II
Hadibadeya Dharma
ಮಂಗಳಗುಣಗಣನಿಧಿಗೆ ನಿರ್ಮಲನಿಗುತ್ತುಂಗ ಮಹಿಮಗೆ ಮಾಧವಗೆಸಂಗತಜನಸರ್ವಫಲದಗೆ ಪಶ್ಚಿಮರಂಗಧಾಮನಿಗೆರಗುವೆನು
ಇಂಗೋಲನ ತಾಯಿಗಿಂಗದಿರನ ತಂಗಿಗಿಂಗಡಲಣುಗಿಗಿಂದಿರೆಗೆರಂಗಧಾಮನ ರಾಣಿಗೆ ರಾರಾಜಿಪರಂಗನಾಯಕಿಗೆರಗುವೆನು
ಪತಿಯೊಳು ಪರಭಕ್ತಿಗೈವುದು ಲಕ್ಷ್ಮೀಪತಿಯಾಣತಿಯೆಂದು ಬಗೆದುಪತಿಯನೆ ಪರದೇವತೆಯೆಂದು ಭಜಿಸುವಸತಿಯ ಸನ್ನುತಿಸುವೆನು
ಪತಿಭಕ್ತಿಯೊಂದು ಶ್ರೀಪತಿಭಕ್ತಿಯೊಂದಿದರತಿಶಯಕಿನ್ನೆಣೆಯಿಲ್ಲಮತಭೇದವುಂಟು ಮಾಧವಭಕ್ತಿಗಿದಕಾಮತಭೇದವೂ ಮಗುಳಿಲ್ಲ
ಆದರದೊಡನಂತರಂಗದೊಳಾಣ್ಮನಪಾದವ ಭಜಿಪ ಭಾವೆಯರಪಾದಧೂಳಿಗಳಿಂದೆ ಪಾವನವಹುದೀಮೇದಿನಿಯೆನೆ ಮಿಕ್ಕುದೇನು
ಪತಿತರ ಪಾವನವೆನಿಸುವ ಬಲ್ಮೆಯೊಳತಿಶಯವಡೆದ ತೀರ್ಥಗಳುಸತಿಯರ ಪಾದಸಂಸ್ಪರ್ಶದಿಂ ತಮ್ಮ ದುಷ್ಕೃತವ ಕಳೆಯಲೆಳಸುವುವು
ತಡೆಯದೆಲ್ಲೆಡೆಯೊಳು ತಾನು ಬೀಸುವೆನೀಯೆಡರನೇಳಿಪೆನೆಂದೆಲರುಸಡಗರದಿಂದ ಸಾಧ್ವಿಯರಡಿಸೋಂಕಿದಪುಡಿಯ ಮುಡಿಯೊಳಾನುವುದು
ತೇಜಿಗಳೆಡಹದೆ ತೇರುಡಿಯದೆ ತನ್ನೋಜೆಯುಡುಗದೆ ಭಾಸ್ಕರನುಈ ಜಾತಿಸಾಧ್ವಿಯರೆಸಕದೇಳಿಗೆಯಿಂದತೇಜವಡೆದು ತಿರುಗುವನು
ಮಳೆಗರೆವುದು ಬೆಳೆ ಪೆರ್ಚುವುದಿಳೆ ತಳಕಿಳಿದು ಪೋಗಲದೆ ತಡೆದಿಹುದುಪಳಿವಿಲ್ಲದ ಪತಿವ್ರತೆಯರ ನಡತೆಯಬಳದೊಳೆಂಬರು ಬಲ್ಲವರು
ಪರಮ ಪತಿವ್ರತೆಯರ ಪಾದದರ್ಶನದೊರೆಕೊಂಡುದೆ ಪುಣ್ಯದಿವಸಪರದಿರವನು ಬಲ್ಲವರೆ ಭೂಪ್ರದಕ್ಷಿಣದಿರವನ್ನಿನ್ನೇವಣ್ಣಿಪೆನು
ತನ್ನಿನಿಯನ ತಾಯ್ ತಂದೆಯ ಕುಲಗಳನುನ್ನತಿಯಗೈದೊಪ್ಪುವಡೆದುಮನ್ನಣೆವೆತ್ತ ಸಾಧ್ವಿಯರ ಮಹಿಮೆಗಳಸನ್ನುತಿಸುವಡೆನ್ನಳವೆ
ಈ ಸುಚರಿತ್ರೆಯರೆಸಗಿದನ್ನವನುಣಲಾಸೆವಡುವರು ಪಿತೃಗಳುಆ ಸುಖ ದೊರೆಕೊಂಡೊಡವರಿಗಪ್ಪುದು ತೃಪ್ತಿಸಾಸಿರ ಬರಿಸ ಪರ್ಯಂತ
ಸತಿಯರ ಕೈ ಸೋಂಕಿದನ್ನವ ಸವಿವುದರತಿಶಯವಾಡಲೆನ್ನಳವೆಅತಿಕೃಚ್ಛ್ರಚಾಂದ್ರಾಯಣ ಸಾಂತಪನಾದಿವ್ರತನಿಯಮದ ಪವಣಲ್ಲ
ಇವರಿದ್ದೆಡೆ ಪುಣ್ಯತೀರ್ಥ ಪುಣ್ಯಕ್ಷೇತ್ರವಿವರಿದ್ದ ಮನೆ ದೇವಭವನಇವರೆ ಪ್ರತ್ಯಕ್ಷ ದೇವತೆಯರು ದಿಟವೆಂಟುವಿವರಿಸುವರು ವೇದವಿದರು
ಉದಯಕಾಲದೊಳೆದ್ದೊಲಿದಷ್ಟದೈವದಪದಗಳ ಪಾಡುವಂದದೊಳುಪದಿಬದೆಯರ ಪೆಸರ್‌ಗೊಂಡು ಪೊಗಳ್ವುದುವಿದಿತವೈಸಲೆ ವೈದಿಕರಿಗೆ
ಪತಿಯ ಪಾದಾಬ್ಜಭಕ್ತಿಯೆ ತಮಗಿಹಪರಗತಿಯೆಂದು ಕಡುವಿಡಿದಿರ್ಪಸತಿರಿರ್ಪೆಡೆಯೊಳು ಕೃತಯುಗಮೊಂದಲ್ಲದಿತರಯುಗಕ್ಕಿಂಬಿಲ್ಲ
ಪರಮ ಪತಿವ್ರತೆಯಿದ್ದ ಬಳಿಯೊಳಾಸಿರಿರಾಣಿ ಸೇರಿ ಬಂದಿಹಳುಸರಸತಿ ಸಾವಿತ್ರಿ ಗಾಯತ್ರಿಯರುಮಾಪರಿಸರದೊಳು ಬಳಸಿಹರು
ಪಲವು ಸುಕೃತಮಿಂತು ಪರಿಣತಿವೆತ್ತುದೊಕುಲದೇಳ್ಗೆ ಗುಂಪುಗೂಡಿದುದೊಸಲೆ ಪರಿಶುದ್ಧಿ ಸಾಕಾರಮಾದುದೊ ಎನೆಕುಲವಧು ಕುರುಹುಗೊಂಡಿಹಳು
ಪತಿಭಕ್ತಿರಸಮಿಂತು ಬಲಿದುದೊ ಪರಿಶುದ್ಧಮತಿಗಿಂತು ಮೈ ದೊರಕಿದುದೊವ್ರತದೇಳ್ಗೆಯಿಂತು ಬಿತ್ತರವಡೆದುದೊ ಎನೆಸತಿಯರು ಜಸವಡೆದಿಹರು
ಜಗದೊಳುಪಾಂಸುಲೆಯರ ಚರಿತಕೆ ಸರಿಮಿಗಿಲಿಲ್ಲ ಮಿಕ್ಕ ಧರ್ಮದೊಳುಬಗೆಯರಿತೆಸಗಬಲ್ಲವರಿಗೆಂದೆಂದಿಗೂಮೊಗದೋರವು ಮೋಸಗಳು
ಈ ಕಾಲವಾ ಕಾಲವೀ ದೇಶವಾ ದೇಶವೀ ಕುಲವಾ ಕುಲವೆನ್ನದೆಏಕರೀತಿಯೊಳೆಸಗುವ ಧರ್ಮಕಿದಕಿನ್ನುಲೋಕದೊಳೆಣೆ ಬೇರುಂಟೆ
ಉಣದುಡದೊಡಲ ದಂಡಿಸುವಾಯಸವಿಲ್ಲಪಣವ ವೆಚ್ಚಿಸುವ ಪಾಡಿಲ್ಲಗುಣವಂತೆಯರೆಸಗುವ ಪತಿಶುಶ್ರೂಷೆಗೆಣೆಯಹ ತಪವಿನ್ನೊಳವೆ
ಪಲನಾಡಿಗೆ ಪರಿಪರಿದು ಬಳಲಿಯಲ್ಲಿಪಲನೀರ ಮುಳುಗಿ ಮುಂಗೆಡದೆನಲಿದೆಸಗುವ ನಲ್ವೆಂಡಿರ ನಡತೆಗೆಪಲನೇಮಗಳು ಪಾಸಟಿಯೆ
ಮನೆಯ ತೊರೆದು ಮನೆವಾಳ್ತೆಯನುಳಿದು ತನ್ನನುಕೂಲದಾಸೆಯನಳಿದುಬನದೊಳು ಗೈವ ಬರಿಯ ತಪಗಳು ಕುಲವನಿತೆಯರಿರವಿಗೆ ದೊರೆಯೆ
ಮನೆಯೆ ಧರ್ಮಾಶ್ರಮ ಮನೆವಾಳ್ತೆಯೆ ಧರ್ಮವಿನಿಯನೂಳಿಗ ದೇವಪೂಜೆಮನನವಿವನ ನೆನೆವುದೆ ಸಾಧ್ವಿಯರಿಗೆಮುನಿಸತಿಯರ ನೋಡಿಯೇನು
ಇನಿಯನ ಸೇವೆಯೊಳೆಣೆಯಿಲ್ಲದ ಧರ್ಮಮನೆವಾಳ್ತೆಯೊಳರ್ಥಕಾಮಮನದನ್ನನೊಳು ಮಾಧವನ ಭಾವಿಸೆ ಮೋಕ್ಷವೆನೆ ಸತಿಯರಿಗರಿದೇನು
ಪಲವು ಧರ್ಮಂಗಳ ಬಳೆಯಿಪುದಾಯಾಸಫಲವ ಭೋಗಿಪುದಾನಂದಕುಲಸತಿಧರ್ಮವ ಕೂರ್ತೆಸಗುವುದಾಫಲಭೋಗಕೆ ಪಾಟಿಯಲ್ತೆ
ಕಡುನೇಮವಿಡಿದು ಕಕ್ಕಸಗೊಂಡು ಮುನಿವರರೊಡರಿಸುವುಗ್ರತಪಗಳುಮಡದಿಯರಿನಿಯರ ಮನವರಿತೆಸಗುವನಡತೆಗಳಿಗೆ ಪಡಿಯಲ್ಲ
ಆ ರೂಢಿವೆತ್ತ ಮಹಾಭಾರತದೊಳಗಾರಣ್ಯಕ ಪರ್ವದೊಳುನೂರತೊಂಬತ್ತೆಂಟನೆಯಧ್ಯಾಯದೊಳಾರಯ್ಯೆ ಕಥೆಯೊಂದುಂಟು
ಸಾಂಗ ವೇದವನೋದಿ ಸಕಲ ಧರ್ಮದ ತತ್ವಂಗಳನರಿತಾಚರಿಸಿತುಂಗ ಮಹಿಮೆವೆತ್ತು ದೋಷವಳಿದು ಮುನಿಪುಂಗವನೊರ್ವನೆಸೆದನು
ಮನೆಯೊಳು ಮರುಕವನುಳಿದು ತಪವಗೈದುಮನದಿ ವನವನನುಸರಿಸಿತನುವ ದಂಡಿಸಿ ಘೋರ ತಪವನೆಸಗುತಲ್ಲಿಮುನಿಮುಖ್ಯನೆನಿಸಿ ಮೆರೆದನು
ಒಂದು ದಿವಸ ವೇದಮೋದುತ ಬೇಸಗೆಯಿಂದ ಬಳೆದ ಬಿಸಿಲಿನೊಳುಬೆಂದುರೆ ಬೆಮರುತ ಬಿಸುಸುಯ್ಯುತ್ತಂದುನಿಂದನು ಮರದ ನೆಳಲೊಳು
ಆ ಋಷಿವರನಂತಿರ್ಪ ವೇಳೆಯೊಳಾಭೂರುಹದಗ್ರಶಾಖೆಯೊಳುಸೇರಿದ ಬಿಳುವಕ್ಕಿ ಚೀರುವ ದನಿ ಮಿಗೆಕ್ರೂರವಾಗಿರೆ ಕೊನರಿದುದು
ಆ ಪರಿ ದನಿ ಯಾವ ಬಳಿಯೊಳು ಪೊಣ್ಮಿದುದಾ ಪರಿಸರವನಾರೈದುಕೋಪವೆರಸಿ ಕೂರ್ತು ನೋಡೆ ತಾಪಸನಂದಾ ಪಕ್ಕಿಗಸುವಡಗಿದುದು
ಹರಣವಳಿದು ಧರೆಗುರುಳಿದ ಪಕ್ಕಿಯಪರಿಯ ನಿಟ್ಟಿಸಿ ಪರಿತಪಿಸಿಇರದೆ ತಾನೆಸಗಿದ ತಪಗಳ ಮೈಮೆಗೆಸರಿಯಿಲ್ಲೆಂದೆಣಿಸಿದನು
ಬಳಿಕ ಪಸಿದು ಪಾರ್ವರ ಬೀದಿಯೊಳೊಂದುನಿಳಯವ ಪೊಕ್ಕು ನಿಂದಲ್ಲಿಬಳಲಿದೆನೆನಗುಣಬಡಿಸೆಂದಲ್ಲಿರ್ದಕುಲಪಾಲಿಕೆಗುಸುರಿದನು
ಒಲಿದೇಕಪತ್ನಿಯೊಂಬೊಳ್ವೆಸರೆಸೆವಾಕುಲಸತಿಯಳ್ಕರುಗೂಡಿನಲವಿನಿಂದವನಿಗನ್ನವನೀಯುವೆನೆಂದುಕೆಲದೊಳು ಕುಳ್ಳಿರಿಸಿದಳು
ಅನಿತರೊಳಲ್ಲಿಗವಳ ಗಂಡನೈತರೆಮನಮೊಲಿದಿದಿರೆದ್ದು ನಡೆದುವಿನಯದಿಂದುಚಿತೋಪಚಾರವೆಸಗಿ ಮಿಗೆಮನದನ್ನನ ಮನ್ನಿಸಿದಳು
ಪತಿಸೇವೆಯೊಳಂತು ಪಸಿದ ಪಾರ್ವನ ಮರೆದತಿ ವಿಳಂಬವನಾಚರಿಸೆಸತಿಯರ ಧರ್ಮದ ಸಾರವನರಿಯದೆಖತಿಗೊಂಡು ಮುನಿ ಗಳಪಿದನು
ಅತಿಘೋರ ತಪವೆಮ್ಮದದನು ನೀನರಿಯದೆಮತಿಗೆಟ್ಟು ಮರುಳಾಗದಿರುಪತಿಶುಶ್ರೂಷೆಯ ಬಲ್ಮೆ ಫಲಿಸದಿಲ್ಲಿಯತಿಧರ್ಮದಿರವಿದು ಬೇರೆ
ಎಂದು ಗರ್ವದ ಸೊಕ್ಕೇರಿ ನುಡಿದ ಮುನಿಯಂದಮನಾರೈದೊಡನೆಅಂದು ತನ್ನಾಣ್ಮನೊಳನುಮತಿವಡೆದೈತಂದು ನುಡಿದಳಿಂತೆಂದು
ಬಳಲಿದೆ ಸಾಕಿನ್ನು ಬಡಿಸಿದನ್ನವನುಂಡುತಳುವದೆ ತಪವನಾಚರಿಸುಬಿಳುವಕ್ಕಿಯ ಬೀಳಗೆಡಹಿದ ಬಿಂಕವೀಬಳಿಯೊಳು ಬಣ್ಣವಡೆಯದು
ಮರುಳೆ ನೀನೀ ಮಾತ ಮರೆ ಧರ್ಮಸೂಕ್ಷ್ಮದೊಂದಿರವ ನೀನರಿತವನಲ್ಲಪರಮ ಪತಿವ್ರತೆಯರ ಬಗೆ ಬೇರಿದುಹರಿಹರಾದ್ಯರ ಹವಣಲ್ಲ
ಇತರ ಚಿಂತೆಯನುಳಿದೇಕಚಿತ್ತದೊಳಾತ್ಮಪತಿಪಾದಭಕ್ತಿಯೊಳೆಸೆವಸತಿಯರೊಲಿದು ಪರಸಿದುದೆಯನುಗ್ರಹಖತಿಗೊಂಡು ನುಡಿದುದೆ ಶಾಪ
ವ್ರತಿ ವಾನಪ್ರಸ್ಥ ಯತಿಗಳಿರದೆ ಗೈವತಿಘೋರ ತಪದಾಚರಣೆಸತಿಯರ ಧರ್ಮಕೆ ಸರಿಯಿಲ್ಲೆಂದು ಗೀಷ್ಪತಿಯಗಸ್ತ್ಯನೊಳಾಡಿದನು
ಆ ತ್ರಿಮೂರ್ತಿಗಳಾಮಂತ್ರಿತ ಜಲಸೇಕಮಾತ್ರದೆ ಮೈಮೆ ಮೈದೆಗೆದುಅತ್ರಿಯ ಸತಿಗನಸೂಯಾದೇವಿಗೆಪುತ್ರರಾದರು ಪೂರ್ವದೊಳು
ಪಾತಿವ್ರತ್ಯದೇಳ್ಗೆಯ ಪರಿಕಿಪೆನೆಂದೋತು ರಾಘವನುಸಿರ್ದೊಡನೆಸೀತೆ ಬೆಂಕಿಯ ಪುಗೆ ಶೀತಳಮಾದುದುಮಾತಾವುದು ಮತ್ತೆ ಬೇರೆ
ಹರನ ಸಾಹಸಕಂಜದೆ ಪಲವಗಲು ಮುಪ್ಪುರ ಪಡಿಬಡಿಸಿ ಪೋರಿದುದುಪುರದೊಳಗಿರ್ಪ ಪುಣ್ಯಾಂಗನೆಯರ ಸಚ್ಚರಿತದ ಸಲಿಗೆಯಿಂದೈಸೆ
ಧರ್ಮಗತಿ ತಾರತಮ್ಯವ ತಿಳಿವೊಡೆಪೆರ್ಮೆಯ ಬಿಟ್ಟು ಬೇಸರದೆನಿರ್ಮಲಮತಿಯಾಗಿ ನೀ ನಡೆ ಮಿಥಿಲೆಗೆಧರ್ಮವ್ಯಾಧನ ಬಳಿಗೆ
ಎಂದೇಕಪತ್ನಿ ನುಡಿಯೆ ಕೇಳಿ ಮುನಿ ಮನದಂದವಳಡಿಗಳಿಗೆರಗಿಅಂದಿನ ಗರ್ವವಳಿದು ಮಿಥಿಲೆಯ ಬಳಿಸಂದನು ಸಂತೋಷದೊಳು
ಈ ಪಾತಿವ್ರತ್ಯದೇಳ್ಗೆಯನಾಲಿಸೆಪಾಪಗಳೆದ್ದು ಪಾರುವುವುಶ್ರೀಪತಿಯಿವರೆನ್ನ ಸೇವಕರೆಂದುರೆಕಾಪಿಡುವನು ಕರುಣದೊಳು
ಚೆನ್ನಿಗ ಚಿಕದೇವರಾಯನ ಸಂಚಿಯಹೊನ್ನಮ್ಮನುಸುರ್ದ ಕಬ್ಬದೊಳುಮನ್ನಣೆವಡೆದುದೊಂದರ ಮುಂದಣ ಸಂಧಿಸನ್ನುತ ಗುಣಸಂಬಂಧಿ


