II
Siddharāma Caritre
ಭೂಮಿಯ ಚರಾಚರವನುದ್ಧರಿಸಿ ಪಲಕೆಲವುಸಾಮರ್ಥ್ಯಮಂ ತೋರ್ಪೆನೆಂದುಮೇಶಂ ಸಿದ್ಧರಾಮಯ್ಯನಾಗಿ ಸೊನ್ನಲಿಗೆಯೊಳಗುದಯವಾದಂ ಶಶಿಕಳಾಜೂಟನು
ಆನಿನ್ನೆಗಂ ಕಂಡ ಸಂಭ್ರಮಂ ಕಡೆಗೆ ಕನಸೋ ನಿರುತವೋ ನಿದ್ದೆಗೈದೆನೋ ಇಲ್ಲವೊ ಇದೇನೆಂದು ನೋಡಿ ಬೆಱಗಾಗುತ್ತ ಸೊಡರ್ಗಳಿವೆ ಪೂಗಳಿವೆಯೆಂದು ತನಗೆತಾನೆ ಬಸಿಱಂ ತಡವಿ ಹೆದಱಿ ಮಗ್ಗುಲ ಮಱೆಯೊಳಾನಂದದಿಂದಿರ್ದ ಕಂದನಂ ಕಂಡತಿಧ್ವಾನದಿಂದೆಬ್ಬಿಸಿದಳಬ್ಬರಿಸಿ ಗಂಡನಂ ಮನೆಯೊಳೊಅಗಿರ್ದವರನು
ನೆರೆಮನೆಯ ಮುಮ್ಮನೆಯ ಹೆಮ್ಮಕ್ಕಳಂ ಬೇಗಕರೆ ತೋಱಬೇಕು ಬೆಸಲಾದೆನೆನೆ ಹರಿಹರಿದುಕರೆದರಾವಾಗಳಂತೀಗಳೇನದು ಗಂಡು ಇರ್ಪುದೇ ಇದೆಯೆಂದೊಡೆಅರಿದೈದು ತಿಂಗಳೊಳಗೆಂದೆನುತ ತಮತಮಗೆನೆರೆದು ಬೆಚ್ಚಂಬಿಲವ ಕುಡುಗೋಲ ಕಪ್ಪಡವನರಳೆಯಂ ತೈಲವಂ ತಾ ಬೇಗಲೆನುತಲಾತನ ಹೊದಿಕೆಯಂ ತೆಗೆದರು
ಮುಸುಕು ಸರಿಯಲು ಮೋಡವೋಡಿದಿನಬಿಂಬದಂತೆಸೆವ ಮೆಯ್ಜೆಳಗೆದ್ದು ಬೀದಿವರಿದೊಳಗೆ ಧವಆಸೆ ಸೊಡರ್ಗಳೆಯ್ದೆ ಮಸುಳಿಸಿ ಮಬ್ಬಳಿಯೆ ದಂತವೆಸದ ಪುತ್ತಳಿಯೊ ಅಲ್ಲಶಶಿಕಾಂತದ ಪ್ರತಿಮೆ ಬೇಡ ಬೆಳ್ಳಿಯ ಬೊಂಬೆಹುಸಿ ಶಂಖಸಾಲಭಂಜಿಕೆಯಲ್ಲ ಮೌಕ್ತಿಕದಶಿಶುವೆಂದು ಮುಟ್ಟಿ ಮೃದುವಂ ಕಂಡು ಮನುಜನಹನೆಂದು ಭಾವಿಸಿ ಬಗೆದರು
ನೊಸಲ ಬಿಸಿಗಣ್ಣನೇಱೆಂದು ಶಿವಲಿಂಗಮಂಮುಸುಕಿ ಬೆಳೆದುತ್ತಮಾಂಗವನು ಬಾವೆಂದು ದಿಟ್ಟಿಸಿ ನೋಡದೆವೆಯಿಕ್ಕದಿಹ ಕಣ್ಣ ದಕ್ಕಾಲಿಯೆಂದು ನಿರ್ಮಲದೇಹಮಂರಸವಱತು ಬೆಳೆದಂಗವೆಂದು ದುಃಖಗಳಡಗಿದುಸಿರನಾರೈದು ನಿರ್ಜೀವನೆಂದೆಂದು ಶಂಕಿಸಿ ನೋಡಲಮ್ಮದೊಯ್ಯನೆ ದೂರದಿಂದೆ ದೀವಿಗೆವಿಡಿದು ದಿಟ್ಟಿಸಿದರು
ಉಸಿರಿಲ್ಲ ಕರಣಂಗಳಲುಗುತ್ತಿವೆ ಎವೆ ಮಱೆದುಮಿಸುಕವಾರೈದು ಕಣು ನೋಡುತಿವೆ ಎಳದು ಬಾಯ್ನಸುನಗುತ್ತಿದೆ ತೇಂಕುದಾಣಂಗಳಲುಗುವಂಗಂಗಳತಿ ಬಿಸಿವೆತ್ತಿವೆಒಸೆದಿರಿಸಬಾರದಿರಿಸದೆ ತೆಗೆಯಬಾರದೀಹಸುಳೆಯಂದಂ ಹೊಸತು ವಸುಧೆಯೊಳಗೆಂದು ಶಂಕಿಸುತವಂತಾ ಸತಿಯರಾತನಂ ಹೆತ್ತೆನೆಂಬಬ್ಬೆಯೊಡನಿಂತೆಂದರು
ಸುದತಿ ಗರ್ಭಕ್ಕೆ ಮುನ್ನೇನಕ್ಕೆ ನಿಘ್ರ ಹುಟ್ಟದಲೆ ಇಂದೆಂತು ಬೆಸಲಾದೆ ಹೇಳೆಂದೆಂದುಮುದುಗಣ್ಗಳೆನಲಮರಿಯರ್‌ವೆರಸಿ ಹೂಮಳೆಯ ದುಂದುಭಿಯ ಧ್ವನಿಗಳೊಳಗೆಮದನಹರನರಸಿ ಬಿಜಯಂಗೈದು ಹರಸಿ ಮೋಹದೊಳೀತನಂ ತಮ್ಮ ದೇವನೆಂದೋವಿ ಪ್ರೇಮದಿ ಸಿದ್ದರಾಮಯ್ಯನೆಂದು ಹೆಸರಿಟ್ಟಾಡಿ ಹಾಡಿ ಹರಸಿದಳೆಂದಳು
ಇಂತೀಗಲವರತ್ತ ಹೋದರಾನಿತ್ತ ಕಣ್ಣಂ ತೆಱೆದು ಕರಸಿದೆಂ ನಿಮ್ಮನೆಂದೆನಲಂಗಜಾಂತಕನ ಸತಿಯೇಕೆ ನೀನೇಕೆ ಬಸಿಱಿಳಿವ ಸಂಕಟದ ಬಲು ಬೇನೆಯಭ್ರಾಂತಿನಿಂ ಮೈ ಮಱೆದು ಕಂಡ ಕನಸೈಸೆ ಮರುಳಂತೆ ನುಡಿಯದಿರೆಂದಡದನೊಡಂಬಟ್ಟಳಾಕಾಂತೆಯೆಂಬಾಗಳಧಮರ ಬೋಧೆಯಿಂದಾರ ಲೇಸು ಬೀಸರವಾಗದು
ಅಂಬಿಕಾಪತಿ ಲೋಕಮಂ ಸಾಕಲೊಗೆದನೆಂದೆಂಬುದಂ ತನ್ನ ದಶಶತಕರದಿ ಗಗನವೆಂದೆಂಬ ಜೇಗಟೆಯಿಂದ ಧರೆಗೆ ಡಂಗುರವೊಯ್ಯಲೆಂದಂದು ನಿಂದಿರ್ದನೋಎಂಬಂತೆ ರವಿಯುದಯಗಿರಿಗೆ ಬಂದಂ ಜನಕದಂಬವಾ ಪೂಮಳೆಗೆ ಜನನಕ್ಕೆ ಶಿಶುಗೆ ಚೋದ್ಯಂಬಟ್ಟರಲ್ಲಲ್ಲಿ ತನತನಗೆ ಹರಿಹರಿದು ನೆರೆನೆರೆದು ನುಡಿನುಡಿದರು
ಓತು ತಾತಂ ಜಾತಸೂತಕಾತೀತಂಗೆಜಾತಕರ್ಮವನೊದವಿ ಸಿದ್ಧರಾಮಯ್ಯನೆಂದಾತಂಗೆ ಗಿರಿಜಾತೆ ಕೊಟ್ಟ ಹೆಸರಂ ಬಿಟ್ಟು ಧೂಳಿಮಾಕಾಳನೆಂದುನೀತಿಗೆಡೆ ಕುಲದೈವವೆಸರಿಂದ ಕರೆದು ದುರ್ನೀತರೆಲ್ಲಾ ಮಕ್ಕಳಂದವಲ್ಲೆಂದು ಮಿಗೆಧಾತುಗೆಟ್ಟುಮ್ಮಳಿಸುತಿರ್ದರಂದಂದಿಂಗೆ ನೋಡಿ ಮನದೊಳು ಮಱುಗುತ
ಘನನಿತ್ಯತೃಪ್ತನಂ ಮೊಲೆಯುಣ್ಣನೆಂದನಿಮಿಷನ ನಿದ್ರೆಗೈಯನೆಂದಕ್ಲೇಶನಳನೆಂದುಘನಮೌನಿ ನುಡಿಯನೆಂದಮಳಲಿಂಗಪ್ರಾಣಿಯುಸಿರನೆಂದಶರೀರಿಗೆತನುಧರ್ಮವಿಲ್ಲೆಂದು ಸಕಲ ಭೂತದೊಳನನ್ಯನನು ನಗನೆಂದು ಚಿಣ್ಣಂ ನಡೆಯಲಱಿಯನೆಂದನುಪಮಾರ್ಯಂ ಬಾಲಲೀಲೆಯಂ ನಟಸನೆಂದಳುವರಾ ಮಾತೆಪಿತರು
ಎಳಸಿ ತನಯಂ ಹುಟ್ಟೆ ಹುಟ್ಟಿತ್ತು ಸಂಪದಂಬೆಳೆಯತೊಡಗಿದೊಡೆ ಧರೆ ಬೆಳೆಯತೊಡಗಿತ್ತೊಚ್ಚಿಸುಳಿಯ ತೊಡಗಲು ಸುಳಿಯ ತೊಡಗಿತ್ತು ತಾಯ್ತಂದೆಗಳ ಕೀರ್ತಿ ದಿಕ್ತಟದಲಿಗಳಿಗೆ ಜಾವಂ ದಿನಂ ಪಕ್ಷ ಮಾಸಾಬ್ದತತಿಗಳ ಹಂಗು ಹೊದ್ದದೊಂದೆರಡು ಸಂವತ್ಸರಂಗಳಲೆ ಹತ್ತೈದು ವರುಷದ ಹರೆಯವಂ ತಳೆದನನುಪಮಸ್ವಾತಂತ್ರನು
ಧೂಳಯ್ಯನೆಂದು ಕಿವಿಯಲಿ ಕೂಗಿ ಕರೆದಡಂಕೇಳದಂತಿಪ್ಪನೆಲೆ ಸಿದ್ಧರಾಮಯ್ಯ ಎಂದಾಳೋಕಿಸದ ಮುನ್ನ ತಿರುಗಿ ನೋಳ್ಪಂ ನಡೆಸಿತಂದು ಶಿವನಿಳಯದೊಳಗೆಲೀಲೆಯಂ ಕುಣಿಸೆ ಕುಣಿವಂ ನುಡಿಯ ಬಲ್ವಾತನಾಲಿಸಲು ನುಡಿವನೋವಿದರೆಂದು ಹಾರೈಸನೇಳಿಸಲು ಮುನಿಯನೊಳಗಱಿವರ್ಗೆ ನಾಚುತ್ತ ಜಗಕೆ ಮರುಳಂತಿರ್ದನು
ಗೃಹದೊಳಗೆ ಮರುಳಂತೆ ಜಡನಾಗಿ ಮೂಗುವಟ್ಟಿಹುದಱಿಂದಂ ಕಱುಗಳಂ ಕಾಯಹೊಡೆದೊಡಾಗಹನದೊಳು ಬಿಡುಬಿಸಿಲ ಗಾಳಿಯಿಂ ಹಸಿದು ಮಱೆದುಣ್ಣನೇ ನೀರ್ಗುಡಿಯನೇಇಹಗೊಮ್ಮೆ ನೋಳ್ಪೆನೆಂದಾ ಮುದ್ದಗೌಡನೆದ್ದಹಿಮಕರನುದಯದೊಳು ಕಱುಗಳಂ ಬಿಟ್ಟು ಚೆಲುವಹ ಕಲಸುಗೂಳ್ ಕಟ್ಟಿಕೊಟ್ಟು ಸಿದ್ಧೇಶ್ವರನ ಬೆಂಬಳಿಯಲೈತಂದನು
ಒಡನೆ ಕಱುಗಾವ ಮಕ್ಕಳುಗಳಂ ಕರೆದು ಕೈವಿಡಿದೆಮ್ಮ ತಮ್ಮನಂ ಕೂಡಿಕೊಂಡೊಯ್ತಂದುಕೊಡಿ ತಂದೆಗಳಿರ ಎಂದಪ್ಪಯಿಸಿದಂ ಧರೆಯ ರಕ್ಷೆಗೆಂದೊಗೆದವನನುಬಿಡದಿವರ ಸಂಗಡದೊಳೀ ಕಱುಗಳೋಡದಂತೊಡನೆ ಬಳಿವಳಿಯಲಿದ್ದೆಲ್ಲರೋಪಾದಿಯಿಂನಡೆವುದೆಲೆ ಮಗನೆ ಎಂದಪ್ಪಿ ತಲೆದಡವುತ್ತ ಹೋದನಾ ಮುದ್ದಯ್ಯನು
ನೆಲೆವೊಕ್ಕನಂತಾತನತ್ತಲಿತ್ತಂ ಸಿದ್ಧತಿಲಕನುಱೆ ತನಗೆ ಪಿತನೆಂಬ ಮುದ್ದಯ್ಯಂಗೆಕುಲದೈವವೆಂದೆನಿಪ ಧೂಳಿಮಾಕಾಳಂಗೆ ಕಱುಗಾವ ಬೆಸನನಿತ್ತುತೊಲಗದೊಡನಾಡಿಗಳುವೆರಸಿ ನಡೆಯಲು ಮುಂದೆಪಲವು ಮಾಮರದಡಿಯ ಮಲ್ಲಿಕಾಮಂಟಪದತಳದ ತಣ್ಣೆಳಲ ತಿಳಿಗೊಳನ ಪುಳಿನಸ್ಥಳದಿ ದಿವ್ಯಲಿಂಗಂ ಮೆಱೆದುದು
ಅಲ್ಲಿವರ್ಪರ್ ಕಂಡು ಮಕ್ಕಳಾವಱಿಯೆ ಮುನ್ನಿಲ್ಲಿ ಮಾಮರನಿಲ್ಲ ಕೊಳನಿಲ್ಲ ಶಿವಲಿಂಗಎಲ್ಲೆಂದು ಬೆಱಗಾಗುತಿರೆ ಸಿದ್ಧಭಾನು ಪರಿಪರಿಯ ಹೂಪತ್ರೆಗೊಯ್ದುಸಲ್ಲಲಿತ ಶಿವಲಿಂಗಪೂಜೆಯಂ ಮಾಡಿ ತನ್ನಲ್ಲಿರ್ದ ಕಟ್ಟೋಗರವನಾಹರಂಗೊಟ್ಟುಸೊಲ್ಲಿಸಲು ಬಾರದಾನಂದದಿಂದಾಡಿ ಪಾಡಿದನು ನಡುವಗಲತನಕ
ಜನನಿಯುಪಚಾರಕ್ಕೆ ಕಟ್ಟಿದೊಕ್ಕೈ ತುಂಬಿದನಿತೋಗರವನೊಡನೆ ಕಱುಗಾವ ಮಕ್ಕಳುಗಳನಿಬರ್ಗೆ ದಣಿಯುಣಲಿಕ್ಕಿ ತಣಿದಲ್ಲಿ ಪಲ್ಲವಿಸಿ ಫಲಭರಿತವಾದವಿನುತ ಪರಿಣಾಮ ಪ್ರಸಾದಮಂ ತಾ ಧರಿಸಿನೆನಹು ನಿಲುಕದ ಸುಖದ ಸುಗ್ಗಿಯಂ ಸವಿದನೀಶನ ಕುಮಾರಂ ಪುಣ್ಯಪೂರನಘದೂರನತಿಧೀರನಮಳಾಕಾರನು
ಬಳಿಕವಾ ಲಿಂಗಮುಂ ಬೀಳ್ಕೊಂಡು ತಿರುಗಿ ಕಱುಗಳ ಹಿಂಡುಗೊಂಡು ಬರುತಿರಲಿತ್ತ ಮುದ್ದಯ್ಯನೊಳಗೊಳಗೆ ಹಲವನೆಣಿಸುತ್ತೆನ್ನ ಮರುಳ ಮಗನೇನಾದನೋ ಎನ್ನುತ್ತಬಳವಳಿದು ದೂರಿಸುತ್ತಿದಿರಾಗಿ ಬರುತ ಮಕ್ಕಳ ನಡುವೆ ಬಪ್ಪ ಸಿದ್ಧೇಶ್ವರನನತಿ ದೂರದೊಳು ಕಂಡು ಶಶಿಯ ಬರವಂ ಕಂಡ ದೇಸಿಗ ಚಕೋರನಂತಾದನಂದು
ಬಂದು ತೆಗೆದಪ್ಪಿ ತಲೆದಡವಿ ಮುಂಡಾಡಿ ಬಿಸಿಲಿಂದ ಬೆಂಡಾಗಿ ಹಸಿದಳವಳಿದು ನಡೆದು ಕಾಲ್ನೊಂದವೇ ಕಂದಯೆಂದೆತ್ತಿ ನಡೆದೈತಂದನೀಶನಂ ಹೊತ್ತು ನಡೆವನಂದೀಶನೋ ಎನಿಪ್ಪಂತೆ ಮನೆವೊಕ್ಕು ಮುದದಿಂದೋವಿ ಭಾವಿಸುತ್ತಿರ್ದರೆಂಬಾಗಲೀತಂದೆತಾಯ್ಗಳ ಪುಣ್ಯದೊಂದು ಸಂಪದವನೇನೆಂದು ಬಣ್ಣಿಸುವೆನು
ಮಱೆಯದೀ ತೆಱದೊಳಂದಂದಿಂಗೆ ಕಱುಗಾವತೆಱದಿ ಲಿಂಗಾರ್ಚನಾಸುಖವಡೆಯುತಂ ಹಾಲಮಱೆಯ ಧೃತದಂತೆ ಮಾತಿನ ಮಱೆಯ ಸತ್ಯದಂತೊಡಲ ಮಱೆಯಾತ್ಯನಂತೆಉಱುವ ಸಮತೆಯ ಮಱೆಯ ಪುಣ್ಯದಂದದಿ ಮರನಮಱೆಯಗ್ನಿಯಂತೆ ಪುಷ್ಪದ ಮಱೆಯ ಫಲದಂತೆಮೆಱೆವ ಬಾಲ್ಯದ ಪರಬೊಮ್ಮವಾಗಿ ಮೆಱೆಯುತಿರ್ದನಪ್ರತಿಮನು
ಅಡಿಯಿಟ್ಟ ಧರೆ ಮಹಾಕ್ಷೇತ್ರವಱಿಯದೆ ಹೊಕ್ಕಮಡು ದಿವ್ಯತೀರ್ಥ ತುಡುಕಿದ ಜಲಂ ಸಿದ್ಧಾಂಬುನುಡಿದ ನುಡಿಗಳು ಮೂಲಮಂತ್ರವಾಡುತ್ತ ಮಂಡೆಯಲಿ ಕೈಯಿಟ್ಟಾತನುಕಡೆಗೆ ಜೀವನ್ಮುಕ್ತನಜ್ಞಾನದಿಂ ಸೋಂಕುನಡೆದಾತ ಸುರನಿತ್ತುದೇ ನಿಧಿ ನಿರೀಕ್ಷಿಸಿತೆಪೊಡವಿಪಾವನವಮಮ ಸಿದ್ಧರಾಮಂ ಪುಣ್ಯನಾಮನಭಿನವ ಸೋಮನು
ಉದಯಾದ್ರಿಯಂ ಮೆಱೆಯಲೆಂದು ಹುಟ್ಟಿದ ಸೂರ್ಯನುದಯಪರ್ವತದ ಮಗನೇ ಧರೆಯನುದ್ಧರಿಸಲುದಯಿಸಿದ ದಿವ್ಯಲಿಂಗಂ ಧರೆಯ ಪುತ್ರನೇ ಘೋರತಪದಿಂದೊಲಿಸಿದಸುದತಿ ಸುಗ್ಗವ್ವೆ ಮುದ್ದಯ್ಯನಂ ಮೆಱೆದು ಲೋಕದ ಪಾಪಮಂ ಕಳೆಯಲುದಯಿಸಿದ ರುದ್ರನೆನ್ನದೆ ಸಿದ್ಧರಾಮ ಯೋನಿಜನೆಂದವಂಗಾಗದಿಹುದೆ ನಾಯಕ ನರಕವು
ಒಂದುದಿನವೆಂದಿನಂದದಿ ಕಱುಗಳಂ ಹೊಡೆದುತಂದು ನಳನಳಿಸಿ ಕೋಮಳತೆಯಿಂ ಕೊಬ್ಬ ನಲಎಂದೆ ಮಡಲಿಱಿದಡಸಿ ಬೆಳೆದು ಭಾರೈಸಿ ತನ್ನಂ ಹೊತ್ತ ಭೂವನಿತೆಗೆವಂದಿಸುವ ತೆಱದಿಂದ ಬಾಗಿ ಬಳುಕುವ ತೆನೆಗಳಿಂದೆಸೆವ ತಮ್ಮ ನವಣೆಯ ಕೆಯ್ಯ ಬಳಿಯೊಳಾನಂದದಿಂದಿರ್ಪ ಸಿದ್ಧೇಂದ್ರನಂ ಮೆಱೆಯಲನುಗೆಯ್ದನಗಜಾರಮಣನು
ಭುವನದೊಳು ಹರವರಿಯ ಕುಱುಹುಳ್ಳ ತನ್ನ ವೇಷವನು ಜಂಗಮರೂಪಿನೊಳು ಮಡಗಿ ನಡೆತಂದುಶಿವಮಸ್ತು ನಿತ್ಯಾನಾಗೆಂದು ಭಸಿತವನಿತ್ತು ಕೆಲಸಾರ್ದು ನಿಂದಿರ್ದೊಡೆರವಿ ಮುಗಿಲ ಮಱೆಗೊಂಡೊಡಂ ಬೆಳಗು ಲೋಕಮಂಧವಳಿಸುವ ತೆಱದಿ ನಿಜಮಂ ಮಾಜಿ ಕೃತಕದೊಳಗವಿದೊಡಂ ಹಳಹಳನೆ ಹೊಳೆಹೊಳೆದು ದೇವಕಳೆ ಮನಕೆ ಮಂಗಳವಿತ್ತುದು
ನ್ಯಾಯದಿಂ ಕಣ್ಣಱಿಯದಿರ್ದೊಡಂ ಕರುಳಱಿಯವೇಯಾಗಳಂತಲ್ಲಿ ಕಾಣುಹ ತಡಂ ನೆನೆದುಘೇಯೆಂದು ಮೆಯ್ಯಿಕ್ಕಿ ಕುಣಿದು ಕುಕಿಲಿಱಿದಾಡಿ ಹಾಡಿ ಪದರಜದಿ ಹೊರಳಿಕಾಯದಿಂ ಕರುಣದಿಂ ಚರಣಂಗಳಂ ಮುಸುಕಿಹಾಯೆಂದು ಹಾರೈಸಿ ಯತಿತುಷ್ಟಿಯಿಂ ದೇವರಾಯನೀಕ್ಷಿಸಿ ಮೆಚ್ಚಿ ಮುಚ್ಚಲಟೆಯದೆ ನಿಜವ ತೋಱಲುದ್ಯೋಗಿಸಿದನು
ಜಡೆಯ ಮುಕುಟದ ಶಶಿಯ ಸುರನದಿಯ ಕುಂಡಲದನಡುಗಣ್ಣ ಪಂಚಾಸ್ಯದೀರೈದು ಭುಜದ ಕೊರಲೆಡೆಯ ಗರಳದ ತಳೆದ ಭಸಿತದಹಿಭೂಷಣದ ಹೊದೆದ ಹೊಸ ಗಜಚರ್ಮದಹಿಡಿದ ಡಮರುಗ ಶೂಲ ಫಲಕ ಧನು ಸರ್ಪನುಂಖಡುಗ ಶಿಖಿ ಪರಶು ಮೃಗ ಪುಲಿದೊವಲು ಸುತ್ತಿ ಬಿಗಿದುಡಿಯ ಹರಿನಯನವೆರಸಿದ ಮೆಲ್ಲಡಿಯ ನಿಜಮೂರ್ತಿಯಂ ತೋಱಿಸಿದನು
ಘನಮೇಘಮಂ ಕಂಡ ನವಿಲಂತೆ ದೇವರಾಯನ ನಿಜಕೆ ಬೆಱಗಾಗುತುಸಿರಲಮ್ಮದ ಸುಖವನನುಭವಿಸಿ ತಳಿರೆತ್ತ ಬಿಸಿಲೆತ್ತ ಹಂಸಶಿಶುವೆತ್ತ ಕಲುಮೊರಡಿಯೆತ್ತನೆನಹು ನಿಲುಕದ ಸಹಜಸುಕುಮಾರ ನೀನೆತ್ತಅನಿಮಿತ್ತಮೀಯೆಡೆಗೆ ಬರವೆತ್ತ ನೀನಾರುಮನೆಯೆಲ್ಲಿ ಹೆಸರಾವುದಾವ ನಾಡವನೆಂದು ಕೇಳ್ವನಗಜೇಶ್ವರನನು
ಪತಿತಪಾವನ ಪರ್ವತಾಶ್ರಮದಿಪ್ಪೆನುನ್ನತ ಮಲ್ಲಿನಾಥನೆಂದೆನ್ನ ನಾಮಂ ನಿನ್ನನತಿ ನೇಹದಿಂ ನೋಡಿ ಹಂಜಕ್ಕಿಯಂ ಬೇಡಿ ಮೆಲಬಂದನೆಂದು ನುಡಿಯೆಅತುಳಬಳ ಹರುಷವನು ತಳೆದು ಕೆಯ್ಯೋಳು ತನ್ನಮತಿಗೆ ಮಂಗಳವಪ್ಪ ತೆನೆಯನಱಸಿದನು ಸುರಪತಿ ಸುರಭಿಗಿಕ್ಕಲೆಂದಮೃತಫಳಮಂ ಕಲ್ಪತರು ವನದೊಳಱಸುವಂತೆ
ನಸಿದು ಬೆಳೆಯದೆ ಕೊಬ್ಬಿದೊಡ್ಡಿತಹ ತೆನೆಗಳೊಳುನಸುಗೆಂಪಿನಿಂ ಬೀಗಿ ಬಾಗಿ ತೂಗುವ ಚೆಲುವಹೊಸಹಾಲ ಹನಿಗಳಡಸಿದ ತೆಱದ ತೆನೆಗಳಂ ತಿಱಿತಿಱಿದು ತಂದು ತಂದುಒಸೆದೊಸೆದು ಹೊಸಹೊಸೆದು ರಸವುಳ್ಳ ಹಸುರುಳ್ಳಬಿಸಿಯುಳ್ಳ ಹಸಿಯ ಕೆಂಪುಳ್ಳವಲನಿತ್ತು ಬೋಧಿಸಿದನುರೆ ಕಲ್ಪಭೂಜವನು ಚಿಂತಾಮಣಿಯ ಚಿಣ್ಣನುಪಚರಿಪಂತೆ
ದೇವಪತಿ ದೇವಾಧಿದೇವ ದೇವರ ಗಂಡದೇವ ನೆಱೆ ತಣಿದು ತಲೆಯೆತ್ತುವನ್ನಂ ಸವಿದುಕಾವುದೆನ್ನಂ ತಂದೆಯೆಂದು ಬಂದಡಿಗಡಿಗೆ ಪೊಡಮಟ್ಟು ನೀಡಿ ನೀಡಿಭಾವಿಸುವ ಸುತನ ಕಡುಮೋಹಮಂ ಮದನವನದಾವನೀಕ್ಷಿಸಲಾಱದಾತನಂ ನಾನಿಪ್ಪಠಾವಿಂಗೆ ಬರಿಸುವದಕಾವುದೋ ಬುದ್ಧಿಯೆಂದಱಸಿ ಕಂಡಿಂತೆಂದನು
ಎಳ ಅವಲಿನಿಂ ತಣಿದೆನಳೆಯಂಬಕಳಕೆ ಮನವೆಳಸಿತ್ತು ನನಗೆಂದು ತಂದುದುಂಟೇ ಇಲ್ಲನಿಳಯದಿಂ ತಂದಪಾ ತಪ್ಪೆನೆನೆ ತಾ ಪೋಪೆನೇ ಪೋಗು ಬೇಗವೆನಲುಹುಲಿಯುಂಟು ಕರಡಿಯುಂಟಮ್ಮಾವು ಉಂಟಿಲ್ಲಿಖಳ ಮೂರ್ಖ ಚೋರರುಂಟೆಂತಿರಿಸಿ ಪೋಪೆನೆಂದಳವಳಿಯುತಿರಲೆನ್ನ ದೆಸೆಗಂಜಬೇಡ ಹೋಗೆಂದನಡಗುವ ಭರದೊಳು
ಇರಲಾಱದಗಲಲಾಱದೆ ಸಂಕಟಂಗೊಂಡುಹಿರಿಯ ಮೆಳೆಯಡಿಯಲ್ಲಿ ಹೊದಕೆಯಂ ಹಾಸಿ ಕುಳ್ಳಿರಿಸಿ ವಂದಿಸಿ ಪೋಗಿ ಪೋಗಲಾಱದೆ ತಿರುಗಿ ಬಂದೋವಿ ಬಲ್ಪಿನಿಂದತಿರುಗಿ ನೋಡುತ್ತ ಬಾಡುತ್ತ ಕಣ್ಮಱೆಯಾಗೆಮರಳಿ ನೋಡುತ್ತ ಮೆಳೆ ಮಱೆಯಾಗೆ ಮಱುಗುತ್ತಹರಿದು ಮನೆಪೊಕ್ಕು ಜನನಿಯನಪ್ಪಿ ಬೇಡಿದಂ ಭುಲ್ಲವಿಸಿ ಲಲ್ಲೆಗಱೆದು
ಹಿಂದೆ ಕರೆದಡೆ ಬಾರ ನುಡಿಸೆ ನುಡಿಯಂ ಕೊಟ್ಟಡೊಂದುವಂ ಕೊಳ್ಳನಿಕ್ಕಿದಡುಣ್ಣನಿಂದು ತನ್ನಿಂದ ತಾ ಬೇಡಿದಂ ಮಗನೆಂದು ಸಡಗರಿಸಿ ಕಡೆದ ತಾರೆಗಳ ತಿರುಳಚಂದದೋಗರದೊಳಗೆ ಚಂದ್ರಿಕೆಯ ಹೊಸ ಹಳುಕಿನಂದದೆಮ್ಮೆಯ ಮೊಸರು ನೆಲ್ಲಿ ಮಾವ್ ಮೆಣಸು ಗರೆಯೆಂದಿವೆಲ್ಲವನಿರಿಸಿ ಕಟ್ಟಿಕೊಟ್ಟಳು ಕಂದ ಕೋ ಎಂದು ಸಂತಸದೊಳು
ನಿಂದಿರದೆ ಬಪ್ಪಾಗಳೆಡದ ಭಾಗಂ ಕೆತ್ತೆಬೆಂದೆನೆನ್ನಯ ತಂದೆ ಹುಲಿ ಕರಡಿಗಳು ಕಚ್ಚಿನೊಂದನೋ ಹಸಿದು ಬೆಂಡಾದನೋ ಹೋದನೋ ಏನಾದನೋ ಎನುತ್ತಒಂದೊಂದನೆಣಿಸುತ್ತ ಬಂದು ನೋಳ್ಪಾಗಳಿಲ್ಲಿಂದ ಮುನ್ನವೆ ಶಿವಂ ಹೋಗೆ ಕುಳ್ಳಿರ್ದ ಮೆಳೆಇಂದು ತೊಲಗಿದ ರಾತ್ರಿಯಂತೊಪ್ಪವಳಿದಿರಲು ಕಂಡನಾ ಸಿದ್ಧೇಂದ್ರನು
ಬಹ ತವಕದಿಂ ಹೊಲಬುಗೆಡೆನಲೇ ನಮ್ಮ ಕೆಯ್ಯಹುದೊ ಅಲ್ಲವೊ ಎನುತ್ತಂ ಸುತ್ತಲುಂ ನೋಡಿಸಹಸಿಗನ ಹಾವುಗೆಯ ಹಜ್ಜೆಯಿವೆ ನಿಂದಿರ್ದನಲ್ಲಿ ಕುಳ್ಳಿರ್ದನಲ್ಲಿಬಹಳವೆಳಗಿನ ಕಮಂಡಲುವನಿಳುಹಿದನಿಲ್ಲಿಕುಹಕದಿಂ ಹಂಜಕ್ಕಿಯಂ ಸವಿದನಿಲ್ಲಿ ಬಳಿಕೈಹಗಡಗಿ ಹೋದನೋ ತಾನೆ ಬಲ್ಲಂ ಕುಱುಹು ತಪ್ಪದೆನುತಾರೈದನು
ಬೆಳೆಗೆಯ್ಯ ಹೊದಱಿನೊಳು ಮುನ್ನಾಡಿದೆಡೆಗಳೊಳುತಳಿತ ಮರನಡಿಗಳೊಳಗೆಳಲತೆಯ ತಂಪಿನೊಳುತಿಳಿಗೊಳನ ತೀರದೊಳು ದೇವಭವನದೊಳು ಕೆಱೆಯೊಳು ಪುಷ್ಟವಾಟಿಗಳೊಳುಗುಳಿಗಳೊಳು ಗುಡ್ಡೆಗಳ ಮಱೆಯೊಳೆಡೆಯಾಡುವವರೊಳು ಮೇವ ತುಱುವಿಂಡಿನೊಳು ದಾರಿಯೊಳು ಸುತ್ತಿಸುಳಿದಱಸಿದಂ ಸಿದ್ಧರಾಮನಾ ಪರ್ವತಾಗ್ರಣಿ ಮಲ್ಲಿಕಾರ್ಜುನನನು
ಬನ್ನವೆತ್ತಿದರಂತೆ ಮಱುಗಿ ಕಾಣದ ಕೋಪದಿಂ ನಿನ್ನನಗಲಿದೆನೆನುತ್ತೋಗರವ ಕೆದಱಿಕೆನ್ನೆಯಲಿ ಕೈಯಿಟ್ಟು ತಲೆಯೆತ್ತಿ ಬಿರಿಬಿರಿದು ಬಿಕ್ಕಿ ಬಾಯ್ವಿಟ್ಟೊಱಲುತಚೆನ್ನ ಮಲ್ಲಯ್ಯ ಮಲ್ಲಯ್ಯ ಬಾ ಬಾ ಕಾಡದೆನ್ನ ಮಲ್ಲಯ್ಯ ಎನ್ನಯ್ಯ ಮಲ್ಲಯ್ಯ ಬಾಹೊನ್ನಮಲ್ಲಯ್ಯ ಬಾ ಎಂದೊಱಲಿ ಕರೆದು ಕರೆದತ್ತನಾ ಸಿದ್ಧೇಂದ್ರನು
ಹರಿಹರಿದು ಕರೆದು ಕರೆದತ್ತತ್ತು ಧಾತುಗೆಟ್ಟುರಿವರಿವ ಬಿಸಿಲೊಳಗೆ ಕಾದ ಬಟ್ಟೆಯ ಹುಡಿಯಹರಳೊಳಗೆ ಬಿದ್ದು ಮಲ್ಲಯ್ಯ ಮಲ್ಲಯ್ಯ ಎನುತಿಪ್ಪಾಗಳಿತ್ತ ಪಿಡಿದಪರಿಪರಿಯ ಸತ್ತಿಗೆಯ ಸಂದಣಿಸುವಂದಣದತರತರದ ತುರಗದೆತ್ತುಗಳ ಮೊತ್ತದ ಮುಂದೆನೆರೆದ ವೃಷಭಧ್ವಜದ ಗಾಢದಿಂ ಶ್ರೀಪರ್ವತ ಪರುಷೆ ಬರುತಿರ್ದುದು
ಹಿರಿಯರು ವಿಮಾಯರು ವಿಮತ್ಸರರು ಸಾಧುಗಳುಕರುಣಿಗಳು ಶಾಂತರು ದಯಾನಿಧಿಗಳಾನಂದಭರಿತರುತ್ತಮ ದಾನಿಗಳು ಮಾನಿಗಳು ಮೌನಿಗಳು ಭೋಗಿಗಳು ಶುಚಿಗಳುನಿರಪೇಕ್ಷರಮಳರೇಕೋನಿಷ್ಠರುತ್ತಮರುಗರುವರು ನಿರಾಲಂಬರಚಲಿತರು ನಿಸ್ಪೃಹರುನಿರುತ ನಿರ್ಬಾಧಕರು ಸತ್ಯರಾ ಪರುಷೆಯೊಳಸಂಖ್ಯಾತ ಬರುತಿರ್ದರು
ಕಡಗಿ ಕಾಮನ ಹೆಸರನಡಗಿಸಲು ಧಾಳಿಡುವಪಡೆಯೊ ಕಾಲನ ಕಟಕಮಂ ಸೂಱೆಗೊಳಲೆತ್ತಿನಡೆದ ಸೇನೆಯೊ ಕವಿದ ವಿದ್ಯಾಮದೋತ್ಪಾಟನಕ್ಕೆ ಹರಿಯಿಡುವ ಬಲವೊತೊಡರ್ವನಿನ್ನಾವನರಿಷಡ್ವರ್ಗತತಿಗೆ ಬೆಂಬಡಿಗೆ ಸಪ್ತವ್ಯಸನದೆದೆಗೊಡ್ಡಿದಲಗೆಂದುಜಡಿದ ಕಹಳಾರವಂಗಳ ರಭಸದಿಂ ಪರ್ವತದ ಪರುಪೆ ಬರುತಿರ್ದುದು
ಕಂಗೆ ಮಂಗಳವಪ್ಪ ಪರಿಪರಿಯ ಶಿವಲಾಂಛನಂಗಳಿಂದುಬ್ಬಟೆಯ ಭಾಷೆಯಿಂ ವಿವಿಧ ನೇಮಂಗಳಿಂ ಬಹಳ ಭಕ್ತಿಜ್ಞಾನ ವೈರಾಗ್ಯದಿಂ ಬಲಿದ ತನುಗಳಾದಜಂಗಮರಿನೆಸೆಯುತ್ತ ಬಹ ಪರುಷೆಯೊಳಗೆ ಮಾತಂಗ ಮೊದಲಿಱುಹೆ ಕಡೆಯೆನೆ ನೋಯಿಸದ ದಯಾಸಂಗಿಗಳು ಬರುತ ಕಂಡರು ಬಟ್ಟೆಯೊಳ್ ಬಿದ್ದು ಬಾಯ್ವಿಡುವ ಚಾಲಕನನು
ಹಿಡಿದೆತ್ತಿ ಕುಳ್ಳಿರಿಸಿ ನೆಳಲೊಳಗೆ ಬೀಸಿ ಮೈದೊಡೆದು ಬಾಯಳಿದಾರನಱಸಿದಪೆಯೆಂದಡೆನ್ನೊಡೆಯನನದೆಲ್ಲಿಹನು ಪರ್ವತದಲೇಂ ಪೆಸರು ಮಲ್ಲಿಕಾರ್ಜುನನೆಂಬುದುಕಡೆಗವರ ಕಾಣಬೇಕೇ ಬೇಕು ಬೇಹಡೆಮ್ಮೊಡನೆ ಬಾ ತೋರ್ಪವೆನೆ ಹೈ ಬಂದಪೆಂ ತೋಱಿಕೊಡಿರಯ್ಯ ಎಂದು ಪೊಡಮಟ್ಟು ನಂಬುಗೆಗೊಂಡು ಹೋದನಾ ಪರುಷೆಯೊಡನೆ
ಅತ್ತಲಾತಂ ಪರುಷೆಯೊಡನೊಡನೆ ನಡೆಯೆ ಹಿಂದಿತ್ತಲೂರೊಳಗೆಂದಿನಂತೆ ಕಱುಗಳು ಬಪ್ಪಹೊತ್ತಾಗೆ ಸುಗ್ಗವ್ವೆ ಮಗನ ಬರವಂ ಪಾರ್ದು ಹೊಱಗೆ ಬಾಗಿಲ ಹುದಿಯನುಹತ್ತಿನಿಂದಿರ್ದು ಬಪ್ಪವರನಡಿಗಡಿಗೆ ಕೇಳುತ್ತ ನೋಡುತ್ತ ನೆನೆಯುತ್ತ ಸುಯ್ಯುತ್ತ ಮಱುಗುತ್ತಮಿರಲಾ ಸತಿಯ ಹರುಷವಸ್ತಮಿಸುವಂತಿನನಸ್ತಗಿರಿಗಿಳಿದನು
ಕಡುಚಿಂತೆ ಮೊಳೆವಂತೆ ರಜನಿ ಮೊಳೆವಾಗ ಪತಿಹಿಡಿಹಡೆಯೆ ಬಪ್ಪ ಪಡೆಯಂತೆ ಕಱುಗಳು ಹಾದಿಯೆಡೆವರಿದು ತಮಗೆ ತಾವೇ ಬಪ್ಪುದಂ ಕಂಡು ಬಳಿಕ ಸೈರಿಸಲಾಱದೆಮಡದಿಯವರವರ ಮನೆಮನೆಗಳಿಗೆ ಹೋಗಿ ಮಗನೊಡನಾಡಿಗಳಿಗೆನ್ನ ಮಗನೇಕೆ ಬಾರನೆಂದೊಡೆ ಬೇಱೆಹೋದನಿಂದೆಮ್ಮೊಡನೆ ಬಾರನಾವಱಿಯೆವೆಂದವರೆಂದರು
ಕೆಟ್ಟೆನಿನ್ನೇವೆನೆನ್ನಣುಗನಡವಿಯೊಳು ಹೊಲಗೆಟ್ಟನೊ ಸರ್ಪನಗಿಯಿತ್ತೊ ಪೆರ್ಬುಲಿಗೆ ಮೈಗೊಟ್ಟನೋ ಮರನೇಱಿ ಬಿದ್ದನೋ ನೀರೊಳದ್ದನೊ ನಂಜುಮುಳ್ಳಡಿಯನುನಟ್ಟು ನಡೆಗೆಟ್ಟನೋ ಗರಗಿರಂ ಹೊಡೆದವೋಬಟ್ಟೆಯೊಳು ಕಳ್ಳರಿಂ ಹಿಡಿವಡೆದನೋ ಹುಯ್ಯಲಿಟ್ಟಾರ್ಗಿದಂ ಪೇಳ್ವೆನೆಮ್ಮವರ್ ತಳುವಿದರೆನುತ್ತೂರ ಹೊಱವಂಟಳು
ಮುಂದೇನು ಸುಳಿದೊಡಂ ಸಿದ್ಧರಾಮಾ ಎಂದುಹಿಂದೆ ಹುಲುಗಿಱಿಕೆನಲು ಸಿದ್ಧರಾಮಾ ಎಂದುಅಂದು ಮಾದಾರಿಯೊಳು ಬಪ್ಪರಂ ಸಿದ್ಧರಾಮಾ ಎಂದು ಕರೆದು ಕರೆದುನಿಂದಿರದೆ ಹರಿದು ತಡವರಿಸಿ ಕಾಣದೆ ಮನಂನೊಂದು ಹಲುಬುತ್ತವಿರಲಳುವ ಸತಿ ಯಾವಳೋಎಂದು ಕೇಳುತ್ತ ಕೆಯ್ಯುತ್ತ ಕೆಲಸಂ ತೀರ್ದು ಬಂದರಾ ತಮ್ಮವರ್ಗಳು
ಮತ್ತಾವಳಱಿಮರುಳನಂ ಹೆತ್ತ ಕಡು ಪಾತಗಿತ್ತಿಯಾನೆಂದಡೇನಾದನಿನ್ನು ಬಾರನತ್ತ ಕಱು ಬಂದವೆನಲಾಕೆವೆರಸವರೆಲ್ಲ ಹರಿದು ಬಂದಱಸುತಿರಲುಕತ್ತಲೆಯ ಕಾಹೊನಲನೀಸಾಡುವಂತೆ ತಡವುತ್ತ ನೋಡುತ್ತ ಹರಿಯುತ್ತ ಹಳವಿಸುತ ಬಾಯ್ಬತ್ತಲೊಱಲುತ್ತ ತಮತಮಗೆ ಕರೆದರು ಕರೆದರೇನೆಂಬೆನಚ್ಚರಿಯನು
ಒಬ್ಬನೆಲೆ ಸಿದ್ಧರಾಮಾ ಎಂದು ಹಿಂದೆ ಮತ್ತೊಬ್ಬನೆಲೆ ಧೂಳಿಮಾಕಾಳನೇ ಎಂದು ಮತ್ತೊಬ್ಬನೆಲೆ ತಮ್ಮ ಮರುಳುಮಗನೇ ಎಂದು ಮತ್ತೊಬ್ಬನೆಲೆ ತಮ್ಮ ಎನುತಮಬ್ಬಿನೊಳು ಮೆಳೆಗಳೊಳು ಕುಳಿಗಳೊಳು ಕಲುಗಳೊಳಗಬ್ಬಿಯೊಳು ಬೆಳೆಗೆಯ್ಯ ಸಂದಿಯೊಳು ಗೊಂದಿಯೊಳುಗಬ್ಬರಿಸಿ ತಮತಮಗೆ ಚೀಱಿ ಕರೆದರು ಕರದರೇನೆಂಬೆನದ್ಭುತವನು
ಗಿರಿಶನರ್ಧಾಂಗಿ ಕೊಂಡಾಡಿದೆನ್ನಂ ನಿರಾಕರಿಸಿ ಕಱುಗಾಯಲಟ್ಟಿದರೆಂದು ಮುನಿದೆಯೋಗುರುಸಿದ್ಧರೇವಣಾರ್ಯಂ ಬಂದು ನಮಿಸಿ ಸೂಚಿಸಿದ ತೆಱದಿಂ ಕಾಣದೆಮರುಳೆಂದು ಬಗೆದರೆಂದಡಗಿದೆಯೊ ಈ ನಾಡನರಕಿಗಳ ಸಂಗವೆನಗೇಕೆಂದು ಹೋದೆಯೋಕರೆದಡೇಕೋಯೆನ್ನೆ ಸಿದ್ಧರಾಮಾ ಎಂದು ನುಡಿದಾಕೆ ಶೋಕಿಸಿದಳು
ಎಂತು ಮಱೆವೆನೊ ಬೆಣ್ಣೆಯಿಕ್ಕಿ ಮೊಲೆಯೂಡಿ ಮೈಯಂ ತೊಳೆದುವುಣಲಿಕ್ಕಿ ಸಾಕಿ ಲೋಕದ ಬಾಲರಂತಿರ್ದು ಕಳೆಯೆ ಸೈರಿಸುವೆನೆನಲಲ್ಲದೀ ಬಯಲು ಬರಿದಾಕಾರವಾದಂತಿಹ ಮಹಾಂತ ನೀನೆಂತಡಂಗಿದೆ ಜನನದಂತಸ್ಥವಱಿಯದವರೀ ವೃದ್ಧರಿಗೆ ಈತನೆಂತು ಮಗನಾದನೆಂದೆಲ್ಲರುಂ ನಗಲು ನೋಂತೆನೆ ಸಿದ್ಧಯೆಂದತ್ತಳು
ಆ ನಿಘ್ರವಂ ನೋಡಲಾಱದೀಶ್ವರನೊಬ್ಬಮಾನವನ ರೂಪಿನಿಂ ಬಂದಿದಾರ್ಗಳುವೆಯೆಲೆಮಾನಿನಿಯೆ ಎನಲೆನ್ನ ತನಯಂಗದೇಕೆ ಹೊಲಗೆಟ್ಟನೆಂದೆಂದೀಗಳುಕೂನವೇಂ ಕೂಸುವರೆಯದ ಜಾಡ್ಯನತಿ ಕೆಂಚನೇನಕ್ಕೆ ಶಿವ ಮರುಳನಲ್ಲಲೇ ಅಹನಾದಡಾನಿಂದು ಕಂಡೆನಾ ಹೋಗುತೈದನೆ ಪರ್ವತದ ಪರುಷೆಯೊಳಗೆಂದನು
ಬಱಿಯ ಮಾತಲ್ಲವೇ ಅಲ್ಲ ದಿಟವೇ ದಿಟಂಕುಱುಹುಂಟೆ ಉಂಟಾವುದುಬ್ಬಿದ ಶಿರಂ ಕೆಂಚನಱೆಮರುಳ ಮೌನಿ ಸ್ವತಂತ್ರನೆನಲೆಮ್ಯಾತನಹನಾದಡಿನ್ನಲಸದೆಒಱಲಬೇಡೆಂದು ಸಂತೈಸುತಿದ್ದಾಗ ನೇಸಱು ಮೂಡೆ ಕಂಡು ನೀನುಮ್ಮಳಿಸಬೇಡ ನಾನಡೆಸಿ ತಹೆನೆಂದವರ ಹೆಮ್ಮಗಂ ಬೊಮ್ಮಯ್ಯನಾಗಳಂತೇ ಹೋದನು
ಅಲ್ಲಲ್ಲಿ ನೋಡುತವರವರ ಕೇಳುತ್ತ ನೆರವಿಲ್ಲದಿರೆ ನಿಲುತ ಕೂಡಿದೊಡಾಗ ನಡೆಯುತ್ತಮೆಲ್ಲನೀತಂ ಬರಲು ಮುಂದೆ ಮುಂಚಿದ ಪರುಷೆಯೊಡನೊಡನೆ ದಾರಿಯೊಳಗೆಮಲ್ಲಯ್ಯ ಮಲ್ಲಯ್ಯಯೆಂದು ಕರೆಯುತ್ತ ಬಿಟ್ಟಲ್ಲಿ ಬಿಡದೆಯ್ದಿ ಕಾಂಬಾತುರದ ತವಕದಿಂಪಲ್ಲವಿಸಿ ಪರ್ವತವನೇಱಿದಂ ಸಿದ್ದರಾಮಂ ದುರಿತಗಜಭೀಮನು
ಅಟ್ಟಡವಿಯೆನ್ನದೂರೆನ್ನದೆಡೆಯೊಳು ಬಪ್ಪಬಟ್ಟೆಯೆನ್ನದೆ ಹಗಲಿರುಳದೆನ್ನದೇ ನಿನ್ನಹುಟ್ಟಿದೂರ್ ಮೊದಲಿಲ್ಲಿತನಕೊಱಲಿ ಕರೆದು ಕರೆದಲವತ್ತು ಹಂಬಲಿಸುತಬೆಟ್ಟದೊಳು ಘಟ್ಟದೊಳು ಸರುವಿನೊಳು ದರುವಿನೊಳುಕೆಟ್ಟ ಸಂದಿಯೊಳು ಗೊಂದಿಯೊಳಱಸಿ ಬಳಲಿ ಮನನಟ್ಟು ಕಣ್ ದಣಿವನ್ನ ನೋಡು ಬಾ ತಂದೆಯೆಂದೊಯ್ದರಾ ಶಿವನಿಳಯಕೆ
ಎಲ್ಲಿರ್ದಪಂ ತೋಱಿರಯ್ಯ ದಮ್ಮಯ್ಯ ತಳುವಿಲ್ಲಲೇ ಇಲ್ಲೀಗ ಕಂಡೆನಾದಡೆ ಚರಣದಲ್ಲಿ ದೊಪ್ಪನೆ ಬಿದ್ದು ಬಿಗಿದು ತರ್ಕೈಸಿ ಬಸಿಱಂ ಬಗಿದು ಹೊಕ್ಕು ಬೆರಸಿತಲ್ಲೀಯವಪ್ಪನೆಂದಲವರುವ ಕರಣಂಗಳೆಲ್ಲವಂ ಕಣ್ಣ ಬಾಗಿಲೊಳಿಟ್ಟುಕೊಂಡೆಯ್ದಿಮಲ್ಲಯ್ಯ ಮಲ್ಲಯ್ಯಯೆನೆ ಮಂದಿಯಂ ಬಗಿದು ಲಿಂಗಮಂ ತೋಱಿಸಿದರು
ಹಿಂದೆ ಕಂಡಾ ಮೂರ್ತಿಯೆಂದು ಬಗೆದತ್ಯಾರ್ತದಿಂದ ನಡೆ ನೋಡಿ ಲಿಂಗಾಕಾರಮಂ ಕಂಡುನೊಂದಡವಿಯೊಳಗೆ ಹೊಲಗೆಟ್ಟವ್ವೆಗತ್ತನ್ಯಳಂ ಕಂಡ ಶಿಶುವ ಪೋಲ್ತುತಂದೆ ಬಾ ತೋಱಿದಪೆವೆಂದಡಱಿಯದೆ ನಂಬಿಬಂದು ಕೆಟ್ಟೆಂ ಕೆಟ್ಟೆನೆಂದು ಮಂದಿಗೆ ಮಱುಗುತಂದು ಮಲ್ಲಯ್ಯ ಮಲ್ಲಯ್ಯನೆನುತಲಿ ಸಿದ್ದರಾಮಯ್ಯ ಚಿಂತಿಸಿದನು
ಬಱಿದೇಕೆ ಬಾಯ್ಬಿಡುವೆ ತಮ್ಮ ಬೇಡೀ ಲೋಕವಱಿಯುತಿರೆ ಮಲ್ಲಿಕಾರ್ಜುನನೀತನೆಂದೊಡಾನಱಿಯೆನೇ ಸಾರೀತನಲ್ಲೆನಲು ನೀನಱಿವ ಕುಱುಹಾವುದೆನೆ ಮುಡಿಯೊಳುಹೆಱೆಯುಂಟು ತೊಱೆಯುಂಟು ಜಡೆಯುಂಟು ಕೊರಳೆಡೆಯಕಱೆಯುಂಟು ಪಂಚಮುಖವುಂಟು ದಶಭುಜವುಂಟುಕಿಱಿಯ ಫಣಿದೊಡವುಂಟು ನೊಸಲ ಕಣ್ಣುಂಟಾತನಂ ತೋರಿಕೊಡಿಯೆಂದನು
ಆತನಂ ತೋಱಲಾವಱಿಯವಳಬೇಡೆಂದಡೇತಱದೊಳಂ ಮಾಣದಿರ್ದೊಡಾಸತ್ತು ಬಿಟ್ಟೈತಂದರಿತ್ತಲಿವನೆಂತುಮಱಸುತ್ತಾಗಳಳಲುರಿಯ ವಿರಹದಿಂದಭೀತಿ ಬೀತಾಱೇಳವಸ್ಥೆ ತಲೆದೋಱಿ ಕಾಬಾತುರದೊಳೆದ್ದು ಹೊಱವಂಟು ಬಳಿಕಾನಾವಗೋತೆನಾರ್ಗೆಲ್ಲಿರ್ದೆನೇನಾದೆನೆಂದಱಿಯದಱಸಿದನದೇವೊಗಳ್ವೆನು
ಗಿಡುಗಳೊಳು ಹೊಕ್ಕು ಮಲ್ಲಯ್ಯ ಮಲ್ಲಯ್ಯ ಕಮೃಡುಗಳೊಳು ಹೊಕ್ಕು ಮಲ್ಲಯ್ಯ ಮಲ್ಲಯ್ಯ ಪೇರಡವಿಯೊಳು ಹೊಕ್ಕು ಮಲ್ಲಯ್ಯ ಮಲ್ಲಯ್ಯ ಮಾರ್ದನಿಗೊಡುವ ಗುಹೆಗುಹೆಗಳನಡುವೆ ಹೊಕ್ಕಯ್ಯ ಮಲ್ಲಯ್ಯ ಮಲ್ಲಯ್ಯ ಹೊದಱೆಡೆಯ ಹೊಕ್ಕಯ್ಯ ಮಲ್ಲಯ್ಯ ಮಲ್ಲಯ್ಯ ಬಾತಡೆಯದೋಯೆನ್ನು ಮಲ್ಲಯ್ಯ ಮಲ್ಲಯ್ಯಯೆಂದೊದಱಿ ಕರೆದಂ ಕರೆದನು
ಆವೆಡೆಯೊಳಿರ್ಪೆಯೋ ಮಲ್ಲಯ್ಯ ನೀನಿರ್ಪಠಾವಿದೆಂದಱಿಪಿಯಡಗುವರೆ ಎಲೆ ಮಲ್ಲಯ್ಯಗಾವಿಲನು ಮರುಳನಿವನತ್ತಡೇನೆಂದೇಳಿಲವ ಮಾಡದಿರು ಬಲ್ಲಡೆಆವುದುಂ ಗತಿಯಿಲ್ಲದಭಿಮಾನಿ ಸಜ್ಜನರುಆವವಸ್ಥೆಯನೈದಲದು ನಿನ್ನ ತಾಗುವುದುಸಾವನ್ನ ಶ್ರವ ಬೇಡ ನಿಜರೂಪ ತೋಱೆಂದು ಒದಱಿ ಕರೆದಂ ಕರೆದನು
ಸುತ್ತಿದಳಿಗಿಳಿ ಕೋಗಿಲೆಯ ಸೊಗಸುತಿಹ ನಾದದತ್ತಲಿರ್ದಪನೆಂದು ಹೋಗಿ ಕಾಣದೆ ಬಾಯಿಬತ್ತಲೊಱಲಿದು ಕರೆದು ಕೇಳದಿರೆ ಹಂಬಲಿಸಿ ಹರಿಯುತ್ತ ಗಿರಿತಟದಲಿಬೆತ್ತ ಬಿದಿರಿಡಿದಡಿಸಿ ಬೆಳೆದ ಮೆಳೆಗಳ ನಡುವೆಹುತ್ತಡರ್ದಱಿಯದ ಸಮಾಧಿನಿಷ್ಠರ ಚಿತ್ತಹತ್ತಿದಡೆ ಸಿಲುಕಿ ನಿಂದೆಯೊ ಏಕೆ ಓಯೆನ್ನೆ ಮಲ್ಲಯ್ಯ ಎಂದತ್ತನು
ಗಂಗೆಯನು ತಳೆದನಾವೆಡೆಯೊಳಿರ್ದಪನೊ ಮಱಿದಿಂಗಳನು ಮುಡಿದನೆಲ್ಲಿರ್ದಪನೊ ಹೊಳೆವ ಫಣಿಪಂಗಳನು ತೊಟ್ಟವನು ಎತ್ತ ಹೋದಂ ಎತ್ತನೇಱಿರ್ದನೇನಾದಪಂಅಂಗನೆಯನೆಡದ ದೇಹದೊಳು ಮಡಗಿಟ್ಟವನಕಂಗಳಿಂಗಳದಿಂದ ಪುರವ ನೆಱೆ ಸುಟ್ಟವನನಂಗಭಸಿತನ ಕಂಡಿರೇನಯ್ಯ ಅಯ್ಯ ಎಂದವರವರ್ಗೆ ಬಾಯ್ವಿಟ್ಟನು
ಹೀನ ಮಾನವರನೀ ಬೇಡರಂ ಚಂಚರಂಕಾನನದ ವೃಕ್ಷಲತೆ ಗುಲ್ಮಮೃಗ ಪಕ್ಷಿಯಂವಾನರಂ ಕಿನ್ನರ ವಿಹಂಗ ಮೊದಲಾದ ನಾನಾ ಜೀವಜಾಳಂಗಳಂಏನೆಂದು ಆಯ್ಕೆಯಯೆಂದು ಬಾಯ್ಬಿಟ್ಟೆಂದಡೇನಪ್ಪುದೆಂದು ಕಪಟದಿ ಶಿವಂ ಕೋಪಿಸಲುನಾನಾಱಿನಯ್ಯಯೆನಲಾಱಿ ಜಗಭರಿತ ತೇಜೋರೂಪ ಶಿವಯೆಂದನು
ಕರೆದಡೇಕೋಯೆನ್ನೆ ಮಲ್ಲಯ್ಯ ಬೆಂಬತ್ತಿಹರಿದಡೇಕೋಯೆನ್ನೆ ಮಲ್ಲಯ್ಯ ಕಡುಬಿಸಿಲಉರಿಗೆ ನೆಲಕಾಯ್ದ ಹುಡಿಯೊಳಗೆ ಹೊರಳಿದು ಮಿಡುಕೆ ಕರುಣವಿನಿತಿಲ್ಲ ನಿನಗೆಮರುಳಂಗನಾಥಂಗನನ್ನಗತಿಕಂಗಿನ್ನುಕರುಣಿಸೋ ಎಂಬ ಪ್ರಲಾಪಕ್ಕೆ ಸೈರಿಸದೆತರುಗುಲ್ಮ ಲತೆಗಳೆದ್ದಳುತಿರ್ದವಂಬರದ ಕಂಬನಿಯ ಕೂಡೆಕೂಡೆ
ಕರೆಕರೆದು ಗಹ್ವರದ ಮಾರ್ದನಿಗಳಂ ಕೇಳ್ದುಗಿರಿಶನೋಯೆಂದನೆಂದೆಯ್ದೆ ಕಣ್ಮುಚ್ಚಿ ಹೃತ್ಸರಸಿಜದೊಳಿರ್ದ ರೂಪಂ ಕಂಡು ಕಣ್ಣೆಱೆದು ನೋಡಿ ಕಾಣದೆ ಮಱುಗುತಭರವಸದಿ ನಡೆಯುಡುಗಿ ಬಿಱುಬಿಸಿಲೊಳಲ್ಲಲ್ಲಿಹರಿಹರಿದು ಬಗಿಬಗಿದು ನೊಂದು ಪರಿಪರಿಯ ಕಮ್ಮರಿಗಳೊಳು ನೋಡುತ್ತ ಬಾಡುತ್ತ ನೆಱೆ ರುದ್ರಗಮ್ಮರಿಗೆ ನಡೆತಂದನು
ಘನಸತ್ಯಮಯನಪ್ಪ ನೀಂ ಪರ್ವತದಲಿಪ್ಪೆನೆನೆ ನಿನ್ನ ಕಾಣಲೆಂದಾನಿಲ್ಲಿಗೈತಂದೊಡನಿಮಿತ್ತಮುನಿದನಂತಡಗುವರೆ ಹಿಂದೆ ಕೆಯ್ಯೊಳಗೆ ತೋಱಿದ ನಿಜವನುಎನಗೀಗ ತೋಱುವುದು ಲೇಸ ಸಾಱಿದೆನು ದುರ್ಜನವಳಿಯಲಿನ್ನೊಮ್ಮೆ ಕರೆವೆನಲ್ಲಿಂ ಮೇಲೆತನುವನೀ ಕಮ್ಮರಿಗೆ ಕುಡುವೆನೆಂದಾಡುತಿರೆ ಪರವಶಂ ಕೈಮಿಕ್ಕುದು
ಹೆಱೆಸೂಡಿದನ ಹಿಂದೆ ಕಂಡ ಮೂರ್ತಿಯ ಭಾವವೆಱಗಿದಂತಾಗಿ ಚಿತ್ತದೊಳಗಚ್ಚೊತ್ತಿದಂತಱಿದ ಸೊಗಸಿನ ಸೊಕ್ಕು ಮಿಕ್ಕು ಹೊಱಗಂ ಮಱೆದು ಸೈವೆಱಗುವಟ್ಟು ಹಿರಿಯಸಱಿಯಲ್ಲಿ ನಿಂದೂರ್ಧ್ವಬಾಹುವಾಗಿಯೆ ಬಾಯತೆಱೆದು ವಾಯುವೆ ಭಕ್ಷ್ಯವಾದಂದು ತಲೆಯಿಟ್ಟುಬಿಱುವಿಸಿಲನಾಂತಿರಲು ಕಂಡು ಸೈರಿಸದೆ ಬಳಿಕೆಚ್ಚಱಿಸುತಿಂತೆಂದನು
ಕಡುಮೋಹವಱಿಯಲಾನಡಗಿದಡೆ ಭಾಷೆಯಂಪಿಡಿದನೇಗುವೆನಿವಂ ಕರೆದ ಬಾಯಿಂದ ಪೊಱಮಡುವೆನೋ ಕರೆದಡೋಯೆಂಬೆನೋ ಕರೆದ ದೆಸೆಯಿಂದೆದ್ದು ಹರಿತಪ್ಪೆನೊಪೊಡವಿಯಂ ಬಗಿದೇಳ್ವೆನೋ ಮೀಱಿ ಗಗನದಿಂದೊಡಬೀಳ್ವೆನೋ ಬೀಳ್ವ ಕಮ್ಮರಿಯ ದರಿ ಗುಣ್ಪುಗೆಡೆ ಪೂಳ್ದು ಬೆಳೆವನೋ ಎಂದು ಶಿವನನುಗೆಯ್ಯುತಿರ್ದನತಿ ತವಕದಿಂದ
ಕೊರಳೆತ್ತಿ ಕೈಮುಗಿದು ನೆಗಪಿ ಕಣ್ಣು ಮುಚ್ಚಿಕರುಣಾಬ್ಧಿ ಮಲ್ಲಿನಾಥಾ ಎಂದಡೋ ಕಂದಕರೆದು ಬಳಲಿದೆಯೆನುತ್ತೆತ್ತಿ ತರ್ಕೈಸಿ ತಲೆದಡವಿ ಮುಂಡಾಡಿ ನೋಡಿತರುಣೇಂದು ಸುರನದಿ ಜಟಾಮಕುಟವಸಮಾಕ್ಷವುರಗಕುಂಡಲವೈದುವದನವೀರೈದು ತೋಳ್ಗರಳಗಳವಿಭಚರ್ಮವೆಡದ ಗಿರಿಸುತೆವೆರಸಿ ತೋಟದಂ ನಿಜರೂಪನು
ವರಮೂರ್ತಿಯಂ ಕಂಡು ಹಿಗ್ಗಿ ಹಾರೈಸಿ ಸೈತಿರಿಸಲಱಿಯದೆ ಕುಣಿದು ಕುಕಿಲಿಱಿದು ಕುಂಬಿಕ್ಕಿಚರಣದಲಿ ಬಿದ್ದ ಬಾಲಕನ ತೊದಳಂತುವಂ ಕೈಯ ಕಂಪನದ ಕಡುಹಂಸುರಿವ ಸುಖಜಲದ ಹೊನಲಂ ಸ್ವೇದದೊಱತೆಯಂಪರವಸದ ಮಹಿವೆಯಂ ಗದುಗದದ ಭಾರಮಂನೆರೆದ ಪುಳಕದ ಘಟ್ಟಿಯಂ ಕಂಡು ಬೆಱಗಾದರಾ ಪುಣ್ಯದಂಪತಿಗಳು
ಎಳಸಿ ಮೊಗವೆತ್ತಿ ತರ್ಕೈಸಿ ಸೋಗಿಲೊಳಡ್ಡವಿಳುಹಿ ಮೋಹದಿ ತೊರೆದ ತನ್ನ ತೊಳಗುವ ಕುಚಂಗಳ ಸುಧಾರಸವನೆಡೆವಿಡದೂಡಿ ಮೈದಡವಿ ಮುಂಡಾಡಿ ಪರಸೆ ಗಿರಿಜೆಬಳಿಕಲೀಶಂ ವಜ್ರಕುಂಡಲವನಿಕ್ಕಿ ನಿರ್ಮಳತನುವನಧಮರೀಕ್ಷಿಸಲಾಗದೆಂದು ತಾಂತಳೆದ ನಾಗಾಜಿನಕ್ಕೊಗೆದ ಕಂಥೆಯನಿತ್ತನಪ್ರತಿಮ ಬಾಲಕಂಗೆ
ಸ್ವೀಕರಿಸಿ ಸರ್ವಸಿದ್ಧಿಗೆ ತವರ್ಮನೆಯೆನಿಪಲಾಕುಳವನಿತ್ತೆತ್ತಿ ತೊಡೆಗೆ ತೆಗೆದಗಜೆ ನೋಡೀ ಕುಮಾರಕನ ಭಕ್ತಿ ಜ್ಞಾನ ವೈರಾಗ್ಯಕೆಣೆಯಪ್ಪ ವೇಷವಾಯ್ತುಈ ಕೈಯಲಿವನ ಕಲಿತನವನಾರೈವೆನೆಂದಾ ಕಾಲಭೈರವನನಾಗಳೇ ಕರಸಿದನುನಾಕಿಗಳ ನಾಯಕರ ಮೌಳಿಗಳ ಮಣಿವೆಳಗು ಹೊಳೆವ ಪದಪಂಕೇಜನು
ಸುತ್ತಿ ತಂದೀತಂಗೆ ನಮ್ಮ ಪರ್ವತದ ನಾಲ್ವತ್ತೆಂಟು ಗಾವುದದೊಳುಳ್ಳ ಲೇಸುಗಳೇಸನಿತ್ತೆಲ್ಲವಂ ತೋಱಿ ತಾಯೆಂದು ಬೆಸನನಿತ್ತತಿ ಕರುಣದಿಂ ಹೇಳಲುಉತ್ತಮದ ಮೇರುವಿನ ಕೂಡೆ ಪರುಷದ ಮಱಿ ನಗುತ್ತಾಡಹೋಹಂತೆ ಭೈರವನ ಸಂಗಡದೊಳಾತ್ತಬಳ ಚಿತ್ತಭವ ಮತ್ತಗಜಕಂಠೀರವಂ ಸಿದ್ದಪತಿ ಹೋದನು


