EN | KA

Menu

VII

Siddharāma Caritre

ದೇಶವೆಲ್ಲಱಿಯೆ ಶಿರದಿಂ ಪಾಳಮಂ ಗೆಲಿದುರೋಷದಿಂ ಬಂದ ಖರ್ಪರನ ಕೃಪೆಯಿಂದೆತ್ತಿತಾ ಸುರಿಗೆಯಿಂ ಸಿಡಿಲಿನಿಱಿಯದುಘೆಯ ಕಾಳನಂ ಸಲಹಿದಂ ಸಿದ್ಧೇಂದ್ರನು ||

ಹಸಿವಿಲ್ಲದಿಪ್ಪ ತಣಿವೆವೆಯಿಕ್ಕದಿಹ ಕಂಗಳುಸುರಿಕ್ಕದಿಹ ಜೀವ ಹೆಜ್ಜೆಯಿಲ್ಲದ ಪದಂಬೆಸನವಿಲ್ಲದ ಗಂಡುರೂಹು ನೆಳಲಿಲ್ಲದಿಹ ತನು ಚಲನವಿಲ್ಲದ ಮನಂಹುಸಿಯಿಲ್ಲದಿಹ ಮಾತು ಬಯಕೆಯಿಲ್ಲದ ಚಿತ್ತವೆಸೆವ ಶಿವಸಿದ್ಧರಾಮಂ ಸುಖದೊಳಿರಲಿನ್ನುವಸುಧೆ ಮೆಚ್ಚಲು ಮಾಳ್ಪ ಸಾಮರ್ಥ್ಯ ಸಂಭ್ರಮವನಾಲಿಪುದು ಸರ್ವಜ್ಞರು

ಬಿನದದಿಂ ಕೇತಾರ ಗುರುಗಳುಂ ಸಂದ ಹಾವಿನ ಹಾಳ ಕಲ್ಲಿದೇವಂಗಳುಂ ಬಂದೊಂದುದಿನವಿರುಳು ಹೊತ್ತು ಹೋಗದೆ ಕುಳ್ಳಿರ್ದ ಮಂಠೆಯದ ಮಂದಿಯೊಳಗೆಘನನಿನದದಿಂದುಲಿವ ಲಿಂಗಭೋಗದ ವಾದ್ಯದನುವನಾಲಿಸಿ ಭಾಪು ಶಿವಸಿದ್ಧಪತಿಯೆಂದುಮನವುಕ್ಕಿ ಸುಜನನೊರ್ವಂ ಪೊಗಳ್ದಡೇಕೆ ಪೊಗಳ್ದಪೆಯೆಂದನೊರ್ವಧಮನು

ನಾವಱಿಯೆ ಸೊನ್ನಲಿಗೆಯೆಂಬ ಕಿಱುವಳ್ಳಿಯಿದುಗಾವದಿಗಳಿಕ್ಕೆ ದಾರಿದ್ರ್ಯದಾಗರವಿದಱೊಳೇವೊಗಳ್ವೆನೊರ್ವ ಶಿವಸಿದ್ಧರಾಮಂ ಪುಟ್ಟೆ ಕಣ್ಗೆ ಮಂಗಳವಾದುದುಭಾವಿಸಲು ಸಿರಿಗೆ ಸಿಂಗರವಾಯ್ತು ಸರ್ವ ವಿದ್ಯಾವಾಸವಾಯ್ತು ಶಿವಲಿಂಗ ಬೀಡಾದುದಿದನಾವವಂ ಸೈರಿಸದೆ ನಿಂದಿಸಿದವಂಗಾಗದಿಹುದೆ ನಾಯಕನರಕವು

ಧನವುಳ್ಳ ಮಾನವಂ ಮಾಡಿದೊಡೆ ರಚನೆಯಲಿಘನವಾಗಲಪ್ಪುದಲ್ಲದೆ ಮಹಿಮೆಗಳೊಳು ನೆಟ್ಟನೆ ಕಾಶಿಗೆಣೆಯಹುದೆ ಗಯೆಗೆ ಹೊಯ್‌ಕೈಯಹುದೆ ಪರ್ವತಕೆ ಸರಿಯಪ್ಪುದೇಘನ ಹೇಮಕೂಟಕ್ಕೆ ಮಿಗಿಲಹುದೆಯವಕೆ ಹೋಹನಿತು ಸಜ್ಜನರಿದಕೆ ಬಪ್ಪರೇ ಎನೆ ಕೇಳ್ದುಮನನೊಂದು ಬಳಿಕಲ್ಲಿ ನಿಲಲೊಲ್ಲದತಿವೇಗದಿಂ ಹರಿದು ಗುರುವಿನೆಡೆಗೆ

ಬಂದು ವಂದಿಸಿ ದೇವ ಚಿತ್ತೈಸು ನೆರೆದ ಕಾಳ್ಮಂದಿಯಿಂದೆಂತೆಂದುದೆಂದಾದ ವೃತ್ತಾಂತದಂದಮಂ ಪೇಳ್ದಡೆಂಬವರ ಮಾಣಿಸಲಹುದೆಯೆನಲುದಾಸೀನ ಬೇಡಮುಂದೊಬ್ಬರಾಡದಂತಿಳೆಯ ದಿವ್ಯಕ್ಷೇತ್ರದಿಂದ ಮಿಗಿಲೆನಿಸುವಂತಖಿಳ ಜನ ನಂಬುವಂತೊಂದು ಸಾಮರ್ಥ್ಯಮಂ ತೋಱಿ ಕರುಣಿಪುದೆಂದು ಕಾಲ್ವಿಡಿದರಾಯಿಬ್ಬರು

ಇನಿತರ್ತಿ ನಿಮಗೆ ಬೇಕಾದಡೀ ಧರೆಯ ಮೇಲೆನಿತು ದಿವ್ಯಕ್ಷೇತ್ರವುಂಟನಿತಱಿಂದವಿಂದಿನ ಕಿಱಿಯ ಸೊನ್ನಲಿಗೆ ಘನವೆನಿಸಿ ದೃಷ್ಟಮಂ ದಿವ್ಯಮಂ ಕರದಿ ಗೆಲಿದುಜನದ ಸಂದೇಹಮಂ ಕಳೆದು ವಿಶ್ವಾಸವಾಯ್ತೆನಿಸಿ ಮುಂದೀ ಲೋಕದವರೈದೆ ಕಾಣಬಹಮನವ ಮಾಡುವೆನೆಂದು ಭಾಷೆಗೊಟ್ಟಂ ಹುಸಿಯ ಹೆಸರನಱಿಯದ ವೀರನು

ನೆರೆಹೊರೆಯ ಹಳ್ಳಿಗಳ ಹಿರಿಯೂರ ಪಟ್ಟಣದಪುರದಗ್ರಹಾರದ ಸಮಸ್ತ ಭಕ್ತರನು ಹಿರಿಯರನಜ್ಞತಜ್ಞರಂ ಶೂನ್ಯಹೃದಯರನನ್ಯಸಮಯದೊಳಗಾದೆಲ್ಲರಂಕರಸೆ ದೆಸೆ ಬೆಸಲಾಯಿತೆನಲು ಲಿಂಗದ ಮುಂದೆನೆರೆದ ಸಭೆ ನಡನಡುಗೆ ಪಂಚಲೋಹದ ಗುಂಡನರರೆ ತಿದಿ ಮಸಿಯಿಕ್ಕುಳಂ ತರಿಸಿ ಭಾಷೆಯಂ ಬರೆಸಿದನದೇವೊಗಳ್ವೆನು

ನುಡಿಯ ನುಡಿದಾಲಿಪುದು ನಾನೀವ ಭಾಷೆಗಳಗಡಿಯನೀಯೆಕ್ಕವಿಂಡಂ ಪೊಕ್ಕು ವೇಷಮಂಪಡೆದು ತಂತಮ್ಮ ಬೇಪಾರದೊಳು ಸವಿಸವಿದು ಸಂದು ಮೈಮಱಿದಿರ್ದೋಡಂಕಡೆಗೆ ಕೈಲಾಸವಹುದೀ ಭಾಷೆ ಹುಸಿದೊಡೆನೈಡಗೈಯ ನಡುತಳವು ಸುಡುವುದೀ ಗುಂಡು ಬಿಡೆಸುಡದಿರಲ್ಕಿನ್ನಾದೊಡಂ ನಂಬಿರೇ ಕಪಿಲಸಿದ್ಧ ಮಲ್ಲೇಶ್ವರನನು

ರೂಪುಳ್ಳದಾವ ಜೀವಿಗಳಾದೊಡಂ ಹಲವುಪಾಪಮಂ ಮಾಡಿ ಕುಷ್ಠಾಗಿ ಬಂದಭಿನವಶ್ರೀಪರ್ವತದ ನಾಲ್ಕು ಬಾಗಿಲೊಳಗಳಿಯೆ ಸಾಲಿಗನು ಸಾಲವನು ತಿರ್ದಿಪೋಪಂತೆ ಪಾಪಕ್ಕೆ ನಿರ್ಣಯಂಗಂಡು ನೆಱೆಪೋಪನಾ ಜೀವನೀ ಭಾಷೆ ಹುಸಿದೊಡೆ ಸುಡುವುದೀ ಪರಿಯ ಬೆರಳು ಸುಡದಿರಲು ಕಂಡಿನ್ನು ನಂಬಿರೆ ಮಲ್ಲಿಕಾರ್ಜುನನನು

ಧರೆಯೊಳುಳಿದ ಕ್ಷೇತ್ರಲಿಂಗಕ್ಕೆ ಹತ್ತು ಸಾಸಿರಗಡಿಗೆ ಗೋಟನಿತು ಹಾಗಂಗಳಂ ಕೊಟ್ಟಹಿರಿಯ ಫಲದಿಂದಿದಱೊಳೊಂದು ಲಿಂಗಕ್ಕೆ ಸಾಸಿರಗಡಿಗೆಯಾ ಹಾಗಮಂಹರುಷದಿಂದಿತ್ತ ಫಲವಧಿಕವಿದು ಹುಸಿಯಾಗೆಹಿರಿಯ ಬೆರಳೊತ್ತಿನ ಬೆರಳ್ ಬೇವುದಿದು ಬೇಯದಿರಲು ಕಂಡಾದೊಡಂ ನಂಬಿರೇ ಕಪಿಲಸಿದ್ಧ ಮಲ್ಲೇಶ್ವರನನು

ಭರದೊಳೀ ಪುರದೊಳಱುವತ್ತೆಂಟಕನ್ನವಂಕರೆದಿಕ್ಕಿದಾ ಫಲಂ ಬೇಱೆ ಹೊಱಗಾಱು ಸಾಸಿರದೆಂಟುನೂಱಕಿಕ್ಕಿದ ಫಲದಿನಧಿಕವಹುದೀ ಮಾತು ಹುಸಿದಡೆನ್ನಕರದ ನಡುವಣ ಬೆರಳ ಸುಡುವುದೀ ಗುಂಡು ಸುಡದಿರಲು ಕಂಡಾದೊಡಂ ನಂಬಿರೇ ಸಕಲ ದೇವರದೇವನಂ ಕಪಿಲಸಿದ್ಧಮಲ್ಲೇಶ್ವರನನೆಂದು ಭಾಷೆಯನಿತ್ತನು

ಮಿಕ್ಕ ದೇವರ ಮನೆಯ ಭತ್ತಮಂ ಕೊಟ್ಟಣಕ್ಕಿಕ್ಕ ಬರುತಿರೆ ದೂರದಿಂ ಕಂಡು ಹರಿದು ಮೈಯಿಕ್ಕಿ ಮೇಲುದ ಹಾಸಿ ಕೊಂಡೊಯ್ದು ಪಾಕವಂ ಮಾಡಿ ತಂದೊಲಿದಿತ್ತೊಡೆಅಕ್ಕಱಿಂ ಹೊಱಗೆ ನೂಱಕ್ಕಿಕ್ಕಿದನಿತು ಫಲವಕ್ಕಾಗದಿರಲು ದರ್ಭೆಯ ಬೆರಳು ಬೇವುದು ದಿಟಕ್ಕೆ ಬೇಯದಿರೆ ಕಂಡಿನ್ನು ನಂಬಿರೆ ಕಪಿಲಸಿದ್ಧ ಮಲ್ಲೇಶ್ವರನನು

ಸುತ್ತಲದಿದೆನ್ನದೆಲ್ಲರ್ಗೆ ಕೊಟ್ಟಣವನಿಕುತ್ತ ಬರಲೊರ್ವಳಾನಾಱೆನೆಂದುಲಿದು ತಲೆಯೊತ್ತಿ ದೇವರ ರಾಜತೇಜದಿಂ ಮೀಱಿ ನಡುಮನೆಯೊಳಗೆ ಸುರಿದು ಬರಲುಎತ್ತಲುಂ ಕಳೆಯಲಾಱದೆ ಪಾಕಮಾಡಿ ತಂದಿತ್ತಡದಱಿಂ ಹೊಱಗೆ ಹತ್ತಕ್ಕಿಕ್ಕಿದ ಫಲವನಿತ್ತು ಹುಸಿದೊಡೆ ಕಿಱುಗುಣಿಕೆ ಸುಡುಗು ಸುಡದಿರಲು ನಂಬ ಮಲ್ಲೇಶ್ವರನನು

ಹರಯೋಗಮಂ ಮಾಡುವಂ ಸ್ಥೂಲ ಸೂಕ್ಷ್ಮದೊಳುಭರಿತನಾಗಿಹ ಶಿವನನಿಬ್ಬಟ್ಟೆಯಂ ಕಟ್ಟಿಹರುಷದಿಂ ಧ್ಯಾನಿಸುತ್ತಿಪ್ಪಾತನೈಕ್ಯಮಂ ಕೂಡಿ ಶಿವ ತಾನಪ್ಪನುನಿರುತವಿಂತೀ ಭಾಷೆ ಹುಸಿದೊಡಿಂತೀ ಬಲದಕರದ ನಡುವಣ ಬೆರಳ ಸುಡುವುದೀ ಗುಂಡು ಸುಡದಿರಲು ಕಂಡಿನ್ನಾದೊಡಂ ನಂಬಿರೇ ಕಪಿಲಸಿದ್ಧಮಲ್ಲೇಶ್ವರನನು

ಸಿಕ್ಕದೀ ಯೋಗಕ್ಕೆ ಬಱಿದೆ ಧಾವತಿಗೊಳ್ಳದೆಕ್ಕವಿಂದಂ ಹೊಕ್ಕು ಹೊಕ್ಕ ಮನ ತಮ್ಮ ಕಾರ್ಯಕ್ಕೆ ಸೂಸದೆ ಶಿವನ ಭಾವದಿಂ ನಿರ್ಣಯಂ ಕೊಡುವುದಿಲ್ಲಾ ದೇವನತಕ್ಕ ಕೆಲಸದ ಭಾವದಿಂದಿರಲು ಭಾವವೈಕ್ಯಕ್ಕೆ ತಹುದೀ ಭಾಷೆ ಹುಸಿಯಾಗೆ ಹೆಬ್ಬೆಟ್ಟುಮಿಕ್ಕು ಬೇವುದು ಬೇಯದಿರಲು ನಂಬಿರೆ ಕಪಿಲಸಿದ್ಧ ಮಲ್ಲೇಶ್ವರನನು

ಮೆಱೆವೆಕ್ಕವಿಂಡಿನೊಳಗಣ ಗಂಡ ಹೆಂಡಿರುಗಳುಱೆ ತಮ್ಮ ಹಸುಳೆಗಳಿಗುಂಟೆ ಪಾಲ್ ಬೆಣ್ಣೆಗಳನೆಱೆವುದಿಲ್ಲದೊಡೆ ಮಾಣ್ಬುದು ಬದುಕಲೊಂದೊಳ್ಳಿತಳಿದೊಡೆರಡೊಳ್ಳಿತೆಂದುಮಱೆಯದೀ ದೇವನ ಶ್ರೀಪದವ ಬಲುವಿಡಿದುತೊಱೆಯದವರೀ ದೇವನಂ ಕೂಡುವರ್ ಪುಸಿಯೆನೆಱೆಸುಡುಗು ಸುಟ್ಟುಂಬೆರಲ್ ಸುಡದಿರಲ್ ನಂಬಿ ಸಿದ್ಧಮಲ್ಲೇಶ್ವರನನು

ಬೆರೆಯದೀಯೆಕ್ಕವಿಂಡಿನವೊಳಗೆ ಸ್ತ್ರೀ ಪುತ್ರರಿರಲಾಱೆವೆಂದಡವರಂ ಬಿಟ್ಟು ಹದುಳಿರ್ದಪುರುಷನುಂ ಮಲ್ಲಿನಾಥನ ಕೂಡುವಂ ಕೂಡದಿರೆ ನಡುವೆರಳ್ ಬೇಯಲಿಪುರುಷನೊಲ್ಲದೊಡಿರ್ದ ಸತಿಸುತರು ಮುಕ್ತರಪ್ಪರು ಹುಸಿಯ ದರ್ಭೆಯ ಬೆರಳ್ ಸುಡಲಿ ಮಾತೆ ಪಿತರರಿಯಾಗಲಿರ್ದ ಮಕ್ಕಳು ಮುಕ್ತರಹರಾಗದೊಡೆ ಕಿಱುಗುಣಿಕೆ ಸುಡುವುದು

ಹಿಂಗದೀ ಸಕಳ ಲಿಂಗಕ್ಕೆ ಬೆಸಕೆಯ್ದ ಮರ್ತ್ಯಂಗಪ್ಪುದೈಕ್ಯಪದವಾಗದಿರುತಿರೆ ಬಲದಮುಂಗಯ್ಯ ತಳ ಸುಡುವುದಾದಿಲಿಂಗದ ಪ್ರತಿಷ್ಠೆಯ ಹೋಮವಂ ನೋಡಿದಜಂಗಮಂ ಸ್ವರ್ಗಮಂ ಪಡೆವರಲ್ಲದೊಡೆಡದಮುಂಗಯ್ಯ ತಳ ಸುಡುಗು ಸುಡದಿರಲು ನಂಬಿರೇಲಿಂಗಮಲ್ಲೇಶ್ವರನನಿನ್ನು ತಾ ಗುಂಡನೆಂದೊಡ್ಡಿದಂ ಕರತಳವನು

ಹಲವು ತಿದಿಗಳಲೂದಿ ಲೇಸಾಗಿ ಕಾಸಿ ಕೆಂಗಲಿಪ ಕಿಡಿಗಳನುಗುಳ್ವ ಪಂಚಲೋಹದ ಗುಂಡನೆಲೆಲೆ ಕಕ್ಕಸದ ಕಮ್ಮರು ನಿಡಿದಿಕ್ಕುಳುಗಳಿಂದವಚಿ ಪಿಡಿದು ತಂದುಕಲಿಕಾಲರುದ್ರನೆನಿಸುವ ಸಿದ್ಧರಾಮನಂಜಲಿಯಲಿಟ್ಟರು ರಾಹುಕೇತುಗಳು ಬಲುಗೋಪದೊಳು ಕಚ್ಚಿ ನೆಗೆದರ್ಕಮಂಡಳವನಸ್ತಗಿರಿಮಸ್ತಕದೊಳಿರಿಸುವಂತೆ

ಪೊಡವಿಯಂ ಸುಡುವ ಗರಳಾಗ್ನಿಯಂ ತುಡುಕಿ ತೊಡೆವೆಡೆಯನಱಸುವ ಮೃಡನೊ ಕಡಲನೀಂಟಲು ಕಯ್ಯನಡುವುಳಿದ ವಡಬನಂ ಪಿಡಿದಗಸ್ತನೊ ಶಿವನ ನಿಂದಿಸಿದ ದೇವೇಂದ್ರನಇಡಲೆಂದು ಮಂತ್ರಾಗ್ನಿವಿಡಿದ ಉಪಮನ್ಯು ಸುರರೊಡೆಯನೈಶ್ವರಮಂ ಮೊಗೆದ ದುರ್ವಾಸನೋನುಡಿಯಲರಿದೆನಿಸಿ ದಿವ್ಯದ ಗುಂಡನಿರ್ಕೈಯೊಳಾಂತನಚಳಿತಸಿದ್ಧನು

ತಮತಮಗೆ ನಡುನಡುಗಿ ಸಾಕಿಳಿಹು ಸಮಯದಾಶ್ರಮ ಸತ್ಯ, ಶುಚಿ ಶೂರ ಸಹಜಯೆಂದೆಲ್ಲರಾಕ್ರಮಿಸೆ ಹೋ ಆನಿತ್ತ ಭಾಷೆಗಳು ಸಂದುವೇ ಎಂದು ತನ್ನಯ ಶಾಂತಿಯಹಿಮದೊಳಾಱುವ ಗುಂಡನಿಡಿಕಿದನು ಭಾವಿಸದೆಭ್ರಮಿತ ತಾರೆಯನು ನಭವಿಡಿಕಿತೆಂತೆಂಬುದಾಕ್ರಮವೀಶನಡಿಗರುಣ ಕಮಲ ಪುಷ್ಪಾಂಜಲಿಯನಿತ್ತನೋ ಎಂಬಂತಿರೆ

ಗುಂಡು ಬಿದ್ದೊಡೆ ಹೊತ್ತಿ ಹೊಗೆದು ದಳ್ಳುರಿ ಮಸಗೆಕಂಡು ಮಝ ಭಾಪು ಭಾಪಪ್ರತಿಮ ನುಡಿದಂತೆಗಂಡ ಭೂಲೋಕ ಭಾಳಾಕ್ಷ ಮಹಿಮಾಶರಧಿಯೆಂದೆಂದು ಮಂದಿಯೈದೆಕೊಂಡಾಡುತಿರೆ ಕೇಳ್ದು ನಡುಗಿ ತಲ್ಲಣಿಸಿ ಭಯಗೊಂಡು ದೂಷಣೆ ಪಥವಾದಲ್ಲದೀಶನೊಳಕೊಂಡಿಪ್ಪನಲ್ಲೆನ್ನನಿನ್ನು ಹೊಗಳದಿರಿಯೆಂದಾ ಸಭೆಗೆ ಕೈಮುಗಿದನು

ಒತ್ತರಿಸಿ ಕಾದಿ ಸೋತೋಡೆ ಕಲಿ ಸೂಱೆವೋದತ್ತು ತಣಿವಿಂಗೆ ತನು ದಯೆಗೆ ಮನ ಧರ್ಮಕ್ಕೆವಿತ್ತು ನೀತಿಗೆ ಚರಿತ್ರಂ ಸಮತೆಗಱಿವು ಸಾಮರ್ಥ್ಯಕ್ಕೆ ಸತ್ವವೆಸೆವಸತ್ಯಕ್ಕೆ ನುಡಿ ಕೃಪೆಗೆ ವದನ ಭಕ್ತಿಗೆ ಭಾವವಿತ್ತ ನಂಬಿರ್ದ ಮಾಯಾದಿ ದೇಹವಿಕಾರಸತ್ತು ಕೆಟ್ಟಳಿದವಂದಿಂದಿತ್ತ ಸಿದ್ಧರಾಮಂ ಜಗಕೆ ಹೊಱಗಾದನು

ವಿವಿಧ ಸತ್ಯಂ ಮಾಯೆಗತಿಹುಸಿಕ ಕರುಣಿ ಪಾಪವ ಕೊಲುವ ಶಾಂತನರಿಷಡುವರ್ಗವೆನೆ ಮುನಿವನವನಿಯೊಳು ದಾನಿ ಧರ್ಮದ ಲೋಭಿ ನಿಸ್ಪೃಹಂ ಭಕ್ತಾರ್ತಿಲೋಕವಱಿಯೆಅವಿನಶ್ವರಂ ಪರರ ಸಮಯಮಂ ಗೆಲುವನೊಪ್ಪುವ ಜಿತೇಂದ್ರಿಯ ಮುಕ್ತಿಸತಿಸಂಗಲಂಪಟಂಶಿವಸಿದ್ಧರಾಮನೆಂದೊಳಗ ಬಲ್ಲವರು ವಂದಿಸಿ ತುಷ್ಟರಾಗುತಿಹರು

ಹುಸಿಯಿಲ್ಲ ಹುರುಡಿಲ್ಲ ಹಳಿವಿಲ್ಲ ಹಗೆಯಿಲ್ಲಹಸಿವಿಲ್ಲ ಹಜ್ಜೆಯಯಿಲ್ಲಳುಪಿಲ್ಲ ಮುಳಿಸಿಲ್ಲತೃಷೆಯಿಲ್ಲ ಮದವಿಲ್ಲ ಮಱಹಿಲ್ಲ ಕಱೆಯಿಲ್ಲ ಕುಂದಿಲ್ಲ ನಿಂದೆಯಿಲ್ಲಬೆಸನವಿಲ್ಲಾರ್ತವಿಲ್ಲಾಸೆಯಿಲ್ಲ ಪಳಿವಿಲ್ಲುಸಿರಿಡುವುದಿಲ್ಲ ಮತ್ಸರವಿಲ್ಲ ನೆರವಿಲ್ಲವಸುಧೆಯೊಳು ಸಿದ್ಧರಾಮಂಗೆಂಬ ಕೀರ್ತಿ ಪಸರಿಸಿತು ಮೂಲೋಕದೊಳಗೆ

ಪಸರಿಸಿದ ಪುಣ್ಯವಾರ್ತೆಯ ಕೇಳು ಮುಳಿದು ಹುರುಡಿಸಿ ಕುಟಿಲ ವಿದ್ಯಾಸಮುದ್ರನೆಂದೆಂಬ ಬಿರುದೆಸೆವ ಖರ್ಪರನೆಂಬ ಜೋಗಿ ಶಿವಸಿದ್ಧರಾಮನ ಸರ್ವಸಾಮರ್ಥ್ಯದಪೆಸರ ಧಟ್ಟಿಸುವೆ ವಾದಿಸುವೆ ಸೋಲಿಸುವೆನೆಂದೊಸೆದು ಹದಿನೆಂಟು ಪೀಠದ ದಿವ್ಯ ಜೋಗಿಣಿಯವಿಸರವೆರಸೈತಂದನಾನೆವಿಂಡಲಿಸಿ ಸಿಂಹದ ಗುಹೆಗೆ ಬಪ್ಪಂದದಿ

ಹಿಡಿದ ಚಕ್ರದ ಗುಜುಱುದಲೆಯ ಶಂಖದ ಮಣಿಯತೊಡಿಗೆಗಳ ತಿರಿವ ಸೋರೆಯ ಹೂಸಿದಿಟ್ಟಗೆಯಹುಡಿಯ ಕೆಂಗಣ್ಣ ನಿಡಿಯೊಡಲ ಬಾದಣಗಿವಿಯ ಪಂಚರನ್ನದ ಕಂಥೆಯಕುಡಿದ ಜೊಮ್ಮಿನ ಕೆಟ್ಟನುಡಿಯ ನಾನಾಜೋಗಿನಡೆವೆರಸು ಖರ್ಪರಂ ಶಿವಸಿದ್ದರಾಮಯ್ಯನೆಡೆಗೆ ಬಂದಂ ಬಂದನುರಿವಗ್ನಿಯೆಡೆಗೆ ತಱಗೆಲೆ ಮುನಿದು ಬಪ್ಪಂದದಿ

ಅಣಿಯರದೊಳಿತ್ತಲೆಂದಿನ ತೆಲದಿ ಶಿವನ ಮೇಲಣ ಭಕ್ತಿಯಿಂ ಸಕಳ ಭೂತಸಂಕುಳದ ಮೇಲಣ ಕರುಣದಿಂ ಮುಕ್ತಿಸತಿಯ ಮೇಲಣ ಮೋಹದಿಂದ ಮಂತ್ರದ ಮೇಲಣಗಣಿಸುವಾದರಣೆಯಿಂದೊದವಿದಗ್ನಿಗಳ ಮೇಲಣ ವಿಪುಳ ವಿಶ್ವಾಸದಿಂ ಸಿದ್ಧಕುಲ ಶಿರೋಮಣಿ ಮಾಡುತಿಹ ನಿತ್ಯ ಹೋಮಮಂ ಕಂಡು ಕೆಡಿಸಲ್ ಬಗೆದನಾ ದುರುಳನು

ಮುಟ್ಟಿ ಮಂತ್ರಾಕ್ಷತೆಯೊಳಗ್ನಿಕುಂಡವನು ಮುಳಿದಿಟ್ಟಡೆ ನಿದಾಘವನಮೋಘ ಕಾರ್ಗಾಲವದರಟ್ಟಿ ತಾಗುವ ತೆಱದಿ ತಾಗಲುರಿ ಕರಗಿ ಕಿಡಿಯುಡುಗಿ ಹೊಗೆ ಸುಗಿದು ಕೆಂಡಕೆಟ್ಟು ಮಡುವಿಟ್ಟುಕ್ಕಿ ಹೊಱಸೂಸುವುದಕದೊಳುಕೊಟ್ಟಾಹುತಿಗಳು ತೇಂಕಾಡುತಿರೆ ರಿಪುಬಳ ಘರಟ್ಟ ಶಿವಸಿದ್ಧರಾಮಂ ಮನದೊಳಱಿದನಧಮನ ಕುಟಿಲಕಾಯಕವನು

ಜಲಜ ಸಖಕುಲಜನಂದಿದಿರಾದ ಜಲರಾಶಿಗಲಗಂಬನುಗಿದಂತೆ ಕೊಂಡಕ್ಕೆ ಸಿದ್ಧಕುಲತಿಲಕನೊಯ್ಯನೆ ಲಾಕುಳಂಗೊಂಡು ಪುರಮಥನನಂತೆ ಹಣೆಗಣ್ಣ ಬೆಳಗಹೊಲಿಗೆಯಂ ಬಿಡಲುದಕವಱತಗ್ನಿಯೈದೆ ಗಜಗಲಿಸಿ ಭುಗಿಲಿಟ್ಟು ದಳ್ಳುರಿ ಬಳ್ಳಿವರಿದು ಹರಿದೆಲೆಲೆ ಸುಟ್ಟುದು ಸುಟ್ಟುದಾ ಜೋಗಿಯಂ ಜೋಗಿಯೊಡನಿರ್ದ ಪರಿಜನವನು

ಇಟ್ಟಣಿಸಿ ಜೋಗಿವಡೆಯಂ ಸುಟ್ಟು ಮೀಱಿ ಧಾಳಿಟ್ಟು ಅಟ್ಟಳೆನಾಡ ಕೋವೂರನೈದಿ ಭುಗಿಲಿಟ್ಟು ಉರಿ ಹಬ್ಬುತಿರಲಾವೂರ ಕಡೆ ಕೆಡೆದ ಜೋಗಿವಡೆ ಮೊದಲೆಡೆಯಣದಟ್ಟೈಸಿದುರಿಯ ಹೊಯ್ಲಿಂಗಾಱದಕಟ ಬಾಯ್ವಿಟ್ಟು ಪಶುಮೃಗಪಕ್ಷಿ ನೆರೆದೊಱಲುತಿರೆ ಕರುಣಹುಟ್ಟಿ ಕಣ್ದೆಱೆದು ಕಂಡಂ ಬೇಗೆ ಹೊಡೆದಡವಿಯಂತಿರ್ದ ಜೋಗಿಗಳನು

ಭೂಮಿಯ ಚರಾಚರಕ್ಕೊಲಿದು ಮಾಡುವ ಶಾಂತಿಹೋಮವೇಕೀ ಪ್ರಾಣವಧೆಯೇಕೆ ಮತ್ತೆ ನಿರ್ಧೂಮಧಾಮಾಕಾರವಾಗಿ ನಿಷ್ಕಾರಣಂ ಕೋವೂರ ಬೇವುದೇಕೆಸಾಮರ್ಥ್ಯ ಹಸನಾಯ್ತು ಭೂತದಯೆ ಲೇಸಾಯ್ತುಸೋಮಧರನೊಲವು ಫಲವಾಯ್ತೆಂದು ಶಿವಸಿದ್ಧರಾಮನಾಥಂ ನೊಂದು ಕರುಣದಿಂ ನೋಡಲೆದ್ದಂ ಜೋಗಿವಡೆಯೊಡೆಯನು

ಸರಸ ಸುಂದರ ಸೊಬಗ ಸಿದ್ದರಾಮಯ್ಯ ಸುಸ್ಥಿರ ಶುದ್ಧ ಶುಚಿ ಶೂರ ಸಿದ್ಧರಾಮಯ್ಯ ಶಂಕರ ಸದೃಶ ಸಹಜಸಾಮರ್ಥ್ಯಸಾಗರ ಸಿದ್ದರಾಮಯ್ಯ ರಾಮನಾಥಶರಣಸಂಕುಳಸುರದ್ರುಮ ಸಿದ್ಧರಾಮಯ್ಯಶರಣಾಗು ಗುರುಸಿದ್ಧರಾಮಯ್ಯ ರಾಮಯೆಂದೆಱಗಿ ಕೈಮುಗಿದು ಕಾರ್ಪಣ್ಯಮುಖನಾಗಿರ್ದ ಖರ್ಪರನನೀಕ್ಷಿಸಿದನು

ಏಕಾರಣಂ ಬಂದೆಯಿಲ್ಲಿಗೆಲ್ಲಿಯ ಕಿಚ್ಚಿದಾಕಸ್ಮಿಕಂ ನೆಗೆದು ಸುಟ್ಟುದಕಟಕಟ ನೊಂದಾ ಕುಟಿಲ ವಿದ್ಯಾಸಮುದ್ರನೆಂಬವನು ನೀನೇ ನಿನ್ನ ಪರಿಜನವನುಏಕೆತ್ತೆಯೆನೆ ಬೆಂದ ಹುಣ್ಣ ಕಂಬಿಯನಿಕ್ಕಿನೂಕಿ ಕೀಸದಿರಖಿಳಖೂಳನೊಳು ದುರುಳನವಿವೇಕಿಯೊಳು ಲೇಸನಱಸದೆ ಸಿದ್ಧಪತಿ ಕರುಣಿಸೆನಗೆಂದು ಬಾಯ್ವಿಟ್ಟನು

ಕರುಣಾವಲೋಕನದಿ ಸಿದ್ಧ ಹರಣಂಗಳಂಕರುವೊಯ್ದು ಜೋಗಿವಡೆಗಭಯವಿತ್ತತ್ತಿ ಕರಿಕುವರಿದ ಕೋವೂರನೂರಂ ಮಾಡಿ ಕೃಪೆವೆರಸಿ ಹಾಡಿ ಹೋಮವನು ಮಾಡಿಎರಡನೆಯ ರುದ್ರನಭಿನವ ಪಿತಾಮಹನು ಸುಸ್ಥಿರಕರ ಶ್ರೀವರಂ ಸಕಳ ಸಾಮರ್ಥ್ಯದಾಕರ ಸಿದ್ಧರಾಮನಾಥಂ ಶೈವಸಾಮ್ರಾಜ್ಯ ಸುಖದೊಳಿರಲೇವೊಗಳ್ವೆನು

ಇನನೋಡೆ ನವಿಲಾಡೆ ವಿರಹಿಗಳು ಕೂಡೆ ಭೂಜನ ಹಾಡೆ ತೃಣಮೂಡೆ ಹಂಸೆಗಳು ಬಾಡೆ ಕಡವಿನ ಸೊವಡು ತೀಡೆ ಚಾದಗೆ ನೋಡೆ ಘನವಾಡೆ ಧರೆಗಂಬು ನೀಡೆ ಸಿಡಿಲುದನಿ ಮಾಡೆ ಧರೆ ಕೂಡೆ ಬೆಳೆಗಳಂ ಸೂಡೆ ನೆಲೆಯನು ನದಿಗಳೀಡಾಡೆ ಬರ್ಪ ಕಾರ್ಗಾಲವೊಯ್ಯನೆ ಮೊಳೆತು ದನಿದೋಱಿ ಮೀಱಿ ಮೊಳಗಂ ಹೇಱಿ ತೋಱಿತ್ತು ದುರ್ದಿನವನು

ಅಳಿಯ ಕಪ್ಪನು ನೀಲಮೇಘದಸಿತವನು ಕಜ್ಜಳದ ಕಱೆಯನು ಕರಿದ ಕತ್ತುರಿಯ ಕರಿದ ಕೋಕಿಳನ ಮಳಿನವ ಹರಿಯ ಕಾಳಿಮೆಯ ವಿಷದ ಕರ್ಬುರವ ನೀಲದ ನೀಲವಎಳೆದುಕೊಂಡೊಡಗೂಡಿ ತುಳಿದು ಹಿಳಿದಬುಜಜಂಬೆಳಗು ಮುಳುಗಲು ಬಳಿದನೋ ಬಯಲನೆಂದೆನಿಸಿದಳವೇಱಿತೊತ್ತರಿಸಿ ಮೋಡಗತ್ತಲೆ ಗಾಳಿ ಹನಿ ಮಿಂಚು ಮೊಳಗು ಸಹಿತ

ಒಂದು ದಿನವಿರುಳೊಳಾ ಮಳೆಯೊಳು ಚಲಿಸದೆಂದಿನಂದದಿಂ ಕ್ಷೇತ್ರಮಂ ಬಲಗೊಳುತ್ತಂ ಲಿಂಗವೃಂದಮಂ ನೋಡುತ್ತ ಸಂತೋಷದಿಂ ಬರುತ್ತಿರಲು ಸಿದ್ಧರ ದೇವನುಹಿಂದೆ ನಾನಾ ಜೀವಜಾಳಂಗಳಂ ಕೊಂದಕುಂದನೀ ತಂದೆಯ ಪದಕ್ಕೆಱಗಿ ಕಳೆವೆ ನಾನೆಂದು ಛಿಟಿಛಿಟಲೆನುತ್ತಡಸಿ ಕಿಡಿಗೆದಱುತ್ತ ಬೆದಱದೆಱಗಿತ್ತು ಸಿಡಿಲು

ಮುನಿದೆಱಗಿತೆಂದು ಬಗೆದೆಲ್ಲರಂ ಕೊಲುವ ನೀಚನನಿರಿಸಲೇಕೆಂದು ಪಿಡಿದಲಗಿನಿಂ ತಿವಿಯೆಮೊನೆಯಲ್ಲಿ ಸಿಡಿಲು ಸಿಲುಕಿರಲು ಕರ್ಗತ್ತಲೆಯೊಳೆಡೆಯಾಡುತಡಹದಂತೆತನಗೆ ತಾಂ ದೀವಟಿಗನಾದನೋ ಗಿರಿಯೋಡಿವನಧಿಯಂ ಹುಗಹುಗಲು ತಿವಿಯೆ ಕೈತಪ್ಪಿ ವಡಬನನಿಱಿದು ನೆಗಹಿದಮರೇಂದ್ರನೋ ಎಂದೆನಿಸಿ ಮೆಱೆದನಚಳಿತಸಿದ್ಧನು

ಉಗ್ರಸರ್ಪನ ಫಣಾಮಣಿಯಂತೆ ಕೂರಲಗಿನಗ್ರದೊಳು ತೊಡರ್ದ ಸಿಡಿಲೆಲೆ ಮಹಾದೇವ ಗರಳಗ್ರೀವ ಶಿವ ಶರಣೆನುತ್ತಿರಲು ಕೇಳ್ದು ಸೈರಿಸಲಾಱದಹಿಕಟಕನುವ್ಯಗ್ರದಿಂ ನಿಜವೆರಸಿ ಬಂದಿದೇನೈ ದಯಸಮಗ್ರ ಭೂತಸ್ನೇಹಿ ನೀನಳುಕದೀ ಸಿಡಿಲವಿಗ್ರಹಂ ನೋಯಲಿಱಿವರೆ ಮಡಕೆಯುಣಕಲಿತಡಾರು ಜೀವಿಪರೆಂದನು

ಬಂದು ಬಂದೆಲ್ಲರಂ ಕೊಲುವುದಂ ಕೊಂದಡೇನೆಂದಿಱಿದೆನೆನಲೆಲ್ಲರಂ ಕೊಲುವ ಗರಳಮಂಕೊಂದೆನೇ ಕೊರಳೊಳಿರಿಸಿದೆನಲ್ಲದೆನಲಱಿಯದಿಱಿದೆನೆಂದಡಿಗೆಱಗಲುಸಂದ ನಿಷ್ಕಂಟಕಂ ನಿರ್ಭಯಂ ನಿಶ್ಚಿಂತನೆಂದೆನಿಪ ನಿನಗೆ ಕೂರಲಗೇವುದೆಂದು ತರುಣೇಂದುಧರನಾ ಸಿದ್ಧಪತಿಯೊಡನೆ ನುಡಿದು ನಡೆದಡಗಿದಂ ಲಿಂಗದೊಳಗೆ

ಬೆಂದ ಮಳೆ ಬರಲೇಕೆ ಸಿಡಿಲೆಱಗಲೇಕಲಗಿನಿಂದಿಱಿಯಲೇಕದೀಶನನುಱಹಲೇಕೆ ಮುದದಿಂದ ಭಕ್ತರ ಹೃದಯ ಕಮಲದೆಸಳ್ಗಳ ಹಸೆಯ ಮೇಲೆ ಚಿತ್ತಿನ ಸೊಡರಿನಹೆಂದವೆಳಗಿನೊಳು ನಿಜತರುಣಿಯಂ ಕೂಡುವಾನಂದಮಂ ತೊಱೆದು ಸುಖಿ ಸುಕುಮಾರನೆಂದೆನಿಸುಎಂದುಧರನೀ ಮಳೆಯೊಳೀ ಚಳಿಯೊಳೆಯ್ತಂದನೆಂದು ನೊಂದನು ಮನದಲಿ

ಎನಗೆ ನಿಗ್ರಹವ ಸಿಡಿಲಿಂಗೇಱನೀಶ್ವರನಮನಕಮರ್ಷನವನಿತ್ತುದಿಂತಿದೆಂದೊಯ್ದು ಕಡುಮುನಿದು ಕೂರಲಗ ಭಂಡಾರಿಸಿ ಸಮಂತೆಂದಿನಂತೆ ಪ್ರದಕ್ಷಿಣವನುನೆನೆದು ಬರುತಿರ್ಪ ಸಿದ್ಧನ ಪದಾಬ್ಜದ ಮೇಲೆತೊನೆವ ಬಾಲಂ ಕುಸಿದ ತಲೆ ಮುಗಿದ ಕಿವಿ ಸುಗಿದತನು ದೈನ್ಯವಿಡಿದ ಕಿಲದನಿವೆರಸು ಬಂದೊಂದು ಕೃಷ್ಣಶುನಕಂ ಬಿರ್ದುದು

ಕರುಣಿಯನಘನೆ ನನ್ನ ಸಲಹೆಂದು ಬಿದ್ದ ಕಾರಿರುಳ ಮಱಿಯೋ ಅಭಯಮಂ ಬೇಡುವಜ್ಞಾನದುರುಳಿಯೋ ಮಱೆದೆಱಗಿದಪರಾಧದುಬ್ಬೆಗದಿ ತಾಂ ನೊಂದು ಕಂದಿ ಬಂದುಕರುಣಿಸೆನಗೆಂದು ಕಾಲ್ವಿಡಿವ ಸಿಡಿಲೋ ಎಂಬಪರಿಯಲಿಹ ಶುನಕನಿರವಂ ಕಂಡು ಲೋಕೈಕಗುರು ರಾಮನಾಥನತಿಬೆಱಗಾಗುತಿಹ ಸಮಯದೊಳು ರಾತ್ರಿ ಕಡೆಗಂಡುದು

ಬೆಳಗು ಹಳಹಳನೆ ಮೊಳೆತುದು ತಿಮಿರವಳವಳಿದುದೊಳಗೊಳಗಳಲ್ದುವು ಚಕೋರಿಗಳು ವಿರಹ ವಿಹಳವಾಱಿದವು ಚಕ್ರವಾಕವೊಱಗಿದವು ನೈದಿಲು ಕಮಲ ಕಣ್ದೆಱೆದವುಅಳಿಯ ಸೆಱೆ ಬಿಟ್ಟುದು ಧರಾಜನದ ಕಣ್ಣ ಬಱತಿಳಿದವು ಸರೋಧಿ ಮೈದೆಗೆದುದುದಯಾಚಳದಹೊಳೆವ ಮಕುಟಾಗ್ರಮಣಿಯೋ ಎನಿಸಿ ಗಗನಮಣಿ ಕಿರಣಮಂ ಪಸರಿಸಿದನು

ಪೂರೈಪ ಶಂಖಸಂಕುಳರವಂ ಪೊಡೆವ ಭೇರೀರವಂ ಶುದ್ಧರಾಗಂ ಗೀತರವ ಕಾಹಳಾರವಂ ವಿವಿಧ ವಾದ್ಯಂಗಳ ರವಂ ಮಜ್ಜನೋಚಿತದ ಘಂಟಾರವಂಗೌರೀಶ ದೇವಕುಲ ಚಕ್ರೇಶ ಚಿತ್ತಾವಧಾರ ಜಯಜಯವುಘೇ ಚಾಂಗು ಬೊಲ್ಲೆಂಬ ಗಂಭೀರರವವೆರಸು ಮಂಗಳಮಯಂ ಜೀವಿಗಳಭೀಷ್ಟಮಂ ಕೊಡುತಿರ್ದುದು

ಆಗ ಸಿದ್ಧೇಶ್ವರಂ ತನ್ನ ಪದಪಂಕಜದಮೇಗೆ ಹೊರಳುವ ಸಾರಮೇಯನಿರವಿಂಗೆ ಬೆಱಗಾಗಿ ನುಡಿಸಿದೊಡೆ ನುಡಿಗೊಡಲಱಿಯದೇಳೆಂದಡೇಳದೊಯ್ಯನೆ ನೂಂಕಲುಹೋಗದತಿ ಮೂರ್ಖತೆಯ ಮಾಡುವಡೆ ಕಾರುಣ್ಯಸಾಗರಂ ತಾನಾಗಿ ನೂಕಲರಿದಿನ್ನಿದಕ್ಕೇಗೈವೆನೆಂದೆನುತ್ತಿರಲೆಂದಿನಂತೆ ಪೊಡವಡಲು ಬಂದರು ಗುಡ್ಡರು

ಪೊಡಮಡುವಡಡಿಯನೆಡೆಗೊಡದೆ ಕೆಡೆದೊಡಲಿಂದೆಮಡಿದು ಮುಸುಕಿರೆ ಕಂಡಿದೇನಿದೇನೆರಡನೆಯಮೃಡ ಜಗದ ಗುರುವೆ ಸಿದ್ಧೇಂದ್ರ ಭೂತಸ್ನೇಹಿ ಕರುಣೆ ಲೀಲಾವಿಗ್ರಹನುಡಿ ಹೇಳಿದಾರಿದೆಯಲ್ಲಿಯದೇಕೆ ಬಂದುದಾವೆಡೆಗೆ ಹೋದಪುದೆಂದು ಕೇಳ್ದಡಂತದಱಾದಿತೊಡಗಿ ಹೇಳಲು ತೊಡಗಿದಂ ತ್ರಿಕಾಲಜ್ಞಾನಿ ನೆಱೆ ಚರಾಚರಿತಭರಿತನು

ನೆರೆದ ಪುಣ್ಯದ ರಾಶಿಯೋ ಎನಿಪ ಕೈಲಾಸಗಿರಿಯ ಹರವರಿಯ ಹಿರಿಯರಮನೆಯೊಳೋರಣಂತರ ಸರಿಸ ಸಾಲ್ ಪಂತಿವೆತ್ತು ಕುಳ್ಳಿರ್ದು ಹರಿಯಜಶಕ್ರಮುಖ್ಯರಾದಸುರರ ಕಿನ್ನರರ ಖೇಚರರ ಗರುಡರ ಮಯೂರರ ಗಣೇಶ್ವರರ ಮಧ್ಯಾಸನದೊಳಂಬಿಕಾವರನಧಟ ಮದನಮದರದನಿ ಬಿದುವಿದಳನ ಮೃಗೇಶನೋಲಗವಿತ್ತನು

ಆ ಸಭೆಗೆ ರೂಪಕಾಮಂ ತೇಜಭಾನು ವಿದ್ಯಾಸರಸ್ವತಿ ಕಳಾತುಹಿನಕಿರಣಂ ಭೋಗವಾಸವನೆನಿಪ್ಪ ಗಂಧರ್ವನೊರ್ವಂ ಸಿರಿಯ ಸಂದಣಿಯೊಳೆಂದಿನಂತೆದೇಸೆವಡೆದೈತಂದು ರುದ್ರಂಗೆ ಮೈಯಿಕ್ಕುವಾಸೆಯುತ್ಸವದಿ ತವಕದಿ ಭರದೊಳುರವಣಿಸಿಹಾಸಿ ಹರಹಿದನು ನಿಜತನುವ ಶಿವನಂಪ್ರಿಯ ಸರೋಜಕೆಡಬಲನಱಿಯದೆ

ವಂದಿಸಿ ಮಹಾಹರುಷವರುಷದಿಂ ನನೆದೇಳಲೆಂದಾಗಲನುಗೈಯುತಿರೆ ತನ್ನ ಕಾಲ್ ತಾಗಿಹಿಂದಿರ್ದಘೋರಮುಖದಿಂದೊಗೆದ ಉಗ್ರಮುಖನೆಂದೆಂಬ ಗಣನಾಥನುನೊಂದು ಭೂರ್ಮಿಸುತೆಲವೊ ಗರ್ವವಿಡಿದಜ್ಞಾನದಿಂದೊದೆದೆಯಾಗಿ ಕೃಷ್ಣಶ್ಚಾನನಾಗು ಹೋಗೆಂದು ಶಾಪವನಿತ್ತು ಪೋದನುರವಣಿಸಿ ಕೋಪಾಟೋಪ ಭರಭರಿತನು

ಮತಿ ಮಾಸಿ ಮುದ ಸೂಸಿ ಕಳೆಯೋಡಿ ಕಣು ಬಾಡಿಧೃತಿಗೆಟ್ಟು ಮರವಟ್ಟು ಗತಿಗುಂದಿ ಮುಖ ಕಂದಿಶಿತಿಕಂಠನಾಥ ನುಡಿ ಬಿಡಹೋಗಿ ಗಂಟಿಕ್ಕಿಕೊಂಡ ತೆಱನಾದುದೆನಗೆಕ್ಷಿತಿಯೊಳಮೃತವನುಣಲು ರುಜೆ ಮೂಡಿದಂದದಿಂನತನಾಗಬಂದು ನರಕಂಬಡೆದೆನತ್ಯಂತಜಿತದುರಿತ ನಿನ್ನ ಕಂಡೆನಗಿದೆಂಬಾಗಳುಳಿದವರ್ಗೆ ಇನ್ನೇನೆಂದನು

ವಸುಧೆ ಹೇಸುವ ಜನನವಾದುದಿಂದೆಂದು ದೂರಿಸದಿರೆಂದೆನಲು ದೂರಿಸಿದೆವೇನಿನ್ನಾವದೆಸೆಯಿಂ ವಿಶಾಪವಹುದಂಬಿಕಾವರ ಕರುಣಿಸೆಂದು ಗಂಧರ್ವ ವೀರಬೆಸಗೊಂಡೊಡೆನ್ನ ಜನ್ಮಕ್ಷೇತ್ರ ಕೈವಲ್ಯದಸು ಪುಣ್ಯದಿಕ್ಕೆಯೆಂದೆನಿಪ ಸೊನ್ನಲಿಗೆಯೊಳಗೊಸೆದು ಲಿಂಗ ಪ್ರಸಾದವನು ಕೊಂಡೊಡೆ ವಿಶಾಪಂ ನಿನಗೆ ಪೋಗೆಂದನು

ಇದು ಪೂರ್ವದೋಷವಿದಱಿಂದಾದ ಜನ್ಮವಿಂತಿದು ಶಿವನ ಬೆಸನ ಬರವಿದು ನಿಮಿತ್ತಂ ಬಗೆವಡಿದು ಕಾರಣಿಕವಿದು ಶುದ್ಧವಿದು ಶುಚಿಯಿದು ಬಹಿಷ್ಠ ವೇಷದ ನಿಜದಲಿಸದುಹೃದಯದಲ್ಲಿರ್ದು ಮಲ್ಲಿಕಾರ್ಜುನನ ಧೂಪದ ಮಹಾರೋಗಣೆಯ ಹೊತ್ತಿನೊಳುಘೇಯೆಂದುಮುದದೊಳೆಂದಪುದಾಗಿ ಹೆಸರುಘೇಕಾಳನೆಂದಂ ಸಿದ್ಧರಾದಿತ್ಯನು

ನಿಲ್ಲದಡಿಗಡಿಗೆ ದೇವರ ದಾನವಿತ್ತು ಮಱಹಿಲ್ಲದಾದರಿಸುವುದು ಹೊರೆವುದೆಂದಾ ಗುಡ್ಡರೆಲ್ಲರ್ಗೆ ಬೆಸನನಿತ್ತಱಿವಿಂಗೆ ಬೆಱಗಾಗಿ ಹೋಗಿ ಹೊಗಳುವ ಹಿರಿಯರಸೊಲ್ಲಿಂಗೆ ತಲ್ಲಣಿಸಿ ನಾಚುತ್ತ ನಡೆತಂದುಮಲ್ಲಿಕಾರ್ಜುನನ ಪೂಜೆಯನೊದವಿ ಯೋಗಿಗಳಬಲ್ಲಹಂ ಸಿದ್ಧಪತಿ ಶೈವ ಸಾಮ್ರಾಜ್ಯ ಸುಖದಿಂದಿರಲು ಕೆಲವು ದಿನಕೆ

ಬಂದು ದೇವರ ದಾನವಂ ಕೊಂಡು ಗುರುಪದದಮುಂದೆಯೋಲೈಸಿ ಧೂಪಾರತಿಯೊಳುಘೆವುಘೇಯೆಂದದು ಕೃತಾರ್ಥತೆಯನೈದಲು ವಿಶಾಪವಡೆದಂದು ಗಂಧರ್ವ ಹೋಗಿಪಿಂದಿರ್ದುಘಕಾಳವೆಸರ ಶುನಕನ ಶವವಹೆಂದದ ಮಹಾವಿಭವವೆರಸು ಗೊಪೆಯೊಳಗಿಕ್ಕಿಎಂದಿನಂದದಿ ಸಿದ್ಧಪತಿ ಶೈವಯೋಗ ಸುಖದಿಂದಿರ್ದನೇವೊಗಳ್ವೆನು