EN | KA

Menu

V

Hadibadeya Dharma

ಅಮರ್ದುಗಡೆವ ಸಮಯದೊಳಲ್ಲಿ ನೆರೆದಿರ್ದಮರರಂತಚ್ಚರಿವಡೆಯೆಕಮಲೆಗೆದೆಯನಿಂಬುಗೊಳಿಸಿದ ಪುರುಷೋತ್ತಮನಡಿಗಾನೆರಗುವೆನು

ಕಡೆವುದನುಳಿದು ಕಾದಿಹ ಬಿಡುಗಣ್ಣರಗಡಣಂಗಳ ಕಡೆಗಣಿಸಿಒಡನೆ ನಾರಾಯಣನುರವ ಸೇರಿದ ಸಿರಿಮಡದಿಯಡಿಗೆ ವಂದಿಪೆನು

ತಂದೆ ತಾಯಿಗಳೊಡವುಟ್ಟಿದರತ್ತೆ ಮಾವಂದಿರು ಸಕಲ ಬಾಂಧವರುಕುಂದದೆ ನಲ್ವೆಂಡಿರ ಕೂರ್ತುಪಚರಿಪಂದವನನುವದಿಸುವೆನು

ಪೆಣ್ಣ ಪೆತ್ತವರ ಬಳಗ ಬಳೆವುದು ಬೇಗಪೆಣ್ಣ ಪೆತ್ತವರು ಪೆರ್ಚುವರುಪೆಣ್ಣ ಪೆತ್ತುದರಿಂದೆ ಪೆಸರೆನಿಸಿತು ಮಿಗೆಬಣ್ಣವೇರಿತು ಪಾಲ್ಗಡಲು

ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನುಪೆಣ್ಣಿಂದ ಭೃಗು ಪೆರ್ಚಿದನುಪೆಣ್ಣಿಂದ ಜನಕರಾಯನು ಜಸವಡೆದನುಪೆಣ್ಣ ನಿಂದಿಸಲೇಕೆ ಪೆರರು

ಸಿರಿರಾಣಿಯ ಸೀತೆಯ ರುಕ್ಮಿಣಿಯ ಶ್ರೀಹರಿಯೊಡನೊಂದೆ ಹಂತಿಯೊಳುಇರಿಸಿ ಪೊಜೆಯನೊಡರಿಸುವರು ಪಿರಿಯರುಪರಿಕಿಪೊಡವರು ಪೆಣ್ಣೈಸೆ

ಪೆಣ್ಣಲ್ಲವೆ ನಮ್ಮನೆಲ್ಲ ಪಡೆದ ತಾಯಿಪೆಣ್ಣಲ್ಲವೆ ಪೊರೆದವಳುಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರುಕಣ್ಣು ಕಾಣದ ಗಾವಿಲರು

ಕುವರನಾದೊಡೆ ಬಂದ ಗುಣವೇನದರಿಂದಕುವರಿಯಾದೊಡೆ ಕುಂದೇನುಇವರಿರ್ವರೊಳೇಳ್ಗೆವಡೆದವರಿಂದಸವನಿಪುದಿಹಪರಸೌಖ್ಯ

ಕುಲಪುತ್ರನೋದಿ ತಿಳಿದು ನಡೆದಲ್ಲದೆಕುಲವನುದ್ಧರಿಸಲರಿಯನುಕುಲಪುತ್ರಿಯೊಳ್ಗುವರನಿಗಿತ್ತ ಮಾತ್ರಕೆಕುಲಕೋಟಿಯನುದ್ಧರಿಪಳು

ಬಸುರೊಳೊಗೆದು ಬಳೆದೇಕ ರೀತಿಯೊಳೆಲ್ಲಸಿಸುಗಳಿರ್ದೊಡಮೇನು ಬಳಿಕಒಸೆದಿತ್ತುದನೊಡಬಡುವಳು ಪೆಣ್‌ ಗಂಡುಪಸುಗೆಗೊಂಬನು ಬಲ್ಮೆಯೊಳು

ಪುಟ್ಟಿದ ಮನೆಯೊಳು ಪೋರಿ ಪುರುಳುಗೊಂಬದಿಟ್ಟ ಗಂಡುಗಳಂತಿರಲಿಕೊಟ್ಟುದರಿಂದ ತಣಿವ ಕುವರಿಗೆ ಮನಮುಟ್ಟಿ ಕೊಡುವುದು ಕೋವಿದರು

ಎನ್ನ ಪೆತ್ತವರಿವರೀ ಮನೆಯೊಡವೆಗಳೆನ್ನವೆಂದೆರವಿಲ್ಲದಿರ್ಪಕನ್ನೆಯನನ್ಯರಿಗೀವನ್ನೆವರಮುರೆಮನ್ನಿಸುವುದು ಮಮತೆಯೊಳು

ಅರಿತು ನಿಟ್ಟಿಸೆ ಗಂಡುಮಕ್ಕಳಿಂದತಿಶಯದೆರಕದೊಳೆಸೆವ ಪೆಣ್ಗಳನುಪೊರನೋಟದಿಂದ ನೋಡದೆ ಪೋಲೆನಿಸದೆಮರುಕವೆರಸಿ ಮನ್ನಿಪುದು

ಪದುಳಗೊಳಿಸಿ ಪಲಬಗೆ ಪಸದನಗಳಪುದುಗಿಸಿ ಪೊಂದೊಡಿಗೆಗಳಮದುವೆಗೆ ನೆರೆದ ಪೆಣ್ಮಕ್ಕಳ ನಿಟ್ಟಿಪರೆದೆಗೊಳಿಪಂತೆಸಗುವುದು

ಸುಗುಣನಾವನು ಸುಚರಿತ್ರನಾವನು ಕಣ್ಗೆಸೊಗಸುವ ಸೊಬಗನಾರೆಂದುಬಗೆದು ಭಾವಿಸಿ ಪೆಣ್ಣನೀವುದು ವಂಶದೊಳೊಗೆದೊಳ್ಗುವರನಿಗೊಲಿದು

ಅಲೆಗೆಯ್ಯದವಮತಿಯೆಸಗದ ವೈರವಬಲಿಸದೆ ಬರಿದೆ ಪಳಿಯದಕೊಲೆ ಬೈಗಳಿಂದ ಕೋಟಲೆಗೊಳಿಸದ ಸತ್ಕುಲಕೀವುದು ಕುವರಿಯನು

ಪಣದಾಸೆ ನಂಟುತನದ ಪತ್ತಿಗೆ ನೇಹದೆಣಿಕೆಗಳಿಂದೆದೆಗರಗಿಗುಣ ಜವ್ವನ ಕುಲ ರೂಪುಗುಂದಿದ ನಡೆವೆಣಕೀಯಲಾಗದು ಪೆಣ್ಣ

ಜಡನಿಗೆ ಜಾತಿಹೀನನಿಗೆ ಚಂಚಲನಿಗೆಕಡುಮೂರ್ಖನಿಗೆ ಗಾಂಪನಿಗೆಬಡತನದೊಳು ಬಲು ಬವಣೆಗೊಂಬವನಿಗೆಕೊಡಲಾಗದು ಕುವರಿಯನು

ಬಾಳಿ ಬದುಕಿ ತಣಿವಿಲ್ಲದ ತಮ್ಮಂತೆಬಾಳಲೆಳಸುವ ಬಾಲಕಿಯಬೀಳುಗುವರನಿಗೆ ಬೆಲೆಗೈದರೆಂಬುದಕೇಳಿ ಕಿವಿಯ ಮುಚ್ಚುವುದು

ತನ್ನ ಮನೆಯೊಳುಂಡು ತವರುಮನೆಯ ಸಂಪನ್ನವಕ್ಕೆಂಬ ಪೆಣ್ಗಳಿಗೆಪೊನ್ನ ತೊಡಿಗೆ ಪೊಸದುಗುಲಂಗಳನಿತ್ತುಮನ್ನಿಸುವುದು ಮನವರಿತು

ಬಡವರಾವೆಮಗೆಲ್ಲಿ ಬರ್ಪುದೊಡವೆಯೆಂದುಕಡುದೈನ್ಯವಾಡಿ ಕಳೆಯದೆಉಡದೆ ತೊಡದೆ ತಾವುಳಿದು ತನುಜೆಯರಿಗುಡುತೊಡುವೊಡವೆ ಕೊಡುವುದು

ತನ್ನ ತವರುಮನೆಯವರಿತ್ತ ಪಿತ್ತಳೆಪೊನ್ನೆಂದು ಬಗೆದು ಪೂಜಿಸುವಕನ್ನೆಯರೊಳು ಕಡುಗೂರ್ಮೆಯನೊಡರಿಸಿಪೊನ್ನು ರನ್ನದೊಳು ಪೂಜುವುದು

ಪುಟ್ಟದಂದದಿ ಬಂದು ಪೊಕ್ಕಳೆಂದಣುಗಿಯನೆಟ್ಟನೆ ನಿಂದಿಸದಂತೆಕಿಟ್ಟಿದ ಪಲಕೆಲವೊಡವೆಗಳನು ಕೈಬಿಟ್ಟು ಕೊಡುವುದು ಬೇಸರದೆ

ಬೇಡಿ ಬೇಡಿದ ವಸ್ತುವ ಪೆಣ್ಮಗುವಿಗೆನೀಡುವ ನೇಮಗಾರರಿಗೆಷೋಡಶದಾನದ ಫಲ ಸುಲಭದೊಳು ಕೈಗೂಡುವುದೆಂಬರುತ್ತಮರು

ಅನ್ನಪಾನದೊಳಾಭರಣ ವಸನದೊಳುಮನ್ನಣೆಯೊಳು ಮನವೊಲಿದುಕನ್ನೆರನ್ನೆಯರು ಪರಕೆಗೈಯಲಾ ಮನೆಯುನ್ನತಿವಡೆದೊಪ್ಪುವುದು

ಅದರಿಂದ ಪೆಣ್ಮಕ್ಕಳನಾದರಿಪುದುಮುದವೇರಿಪುದು ಮುದ್ದಿಪುದುಮದುವೆ ಮಂಗಲದೊಳು ಮನವೊಲಿದವರಿಗೆಂದೊದವಿಪುದುಚಿತ ವಸ್ತುವನು

ಸಣ್ಣ ಬಣ್ಣದ ಸೀರೆಯ ಪೂಸರವ ಇಂಬಣ್ಣ ಪಲವು ಭಕ್ಷ್ಯಗಳಕಣ್ಣುವಿಡಿದುದನು ಕಳುಹಿಸುವುದು ತನ್ನಪೆಣ್ಣಿದ್ದ ಮನೆಗೆ ಬೇಸರದೆ

ಅಂದಂದಿಗೆ ನೆನೆನೆನೆದು ನೇಹದೊಳೆನ್ನಕಂದನೆಂತಿರ್ದಪಳೆಂದುಬಂದ ಬಂದವರ ಬಣ್ಣಿಸಿ ಕೇಳುವುದು ಮನದಂದು ಮಾನಿಸರನಟ್ಟುವುದು

ಬರಿಸುವುದೊಂದೂರೊಳಿರ್ಪಳನುಪಚಾರವೆರಸಿ ಪಾರಣೆ ಪರ್ವಗಳಿಗೆನೆರೆಯೂರೊಳು ಬಾಳುವ ನಿಜತನುಜೆಯಕರೆಯಿಸುವುದು ಕಾಲವರಿತು

ತಂದೆಯ ಮನೆಯಿಂದ ತಂದೆನೀ ವಸ್ತುವನೆಂದೇಳ್ಗೆಯ ಕೊಳುವಂತೆಬಂದ ಬಂದಾಗ ಬರಿದೆ ಕಳುಪದೆ ಪೆಣ್ಣಿಗೊಂದರೆಯೊಡವೆಗೊಡುವುದು

ಮಂದಿವಾಳದೊಳಾಣ್ಮನ ಮೇಗಣ ದೂರತಂದ ತನ್ನಣುಗಿಯನೊಡನೆಹಿಂದುಮುಂದೆಣಿಸದೆ ಹೀಯಾಳಿಸಿ ಮಿಗೆನಿಂದಿಸಿ ನೀಕರಿಸುವುದು

ಅವಿವೇಕದೊಳು ತನ್ನಾಣ್ಮನ ನುಡಿಗೇಳದವಮತಿಗಳನಾಚರಿಪಕುವರಿಗೆ ಸಲಿಗೆ ಕೊಟ್ಟು ಕೊಬ್ಬಿಪ ತವರವರೈಸೆ ಪೆಣ್ಗಾಗದವರು

ಮುಳಿವ ಮೋಡಿಯೊಳಿರ್ಪ ಮೊನೆವಾತಾಡುವಪಳಿವ ಪಲವು ಪಾಡುಗಳಿಗೆಅಳಲುವ ಮನವನಡಗಿಸಿಯಣುಗಿಗಾಗಿಅಳಿಯನಿಗಳುಕಿ ನಡೆವುದು

ಪೆತ್ತ ಪೆಣ್ಮಗಳ ಪೆರ್ಚಿಸಿ ಮೈಮರೆದುನ್ಮತ್ತೆಪ್ಪಂತೆ ಮನ್ನಿಸದೆಸುತ್ತು ಕೆಲಸವ ಕಲಿಸಿ ಗೈಸುವುದೊಡನೊತ್ತಿ ನುಡಿವುದುಚಿತವನು

ಕಂದ ಕೇಳಿನಿಯನು ಕನಲಿ ಕಾಡಿದೊಡದರಿಂದ ನೀನಳವಳಿಯದಿರುಒಂದಡಿಯಿಂದೊದೆದೊಡಮದನುಳಿದು ಮತ್ತೊಂದಡಿವಿಡಿದೊಡಬಡಿಸು

ಇನಿಯನೊಲಿದು ನಿನ್ನಿಚ್ಛೆಯರಿತು ಮಿಗೆಸನುಮಾನಗೈದು ಸಂತವಿಸೆಎನಗೊಳಗಾದನೆಂದೆಣಿಸಿ ಮೈಮರೆಯದೆಅನುನಯದಿಂದನುಸರಿಸು

ಕುಲಕೆ ಪೊರಗು ಕೊಟ್ಟ ಪೆಣ್ಣೆಂಬುದನರಿತೆಲಗೆ ನೀನೆಮ್ಮ ಬಯಸದೆಅಲೆಗೈವ ನಲ್ಲನೊಳಡಕಮಾಗಿರ್ದೆಮ್ಮಕುಲದೇಳ್ಗೆಯ ಕೊನರಿಡಿಸು

ಮುಳಿಸು ಬೇಸರು ಮೋಡಿಯಲಸಿಕೆ ಮೊನೆ ಮನದಳಲಂಜಿಕೆ ದುಗುಡದೊಳುತಿಳಿತಿಳಿದಿನಿಯನಿಂಗಿತ ಭೇದಂಗಳನಳುಕಿಯಳುಕಿ ಅನುಸರಿಸು

ಕನಸಿನೊಳಾದೊಡಮಿದಿರುವಾತಾಡದೆಕನಲದೆ ಕಲಹವೆಸಗದೆಮನೆಯೊಳಗಿರುವೆಮ್ಮ ಮಂದಿಗೆ ಬರಿಸೆಮನದನ್ನನ ಮನವೊಲಿಸುಅತ್ತೆ ಮಾವಂದಿರುಗಳುಕಿಯಕ್ಕರುಗೂಡಿಚಿತ್ತವರಿತು ಸೇವೆಯೆಸಗುಅತ್ತಿಗೆ ನಾದಿನಿಯರನನುವರ್ತಿಸುಪೆತ್ತವರನು ಪೆರ್ಮೆಗೊಳಿಸು

ಸವತಿಯರೊಳು ಸಂಗಾತಿವೆಂಗಳವೊಲುನೆವಮಿಲ್ಲದ ನೇಹವೆರಸುಅವರಿವರಂತಿಂತು ನುಡಿದ ಚಾಡಿಗಳಿಗೆಕಿವಿಗಳನಿತ್ತು ಕೇಳದಿರು

ಮಗಳೆ ನಿನ್ನಿನಿಯನ ಮನೆಯವರೆಮ್ಮೊಳುಪಗೆ ಸಾಧಿಸಿ ಬಯ್ದೊಡದಕೆಬಗೆಯೊಳು ತಾಳುಮೆಯನು ಬಲಿದವರೊಳುಮೊಗವಂಟದೆ ಮೋನವೆಸಗು

ಪೇರೈಸಿರಿಯಿಂದ ಪಿಗ್ಗಿ ಬೆರೆತು ನಿನ್ನಮೇರೆ ತಾರೆಯ ಮೀರದಿರುಸೇರಿಯೂಳಿಗವೆಸಗುವ ಸೇವಕರನುಸೈರಣೆಗೊಂಡು ಸಂತವಿಸು

ಎಂತು ನಡೆದೊಡಿನಿಯನಿಗಿಂಪುದೋರುವುದೆಂತು ನಡೆದೊಡೇಳ್ಗೆಯಹುದುಎಂತು ನಡೆದೊಡೆಲ್ಲರುಮಿದು ಲೇಸೆಂಬರಂತಿರು ಸಂತೋಷದೊಳು

ಇಂತು ಪೆಣ್ಮಕ್ಕಳಿಗೆದೆಯೊಳು ನೆಲೆಗೊಳುವಂತೆ ಬುದ್ಧಿಯನು ಪೇಳುವುದುಪಿಂತಣ ನಲ್ವೆಂಡಿರ ಪೆರ್ಮೆಗಳನೋರಂತೆ ಬಣ್ಣಿಸಿ ಪೊಗಳುವುದು

ಅಣ್ಣತಮ್ಮಂದಿರನಿಬರೊಡವುಟ್ಟಿದಪೆಣ್ಣನು ಪೆರ್ಮೆಗೊಳಿಸಿಬಣ್ಣಬಂಗಾರದ ಬಗೆ ಬಗೆಯಿಂದಿತ್ತುತಣ್ಣನೆ ತಣಿಸಿ ಬಾಳುವುದು

ಸೋದರ ಮಾವಂದಿರು ಸೊಸೆಯರಿಗೆ ಬೇಕಾದ ವಸ್ತುವ ಕೈಯೊಡನೆಆದರದಿಂದಳವಡಿಪುದಲಸದೆ ಸಂಪಾದಿಪುದಿಹಪರಗಳನು

ತಂದೆಯೊಡನೆ ತಾಯೊಡನೆ ತನ್ನೊಡನೆಯುಮೊಂದು ಬಸುರೊಳೊಗೆದವರುಕುಂದದೆ ಬಾಳುವ ಕುವರಿಗೆ ಕುರುಪುಗೊಂಡೊಂದರೆಯೊಡವೆಗೊಡುವುದು

ಕುವರಿಯನಿಂತು ಕೂರ್ಮೆಯೊಳು ಸಲಹಿ ಮತ್ತವಳನಿತ್ತೊಳ್ಗುವರನಿಗೆಸವೆಯದ ಧರ್ಮವ ಸಂಪಾದಿಸಿ ಮಾಧವನ ಮನವ ಬರಿಸುವುದು

ಚೆನ್ನಿಗ ಚಿಕದೇವರಾಯನ ಸಂಚಿಯಹೊನ್ನಮ್ಮನುಸುರ್ದ ಕಬ್ಬದೊಳುಉನ್ನತಿವಡೆದೊಪ್ಪಿದುದೈದನೆಯ ಸಂಧಿಸನ್ನುತ ಗುಣಸಂಬಂಧಿ