EN | KA

Menu

III

Naḷacaritre

ರಾಜಿಸುವ ವರಭೀಮಪುರದಲಿರಾಜ ನಳನೃಪ ಮದುವೆಯಾಗಿ ಸರಾಜತೇಜದಿ ಬಂದು ಹೊಕ್ಕನು ಪುರವ ಸತಿಸಹಿತ

ಕೇಳು ಧರ್ಮಜ ನಳನ ರೂಪನುಕೇಳಲೀ ಹದನಾಯ್ತು ಸತಿಗೆ ನೃಪಾಲನಂಗವು ಗೋಚರಿಸಲೆಂತಹುದೊ ವಿರಹಾಗ್ನಿನಾಲಗೆಗೆ ದ್ರವವಿಲ್ಲ ಮಂಚದಮೇಲೆ ಮಲಗಳು ಬಲಿದವಸ್ಥೆಯಹೇಳಲಿನ್ನೇನರಸ ದಮಯಂತಿಯ ಮನೋವ್ಯಥೆಯ

ಲಲನೆ ನಿದ್ರಾಂಗನೆಯನುಳಿದಳುಹೊಲಬುದಪ್ಪಿದ ಮನದಿ ಸತಿಯರುಸುಳಿಯೆ ನಳನೃಪ ಬಂದನಿದೆಯೆಂದೆನುತ ಕಳವಳಿಸಿನಿಲುಕಿ ನೋಡುವಳೊಮ್ಮೆ ಕಾಣದೆಹಲುಬುವಳು ಮತ್ತೊಮ್ಮೆ ಕಂಡದಕೆಳದಿಯರು ತಮ್ಮೊಳಗೆ ತಾವಾಲೋಚಿಸಿದರಲ್ಲಿ

ವಿರಹ ಬಲಿದುದು ಸತಿಗೆ ನಾವಿದನರಸಗರುಹುವೆವೆಂದು ಕೆಳದಿಯರಿರದೆ ಬಂದರು ಭೀಮನೃಪಗಿಂತೆಂದರೀ ಹದನವರಕವಿಗಳಂದಿನಲಿ ಧರಣೀಶ್ವರನ ಕೈವಾರಿಸಲು ಕೇಳಿದುತರುಣಿ ವಿರಹಕೆ ತನುವ ತೆತ್ತಿಹಳೆಂದರಬಲೆಯರು

ಕೇಳಿದನು ನಸುನಗುತ ಭೀಮನೃಪಾಲ ತನ್ನಾತ್ಮಜೆಯ ಯೌವನದೇಳಿಗೆಯನಾಲಿಸುತ ವರನಾರೆಂದು ಚಿಂತೆಯಲಿಓಲಗಕೆ ನಡೆತಂದು ಬರೆಸಿದನೋಲೆಗಳ ಕಳುಹಿಸಿದನು ಧರಣೀಪಾಲಕರ ಬರಹೇಳೆನುತ ಹೊಯಿಸಿದನು ಡಂಗುರವ

ಹರಿದರರಸಾಳುಗಳು ದಿಕ್ಕುಗಳರಸುಗಳ ನಗರವನು ಇತ್ತಲುಪುರವ ಶೃಂಗರಿಸಿದರು ಭೀಮನೃಪಾಲನಾಜ್ಞೆಯಲಿತರಿಸಿದರು ಭಂಡಾರದಲಿ ನವಭರಿತವಾದ ಸುವಸ್ತುಗಳ ವಿಸ್ತರಿಸಿ ಕಟ್ಟಿದರಗಲದಲಿ ವೈವಾಹಮಂಟಪವ

ಹೊಳೆವ ದಂತದ ಕಂಬಗಳ ಪುತ್ತಳಿಯ ಸಾಲಿನ ಮೇಲುಕಟ್ಟಿನತಳಿರ ತೋರಣದೋರಣದ ಲೋವೆಗಳ ಅರಳೆಲೆಯಬಿಳಿಯ ಮುತ್ತಿನ ಸರದ ಪವಳದಬಿಳಿಯ ಚೌರಿಯ ಮೇಲುಗಟ್ಟಿನಹೊಳಹು ಮಿಗೆ ರಚಿಸಿದರು ಸತಿಯ ವಿವಾಹಮಂಟಪವ

ಓರಣದ ಬೀದಿಗಳ ಸಾದಿನಸಾರಣೆಯ ಕತ್ತುರಿಯ ಮಿಗೆ ಪನ್ನೀರ ಚಳೆಯದ ಪರಿಮಳದ ಕುಂಕುಮದ ಕಾರಣೆಯತೋರಣದ ತಳಿಗೆಗಳ ಘನಸಿಂಗಾರವೆಸೆಯುವ ಕೇರಿಕೇರಿಯವಾರನಾರಿಯರಿಂದ ಸಂದಣಿಸಿತು ವಿದರ್ಭಪುರ

ಮಾಳವಾಂಧ್ರ ಕಳಿಂಗ ಕೋಸಲಚೋಳ ಮತ್ಸ್ಯ ವರಾಳ ಕೊಂಕಣಗೌಳ ಕುಂತಳ ಮಗಧ ಬರ್ಬರ ಪಾಂಡ್ಯ ಕರ್ಣಾಟಲಾಳ ವಂಗ ಸುರಾಷ್ಟ್ರ ಕುರು ನೇಪಾಳ ಘೂರ್ಜರ ಸಿಂಧು ಮರು ಪಾಚಾಳ ಮೊದಲಾದಖಿಳ ಧರಣೀಪಾಲರೈದಿದರು

ಧರಣಿವಲಯ ದಿಗಂತದವನೀಶ್ವರರು ಭೂಸುರ ಸಿದ್ಧ ವಿದ್ಯಾಧರರು ಸುಜನರು ಮಲ್ಲ ಸಚಿವರು ಮಕುಟವರ್ಧನರುಪರಮಋಷಿಗಳು ಪಂಡಿತರು ಕವಿವರರು ನಟ ಗಾಯಕರು ವಿದ್ಯಾಧರರು ದೈವಜ್ಞರುಗಳಗಣಿತರಾಗಿ ನೆರೆದುದು ರಾಯ ಕೇಳೆಂದ

ಆ ಸಮಯದಲಿ ನಾರದನು ಹರಿವಾಸುದೇವಾಯೆಂಬ ವೀಣೆಯಭಾಸುರದ ಕರಗಳಲಿ ನುಡಿಸುತ ಮುನಿಗಳೊಗ್ಗಿನಲಿವಾಸವನ ಸಭೆಗೈತರಲು ಸಂತೋಷದಿಂದಿದಿರೆದ್ದು ಘನಸಿಂಹಾಸನದಿ ಕುಳ್ಳಿರಿಸಿ ಕೈಮುಗಿದೆಂದನಮರೇಂದ್ರ

ಎತ್ತಣಿಂದೈತಂದಿರುರ್ವಿಯೊಳುತ್ತಮರು ಧರಣೀಶರಲಿ ನೆರೆಸತ್ಯಧರ್ಮ ಸುಶೀಲರಾರುಂಟಲ್ಲಿ ಗುಣವೇನುಚಿತ್ತವಿಸಿ ಮುನಿನಾಥಯೆನಗದಬಿತ್ತರಿಸಿ ಪೇಳೆನಲು ಸುರಮುನಿಚಿತ್ತದಲಿ ನಸುನಗುತ ನುಡಿದನು ಪಾಕಶಾಸನಗೆ

ಅಮರಪತಿ ಕೇಳವನಿಯಲಿ ಭೂರಮಣರುಂಟು ಅನೇಕವವರೊಳುನಿಮಗೆ ಪೇಳ್ವೆ ವಿದರ್ಭಪುರಪತಿ ಭೀಮನೃಪತನುಜೆಕಮಲಮುಖಿ ದಮಯಂತಿಗೆವ್ವನಸಮತಳಿಸೆ ಚಿತ್ತದಿ ಸ್ವಯಂವರಕಮಿತಬಲ ನೃಪರೈದಿ ಬರುತಿರೆ ಧರಣಿಯಗಲದಲಿ

ಅಲ್ಲಿ ನೆರೆದ ಸಮಸ್ತ ಧರಣೀವಲ್ಲಭರನೇನೆಂಬೆ ಪಟ್ಟಣವೆಲ್ಲ ನೆರೆದುದು ದೇಶದೇಶಾಂತರದ ಯಾಚಕರುನಿಲ್ಲದೈತರುತಿರೆ ವಿವಾಹವನಲ್ಲಿ ನೋಡುವೆವೆನುತ ಮುನಿ ಕರಪಲ್ಲವದ ವೀಣೆಯಲಿ ಹಂಸವನೇರಿ ಹೊರವಂಟು

ಅರಸ ಕೇಳಮರೇಂದ್ರನಾ ಮುನಿವರನ ವಚನವ ಕೇಳಿ ಹೆಚ್ಚಿದವಿರಹದಲಿ ಕರೆಸಿದನು ಸತಿಯರಿಗೆಂದನೀ ಹದನಪರಮಸತಿ ದಮಯಂತಿಯಳನುಪಚರಿಯದಲಿ ಯೆನಗೊಲಿಯೆ ಮಾಡೆಂದುರುತರದ ವಸ್ತುಗಳನಿತ್ತಬಲೆಯರ ಬೀಳ್ಕೊಟ್ಟ

ತರಿಸಿಯೇರಿದ ದಿವ್ಯರಥವನುಕರೆಸಿದನು ಯಮ ವರುಣ ವಾಯವ್ಯರು ಸಹಿತ ಹೊರವಂಟನಮರಾವತಿಯನಮರೇಂದ್ರಧರೆಗಿಳಿದು ಬರೆ ಮುಂದೆ ಮಾರ್ಗದಿಸ್ಮರನ ರೂಪಿನ ನೈಷಧನ ಕಂಡರು ಮನೋರಾಗದಲಿ ಕಾಣಿಸಿಕೊಂಡರುಚಿತದಲಿ

ನಳಿನಮಿತ್ರನ ತೇಜದವೊಲಿಳೆಗಿಳಿವ ಮಹಿಮರ ಕಂಡು ರಥದಿಂದಿಳೆಗಿಳಿದು ಭಕ್ತಿಯಲಿ ನಳ ಕೈ ಮುಗಿದು ನಿಂದಿರಲುತಳಿತ ಹರುಷಾನಂದದಲಿ ಬರಸೆಳೆದು ಬಿಗಿಯಪ್ಪಿದರು ರಾಯನಚೆಲುವನೀಕ್ಷಿಸಿ ನಲಿದು ಕೊಂಡಾಡಿದರು ಮನವೊಲಿದು

ಕುಶಲವೇ ನಳನೃಪತಿ ಬಾರೈಶಶಿಕುಲೋದ್ಭವ ನಿನ್ನ ಪಿತನೀವಸುಧೆಗಧಿಪತಿ ವೀರಸೇನನು ಪರಮಸಖನೆಮಗೆಒಸೆದು ಬೇಡುವ ಕಾರ್ಯವಿದು ಭರವಸದಿ ಬಂದೆವು ನಮಗೆ ಫಲ ಸಿದ್ಧಿಸಿತು ಉಪಕಾರಾರ್ಥ ನಿನ್ನಿಂದಾಗಬೇಕೆಂದ

ಕರಿಗಮನ ಚಿತ್ತವಿಸು ನಾವೇನರರು ನಿಮಗಂತರವೆ ಸಾಕಂತಿರಲಿ ನಿಮ್ಮ ಪದಾಬ್ಜದರುಶನವಾದುದಿಂದಿನಲಿಹರುಷ ಮಿಗೆ ನಮಗೇನು ಬುದ್ಧಿಯಕರುಣಿಸುವಿರದ ಮಾಳ್ಪೆನೆನೆ ಶಚಿಯರಸನಾ ನುಡಿಗೇಳಿ ನಗುತಿಂತೆಂದನಾ ನೃಪಗೆ

ಭೂತಳದೊಳಿಹ ಸತಿಯರಲಿ ರೂಪಾತಿಶಯೆ ದಮಯಂತಿಯೆನಲಾಮಾತಿನಲಿ ಮನವೊಲಿದುದೆನಗವಳಲ್ಲಿ ನೀಪೋಗಿಆ ತಳೋದರಿಗುಚಿತವಚನಪ್ರೀತಿಪೂರ್ವಕದಿಂದ ಸತಿಯಳನೀ ತಿಳುಹಿಯನುಕೂಲೆಯನು ಮಾಡೆಂದನಮರೇಂದ್ರ

ಈತ ಪಿತೃಪತಿಯಮರಪತಿ ತಾನೀತ ವರುಣನು ವಾಯುವೀತನುಮಾತ ಮನ್ನಿಸು ಮಾಡು ನಮಗುಪಕಾರವನು ನೀನುಈ ತತುಕ್ಷಣದೃಶ್ಯವರವನುಪ್ರೀತಿಯಿಂದೊಲಿದಿತ್ತೆವಿಂದಿನೊಳಾ ತಳೋದರಿಯೊಲಿವ ಹದನನು ಮಾಡು ಹೋಗೆಂದ

ಕೇಳಿದಾ ಮಾತಿನಲಿ ಚಿಂತೆಯತಾಳಿದನು ಚಿತ್ತದಲಿ ನಳನೃಪಲೋಲಲೋಚನೆ ತನ್ನನೇ ಪತಿಯೆಂದು ಭಜಿಸಿಹಳುಆ ಲತಾಂಗಿಯ ಮೇಲೆ ಪರಮವಿಶಾಲಮನವಿಹುದಿನ್ನು ಶಿವಶಿವಬಾಲಕಿಯ ಬೆಸಗೊಳಲು ನಾಲಗೆಯೆಂತು ತನಗೆಂದ

ಎಂದು ಮನದಲಿ ಮರುಗಿ ವಿನಯದೊಳೆಂದನೆಲೆಯಮರೇಂದ್ರ ನಿಮಗಾಮಂದಗಮನೆಯನೊಳಗುಮಾಡೆಂದೆನಗೆ ಪೇಳ್ವಿರಲಹಿಂದುಗಳೆದರೆ ಮನಕೆ ಖತಿ ನಿಮಗಿಂದು ಬಾರದೆ ಬಿಡದು ಲೋಕದಿಯಿಂದುಮುಖಿಯರ ಗುಣವ ತಿಳಿಯಲಸಾಧ್ಯ ಕೇಳೆಂದ

ಆ ಯುವತಿಯರು ಕಾರ್ಯಗಳ ನೆರೆಬೀಯ ಮಾಳ್ಪರು ಕುಟಿಲವಿದ್ಯದಿಮಾಯೆಗಳ ಹಣ್ಣುವರು ನಿತ್ಯದಿ ಹುಸಿಯನಾಡುವರುಕಾಯವಳಿದರು ಅತರಗಜಬಾಯಬಿಡರನ್ಯಾಯಮಾಡುವರಾಯತಾಕ್ಷಿಯರಂಗವಿದು ಸುರರಾಜ ಕೇಳೆಂದ

ಕಪಟವನು ಬಿಡರಾತ್ಮಬುದ್ಧಿಯೊಳುಪಮೆಗಾಣದೆ ನುಡಿದು ಹೊಳೆವರುಚಪಲಚಿತ್ತದಿ ಮನವ ವಂಚಿಸಿ ಮಾತನಾಡುವರುಗುಪಿತವಳವಡದಾಪ್ತರೊಡವೆಯನಪಹರಿಸಿ ಸಾಹಸವ ಮೆರೆವರುನಿಪುಣೆಯರಿಗಿದು ಸಹಜಗುಣವಮರೇಂದ್ರ ಕೇಳೆಂದ

ಸಾವಿಗೆಣಿಸರು ಮನದಿ ಸತ್ಯವಭಾವಿಸರು ಹುಸಿಯೊಲುಮೆದೋರುವರಾವಪರಿಯಲಿ ಹೃದಯಗೊಡದನೃತಗಳನಾಡುವರುವಾವೆವರ್ತನವಿಲ್ಲ ಸತ್ಯಕೆಪಾವಕನ ಮುಟ್ಟುವರು ಸತಿಯರನಾವ ಪರಿಯಲಿ ನಂಬಬಹುದೈಯೆನುತ ಹೊರವಂಟ

ನಲವು ಹಿಂಗಿದ ಮನದಿ ನೃಪ ಮಾರ್ಬಲವನಲ್ಲಿಯೆ ನಿಲಿಸಿ ಬರುತಿರೆತಳಿತ ರತ್ನಪ್ರಭೆಯ ಸಾಲಿನ ಸೌಧಪಂಕ್ತಿಗಳಹೊಳೆವ ಕಲಶದ ಗೋಪುರದ ಕೊತ್ತಳದ ಸಾಲಿನ ಕೋಂಟೆಯನು ಕಂಡಲಘುಭುಜಬಲನೃಪತಿ ಹೊಕ್ಕ ವಿದರ್ಭಪಟ್ಟಣವ

ಅರಮನೆಯ ಬಾಗಿಲಿಗೆ ಬರಲಿತ್ತೆರದ ವೇದಿಕೆಗಳಲಿ ಪಟುಭಟರುರುತರದ ಕೈದುಗಳ ಕಾಹಿನ ದಾರವಟ್ಟದಲಿಇರಲು ಕಂಡಾ ತರುಣಿಯರು ಸಂಚರಿಸುತಿಹ ಸಡಗರವ ನಳಭೂವರನದೃಶ್ಯದ ರೂಪಿನಲಿಯೊಳಹೊಕ್ಕನರಮನೆಯ

ಆಗಲಾ ದಮಯಂತಿ ಚಿತ್ರದಬಾಗಿಲುಪ್ಪರಿಗೆಯಲಿ ರತ್ನದತೂಗುಮಂಚದ ಹಾಸಿನಲಿ ಕುಳ್ಳಿರಲು ಕೆಳದಿಯರುಆ ಗರುವೆಯೋಲಗದೊಳಿರುತಿರೆಪೂಗಣೆಯನೆಸುಗೆಯಲಿ ನಳಚರಿತಾಗಮದ ಕಥನಗಳ ತಾನಾಲಿಸುತ ಚಿತ್ತದಲಿ

ಬಂದರಲ್ಲಿಗೆ ಸುರಪ ಕಳುಹಿದಮಂದಗಮನೆಯರಖಿಳವಸ್ತುವತಂದು ಕಾಣಿಕೆಗೊಟ್ಟು ಕೈ ಮುಗಿದೆರಗಿ ನಿಂದಿರಲುಬದ ಸತಿಯರ ನೋಡಿ ನೀವೆಲ್ಲಿಂದ ಬಂದಿರಿ ನಿಮ್ಮ ಹದನೇನೆಂದು ಬೆಸಗೊಳೆ ವಿನಯದಿಂದರುಹಿದರು ಮಾನಿನಿಗೆ

ತಾಯೆ ಕೇಳಮರೇಂದ್ರ ನಿಮ್ಮ ನಿಜಾಯತದ ಚೆಲುವಿಕೆಯ ಕೇಳಿದುಕಾಯಜನ ಶರಹತಿಗೆ ನೊಂದುರೆ ಕಳುಹಿದನು ನಮಗೆಆಯತದ ಭೂಷಣವ ತೊಡು ಸುರರಾಯನಿಗೆ ಸತಿಯಾಗು ಮರ್ತ್ಯದರಾಯರಸ್ಥಿರರವರ ನೆಚ್ಚದಿರೆಂದರಾ ಸತಿಗೆ

ಪದವಿ ಯಾವುದು ಲೋಕದಲಿ ಸುರಪದವಿಯಲ್ಲದೆ ಬೇರೆ ಮಿಕ್ಕಿನಪದವಿಯುಂಟೇ ತಾಯೆ ಭಾವಿಸಿ ನೋಡು ಚಿತ್ತದಲಿಸದರವೇ ನರಜನ್ಮದವರಿಗೆಯೊದಗಲರಿಯದು ಪುಣ್ಯ ನಿನಗಿದುಸುದತಿ ಕರುಣಿಸು ಮಾತನೆಂದರು ನಗುತ ರಂಭೆಯರು

ಅಲರ ಪರಿಮಳದೆಡೆಗೆ ತುಂಬಿಗಳೊಲಿದು ಪೋಪಂದದಲಿ ಲೋಕದೊಳಲರು ವಿಕಸಿತವಾಗಿ ಹೋಹುದೆ ತುಂಬಿಯಿದ್ದೆಡೆಗೆಸಲೆ ತವಕದಿಂದಮರಪತಿಯೆಡೆಗೊಲಿದು ನೀ ಪೋಪಂತೆ ಸುರಪತಿನಲವಿನಿಂದಲಿ ನಿನ್ನ ಬಳಿಗೈದುವನು ಪುಣ್ಯವಲಾ

ಎನಲು ಕೇಳಿದಳಾ ನುಡಿಯ ಸುರವನಿತೆಗೆಂದಳು ಚಿತ್ತವೆನಗೊಬ್ಬನಲಿ ಸಿಲುಕಿತು ಮರಳಿಪಡೆ ಕಮಲಾಕ್ಷಗಳವಲ್ಲಅನಿಮಿಷಾಧಿಪ ತನಗೆ ದೇವಾಂಗನೆಯರಿರುತಿರೆ ಮನಜಸತಿ ಪಾವನವೆ ಬರಿದೆ ದುರಾಸೆ ತನಗೇಕೆಂದಳಿಂದುಮುಖಿ

ಮರಳಿದರು ಸುರಸತಿಯರಿತ್ತಲುಬರುತೆ ನಳನೃಪತಿಲಕ ತಾ ಮನಹರುಷದಲಿ ನಿಜರೂಪ ತಾಳ್ದನು ರಾಜತೇಜದಲಿಅರಸನಿರೆ ದಮಯಂತಿ ಕಂಡಚ್ಚರಿಯ ಮದನನೊ ನಳನೊ ನಳಕೂಬರನೊ ಜಯಂತನೊ ಎನೆ ವಿಸ್ಮಯಗೊಂಡಳಾ ತರುಣಿ

ಎಂದು ಪರಿತೋಷದಲಿ ನಾರೀವೃಂದಸಹಿತಿದಿರೆದ್ದು ವಿನಯದಿನಿಂದು ಕರಗಳ ಮುಗಿದು ಸಿಂಹಾಸನದಿ ಕುಳ್ಳಿರಿಸಿತಂದು ಮುಕ್ತಾಫಲಗಳನು ಮುದದಿಂದ ಕಾಣಿಕೆಯಿತ್ತು ಸತಿಯರಸಂದಣಿಯ ಕೆಲಕೊತ್ತಿ ನುಡಿದಳು ಮಧುರವಚನದಲಿ

ಆರು ನೀವೆಲ್ಲಿಂದ ಬಂದಿರಿಕಾರಣವಿದೇನೆಮ್ಮ ರಾಜದ್ವಾರದಲಿ ನೀವ್ ಹೊಕ್ಕ ಹದನೇನಿಲ್ಲಿ ಗಂಡುನೊಣಸೇರಲಮ್ಮದು ನೀವಘಾಡದವೀರರತಿಸೌಂದರ್ಯರೆನೆ ನಳಭೂರಮಣ ನಸುನಗುತ ನುಡಿದನು ಸತಿಗೆ ವಿನಯದಲಿ

ತರುಣಿ ಕೇಳಮರೇಂದ್ರನಟ್ಟಿದಚರನು ತಾ ಮಿಗೆ ನಿನ್ನ ರೂಪನುಸುರಮುನಿಪನರುಹಿದರೆ ಕೇಳಿದನಿಂದ್ರ ವಿರಹದಲಿಕರಗಿ ಮದನನ ಶರಹತಿಗೆ ಮನಮರುಗಿ ಬಂದಿಹನಿಲ್ಲಿಗಾತಂಗರಸಿಯಾಗೆನೆ ಕೇಳಿ ಮುಖದಿರುಹಿದಳು ದಮಯಂತಿ

ಬಲ್ಲವರು ನೀವಧಿಕರೆಮ್ಮೊಳುಸಲ್ಲದೀ ನುಡಿಯೇತಕಿದು ಶಚಿವಲ್ಲಭನ ಮಾತೇನು ಸಾಕಂತಿರಲಿಯೆನಗಿನ್ನುವಲ್ಲಭನು ನಳನೃಪತಿಯಲ್ಲದೆನಲ್ಲರುಂಟೇ ಜಗದಿ ನೀವ್ ಸುರರಲ್ಲ ನಿಮ್ಮಭಿಧಾನವೇನೆಂದಳು ಸರೋಜಮುಖಿ

ದೂತರಲಿ ಕುಲಗೋತ್ರಗಳ ನೀನೇತಕರಸುವೆ ತರುಣಿಯಿಂದ್ರನುಖ್ಯಾತಪುರುಷನು ಬಯಸುವುದು ಕೃತಪುಣ್ಯ ನಿನಗಿನ್ನುಭೂತಳದ ನರರಧಿಕರೇ ಸಂಪ್ರೀತಿಯೇಕವರಲ್ಲಿ ಬಿಡು ಪುರುಹೂತನನು ಕೈವಿಡಿದು ನೀ ಸುಖಿಯಾಗು ನಡೆಯೆಂದ

ಇಳೆಯ ಮರ್ತ್ಯರು ನಾಕನಿಳಯರಿಗಳವೆಯಂತವರೆಲ್ಲ ನುಡಿಯಲುಕುಲಗಿರಿಗೆ ನೊರಜಂತರವೇ ನೀ ನೋಡು ಚಿತ್ತದಲಿನಳನೃಪನ ಬಯಸುವಡೆ ನಿನಗವನೊಲಿವನೇ ಧಾತ್ರೀಶರೊಳಗಗ್ಗಳನೆ ಸಾಕೆಂದೆನಲು ಕನಲಿದು ನುಡಿದಳಾ ತರುಣಿ

ಮಾನವಾಧೀಶ್ವರರೊಳಗೆ ಸನುಮಾನವುಳ್ಳವ ಸತ್ಯಸಂಧ ನಿಧಾನಿ ಹಿಮಕರವಂಶಪಾವನ ಸಾರ್ವಭೌಮನೆಲೆಆ ನರೇಂದ್ರಗೆ ಸರಿಯೆ ಮನುಮುನಿದಾನವಾಮರರಿನ್ನು ನಿಮಗೀಹೀನವೃತ್ತಿಯ ಮಾತದೇಕೆಂದಳು ಸರೋಜಮುಖಿ

ನಿಷಧಪತಿಯೇ ಪತಿಯೆನುತ ಭಾವಿಸಿದೆನಾತನ ಕರುಣವೆನ್ನಲಿಪಸರಿಸಿದಡದು ಲೇಸು ಲೇಸಲ್ಲದೊಡೆ ನಳನೃಪಗೆಅಸುವ ತೆರುವೆನು ಎನಗೆ ಫಲ ಸಿದ್ಧಿಸಲಿದೇ ಸಂಕಲ್ಪವೆಂದಾಶಶಿವದನೆ ಕಂಬನಿಯ ಮಿಡಿದಳು ನಖದ ಕೊನೆಯಲ್ಲಿ

ಕರಗಿತಂತಃಕರಣ ನೃಪತಿಗೆಸರಸಿಜಾಕ್ಷಿಯ ದೃಢವ ಕಂಡನುಕರುಣಲತೆ ಕುಡಿದೋರಿತಾಕ್ಷಣ ನುಡಿದನಾ ಸತಿಗೆಸರಸಿಜಾನನೆ ಕೇಳು ತಾನೇಧರಣಿಪತಿ ನಳನೆನಲು ಲಜ್ಜಿಸಿಶಿರವ ನಸು ಬಾಗಿದಳು ಮತ್ತಿಂತೆಂದಳಾ ನೃಪಗೆ

ನಾಕನಿಳಯರು ಕುಟಿಲವಿದ್ಯರನೇಕಮಾಯಾವಿದರು ಧರೆಯೊಳುಪ್ರಾಕೃತರು ನಾವ್ ನಿಮ್ಮ ನಂಬುವ ಪರಿಯದೆಂತೆನಗೆಸಾಕು ಮನ ನಂಬುವರೆ ಹೃದಯದಜೋಕೆಯಲಿ ಕುರುಹೆನಗೆ ತೋರೆನಲಾ ಕಮಲಲೋಚನೆಗೆ ನುಡಿದನು ನೃಪ ನಿದರ್ಶನವ

ವನಜಮುಖಿ ನಿನ್ನಂತರಂಗದಮನವ ಕಾಣುವ ಬಗೆಯೊಳಾನಿಂದಿನಲಿಯನಿಮಿಷನೆಂದು ಪೇಳಿದೆಯಿದರ ತಪ್ಪೇನುಮನದ ಸಂಶಯವೇನು ಹಂಸೆಯನಿನಗೆ ಕಳುಹಿದೆ ರಾಯಭಾರದಿವನಿತೆ ನೀನಿದ ತಿಳಿದು ನಂಬುವುದೆನ್ನ ನೀನೆಂದ

ನಳನೆನಲು ತನು ಪುಳಕಜಲದಲಿಮುಳುಗಿ ಹೊಂಪುಳಿಯೋಗಿ ತನ್ನಯಕೆಳದಿಯರ ಮರೆಗೊಂಡು ಹರುಷದ ಹೃದಯಭೀತಿಯಲಿತೊಲಗಿದಳು ನೃಪನಿತ್ತ ಪುರವನುಕಳೆದು ಬದನು ಮನದ ವಿರಹದಿಬಳಲುತಿಹ ದೇವೇಂದ್ರನಿದ್ದೆಡೆಗಾಗಿ ವಹಿಲದಲಿ

ಬಂದು ಭಯಭೀತಿಯಲಿ ನಳನೃಪನಿಂದ್ರ ಮಾರುತ ಯಮ ವರುಣರಿಗೆವಂದಿಸುತ ದಮಯಂತಿ ಪೇಳಿದ ಮಾತ ವಿವರಿಸಲುಒಂದು ನಿನ್ನಲಿ ಕುಟಿಲವಿಲ್ಲರವಿಂದವದನೆಯರಿಂದ ಕೇಳಿದೆವೆಂದು ಸಂತೈಸಿದರು ಭಯಗೊಂಡಿಹ ನೃಪಾಲಕನ

ನಳಿನಮುಖಿಯರ ಕಪಟಚಿತ್ತವತಿಳಿಯಲಾರಿಗೆ ಸಾಧ್ಯ ಕೇಳೈನಳನೃಪತಿ ನಮಗಾಗಿ ಬಳಲಿದೆಯೆನುತಲುಪಚರಿಸಿಒಲಿದು ಭೂಷಣವಿತ್ತು ಕಳುಹಿದರಿಳೆಯ ವಲ್ಲಭನಲ್ಲಿ ತಾವ್ ತಮ್ಮೊಳಗೆಯಾಲೋಚಿಸಿದರಾಯಿಂದ್ರ ಯಮ ಮಾರುತರು

ಲಲನೆಯೊಲಿವುದಕಿನ್ನು ಹದನಿದುಹಲವು ಮಾತೇನೆಂದು ನಾಲ್ವರುನಳನ ರೂಪನು ತಾಳ್ದರಿತ್ತಲು ಧರಣಿವಲ್ಲಭರುನಲಿದು ಬರುತಿರೆ ಸ್ವರ್ಗ ಮರ್ತ್ಯಾವಳಿಯ ಸುಜನರು ಸಿದ್ಧ ಕಿನ್ನರರೊಲಿದು ಗುಹ್ಯಕ ಗರುಡ ಗಂಧರ್ವಾದಿ ಸುರರಲ್ಲಿ

ನೆರೆದುದಗಣಿತದರಸುಗಳು ಕರಿತುರಗ ರಥ ಪಾಯ್ದಳದ ಸಂದಣಿಮೆರೆವ ಶಂಖ ಮೃದಂಗ ತಂಟಬ ಭೇರಿ ನಿಸ್ಸಾಳಉರುಬಿತಲ್ಲಿ ವಿದರ್ಭಪುರಪತಿಧರಿಸಲಾಪನೆ ಹರಮಹಾದೇವರಸ ಬಣ್ಣಿಸಲರಿಯೆ ನೆರೆದ ಮಹಾಮಹೀಸುರರ

ಅವರವರ ಕರೆಕರೆದು ವಿನಯದೊಳವರವರ ಮರಿಯಾದೆ ಮೇರೆಯೊಳವರವರ ಸತ್ಕರಿಸಿ ಕುಳ್ಳಿರಿಸಿದನು ಭೀಮನೃಪಅವರವರಿಗುಚಿತೋಪಚಾರದೊಳವರವರ ಮನ್ನಿಸುತಲಿರ್ದನುಭುವನಪತಿಗಳನೇಕರನು ಸಭೆಯೊಳಗೆ ಕೇಳೆಂದ

ಒಂದು ಕಡೆಯಲಿ ತಾಳ ಮದ್ದಳೆಯೊಂದು ಕಡೆಯಲಿ ಸರಸನೃತ್ಯಗಳೊಂದು ಕಡೆಯಲಿ ಸಾರತರ ಸಂಗೀತ ಸಾಹಿತ್ಯಒಂದು ಕಡೆಯಲಿ ಗದ್ಯಪದ್ಯಗಳೊಂದು ಕಡೆಯಲಿ ತರ್ಕಶಾಸ್ತ್ರಗಳೊಂದು ಕಡೆಯಲಿ ಹಾಸ್ಯದಿಂದಿರುತಿರ್ದುದಾಸ್ಥಾನ

ಇತ್ತಲಾ ದಮಯಂತಿಗೆಣ್ಣೆಯನೊತ್ತಿದರು ಶೋಭಾನಗಳ ಪಾಡುತ್ತ ಗೆಲಿದರು ತಿಗುರ ಮಿಗೆ ವಿವಿಧೋಪಚಾರದಲಿಉತ್ತಮಾಂಗನೆಗಳವಡಿಸೆ ನಲಿಯುತ್ತ ಸತಿಯರು ಮಜ್ಜನದ ಮನೆಗತ್ಯಧಿಕ ಹರುಷದಲಿ ದಮಯಂತಿಯನು ಕರೆದೊಯ್ದು

ಬೆರೆಸಿದರು ಪನ್ನೀರ ಹೊಂಗೊಪ್ಪರಿಗೆಯಲಿ ಮೊಗೆಮೊಗೆದು ನಾರಿಯರೆರೆದರಂಗನೆಗಮಳ ಚಂದನಗಂಧಪರಿಮಳದಿತರುಣಿಯರು ಲೇಪಿಸಿದರರಸಿಗೆವರದುಕೂಲಾಭರಣಗಳ ಶೃಂಗರಿಸಿದರು ದಮಯಂತಿಯೊಪ್ಪಿದಳಧಿಕತೇಜದಲಿ

ಮಡದಿಯರು ಬಳಸಿದರು ಸುತ್ತಲುಹಡಪ ಚಾಮರ ಗಿಂಡಿಯೂಳಿಗದೊಡನಿರಲು ಬಂದಳು ಸಿತಾಬ್ಜಕೆ ಲಕ್ಷ್ಮಿಯಂದದಲಿಎಡಬಲದೊಳಿಹ ಕಂಚುಕಿಗಳುಗ್ಗಡಿಸಿ ಪಾಯವಧಾರಿನಲಿ ಮುಂಗುಡಿಯ ಸತಿಯರ ಗಡಣದಲಿ ನಡೆತದಳಿಂದುಮುಖಿ

ಕುಡಿತೆಗಂಗಳ ಸಿರಿಮುಡಿಯ ಬಡನಡುವ ಸೆಳೆವತಿಬೆಡಗಿನಲಿ ಹೊಂಗೊಂಡದ ಮೊಲೆ ವೈಯಾರದುಡುಗೆಯ ಸಿರಿಯ ಸಡಗರದತೊಡರ ಝಣಝಣರವದ ಮೆಲ್ಲಡಿಯಿಡುವ ಗಮನದ ಭರದಿ ಕಿರುಬೆಮರಿಡುತ ಬಂದಳು ಸಖಿಯರೊಡನೆ ವಿವಾಹಮಂಟಪಕೆ

ಅವನಿಪತಿ ನಿಜಕುವರಿಗೆಂದನುವಿವಿಧರತುನದ ಮಕುಟವರ್ಧನಭುವನಪತಿಗಳನೇಕವಿದೆಲಾ ಸಿಂಹಪೀಠದಲಿಯುವತಿ ನೋಡಿತ್ತೆರದೊಳಿಹ ನೃಪನಿವಹದಲಿ ನೀ ಹಾಯ್ಕು ಮನವಿದ್ದವನ ಕೊರಳಿಗೆನುತ್ತ ಕೊಟ್ಟನು ಪುಷ್ಪಮಾಲಿಕೆಯ

ಬಂದಳಾ ದಮಯಂತಿ ನೃಪಸಭೆಗಂದು ಹೊಕ್ಕಳು ಕೆಳದಿಯರು ಮುದದಿಂದ ತೋರಿದರಲ್ಲಿಯಿವರಿವರೆಂದು ವಿವರಿಸುತಮುಂದೆ ಬರೆ ಕೈಕಂಬಿಯರು ಬಲುಸಂದಣಿಯ ಕೆಲಕೊತ್ತಿಸುತಲಿರಲಿಂದುಮುಖಿ ನೋಡಿದಳು ಲಜ್ಜಾಭರದೊಳವನಿಪರ

ಮಾಳವಾಧಿಪನೀತ ಮಗಧನೃಪಾಲನೀತನು ಮತ್ಸ್ಯ ಕುರು ನೇಪಾಲನೀತನು ಕೋಸಲಾನ್ವಯನೀತ ಬರ್ಬರನುಚೋಳನೀತನು ಸಿಂಧುರಾಜನುನೀಲನೀತ ಕಳಿಂಗ ಕುಂತಳಪಾಲಕನ ನೋಡಿತ್ತಲಮರೇಶ್ವರನವೋಲಗವ

ಎನ್ನನೊಲಿದಿಹಳೆಂದು ಕೆಲಬರುಸನ್ನೆ ಮಾಡಿದಳೆಂದು ಕೆಲಬರುಗನ್ನದಿಂದೀಕ್ಷಿಸುತಲಿದ್ದರು ಕೆಲವರು ಹುಬ್ಬಿನಲಿಸನ್ನೆದೋರಿದಳೆಂದು ಕೆಲಬರುಬಿನ್ನಣದಿ ಮಿಗೆವೋರೆನೋಟದಕಣ್ಣಿನಿಂದೀಕ್ಷಿಸಿದಳೆಂದಾಡಿದರು ಕೆಲಕೆಲರು

ಬಾಯ್ ಬಿಂಕದ ಸವಿನುಡಿಯನಾರಾಯರಾಡಿದರಲ್ಲಿ ಕಮಲದಳಾಯತಾಂಬಕಿ ನಳನ ರೂಪಿನ ನಾಲ್ವರಿರೆ ಕಂಡುಮಾಯವಿದು ತಾನರಿಯೆನಿವರ ನಿಜಾಯತವನೆಂದೆನುತ ಮುರಿದಾವಾಯುಗತಿಯಲಿ ಬಂದು ಹೊಕ್ಕಳು ತನ್ನ ಮಂದಿರವ

ಕಂಡುಪೇಕ್ಷಿಸಿ ಬಂದಳಂಗನೆಮಂಡಲಾಧಿಪರೆಲ್ಲರನು ಅದಕಂಡು ಭೀಮನೃಪಾಲ ತನುಜೆಯ ಬಳಿಗೆ ನಡೆತಂದುಅಂಡಲೆದು ಬೆಸಗೊಂಡೊಡಂದಾಖಂಡಲನ ಮಾಯೆಗಳ ವಿವರಿಸೆಚಂಡಬುದ್ಧಿಯನುಳ್ಳ ನೃಪ ಚಿಂತಿಸಿದ ಭಾರತಿಯ

ವಾಣಿ ನೀರಜಪಾಣಿ ಬ್ರಹ್ಮನರಾಣಿ ಪನ್ನಗವೇಣಿ ಸುಕೃತಶ್ರೇಣಿ ಸುರನಿಕುರುಂಬವಂದಿತೆ ಸತ್ಯಸಂಚಾರಿವಾಣಿ ಸ್ತ್ರೀಕುಲರನ್ನೆ ವರಗೀರ್ವಾಣಿ ರಕ್ಷಿಸು ರಕ್ಷಿಸೆಂದಾಕ್ಷೋಣಿಪತಿ ಕೈ ಮುಗಿದು ಬೇಡಿದನಾ ಸರಸ್ವತಿಯ

ನೆನೆಯಲಾಕ್ಷಣ ಬಂದಳಲ್ಲಿಗೆವನಜನಾಭನ ಸೊಸೆ ಜಗತ್ಪಾವನೆ ಸುರಾರ್ಚಿತೆ ದೇವಿ ಭಕ್ತಾಶ್ರಿತಜನಾಧಾರೆಜನಪ ನೀನಿಂದಿನಲಿಯೆನ್ನನುನೆನೆದ ಹದನೇನೆನಲು ಪದಯುಗವನಜಕಾನತನಾಗಿ ಬಿನ್ನೈಸಿದನು ಭಾರತಿಗೆ

ನಿಗಮನುತೆ ಗೀರ್ವಾಣಿ ರಕ್ಷಿಸುಮುಗುದರನು ಕರುಣದಲಿ ನೋಡುತಲಗಣಿತದಿ ಅರಸುಗಳು ನೆರೆದಿರೆ ತಿಳಿಯಲರಿದೆಮಗೆಮಗಳ ಮನ ವಿಗಡಿಸಿತು ನಾಲ್ವರುಬೆಗಡುಗೊಳಿಸಿದರೆನಲು ಭಾರತಿನಗುತ ನುಡಿದಳು ಕರೆದು ದಮಯಂತಿಯಳನುಪಚರಿಸಿ

ದೇವಮಾಯವಿದೀಗ ಕೇಳೆಲೆದೇವಿ ಇಂದ್ರನ ಭಜಿಸೆನಲು ಸಂಭಾವನೀಯರ ಸಭೆಗೆ ಬಂದೆರಗಿದಳು ಭಕ್ತಿಯಲಿದೇವಕುಲಸಂಭವರು ರಕ್ಷಿಸಿನೀವು ಮಗಳೆಂದೆನ್ನ ಭಾವಿಸಿಪಾವನರು ತರಳೆಯನು ಪತಿಕರಿಸೆಂದಳಿಂದುಮುಖಿ

ಘಳಿಲನೇ ಪ್ರಚ್ಛನ್ನವೇಷವಕಳೆದು ಯಮ ಪವಮಾನ ವರುಣರುಬಳಿಕ ಸುರಪತಿ ಮೆಚ್ಚಿ ದಮಯಂತಿಯನು ಕೊಂಡಾಡಿನಳನೃಪನ ಕರೆಸಿದರು ಹೂವಿನಮಳೆಯ ಕರೆದರು ದೇವದುಂದುಭಿಮೊಳಗಲರಸನ ಕೊರಳಿಗಿಟ್ಟಳು ಪುಷ್ಪಮಾಲಿಕೆಯ

ಆ ಸಮಯದಲಿ ಭೀಮನೃಪ ಸಂತೋಷದಲಿ ಕರೆಸಿದನು ಮುನಿಗಳಸೇಸೆದಳಿದರು ಸತಿಪತಿಯರಿಗೆ ಹರಸಿ ಅಕ್ಷತೆಯಭೂಸುರರ ಮತದಿಂದಲಾ ಧರಣೀಶ ಧಾರೆಯನೆರೆದನಲ್ಲಿ ವಿಲಾಸದಿಂ ಪಾಡಿದರು ಮುತ್ತೈದೆಯರು ಶೋಭನವ

ಮಂಗಳಾರತಿಯೆತ್ತಿದರು ದೇವಾಂಗನೆಯರವನಿಪಗೆ ಧರೆಯೊಳುತುಂಗವಿಕ್ರಮನಾಗೆನುತ ಹರಸಿದರು ಮುನಿವರರುಹಿಂಗದಮರೇಂದ್ರನು ಮನೋಹರದಂಗವಸ್ತ್ರಾಭರಣವಿತ್ತು ಸುರಾಂಗನೆಯರೊಡಗೂಡಿ ಕಳುಹಿಸಿಕೊಂಡನುಚಿತದಲಿ

ಅರಸ ಕೇಳು ವಿವಾಹಸಮನಂತರದೊಳೈದನೆಯ ದಿನದಲಿ ಕೊಪ್ಪರಿಗೆಯಲಿ ತುಂಬಿದ್ದ ಪನ್ನೀರಿನಲಿ ಕುಂಕುಮವಬೆರಸಿ ಹೊಯ್ದಾಡಿದರು ಉಭಯದತರುಣಿಯರು ಓಕುಳಿಯ ಪರಿಮಳಹೊರೆದುದವನೀತಳದ ಸುರನಿಕುರುಂಬ ನಲಿದಾಡೆ

ಅರಸ ಕೇಳೈ ತನ್ನ ಬಾಂಧವಧರಣಿಪರ ಮಂತ್ರಿಗಳ ಮುನಿಮುಖ್ಯರ ಸುಗಾಯಕ ಪಂಡಿತರ ಭೂಸುರರ ಯಾಚಕರಹರುಷ ಮಿಗಿಲಾದರಿಸಿದನು ಕರಿತುರಗ ವಸ್ತ್ರಾಭರಣದಿಂದುಪಚರಿಸಿ ಭೀಮನೃಪಾಲನವರವರುಗಳ ಬೀಳ್ಕೊಟ್ಟ

ಅಳಿಯನನು ಮನ್ನಿಸುತ ಮಗಳಿಗೆಹೊಳೆವ ಮಣಿಭೂಷಣದ ಪೆಟ್ಟಿಗೆಗಳನು ಗಜ ರಥ ತುರಗ ಪದಾತಿಗಳ ಲಲನೆಯರಬಳುವಳಿಯನಿತ್ತವನಿಪತಿ ನಿಜಬಲಸಹಿತ ಮಾಡಿದನು ಪಯಣವನುಲಿವ ಮಂಗಳಪಾಠಕರ ಸಂದಣಿಯ ರಭಸದಲಿ

ವರಮುಹೂರ್ತದೊಳೇರಿದನು ಮಣಿಕಿರಣದುನ್ನತರಥವ ನಳಭೂವರನು ನಿಜಸತಿಸಹಿತ ಹೊಕ್ಕನು ನಿಷಧಪಟ್ಟಣವಮೊರೆವ ಶಂಖ ಮೃದಂಗ ಭೇರಿಗಳುರುಬಿ ಧಂಧಣಿರೆನಲು ಮಿಗೆ ಮೋಹರಿಸಲಾ ನಿಸ್ಸಾಳತತಿ ಘನವಾದ್ಯ ಘೋಷಿಸಲು

ಬಂದು ಹೊಕ್ಕನು ಮಂದಿರವ ನೃಪವೃಂದ ನಲಿಯಲು ಸಕಲಜನಸಹಿತಂದು ಸಿಂಹಾಸನಕೆ ಬಂದನು ಸಚಿವರೊಗ್ಗಿನಲಿಇಂದುಮುಖಿ ದಮಯಂತಿಯೊಡನಾನಂದದಲಿ ಸಾಮ್ರಾಜ್ಯವಾಳಿದನಂದು ವರಪುರದರಸ ಚೆನ್ನಿಗರಾಯ ಕರುಣದಲಿ