EN | KA

Menu

I

Naḷacaritre

ಶ್ರೀರಮಣ ಸರಸಿಜದಳಾಕ್ಷ ಮುರಾರಿ ಸಚರಾಚರಭರಿತ ದುರಿತಾರಿ ನಿತ್ಯಾನಂದ ನಿರ್ಜರನಿಕರದಾತಾರವಾರಿಜಾಂಬಕ ವರಗುಣಾಶ್ರಯಮಾರಪಿತ ವೇದಾಂತನುತ ಸಾಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ

ಶರಧಿಶಯನ ಮುಕುಂದ ಕಂಸಾಸುರಮಥನ ಸುರಮೌನಿವಂದಿತಗಿರಿಧರಾಚ್ಯುತ ವೇಣುನಾದ ವಿನೋದ ಭವದೂರಸರಸಿಜೋದ್ಭವ ನುತ ದಯಾಸಾಗರ ಮುರಾಂತಕ ದೇವ ವರಪುರದರಸ ಚೆನ್ನಿಗರಾಯ ಪಾಲಿಸು ಸಕಲಸಜ್ಜನರ

ಉರಗರಿಪುಕೇತನ ವಿಭೀಷಣವರದ ಹರಿ ಸದ್ಭಕ್ತಪೋಷಣದುರಿತಕುಲಗಿರಿವಜ್ರ ನರಕಾಂತಕ ಮಹಾಮಹಿಮಪರಮಪುರುಷ ಯಶೋದೆಯಾತ್ಮಜದುರಿತದುಃಖವಿನಾಶ ವರಪುರದರಸ ಚೆನ್ನಿಗರಾಯ ರಕ್ಷಿಸು ನಮ್ಮನನವರತ

ಕರಿವದನ ಹೇರಂಬ ಲಂಬೋದರ ಗಣಾಧಿಪ ಮೋದಕಪ್ರಿಯೆಪರಶು ಪಾಶಾಂಕುಶಕರಾಂಕಿತದಿಂದ ರಂಜಿಸುವಸುರನರೋರಗನಮಿತ ಗೌರೀವರಕುಮಾರಕ ವಿದ್ಯೆವಾರಿಧಿವರದ ಗಣಪತಿ ಪಾಲಿಸೆನ್ನಯ ಮತಿಗೆ ಮಂಗಳವ

ನಾರಿ ನಳಿನದಳಾಕ್ಷಿ ವರ ಜಂಭಾರಿನುತೆ ಚತುರಾನನಪ್ರಿಯೆಭೂರಿಶುಭಗುಣಭರಿತೆ ಭಕ್ತಾಶ್ರಿತಜನಾಧಾರೆನೀರೆ ನಿಗಮವಿಚಾರೆ ಘನಶೃಂಗಾರೆ ಭಕ್ತರಿಗೊರವ ಕೊಡುವ ಉದಾರೆ ಶಾರದೆ ನಲಿದೊಲಿದು ನೆಲಸೆನ್ನ ಜಿಹ್ವೆಯಲಿ

ರಾಯರೊಳಗಗ್ಗಳೆಯನಾ ಕೌಂತೇಯನಿಗೆ ರೋಮಶಮಹಾಮುನಿರಾಯ ವಿಸ್ತರಿಸಿದನು ನಳಭೂವರನ ಚರಿತೆಯನುಶ್ರೀಯರಸ ವರಪುರದ ಚೆನ್ನಿಗರಾಯನಂಕಿತಮಾಗಿ ಪೇಳುವೆಪ್ರೀಯದಿಂದಾಲಿಸುವ ಸುಜನರಿಗೀ ಮಹಾಕಥೆಯ

ಪರಮಪುಣ್ಯಚರಿತ್ರೆಯಿದನಾದರಿಸಿ ಕೇಳುವ ನರರ ಜನ್ಮಾಂತರದ ಘನದುಷ್ಕರ್ಮ ದುಃಖವಿನಾಶವಾಗುವುದುಕರಿ ತುರಗ ರಥನಿಚಯ ರಾಜ್ಯದಸಿರಿಯ ಸಂಪದವಾಯುವನು ಮುರಹರನು ಮನ್ನಿಸಿ ಕೊಡುವ ಸುಜನರಿಗಿಷ್ಟ ಸಂಪದವ

ಜನಪ ಕುರುಭೂಪಾಲನೊಳು ಜೂಜಿನಲಿ ರಾಜ್ಯವ ಸೋತು ಯಮನಂದನನು ತನ್ನನುಜಾತರೊಡನೆಯೆ ಸತ್ಯವನು ಬಿಡದೆವನಿತೆ ಧೌಮ್ಯಮುನೀಂದ್ರ ಮಂತ್ರೀಜನಸಹಿತ ನಡೆತಂದು ಕಾಮ್ಯಕವನದೊಳಗೆ ಸಂಚರಿಸುತಿರ್ದನು ತೀರ್ಥಯಾತ್ರೆಯಲಿ

ಧರಣಿಪತಿ ಚಿಂತಿಸುತ ಹಲುಬಿದನರನ ಹದನೇನೆಂದು ತಪದಲಿಮರೆದು ಕಳೆದನೊ ನಮ್ಮನಿನಿಬರನೆನುತಲಿರಲಂದುಸುರಪ ಕಳುಹಿದ ರೋಮಶನು ಮುನಿವರನು ಗಡಣದೊಳೆಯ್ದಿ ರವಿಭಾಸುರಸುತೇಜದೊಳಂದು ಕಾಮ್ಯಕವನಕೆ ನಡೆತಂದ

ಚ್ಯವನ ಗೌತಮ ಕಪಿಲ ಭೃಗು ಭಾರ್ಗವ ಭರದ್ವಾಜಾತ್ರಿ ಕೌಶಿಕಪವನಭಕ್ಷಣ ವಾಮದೇವ ಮರೀಚಿ ಮೈತ್ರೇಯಶ್ರವತಿ ಕಣ್ವಾಂಗಿರಸ ಶುಕ ಗಾಲವ ಪರಾಶರ ದಾಲ್ಭ್ಯ ವರಮುನಿನಿವಹದೊಡನೆಯ್ತಂದನಾ ರೋಮಶಮಹಾಮುನಿಷ

ಅರಸನನುಜರು ಸಹಿತ ಮುನಿಮುಖ್ಯರನು ಕಂಡಿದಿರೆದ್ದು ಚರಣದೊಳೆರಗಿ ಬಿಜಯಂಗೆಯ್ಸಿ ತಂದನು ತಳಿರ ಮಂಟಪಕೆವರಮುನೀಂದ್ರರಿಗರ್ಘ್ಯಪಾದ್ಯೋತ್ಕರದೊಳುಪಚರಿಸುತ್ತ ದರ್ಭಾಸ್ತರಣದಲಿ ಕುಳ್ಳಿರಿಸಿದನು ಭಯಭರಿತಭಕ್ತಿಯಲಿ

ನೀವಘಾಡದ ದೇವಋಷಿಗಳುಪಾವನರು ಮೂಲೋಕಕತಿ ಸಂಭಾವನೀಯರು ಸತ್ಯಸಂಧರು ನಿರ್ಮಲಾತ್ಮಕರುಆವನರಿವನು ನಿಮ್ಮ ಮಹಿಮೆಯಭಾವಿಸುವಡೆನಗಳವೆ ನಿಮ್ಮ ಪದಾವಲಂಬನಸೇವೆ ದೊರಕಿತು ಧನ್ಯರಾವೆಂದ

ಧರಣಿಪತಿ ಸುಕ್ಷೇಮವೇ ನಿಜತರುಣಿ ನಿನ್ನನುಜಾತತನಯರುವರಸಚಿವ ಸಾಮಂತ ಧೌಮ್ಯಮುನೀಂದ್ರ ಮಂತ್ರಿಗಳುಪರಿಣತರೆ ಪೇಳೆನಲು ನಿಮ್ಮಯಪರಮ ಕರುಣಾಮೃತವೆ ನಮ್ಮನುಹೊರೆಯುತಿರೆ ಸುಕ್ಷೇಮ ಬೇರಿಲ್ಲೆಂದನಾ ನೃಪತಿ

ಧಾರಿಣಿಯ ನೆರೆ ಸೋತು ಅನುಜರುವಾರಿಜಾನನೆ ಸಹಿತ ಬಂದೀಘೋರಕಾನನದೊಳಗೆ ಗಿರಿಗಹ್ವರದ ಮಧ್ಯದಲಿಸೇರಿ ಹೃತಸುಖರಾಗಿ ಬಳಲಿದರಾರು ಧರೆಯೊಳಗೆನ್ನವೊಲು ಭವದೂರ ಮುನಿಕುಲತಿಲಕ ಹೇಳೆಂದರಸ ಬಿಸುಸುಯ್ದ

ಎಲೆ ಮಹೀಪತಿ ನೀನಿನಿತು ಉಮ್ಮಳಿಸಲೇಕರಸುಗಳು ಪೂರ್ವದನಳ ಹರಿಶ್ಚಂದ್ರಾದಿ ರಾಘವನೃಪರು ಹಳುವದಲಿಲಲನೆಯರ ತಾವಗಲಿ ಕಷ್ಟವಬಳಸಿದರು ಅವರಂತೆ ನಿನಗುಪಟಳಗಳುಂಟೇ ಬರಿದೆ ಮನನೋಯದಿರು ನೀನೆಂದ

ಪರಮಋಷಿಗಳ ನೆರವಿಯೇ ಸಭೆಹರಿಯ ಕಾರುಣ್ಯಾಂಬುಧಿಯೆ ಸಿರಿನರವೃಕೋದರ ಮಾದ್ರಿತನಯರು ನಿನಗೆ ಬಾಹುಬಲತರುಣಿಯೇ ಭೋಗೈಕಸಂಪತ್ತುರುತರದ ವನರಾಜ್ಯ ನಿನಗಿಂತಿರಲು ಸರಿಯಾರರಸ ಚಿಂತಿಸಲೇಕೆ ನೀನೆಂದ

ಆದಡೆಲೆ ಮುನಿನಾಥ ನಳನೃಪಮೇದಿನಿಯನುಳಿದವನಿಯಲಿ ತಳೋದರಿಯನೆಂತಗಲಿದನು ತಾನಾರ ದೆಸೆಯಿಂದಸಾಧಿಸಿದನವನಿಯನು ಧರೆಯೆಂತಾದುದಾ ನಳನೃಪಗೆ ನೀವಿದನಾದರಿಸಿ ಪೇಳೆನಲು ನಗುತಿಂತೆಂದನಾ ಮುನಿಪ

ಭೂತಳೇಂದ್ರರೊಳಧಿಕಬಲ ವಿಖ್ಯಾತನಹ ನಳಚಕ್ರವರ್ತಿಯುಭೂತಳವ ಪಾಲಿಸಿದನಾತನ ವಿಮಲಚರಿತೆಯನುಸೂತಮುನಿ ಹೇಳಿದನು ಮೌನಿವ್ರಾತದಲಿಯಾಗಸ್ತ್ಯಮುನಿ ಸಂಪ್ರೀತಿಯಿಂದರುಹಿದನು ರಘುನಂದನನೊಳೀ ಕಥೆಯ

ವಸುಧೆಪತಿ ಕೇಳೀ ಚರಿತ್ರೆಯನಿಷಧವಂತೆಂಬಾ ಮಹಾಪುರವೆಸೆದುದಗಣಿತ ಗೋಪುರದ ಪ್ರಾಕಾರಶಿಖರದಲಿಮಿಸುನಿ ರತ್ನಪ್ರಭೆಗಳಲಿ ರಂಜಿಸುವ ದೇವಾಲಯಗಳಿರ್ದುದುವಸುಧೆಗಚ್ಚರಿಯೆನಿಸಿತಾ ಪುರವರಸ ಕೇಳೆಂದ

ಮುರಿಮುರಿದ ಕೊತ್ತಳದ ಸಾಲಿನಪರುಠವದ ಹುಲಿಮುಖದ ಬಾಗಿಲಮಿರುಪ ಮಣಿವಜ್ರದ ಕವಾಟದ ಗಂಧವಟ್ಟಿಗೆಯಉರುತರದ ವೇದಿಕೆಯ ಹೇಮದಮೆರೆವ ಸೋಪಾನಗಳ ನೆಲೆಯುಪ್ಪರಿಗೆಗಳ ಮೇಲೆಸೆವ ಕಲಶದ ಕಾಂತಿ ರಂಜಿಸಿತು

ಮುಗಿಲ ತುಡುಕುವ ತೆನೆಗಳಾಳ್ವೇರಿಗಳು ಪಾತಾಳಗಳ ಖಾತಗಳಗಳು ಬಳಸಿದ ಕೋಟೆ ಸುತ್ತಾವರಿಸಿದುನ್ನತದಗಗನವೀದಿಯ ತಾರಕೆಯವೊಲ್ಸೊಗಸುತೋರುವ ಕನ್ನಡಿಯ ಸಾಲುಗಳ ರತ್ನಪ್ರಭೆಗಳಲಿ ರಂಜಿಸಿದುದಾ ನಗರ

ರವಿಶಶಿಯ ವೀದಿಗಳ ಹೇಮದವಿವಿಧ ಮಣಿಭಿತ್ತಿಗಳ ಕಾಂತಿಯುದಿವವನಣೆದುದು ರತ್ನನಿಚಯದ ಭದ್ರಭವನಿಕೆಯಯುವತಿಯರ ಸಂಗೀತ ವೀಣಾರವದ ರಹಿಯಲಿ ಮನಕೆ ಸವಿದೋರುವ ಮಹಾರಚನೆಯಲಿ ಮೆರೆದುದು ನಿಷಧವರನಗರ

ವಸುಧೆಯಮರರು ಕ್ಷತ್ರಿಯರು ರಂಜಿಸುವ ವೈಶ್ಯ ಚತುರ್ಥರುನ್ನತಕುಶಲವಿದ್ಯಾಧಿಕರು ಕವಿಗಳು ಮಲ್ಲಗಾಯಕರುಅಸಮರಥಿಕರು ಸಮರದಲಿ ಸಾಹಸರು ಕರಿ ರಥ ತುರಗ ಪಾಯ್ದಳವೆಸೆದುದಗಣಿತ ಚಾತುರಂಗದಿ ನಿಷಧವರನಗರ

ಸಾಲ ಬಿಲ್ವ ಕಪಿತ್ಥ ಜಂಬು ತಮಾಲ ದಾಡಿಮ ವಕುಳ ವಟ ಹಿಂತಾಲ ಕ್ರಮುಕ ಕದಂಬ ಕುರವಕ ಕದಳಿ ಖರ್ಜೂರತಾಲ ಚಂದನ ಪನಸ ವರತಕ್ಕೋಲ ಕೇತಕಿ ಕುಟಜ ಸರಳದಸಾಲತರುಗಳ ನಿಚಯದಿಂದುದ್ಯಾನ ರಂಜಿಸಿತು

ಭೂರಮಣ ಕೇಳಾ ಪುರಾಧಿಪವೀರಸೇನನೃಪಾಲ ರಿಪುಸಂಹಾರನಾತನ ತನಯ ನಳನೃಪನೆಂಬುದಭಿಧಾನಭೂರಿವಿಕ್ರಮ ಪರಮಧರ್ಮವಿಚಾರ ಶಶಿಕುಲಮೌಳಿ ಘನಗಂಭೀರ ಪಾಲಿಸುತಿರ್ದ ಸಪ್ತದ್ವೀಪದವನಿಪರ

ಶರಧಿ ಮೇರು ದಿಗಂತದವನೀಶ್ವರರು ಕಪ್ಪವ ತೆರುವರಗಣಿತಧುರವಿಜಯ ದೋರ್ಬಲರು ಮಣಿಮಯಮಕುಟವರ್ಧನರುಚರಣಕಾನತರಾಗಿ ನಳಭೂವರನ ಭಜಿಸುತಲಿರ್ದರಮರೇಶ್ವರನ ಸಭೆಯಂದದಲಿ ಮೆರೆದುದು ನೃಪತಿಯಾಸ್ಥಾನ

ಭೂಮಿಪತಿ ಕೇಳಿತ್ತಲುತ್ತರಭೂಮಿಯಲಿ ಪಜ್ಜಳಿಸುತಿಹ ಸುತ್ರಾಮಪುರದಂತೆಸೆದುದಲ್ಲಿ ವಿದರ್ಭನಗರವದುರಾಮಣೀಯಕರಚನೆಯಲಿ ನವಹೇಮಖಚಿತ ಸುರತ್ನ ಸೌಧಸ್ತೋಮಗಳ ಸಾಲಿನಲಿ ರಂಜಿಸುತಿರ್ದುದಾ ನಗರ

ಅಲ್ಲಿಗಧಿಪತಿ ಭೀಮನೃಪ ಗುಣದಲ್ಲಿ ನಯದಲಿ ವೀರ್ಯವಿತರಣದಲ್ಲಿ ಚಾತುರ್ಯದಲಿ ಸೌಭಾಗ್ಯದಲಿ ಧೈರ್ಯದಲಿಬಲ್ಲಿದನು ತಾನಾಗಿ ನಿಜಸುತರಿಲ್ಲವೆಂದುಮ್ಮಳಿಸುತಿರೆ ಮನದಲ್ಲಿಗಾಕ್ಷಣ ಬಂದನಾ ದಮನಾಕ್ಯಮುನಿವರನು

ಬಂದ ಮುನಿಗವನಿಪತಿ ವಂದಿಸಿನಿಂದು ಕರಗಳ ಮುಗಿದು ವಿನಯದೊಳೆಂದ ಸುತಸಂತಾನವಿಲ್ಲದ ಸಿರಿಯದೇಕೆಂದುನೊಂದು ನುಡಿಯಲು ಸುತರ ಪಡೆಯದತಂದೆಗಿದು ಸಂತಾಪವಲ್ಲವೆಎಂದು ಮುನಿ ಕರುಣದಲಿ ಸಂತೈಸಿದನು ಜನಪತಿಯ

ಯೋಗದೃಷ್ಟಿಯೊಳರಿದು ಮುನಿವರನಾಗ ನೃಪನೊಡನೆಂದ ಪುತ್ರನಯಾಗವನು ಮಾಡರಸ ತಪ್ಪದು ಪುತ್ರಲಾಭವೆನೆಆ ಗರುವ ಮುನಿಮಂತ್ರದಿಂದ ಸರಾಗದಲಿ ಶುಭದಿನ ಸುಲಗ್ನದಿಯಾಗವನು ಪೂರೈಸಿದನು ಸುರನರರು ತಣಿವಂತೆ

ಅರಸ ಕೇಳಾ ಯಾಗಸಮನಂತರದೊಳಾ ಮುನಿಮುಖ್ಯರನು ಸತ್ಕರಿಸಿ ಕಳುಹಿದನವರವರನುಚಿತೋಪಚಾರದಲಿತರುಣಿಗಾದುದು ಗರ್ಭ ಮಂಗಳಕರ ಸುಲಗ್ನ ಸುತಾರೆಯಲಿ ನೃಪನರಸಿ ಪಡೆದಳು ತನುಜೆಯನು ಲೋಕೈಕಸುಂದರಿಯ

ಅಮರದುಂದುಭಿ ಮೊಳಗಲಿಳೆ ಸಂಭ್ರಮಿಸೆ ಪುರಜನ ನಲಿಯೆ ನೃಪನಾಸಮಯದಲಿ ದಮನಾಖ್ಯಮುನಿಗಭಿನಮಿಸಿ ನಿಜಸುತೆಗೆವಿಮಲನಾಮವ ಪಾಲಿಸೆನಲಾಕಮಲಮುಖಿ ದಮಯಂತಿಯೆಂದುತ್ತಮದ ಪೆಸರೆಂದರುಹಿ ಮುನಿ ಹೊರವಂಟನಾಶ್ರಮಕೆ

ನಿರಿಗುರುಳ ಪವಳಾಧರದ ಉರುತರದ ತೋಳ್ಗಳ ಕಂಬುಕಂಠದತರಳನಯನದ ಸಂಪಗೆಯ ನಾಸಿಕದ ಪೆರೆನೊಸಲಹರಿಯ ಮಧ್ಯದ ಹಂಸಗಮನದಗುರುಕುಚದ ಕರಪಲ್ಲವದ ಸರಸಿರುಹಮುಖಿ ನಲಿದಾಡುತಿದ್ದಳು ರಾಜಭವನದಲಿ

ಗುಣದೊಳಗೆ ಶೀಲದಲಿ ಮಾತಿನಭಣಿತಿಯಲಿ ಗಾಂಭೀರ್ಯದಲಿ ವಿತರಣದಲನುಪಮವಿದ್ಯೆಯಲಿ ಗುರು ದೈವಭಕ್ತಿಯಲಿಪ್ರಣಿತಿಸಲು ಶರ್ವಾಣಿ ರತಿಯರಿಗೆಣೆಯೆನಿಪ ಸುಂದರಿಗೆ ಮಿಕ್ಕಿನಬಣಗು ಸತಿಯರು ಸರಿಯೆ ಲೋಕದೊಳೆಂದನಾ ಮುನಿಪ

ಕೇಳು ಪಾಂಡವತನಯ ಭೀಮನೃಪಾಲನೋಲಗದಲ್ಲಿ ಧರಣೀಪಾಲಕರ ಚರಿತಪ್ರಸಂಗದೊಳಿರಲು ನಳನೃಪನಶೀಲವನು ಸೌಂದರ್ಯವಿಭವ ವಿಶಾಲಮತಿ ಲಾವಣ್ಯರೂಪು ಗುಣಾಳಿಗಳ ವಿಸ್ತರಿಸಿ ಕೊಂಡಾಡಿದರು ಕವಿಜನರು

ವನಜಮುಖಿಯಾ ವಾರ್ತೆಯೆಲ್ಲವಮನವೊಲಿದು ಕೇಳಿದಳು ಹಿಗ್ಗುತನೆನೆದುದಂತಃಕರಣ ಹೆಚ್ಚಿದ ಚಿತ್ತವೃತ್ತಿಯಲಿನೆನೆದು ಬರೆದಳು ನಳನ ರೂಪವನನುನಯದಿ ಚಿತ್ರದಲಿ ಮಿಗೆ ಸಂಜನಿಸಿತವನಲಿ ಮೋಹವೆಲೆ ಧರಣೀಶ ಕೇಳೆಂದ

ಆಗ ಮದನನು ತನ್ನ ಬಲವನುಬೇಗದಲಿ ಜೋಡಿಸಲು ಖೋಯೆಂದಾಗಲರಸಂಚೆಗಳು ಅಳಿವಿಂಡುಗಳು ನಲಿದಾಡೆಕೋಗಿಲೆಗಳಾರ್ಭಟಿಸೆ ಗಿಳಿಗಳುಕೂಗೆ ನವಿಲುಗಳಾಡೆ ಮನ್ಮಥನಾಗ ಪೂಗಣೆಗಳನು ಸಂಧಿಸಿಯೆಚ್ಚನಂಗನೆಯ

ಉಣ್ಣಳನ್ನವ ಕಾಮಗತ್ತಲೆಕಣ್ಣಿನಲಿ ಪೆರ್ಚಿದುದು ಸತಿಯರಮನ್ನಣೆಗೆ ಮೈಗೊಡಳು ಬಲುಬೇಸರದಿ ಬಳಲುವಳುಬಣ್ಣಿಸಿಯೆ ಮಾತಾಡಲೊಲ್ಲಳುಬಣ್ಣಗುಂದಿದ ದೇಹದೊಳಗೆಳವೆಣ್ಣುಗಳ ಸೌಖ್ಯವನು ತೊರೆದಳು ಮದನನೆಸುಗೆಯಲಿ

ಕೆಳೆದಿಯರು ಕಂಡಂತರಂಗದಿಬಲಿದ ವಿರಹದ ರಾಜವದನೆಯಹೊಳಲೊಳುದ್ಯಾನವನ ಸುರುಚಿರ ಪುಷ್ಪತರುಗಳಲಿಎಳದಳಿರ ನೆಳಲಿನಲಿ ಪರಿಮಳದಲರ ಪನ್ನೀರಿನಲಿ ತಳುವದೆನಲವು ಹಿಂಗಿದ ಸತಿಯನುಪಚರಿಸಿದರು ಬನದೊಳಗೆ

ಕೆಲರು ಹದನೇನೆಂದು ಬಗೆದರುಕೆಲರು ಪನ್ನೀರುಗಳ ತಳಿದರುಕೆಲರು ಕಪ್ಪುರಗಂಧವನು ಲೇಪಿಸಿದರಂಗದಲಿಕೆಲರು ಬೀಸಿದರಾಲವಟ್ಟದಿಕೆಲರು ಹೂವನು ಹಾಸಿದರು ಕೋಮಲೆಗೆ ನಾನಾವಿಧದ ಉಪಚಾರಂಗಳನು ರಚಿಸಿ

ಈ ಪರಿಯೊಳಾ ಕಾಮಿನಿಗೆ ಶೈತ್ಯೋಪಚಾರವ ಮಾಡಿದರು ಪರಿತಾಪ ವೆಗ್ಗಳಿಸಿದುದು ಇದಕಿನ್ನೇನು ಹದನೆನುತಚಾಪಳೆಯರಾಲೋಚಿಸುತ ಕಡುಪಾಪಿಯಂಗಜನೆಂದು ಬಯ್ಯುತತೋಪಿನೆಡೆಗಿರದೈದಿ ತಂದರು ಸತಿಯ ಸಂತೈಸಿ

ಬಕುಳ ಪಾದರಿ ನಿಂಬ ವಟ ಕೇತಕಿ ಸರಳ ಪಾಟಳಿ ಕುಟಜ ಚಂಪಕ ರಸಾಲ ಕಪಿತ್ಥ ದಾಡಿಮ ಕ್ರಮುಕತರುಗಳಲಿಶುಕ ನವಿಲು ಜಿಲಿಬಿಲಿಗ ಗೀಜುಗಬಕ ಹಸುಬ ಗೊರವಂಕ ಟಿಟ್ಟಿಭಪಿಕ ಚಕೋರಕ ಮೀಂಬುಲಿಗ ಹಕ್ಕಿಗಳು ರಂಜಿಸಿತು

ಬಿಗಿದ ರತ್ನದ ಸಾಲ ಸೋಪಾನಗಲ ಕೆಂದಾವರೆಯ ಮೊಗ್ಗೆಯಮುಗುಳ ತುಂಬಿಯ ಹಂಸಗಳ ಬಕಚಕ್ರವಾಕಗಳಸೊಗಸುದೋರುವ ಸರಸಿಯಲಿ ವರಸುಗುಣಿಯರು ದಮಯಂತಿಯೊಳು ಮನಸೊಗಸಿನಿಂದಾಡಿದರು ಜಲಕೇಳಿಯ ವಿದಗ್ಧೆಯರು

ಬಂದು ಸತಿಯರು ಕೊಳನ ತೀರದಿನಿಂದು ವಸ್ತ್ರಾಭರಣಭೂಷಣದಿಂದ ಶಶಿಕಾಂತೋಪಲದಿ ಕುಳ್ಳಿರಿಸಿ ಶಶಿಮುಖಿಯಅಂದು ವಿರಹವ್ಯಥೆಯ ನಾನಾಚಂದದಲಿ ಶೈತ್ಯೋಪಚಾರಗಳಿಂದ ಸಂತೈಸಿದರು ವರಪುರದರಸನಾಜ್ಞೆಯಲಿ