಿಪನು ಸತಿಸಹಿತ ಘನಘೋರಡವಿಯಲಿ ಬರುತಿರೆ ಜಗನ್ಮೋಹನದ ಪಕ್ಷಿಗಳುಪೊಡವಿಗಿಳಿಯಲು ಕಂಡಪೇಕ್ಷಿಸಿಪಿಡಿವೆನಂದುರವಣಿಸಿ ನೃಪ ಹಚ್ಚಡವ ಬೀಸಿದಡದನು ಕೊಂಡೊಯ್ದುವು ನಭಸ್ಥಳಕೆ

ಮೂಗಿನಲಿ ಬೆರಳಿಟ್ಟು ಮಕುಟವತೂಗಿದನು ನಸುನಗುತ ನಿಂದಿರಲಾಗ ಸೂಚಿಸಿದವು ನಿರಂತರ ರಾಜ್ಯಭೋಗವನುಬೇಗದಿಂದಪಹರಿಸಿಕೊಂಡವರೀಗವಾವಿದನರಿದಿರೆಂದು ಸರಾಗದಿಂದಲಿ ಮಾಯವಾದುವು ಪಕ್ಷಿಯುಗಳಗಳು

ಧರಣಿಪತಿ ಕೇಳ್ ನಿಷಧಪತಿ ಕಲಿಪುರುಷ ಮಾಯವ ಬಲ್ಲನೇ ಮನಮರುಗಿ ನಿರ್ವಾಣದಲಿ ನಿಂದಿರಲಾಗ ಸತಿ ಕಂಡುಹರಹರಾಯೆನುತಾಗ ಸೀರೆಯಸೆರಗ ಹರಿದಿತ್ತಳು ನೃಪಾಲಗೆಶಿರವ ನಸುಬಾಗಿದನು ನಾಚಿಕೆಯಾಗಲಿಂತೆಂದ

ಧರೆಯ ನೃಪರಿಗೆ ನಿಷಧಪುರಪತಿಯರಮನೆಯ ಬಾಗಿಲಿನ ಸುಮುಖವುದೊರಕಲದು ತಾ ಪುಣ್ಯವೆಂಬೀಯರಸುತನ ನಮಗೆಹರೆದುದೆಲ್ಲ ಸಮಸ್ತರಾಜ್ಯದಸಿರಿಗೆ ಬಾಹಿರನಾಗಿ ಸತಿಯಳಸೆರಗನುಡುವಂತಾಯ್ತೆ ಹರಹರಯೆನುತ ಬಿಸುಸುಯ್ದ

ಧರೆಯ ಸಂಪದದಷ್ಟ ಭೋಗವಪರಿಹರಿಸಿ ನಿಜಪುತ್ರಮಿತ್ರರತೊರೆದು ನಂಬಿದ ಸತಿಯ ಘೋರಾರಣ್ಯಮಧ್ಯದಲಿಹಿರಿದು ಬಳಲಿಸಿ ನೋಯಿಸಿದ ಕೇಳ್‍ತರುಣಿಯೆನ್ನವೊಲಾರು ಪಾಪಿಗಳಿರದೆ ನೀ ಹೋಗಿನ್ನು ತಂದೆಯ ಮನೆಗೆ ನಡೆಯೆಂದಾ

ಇನಿಯನಾಡಿದ ನುಡಿಗೆಯಂಗನೆಕನಲಿ ನುಡಿದಳು ಶೋಕದಲಿ ನೀನಿನಿತು ಮುನಿದಾಡುವರೆ ಸಾಕಿನ್ನಾರು ಗತಿಯೆನಗೆಅನುದಿನವು ನಾ ನಿಮ್ಮ ಪದಯುಗವನಜವನು ಭಜಿಸುವುದ ತೊರೆದೀತನುವ ಸೈರಿಸಲಾಪೆನೇ ಹೇಳೆಂದಳಿಂದುಮುಖಿ

ನೆಳಲು ತನುವಿನ ಬಳಿಯೊಳಲ್ಲದೆಚಲಿಸುವುದೆ ತಾ ಬೇರೆ ನಿಮ್ಮಡಿನಳಿನದಲಿ ಸುಖದುಃಖವಲ್ಲದೆ ಬೇರೆ ಗತಿಯುಂಟೆಹಳುವವೇ ಸಾಮ್ರಾಜ್ಯ ನಿಮ್ಮಡಿನೆಳಲಿನಲಿ ತಾನಿರುವೆನಲ್ಲದೆನಿಳಯವೇ ನನಗಡವಿಯೆಂದೆರಗಿದಳು ಪದಯುಗಕೆ

ಎನುತ ಸುರಿದಳು ಕಣ್ಣಿನಲಿ ಕಂಬನಿಯ ಮಿಡಿದಳು ಬೆರಳಿನಲಿ ಮುನ್ನಿನಲಿ ಮಾಡಿದ ಕರ್ಮಫಲವಿದಕೇನ ಮಾಡುವುದುಎನಗೆ ಚಿಂತಿಸಲೇಕೆ ನೀನಿಂದಿನಲಿ ನಿರ್ಮಲಚಿತ್ತದಲಿ ಕಾನನವ ಸಂಚರಿಸುವೆನು ನಿಮ್ಮೊಡನೆಂದಳಿಂದುಮುಖಿ

ಶೋಕವೇಕೆಲೆ ತರುಣಿ ಬಾರೆಂದಾ ಕಮಲಲೋಚನೆಯ ತೋಳಿನೊಳೌಕಿ ಬಿಗಿಯಪ್ಪಿದನು ಸೆರಗಿನೊಳೊರಸಿ ಕಂಬನಿಯಜೋಕೆಯಲಿ ಕುಳ್ಳಿರಿಸಿ ತೊಡೆಯೊಳನೇಕ ಪ್ರೀತಿಯೊಳೆಂದ ನೀನವಿವೇಕಿಯೇ ಬಿಡು ಮನದ ದುಗುಡವನೆಂದನಾ ನೃಪತಿ

ಎಂದು ಸತಿಯಳ ಸಂತವಿಟ್ಟರವಿಂದನಾಭಧ್ಯಾನದಲಿ ಬರೆಮುಂದೆ ಘೋರಾರಣ್ಯವೆಸೆದುದು ಘನಭಯಂಕರದಿಸಂದ ಖಗಮೃಗವಲ್ಲಿ ನೆರೆದಿರೆಬಂದು ಹೊಕ್ಕರು ಕಾನನವನರವಿಂದಸಖ ಹೊದ್ದಿದನು ಮೆಲ್ಲನೆ ಪಶ್ಚಿಮಾಂಬುಧಿಯ

ಲೋಕಕಧಿಪತಿ ನಳನ ರಾಣಿಗೆಶೋಕ ಪರ್ಬಿದ ತೆರದಿ ಕತ್ತಲೆಲೋಕವನು ಮುಸುಕಿದುದು ಭರಣಿಯ ಮುಚ್ಚುವಂದದಲಿಭೀಕರಧ್ವನಿಗಳಿಗೆ ಹೆದರಿದಳಾ ಕಮಲಲೋಚನೆಯ ಕಡು ವಿವೇಕನಿಧಿ ಸಂತಯಿಸಿ ಬಿಗಿಯಪ್ಪಿದನು ತೂಪಿರಿದು

ತರುಣಿಯಂಜದಿರಂಜದಿರು ವಿಧಿಬರೆದ ಬರೆಹವಿದೆನುತ ವೃಕ್ಷದತರಗೆಲೆಯ ಹಾಸಿನಲಿ ಮಲಗಿಸಿ ಸತಿಯನೀಕ್ಷಿಸುತವರರತುನಮಚದಲಿ ಪವಡಿಸಿಪರಮಸುಖವಿಹ ಸತಿಗೆ ವಿಧಿಯಿದುಹರಹರಾಯೆನುತರಸ ಕಂಬನಿದುಂಬಿದನು ಮರುಗಿ

ಎಲ್ಲರೋಪಾದಿಯ ಪತಿವ್ರತೆಯಲ್ಲವೀ ದಮಯಂತಿ ಬಿಡುವವಳಲ್ಲ ತನ್ನನು ತರುಣಿ ಕಾಣದ ಕಡೆಗೆ ತೆರಳಿದರೆಅಲ್ಲಿ ತಂದೆಯ ಮನೆಗೆ ಹೋಗುವಳಿಲ್ಲಿ ತಾನಿರೆ ಬಿಡಳೆನುತ ಮನದಲ್ಲಿ ಯೋಚಿಸಿ ನಿದ್ರೆಗೈಸಿದನಾ ಮಹಾಸತಿಯ

ಮರೆದು ಮಲಗಿದಳವಳ ಮಗ್ಗುಲಸೆರಗ ಮೆಲ್ಲನೆ ಜಾರಿಸುತಲಾಗರಸ ವಸನವ ಕೊಂಡು ಮಲಗಿದ ಸತಿಯನೀಕ್ಷಿಸುತಮರುಗಿದನು ಮನದೊಳಗೆ ಹರಿಹರಿವರ ಜಗತ್ಪತಿ ಅಡವಿಯಲಿ ಎಚ್ಚರಿಸದೇ ತಾನೆಂದು ಪೋಗುವೆನೆನುತ ಬಿಸುಸುಯ್ದ

ಮಡದಿಯಗಲಿದ ಬಳಿಕ ಹತ್ತೆಂಟಡಿಯ ದಾಂಟುವ ಮರಳಿ ನಿಜಸತಿಯೆಡೆಗೆ ತಿರುಗುವ ಚಂದ್ರಬಿಂಬಾನನೆಯನೀಕ್ಷಿಸುವಅಡಸಿ ಬರೆ ದುಃಖದಲಿ ಮೆಲ್ಲಡಿಯಿಡುವ ಸತಿಯನು ನೋಡಿ ಮನದುಗ್ಗಡದ ಶೋಕದಿ ನಡೆದ ನಳನೃಪನೊಂದು ಯೋಜನವ

ಮರುಗುವುದು ಮನವೊಮ್ಮೆ ಕಂಗಳುಮರಳಿ ನೋಡುವುದೊಮ್ಮೆ ಸತಿಯಳಯಿರವ ಕಾಣದೆ ಕಳವಳಕೆ ಬೀಡಾದುದಾ ಹೃದಯಕರಗಿತರಸನ ಧೈರ್ಯ ಚಿತ್ತದಿಮುರಿದುದಗ್ಗದ ಮಹಿಮೆ ಶೋಕದಹೊರಿಗೆಯಲಿ ಕಾತರಿಸಿ ನಡೆದನು ನೃಪತಿ ಕೇಳೆಂದ

ಕರುಣೆದೋರದೆ ನೃಪತಿ ಸತಿಯಳತೊರೆದು ಬಿಸುಟನು ವನದೊಳಗೆ ಹುಲಿಕರಡಿ ಮೃಗದುಪಟಳವ ತಾನಿನ್ನೆಂತು ಸೈರಿಪಳೊಮೊರೆಯ ಲಾಲಿಸಿ ನೋಳ್ಪೆನೆಂದುರುತರದ ಪ್ರೇಮದಿ ಬಂದು ಸತಿಗೆಚ್ಚರಿಸುವಂದದಿ ತರಣಿ ತಲೆದೋರಿದನು ಪೂರ್ವದಲಿ

ನಳಿನಮುಖಿ ಮೈಮುರಿದು ನಿದ್ರೆಯತಿಳಿದು ಮೆಲ್ಲನೆ ನೋಡಿದಳು ಎಡಬಲವನೀಕ್ಷಿಸಿ ಪತಿಯ ಕಾಣದೆ ಬಲಿದ ಮೂರ್ಛೆಯಲಿಮಲಗಿದಳು ಮೈಮರೆದು ನಿಮಿಷಕೆತಿಳಿದು ಕಾಣದೆ ಕಾತರದಿ ಹಬಲಿಸಿ ಹಲುಬಿದಳಲ್ಲಿ ಗಿರಿತರುನಿಕರಮಧ್ಯದಲಿ

ಹಾ ರಮಣ ನಳನೃಪತಿ ಹಾ ರಣಧೀರ ಸದ್ಗುಣಹಾರ ರಿಪುಸಂಹಾರ ನಿತ್ಯೋದಾರ ನಿರ್ಮಿಳಸತ್ಯಸಂಚಾರಘೋರಕಾನನದೊಳಗೆ ನಂಬಿದನಾರಿಯನು ಬಿಸುಡುವರೆ ತನಗಿನ್ನಾರು ಗತಿ ಮುಖದೋರೆನುತ ಹಲುಬಿದಳು ದಮಯಂತಿ

ಪೊಡವಿಗಿಳಿವೆನೊ ಹಾಯ್ದು ಪಾವಕನೊಡಲ ಹೊಗುವೆನೊ ಕಾಳಕೂಟದಮಡುವಿನೊಳು ಮುಳುಗುವೆನೊ ಹಾಸರೆಯೊಳಗೆ ಬೀಳುವೆನೊಅಡಸಿದಾಪತ್ತಿನಲಿ ಗರಳವಕುಡಿವೆನೋ ತಾನೆನುತ ಸತಿ ಬಾಯ್ಬಿಡುತ ಕಾನನದೊಳಗೆ ತಿರುಗಿದಳಬಲೆ ಶೋಕದಲಿ

ಕಾಣಿರೇಯರಸಂಚೆಗಳೆ ನೀವ್ಕಾಣಿರೇ ನಿಜಪತಿಯ ಶುಕಪಿಕಕಾಣಿರೇ ಮೃಗಪಕ್ಷಿಗಳೆ ನಳಚಕ್ರವರ್ತಿಯನುಕಾಣಿರೇ ತರುಲತೆಗಳಿನಿಯನಕಾಣಿರೇ ನೀವೆಂದು ಶೋಕದೊಳೇಣಲೋಚನೆ ಹಲುಬಿದಳು ಹಲವಂಗದಲಿ ಪತಿಯ

ಮುಡಿಕೆದರಿ ಹುಡಿಯೊಳಗೆ ಹೊರಳುತಲೊಡಲನೀಡಾಡಿದಳು ಧರೆಯೊಳಗಡವಿ ಪಾಲಾಗೆಂದು ಪಡೆದಳೊ ತನ್ನ ನಿಜಜನನಿಮಡದಿಯರು ತನ್ನಂತೆ ಲೋಕದೊಳೊಡಲ ತೆತ್ತವರುಂಟೆ ಶೋಕದಿಪೊಡವಿಪತಿ ಮುಖದೋರೆನುತ ಹಂಬಲಿಸಿದಳು ಪತಿಯ

ಮಾನವಾಧಿಪ ಕೇಳು ಬನದಲಿಮಾನಿನಿಗೆ ಮತ್ತೊಂದು ಕಂಟಕಹಾನಿ ಬಂದುದನೇನನೆಂಬೆನು ಪತಿಗೆ ಬಾಯ್ಬಿಡುತಕಾನನದ ಬಳಿವಿಡಿದು ಬರೆ ಸುಮ್ಮಾನದಲಿ ತರಗೆಲೆಯ ಹಕ್ಕೆಯಮೌನದಲಿ ಉರಗೇಂದ್ರನಿದ್ದನು ಬಲಿದ ನಿದ್ರೆಯಲಿ

ತರಳೆ ಕಾಣದೆ ಬರುತ ಮೆಟ್ಟಿದಳುರಗಪತಿಯನು ಕೋಪದಲಿ ಮಿಗೆಸುರಿವ ಗರಳದಿ ರೌದ್ರಮಯರೂಪಿನಲಿ ಬಾಲಕಿಯತರುಬಿ ಹಿಡಿದುದು ತವಕದಲಿ ಹಿಮಕರನ ನುಂಗುವ ರಾಹುವಿನವೊಲ್ಅರಸ ಕೇಳಂಗನೆಯ ವಿಧಿಯನು ಹೇಳಲೇನೆಂದ

ಹಾ ರಮಣ ನಳನೃಪತಿ ತನ್ನನದಾರಿಗೊಪ್ಪಿಸಿ ಕಳೆದೆ ಹರಿಹರಿಕ್ರೂರಸರ್ಪನ ಬಾಯ್ಗೆ ತುತ್ತಾದೆನೆ ಜಗನ್ನಾಥಆರಿಗೊರಲುವೆನಿನ್ನು ಪ್ರಾಣವನಾರು ಕಾವವರಕಟ ಬಿಡಿಸೈವಾರಿಜಾಕ್ಷ ಮುಕುಂದ ಸಲಹೆಂದೊರಲಿದಳು ತರಳೆ

ಶೈಲಶಿಖರದೊಳಿರ್ದು ಕೇಳಿದಬಾಲಕಿಯ ಶೋಕವನು ಬಿಲ್ಲಿನಕೋಲುಗಾರನು ಕರೆದ ಬಿಲ್ಲಿನ ಶಬರನೈತಂದುಆ ಲತಾಂಗಿಯ ಪಿಡಿದು ನುಂಗುವಕಾಲಭುಜಗನ ಕಂಡು ನಿಜಕರವಾಳದಲಿ ಖಂಡಿಸಿದನಹಿಯನು ಬಿಡಿಸಿದನು ಸತಿಯ

ಹಾಯೆನುತ ಸುರರುಲಿಯೆ ಹಾವಿನಬಾಯೊಳಗೆ ಸಿಲುಕಿರ್ದ ಕಮಲದಳಾಯತಾಕ್ಷಿಯ ಬಿಡಿಸಿದನು ಸಂತೈಸಿದನು ಸತಿಯರಾಯ ಕೇಳೈ ರಾಹುವಿನ ಕಟವಾಯ ಚಂದ್ರನ ಸೆಳೆವವೋಲರಿದಾಯಿತಬಲೆಗೆ ಮೂರ್ಛೆ ತಿಳಿದುದು ಶಬರಮಂತ್ರದಲಿ

ಬಂದು ಕೆಂದಾವರೆಯ ಕೊಳದಲಿಮಿಂದು ನಿಂದಿರೆ ಶಬರನೆಂದನುಇಂದುಮುಖಿ ನೀನೆನಗೆ ಸತಿಯಾಗೆನಲು ಖತಿಗೊಂಡುಇಂದೆನಗೆ ಅಸುವಿತ್ತು ಸಲಹಿದತಂದೆಯಲ್ಲವೆ ನೀನು ಕೇಳು ಪುಳಿಂದ ಮುಳಿದರೆ ಶಪಿಸುವೆನು ಹೋಗಂದಳಿಂದುಮುಖಿ

ತರುಣಿ ಕೋಪಿಸಿ ನುಡಿಯೆ ಭಯದಲಿಶಿರವ ಬಾಗಿ ಪುಳಿಂದನತ್ತಲುಮರಳಿದನು ದಮಯಂತಿ ಮನದಲಿ ಪತಿಗೆ ಹಂಬಲಿಸಿಮರುಗುವಳು ಬನದೊಳಗೆ ಭೂಪನನರಸಿ ಕಾಣದೆ ಬಯಲನಪ್ಪುವಳುರವಣಿಪ ಕಣ್ಣೀರಿನಲಿ ನಡೆತದಳಿಂದುಮುಖಿ

ಅರಸ ಕೇಳಾಶ್ಚರ್ಯವನು ಸತಿಬರುತಿರಲು ಕಾನನದಿ ನೆರೆದಿಹಮರುಳು ಬಳಗವು ಭೂತಬೇತಾಳಗಳು ತೊಲಗಿದುವುಶರಭ ಮೊಲ ಕಾಡಾನೆ ಸಿಂಹಗಳಿರದೆ ಜಾರಿದುವಲ್ಲಿ ಸತಿಯಳಪರಮಪಾತಿವ್ರತ್ಯಮಹಿಮೆಗೆ ನೃಪತಿ ಕೇಳೆಂದ

ಮುಂದೆ ಕಂಡಳು ಹೊಳೆವ ತಾಪಸವೃಂದವನು ಕಣ್ಣೀರ ಸುರಿಸುತಬಂದವಳನುರೆ ಕೇಳಿದರು ಮುನಿವರರು ಕರುಣದಲಿಇಂದುಮುಖಿ ನೀನಾರು ಇಲ್ಲಿಗೆಬಂದ ಹದನೇನೆನಲು ಶೋಕದಿನೊಂದು ನುಡಿದಳು ಮುನಿಗಳಿಗೆ ಕೈ ಮುಗಿದು ವಿನಯದಲಿ

ಏನನೆಂಬೆನು ತನ್ನ ಪುಣ್ಯದಹಾನಿಯನು ಚಿತ್ತವಿಸಿ ಕರುಣದಿಮಾನನಿಧಿಗಳು ಬಲ್ಲಿರೇ ನಳಚಕ್ರವರ್ತಿಯನುಆ ನರೇಂದ್ರನ ಮಡದಿ ತಾ ಮುನ್ನೇನ ನೋಂತೆನೊ ಪತಿಯಗಲಿ ಘನಕಾನನಕೆ ಗುರಿಯಾದೆನೆಂದಳು ತರುಣಿ ಬಿಸುಸುಯ್ದು

ಭೂತಳವ ನಳನೃಪತಿ ದ್ಯೂತದಿಸೋತು ಪುಷ್ಕರಗಿತ್ತು ಸತ್ಯದನೀತಿ ತಪ್ಪದೆ ಬಂದು ಬನದಲಿ ತನ್ನನಗಲಿದನುಧಾತುಗುಂದದೆ ಪತಿಯ ಕಾಣದೆಭೀತಿಯಲಿ ನಿಮ್ಮಡಿಯ ಕಂಡೆನುಭೂತದಯೆ ನಿಮಗುಂಟಲಾ ಸಲಹೆಂದಳಿಂದುಮುಖಿ

ನೆನೆದುದಂತಃಕರಣ ಕೇಳುತಮುನಿಗಳೆಂದರು ತಾಯೆ ಶೋಕದಿಕನಲಿ ಕಂಗೆಡಬೇಡ ನಿಜಪತಿರಾಜ್ಯಸಿರಿಸುತರುನಿನಗೆ ಬಂದಪರಿನ್ನು ಯೋಗದಮನದಲರಿದೆವು ನಾವು ಅಂಜದಿರೆನುತ ಪೇಳಿಯದೃಶ್ಯವಾದರು ಮುನಿಗಳೊಗ್ಗಿನಲಿ

ಆ ತರುಣಿ ಬೆರಗಾಗಿ ಕನಸಿನರೀತಿಯಾಯ್ತಕಟಕಟ ಮೌನಿವ್ರಾತವೆತ್ತಲು ಸರಿದುದೋ ವಿಸ್ಮಯವಲಾಯೆನುತಆ ತಳೋದರಿ ಪತಿಯ ಕಾಣದೆಕಾತುರದಿ ಬರುತಿರಲು ಕಂಡರುನೂತನದ ಬೇಹಾರಿಗಳು ತೊಳಲುವ ನಿತಂಬಿನಿಯ

ಆರಿವಳು ವನಲಕ್ಷ್ಮಿಯೋ ಸುರನಾರಿಯೋ ಮಾರಾಂಗನೆಯೊ ಮದನಾರಿಸತಿಯೋ ಸರಸತಿಯೊ ಮೇಣಸುರಮಾನಿನಿಯೊಆರ ವನಿತೆಯೊ ಮಾಯರೂಪಿನಭೂರಿಭೂತವೊ ತಿಳಿಯಲರಿದಿವಳಾರೆನುತ ಭಯಗೊಂಡು ಓಡಿದರಲ್ಲಿ ಬಣಜಿಗರು

ನೋಡಿದಳು ದಮಯಂತಿ ಭೀತಿಯಲೋಡುತಿಹ ಬೀಡಿಕೆಯ ವೈಶ್ಯರಹೇಡಿತನವನು ಕಂಡು ನಸುನಗುತಲ್ಲಿಗೈತಂದುಓಡಲೇತಕೆ ನಿಮಗೆ ಉಪಹತಿಮಾಡುವಳು ತಾನಲ್ಲ ಜಗಕತಿರೂಢಿಸಿದ ನಳನೃಪನ ಸತಿ ತಾನೆಂದಳಿಂದುಮುಖಿ

ವೀರಸೇನನ ತನಯ ನಳನೃಪಧಾರಿಣಿಯನುರೆ ಸೋತು ಕಾರ್ಯದಕಾರಣದಿ ನಡೆತಂದನಡವಿಗೆ ತನ್ನನಗಲಿದನುದಾರಿದಪ್ಪಿದೆನಿಲ್ಲಿ ನಿಮ್ಮನುಸೇರಿದೆನು ಪರದೇಶಿ ತನಗೊಂದೂರ ತೋರಿರೆ ನೀವೆನುತ ತುಂಬಿದಳು ಕಂಬನಿಯ

ತಾಯೆ ನಿಮ್ಮ ಪದಾಬ್ಜದರ್ಶನವಾಯಿತೆಮಗಿಂದಿನಲಿ ಧನ್ಯರುಈಯವಸ್ಥೆಗೆ ತಂದುದೇ ವಿಧಿ ನಿಮ್ಮನೆನುತೆರಗಿನೋಯದಿರಿಯಿದೆ ಚೈದ್ಯಪುರವೆಂದಾ ಯುವತಿಯೊಡಗೊಂಡು ಬರುತಿರೆತೋಯಜಾಪ್ತನು ಪಸ್ಚಿಮಾಂಬುಧಿಗಿಳಿದನೊಲವಿನಲಿ

ಹಗಲು ಸವೆದುದು ಹೊಂಬಿಸಿಲು ನೆರೆದೆಗೆದುದತಿವೇಗದಲಿ ಕತ್ತಲೆಬಿಗಿದುದವನೀತಳವ ಪೆಟ್ಟಿಗೆ ಮುಚ್ಚಿದಂದದಲಿಸುಗುಣೆ ದಮಯಂತಿಯಳ ನೋಡಲುಸೊಗಸಿ ಬಂದನಿಮಿಷರವೋಲ್ ತಾರೆಗಳು ಮೂಡಿದುವಂಬರದಿ ಪ್ರಜ್ವಲಿಪ ಕಾಂತಿಯಲಿ

ಅವನಿಪತಿ ಕೇಳ್ ವೈಶ್ಯಕುಲಸಂಭವರು ಹಾಯ್ಕಿದರಲ್ಲಿ ಗೂಡಾರವನು ಬಿಟ್ಟರು ಪಾಳೆಯವ ಮಲಗಿದರು ರಾತ್ರಿಯಲಿಅವಧಿ ಬಂದುದನೇನನೆಂಬೆನುಕವಿದು ಕಾಡಾನೆಗಳು ಮಡುವಿಗೆತವಕದಿಂ ನೀರಡಿಸಿ ಬಂದುದು ಸಿರಿಗಳದದಲಿ

ಮುರಿದು ತರುಗಳನಿಡುತ ಮೆಳೆಗಳನೊರಸಿ ಮೆಟ್ಟುತ ಕೋಡಿನಲಿ ಬಲುಮೊರಡಿಗಳ ಕಿತ್ತಿಡುತ ಸೊಂಡಿಲ ತೂಗಿ ಮದವೇರಿಕರಿಗಳೈತರೆ ಕಂಡು ಭೀತಿಯೊಳಿರದೆ ಹಾಯ್ದರು ಕೆಲವರು ಧೈರ್ಯದೊಳುರುಬಿ ನಿಂದರು ಸಬಳದಲಿ ಹೊಕ್ಕಿರಿದು ಕಾದಿದರು

ತೂಳಿದುವು ಮದಕರಿಗಳವರನುಸೀಳಿ ಹಾಯ್ದುವು ಕೆಲರ ಮುಮ್ಮೊನೆಯಾಳು ಕವಿದುದು ಹೊಕ್ಕು ಕಾದಿದರತುಳಭುಜಬಲರುತಾಳಬಲ್ಲರೆ ಕೆಲರು ಕರಿಗಳದಾಳಿಗಿದಿರೇ ಮುರಿದು ಹಾಯ್ದರುಹೇಳಲೇನದನರಸ ತೆಗೆದೋಡಿದರು ದೆಸೆದೆಸೆಗೆ

ತರಹರಿಸಿ ನಿಲಲರಿದು ಕರಿಗಳಉರುಬು ಘನಪಿಟ್ಟಣಿಸಿ ಕೊಲುತಿದೆಹರಣವನು ಹೋಗಾಡಲೇಕೆಂದುಳಿದ ಪಟುಭಟರುತೆರಳಿತಲ್ಲಿಯದಲ್ಲಿ ವಾಣಿಜ್ಯರು ಮುರಿದು ಬರೆ ಕಾಣಿತಾ ವೈಶ್ಯರಿಗಧಿಪ ಚಿಂತಿಸಿದ ಹದನೇನೆಂದು ಮನದೊಳಗೆ

ಅಮ್ಮ ಕೇಳೀ ಮದಗಜಂಗಳುನಮ್ಮ ಕೊಲುತಿವೆ ಹದನ ಕಾಣೆನುನಮ್ಮನೇ ನೆರೆ ನಂಬಿ ಬಂದಿರಿ ಇದಕೆ ಗತಿಯೇನುನಿಮ್ಮನಿಲ್ಲಿಗೆ ತಂದುದೇ ವಿಧಿಬೊಮ್ಮಬರೆಹವ ಮೀರುವವರಾರಮ್ಮಲೋಕದೊಳೆಂದು ಮರುಗಿದ ವೈಶ್ಯಕುಲತಿಲಕ

ಜನನವೇ ವರಭೀಮರಾಯನಮನೆಯೊಳಗೆ ನಳಚಕ್ರವರ್ತಿಯೆಇನಿಯನಗ್ಗದ ವೀರಸೇನನೆ ಮಾವನಾಗಿರಲುವನದೊಳಿಭಕರಿಗಳಿಗೆ ತಾ ನಿಜತನುವ ತೆರಬೇಕೆಂಬ ಕಾರಣತನಗಿರಲು ನೀವೇನ ಮಾಡುವಿರೆಂದಳಿಂದುಮುಖಿ

ಎನುತ ಕಣ್ಣೆವೆ ಬಿಗಿದು ಮನದಲಿನೆನೆದಳಚ್ಯುತನಂಘ್ರಿಕಮಲವವನಜನಾಭ ಮುಕುಂದ ಸಲಹೆನೆ ಕರಿಗಳಾಕ್ಷಣಕೆವನಕೆ ಮರಳಿದುವವರನೆಲ್ಲರವನಿತೆ ಸಂತೈಸಿದಳು ದೈವವನೆನೆದ ಭಕ್ತರಿಗುಂಟೆ ಭಯವೆಲೆ ನೃಪತಿ ಕೇಳೆಂದ

ಕಳೆದರದಿನ ರಾತ್ರಿಯನು ರವಿಬೆಳಗಿದನು ಪೂರ್ವಾದ್ರಿಯಲಿ ಸಂದಣಿಸಿ ನಡೆದರು ಮುಂದೆ ಕಂಡರು ಚೇದಿಪಟ್ಟಣವಹೊಳೆವ ಹೇಮದ ಸೌಧಗಳ ತಳತಳಿಪ ನೆಲೆಯುಪ್ಪರಿಗೆಗಳ ಕಂಡೊಲಿದು ಮನಹರುಷದಲಿ ಹೊಕ್ಕರು ಸತಿಸಹಿತ ಪುರವ

ರಸದ ಲೇಪದ ಮಿಸುನಿಯೊ ಮಲಿನವಸನದಲಿ ಹುದುಗಿರ್ದ ರತ್ನವೊನಸಿದ ಮೇಘದೊಳೆಸೆವ ಚಂದ್ರನ ಬಿಂಬದಂದದಲಿಶಶಿವದನೆ ಬರುತಿರಲು ಪುರಜನವೊಸೆದು ನೋಡಿದುದಲ್ಲಿಗಲ್ಲಿಗೆಬಿಸಜಮುಖಿಯಿವಳಾರೆನುತ ಬೆರಗಾಯ್ತು ಜನನಿಕರ

ನುಡಿಗೆ ಶುಕಪಿಕ ನಲಿಯೆ ಮಿಗೆ ಸೆಳೆನಡು ಬಳುಕೆ ವೃತ್ತಸ್ತನಕೆ ಸೋರ್ಮುಡಿಯ ಭಾರಕೆ ಕೊರಳು ಕೊಂಕಲು ಮೆಲ್ಲಡಿಯನಿಡುತಕುಡಿತೆಗಂಗಳ ನೋಟ ಕಾರ್ಮುಗಿಲೊಡೆದು ಮಿಂಚುವ ಮಿಂಚಿನಂದದಿಸಡಗರದಿ ಬರುತಿರ್ದಳಂಗನೆ ಹೊಳಲ ಬೀದಿಯಲಿ

ಹೇಮದುಪ್ಪರಿಗೆಯಲಿ ನೃಪಸತಿಕಾಮಿನಿಯರೋಲಗದೊಳೊಪ್ಪುತತಾಮರಸದಳನಯನೆ ದಮಯಂತಿಯನು ತಾ ಕಂಡುಈ ಮಹಾಸತಿ ಯಾವಳೋ ಸುತ್ರಾಮನರಸಿಯೊ ಎನುತ ಕರೆಸಿದಡಾ ಮಹಿಳೆ ಬಂದಳು ನೃಪಾಲನ ಸತಿಯ ಸಮ್ಮುಖಕೆ

ತಾಯೆ ನೀನಾರಾವ ದೇಶದರಾಯನರಸಿಯಿದೇನು ನಿನಗೀಪ್ರಾಯದಲಿ ಕಳೆಗುಂದಿ ಮಾಸಿಹುದೇನು ಪೇಳೆನಲುಆ ಯುವತಿ ಕಣ್ಣೀರಿನಲಿ ಪೂರಾಯ ಶೋಕದಲೆಂದಳಾ ತರಳಾಯತಾಕ್ಷಿಗೆ ತನ್ನ ವೃತ್ತಾಂತವನು ಬಿಸುಸುಯ್ದು

ಕ್ಷಿತಿಯನೆಲ್ಲವ ಸೋತು ಜೂಜಲಿಪತಿ ಬನಕೆ ಬಂದೆನ್ನನಗಲಿದಮತಿವಿಕಳತನದಿಂದ ತಿರುಗುತ ಬಂದೆ ನಿಮ್ಮಡಿಗೆಹಿತವರಾರನು ಕಾಣೆ ನೀವೇಗತಿಯೆನಗೆ ಪರದೇಶಿಯನು ಪರಹಿತವೆ ಪುಣ್ಯವು ರಕ್ಷಿಸೆಂದಳು ನಳನೃಪನ ರಾಣಿ

ನುಡಿಯ ಕೇಳುತ ಚೈದ್ಯಭೂಪನಮಡದಿ ನೂಪುರ ಘಲಿರುಘಲಿರೆನಲಡಿಯಿಡುತ ಬಂದಪ್ಪಿ ಸೆರಗಿನೊಳೊರಸಿ ಕಂಬನಿಯಬಿಡು ವ್ಯಥೆಯ ವರಭೂಷಣಂಗಳತೊಡು ದುಕೂಲವನುಡು ಸುಮಾಲ್ಯವಮುಡಿಗೆ ಸೇರಿಸು ತರುಣಿಯೆಂದಳು ಚೈದ್ಯನೃಪನರಸಿ

ದೇವಿ ನಿಮ್ಮುಪಚಾರವೇ ಸಂಭಾವನೆಯಲಾ ನಮಗೆ ಬೇರಿನ್ನಾವ ಭೂಷಣವೇಕೆ ದೇಸಿಗರಾವು ನಿಮ್ಮಡಿಯಸೇವೆಯಲಿ ತಾನಿಹೆನು ಹೀನವನಾವು ಬಳಸುವರಲ್ಲ ತನ್ನನುಕಾವ ಹದನನು ನೀವೆ ಬಲ್ಲಿರಿಯೆಂದಳಾ ಸತಿಗೆ

ಎನಲು ನಸುನಗುತೆಂದಳಾ ಮಾನಿನಿಗೆ ತಮ್ಮಿಂದಾಗದುಪಹತಿನಿನಗೆ ಪೇಳೆವು ಹೀನಕೆಲಸವ ಚಿಂತೆ ಬೇಡಿನ್ನುತನಗೆ ಮಗಳು ಸುನೀತಿಯಾಕೆಯಮನೆಯೊಳಿರು ಸೈರಂಧ್ರಿತನದಿಂದನವರತ ನೀನೆಂದು ನೇಮಿಸಿ ಕಳುಹಿದಳು ಮನೆಗೆ

ಚೇದಿಭೂಪನ ಮಡದಿ ತನ್ನ ಸಹೋದರಿಯ ಸುತೆಯೆಂದು ಬಲ್ಲಳೆಮೇದಿನಿಯೊಳಿವಳಾರ ಸತಿಯೆಂದರಿಯದಾಕೆಯನುಆದರಿಸಿ ಸಲಹಿದಳು ಮಗಳೋಪಾದಿಯಲಿ ದಮಯಂತಿಯನು ಮನಭೇದವಿಲ್ಲದೆ ಕರುಣದಿಂದಂಗನೆಯ ನೃಪನರಸಿ

ಮನದ ದಗೆಯಡಗಿತು ಸುನೀತಿಯಮನೆಯೊಳಿದ್ದಳು ಭೇದವಿಲ್ಲದೆಅನುದಿನದೊಳಾಹಾರ ನಿದ್ರಾಂಗನೆಯ ತಾನುಳಿದುವನಜನಾಭನ ಕರುಣದಲಿ ಬಂದಿನಿಯನೆಂದಿಗೆ ಮುಖವ ತೋರುವನೆನುತ ಚಿಂತಿಸುತಿರ್ದಳಾ ವರಪುರದ ಚೆನ್ನಿಗನ