VII
Hadibadeya Dharma
ವಂದಾರು ಜನಕೆ ವಾಂಛಿತ ಫಲಗಳನೀವಮಂದಾರತರುಗೆ ಮಾಧವಗೆಕುಂದುಗಳಿಲ್ಲದೆ ಗುಣಕರುಗೊಂಡ ಮುಕುಂದನಿಗಾನು ವಂದಿಪೆನು
ಪುರುಷೋತ್ತಮನೆದೆಯೊಳು ಪುದುಗಿರ್ದುವನಿರವರಿತೆಲ್ಲ ಲೋಗರೊಳುಕರುಣಾಮೃತವ ಕರೆಗಣ್ಮಿಸಿ ಪರಿಸುವಸಿರಿರಾಣಿಯಡಿಯ ಸೇವಿಪೆನು
ನೆರೆಯೂರಿಗೆ ಪೋಗಿ ನಲ್ಲನೈತರದಿರೆಬರವ ಬಯಸಿ ಬಸವಳಿದುವಿರಹಿಣಿಯರ ನಡತೆಯ ಬಿತ್ತರಗಳನೊರೆವೆನುಚಿತವೆಂಬಂತೆ
ಸೋಗೆಮುಗಿಲ ಸೂರ್ಯನ ಸರಸೀರುಹಸಾಗರವೇಲೆ ಚಂದ್ರಮನಕೋಗಿಲೆ ಸುಗ್ಗಿ ಕೂರ್ಪಂತೆ ಸತಿಯನುರಾಗದಿನಿಯನ ಜಾನಿಪಳು
ನೆನೆವಳವನ ನೆರೆ ಸೊಗಸೊಳುವಗೆಗಳನೆನೆವಳವನ ಮೈಸಿರಿಯನೆನೆವಳವನ ನೇಹದೆಸಕದಿರವನಿಂತುನೆನೆನೆನೆದಿಂಪುಗೊಳುವಳು
ದೇವರಿಲ್ಲದ ದೇಗುಲದ ಬಿತ್ತರದಂತೆಭೂವರನಿಲ್ಲದೂರಂತೆಜೀವೀತೇಶ್ವರನ ವಿರಹದೊಳು ಸೆಜ್ಜೆಯಭಾವಿಸಿ ಬಣ್ಣಗುಂದುವಳು
ಕೆಲದೊಳು ಕೆಳದಿಯರಿರೆ ಸೈರಿಸದೊಂದುಕೆಲಸದ ನೆವದಿಂದ ಕಳುಪಿಒಲಿದೋಪನೊಳ್ಗೈತಂದೊಪ್ಪವ ನೆನೆನೆನೆದಲಸಿ ಮೈಮುರಿದೊರಲುವಳು
ತಲೆವಾಗಿಲೊಳು ದಾರಿಗರ ನೋಡಲೆಳಸದೆನೆಲೆವಾಡವೇರಿ ನಿಟ್ಟಿಸದೆಒಲಿದಿನಿಯನ ನಲ್ಬಗೆಯ ನೆನಹಿನೊಳುನೆಲೆನಿಂದು ನೇಮಗೊಳುವಳು
ಪರಿಪರಿಯುಡೆ ತೊಡವುಗಳ ಪೂಸರಗಳಪರಿಮಳದಣ್ಪ ಬಯಸದೆಗರತಿಯರಿದನುಳಿದಿರಲಾಗದೆಂಬಲಂಕರಣ ಮಾತ್ರವ ಧರಿಸಿಹಳು
ಮಂಗಳಕರ ಮಾತ್ರವನಲ್ಲದೆ ಮಿಕ್ಕಸಿಂಗರಗಳನು ಚಿಂತಿಸದೆಸಂಗಾತಿವೆಂಗಳ ಸರಸಭಾಷಣವ ಮನಂಗೊಳಿಸದೆ ಮರುಗುವಳು
ಪಾಯಸ ಪರಮಾನ್ನವ ಪಲಬಗೆಯ ಕಜ್ಜಾಯವ ಕಾಯಿಪಣ್ಣುಗಳಬಾಯ ಸವಿಗೆ ಬಯಸದೆ ಅನ್ನಪಾನಾದಿಕಾಯಧಾರಣೆಯೆಸಗುವಳು
ಮನೆಮಕ್ಕಳು ಮನೆವಾಳ್ತೆಯೊಳು ತನ್ನಧನ ಧಾನ್ಯದಾಯ ಬೀಯದೊಳುತನುವಿನಾರೈಕೆಗಳೊಳು ತಾನೆರಗದಮನದಿಂದ ಮರುಳೆನಿಸುವಳು
ಎನ್ನ ತನ್ನವರೆಂದವರಿವರನು ಮಿಗೆಮನ್ನಿಸಿ ಮನೆಗೆ ಬರಿಸದೆಮನ್ನಿಸಿ ಕರೆವರ ಮನೆಗೆ ಪೋಗದೆ ಮನದನ್ನನ ನೆನಹಿನೊಳಿಹಳು
ಎಡಬಲದವರಿಂತಿಂತು ನುಡಿವರೆಂದುತಡೆದು ತನ್ನಿಚ್ಛೆಯೊಳಿರದೆಎಡೆವಿಡದಿನಿಯನ ನೆನೆದು ನೇಮದೊಳಿರ್ಪಮಡದಿಗೆ ಮತ್ತೆಣೆಯುಂಟೆ
ನಗುವರು ನಗಲಿ ನಾಚುವರು ನಾಚಲಿ ಮಿಗೆಮೊಗದಿರುಹುವರು ತಿರುಹಲಿಬಗೆಯದದನು ಭಾವಿಪಳು ತನ್ನಿನಿಯನನಗೆನೋಟ ನಡೆನುಡಿಗಳನು
ನಿರಿಗೊಂಡ ಪುರ್ಬಿನ ನೆಲೆನಿಂದ ನಿಡುಗಣ್ಣಅರಿಕೆಗುಂದಿದ ಕರಣಗಳಒರೆವ ಕಣ್ಣೀರೊಪ್ಪದಿಂದೊಳ್ಗೆಳದಿಗೆಮರುಕವ ಮನಗೊಳಿಸುವಳು
ಕೆಂದಳಿರ್ಗೈದಳದೊಳಗಿಟ್ಟು ಗಲ್ಲದಕಂದಿದ ಮೊಗದಾವರೆಯಸಂದಣಿಸುವ ನಿಟ್ಟುಸುರ ನೆಲೆಯೊಳಿದ್ದಂದಗೆಡಿಪಳಾಳಿಯನ
ಕವಿವ ಕುರುಳ ಸಡಿಲಿದ ಚೊಲ್ಲೆಹದೆವೆಯಿಕ್ಕದೆಸಳು ಕಣ್ಣುಗಳಸವೆಯದ ನೆನಹಿನ ಸೈಪಿಂದ ಕೆಳದಿಗೆಸವನಿಸುವಳು ಸಂಕಟವನು
ಪಡಿಮೊಗದೊಳು ನಿಂದು ಬಾಯಿಟ್ಟು ಕರೆದೊಡಮೊಡಲನಲುಗಿದೊಡಮದಕೆಒಡನೆಚ್ಚರದೋಜೆಯಿಂದ ಕೆಳದಿಯರಗಡಣವ ಕೈಗೆಡಿಸುವಳು
ಎಲೆಯಕ್ಕ ನೀನೇತಕಿಂತು ಚಿಂತಿಪೆಯೆಂಬುಲಿಗೇಳಿದೊಡನುರವಣಿಸಿಕೆಲದಲ್ಲಿ ನಿಂದವರೊಳು ಕೇಣವೆಸಗುತನೆಲೆಗೆಡಿಸುವಳು ನೇಹಿಗರ
ಎನ್ನಿನಿಯನ ಪಾದಸೇವೆಯಲ್ಲದೆ ನಾನೆನ್ನೆಗಮಿಂತಿರ್ಪೆನೆಂದುತನ್ನೊಳು ತಾನೆ ತವಕಗೊಂಬ ಸತಿಯ ಮಹೋನ್ನತಿಗಿನ್ನೆಣೆಯುಂಟೆ
ಒಲಿದ ನಲ್ಲನ ವಿರಹದೊಳೊರಲುವ ಕುಲಲಲನೆಯ ವಿರಹವೇದನೆಗೆಪಲಬಗೆಯುಗ್ರತಪಂಗಳೀಡಲ್ಲೆಂದುಲಿವುವು ಮುನ್ನಿನೋದುಗಳು
ಇರದೆಸಗುವ ದಾನ ಹೋಮ ನಿಯಮದಿಂದಪರಿಹರಿಸದ ಪಾಪಗಳುವಿರಹದ ತನಿಬೆಂಕಿಯಿಂದ ಬೆಂದಳಿವುದೆಂದೊರೆವರಖಿಲವೇದವಿದರು
ಈ ದೇಹದಂಡನವೈಸೆ ಪ್ರಾಯಶ್ಚಿತ್ತವೇದವಿಹಿತ ಮಾರ್ಗದೊಳುಆ ದಾರಿಯೊಳಾಣ್ಮನಗಲೆ ಸಂಕಟಗೊಂಬವೇದನೆಗೆಣೆಯಾವುದಿನ್ನು
ಬಸವಳಿದೊಡಲ ಪಾಸಿನೊಳೀಡಾಡುವಳುಸುರುಸುರೆಂದದೊರಲುವಳುಮುಸುಕಿಡುವಳು ಮುದುಡುವಳು ಕೈಕಾಲ್ಗಳಬಿಸುಸುಯ್ದು ಬೆಚ್ಚುತೇಳುವಳು
ಅರಿಯದೆ ತನಿಗೆಂಡವ ಮೆಟ್ಟಿ ನಿಂದಂತೆತುರುಚನ ಗಿಡು ಸೋಂಕಿದಂತೆಬಿರುಬುಗೊಂಬಳು ಬೆದರುವಳಳಲುವಳು ಬೇಸರುವಳು ಬೇನೆವಡೆವಳು
ಒಂದರೆಗಳಿಗೆಯನೊಂದು ಬರಿಸದಂತೊಂದು ಜಾವವ ಯುಗದಂತೆಒಂದಿರುಳನು ಕಲ್ಪಕಾಲದಂತೆಣಿಪಳುಮಂದುಗೆಡುವಳು ಮೋಹಿಪಳು
ಬನದೊಳು ದೆಸೆಗೆಟ್ಟು ಪರಿವಂತೆ ಕತ್ತಲೆಮನೆಯೊಳು ಕಣ್ದೆರೆವಂತೆಇನಿಯನನಗಲಿ ತಾನಿರವುಗಾಣದೆ ಮಿಗೆಯನುಗೆಡುತಳವುಗುಂದುವಳು
ಎಂದಿಗೆನ್ನಿನಿಯನನಿದಿರುಗೊಳುವೆನಿನ್ನೆಂದಿಗೆ ಹತ್ತೆ ಸಾರುವೆನುಎಂದಿಗವನ ಪಡಿಮೊಗದೊಳು ಸಂದಪೆನೆಂದೆಡೆವಿಡದೆ ಜಾನಿಪಳು
ಎಂದಿಗವನ ನುಡಿಗಳ ಸವಿಸವಿದಾನಂದದೊಳಳ್ದು ತೇಲುವೆನುಎಂದಿಗೆನ್ನಿರವನವನಿಗಾನರುಹುವೆನೆಂದು ಬಯಸಿ ಬಳಲುವಳು
ಎಂದಿಗೆನ್ನದೆ ತಣಿವಂತೆಲ್ಲ ಸೇವೆಯನೊಂದನುಳಿಯದೊಡರಿಪೆನುಎಂದಿಗವನೊಳೊಡವೆರೆದೊಂದೆನಿಸುವೆನೆಂದೆರಕದೊಳೆಣಿಸುವಳು
ಇಂದಿನೊಳೀಗಲೆನ್ನಿನಿಯನೈತರಬೇಕೆಂದು ಕದುಬಿ ಕಾತರಿಸಿಮಿಂದು ಮಡಿಯನಟ್ಟು ಮನೆಯ ದೇವರ ಬಲವಂದು ನೋಂಪಿಯ ನೋನುವಳು
ಅತ್ತಣ ದೆಸೆಯಿಂದ ಬೀಸುವೆಲರನೆಲರೊತ್ತಿನೊಳೆಸೆವ ಸೌಸವವಸುತ್ತಿ ಸೌಸವವ ತುತ್ತುವ ತುಂಬಿಯ ಬೆಂಬತ್ತಿ ಕೇಳುವಳವನಿರವ
ಬೆಸಗೊಂಬಳಿನಿಯನಾವೆಡೆಯೊಳಿರುವನಾದೆಸೆಯಿಂದ ಬಂದ ಬಂದವರಬೆಸಗೊಂಬಳು ಜೋಯಿಸರ ಜೋಗಿಪುರುಷರಬೆಸಗೊಂಬಳು ಬಿಜ್ಜೆವಳರ
ಬೆಸಗೊಂಬಳೆನ್ನ ವಲ್ಲಭನೆಲ್ಲಿದನೆಂದುಬೆಸಗೊಂಬಳೆಂತಿರ್ಪನೆಂದುಬೆಸಗೊಂಬಳೆಂದಿಗೆ ಬಂದಪನೆಂದಿಂತುಬೆಸಗೊಂಬಳು ಬೇಸರದೆ
ಇಂದಿಗೀ ಪಗಲಿಗೀ ಜಾವಕೀ ಘಳಿಗೆಗೆಬಂದಪನೆಂದವರುಸಿರೆಮಂದಹಸಿತ ಮುಖದಿಂದ ಮನದೊಳಾನಂದದಿ ನಲವೇರುವಳು
ಉಕ್ಕಿ ಸುರಿವ ಸೊಗದಾಲಿ ನೀರ್ವೊನಲಿಂದಮಿಕ್ಕು ಮೀರುವ ನವಿರಿಂದಸೊಕ್ಕುವ ಮನದಿಂದ ಸುತ್ತುಗೆಳದಿಯರಬೆಕ್ಕಸಬೆರಗುವಡಿಪಳು
ಈಗಲೆ ಬರ್ಪನೆಂಬುದನಾಲಿಸಿ ತಲೆವಾಗಿಲ ತೆರೆಯಲೆಳಸುತಬೇಗದೊಳವನ ಸೇವೆಗೆ ಬೇಕಾದುದನಾಗಳೆಯನುಗೊಳಿಸುವಳು
ಮೊದಲೊಳು ಮುಂದುವರಿವ ನೋಟದಿಂದೊಡನೊದಗುವ ಹರ್ಷಾಶ್ರುನಿಂದಮುದದೊಳು ಮುರಿದೇಳುವ ನವಿರಿಂದೊಡನವಿರುಗೊಳುವಳಿನಿಯನನುʻ
ಬಾಗಿಲ ಬಳಿಗೆ ಬಂದಪನೆಂಬುದುಮನುರಾಗರಸದ ಲಹರಿಯೊಳುಏಗೈವೆನೆಂಬುದನರಿಯದವನಿಗಿದಿರಾಗಿ ನಿಟ್ಟಿಸಿ ನಿಂದಿಹಳು
ಪುಟ್ಟಿದಂದಿಂದ ಪುರುಳುಗಾಣದವರುನೆಟ್ಟನೆ ನಿಧಿಯ ಕಂಡಂತೆಕಟ್ಟೆರಕದೊಳಿನಿಯನ ಕಾಣುತ ಮರವಟ್ಟು ಮೈಮರೆತು ನಿಟ್ಟಿಪಳು
ಯೋಗದಶಾ ಪರಿಣತಿಯೊಳು ತನಗಿದಿರಾಗಿ ನಿಂದಿರ್ದ ದೇವತೆಯಯೋಗಿಗಳೆರ್ದೆಗೊಳಿಪಂತಿನಿಯನೊಳನುರಾಗವೆರಸಿ ನಿಟ್ಟಿಪಳು
ಕಾಣದೆ ಪಲವಗಲಿಂದ ಕಣ್ಮರೆಯಾದಮಾಣಿಕ ಮೈದೋರಿದಂತೆಪ್ರಾಣವಲ್ಲಭನ ಪಾದಾರವಿಂದಂಗಳಕಾಣುತ ಕವಿದು ನಿಟ್ಟಿಪಳು
ಪುಳಕದ ನೆವದಿಂದ ಪೊಣ್ಮುವ ಹರ್ಷದಬೆಳಗೈಗೆ ನೀರೆರೆವಂತೆತುಳುಕುವ ಸೊಗದಾಲಿ ನೀರ್ದೊರೆಯನು ತಂದಿಳುಪುತವನ ನಿಟ್ಟಿಪಳು
ಬಳಿಕ ಮನವ ಬಲಿವಿಡಿದಿನಿಯನ ಪಾದನಳಿನಂಗಳಿಗೆ ನತಿಗೈದುಘಳಿಲನುಗುವ ಹರ್ಷಾಶ್ರುವಿಂದುಂಗುಟಗಳನು ತೊಳೆದು ಪೂಜಿಪಳು
ಕೆಲದೊಳಿರ್ಪಳು ಗೆಲ್ಲಗೊಂಬಳು ನೇಹವಬಲಿವಳು ಬಣ್ಣವೇರುವಳುಒಲಿದು ನಿಟ್ಟಿಪಳೊಡನೊಡಲು ಮರೆತು ನಲಿನಲಿವಳು ನಲವೇರುವಳು
ಪೊರಮಟ್ಟು ಪೋದಂದು ಮೊದಲಿಂದುವರೆಗೆ ತನ್ನೆರೆಯನಿರ್ದಿರವೆಲ್ಲವನುಎರಕವೆರಸಿ ಕೇಳುವಳೆಡೆಯೊಳುಮರುಗುತ ಮನಗೊಳಿಸುವಳು
ಎರವಿನಿತಿಲ್ಲದೆಂದಿನ ನೇಹದೊಳೊಡವೆರಸುವಳೆಂದೆರಗುವಳುಪರಿಪರಿಯೂಳಿಗವನು ಪಣ್ಣಿ ತಣಿವಳುಪರಮಾನಂದವಡುವಳು
ಜಾನಿಸುತಿನಿಯನ ಚರಿತವ ವಿರಹದೊಳೀ ನೇಮವ ನೆಲೆಗೊಂಡಮಾನಿನಿಗಿಹಪರದೊಳು ಮನದೊಲವರಿತಾನಂದವೀವನಚ್ಯುತನು
ಚೆನ್ನಿಗ ಚಿಕದೇವರರಾಯನ ಸಂಚಿಯಹೊನ್ನಮ್ಮನುಸುರ್ದ ಕಬ್ಬದೊಳುಮನ್ನಣೆವಡೆದೊಪ್ಪಿದುದೇಳನೆಯ ಸಂಧಿಸನ್ನುತ ಗುಣಸಂಬಂಧಿ


