EN | KA

Menu

VII

Madanatilaka

ವಯಸವಿಭೇದದಿನಾ ಬಾಲೆ ಯೌವನೆ ಪ್ರೌಢೆ ಲೌಲ್ಯೆಯೆಂದಿಂತು ಧರಿತ್ರಿಯೊಳಪ್ಪರ್‌ ನಾಲ್ವರ್‌ ಕಾಂತೆಯರಂದಮನಿಂತೆಂದು ನೀಂ ಕೇಳ್‌ ಪೇೞ್ವೆಂ

ಪದಿನಾಲ್ಕು ಬಾಲೆ ಮೂವತ್ತದಟಿನ ಯೌವನೆಗೆ ನಾಲ್ವತ್ತೆರಡಾ ಪ್ರೌಢಾಸ್ಪದದಾಕೆಗೆ ಮೀಹಂದಪ್ಪಿದಂಗನೆಗೆ ಮೇಲೆ ಲೌಲ್ಯೆಶಬ್ದಂ ವನಿತೇ

ತಂಬುಲಂ ಕುಸುಮಮಿಂಬು ಪಣ್ಫಲಂಡಂಬದಾಟಮಿನಿಯೂಟಮೞ್ಕಱಿಂದೆಂಬ ಮಾತು ಮೃದುಸಂಪ್ರಯೋಗದೊಳ್ಪೆಂಬವುಂ ನೆರೆದು ಗೆಲ್ಗೆ ಬಾಲೆಯಂ

ತುಡುಗೆಗಳಿಂ ವಸ್ತ್ರಂಗಳಿನೆಡಂಬಡಣಮಿಲ್ಲದಿರ್ಪ ಭೋಗದಿನಿಂಪಿಂಗೆಡೆಗೊಂಡು ಸುರತಸುಖಮಂಪಡೆಗಾ ಯೌವನೆಗೆ ಕೂರ್ಮೆಯಿಂ ಚದುರ ವಿಟಂ

ಕರಜಮೆರಡಱಿಂ ಬೆಕ್ಕು ಪಾಯ್ವಾ ಪಾಂಗಿನಿಂತ್ವರಿತದಿಂ ಪೆಗಲನೊತ್ತು ಗುಹ್ಯಾಸನದಿಂದಿರುತೆ ಕರ್ಣಮೂಲಮನೆ ಚುಂಬಿಸೆ ಬಾಲೆಗೆಸುರಿಗುಂ ಕಾಮಾಂಬು ನಿಶ್ಚಯಮಿದನಱಿಗೆ

ಅತಿಚತುರತೆಯಿಂ ಸೌಖ್ಯದಿನತಿಶಯರತಿಯಿಂ ಸಚುಂಬನಾಲಿಂಗನಪೀಡಿತದಿಂ ಪ್ರೌಡೆಯನಾಗಳೆಮತಿಗಿಡೆ ಗೆಲ್ಗುಂ ವಿಟಂ ದಿಟಂ ಚಂದ್ರಮುಖೀ

ಮನವಾರ್ತೆಯ ನಂಟರ ಮಾತಿನ ಕೂರ್ಮೆಯನುಂಟುಮಾಡಿ ಗೌರವದಿಂ ಮೆಲ್ಪನೆ ತೋಱಿ ರತಿಯೊಳೆಂದುಂಮನಮಱಿದೊಡಗೊಡೆ ಲೌಲ್ಯೆಯಂ ಗೆಲ್ಗಱಿವಂ

ಇದು ಸಕಲಬುಧವಿನುತ ಕಾವ್ಯಾಲಂಕಾರನೀತಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜವಿರಚಿತಮುಮಪ್ಪ ಮದನತಿಲಕದೊಳ್ ಬಾಲೆ ಯೌವನೆ ಪ್ರೌಢೆ ಲೌಲೈಯೆಂಬಿವರನುಭವವರ್ಣನಂ ಸಪ್ತಮಾಧಿಕಾರಂ ಸಂಪೂರ್ಣಂ