EN | KA

Menu

IV

Hadibadeya Dharma

ನಂದನ ಮೋಹದ ನಂದನ ಸನಕ ಸನಂದನವಂದಿತ ಚರಣಮಂದರಧರ ಮಾಧವ ಗೋವಿಂದ ಮುಕುಂದದೇವನೆ ಸಲಹೆನ್ನ

ಎಂದೆಂದುಮಿನಿಯನೊಳೆರೆ ಹೊರೆಯಿಲ್ಲದಚಂದದಿಂದೆರ್ದೆಯೊಳು ನಿಂದಇಂದುಸೋದರಿಗಿಂದೀವರಮಂದಿರೆಗಿಂದಿರೆಗಿಂದು ವಂದಿಪೆನು

ಅತ್ತೆ ಮಾವನು ಮೊದಲಾದ ಪೂಜ್ಯರೊಳನುವೃತ್ತಿಗೈದಾತ್ಮವಲ್ಲಭನಚಿತ್ತವರಿತು ಸೇವೆಯೆಸಗುವ ಸತಿಯರವೃತ್ತವ ಬಿತ್ತರಿಸುವೆನು

ತನ್ನ ಪೆತ್ತವರು ಮಿಗಿಲು ತನ್ನವರೊಳುತನ್ನ ಪೆತ್ತವರಿಗೆ ಮಿಗಿಲುತನ್ನಿನಿಯನ ಪೆತ್ತವರೆಂದವರನುಮನ್ನಿಸುವುದು ಮರುಕದೊಳು

ಗಂಡನ ಬಲ್ಮೆಯೊಳತ್ತೆಮಾವಂದಿರಗಂಡನನವರ ಬಲ್ಮೆಯೊಳುಅಂಡಲೆಯದೆಯನಿಬರನನುಸರಿಸುವಪೆಂಡಿರ ಜಸ ಪೆರ್ಚುವುದು

ಅತ್ತೆಮಾವಂದಿರೊಳಡಕಮೆನಿಸಿ ಪತಿಚಿತ್ತದಿರವ ಸೆರೆಗೊಂಡುಪೆತ್ತ ತಾಯನು ಪೆಸರೆನಿಸುವುದಿಳೆಯೊಳಗುತ್ತಮನಾರಿಯರೊಲಿದು

ಎಂತು ಕಾಪಿಟ್ಟೊಡಮೇನ ಬೆಸಸಿದೊಡಮಂತರಂಗದೊಳನುಗೆಡದೆಚಿಂತಿಸಿಯಳಲದೆ ಸಿಡಿಮಿಡಿಗೊಳದತಿಸಂತೋಷದೊಳು ಸಮ್ಮತಿಪುದು

ಪೊತ್ತುಪೊತ್ತಿಗೆ ಪೋಗಿ ಪೊಡಮಟ್ಟು ನಸು ತಲೆಗುತ್ತಿ ನಾಣ್ಚುತ ನಲವಿನೊಳುಒತ್ತಿನೊಳುಪಚರಿಸುತ್ತಿರ್ದವರೊಲಿದಿತ್ತುದರಿಂದ ತಣಿವುದು

ಉತ್ತರಕುತ್ತರವಿತ್ತಿದಿರಾಡದೆಒತ್ತಿನುಡಿಯದೊತ್ತರಿಸದೆಮತ್ತವರಿತ್ತಾಣತಿಯ ಮಸ್ತಕದೊಳುಪೊತ್ತು ಪೂಜಿಸುತೆಸಗುವುದು

ಅತ್ತಿತ್ತ ನೋಡದೆ ಅವಮತಿಗೈಯದೆಮತ್ತೆಯಾಗದೆ ಮರೆತಿರದೆಅತ್ತೆಮಾವಂದಿರಾಣತಿಯನಾಲಿಪುದೇಕಚಿತ್ತದೊಳೇಕಪತ್ನಿಯರು

ಕೂಗಿ ನಡೆಯದೆ ಕೊಬ್ಬದೆ ಕೋಪವೆಸಗದೆಮೂಗುವಡದೆ ಮೋಡಿಗೊಳದೆಲೋಗರುಚಿತಮೆನಲೊಯ್ಯನೊಯ್ಯನೆಯನುವಾಗಿ ನುಡಿದವರೊಡನೆ

ಮುದುಪರರಿಯರೆಂದು ಮುಂದುಗೆಟ್ಟಾಡದೆಚದುರರಲ್ಲೆಂದು ಜರಿಯದೆಇದು ಹಿತವೆಂದವರಿತ್ತುಪದೇಶವನೆದೆಗೊಳಿಸುವುದೆಸಗುವುದು

ಪಾಡುವಡಿಪರೆಂದು ಪರಿಹರಿಸದೆ ಚುನ್ನವಾಡದೆ ಮನೆವಾಳ್ತೆಯನುಮಾಡುವುದವರ ಸಮ್ಮತದಿಂದ ಸತಿಯರೊಳೀಡುಜೋಡಿಲ್ಲೆನಿಸುವುದು

ಮಾನಗೊಳದೆ ಮೈಲಿಗೆಯೆಂಜಲೆಂದನುಮಾನಗಯ್ಯದೆ ಮನವೊಲಿದುಬೇನೆಬಿದ್ದಿರೆ ಪೇಸದೆ ಬೇಸರದೆ ಸನ್ಮಾನದೊಳುಪಚರಿಸುವುದು

ಹಮ್ಮುಗೊಳದೆ ಹದವಳಿಯದೆ ಮಾವನಸಮ್ಮುಖದೊಳು ಮಂಡಿಸದೆಹೆಮ್ಮೆವಾತಾಡದೆ ಹೆಕ್ಕಳಿಸದೆ ಚಿತ್ತಸಮ್ಮತಿಯರಿತೆಸಗುವುದು

ಆವ ವೇಳೆಯೊಳಾವುದನುಗೊಳಲೆಳಸಿದರಾ ವೇಳೆಯೊಳವನೆಲ್ಲಸಾವಧಾನದೊಳು ಸಂಗತಿಗೊಳಿಸುವುದಿಷ್ಟದೇವತೆಯೆಂದೆಣಿಸುವುದು

ಒತ್ತಿನೊಳಿದ್ದೊಲವರಿತಡಿಗಳನೊಯ್ಯನೊತ್ತುವುದೊಂದುವೆರೆವುದುಸುತ್ತುಗೆಲಸವ ಸೊಲ್ಲಿಸದೆಸಗುವುದಿಂತತ್ತೆಯನನುವರ್ತಿಸುವುದು

ಬೀಸುವುದೊಮ್ಮೆ ಪಿಡಿದು ಬಿಜ್ಜಣಿಗೆಯಪಾಸುವುದೊಮ್ಮೆ ಪಾಸಿಗೆಯಸೂಸುವುದೊಮ್ಮೆ ಪನ್ನೀರ ಸುಗಂಧವಪೂಸುವುದೊಮ್ಮೆ ಪೂಜುವುದು

ತಾನೆ ನೀರೆರೆದು ಮೀಯಿಸುವುದು ಮತ್ತೊಮ್ಮೆತಾನೆ ತೊಡಿಗೆ ತೊಡಿಸುವುದುಏನೆಸಗುವೆನೆಂದಿದಿರೊಳಿದ್ದೆಲ್ಲವಸಾನಂದದೊಳು ಸಮನಿಪುದು

ಉಡುಗೆ ತೊಡುಗೆಯೂಟ ಮೀಹದೊಳತಿಶಯವಡುವೆನೆಂದೊಡಲು ಮರೆಯದೆಪಡಿಯಹೆನೆಂದು ಬರೆಯದವರಿಗೆ ತಾನುಕಡಿಮೆಯೆನಿಸಿ ಕಾಣಿಸುವುದು

ಕುತ್ತವೆಣಿಸಿ ಕೋಪಗೊಳದೆ ಕೂರ್ತಿವರೆಮ್ಮತೆತ್ತಿಗರೆಂದೆರ್ದೆಗೊಳಿಸಿಅತ್ತಿಗೆ ನಾದಿನಿಯರೊಳಂತರಂಗವಪತ್ತುಗೆಗೊಳಿಸಿ ಬಾಳುವುದು

ಅಂದಂದಿಗಿನಿಯನ ಮೆಯ್ಯಾರೈಕೆಯನೆಂದೆಂದಿಗು ಬೇಸರದೆಒಂದೆ ನಾವೆಯೊಳೇರಿದವರಂತೆ ಸವತಿಯರೊಂದೆನಿಸಿರ್ಪುದೊಪ್ಪದೊಳು

ಪೋರದೆ ಪುರುಡಿಸದೊರ್ವರೊಳನುಸಾರಮೆನಿಸಿ ಸಮ್ಮತದೊಳುಓರಗೆಗೆಳದಿಯರೊಂದುವೆರಸುವಂತೋರಗಿತ್ತಿಯರೊಂದಿಹುದು

ತಂದೆ ತಾಯನು ಬಿಟ್ಟು ತನ್ನ ಕೈಗೆಡೆಯಾಗಿಬಂದ ಸೊಸೆಯರ ಬಾಧಿಸದೆಅಂದಂದಿಗುಡಿಗೆ ತೊಡಿಗೆಯೂಟ ಮೀಹಗಳಿಂದ ಸಂತಸಗೊಳಿಸುವುದು

ಬಸವಳಿಸದೆ ಪಳಿಯದೆ ಭಂಗವಡಿಸದೆಹಸಗೆಡಿಸದೆ ಹುದುಗಿಸದೆಬಸಿರೊಳು ಬಂದ ಪೆಣ್ಮಕ್ಕಳ ಮರುಕವಸೊಸೆಯರೆಡೆಯೊಳೆಸಗುವುದು

ಬಸಿರ ನಿಟ್ಟಿಸಿಯುಣಬಡಿಸುವುದೊಳುಮುಡಿಯೆಸಕವರಿತು ಮೀಯಿಸುವುದುಒಸೆದು ಸಿಂಗರಿಸುವುದೊಲಿದು ನೋಡುವುದಿಂತುಸೊಸೆಯರ ಸುಖಬಡಿಸುವುದು

ಒಲಿದು ಬಸಿರಿಯಾವಾವುದ ಬಯಸುವಳಲಸದೆಯವನೆಲ್ಲವನುಪಲವಗೆಯೊಳು ಪವಣಿಸಿಯವಳಿಚ್ಛೆಯಸಲಿಸಿ ಸಂತಸಗೊಳಿಸುವುದು

ಅಲೆಗೈವ ಬಗೆಯನರುಹಿ ತಂದೆ ತಾಯನುಪಲಬಗೆಯೊಳು ಬಳಲಿಸದೆನಲವಿನೊಳಿನಿಯನ ನಲ್ಮೆಯನೊರೆವುದುಕುಲದೊಳೊಗೆದ ಕುವರಿಯರ

ಅಕ್ಕತಂಗಿಯರಣ್ಣ ತಮ್ಮಂದಿರು ತಮ್ಮಮಕ್ಕಳು ಮೊಮ್ಮಕ್ಕಳೊಳುಕಕ್ಕಸಗೊಂಡು ಕನಲಿ ಕಾದದೆ ಮಿಗೆಯಕ್ಕರನನುಗೊಳಿಸುವುದು

ತಾಯ ತಂದೆಯ ದೆಸೆ ಗಂಡನ ದೆಸೆಯಂಬೀಯೆರಡಿರವಿನೊಳೆಸೆವಕಾಯ ಬಾಂಧವರ ಕಣ್ಣೆರಡೆಂದು ಕಾಂಬುದಸೂಯೆಗೊಳದೆ ಸುಖಿಸುವುದು

ಬುದ್ಧಿಗಲಿಯಲರಿಯದ ಪಸುಮಕ್ಕಳಮುದ್ದಿಸಿ ಮುದವೇರುವುದುಬುದ್ಧಿಗಲಿವ ಕಾಲದೊಳು ಪೊಯ್ದು ಬಯ್ದು ನಲ್ಬುದ್ಧಿಗಳನೆ ಬೋಧಿಸುವುದು

ಓದುಗಲಿವ ಮಕ್ಕಳಿಗೂಟ ಮೀಹವನಾದರದಿಂದನುಗೊಳಿಸಿಓದಿಸುವರು ಕೊಂಡು ಬಯ್ದೊಡಮವರನುಮೂದಲಿಸದೆ ಸಮ್ಮತಿಪುದು

ಬಸಿರೊಳು ಬಂದ ಕುವರನಾದೊಡಮೇನುಪೊಸವರೆಯದ ಪುರುಷನನುಒಸೆದು ನಿಟ್ಟಿಸಿಯೊಡಲೋಜೆಯೊಳ್ಪುಗಳ ಬಣ್ಣಿಸಲಾಗದು ಭಾಮೆಯರು

ಗುರುಪಿರಿಯನು ತಂದೆ ಸೋದರನಣುಗನುಪೊರೆವರಸಾದೊಡಮೇನುಬರಿಸ ಪನ್ನೆರಡಾದ ಬಳಿಕಾರೊಳಮೊಂದುವೆರಸದೆ ಪೆರದೆಗೆದಿಹುದು

ಪಸಿದು ಬಳಲಿ ಪರದೇಸಿ ಬಾಯ್ವಿಡೆ ಕಂಡಸಮಯವೆಂದಬ್ಬರಿಸದೆಬಿಸುವಾತಿನೊಳು ಬೇಯಿಸದಿದ್ದ ಮಾತ್ರವನೊಸೆದೀವುದೊಳ್ವಾತಿನೊಳು

ನೆರೆಮನೆ ಮುಮ್ಮನೆ ಗರತಿಯರೊಲಿದೊಮ್ಮೆಬರೆ ತನ್ನ ಮನೆಯ ಬಾಗಿಲಿಗೆಕರೆದಾದರಿಸಿ ಕೈಲಾಪ ತೆರದಿ ಸತ್ಕರಿಸಿ ಭರದೆ ಕಳುಪುವುದು

ಮೊನೆಗಾತಿ ಮುಗುದೆ ಮುಸುಂಡಿಯಾಗಲಿ ನೆರೆವನೆ ಗರತಿಯ ನೀಕರಿಸದೆಮನೆಗೆ ಬಂದೆಡೆಯೊಳು ಮನ್ನಿಸಿ ಮನಮೊಲಿದನುವರಿತಾದರಿಸುವುದು

ತನ್ನ ಮನೆಯ ಮದುವೆಯೊಳು ಮಂಗಲದೊಳುತನ್ನ ಬಾಂಧವರೆಲ್ಲರನುಅನ್ನ ಪಾನಂಗಳಿಂದಾದರಿಪುದು ಮತ್ತೆಪೊನ್ನುಡೆಯಿತ್ತು ಪೂಜುವುದು

ಅರಿಯದೂಳಿಗವೆಣ್ಗಳು ತಪ್ಪುಗೈದಡಿಗೆರಗಿದೊಡನೆ ಮನಗರಗಿಮರೆತದನೆಲ್ಲವ ಮಕ್ಕಳೊಳೆಸಗುವಮರುಕವೆರಸಿ ಮನ್ನಿಪುದು

ಮುಳಿದವರೊಳು ಮೊಗವಂಟಿ ಮುಗ್ಗದೆಯಾಡಿಪಳಿವವರೊಳು ಪೋರುಗೊಳದೆಮುಳುಗಿಯೆಚ್ವವರೊಳು ಮೂದಲೆಯೆಸಗದೆಒಳುವೆಂಡಿರೊಳ್ಪುವಡೆವುದು

ಕಂಡ ಕಂಡವರೊಳು ಕಡುದೈನ್ಯವಡೆಯದುದ್ದಂಡೆಯೆನಿಸಿ ತಾನಿರದೆಗಂಡನ ಘನತೆಯೆಂತಂತು ಪೆರ್ಮೆಯ ಕೈಕೊಂಡೆಸೆವುದು ಕೋವಿದೆಯರು

ಕೇಣಗೊಂಡವರೆಂತು ಕೆಣಕಿ ನೋಡಲಿ ಮತ್ತೆಮಾಣಲಿ ಮಮತೆಯುಳ್ಳವರುಊಣೆಯವಿಲ್ಲದಂತೊಳ್ನಡತೆಯೊಳಿದ್ದುಕಾಣಿಸುವುದು ಘನತೆಯನು

ಬಸವಿಯರೊಳು ಪಾತಕಿನಿಯರೊಳು ಮತ್ತಸತಿಯರೊಳು ಕೆಳೆಗೊಳದೆಪೊಸತಿಲ ಪೊರಗಡಿಯಿಡದೊಳ್ವೆಂಡಿರಜಸವಳ್ಳಿ ಜಗವ ಪರ್ಬುವುದು

ಮಾಲೆಗಾತಿಯ ಮಡಿವಳತಿಯ ಕಣಿತಿಯಸೂಲಗಿತ್ತಿಯ ಸೂಳೆಯನುಆಲೋಚನೆಗಂತರಂಗಕೆ ಬರಿಸದೆಮೇಲರಿತಿಹುದು ಮೇರೆಯೊಳು

ಬಸಿರಿಯ ಬಾಣಂತಿಯ ಬೇನೆವಡೆದರೆಹಸುಮಕ್ಕಳ ಹಯನುಗಳುಬಸವಳಿಸದೆ ಬಳಲಿಸದೆ ಬಯ್ಯದೆ ಬಗೆಯೊಸೆದುಚಿತದೊಳೋವುವುದು

ನೀತಿ ವ‍ರ್ತನಗಳ ನಿಯಮಿಪ ಪಿರಿಯರಮಾತುಗಳನು ಮನಗೊಳಿಸಿಆ ತೆರದೊಳು ನಡೆದವನಿಯೊಳಧಿಕ ವಿಖ್ಯಾತಿವಡೆವುದು ಕಾಂತೆಯರು

ತಡೆಯದೆಳಮೆಯೊಳು ತಂದೆತಾಯಿಗಳಿಗೆನಡುವರೆಯದೊಳು ನಲ್ಲನಿಗೆಕಡುಮುದುಪಾದ ಕಾಲದೊಳು ತನ್ನಣುಗರಿಗಡಕಮೆನಿಪುದಬಲೆಯರು

ಈ ರೀತಿಯೊಳಿರ್ಪುದೇಕಪತ್ನಿಯರಿಗೆನಾರಾಯಣನಾಜ್ಞೆಯೆಂದುಆರೈದು ತಿಳಿದಾಚರಿಪುದೊಡನೆ ಕೈಸೇರುವುವಿಷ್ಟಸಿದ್ಧಿಗಳು

ಅರಿತಾಚರಿಸಿಯಖಿಲ ಶಾಸ್ತ್ರತತ್ವವನರಿಯದವರಿಗರಿಯಿಸುತಮೆರೆವ ಸದ್ಗುರುಗಳ ಮೆಲ್ಲಡಿದಾವರೆಗೆರಗಿ ಭಕ್ತಿಯನೆಸಗುವುದು

ಕೀಳುದೇವತೆಗೆರಗದೆ ಕಿರಿಯರ ಮಾತಕೇಳದೆ ಕೀಳಿಗಿಳಿಯದೆಏಳುಲೋಕವ ಪೊಡೆಯೆಡೆಯೊಳಿಟ್ಟೋವುವನಾಳುತನವನಾದರಿಪುದು

ಚೆನ್ನಿಗ ಚಿಕದೇವರಾಯನ ಸಂಚಿಯಹೊನ್ನಮ್ಮನುಸುರ್ದ ಕಬ್ಬದೊಳುಉನ್ನತಿವಡೆದೊಗೆದುದು ನಾಲ್ಕನೆಯ ಸಂಧಿಸನ್ನುತ ಗುಣಸಂಬಂಧಿ