XI
Madanatilaka
ನವರಸದೊಳ್ ನವಭಾವಂನವಭಾವದೊಳೊಗೆಗುಮಾ ತ್ರಯಸ್ತ್ರಿಂಶದ್ಭೇದವವರ್ಕೆ ತೊಂಬತೊಂಬತ್ತವು ಭೇದಮವೆರಡು ತೆಱನಶುದ್ಧಂ ಶುದ್ಧಂ
ವನಿತೆಯ ಭಾವವನೇಕವಿಧಂಗಳ್ತನುವಿನೊಳೊಪ್ಪುಗುಮತ್ತ ವಿಕಲ್ಪಂಮನದೊಳಲಂಪಣವಿಲ್ಲದೆ ಕೂರ್ತಂತನುನಯದಿಂ ನೆರೆದಂದಮಶುದ್ಧಂ
ಪುಡಿಯಿಡುತ್ತುಂ ವರಾಂಗಂ ಸುರುಳ್ದಿರ್ಕುಮಾಮೊಡವಿಯಕ್ಕುಂ ಮುಖಂ ಕಂದಿ ಕುಂದಿರ್ಕುಮಾವೆಡೆಯ ಮುಟ್ಟಲ್ಕಮುಳ್ಳಳ್ಕುಗುಂ ಕೂರ್ತವೋಲ್ಮಡದಿ ಲಲ್ಲೈಸುಗುಂ ಸ್ವಾಂತಮಂ ಸಿದ್ಧಿಸಲ್
ಅಂಗಜರಾಗೋತ್ಸಂಗದೊಳೆಂತುಂ ನಗೆಮೊಗಮುಮನೊಲವಿನ ಗುಡಿಗಳುಮಂಪಿಂಗದ ಪೊಂಕಂ ಸಂಗದೊಳಿಂಪಂ ಮನದೆಱಕಮನಬಲತಯೊಳೆ ಮೆಱೆಯಲ್ಕಂಗನೆಗಕ್ಕುಂ ತುಂಗನಿತಂಬೇ ಬೆಮರುಮನೊಸರ್ವ ಮದನರಸಮುಮನಾತುಂಗ ಮಹಾನೇಕಂಗಳ ಸೈಪಂ ನೆಗೞಿಸಲಱಿಗುಮೆ ಸತಿ ಕಪಟತೆಯಿಂ
ಕೆಲದೊಳೞುತ್ತಲಾತ್ಮಶಿಶು ಬಂದಿರೆ ದಾದಿಗೆ ಪುತ್ರಮೋಹದೆಮೊಲೆ ತೊರೆವಂತೆ ಭೂಪ ಶಿಶುಗೊಲ್ದಿವನೊಳ್ ರತಿಗೆಯ್ವುತುಂ ಕರಂಲಲನೆ ಮನೋಜ್ಞನಂ ನೆನೆದು ಭಾವಿಸೆಯುಂ ದ್ರವಮಕ್ಕುಮಾದೊಡಂಜಲರುಹನೇತ್ರೆ ಲೋಗರದು ತನ್ನದದೆಂದಱಿವಂ ಮನೋಭವಂ
ಎಡೆಯುಡುಗದೆ ತಣಿತಾಗಿರೆಕಡುಮಂದವದೆನಿಸೆ ಕಾಮರಸವದಕುಟಿಲಂಪಡೆಮಾತೇಂ ವಿಪರೀತಂಮಡದಿಯ ಕೂರ್ಮೆಯನೆ ಪೇೞ್ಗುಮಿದನಱಿಗಱಿವಂ
ಪೈತ್ತ್ಯಾಧಿಕೆಗತಿಕೋಪಂಶೈತ್ಯಯುತಾಲ್ಪಂ ಕಫಾನಿಲಾತ್ಮೆಗೆ ಮಂದಂನಿತ್ಯರತಿಯಿಲ್ಲದಾಕೆಗೆನಿತ್ಯಂ ನೆರೆವಾಕೆಗಳ್ಗಮಲ್ಪಂ ಕಾಮಂ
ಕೆಲಬರ್ ಭಗಲೇಪದೊಳಂಜಲಜಾನನೆಯರ್ ನಿಯತಂಸಲೆ ತೋಱುವರುತ್ಸವದಿಂಲಲನೇ ಮದನದ್ರವಮಂ
ಬಾಳಕಿಯಪ್ಪಾಕೆ ಕೂರದಿರ್ದೊಡಂ ಸುರತಾಳಾಪದೊಳವಳ್ಬಾಲಕಸ್ನೇಹದಿಂ ಮೊಲೆಯುಂ ಗುಹ್ಯಮುಂ ದ್ರವಿಯಿಕುಂ ಸಂತತಂಕೇಳರಸನಪ್ಪಾತನಿಂತೀ ಭೇದಮುಮನಱಿಯದೊಡಂಕೇಳಿಭಗಮನೇ ಪಯನಪ್ಪ ಪಶುಗಳಂ ನೋಡಿ ಕಲ್ಗೆ
ಮಾಸಪ್ರಸೂತೆ ಷಣ್ಮಾಸಗರ್ಭಿಣಿ ತಾಂ ಕ್ರುದ್ಧಾಸತಿ ಮೆಯ್ತಿಳಿದೆೞ್ಚರ್ತವಳ್ಮಾಸರನೃತ್ಯವಿಳಾಸಿನಿಗಂ ಕಾಮಮಾ ಸುಖಂ ಕೂಟಮುಂ ತತ್ಕಾಲಮೇ
ಮುಪ್ಪಿಂ ಭಯಾಕುಳದೊಳರ್ಥವಿಮೋಹದಿಂದಂತಪ್ಪಲ್ಕೆವೇಡಿದೊಡಮಾತುರದಿಂದಮರ್ಥಂತಪ್ಪೆಂದುಮೊಲ್ದ ತೆಱದಿಂ ಸತಿ ಕೂಡೆ ಭಾವಂತಪ್ಪೇನಶುದ್ಧಮೆನಿಕುಂ ಬಗೆ ನೀಂ ಲತಾಂಗೀ(?)
ಪೊಸಜವ್ವನಮುಂ ರೂಪುಂವಸುವುಂ ಗುಣಮುಂ ವಿಭೂತಿಯುಂ ಸಾಹಸಮುಂಮಸುಳ್ದಂದೊಲವೞಿಗುಂ ಭಾವಿಸು ನೀನೀ ಕ್ರಮದೆ ಕೇಳ್ ಸರೋಜದಳಾಕ್ಷೀ
ರೋಮಹರುಷಂ ಮದನರಾಗದುರೆ ಘರ್ಮೋದ್ದಾಮತನು ಕಂಪನವಿಲೋಲನಯನಂಗಳ್ತಾಮೆಸೆಯೆ ನಾಣೞಿದು ತೋರ್ಪೊಡದು ಶುದ್ಧಂಕಾಮಿನಿಯ ಭಾವಮತಿ ನೀರರುಹನೇತ್ರೇ
ನಡೆವಾಗಳ್ ನಡುಕಂಗಳಂ ಸುರತದೊಳ್ ನಾಣ್ಗಾಪನಾಳ್ದಿರ್ಪುದುಂನುಡಿವಾಗಳ್ ನಗುವುಂ ಪೊದಳ್ದು ಪದೆಪಿಂದಂ ನೋೞ್ಪ ನೋಟಕ್ಕೊಡಂಬಡೆ ಚಂದ್ರಾನನೆ ತಪ್ಪಿ ನೋಡಿ ತಲೆಯಂ ಬಾಗಿಪ್ಪೊಡಂ ಸೋಂಕಿನೊಳ್ಪಡೆಮಾತೇಂ ಬೆಮರಂ ನೆಗೞ್ಚುವೊಡೆ ಲಜ್ಜಾಭಾವಮಕ್ಕುಂ ಸತೀ
ಮನಸಿಜತಾಪದಿಂ ಕೊರಗಿ ಲಜ್ಜೆಯನೊಲ್ಲದಣಂಮನದೊಳಲಂಪುವೆತ್ತು ನಿಡುಸುಯ್ದು ಮರಲ್ದು ಕರಂವನಿತೆಯ ಕಂಗಳೊಪ್ಪಿ ಮುಗುಳ್ದಿರ್ಪೊಡೆ ಮೋನದೊಳೋಪನ ನೆಱೆ ನಟ್ಟ ದಿಟ್ಟಿ ಪೆಱತೇಂ ಪೆಸರಿಂ ಮುಕುಳಂ
ಸ್ಮರಶರಂ ನಡೆ ನೊಂದು ಸೈರಿಸಲಾಱದೋಪನನೆತ್ತಮಾತುರತೆಯಿಂ ನಡೆ ನೋೞ್ಕುಮಿನ್ನಿೞಿಕುಂ ಕರಂ ತಡಮಾಡಿರ್ಕುಂಪುರುಷನನೀಕ್ಷಿಸಿದಾಗಳಂತವಳಾಸೆಯಿಂ ಕಡೆಗಣ್ಗೆ ತಂದಿರವು ತಪ್ಪದೆ ತಪ್ಪುನೋಟಮದೊಪ್ಪುಗುಂ ಲಳಿತಂ ಪೆಸರ್
ಆರ ಮಾತುಮನಾಲಿಸಲೊಲ್ಲಳ್ ನೋಟದೊಳಾರುಮನಾವಗಂಮಾರನಂಬುಗಳುರ್ಚಿರೆ ಕಾಟಕ್ಕಾಟವಿಯೆಂದವನೋಪನಂದೂರದಿಂ ನಯದಿಂ ಕಡೆಗಣ್ಗೆಯ್ದಿರ್ದುದದೆಂದಱಿವಂತೆ ಪಂಕೇರುಹಾಸ್ಯಮುಮಂ ಮುಳಿದಾ ಸ್ತ್ರೀ ನೋಡೆ ಕಟಾಕ್ಷನಿರೀಕ್ಷಣಂ
ಎಮೆಯಿಕ್ಕದಿರ್ದೊಡಂ ಮೇಣ್ಬೆಮರಿಂ ತೈಲಾಂಬುಲವಣದಿಂ ತ್ರಿಕಟುಕದಿಂಹಿಮದಿಂ ತಂಬುಲದಿಂ ಮೇಣ್ಸಮನಿಸುಗುಂ ಕಣ್ಣನೀರ್ಗಳದಿರ್ಗಾಳಿಯೊಳಂ
ಎಡೆಯುಡುಗಿದೊಡಂ ತಂಪಂಪಡೆದೊಡಮೆಮೆಗಳೊಳೆ ತೀವಿ ಕವಿಯದೊಡಂ ಮೆಯ್ನಡುಗದೊಡಂ ಕಣ್ಣೀರ್ಗಳ್ಮಡದಿಯೊಳಱಿ ಕುಟಿಲಮಕ್ಕುಮಿದು ವಿಪರೀತಂ
ಅನಲಧ್ಯಾನದೊಳಂ ಭೋಜನಮಂ ತೊಱೆದದಱೊಳೆ ನಿಜಧಾರಿಣಿಗಳೊಳಂತನುವಿನ ಕಾಯ್ಪಂ ಬೇಟದಮನಮಂ ಸುಯ್ಲಿಂ ನೆಗೞ್ಚುವರ್ ಕಪಟತೆಯಿಂ
ನೋಟದಿಂ ನುಡಿಯಿಂ ನಗೆಯಿಂ ಕೊಂಡಾಟದಿಂ ಸಲೆ ಮೇಳದಿನಿಂಪಿಂಕೂಟದಿಂ ಮಿಸುಪೞ್ಕಱದಕ್ಕುಂಬೇಟಮೆಂಬುದಿದಂಬುರುಹಾಸ್ಯೇ
ಚಿಂತನಿರೀಕ್ಷಿಪಾಸೆ ಬಿಸುಪೇಱಿದ ಮೆಯ್ ಸ್ಮರಣಂ ಮರುಳ್ತನಂಪ್ರಾಂತಿನಲುಣ್ಣದಿರ್ಪಿರವು ಲಜ್ಜೆಯನೊಲ್ಲದ ಕೆಯ್ತವೋಪರೊಳ್ಸಂತತಮೆಯ್ದೆವೋಪೞಿವು ಜೀವವಿಯೋಗದ ಚೇಷ್ಟೆ ಸಾವಿದೋರಂತಿರಲೆಯ್ದುಗುಂ ಪ್ರಥಮದಿಂ ದಶಮಂಬರಮಕ್ಕುಮೋಜೆಯಿಂ
ಬೇಟಮೆಂಬುದು ರಾಜ್ಯದ ಫಳಮಲ್ತೆ ರಾಜ್ಯಂ ಬೇಟದಿಂ ಕರಮೆಸೆಗುಂಬೇಟಮಿಲ್ಲದ ರಾಜ್ಯಮದೊಪ್ಪದು ಬೇಟಮೊಪ್ಪುಗು ರಾಜ್ಯಮಿಲ್ಲದೊಡಂಬೇಟಮಾದೊಡಂ ಗುಣಮಿಲ್ಲದಾತಂಗೆ ಲುಬ್ಧನ ಧನದಂತೆ ವಿಫಲಮಕ್ಕುಂಬೇಟದಿಂದತ್ತಳಗಮುಂ ಪೆಱತುಂಟೆ ಬಗೆವಾಗಳಂಭೋಜಪತ್ರೇಕ್ಷಣೇ
ನೋಟಂ ಮನ್ಮಥಮಾರ್ಗಣಂ ನುಡಿಗಳೆಲ್ಲಂ ಮಾರಹೃದ್ಭೇದನಂಕೂಟಂ ಕಾಮರಸಾಮೃತಂ ತವದ ರಾಗೋತ್ಸಾಹಮಿಂಪಾವಗಂಬೇಟಂ ಚಿತ್ತಜಸಂಗರಾದಿ ರತಮತ್ಯಂತಾಧಿಕಂ ನಾಕದಿಂಕೋಟಾಕೋಟಿಯ ಶೇಷಮಂಗನೆಯರೊಳ್ ಸಂಭೋಗಮಾರ್ಗಾಂತರಂ (?)
ರಕ್ತೆಯನುರಕ್ತೆಯತಿರಕ್ತೆಯೆಂದಿಂತು ಮೂಱು ತೆಱದಿಂ ಬೇಟಮಕ್ಕುಮಲ್ಲಿರಕ್ತೆಯನಿಪಾಕೆ ಪುರುಷನಂ ಪಡೆದೊಡೊಡಂಬಟ್ಟಿಂಬಿಂ ರತಿಗೆಯ್ಗುಮತ್ತನುರಕ್ತೆಯಾರಕ್ತಭಾವದಿಂ ಮೇಲಿಕ್ಕಿ ಕೂಡುಗುಮತಿರಕ್ತೆಯಿರ್ಪಾಕೆ ಲಲ್ಲೆಯಂವ್ಯಕ್ತಮಾಗಿ ಲಜ್ಜೆಗೆಟ್ಟಳಿಪಿ ಕಾತರಿಸಿಯೊಂದುಗುಮೆಂತುಂ ತಣಿವಿಲ್ಲದೆ
ಪಶುಮೃಗಪಕ್ಷಿಜಾತಿಗಳಲಿಂಗಿತಮಂ ಹದಿರಂ ಸಮಂತು ಭಾವಿಸಿ ನೆಗೞ್ಗುಂ ದಲೆನ್ನದೆ ವಧೂನಿಕುರುಂಬದ ಸಂಜ್ಞೆಯಂ ಪರೀಕ್ಷಿಸದವನೆಂದುಮಾ ಪಶುವಿನಿಂ ಖಗದಿಂ ಮೃಗದಿಂ ಕನಿಷ್ಠಮೀವಸುಧೆಯೊಳೆಂದು ಕಲ್ವುದನುರಾಗದೆ ಸದ್ವಿಟನಿಂಗಿತಂಗಳಂ
ಇಂಗಿತದಿಂ ಭಾವಂ ಭಾವಂಗಳೊಳಿಂಗಿತಮದೊಳಗುಮಾಕಾಶಮರುತ್ಸಂಗತಿಯೊಳ್ ಭಾವೇಂಗಿತಮಂಗನೆಯರ ಚೇಷ್ಟೆಯಬ್ಜದಳನಿಭನಯನೇ
ಕುರುಳ್ ನಿಮಿರೆ ಕಣ್ಮಲರ್ ಪೊಳೆಯೆ ಕೆಂಪುವೆತ್ತೆತ್ತಲುಂವಿರಾಜಿಪ ಕುಚಂಗಳುಂ ತೊಡೆಗಳುಂ ಕಂಬುಕಂಠಮುಂಕರಂ ಮಿಸುಪ ಮಧ್ಯಮುಂ ನಡುವು ಪೊಂಗೆ ಬಿಂಬಾಧರಂಸ್ಮರೇಂಗಿತಮಿದೆಂದು ಭಾವಿಸುಗೆ ಪೂರ್ಣಚಂದ್ರಾನನೇ
ಕರಿದಕ್ಕುಂ ಮುಖಕಮಲಂಪಿರಿದುಂ ನಡುಗುಗುಮೞಲ್ದು ನುಡಿಗುಂ ಕಣ್ಣೀರ್ಸುರಿಗುಂ ಸೆರೆ ನಿಡಿದಕ್ಕುಂಪರಿಭವದಿಂಗಿತದ ಯುವತಿಗಱಿ ಘನಜಘನೇ
ಸುದತಿಯ ಕಣ್ಣುಂ ಬಸಿಱುಂಕದಪುಂ ಕುೞಿದಿರ್ಕುಮಾನನಂ ಬಾಡುಗುಮಂಗದಳುರ್ಕೆ ಕುಂದಿ ಜೋಲ್ದಿರ್ಪುದಿದುವೆ ಪಸಿದಾಕೆಯಂದಮೆಂದಱಿಯಬಲೇ
ಅಡಿಗಡಿಗೆ ಮೆಯ್ಯಿಕ್ಕುವೊಡಂಸಿಡಿಮಿಡಿಯಿಂ ಕೊಂಕಿ ಮೊಗಮನುಯ್ವೊಡಮಾಯಂದಡದಡಿಸಿ ಸುಯ್ವೊಡಂ ನುಡಿಯೊಳ್ಬಿಡೆ ಜಡಿವೊಡಮಱಿಗೆ ನೋವಿನಿಂದಿರ್ದವಳಂ
ನಡುಗುವೊಡಂ ಮೂಗಿನಲರ್ಪೊಡರ್ವೊಡಂ ನೆಱನನೆತ್ತುವೊಡಮಬಲೆಯ ಕಣ್ಕಡುಕೆಂಪಾದೊಡಮಧರಂತಡೆಯದೆ ಕೆತ್ತುವೊಡಮಱಿಗೆ ದೋಷೇಂಗಿತೆಯರಂ
ನುಡಿಯೊಳ್ ಪುಸಿಮಾತಿಂ ಮೆೞ್ಪಡಿಕುಂ ತಡಮಡಿಸಿವೊಂದನೊಂದಂ ನೆಗೞ್ಗುಂನುಡಿಗುಂದುಗುಂ ಬೆಮರ್ಕುಂಮಡದಿ ಕರಂ ತಪ್ಪದಿರ್ದೊಡಂ ತಪ್ಪಿದೊಡಂ
ಮೊಗಮಂ ನೋಡಲ್ಕಂಜುಗುಮಗಿದೊಳಗೊಳಗುಳಿಗುಮಂತೆ ರೂಪುಂ ನುಡಿಯುಂಬಗೆಯುಂ ಕುಂದುಗುಮೆಂದಂತೆ ಗೆಯ್ವೆನೆನ್ಗುಂ ಭಯಾಂಗಿತಾಂಗನೆ ವನಿತೇ
ಅಡಿಗಡಿಗಾಗುಳಿಸುವೊಡಂನುಡಿಗಳನಿನಿಸಲಸಿ ಕೇಳ್ದೊಡಂ ನಿಜತನುವಂಸಡಿಲಿಸಿ ಕಣ್ಣುಂ ಮೞಮೞಿಪೊಡಮಱಿ ನಿದ್ರಾಂಗಿ ತಾಂ ಮನೋಜಲತಾಂಗೀ
ವನಜಾಸ್ಯಂ ಕಂದಿ ತಮಂಮನದೊಳ್ ತೀವಿರೆ ಬೞಿಕ್ಕೆ ಮಾೞ್ಪಂ ಪೋ ನಿನ್ನನುಮತಮನೆಂದು ಮೈ ಜುಮ್ಮನೆವೋಗಿರ್ದವಳನಱಿವುದಲಸೇಂಗಿತೆಯಂ
ಪೊಱಗನೆ ನೋೞ್ಪೊಡೆ ಬೇಸಱತೆಱಪಂ ನುಡಿವೊಡೆ ವಿಭೂಷಣಂಗಳ ನುಡಿಯಂಮಱೆವೊಡೆಯಂದಾ ಸತಿ ಕೇಳ್ಪೆಱತೇನಿನ್ನೆಂದುಮಱಿಗೆ ಗಮನೇಂಗಿತೆಯಂ
ಉರದೊಳ್ ಸೀರೆಯನಿಕ್ಕಿರ್ದು ರೋದಿಸುತ್ತಪ್ಪಿಕೊಳ್ವೊಡಂ ಪಡೆಮಾತೇಂಪಿರಿದಾಳಾಪದೊಳೆಂದುಂನಿರಂತರಂ ಪೊೞ್ತುಗಳೆವೊಡಱಿಯೊಲ್ಲದಳಂ
ಗುಣಮಂ ಮಱೆದುಂ ಪೊಲ್ಲಮೆಯೆಣಿಸುವೊಡಂ ನುಡಿದೊಡಿನಿಸೆ ನುಡಿದಪೆಯೆಂದೇಂಗುಣಮಂ ಕಿನಿಸುವೊಡಱಿ ನಿರ್ಗುಣಿಯಂ ನೀನನ್ಯಚಿತ್ತದವಳೆಂದವಳಂ
ಉಮ್ಮಳಿಕುಂ ಮೂಗಿಱಿಗುಂಕೆಮ್ಮನೆ ನೆವಮಿಟ್ಟು ದೂಱುಗುಂ ಸೋಂಕುವೊಡಂಸಮ್ಮನಿಸದೆ ಜಡಿಗುಂ ನುಡಿಯಮ್ಮಿಗುಗುಂ ಪತಿಯನೊಲ್ಲದವಳಬ್ಜಮುಖೀ
ಪೆಱರಂ ಪಂಬಲಿಸುವೊಡಂಜಱೆವೊಡಮಲಸುವೊಡೆ ಮುಖದೆ ಬಿಸುಸುಯ್ವೊಡಮೇತಱ ಘಸಣಿಯೆಂಬೊಡಂ ನೀನಱಿವುದು ಮಾಸಿಪ್ಪೊಡಂ ಸಮಂತೊಲ್ಲದಳಂ
ಸುರತದೊಳೊಂದುಗುಮೊಳ್ಪಂಪರಿಹರಿಕುಂ ನಿದ್ರೆಗಾಸೆಯಿಂ ಕೂರ್ತರ್ಕುಂಪಿರಿದಾದುದೆಂದು ಕೆಮ್ಮಗೆನರಲ್ಗುಮಱಿ ಕೂರದಾಕೆಯೆಂದಾ ವಧುವಂ
ಸಂತೋಷಮಿಲ್ಲ ಭಯಮಿಲ್ಲುಂತೆ ಪರಾಙ್ಮುಖವದಿಷ್ಟರೊಳ್ ಪಗೆಯೊಳ್ ತಾಂಮಂತಣಮನ್ಯಗೃಹಾವಾಸಂ ತನಗೆನಿಪಾಕೆ ಕೂರದಾಕೆ ವಿನೂತೇ
ಅಂಗನೆ ನುಡಿದುಂ ನೋಡಿಯುಮಂಗಸ್ಪರ್ಶನದೊಳಂತ್ಯಕೊಂದಿಸುತುಂ ಪುರ್ವಂ ಗಂಟಿಕ್ಕುವೊಡಂ ಪೊಲ್ಲೇಂ ಗಡಮಾ ರಾತ್ರಿವಿಹರಜಾಗರಮಿನಿತುಂ
ಪತಿಯಿಂ ಮುನ್ನಂ ನಿದ್ರಾಸ್ಥಿತೆಯಾಗಿರ್ದೋಪನೊಱಗಿದಿಂಬೞಿಕ ವಿನಿದ್ರಿತೆಯಾಗಿ ವಿಹರಿಸುವೊಡಾಸತಿಗಲಸೇಂಗಿತಮಿದೆಂದು ಬಗೆ ಮೃಗನಯನೇ
ನುಡಿಗುಮೋಪನ ಪಡೆಮಾತನಾತನಿರ್ದೆಡೆಗೆ ಬರ್ಕುಂಮುಡಿಯುಮುಡೆಯುಂ ಜೋಲ್ದಿರ್ಕುಂ ಪಾಡುಗುಂ ಪರಸಿ ಬಯ್ಗುಂಕಡೆಗಣ್ ಕೆಂಪಕ್ಕುಂ ದೆಯ್ವಂ ಬಂದಂತೆ ರಹಸ್ಯಂಗಳಂಮಡದಿ ಪೇೞ್ಗುಂ ನಲ್ಲಂ ಬೆಸಗೊಳೆ ಮಡದಿಯಿಂಗಿತಂಗಳಂ
ಮೊಗದೊಳ್ ರಾಗರಸಂ ತುಳುಂಕುವೊಡಮಕ್ಷಿದ್ವಂದ್ವದೊಳ್ ಹಾಸ್ಯವಾವಗಮೊಪ್ಪಿರ್ಪೊಡಮೆಯ್ದೆ ಸೋಂಕು ಪದೆಪಂ ತಾಳ್ದಿರ್ಪೊಡಂ ಮಾತು ನೆಟ್ಟಗೆಯೊಳ್ಪಂ ತಳೆದಿರ್ಪೊಡಂ ಬಗೆ ಕರಂ ಸಂತೋಷಮಂ ಮಾೞ್ಪೊಡಂಪೊಗೞಲ್ವೇೞ್ಕುಮೆ ನಿರ್ವಿಕಾರಮಿನಿತುಂ ಕನ್ಯಾಂಗಿಯೊಂದಿಂಗಿತಂ
ನುಡಿಯಲ್ ನೋಡಲ್ ಕೊಂಕಲ್ತಡವಡಿಪೊಡಮೋತು ಸಖಯೊಳೋಪನ ಮಾತಂಗೆಡೆಗೊಂಡು ಪೊಗೞ್ದು ಮಗುೞ್ದುಂನುಡಿಯಿಸುವೊಡಮಱಿಗೆ ಕೂರ್ತಳೆಂದಾ ವಧುವಂ
ತೊದಳ್ನುಡಿಗಳೊಪ್ಪಿ ಪುಷ್ಪಚಯಮಂ ಸುಗಂಧಂಗಳಂಪೊದಳ್ದ ಪದೆಪಿಂ ಫಳಾವಳಿಯನತ್ಯಪೂರ್ವಂಗಳಂವಿದಗ್ಧೆ ಮಡಗಿಟ್ಟು ತಂದು ತನಗೀವುದುಂ ರಾಗದಿಂದದೊಂದೆ ಪರಮಾತ್ಮಸನ್ಮತದೆ ನಲ್ಲಳೆಂದಾಕೆ ತಾಂ
ಮುಳಿಯಳ್ ಮುಳಿದೊಡಮಾಗಳೆತಿಳಿವಳ್ ನಿಜಪತಿಯ ಕೂರ್ಪರೊಳ್ ಮಿತ್ರತ್ವಂಮುಳಿವವರೊಳ್ ವೈರಂ ಕೋಮಳೆಗಾದೊಡೆ ಕೂರ್ಮೆಗೆಡಱು ತೊಡಱಾಗುವುದೇ
ಚುಂಬಿಸಿದ ಲೋಳೆವಾಯಂಬಿಂಬಾಧರೆ ಪಡೆಯದಲಸಿ ಪದೆಪಿಂ ಮತ್ತಂಚುಂಬಿಸಿ ಚುಂಬಿಸಿ ಮತ್ತಂಚುಂಬಿಸುವೊಡಮಱಿಗೆ ಕೂರ್ಮೆಯಂ ಪ್ರಕಟಿಸುಗುಂ
ನಗೆಮೊಗಮುಮಂತೆ ಬೆಮರಿಂದೊಗೆದ ಕದಂಪಿಂದೆ ಸುರಿವ ಘರ್ಮಾಂಬುವಿನಿಂಬಿಗಿದಪ್ಪುವಪ್ಪುಮಾ ಮುದ್ದುಗೆಯ್ತಮುಂ ನೆಗೞ್ಗುಮಪ್ಪೊಡವಳತಿ ಕೂರ್ಪಳ್
ನೆರವಿಯನಿನಿತಿಚ್ಚೈಸಳ್ಪುರುಷನೊಳೇ ಕೃತಕಮಿರ್ಪುದನೆ ಚರ್ಚಿಸುವಳ್ಕರಮಗಲದ ಪತಿಯಿಂದಂಸುರತಮನೆ ಬಯಸುವವಳವಳೇ ಕಡುಕೂರ್ಪಳ್
ಸುರತದೆಡೆಯೊಳ್ ಬೆಮರುಣ್ಮದನ್ನೆಗಂ ಮೆಯ್ನವಿರ್ ಸಯ್ತನಿರದನ್ನೆಗಂಸರಸಿಜಾನನಂ ಕಿಱುವಿಡದನ್ನೆಗಮಂಗಜದ್ರವಮೆಚ್ಚು ಪಾಯದನ್ನಂತರದೆ ನಿಡುಸುಯ್ಗಳೊಳಲಂಪುಣ್ಮದನ್ನಂ ಲಲ್ಲೆಯಿಂ ಪದೆದು ಕಾತರಿಸದನ್ನಂಪುರುಷನಾದನಂ ಪೇೞೆಂತು ನಂಬುವಂ ಕೂರ್ತಳೆಂದು ನೆಱೆ ನೀರರುಹನೇತ್ರೇ
ಪಡಪಡ ಪಾಯ್ವೆರ್ದೆ ನಡನಡನಡುಗುವ ತನು ಬಱಬಱಾಗಿ ಬತ್ತುವ ಬಾಯ್ ಕೆಂಪಿಡಿದಿಡಿದೀಕ್ಷಣಮಾದೊಡೆಬಿಡೆ ನಂಬುಗೆ ಕೂರ್ತಳೆಂದು ಕೂಟದ ಪಥದೊಳ್
ಭಗಮಲರ್ದು ಕೆತ್ತುಗುಂ ಗುದಮಗಿಗುಂ ತೊಡೆ ನಡುಗುಗುಂ ಲತಾಂಗಿಗೆ ಕಾಮಂಭುಗಿಲೆಂದು ಪಾಯ್ವ ಪಥದೊಳ್ಬಗೆದಱಿವುದಿದೊಂದು ಸೋಪದೇಶಮನಬಲೇ
ಪೊಳೆವಲರ್ಗಂಗಳ್ ನಿಂದಾಕುಳದಿಂ ಸೊರ್ಕಿದವೊಲೀಕ್ಷಿಪೊಡವಳ್ ಲೀನತೆಯಿಂವಿಳಸಿತಲಜ್ಜೆಯುಮಂ ಬಿಸುಟಳಸುವೊಡಾ ಕೂರ್ತಳೀಗೆ ಕೂಟದ ಪಥದೊಳ್
ಕಡುಮುಳಿದೊಡೆಯಬಲೆ ಬೞಲ್ದೊಡೆ ಮತಿಗೆಟ್ಟೊಡನೆ ಕೂರ್ತು ರತಿಗೆಯ್ವೊಡಮೆೞ್ದೊಡಮೆಯ್ದೆ ನಾಣ್ಚಿದೊಡೆಯುಂಮಿಡಿದೆಸೆಗುಂ ಘರ್ಮವಾರಿ ಪೈತ್ತ್ಯಾಧಿಕೆಗಂ
ಪುರುಡಿಸಲೊಲ್ದು ಪೊಯ್ದು ನಿಡುಸುಯ್ದು ಕೞಲ್ದು ಬೞಲ್ದು ಬಂದು ಬಂದಿರದೆ ಬೆಮರ್ತು ಕೂರ್ತು ಕೂರ್ತ... ಸಡಿಲ್ದು ಕನಲ್ದೊನಲ್ದು ಕಾತರಿಸುತೆ ಮುದ್ದುಗೆಯ್ದು ಕಲಂಕಿಯವುಂಕಿನ... ಕಿತಾಂ ನೆ...ಯೊಳ್ ನೆರಗಿ ವಿಲ್ಲದೆಯೆಂದು ಕನಿಷ್ಠಮಾರ್ವೊಳಂ...(?)
ಪದನಱಿದಿಂಬುಕೆಯ್ದು ಮಗುೞ್ದುಂ ರತಿಯಂ ಪಡೆದಿರ್ದುಮಲ್ಲದೇಂಪದುಳಿಕೆಯಿಂದ ಕೈತವಮುಮಾ ತವದಿಂಗಿತಮುಂ ಸಮಂತು ಕಲ್ತೊದವಿದ ಕೂರ್ಮೆಯುಂ ಸತಿಗೆಯಿಷ್ಟಮದೆಂದಿರೆ ಮಾಡಿ ಕೂಡಿ ಗೆಲ್ವುದು ಚದುರಿಂತು ಮೊಟ್ಟಯಿತರೊಳ್ ಸುರತಂ ಸುಖಮಾಗಲಾರ್ಕುಮೇ
ಕಾಮಂಗೆ ವನಿತೆ ಮೂಲಂಕಾಮಿನಿ ತಾನನ್ಯಚಿತ್ತೆಯಾಗದ ತೆಱದಿಂಪ್ರೇಮದೆ ನಿಚ್ಚಂ ಯತ್ನದೊಳೇಮಾತೋ ನೆಗೞ್ಗೆ ನೆಗೞೆ ಪಡೆಗುಂ ಸುಖಮಂ
ಇದು ಸಕಲವಿಬುಧಜನವಿನುತ ಕಾವ್ಯಾಲಂಕಾರನೀತಿನಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜವಿರಚಿತಮುಮಪ್ಪ ಮದನತಿಲಕದೊಳ್ ರತಿಭಾವಲಕ್ಷಣಮುಂ ಪೇೞ್ದ ಏಕಾದಶಾಧಿಕಾರಂ ಸಂಪೂರ್ಣಂ


