IX
Hadibadeya Dharma
ಆವನಾಣತಿಯೂಳಿಗ ಕರ್ಮಯೋಗ ಮತ್ತಾವನ ನೆನಹು ವಿಜ್ಞಾನಆವನೊಳೆರಕ ಭಕುತಿಯಾ ಪರವಾಸುದೇವನಿಗಾನೆರಗುವೆನು
ಜ್ಞಾನ ವೈರಾಗ್ಯ ಶ್ರೀಹರಿಭಕ್ತಿ ಸತ್ಕರ್ಮಹೀನರನೆಮ್ಮನಾರೈದುಆ ನಾರಾಯಣನಡಿಗೆರಗಿಪ ಸಿರಿಗಾನತಿಗೈದು ಬಾಳುವೆನು
ಪತಿಪಾದಭಕ್ತೆಯರೆನಿಪ ಸತಿಯರು ತಾವತಿಶಯ ಗತಿಗೆಳಸಿದೊಡೆಇತರ ಚಿಂತೆಯನುಳಿದೇಕಚಿತ್ತದೊಳು ಶ್ರೀಪತಿಪಾದವನೆ ಭಜಿಸುವುದು
ಆವ ದೇವರನಾವರು ಭಜಿಸುವರಾದೇವರನವರು ಸೇರುವರುಆವ ಭೋಗದೊಳಾ ದೇವರಿರ್ಪರು ತಾವಾ ವಿಧದೊಳು ಬಾಳುವರು
ಶ್ರೀವರನಡಿಯ ಸೇರಿದರನುಳಿದ ಮಿಕ್ಕದೇವಲೋಕವನೇರಿದವರುದೇವರೊಡನೆ ತಾವುಮಳಿವರೆಂಬುದನು ಗೀತಾವಚನದೊಳು ತಿಳಿವುದು
ಅದೆಂತೆನೆ :ಶ್ಲೋಕ ಆಬ್ರಹ್ಮಭುವನಾಲ್ಲೋಕಾಃಪುನರಾವರ್ತಿನೋ೭ರ್ಜುನಮಾಮುಪೇತ್ಯ ತು ಕೌಂತೇಯಪುನರ್ಜನ್ಮ ನ ವಿದ್ಯತೇ ||ಭಗವದ್ಗೀತಾ : ಅಧ್ಯಾಯ ೮, ಶ್ಲೋಕ ೧೬
ಪರಹಿಂಸೆಯೆಸಗದೆ ಪರಧನಕಳುಪದೆಪರಪುರಷಂಗಾಸೆವಡದೆಸಿರಿಯರಸನ ಪಾದಸೇವೆಗೈದವರಾಪರಮಪದವನು ಸೇರುವರು
ಚಾಡಿವೇಳದೆ ಚಂಡಿತನವೆಸಗದೆ ಚುನ್ನವಾಡದೆ ಜರಿದು ನುಡಿಯದೆಕೇಡೆಣಿಸದೆ ಕೆಲರಿಗೆ ಹರಿಪದಸೇವೆಗೀಡಾಗಿ ಗತಿಯ ಪಡೆವುದು
ಸೇರುವುದಿಹಪರಗತಿ ನಾರಾಯಣನಾರಾಧನೆಯೊಳೆಲ್ಲರಿಗೆಆರಯ್ಯೆ ಸಕಲ ಸತ್ಕರ್ಮಂಗಳಚ್ಯುತನಾರಾಧನೆಯೆನಿಸುವುವು
ಇದನಾಚರಿಸುವುದಿದನುಳಿದಿರ್ಪುದೆಂಬುದನಾರೈದು ಶಾಸ್ತ್ರದೊಳುಎದೆಗೊಳುವಂತೆ ಪೇಳುವ ಪಿರಿಯರ ದಿವ್ಯಪದಸೇವೆಗೈದು ಬಾಳುವುದು
ಇದನಾಚರಿಸಿದೊಡೀ ಫಲವಪ್ಪುದೆಂಬುದು ಕಾಮ್ಯಕರ್ಮವೆನಿಪುದುಮುದದಿಂದ ಮುಕುತಿಯನೆಳಸುವ ಕೋವಿದರ ಹಂಬಲನು ಬಿಟ್ಟಿಹುದು
ಆವುದನೆಸಗದಿರ್ದೊಡೆ ಪಾಪವಾ ಕರ್ಮಭಾವಿಸೆ ನಿತ್ಯವೆನಿಪುದುಆವ ವಿಧದೊಳಾದೊಡಮಾ ಕರ್ಮವನಾವಗಮಾಚರಿಸುವುದು
ಈ ನಿಮಿತ್ತದೊಳಿದನೆಸಗುವುದೆಂಬುದುತಾನೈಸೆ ನೈಮಿತ್ತಕರ್ಮಆ ನಿಮಿತ್ತದೊಳಾಚರಿಸುವುದೆಲ್ಲರುಮಾ ನೈಮಿತ್ತಕರ್ಮವನು
ಇಂತು ಮುಕ್ತಿಯನೆಳಸುವ ಕಾಮ್ಯವನುಳಿದಂತರಂಗದ ಶುದ್ಧಿಯೊಳುಚಿಂತೆಗೊಳದೆ ನಿತ್ಯ ನೈಮಿತ್ತಕರ್ಮವಸಂತಸದೊಡನೆಸಗುವುದು
ಇದು ಜಗದೀಶ್ವರನಾಜ್ಞೆಯೆನಗೆ ತಾನಿದನಾಚರಿಸಬೇಕೆಂದುಮುದದೊಡನೊಡರಿಪರಿಗೆ ಮೋಸವಿಲ್ಲೆಂಬುದನರಿವುದು ಗೀತೆಯೊಳು
ಶ್ಲೋ|| ನೇಹಾಭಿಕ್ರಮ ನಾಶೋsಸ್ತಿಪ್ರತ್ಯವಾಯೋ ನ ವಿದ್ಯತೇ |ಸ್ವಲ್ಪಮಪ್ಯಸ್ಯ ಧರ್ಮಸ್ಯತ್ರಾಯತೇ ಮಹತೋ ಭಯಾತ್ ||ಭಗವದ್ಗೀತಾ : ಅಧ್ಯಾಯ ೨, ಶ್ಲೋಕ ೪೦ಈಯೆಸಕದೊಳಿರೆ ಶೂದ್ರರಾದೊಡಮಾಸ್ತ್ರೀಯರಾದೊಡಮೇನವರುಆ ಯೋಗಿಗಳಡರುವ ಪರಗತಿಗೆ ತಾವಾಯಾಸವಿಲ್ಲದೇರುವರು
ಇಂತಪ್ಪುದಕ್ಕಂ ಗೀತಾವಚನಂ :ಶ್ಲೋ || ಸ್ತ್ರೀಯೋವೈಶ್ಯಾಸ್ತಥಾ ಶೂದ್ರಾಸ್ತ್ರೇsಪಿಯಾಂತಿ ಪರಾಂಗತಿಮ್ ||ಭಗವದ್ಗೀತಾ : ಅಧ್ಯಾಯ ೯, ಶ್ಲೋಕ ೩೨ಶುಚಿಯಾಗಿರೆ ದೇವತೆಗಳು ಸಲಹುವರುಶುಚಿಯನು ಪಿತೃಗಳೋವುವರುಶುಚಿಗಂಜುವುವು ಪ್ರೇತ ಭೂತಗಳದರಿಂದಶುಚಿಯಪ್ಪುದೆಲ್ಲ ವೇಳೆಯೊಳು
ಪಿರಿಯರ ನಿಟ್ಟಿಸಿದೊಡನೆ ಪೋಪುದು ಭೀತಿಪರಿದೋಡುವುವು ಪಾಪಗಳುಇರದದರಿಂದ ಶ್ರೀ ಹರಿಶರಣರ ದಿವ್ಯಚರಣದರ್ಶನವೆಸಗುವುದು
ಪರಮ ವಿಶ್ವಾಸವೆರಸಿ ವಿಷ್ಣು ವೈಷ್ಣವಚರಣತೀರ್ಥವ ಸೇವಿಸಿದೊಡೆಪರಿದೋಡುವುವು ಸಕಲ ಪಾಪಂಗಳುಪರಮಪದವಿ ಬಸವಹುದು
ತಿಳಿಯೆ ಮಾನುಷಲೋಕದಿಂದಾ ಜವನೂರಬಳಿಗೈದುವ ಪೆರ್ಬಟ್ಟೆಉಳಿದೆಂಬತ್ತೆಂಟು ಸಾಸಿರ ಗಾವುದದಳತೆಯ ನೀಟವೆನಿಪುದು
ಊರು ಕೇರಿಗಳಿಲ್ಲ ಒರ್ವರ ನೆರವಿಲ್ಲನೀರು ನೆಳಲು ತಾನಿಲ್ಲಸೇರಿ ನಿಲುವದೊಂದು ಠಾವಿಲ್ಲವೆನಲಾದಾರಿಯನೇವೇಳುವುದು
ಪುರಿದಂತೆ ಬೇವುರಿ ಮಳಲ ರಾಶಿಗಳಿಂದಹರಹಿದ ಮುಳ್ಳುಗಳಿಂದಪರಿಪರಿ ಗೋರುಕಲ್ಲುಗಳಿಂದ ಪಜ್ಜೆಯನುರಿಗೊಳಿಸುವುದೊಡನೊಡನೆ
ಆರಯ್ಯೆ ದಾನವೀಯದ ಪಾಪಗಳೀದಾರಿವಿಡಿದು ನಡೆತಿಹರುಭೂರಿದಾನಗಳತ್ತ ಪುಣ್ಯಪುರುಷರೀದಾರಿಯೊಳಿಡರಡಿಗಳನು
ಪೊಡವಿಯ ಪಾಸಿಕಗಳನುಂಬಕುಡಿನೀರ ತುರು ಕುದುರೆಗಳಉಡೆಗಳನೊಳ್ಮಣಿಗಳನೊಲಿದೀವುದುಪಡೆವುದು ಪರಮಗತಿಗಳನು
ಅಲಸದೆ ಮುಕ್ತಿಯನಾಸೆವಡುವರನ್ಯಫಲವ ಬಯಸಿ ಬಣ್ಣಗೆಡದೆನೆಲೆಗೊಂಡ ನಿಜಧರ್ಮದ ನೇಮವಳಿಯದೆಪಲವು ದಾನವ ಪಣ್ಣುವುದು
ತಾಳಿಗೆಯೊಣಗದ ಮುನ್ನಮೆ ನಾಲಗೆಬೀಳದ ಮುನ್ನಮೆ ಬೇಗಪೇಳುವುದಂಬುಜಾಕ್ಷನ ಪೆಸರುಗಳನುಪೇಳಲರಿಯದೊಡಾಲಿಪುದು
ಶ್ರೀವಿಷ್ಣುಭಕ್ತಿಯಿಂದತಿವೇಗದೊಳು ದುಃಖಾವಳಿಯಳಿವುದೆಂಬುದಕೆಭಾವಿಸೆ ಭಾಗವತದೊಳೊಂದು ಕಥೆಯುಂಟಾ ವಿಧವನು ಬಣ್ಣಿಪೆನು
ತಕ್ಷಕನಿಂದ ತನಗೆ ಅಳಿವಪ್ಪುದಿನ್ನಕ್ಷಯಗತಿಗೊಂಬೆನೆಂದುಆ ಕ್ಷಣದೊಳು ಶುಕಮುನಿಯಡಿಗೆರಗಿ ಪರೀಕ್ಷಿತನಿಂತು ಕೇಳಿದನು
ಸಾವಡಸಿದ ಸಮಯದೊಳು ಸದ್ಗತಿಗಾಗಿಯಾವುದನೊಲಿದಾಲಿಪುದುಆವುದನೋದುವುದಾವುದನೊಡರಿಪುದಾವುದನಿರದೆ ನೆನೆವುದು
ಇಂತು ನುಡಿದ ಪರೀಕ್ಷಿತರಾಯಗೆ ಮಿಗೆಸಂತಸವನು ಸಮನಿಸುತತಾಂ ತಿಳಿದಖಿಲಶಾಸ್ತ್ರದ ತತ್ವಮನೋರಂತರುಹಿದನಾ ಯೋಗಿ
ಅರಸ ಕೇಳಾಪತ್ತಡಸಿದ ವೇಳೆಗೆಹರಿಕಥೆಗಳನೆ ಕೇಳುವುದುಹರಿನಾಮಂಗಳನೊಲಿದೋದುವುದು ಶ್ರೀಹರಿಪದಂಗಳನೆ ನೆನೆವುದು
ಹರಿಪಾದಪದ್ಮದ ಸೇವೆಯಿಲ್ಲದೆ ಪಲವರಿಸಮಿದ್ದೊಡೆ ಫಲವೇನುಮುರವೈರಿಯ ನೆನೆದೊಂದು ಮುಹೂರ್ತಕೆಪರಗತಿ ಬಯಸಿದಂತಹುದು
ಅಂದು ಖಟ್ವಾಂಗನೆಂಬರಸು ತಾನಳಿವುದಕೊಂದು ಮುಹೂರ್ತದಳರಿತುಕುಂದದೆ ಭಜಿಸಿ ಮುಕುಂದನ ಚರಣವಸಂದನು ಪರಮಪದವಿಗೆ
ಏಳೆಲೆ ಭರತವಂಶಾಗ್ರಣಿ ಬೇಗದೊಳೇಳು ಭಜಿಸು ಮಾಧವನಏಳು ದಿವಸದಾಯುವಿರ್ಪುದು ನಿನಗಿನ್ನಾಳೋಚನೆಯೇತಕಿದಕೆ
ಈ ವಿಧದೊಳು ಪೇಳಿದ ಶುಕಮುನಿಗೆ ಪದಾವನತಿಯನಾಚರಿಸಿಭಾವಶುದ್ಧಿಯೊಳು ಭಾಗವತವ ಕೇಳಿಯಂದಾ ವಿಷ್ಣುಪದವನೈದಿದನು
ಆರಯ್ಯೆ ವಿಷ್ಣುಪುರಾಣ ರಾಮಾಯಣಭಾರತ ಭಾಗವತಗಳಆರು ಪಿರಿಯರಿಂದಾಲಿಪರವರಿಗೆಸೇರುವುವಖಿಳ ಸಿದ್ಧಿಗಳು
ಇದಕೆ ಸಮ್ಮತಿ ವಚನಂಗಳು ಪಲವುಂಟದರೊಳೊಂದೆರಡನೋದುವೆನುಅದರರ್ಥಂಗಳನೆಲ್ಲರುಮರಿವಂತೆಪದರಚನೆಯೊಳು ಬಣ್ಣಿಪೆನು
ಶ್ರೀ ಭಾಗವತೇ ಪ್ರಥಮಸ್ಕಂದೇ, ಪ್ರಥಮೋಧ್ಯಾಯೇಶ್ಲೋ || ಧರ್ಮಃ ಪ್ರೋಜ್ಝಿತ ಕೈತವೋತ್ರಪರಮೋ ನಿರ್ಮತ್ಸರಾಣಾಂ ಸತಾಂ |ವೇದ್ಯಂ ವಾಸ್ತವಮತ್ರ ವಸ್ತುಶಿವದಂ ತಾಪತ್ರಯೋನ್ಮೂಲನಂ ||
ಶ್ರೀಮದ್ಭಾಗವತೇ ಮಹಾಮುನಿಕೃತೇಕಿಂ ವಾ ಪರೈರೀಶ್ವರಃ |ಸದ್ಯೋ ಹೃದ್ಯವರುಧ್ಯತೇತ್ರಕೃತಿಭಿಃ ಶುಶ್ರೂಷುಭಿಸ್ತತ್‌ಕ್ಷಣಾತ್ ||
ವೇದವ್ಯಾಸನಣುಗನಾ ಶುಕಮುನಿಯಾದರದಿಂದನುಗೈದವೇದ ತತ್ವಾರ್ಥಮೆನಿಪ ಭಾಗವತವನಾದರದಿಂದಾಲಿಪುದು
ಮದ ಮತ್ಸರಂಗಳಡಗಿದ ಮಹಾತ್ಮರಸದಮಳ ಧರ್ಮವಿದರೊಳುಇದು ತಾಪತ್ರಯಹರವಿದನಾಲಿಪರೆದೆಯೊಳು ಹರಿ ನೆಲಸುವನು
ಶ್ರೀ ವಿಷ್ಣು ಪುರಾಣೇ ಷಷ್ಠೇ ಅಂಶೇ ಚರಮೇ ಅಧ್ಯಾಯೇಶ್ಲೋ || ಪುರಾಣಂ ವೈಷ್ಣವಂ ಚೈತತ್‌ಸರ್ವಕಿಲ್ಬಿಷನಾಶನಂ |ವಿಶಿಷ್ಟಂ ಸರ್ವಶಾಸ್ತ್ರೇಭ್ಯಃಪುರುಷಾರ್ಥೋಪಪಾದಕಂ ||
ಯತ್ರಾದೌ ಭಗರ್ವಾ ಚರಾಚರಗುರುರ್ಮಧ್ಯೇ ತಥಾಂತೇ ಚ ಸಃ |ಬ್ರಹ್ಮಜ್ಞಾನಮಯೋಚ್ಯುತೋಖಿಲಂಜಗನ್ಮಧ್ಯಾಂತ ಸರ್ಗಪ್ರಭುಃ ||
ತಚ್ಛೃಣ್ವನ್ಪುರುಷಃ ಪವಿತ್ರಪರಮಂ ಭಕ್ತ್ಯಾ ಫಠನ್ಧಾರಯನ್ |ಪ್ರಾಪ್ನೋತ್ಯಸ್ತಿನತತ್ಸಮಸ್ತ್ರೀಭುವನೇಷ್ವೇಕಾಂತಸಿದ್ಧಿರ್ಹರಿಃ ||
ಇದನು ಶ್ರೀ ವಿಷ್ಣುಪುರಾಣವೆಂಬರು ಮತ್ತಿದರಿಂದ ಪಾಪ ಪರಿವುದುಇದು ಸರ್ವಶಾಸ್ತ್ರದೊಳೊತ್ತಮವೆನಿಸುವುದಿದು ಸರ್ವಫಲವ ಸಾಧಿಪುದು
ಆದಿ ಮಧ್ಯಾಂತರಹಿತನಚ್ಯುತನಿದರಾದಿ ಮಧ್ಯಾಂತದೊಳಿಹನುಈ ದಿವ್ಯ ವಿಷ್ಣುಪುರಾಣವ ಕೇಳುವರಾ ದೇವನಡಿಯ ಸೇರುವರು
ಶ್ರೀ ಮದ್ರಾಮಾಯಣೇ ಯುದ್ಧಕಾಂಡೇ ಚರಮಸ್ಸರ್ಗೇಶ್ಲೋ|| ರಾಮಾಯಣಮಿದಂ ಕೃತ್ಸ್ನಂಶೃಣ್ವತಃ ಪಠತಸ್ಸದಾ |ಪ್ರೀಯತೇ ಸತತಂ ರಾಮಸ್ಸಹಿವಿಷ್ಣುಸ್ಸನಾತನಃ ||
ಪಾಪಾನ್ಯಪಿ ಚಯಃ ಕೃತ್ವಾಅಹನ್ಯಹನಿ ಮಾನವಃಪಠತ್ಯೇಕಪಿಶ್ಲೋಕಂಪಾಪಾತ್ಸಪರಿಮುಚ್ಯತೇ ||
ಈ ರಾಮಾಯಣವೆಲ್ಲವನೆಡೆವಿಡದಾರೈದು ತಿಳಿದೋದುವರನುಶ್ರೀರಾಮಚಂದ್ರನೊಲಿದು ಸಲಹುವನಾದಿನಾರಾಯಣನವನೈಸೆ
ಒಂದು ಸರ್ಗಮನೊಂದು ಪದ್ಯಮನಲ್ಲದೊಡೊಂದು ಪಾದವನೋದಿದೊಡೆಅಂದಂದಿನೊಳೆಸಗಿದ ಪಾಪಂಗಳಂದಂದಿಗೆ ಪರಿಹರಿಸುವುವು
ಶ್ರೀ ಮಹಾಭಾರತೇ ಸ್ವರ್ಗಾರೋಹಣ ಪರ್ವಣಿ ಚರಮೇ ಅಧ್ಯಾಯೇಶ್ಲೋಕ || ಕಾರ್ಷ್ಣಂ ವೇದಮಿಮಂ ಸರ್ವಂಶೃಣುಯಾದ್ಯಸ್ಸಮಾಹಿತಃ |
ಬ್ರಹ್ಮಹತ್ಯಾ ಕೃತಂ ಪಾಪಂತತ್‌ಕ್ಷಣಾದೇವ ನಶ್ಯತಿ ||
ಅಹ್ನಾ ಯದೇನಃ ಕುರುತೇಇಂದ್ರಿಯೈರ್ಮನಸಾ ಗಿರಾ |ಮಹಾಭಾರತಮಾಖ್ಯಾಯಸರ್ವಪಾಪೈಃ ಪ್ರಮುಚ್ಯತೇ ||
ವೇದವ್ಯಾಸನೊಲಿದು ಪೇಳಿದ ಪೊಸವೇದವೆನಿಪ ಭಾರತವನುಓದಿದ ಮಾತ್ರದೊಳಳಿವುವು ಬ್ರಹ್ಮಹತ್ಯಾದಿ ಮಹಾಪಾತಕಗಳು
ನಡೆ ನುಡಿ ನೆನಹುಗಳಂದಂದಿಂದನೊಳೊಡರಿಸುವುಗ್ರ ಪಾಪಗಳುಅಡಗುವುವಂದಂದಿಗೆ ಭಾರತದೊಂದುನುಡಿಯನೋದಿದ ಮಾತ್ರದೊಳು
ಇಂತು ನಡೆವ ನಿತ್ಯ ನೈಮಿತ್ತಕರ್ಮ ಶ್ರೀಕಾಂತನೂಳಿಗವೆಂದು ತಿಳಿದುಸಂತಸದಿಂದಾಚರಿಸೆ ಸತಿಯರಿಗೆಚಿಂತಿತ ಫಲ ಸೇರುವುದು
ಗುರುಮುಖದಿಂದ ರಹಸ್ಯತ್ರಯಾರ್ಥದತಿರುಳನರಿತು ತೀವ್ರದೊಳುಪರಿಹರಿಪುದು ಮಂತ್ರಾಂತರ ದೇವತಾಂತರ ಸಾಧನಂತರಂಗಳನು
ಪಂಚಸಂಸ್ಕಾರಗಳನು ಪಡೆದೊಡನರ್ಥಪಂಚಕತತ್ವಮನರಿತುಪಾಂಚಕಾಲಿಕ ಧರ್ಮವನೆಸಗುತ ನಿಶ್ಚಂಚಲ ಚಿತ್ತದೊಳಿಹುದು
ಇದು ಮಂತ್ರವಿದು ದೇವತೆಯಿದು ನಡೆತೆಯೆಂಬುದನರಿತಂತರಂಗದೊಳುಮುದದೊಡನಿರ್ಪ ಮುಮುಕ್ಷುಗಳಿಗೆ ಮುಕ್ತಿಪದವಿ ಕೈಬಸಮಾಗಿಹುದು
ಪತಿಯೊಲವಕ್ಕೆ ಸತಿಯರೊಳು ಸತಿಯರುಪತಿಪಾದಭಕ್ತೆಯರಕ್ಕೆಸತಿಯರ ಮೈಮೆ ಸಕಲ ಜಗದೊಳು ನಿಲ್ಕೆಸತಿಧರ್ಮ ಶಾಶ್ವತಮಕ್ಕೆ
ಉರ್ವೀಶರು ಧಾರ್ಮಿಕರಕ್ಕೆ ಜಗದೊಳುಪಾರ್ವರು ಪದುಳದೊಳಿರ್ಕೆಒರ್ವರೊರ್ವರೊಳೊಡವೆರೆಗೆ ದಂಪತಿಗಳುಸರ್ವರು ಸೌಖ್ಯದೊಳಿರ್ಕೆ
ಶ್ರೀವೇದಮಾರ್ಗ ಪ್ರತಿಷ್ಠಾಪನಾಚಾರ್ಯನಾ ವೈಷ್ಣವಧರ್ಮಮೂರ್ತಿಆವನುಭಯ ವೇದಾಂತಾಚಾರ್ಯನೆಂಬೀ ವಿಧದೇಳ್ಗೆವೆತ್ತಿಹನು
ಶ್ರೀ ಶುಕ ವೇದವ್ಯಾಸ ವಾಲ್ಮೀಕಿ ಪರಾಶರರನು ಪಡಿಗೊಂಡುಶ್ರೀಶಪದಾಂಬುಜಭಕ್ತಿ ತತ್ವಜ್ಞಾನರಾಶಿಯೆನಿಸಿ ರಾಜಿಪನು
ಈ ಮಹಿಮೆಯೊಳೆಸೆವಳಸಿಂಗರಾರ್ಯನುದ್ದಾಮ ಕೃಪಾವೈಭವಕೆಭೂಮಿಯೆನಿಸಿ ನೆಗಳಿದ ಮೈಮೆಯಿಂದಾನೀ ಮಹಾಕೃತಿಯ ಪೇಳಿದೆನು
ಧರ್ಮರಹಸ್ಯವನರಿತಿರ್ಪೆನೆಂಬೊಂದುಪೆರ್ಮೆಯೊಳುಸುರ್ದವಳಲ್ಲಧರ್ಮದ ನೆನಹು ಮರೆಯದಂತೆ ಕೃತಿಯಾಗಿನಿರ್ಮಿಸಿ ನೆಲೆಗೊಳಿಸಿದೆನು
ಭಾವಿಸೆ ಬಿಜ್ಜೆಗಲಿತ ಪೆರ್ಮೆಯೆನಗಿಲ್ಲದೇವತೆಗಳ ವರಮಿಲ್ಲಆವುದನುಪದೇಶವಿತ್ತನಾರ್ಯನು ತನಗಾ ವಿಧದೊಳು ಪೇಳಿದೆನು
ಓಲೆವಿಡಿದು ನಾಮೋದಲೇಕಿದನೆಮ್ಮಶೀಲವನೆಂದು ಕಳೆಯದೆಬಾಲೆ ಬಣ್ಣಿಸಿ ಬಳಲಿದಳೆಂಬ ಮರುಕದಿಂದಾಲಿಪುದಖಿಲ ಸತಿಯರು
ಮಳೆಯಕ್ಕೆ ಕಾಲಕಾಲಕೆ ದೇವರೊಲವಿಂದಬೆಳೆಗೈಗೆ ಪೆರ್ಚುಗೆಯಕ್ಕೆಇಳೆಯೊಳು ಪತಿ ಪುತ್ರ ಪೌತ್ರ ಸಂಪದದೊಡನೊಳುವೆಂಡಿರೊಪ್ಪದೊಳಿರ್ಕೆ
ಶ್ರೀರಂಗ ಪಟ್ಟಣದೊಳು ಸಿರಿ ನೆಲಸಿರ್ಕೆಭೂರಿವೈಭವ ಪುದಿದಿರ್ಕೆಶ್ರೀರಂಗಧಾಮನ ದಿವ್ಯಯಾತ್ರೋತ್ಸವದಾರಾಧನೆ ಮಿಗಿಲಕ್ಕೆ
ಕನ್ನಡನಾಡೊಳು ಕಲಿಯುಗ ಪುಗದಿರ್ಕೆಕನ್ನಡಿಗರು ಘನರಕ್ಕೆಉನ್ನತಿವಡೆಗೆಯವರ ದೇಗುಲಗಳುಸನ್ನುತಿವಡೆಗೆ ಸತ್ರಗಳು
ಈ ವಸುಧೆಯ ಧರ್ಮದೊಳು ಪಾಲಿಸುಗೆ ಚಿಕದೇವರಾಜೇಂದ್ರಚಂದ್ರಮನುದೇವಗೋವಿಪ್ರಸಂತತಿ ಸಂತಸದೊಳಿರ್ಕೆಗೋವಿಂದಗಾನಂದಮಕ್ಕೆ
ಚೆನ್ನಿಗ ಚಿಕದೇವರಾಯನ ಸಂಚಿಯಹೊನ್ನಮ್ಮನುಸುರ್ದ ಕಬ್ಬದೊಳುಮನ್ನಣೆವಡೆದೊಪ್ಪಿತೊಂಬತ್ತನೆಯ ಸಂಧಿಸನ್ನುತ ಗುಣಸಂಬಂಧಿ
ಹದಿಬದೆಯ ಧರ್ಮಸಂಪೂರ್ಣಂ


