I
Hadibadeya Dharma
ಶ್ರೀಮದಮಲಗುಣನಿಧಿಗೆ ನಿತ್ಯನಿಗೆ ನಿಸ್ಸೀಮ ಕೃಪಾವಾರಿಧಿಗೆರಾಮಣೀಯಕರಾಶಿಗೆ ಪಶ್ಚಿಮ ರಂಗಧಾಮನಿಗಾನೆರಗುವೆನು
ರಂಗಧಾಮನ ದಿವ್ಯಾಂಗ ಸಂಗತಿಯಿಂಮಂಗಳದೇವತೆಯೆನಿಪಾರಂಗಮಂದಿರ ಮಂಗಳವೈಜಯಂತಿಗೆರಂಗನಾಯಕಿಗೆರಗುವೆನು
ಆದಿನಾರಾಯಣನಾ ಶೇಷನೊಡಗೂಡಿಯಾದರದಿಂದವತರಿಸೆಯಾದವಕುಲವೇಳಿಗೆವೆತ್ತಿರ್ಪುದುಮೇದಿನಿಯೊಳು ಮೈಮೆವಡೆದು
ಆ ಯಾದವರಿಗೆ ಕುಲದೇವರೆನಿಪ ನಾರಾಯಣ ನಾದಿ ಕಾರಣನುಶ್ರೀಯೊಡಗೂಡಿ ಕರ್ಣಾಟಕದೇಶದೊಳೀ ಯಾದವಾದ್ರಿಯೊಳಿಹನು
ಬಲಕೃಷ್ಣರಿಂದೆ ಪಲವು ಪೂಜೆಗೊಂಡಿರ್ಪಕುಲದೇವರ ಸೇವೆಗೆಂದುಪಲವು ಯಾದವರಾಯರಾ ದ್ವಾರಾವತಿಯಿಂದೊಲಿದೈತಂದರೀ ನೆಲಕೆ
ಶ್ರೀ ನಾರಾಯಣನಡಿಗಳಿಗೆರಗಿ ಮಹಾನಂದರಸದ ಮೈಮೆಯೊಳುಆ ನೆಲೆಯನು ಬಿಟ್ಟಗಲಲಾರದೆ ತಾವೀ ನಾಡೋಳು ನೆಲಸಿದರು
ಈ ಶೈಲಕೆರಡು ಗಾವುದ ತೆಂಕಣ ರಮ್ಯದೇಶದ ನೆಲೆವೀಡುಗೊಳಿಸಿಈ ಶೂರರು ನೆಲಸಿದರದರಿಂದೆ ಮಹೀಶೂರಪುರವೆನಿಸಿದುದು
ಆ ದಿನ ಮೊದಲು ಮೈಸೂರನಾಳಿದರಾಯಾದವಕುಲವರ್ಧನರುಶ್ರೀ ದೇವರಾಜಚಂದ್ರಮನವತರಿಸಿದನಾ ದಿವ್ಯವಂಶವಾರ್ಧಿಯೊಳು
ಭಾವಿಸೆ ಭೋಗಭಾಗ್ಯದೊಳೈಸಿರಿಯೊಳುದೇವೇಂದ್ರಗೆ ಮಿಗಿಲೆನಿಸಿದೇವರಾಜನ ಬಸುರಿಂದೊಗೆದನು ದೊಡ್ಡದೇವರಾಜೇಂದ್ರ ಭೂವರನು
ಭೂವನಿತೆಯ ಪುಣ್ಯದ ಪುಂಜ ಮಾನುಷಭಾವವ ಪಡೆದುದೆಂಬಂತೆಈ ವಸುಧೀಶನಿಂದೊಗೆದೆಸೆದನು ಚಿಕ್ಕದೇವರಾಜನು ತೇಜದೊಳು
ಶ್ರೀರಂಗಪಟ್ಟಣದೊಳು ರತ್ನಸಿಂಹಾಸನಾರೋಹಣವನಾಚರಿಸಿಧಾರಿಣಿಯನು ಧರ್ಮದೊಳು ಪಾಲಿಸುತ ಮಹಾರಾಜನೆನಿಸಿ ರಾಜಿಪನು
ಶ್ರೀ ಯುವತೀಶನಖಿಲಗುಣನಿಧಿ ನಾರಾಯಣನಾದಿಕಾರಣನುಆಯುರಾರೋಗ್ಯೈಶ್ವರ್ಯವ ಚಿಕದೇವರಾಯನಿಗನುಗೊಳಿಸುವನು
ಧರೆಯ ಪೊರೆವ ಧರ್ಮವ ಸಂಪಾದಿಪಧುರವ ಗೆಲುವ ಗೈಮೆಯೊಳುನರಪತಿ ಚಿಕದೇವರಾಜೇಂದ್ರಗೆ ಶೌರಿನೆರವಾಗಿಹನು ನೇಮದೊಳು
ಚಿಕದೇವರಾಜಚಂದ್ರಮನ ಪಟ್ಟದ ರಾಣಿಸಕಲ ಸದ್ಗುಣ ಸಂಪನ್ನೆಅಕಲುಷೆ ಯೆಳವಂದೂರ ದೇವಮ್ಮನುಸಕಲ ಸಂಪದದೊಡನಿಹಳು
ಇಷ್ಟಗುಣೆಯರೆಣ್ಬರು ಮತ್ತೆ ರಾಣಿಯರಷ್ಟೈಶ್ವರ್ಯ ಲಕ್ಷ್ಮಿಯರೊಅಷ್ಟದಿಗ್ವಿಜಯಲಕ್ಷ್ಮಿಯರೊ ತಾಮೆನೆ ಸಂತುಷ್ಟಿಯೊಳೊಡವೆರೆದಿಹರು
ಹಡಪ ಕಾಳಾಂಜಿ ಪೊಂಗಟ್ಟಿಗೆ ಕುಂಚ ಕನ್ನಡಿ ಗಿಂಡಿ ಬಿಜ್ಜಣಿಗೆಗಳಪಿಡಿದೂಳಿಗಗೈವ ಬಿಂಕಗಾತಿಯರಾಪೊಡವಿಯಾಣ್ಮನ ಹೊದ್ದಿಹರು
ಪಾಡುವ ಕುಣಿವ ಬಾಜಿಪ ಬಣ್ಣನೆ ಮಾತಾಡುವ ಪರಿಹಾಸಗೈವಗಾಡಿಕಾತಿಯರು ಗಣನೆಯಿಲ್ಲದೆ ಜೋಡುಗೂಡಿರುವರು ಕೂರ್ಮೆಯೊಳು
ನೋಂತು ಚತುಷ್ಷಷ್ಟಿ ಕಲೆಗಳು ಪೆಣ್ಬರಿಜಾಂತು ಸೇರಿದುವೊ ಎಂಬಂತೆಸಂಸತ ಮಿಗೆ ಸರ್ವ ಸರಸವಿದ್ಯಾ ಸಿದ್ಧಾಂತವೇದಿನಿಯರೊಪ್ಪಿಹರು
ಪಲರಾಣಿಯರೂಳಿಗದ ಪೆಣ್ಗಳುಮಿಕ್ಕೆಲದೊಳು ಪಂಕ್ತಿಗೊಂಡೆಸೆಯೆನೆಲದಾಣ್ಮನೊಳವೋಲಗದೊಳೊಪ್ಪಿದನಾಬಲವೈರಿಗೆ ಪಡಿಯೆನಿಸಿ
ಓಲಗಗೊಳುತೊಂದು ದಿನವೆಡಬಲದ ಸುಶೀಲೆಯರೊಳು ಕಡೆಗಣ್ಣಸಾಲುವಿಡಿದು ಸುಳಿಸುಳಿಸಿಯೆನ್ನೊಳು ಸತ್ ಕೃಪಾಲೋಕನವನೆಸಗಿದನು
ಕರುಣಾಮೃತಾಬ್ಧಿಯ ಕಲ್ಲೋಲಗಳಂತೆತರತರದೊಳು ಕವಿತರುವಸರಸಕಟಾಕ್ಷವನೆಸಗಿಯೆನ್ನೊಳು ಮನಗರಗಿ ಮನ್ನಿಸಲೆಳಸಿದನು
ಎನ್ನ ಮನ್ನಿಪೆನೆಂದಣಿಸಿ ತನ್ನೆಡೆದೊಳುಪೊನ್ನ ಪುತ್ತಳಿಯಂತೆಸೆವಮನ್ನಣೆವಡೆದ ಪಟ್ಟದ ರಾಣಿಯ ಮೊಗಮನ್ನೋಡುತಿಂತು ನುಡಿದನು
ಅರಸಿ ಕೇಳೀ ಹೊನ್ನಿ ಸರಸಸಾಹಿತ್ಯದವರದೇವತೆ ತಾನೆಂದುಪರಮಾರ್ಥವಾದಿಯಳಸಿಂಗರಾರ್ಯನುಪರಿಪರಿಯೊಳು ಬಣ್ಣಿಪನು
ಓದುಗಲಿಸುವರೊಲಿದು ಪೊಗಳಿದೊಡಾವೋದುಗಲಿವರೋದುಗಳುಮೇದಿನಿಯೊಳು ಮೇಲೆನಿಪುವೆಂಬುದು ಲೋಕವಾದವೈಸಲೆ ರಾಣಿ ಕೇಳು
ಇವಳು ಕಾವ್ಯಾಲಂಕಾರನಾಟಕಗಳಪವಣಿಗೆಯಿರವ ಬಲ್ಲವಳುಇವಳ ಸಾಹಿತ್ಯದ ಸವಿಗೆಳಸುತ್ತೆನ್ನಕಿವಿಗಳು ಕದುಬುಗೊಂಡಿಹವು
ಪವಣಿಗೆಯೊಪ್ಪೆ ಪುರುಳು ಪೋಗರೇರೆಯಂಗವಿಸೆಯಲಂಕಾರಗಳುಕವಿದು ಪರಿಯೆ ರಸದೊಳ್ಗಂಪು ಕಮ್ಮೆನೆಕವಿತೆಯೊಂದನು ಪೇಳಿಸಿಂದು
ಎಂದ ರಾಯನ ನುಡಿಗಾನು ವಿನಯಗೂಡಿಪಿಂದೆಗೆದಿರೆ ಪಟ್ಟದರಸಿಕಂದ ಬಾರೆನ್ನ ಕಟ್ಟಾಣಿ ಪೆಣ್ಮಣಿಯೆ ಬಾರೆಂದು ಮುಂದಕೆ ಬರಿಸಿದಳು
ಹೊನ್ನಿ ಬಾ ಹೊನ್ನಕ್ಕ ಬಾರೆಂದು ಕರವಿಡಿದೆನ್ನ ತನ್ನೊತ್ತಿಗೆ ಬರಿಸಿಎನ್ನೊಳು ನೆವಮಿನಿತಿಲ್ಲದೆರಕಗೂಡಿಮನ್ನಿಸಿ ನುಡಿದಳಿಂತೆಂದು
ಕಲಿತ ಬಿಜ್ಜೆಯಂ ಬಲ್ಲರಿಗೆ ಕೇಳಿಪುದೈಸೆಫಲವಿದನರಿತು ನೀನಿಂದುಅಲಸದೆ ನಾಣ್ಚದಂಜದೆಯಳುಕದೆ ಪೇಳುಪಲವಗೆ ಕಬ್ಬದೊಳ್ಪುಗಳ
ಇಂತು ನುಡಿದ ರಾಣಿಯ ನುಡಿಗೇಳಿಯೋರಂತೆ ಚಿತ್ತವ ಬಲಿವಿಡಿದುಸಂತಸ ಮಿಗೆ ಸಭೆಯೊಳು ರಾಯಗೆ ಮಾರಾಂತು ಬಿನ್ನವಿಸಿದೆನಿಂತು
ಅರಸ ಕೇಳೆನಗೆ ನಿನ್ನಡಿಯೂಳಿಗಮೊಂದರಸಿಯರಡಿಯೊಲ್ಮೆಯೊಂದುಪರಿಕಿಪೊಡಖಿಳಾರ್ಥಸಾಧನಂಗಳಿಗಿವುನೆರವಾಗಿಹವು ನೇಮದೊಳು
ನಿನ್ನಡಿಯೊಲವರಿತಿರ್ಪದೆನಗೆ ಬಿಜ್ಜೆನಿನ್ನೂಳಿಗವೆನ್ನ ಧರ್ಮನಿನ್ನಾಣತಿಗೈವುದೆನ್ನ ಮನೋರಥವೆನ್ನ ಭಾಗ್ಯಕ್ಕೆ ಸರಿಯುಂಟೆ
ಪಲವೋದುಗಳಿಂದ ಪಲವು ಗೈಮೆಗಳಿಂದಪಲ ಬಗೆವಾತುಗಳಿಂದಬೆಲೆವಡೆದಿರ್ಪೆನೆಂದೆಣಿಸುವಳಲ್ಲ ನಿನ್ನೊಲವೊಂದನೆ ನಂಬಿಹೆನು
ನಿನ್ನ ಗುಣಂಗಳನೊಲಿದೋದುವುದೋದುನಿನ್ನಾಳ್ ಗೈಮೆಯೊಳ್ಗೈಮೆನಿನ್ನೊಲವರಿತು ನುಡಿವ ನುಡಿ ನಲ್ನುಡಿಯಿನ್ನಿವಕೆಣೆ ಬೇರುಂಟೆ
ನಿನ್ನ ಕೃಪಾರಸದಿಂದೈಸೆಯಾನು ಕರ್ಬೊನ್ನು ಚೆಂಬೊನ್ನಾದಂತೆಸನ್ನುತಿವಡೆದೊಳ್ಪುವೆತ್ತು ಸಕಲ ಭಾಗ್ಯೋನ್ನತಿಯೊಡಗೂಡಿದೆನು
ನಿನ್ನಡಿ ಸೋಂಕಿನೊಳಖಿಲ ದುರಿತಗಳಸನ್ನಾಹವ ಸದೆದಟ್ಟಿಚೆನ್ನಗ ಚಿಕದೇವರಾಯನ ಸಂಚಿಯಹೊನ್ನಿಯೆಂಬೇಳ್ಗೆವೆತ್ತಿಹೆನು
ನಿನ್ನಾಣತಿಗೇಳಿ ನಿನ್ನ ಬಳಿಗೆ ಸಂದುನಿನ್ನೂಳಿಗಗಳನೆಸಗಿನಿನ್ನವಳೆನಿಸಿ ನಿನ್ನೆಡೆವಿಡದಿರ್ಪೆನೀಯುನ್ನತಿಗಿನ್ನೆಣೆಯುಂಟೆ
ಆನಾವಳೆನ್ನ ಮುನ್ನಿರವಾವುದು ಮತ್ತೀ ನಿನ್ನ ದಯವಾವುದಕಟಏನೆಂಬೆನಿದಕೆ ಪೆಳವನೆಡೆಗಾ ಗಂಗೆತಾನೈದೆ ಬಂದುದೆಂಬಂತೆ
ಎನ್ನ ಜನ್ಮಕೆ ಸಾಫಲ್ಯಮಾದುದು ನಿನ್ನಚೆನ್ನಡಿಯೂಳಿಗದಿಂದಪಿನ್ನೇಳು ಮುನ್ನೇಳು ತರದವರನಿಬರುಮುನ್ನತಿವಡೆದರೆನ್ನಿಂದ
ಆವ ಜನ್ಮದೊಳಾನಾವ ಸುಕೃತಗಳನಾವ ಬಗೆಯೊಳೆಸಗಿದೆನುಈ ವಿಧದೇಳಿಗೆವಡೆದೀಯೊಡಲೊಳೆದೇವರೂಳಿಗವೆಸಗುವೆನು
ಒಲಿದು ತನ್ನೊಡವುಟ್ಟು ಸೊಸೆ ಮಗಳೆಂದೆಂಬಪಲರು ಮುನ್ನಿನ ಬಾಂಧವರುಕುಲದೇವತೆಯೆಂದು ಕೂರ್ತು ತಂತಮ್ಮಿಷ್ಟಫಲವ ಪಡೆದವರೆನ್ನಿಂದ
ಸುತ್ತಣ ದೇಶದರಸಿಯರ ಬೈತಲೆಗುತ್ತಮ ಭೂಷಣವೆನಿಪಮುತ್ತಿನ ಸರವೆನ್ನ ರನ್ನವಾವುಗೆಗಳಸುತ್ತ ಲಂಬಣಮಾದುದಿಂದು
ಏವೇಳುವೆನೆನ್ನ ಮನದಾನಂದವನಾವ ಬಗೆಯೊಳರುಹುವೆನುಭಾವಿಸೆ ಸೊಗದ ಸುಗ್ಗಿಯ ತನಿಸೊಕ್ಕೆನ್ನನಾವರಿಪುದು ಮತ್ತೇವೆ
ಒಡೆಯನಿರಿಸಿದಂತಿರ್ಪುದಲ್ಲದೆ ಪೇಳೊಡವೆಗೆ ಬೇರಿರವುಂಟೆಕಡುಗೂರ್ಮೆಯಿಂದ ನಿನ್ನಡಿಯಾಣತಿಯನೆನ್ನಮುಡಿಯೊಳಾಂತೆನು ಮತ್ತೇನು
ಆದೊಡಮೆನ್ನ ಕವಿತೆಗಬ್ಬದ ಬಗೆಈ ದಿವ್ಯಸಭೆಗೆ ಸಂಗತಮೆಪಾದದೂಳಿಗದೊಳು ಬಳೆದ ಬಾಲಕಿಯೆಂದಾದರದಿಂದಾಲಿಪುದು
ಪದಿನೆಂಟು ಬಣ್ಣನೆಯೆಂದು ಬವಣೆಗೊಂಡುಪದಗೆಟ್ಟು ಬಯಲ ಬಣ್ಣಿಸದೆಮುದದೊಡನಿಹಪರದೇಳ್ಗೆವಡೆಯೆ ಹದಿಬದೆಯ ಧರ್ಮವ ಬಣ್ಣಿಪೆನು
ಅರಸಿಯರನಿಬರುಮಾದರದಿಂದೆನ್ನಸರಸಕಾವ್ಯವ ಸವಿವಂತೆಪರಮ ಪತಿವ್ರತೆಯರ ನಡತೆಯನಿಲ್ಲಿಪುರುಳುಗೊಳಿಸಿ ಪೊಗಳುವೆನು
ಧರ್ಮದ ತನಿಗಂಪು ತಲೆದೋರೆ ಕಾವ್ಯದಪೆರ್ಮೆ ಬೇರ್ವರಿದು ಬಿತ್ತರಿಸೆನಿರ್ಮಲ ಸತಿಯರ ಧರ್ಮವ ವೃತ್ತಿಯಾಗಿನಿರ್ಮಿಸಿ ನೆಗಳಿಪೆನಿಂದು
ಬಲ್ಲರಿಂದಾನು ಕೇಳಿದುದಕೆ ಪೆರ್ಚು ಕುಂದಿಲ್ಲದಂತೆಚ್ಚರುಗೂಡಿಎಲ್ಲರುಮರಿವಂತೆಳವಾತುಗಳಿಂದಸೊಲ್ಲಿಸುವೆನು ಸೊಗಸುವೊಲು
ಎಂದ ನುಡಿಯ ರಾಯನುಮರಸಿಯರುಮಾನಂದವಡೆದು ಬಗೆಗೊಳಿಸೆಸಂತ ಸತೀಧರ್ಮವನು ಸಾಹಿತ್ಯದೊಳೊಂದುಗೊಳಿಸಿ ಪೇಳಿದೆನು
ಆದಿಕಾವ್ಯದೊಳೈದನೆಯ ವೇದದೊಳು ಮನ್ವಾದಿಕ ಧರ್ಮಶಾಸ್ತ್ರದೊಳುಭೇದಿಸಿ ಪಿರಿಯರು ಪೇಳಿದುದನೆ ಕೃತಿಗೈದಾನು ಕಿವಿಗೊಳಿಸಿದೆನು
ಸತಿಯರೀ ಕೃತಿಯನಾಲಿಸಿದೊಡಂದಂದಗೆಪತಿಭಕ್ತಿ ಬಣ್ಣವೇರುವುದುಮತಿ ಮಸುಳಿಸದೆ ಮರವೆದೋರದಿಹ ಪರದತಿಶಯವನುಗೂಡುವುದು
ಎಳವೆಣ್ಗಳೀ ಕೃತಿಗೇಳೆ ತಮ್ಮಿನಿಯರನೆಳಮೆಯೊಳಳವುಗೆಡಿಸದೆಬಳಿಸಂದು ಬಾಳುವರತ್ತೆಮಾವಂದಿರನೊಳವು ಗೈದೊಳ್ಪುವಡೆವರು
ಮನೆವಾಳ್ತೆಯರಿಯದ ಮರುಳುವೆಣ್ಣೀ ಕೃತಿಯನೆ ಮನಮೊಲಿದೋದಿದೊಡೆಜನರಿವಳನು ಪೋಲ್ವ ಜಾಣೆ ಜಗದೊಳಿಲ್ಲೆನೆ ಚಾತುರ್ಯವಡೆವಳು
ಮುನಿದು ಮೂದಲಿಸಿ ಮೋಡಿಯೊಳಿದ್ದು ಮೂರ್ಖಿಪಮೊನೆಗಾತಿಯಾ ಕೃತಿಗೇಳೆಇನಿಯನ ಮೊಗವ ನೋಡದ ಮುನ್ನ ಮೋಹಿಸಿಮನಗರಗುವಳು ಮತ್ತೇನು
ಕಡುನಾಣ್ಚಿಯಂಜಿ ಕಣ್ಮುಚ್ಚಿ ಕಂಪನಗೊಂಬಬಡವೆಣ್ಗಳೀ ಕೃತಿಗೇಳೆಎಡಬಲದವರೇಳಿಸದಂತೆ ಮನದನ್ನರೊಡನೆ ಬಾಳುವರಡಕದೊಳು
ಬಗೆಯೆ ಮೈಲಿಗೆಯೆಂಜಲೆಂಬುದನರಿಯದಮುಗುದೆಯರೀ ಕೃತಿಗೇಳೆನಿಗಮದೊಳೊಗೆದ ನೇಮಂಗಳ ತಿಳಿದೀಜಗಕೆ ಪಾವನೆಯರೆನಿಪರು
ಅತ್ತೆನಾದಿನಿಯರೊಳಳುಕದ ಕಾದುವುನ್ಮತ್ತೆಯರೀ ಕೃತಿಗೇಳೆಉತ್ತಮ ಗುಣಗಳಿಂದೊಳಗುಗೈದವರೊಳುಪತ್ತುಗೆವೆರಸಿ ಬಾಳುವರು
ಒರ್ವರೊರ್ವರೊಳು ಮಚ್ಚರಿಸುವ ಸವತಿಯರಿರ್ವರುಮೀ ಕೃತಿಗೇಳೆಬೇರ್ವರಿದಿರ್ಪ ವೈರದ ಬೇರ ಪರಿದಿಟ್ಟಿರ್ವರೊಂದೆನಿಸಿಯೊಪ್ಪುವರು
ಇದು ಪಾತಿವ್ರತ್ಯಧರ್ಮತತ್ವದ ಸಾರವಿದೆ ಸಂಜೀವನ ಮಂತ್ರಇದು ಪರಮಾರ್ಥ ಹಿತೋಪದೇಶದ ತಿರುಳಿದನು ಸತಿಯರೋದುವುದು
ಇದನಾಲಿಪುದೊಳ್ವೆಂಡಿರೀ ಧರ್ಮದಪದನರಿತಾಚರಿಸುವುದುಇದನು ಕಲಿವುದಿದರೊಳಗರಿವುದು ಹದಿಬದೆಯರೆನಿಸಿ ಬಾಳುವುದು
ಚೆನ್ನಿಗ ಚಿಕದೇವರಾಯನ ಸಂಚಿಯಹೊನ್ನಮ್ಮನುಸುರ್ದ ಕಬ್ಬದೊಳುಉನ್ನತಿವಡೆದೊಗೆದುದು ಪೀಠಿಕಾಸಂಧಿಸನ್ನುತಗುಣಸಂಬಂಧಿ


