IX
Siddharāma Caritre
ಸತ್ತ ಪ್ರಾಣಿಗಳು ಪಡೆಯುತಿರೆ ಜಗವುಚಿತ್ರಮುಟ್ಟೆಱಗುತ್ತಮಿರಲು ಸಿದ್ಧೇಂದ್ರಂಗೆಉತ್ತಮ ಜ್ಞಾನಿಯಲ್ಲಮಪ್ರಭು ಬಂದನಾ ಸಿದ್ಧಕುಲ ತಿಲಕನೆಡೆಗೆ
ಸೃಷ್ಟಿಯೆಲ್ಲವನಾಳ್ವ ಸ್ಥಿರಪಟ್ಟವಂ ತನಗೆಕಟ್ಟಲಿಕೆ ಶಿವಸಿದ್ಧರಾಮನಾಥನ ತರಲ್ಕಟ್ಟಿದಂ ಕರ್ಣದೇವಂ ಸುಖಾಸನವನ್ನಾಳ್ಕುದುರೆಯಂ ಮಂತ್ರಿಯೊಡನೆವಿಷ್ಟರವನೇಕ ಮಣಿ ಖಚಿತ ರಚಿತವ ಕಾಣೆ,ಗೊಟ್ಟೆಱಗಿ ಬಿನ್ನವಿಸಿ ಬಾರದಿರ್ದಡೆ ಅಸುವಬಿಟ್ಟು ಕಳೆವುದು ಬಱೆದೆ ಬಂದರೆನ್ನವರಲ್ಲ ಎಂದು ಕಳುಹಿದನಾಗಳು
ಬಂದ ಸಚಿವರು ಸಿದ್ಧ ಕೆಱೆಯ ಕೆಲಸದೊಳಿರಲ್ಕಂದು ಮೆಯ್ಯಿಕ್ಕಿ ಕಾಣ್ಕೆಯೆನಿರಿಸೆ ಕಂಡಿದೇನೆಂದಡವಧರಿಸುವುದು ದೇವ ಬಿಜ್ಜಳನ ತಮ್ಮಂ ಕರ್ಣದೇವ ತನಗೆಎಂದೆಂದುಮಚಲ ಸಿಂಹಾಸನದೊಳಿರ್ಪುದಕೆಇಂದುಧರಮೂರ್ತಿ ನಿನಗೋಲೈಸಿದಂ ತಂದೆಬಂದು ಪಟ್ಟವನು ಶ್ರೀಹಸ್ತದಿಂ ಕಟ್ಟಬೇಹುದಿನ ಚಿತ್ತೈಸೆಂದರು
ನಸುನಗುತ್ತೀ ಹೊನ್ನ ಪೀಠವೇಕೆಮಗಯ್ಯಕಿಸುವೊನ್ನ ಹೆಗ್ಗೊಡನೊ ಮಲ್ಲಿಕಾರ್ಜುನನ ಬಾಣಸಕೊಂದು ಚರುವಿಗೆಯೊ ಸಟ್ಟುಗವೊ ಎಮಗೆ ಗುದ್ದಲಿಯೊ ಹಾರೆಯೊ ಗೋರೆಯೋವಸುವಿದೇಕೆಮಗೆ ತೆಗೆ ಪಟ್ಟಗಟ್ಟಿಸುವ ಜೋಯಿಸನೊ ಭೂಪಾಳಿಗನೊ ಹಾರುವನೊ ಬಹುಮಂತ್ರವಿಸರದಾಚಾರ್ಯನೋ ದೇಶಕ್ಕೆ ಮುಖ್ಯನೊ ನಾನೇನ ಬಲ್ಲೆನೆನಲು
ದೇವ ಸರ್ವಜ್ಞ ನೀನೇ ಸದಾಶಿವಮೂರ್ತಿಗಾವ ಮಿಗಿಲುಂಟೆನಲು ಶಿವಶಿವೀ ಜೀವರಂದೇವರಂ ಹೋಲಿಸುವರೇ ಆದಂತಿರಲಿ ದಾನವನುಂಡು ಮರಳಿಹೋಗಿನೀವೆಲ್ಲರೆಂದೆನಲು ಅದನಾರು ಬಲ್ಲರೀಜೀವವಂ ನಿಮಗೊಪ್ಪಿಸುವೆವೆಂದು ಅಲಗಕ್ಕೆಹಾವ ಶಿಷ್ಟರ ನಿಲಿಸಿ ಮಲ್ಲಿಕಾರ್ಜುನ ಬಲ್ಲನೆನೆ ದಂಡಿಗೆಯನಾಂತರು
ಕನಕಮಣಿ ಖಚಿತ ಕಂಕಣಿಕೆಯ ಸುಖಾಸನದೊಳನುಪಮ ಸ್ವಾತಂತ್ರ ಗುರುವ ಬಿಜಯಂಗೈಸಿಮನಕೆ ಪರಿತೋಷ ಪುಟ್ಟಲು ವಜ್ರಪಂಜರದ ದಡ್ಡಿಯಡ್ಡಂಬಡೆಯಲುತನತನಗೆ ಬೇಳ್ಪನಿತು ಜತನವಂ ಮಾಡಿ ಪರಿಜನ ಸುತ್ತ ಮುತ್ತಿ ಬೋವರಿಗೆ ಭೂಪನ ಅಗ್ರಧನುವಾದುದೆಂಬಂತೆ ಮನವೇಗದಿಂದ ಬಂದರು ರಾಜಧಾನಿಯೆಡೆಗೆ
ಮುಂದೆ ಚಾರರನಟ್ಟಿಯೀ ಬಂದರೆನಲಖಿಳಬಿಂದದೊಳು ಮೆಱೆವೆ ಪಾತ್ರಗಳನುಪ್ಪರಿಗೆಯೊಳುನಿಂದಿರಿಸಿದರು ಹೊನ್ನರನ್ನ ತೋರಣವನು ಸಮಾರ್ಜನೆಯ ವೀಧಿಗಳನುಚೆಂದಂಬಡೆಯೆ ರಚಿಸಿ ಚಾತುರಂಗಂವೆರಸುಬಂದು ಭೂಪಂ ಕಾಣ್ಕೆಯಂ ಪಿಡಿದು ನೋಡುತಿರಲಂದಣವದೇನೆಂಬೆ ಕಪಟವೇಷಿಯ ಹೃದಯದಂತೆ ನಿರ್ವಯಲಾದುದು
ಕಂಡಿದೇನೋ ಬಯಲ ಬಾಸಣದ ಆಸುರದದಂಡಿಗೆಯ ಭಾರಕ್ಕೆ ಬೆವರುತ್ತ ಬೋವರತಿಬೆಂಡಾದಿರಹುದಹುದು ಎಮ್ಮೊಡನೆ ಅಣಕವೇ ಈ ಪುರದ ರಚನೆ ಮಾಣ್ದುಭಂಡಿಕ್ಕಿ ನಗಬೇಹುದೆಂಬಭಿಪ್ರಾಯಮಂಕಂಡೆನೊಳ್ಳಿಹ ಶಿಷ್ಟವಿಶ್ವಾಸಿ ಪರಿವಾರಕೊಂಡು ಬಂದಿರಿ ಗುರುವನೆಂದು ಆಕ್ಷೇಪಿಸಲು ನಡುಗತ್ತಲಿಂತೆಂದರು
ಬಿನ್ನಹಂ ಮಾಡಬೇಕಾಡಲಂಜುವೆವಿತ್ತಬೆನ್ನೊಳಟ್ಟಿದ ತುರಗಪಾಯದಳವಱಿಯಲ್ಕೆಬಿನ್ನವಿಸೆ ಕಾಣ್ಕೆಗೊಳ್ಳದೆ ಬಾರೆನೆನಲು ಸಿದ್ದೇಂದ್ರನಾಗಳೆ ಕಂಪಗೊಳಲುಎನ್ನ ಪ್ರಾಣವನೊಪ್ಪಿಸುವೆನೆನುತ್ತಲಗಿಂಗೆನಿನ್ನ ಕಾಲಾಣೆ ಹಾಯ್ದಡೆ ಬಲ್ಪಿನಿಂ ಬಿಡಿಸಿಪನ್ನಗಾಭರಣ ಶ್ರೀ ಮಲ್ಲಿಕಾರ್ಜುನ ಬಲ್ಲನೆನಲು ದಂಡಿಗೆ ಚಾಚಿತು
ಹತ್ತಿರಿದ್ದರು ಅಂಗರಕ್ಷರುಂ ಲಾಳರುಂಚಿತ್ತೈಸು ಸುಪ್ಪತ್ತಿಗೆಯೊಳು ಬಿಳಿದ ಪಚ್ಚಡಿಸಿಮುತ್ತಿಯಾ ಪರಿಜನಂ ಬೆಱಗಾಗೆ ಸಿದ್ಧೇಂದ್ರನಂ ತಂದು ಬಿಜಯಗೈಸಿಇತ್ತರದಿ ವಜ್ರಪಂಜರದ ದಟ್ಟಿಯ ಬಿಗಿದುಸುತ್ತ ಪರಿಜನವೈದೆ ಹರಿದು ಬರುತೆಲ್ಲಿಯಿಳುಹಿತ್ತಿಲ್ಲ ಹೊತ್ತ ಮೂವತ್ತು ಬೋವರು ಭಾರದಿಂ ಬಳಲಿದವರೆಂದರು
ಎನಲು ಬೆಱಗಾಗುತ್ತ ಕರ್ಣದೇವಂ ತನ್ನಮನಕತಿ ಮಹಾವಿಸ್ಮಯಂ ಪುಟ್ಟಿ ತರಿಸುವುದಕನುವಾವುದೆನಲು ಆತಂ ಕಂಬುಗೆಯ ಬಂಡಿಯೊಳು ಮಂದಸಂಗೊಟ್ಟಡೆಘನಮಹಿಮನಂ ಪೊಗಿಸಿ ತಹೆನು ಶಿವನೇ ಬಲ್ಲನನುಮಾನ ಬೇಡ ಕಳುಹೆನಲು ಆ ಪರಿಯಿಂದಜನಪನಟ್ಟಲು ಬೇಗದಿಂದ ನಡೆತಂದು ಪುರದೊಳು ಗುರುಪದವ ಕಂಡರು
ದೇವ ನೀವೊಲಿದು ಬಂದಹೆಯೆಂದು ಹುಸಿವರೇಜೀವಕ್ಕೆ ಕಡೆಯಾಯ್ತು ಕರ್ಣದೇವಂ ನಿಮ್ಮನಾವಗಂ ಬಿಜಯಗೈಸಿಯೆ ತರಲ್ಕಟ್ಟಿದಂ ಬರಬೇಹುದೊಲ್ಲೆವೆನಲುಸೇವೆನೆಂದನುಗೆಯ್ಯೆ ಬೇಡ ಬೇಡವೊ ಅಣ್ಣನಾವೇನ ಬಲ್ಲೆವೈ ಮಲ್ಲಿಕಾರ್ಜುನ ತನ್ನಠಾವಿಂದ ತೆರಳುವಡೆಯೆನ್ನಿಚ್ಛೆಯೇನನಲು ತಂದ ಮಂದಸ ತೆಗೆದರು
ಮಗಮಗಿಪ ಕರ್ಪೂರ ಕಸ್ತುರಿಯ ಪರಿಮಳದಸೊಗಸೆಸೆವ ಪೆಟ್ಟಿಗೆಯ ನಡುವೆ ಗದ್ದುಗೆಯಿಕ್ಕಿಬಿಗಿಬಿಗಿದು ಸುತ್ತವೊತ್ತದ ಮಾಳ್ಕೆಯಿಂ ಹಂಸತೂಳದ ಮೃದುವ ಲೇಪಿಸಿಮಿಗೆ ರಂಜಿಸುವ ಪರುಷ ಪುರುಷರೂಪಿನ ಲಿಂಗಸೊಗಸು ಕರಡಗೆಯೊಳಿಡುವಂತಿಟ್ಟು ಬಳಿಕ ಮೂಜಗಭರಿತನನುವಱಿಯದಲ್ಲಿನೆಂದು ಮುದ್ರಿಸಿ ಹೂಡಿ ನಡೆಗೊಂಡರು
ಅತ್ತಲಾ ಬಂಡಿಯಂ ಬಳಸಿ ಪರಿಜನವೆಯ್ದೆಎತ್ತು ತೆಗಎಯದೆ ನಿಲಲು ಮತ್ತೆ ನಾಲ್ಕೆರಡು ಬಲ್ಲೆತ್ತುಗಳ ಹೂಡಿ ನಡೆಯಲ್ಕಿವುಂ ಬೆಂಡಾಗೆ ಮತ್ತೆ ಕೆಲವೆತ್ತ ಹೂಡಿಅತ್ಯಂತ ಹರುಷದಿಂದರಮನೆಗೆ ಹೋಗಿ ನೋಡುತ್ತಿರಲ್ಕಿತ್ತ ಸಿದ್ಧೇಂದ್ರ ಸೀಮೆಯನು ದಾಂಟುತ್ತಲಾ ಮಲ್ಲಿನಾಥನ ಅವಸರದಲಿರಲ್ಕವರು ಬಳಿಕೇಗೈದರು
ಬಂಡಿಯನು ಚಾವಡಿಯ ಮುಂದಿರಿಸಿ ಬೀಯಗದಕೊಂಡಿಯಂ ಕಳಚಿ ಸಲಗೆಯ ತೆಗೆದು ಕಾಳಸದತಂಡತಂಡದ ಹಲಗೆಯಂ ಕೆಲಕ್ಕಿರಿಸಿ ಮುದ್ರೆಯ ನೋಡಿ ಬಿಗಿದ ನೇಣಖಂಡಿಸಿ ಬಳಿಕ್ಕ ಮುಚ್ಚಳ ತೆಗೆದು ನೋಡಲಾಖಂಡೇಂದುಧರನಿಂದಕಂ ಮಹಾಭಕ್ತಿಯಿಂಕೊಂಡಾಡುತಿಹ ಧರ್ಮವೆಂತು ಬಯಲಾಗಿರ್ಪುದಂತು ಹಾಳಾಗಿರ್ದುದು
ಉಸುರಿಕ್ಕಲಱಿಯದತಿ ವಿಸ್ಮಯಂ ತನುಮನವಮುಸುಕಿ ಮರವಟ್ಟು ನೃಪನಿರೆ ಕರಣಶಾಲೆಯೊಳುಪಶುಪತಿಯ ಪಟ್ಟವರ್ಧನ ಬಾಚರಸನು ಸೊಡ್ಡಳನ ಕರುಣದ ತರುಣನುನಸುನಗುತ ಬಂದಿದೇಂ ನಿರುಪಾಧಿಕ ಜ್ಯೋತಿವಶವಹುದೆ ವಾಗ್ಜಾಲದಾ ಹಿರಿಯರೆಂದು ಭಾವಿಸುವರೇ ಗುರುದೈವಶರಧಿಕರಿಗಳನು ಬಲುಹಿಂ ನಿಲಿಸಬಹುದೆಯೆನಲು
ಆದಡಾ ಗುರುವಚನದಂತೆಯಾ ರೂಪಿಗಾಹಾದಿ ಹೊದ್ದುವುದಲ್ಲದೆಮಗಹುದೆ ನೀವದಱಭೇದವಂ ಬಲ್ಲಿರೆಲ್ಲವನು ಬಿನ್ನವಿಸಿ ಪಟ್ಟಾದೇಶ ನಿರ್ಧಾರವಸೋದಿಸಿಂದೇ ಹೋಗಿ ನಾಳೆ ಬಹುದೆನಲವರುಮೇದಿನಿಯ ನಾಣ್ಣುಡಿಯ ವಾರಾಣಸಿಯ ಬಿಟ್ಟಿವೋದರೆಂದೆಂಬುದೆನಗಾಯ್ತೆಂದು ಹರುಷ ಮಿಗಿಲಾ ಪುರಕ್ಕೈತಂದರು
ಚವುಕ ಮೆಱೆವಾಗ ಸಿದ್ಧೇಂದ್ರ ಮುಂದಿರುತ ಬರೆತವಕಿಸುವ ಮನ ಬೆರಸಲನುಗೆಯ್ವ ಬುದ್ಧಿ ಕೂಡುವ ಚಿತ್ತ ಕೃತಾರ್ಥತೆಯಂಕರಣವೆಲ್ಲವೇಕೈಕವಾಗೆಶಿವಶಿವ ಮಹಾಹರುಷ ವರುಷ ಕಂಗಳೊಳು ಅವಯವದಿ ಪುಳಕಂ ಪೊಣ್ಮೆ ಗದುಗದದ ಕಂಪನದನವಮೂರ್ತಿ ನೋಡುತ್ತ ಮೆಚ್ಚುತ್ತ ಶ್ರೀ ವಿಭೂತಿಯ ಕಾಣ್ಕೆಯಿತ್ತೆಱಲು
ಏಳೇಳೆನುತ್ತ ಶ್ರೀ ಹಸ್ತದಿಂ ನೆಗಪಿದಡೆಭಾಳಾಕ್ಷ ಸೊಡ್ಡಳನು ಕರುಣಿಸಿದನೆಂದೆನುತಲಾಳಪಡೆ ದೇವದಾನವ ಮಾನವರ್ಗೆ ದಡಿಗೊಂಡು ಸೊಡ್ಡಳನೆಂಬುದಕೇಳುತಿರೆ ಉಂಡುಂಡು ಜಱೆವವಂ ಯೋಗಿಯೇಬಾಲೆಯರ ಕಂಡೆಳಸುತಿರ್ಪ ಯೋಗಿಯ ಮೂಗಬೀಳಲರಿವಂ ಶಿವಂ ಯೋಗಿ ಪಂಚಾನನಂ ಸೊಡ್ಡಳನು ಎನುತಿರ್ದನು
ಬೀಱದಿರು ಮರುಳೆ ಬಾಚಯ್ಯಯೆನುತಂ ಹರುಷವೇಱುತ್ತ ನಡೆತಂದು ಯೋಗಮಜ್ಜನದನುವತೋಱಿದಂ ನಿತ್ಯಪೂಜೆಯ ಪ್ರದಕ್ಷಿಣ ಸಮಾಧಿಯೊಳಿರ್ದ ಶಿವಗೋಷ್ಠಿಗೆಬೇಱೊಂದು ನಿರ್ಜನಕ್ಕೊಯ್ದು ಅನುಭವ ಸುಖವಹೇಱಿ ಅದಱೈಹಿಕಕ್ಕಾಱೆನೆನೆ ಸೊಡ್ಡಳಗೆಬೇಱಾಗದಂತೆ ಸಲುವಂದಮಂ ಹೇಳೆ ಬಿನ್ನೈಸಿದಂ ನೃಪನೆಂದುದಂ
ಹರ ಮುನ್ನ ಹರಸಿ ಕಟ್ಟಿದ ಲಿಖಿತಪಟ್ಟಮಂಪರಿಹರಿಸಿ ಮತ್ತೊಂದ ಮಾಡುವೀ ಸಾಮರ್ಥ್ಯಹರಿಯಜರಿಗಾಗದೆನೆ ಸುರರ ನರರಳವೆ ಮಲ್ಲಯ್ಯನೇ ಬಲ್ಲನೆಂಬಗುರುವಚನಮಂ ಕೊಂಡು ಮರಳಿಯವರ್ಗಱಿಪಿ ಬಾಚರಸ ಸೊಡ್ಡಳ ಲಿಂಗದೊಳು ಸಂದನೆಂಬುದಂನಿರುಪಮನು ಕಂಡು ಮತ್ತೊಂದು ವಚನವ ಹಾಡಿ ಸುಖಮಿರ್ಪ ಕಾಲದೊಳಗೆ
ಬೆಕ್ಕೊಂದು ಮನೆಮನೆಯೊಳಿರ್ದು ಮಱಿಯಂ ಬೇಱೆಯಿಕ್ಕೆಗೊಯ್ದೊಂದನಿರಿಸಿದ ಗುಡಿಲ ಬೇಗೆಯೊಳುಸಿಕ್ಕಿ ಸಾಯಲು ಹಿಂದೆ ಇರ್ದ ಮಱಿಯಱಚಿದಡೆ ಗುರು ಕೇಳ್ದು ಕರುಣ ಹುಟ್ಟಿಎಕ್ಕವಿಂಡೊಬ್ಬನಿಂದವಱ ಶವಮಂ ತರಿಸಿಸುಕ್ಕಿ ತನು ಮುರುಟಿದವಱೊಳು ದಾನಮಂ ಚಿಲ್ಲೆಮಕ್ಕಳನಱಸುತೇಳೆ ಕರೆದಮೃತಕರದಿ ತಡವಲು ರೋಮ ಕೋಮಳಿಸಿತು
ಅಗಳದು ನಲಿದು ಮಱಿಗಳಿಗೆ ಮೊಲೆಗೋಡುತ ಸೊಗಸಾಗಿರ್ಪುದಂ ಕಂಡು ಕೆಲರು ಸೋಜಿಗವೆನಲುಮೇಗಱಿವರಲ್ಲಿ ಇದು ಅರಿದೆ ಬ್ರಹ್ಮಾಂಡಂಗಳಾಗುಹೋಗಿನ ಜಾಣಿನಸಾಗರಂಗೇನರಿದು ಎನುತಿರಲು ಗುರುಭೃತ್ಯನಾಗಿರ್ಪ ಬೊಮ್ಮಿಸೆಟ್ಟಿಗೆ ಸಿದ್ಧನಾಜ್ಞೆಯಂರಾಗಂ ಮಿಗಲು ಕಾಳಿಯಬ್ದೆ ಸತಿಯಾಗಿ ಹತ್ತೆಂಟು ಮಕ್ಕಳ ಹಡೆದಳು
ಒಂದು ದಿನವವರ್ಗೆ ಪ್ರಸಾದ ಹಸುಗೆಯ ಬಾರಿಬಂದಪ್ಪುದೆಂದು ಮಕ್ಕಳನು ಅಳಿಯಂದಿರಂಹೆಂದದಿಂ ನಂಟರಿಷ್ಟರ ಬರಿಸಿ ಗೃಹಶೋಭೆಯಂ ಮಾಡಿಯನಿಬ್ಬರೈದೆಮಿಂದು ಮೈದೊಳೆದು ಸಿಂಗರಿಸುತಿರಲಂತವರಹಿಂದೆ ಯಜಮಾನಿತಿಯೆನಿಪ್ಪ ಕಾಳವ್ವೆಯಂಬಂದು ಕಾಳೋರಗಂ ಹಿಡಿಯೆ ಸತ್ತಳು ಮೀಸಿ ಕುಳ್ಳಿರಿಸಿ ಗೋಳಿಟ್ಟರು
ಆ ಸುದ್ದಿಯಂ ಕೇಳ್ದು ಬೊಮ್ಮಿಸೆಟ್ಟಿಯುಮಿನಿತುಕ್ಲೇಶ ದುಗುಡಂದಳೆಯೆ ಗುರುಪ್ರಸಾದಂಗೊಂಡಡಾ ಸತಿಯ ಹೊಱಗೆ ದಾನವ ಕುಡಿಯಲೆಂಬ ವಿಶ್ವಾಸವಿರೆ ಸಿದ್ಧೇಂದ್ರನುಏಸು ಕೆಲಸವನಱಿಯದಂತೆ ಹೇಳ್ವಡೆ ಮಾಡಿಬೀಸಱಿಕೆಯಳಲುದೋಱದ ಭಕ್ತಿಭಾವಮಂಲೇಸೆಂದು ಮೆಚ್ಚಿ ರಾತ್ರಿಯಲಿ ಮಹಪಡಿಯ ಪರಿಯಾಣ ಪಾತ್ರೆಯನಿತ್ತನು
ಕಾಳವ್ವೆಯಂ ಕೂಡಿಕೊಂಡು ದಾನವ ಕುಡಿಯಲೇಳು ಮಕ್ಕಳು ಹಸಿದವೆನುತ ಪ್ರಸಾದಮಂಭಾಳಲೋಚನನ ಅವತಾರ ಕರುಣಿಸಲು ಹರುಷಂದಳೆದು ತರ್ಪಾಗಳುಗೋಳಿಡುತ್ತಿನ್ನಾರ್ಗೆ ತಂದೆ ತಂದೆಯೆ ಎಂದುಬಾಲೆಯರು ಬಾಯ್ವಿಡುವುದಂ ನಿಲಿಸಿ ನಿಂದು ಬೇಗೇಳು ಗುರುಕರುಣ ಪ್ರಸಾದವಿದೆಯೆನೆ ನಿದ್ರೆ ತಿಳಿದೇಳುವಂತೆದ್ದಳು
ನಟ್ಟ ಗುಂಟವ ತೆಗೆದು ತಾನೆ ಬೀಸಾಡುತ್ತಹೊಟ್ಟೆಯಂ ಹತ್ತಿ ಮೊಲೆಗಲವರುವವರ್ಕೂಡೆಉಟ್ಟ ಹೊಸ ಸೀರೆ ಮುಡಿಸಿದ ದಂಡೆ ಗುರುಕರುಣದಿಂದ ಮಂಗಳವಾಗಲುಬಟ್ಟೆಯೊಡೆವಂತೊಱಲುವವರು ನಗುತಂ ನಲಿವುಹುಟ್ಟಿಯಾನಂದಮಯರಾಗೆಲ್ಲರುಂ ಪಂತಿಗಟ್ಟಿ ಕುಳ್ಳಿರ್ದು ದಾನವ ಕುಡಿದು ಗುರುಪದವ ಹಾಡಿ ಹರಸುತ್ತಿರ್ದರು
ಇಂತು ಪುಣ್ಯಖ್ಯಾತಿಯಂ ಕೊಂಡು ವಚನವ ದಿಗಂತದೊಳು ಹಾಡುತಿರೆ ಕೇಳಿ ನೋಡಲು ಬಂದಕಾಂತೆಯೊಬ್ಬಳು ಜಂಗಮವ ಕೂಡಕೊಂಡು ಹಾಡುತ್ತಮಿರೆ ಗುರು ಮೆಚ್ಚುತಸಂತತಂ ದಾನವಿತ್ತವರ ಸಲಹಲ್ಕೆ ನಿಶ್ಚಿಂತರೇಲೇಶ್ವರದಿ ಮಠವ ಕಟ್ಟಿರಲವರಸಂತೋಷಲತೆ ಫಲಿತವಪ್ಪಂತೆ ಆಕೆಗೊಬ್ಬಂ ಪುತ್ರನುದಯಿಸಿದನು
ಬಾಲಂಗೆ ಬಾರಸವ ಮಾಡಿ ತೊಟ್ಟಲೊಳಿಕ್ಕಿಏಲೇಶನೆಂದು ನಾಮವ ಕೊಟ್ಟು ಕರೆಯುತ್ತಲೀಲೆಯಿಂದೆಕ್ಕವಿಂಡಿಂಗೆ ಮುದ್ದಾಗಿ ಗುರುಪದವನೋಲೈಸಿ ಪಲವುಕಾಲವಿರುತಿರುತ ಚಿಣ್ಣಂಗೆ ಮದುವೆಯ ನೆನೆದುಬಾಲೆಯಂ ನೋಡಿ ಮಾಡುವೆನೆಂಬ ಹೊತ್ತು ಬಂದಾಲಿಂಗಿಸಿತ್ತು ಆತನ ತನುವನುರಿಯಿಲ್ಲದುಷ್ಟವತಿತೃಷ್ಣೆ ಮಿಗಲು
ದಾಹ ಪಿರಿದಾಗೆ ನೀರಂ ಕುಡಿದು ಬಾಯಾಱಿಕಾಹೊಳಂಗಡಗಿ ತಾಪದಲವಂ ಬಳಲುತ್ತಬೇಹೈಸಿಯಂದುದಕಮಂ ಕುಡಿಯಲವರವ್ವೆ ಬೇಡಯ್ಯ ಕಳಲ ಕೊಳಲುದೇಹದುರಿ ತಗ್ಗುವುದೆನಲು ಕೊಂಡು ಬಾ ಎನುತಹಾ ಹೋದೆನೆನುತ ಜೀವಂಗಳೆಯಲಂತವಳುಹಾ ಹಾಯೆನುತ್ತ ಗೋಳಿಟ್ಟು ನಾಲಗೆ ಕಿತ್ತುಕೊಳಲು ಹಿಡಿದರು ಜಡಿದರು
ಪುತ್ರ ಶೋಕಾಗ್ನಿ ಭುಗಿಲನೆ ನೆಗೆಯಲಳಲುರಿಗೆಧಾತ್ರಿಯೊಳು ಕೆಡೆಯೆ ತಲೆಯೊಡೆಯಲಾಕೆಗೆ ನೋವುಮಾತ್ರವಿಲ್ಲದೆ ಜೀವಗಳೆಯುತ್ತಲೆಂತಕ್ಕೆ ಎಚ್ಚಱಲು ಸಂಕ್ರಾಂತಿಯಜಾತ್ರೆಗೈತಂದ ಜನ ಕಂಡು ಶೋಕಿಸಿ ಕೆಲರುನೇತ್ರತ್ರಯನು ಮಲ್ಲಿಕಾರ್ಜುನನ ಮನೆಯಲಿಹಸೂತ್ರಧಾರಕನು ಶ್ರೀ ಗುರು ಮಾಡಿದಂತಿರ್ದು ಪರಿಣಾಮಿಸೆನೆ ಹರಿದಳು
ಕೆಱೆಯಿಂದ ಮಲ್ಲಿಕಾರ್ಜುನನ ಮಂದಿರಕೆ ಜಗದೆಱೆಯನೆನಿಸುವ ಸಿದ್ಧಪತಿ ಬರುತ್ತಿರೆ ಕಾಣುತೊಱಲಿ ಹಳಿಲನೆ ಬಿದ್ದು ಏಕೆಯೆನ್ನುವವನಾಥೆಯನು ಕರುಣಿಸಿ ನೋಡದೆಅಱೆ ಕಡೆ ತಂದೆ ಕಣ್ಣಿಂಗೆ ದಿಮ್ಮಿದನೆಯೆನೆಬೆಱಗಾಗಿದೇನೆನೆಲು ತಾನೆಯೊಯ್ದೀಗ ಮತ್ತಱಿಯದಂದದಲೆನ್ನ ಬೆಸಗೊಂಡಪಂ ನೋಡಿರಯ್ಯ ಎನುತೊಱಲ್ದತ್ತಳು
ಏನನೊಯ್ದೆಂ ತಾಯೆ ಹೇಳೆನಲು ಎನ್ನಯ ನಿಧಾನವಂ ಹೊನ್ನ ಪುತ್ತಳಿಯ ಮಾಣಿಕದೊಡವನೀನೊಯ್ದೆಯೆನ್ನ ಕಂದನನೆನ್ನ ಕಣ್ಣೊಂದನೆನಲು ಬೆಱಗಾಗಿ ನೋಡಿಏನು ಮಾಡುವೆನಕ್ಕಟಾ ಮಲ್ಲಿಕಾರ್ಜುನನುತಾನೊಲಿದಡೊಯ್ವನಲ್ಲದೊಡಿರಿಸುವವನಲ್ಲನೀನು ಸೈರಿಸು ಬೇಗಮಾಡಿ ಕೇಳಿಕೆ ವಿಮಾನದಲೊಯ್ವುದೀಗವೆನಲು
ಅಕ್ಕಟಾ ಕರುಣವಿಲ್ಲಾ ತಂದೆ ಆದಡೀಚಿಕ್ಕವಂ ಸೊಲ್ಲಿಗುಪ್ಪಂ ಸವೆಯಲುಣ್ಣನಾಬೆಕ್ಕಿನಿಂ ಕಷ್ಟನೇ ಆದಿಲಿಂಗನ ಬಂಡಿಯೆತ್ತಿ ನಿಂದಿವ ಹೀನನೇಮಕ್ಕಳಲ್ಲಾ ಹೇಳು ನಿನ್ನ ಪಾದವ ನೆನೆದುದಿಕ್ಕು ದಿಕ್ಕಿನಲು ತೊಳಲುವ ನಿಶಾಚರಿಯ ನೀಂಸಿಕ್ಕಿಸಿ ಬಳಿಕ್ಕಿಂತು ಗೋಣ ಕೊಯ್ವರೆ ಕಾಳಿಯಬ್ಬೆಗಸುವಿತ್ತೆಂದಳು
ಸೆಱಗೊಡ್ಡಿ ಬೇಡಿದೆಂ ಪುತ್ರದಾನವ ಕೊಟ್ಟುಮೆಱೆದುಕೊಳ್ಳಾ ಸಿದ್ಧ ಅಕ್ಕಟಾ ಕೀರ್ತಿಯನುಹಱೆಯ ಕುಟ್ಟುವೆನು ಜಗದೊಳಗೆಂದುವೊಱಲುತ್ತವಿರಲಿಕೆ ವಿಮಾನವತ್ತಮೆಱೆಯುತ್ತ ಬರ್ಪುದಂ ಕಂಡು ಮೊರೆಯೋ ಹೊನ್ನಮಱಿಯನುಂಬನ್ನ ಜವ ಮಾನ್ದುದೆಂದೊಡೆ ಮಾಣ್ದುಮುಱಿದು ಕೊಂಡೊಯ್ದೆ ದೇವಾ ಕಳಲ ಕುಡಿವನ್ನ ಸೈರಿಸುವುದೇನೆಂಳು
ಬಟ್ಟಲೊಳು ಕಡೆದಿರ್ದ ಕಳಲ ಕುಡಿದಪೆನೆನುತಬಿಟ್ಟನಸುವನು ಅಕ್ಕಟಾ ಅದಂ ಕುಡಿಯಲ್ಕೆಹೊಟ್ಟೆಯಂ ಹೊಕ್ಕ ಬಳಿಕಾದೊಡಂ ಹೋಗಲೆಂದೆನಲು ತಾಯೆನೆ ತಂದಳುಸೃಷ್ಟಿಯ ಜನಂ ಕಾಣೆ ಕರೆದೊಡೋಯೆನೆ ನಲಿದುಕೊಟ್ಟಡದ ಕುಡಿದು ಉದಕವನು ಮುಕ್ಕಳಿಸುತ್ತಬಿಟ್ಟ ಪ್ರಾಣವನು ಮತ್ತಾಕೆ ಗೋಳಿಡೆ ಇನ್ನು ಎನ್ನ ವಶವಲ್ಲೆಂದನು
ನಾಡೆಲ್ಲ ಬಂದು ನೆರೆದಿರ್ದ ಜಾತ್ರೆಯ ಪರುಷೆನೋಡಿ ಬೆಱಗಾಗಿಯಿಂತಪ್ಪ ಸಾಮರ್ಥ್ಯಮಂರೂಢಿಯೊಳು ಮುನ್ನ ಕೇಳಿದರಿಲ್ಲ ಕಂಡರೆಂತೂ ಇಲ್ಲವೆನುತ ಹರೆದುನಾಡುನಾಡೊಳಗೆಲ್ಲಿಯುಂ ಸಿದ್ಧಪತಿಯ ಕೊಂಡಾಡುತ್ತ ರಾಯರಧಿಕಾರಿಗಳು ನಡೆತಂದುನೋಡುತ್ತ ಗುರುವಿಂಗೆ ಬೆಸಕೈದು ಬಾಳುತ್ತಮಿರಲು ಕೌತುಕ ನೆಗೆದುದು
ಎಲ್ಲಿಯಾದರು ಹಾವು ತಿಂದವರ ಬೇಗೆಯೊಳುಹುಲ್ಲಾಗಿ ಮುರುಟಿ ಸತ್ತವರ ವ್ಯಾಧಿಯೊಳಳಿದರೆಲ್ಲರಂ ಹೊತ್ತು ಹೊತ್ತೈತಂದು ಮಹಮನೆಯ ಬಾಗಿಲೊಳು ಬಿಸುಟರೆನಲುಹುಲ್ಲು ಕಚ್ಚುವರ್ಗೆ ಕರುಣಂದೋಱಿ ಬಾಯಳಿದುಲಲ್ಲೆಗರೆವರಿಗೆ ಗುರು ಕರುಣಿಸುತ ಸುಮ್ಮನಿಪ್ಪಲ್ಲಿ ಬಂದಂ ಲಿಂಗದೊಳಗೆ ನೆಱೆ ನಟ್ಟದೃಷ್ಟಿಯ ಧೀರನೆನಲಲ್ಲಮ
ಲಿಂಗದ ಮಹತ್ವ ಮನದಿಂ ತನುವ ವೇಧಿಸಲುಮಂಗಳವೆನಿಪ್ಪ ಬೆಳಗಳವಟ್ಟು ಭೌತಿಕಕೆಹಂಗಿಗತನವನುಳಿದು ಸುಖದಿ ಮೆಱೆಯುತ್ತ ಸದ್ಯೋವರವ ನೀಡುವಂತೆರಂಗರೀತಿಯಿನೆಸೆವ ವಚನದಿಂ ತ್ರೈಜಗವಭಂಗಿಸುತ ಬಸವರಾಜನ ಜಾನಿಸುತ್ತೊಂದುಜಂಗಮಾಕಾರವಿಡಿದಿಹ ಮಹಾಂತನು ನೋಡ ಬಂದ ಸೊನ್ನಲಿಗೆ ಪುರಕೆ
ಕೆಱೆಯ ಕೆಲಸದಲಿ ಸಿದ್ಧೇಂದ್ರನಿರುತಿರೆ ಬಂದುಹಱಿವಿಲ್ಲವೆನುತ ಕರೆಯೋ ಒಡ್ಡರೆಱೆಯನಂಕೊಱೆಕೂಲಿಗೊಂಡನೋ ನಾಳೆ ಮಿಕ್ಕುದನಗೆಯಬಾರದೇ ಎಂಬನ್ನೆಗಂಅಱಿದನಾಗಳೆ ಜಗಜ್ಜನದ ಅಂತರ್ಯಾಮಿಕುಱುಹುವಿಡಿದುಂ ಜಱೆವುದಂ ಕಂಡು ಅಲ್ಲಮಂಗಱುಹಿಸುವೆ ಬಡವ ಮಡಗಿದ ಕಡವರದ ತೆಱದ ಮಕುಟದ ಮಱೆಯ ಲಿಂಗವ
ಎಂದು ನಸುನಗುತಲ್ಲಮನ ಸಮ್ಮುಖಕೆ ಬಂದುನಿಂದುತ್ತಮಾಂಗ ಮಧ್ಯದ ವಸ್ತ್ರಮಂ ಬೆರಳಿನಿಂದಲೋಸರಿಸೆ ಕೆಮ್ಮುಗಿಲ ಸಂಧಿಯೊಳಿಂದುಕೋಟಪ್ರಭಾಪಟಲಮಂಹಿಂದುಗಳೆದೆಸೆವ ಶೈತ್ಯ ಪ್ರಜ್ವಲಿತ ಕಾಂತಿಯಿಂದೆಸೆವ ನಿರುಪಾಧಿಕ ಜ್ಯೋತಿಲಿಂಗವಿಪ್ಪಂದಮಂ ಬಾಹ್ಯಕ್ರಿಯೆಯೊಳು ಬಳಕೆಯಂ ತೋಱಲಲ್ಲಮಂ ಮತ್ತೆಂದನು
ಲೋಹ ಸಂಗದಿ ಕಿಚ್ಚು ಬಡಿಹಡೆದುದೆಂಬಂತೆದೇಹಸಂಗದೊಳಾತ್ಮನಾಯಸಂಬಡುವಂತೆಬೇಹುದೊಂದಳವಟ್ಟ ಬಳಿಕ ಬಿಡಲಾಗದೆನೆ ನೆರೆಯವರಿಗತ್ತು ಕಣ್ಣುಹೋಹಂದ ನಿಮಗೆನಲು ದೊರಕಿದಾತಂ ಸವಿಯಬೇಹುದೇ ಮತ್ತಾರ್ಗೆ ದೊರೆಕೊಳುವುಪಾಯಕ್ಕೆಸೋಹೆಯಂ ಕೊಡಲಾಗದೇ ಜಗಜ್ಜನದ ಕೃಪೆಗೆಂದನಾ ಸಿದ್ಧೇಂದ್ರನು
ಜಡರ ನಡುವಿರಲವರ ಸಂಗದಿಂ ಕಾಯಗುಣವಿಡಿದು ಬಳಲುವರೆನಲು ನಸುನಗುತ ಗಾಳಿಯಂಹುಡಿ ಹಿಡಿವುದೇ ರಸನೆ ಹೆಡಸಹುದೆ ಆಲಿಯಂಜನವನೊಳಕೊಂಡಿರ್ಪುದೆಪೊಡವಿಯೊಳು ಶಿವಯೋಗಿ ಸುಳಿದಡಂ ನೀರ ನಡುವಿಡಿದ ಕಂಜದ ತೆಱದಿ ಭಕ್ತಿಯುಕ್ತನು ಅಲ್ಲಮೃಡಮೂರ್ತಿಗಗ್ರನೆಂದೆನುತ ಹಾಡಿದನು ಗುರುವಚನವಲ್ಲಮ ಮೆಚ್ಚಲು
ಲೋಕವೆಲ್ಲಂ ಬದುಕಲೆಂದು ನಾಗಾರ್ಜುನನದೇಕೆ ಹೋಗಾಡಿದಂ ತಲೆಯನಾ ವ್ಯಾಳಿ ಬಳಿಕೇಕಾದ ಬೆಳ್ಳಿ ಕೋರಾಂಟಕಂ ನೀರೊಳೇಕದ್ದನೆನಲಱಿದುದಿಲ್ಲಏಕನದ್ವಿತಿಯನೆನಿಸುವ ಲಿಂಗಮಂ ನಂಬದಾ ಕಾರಣಂ ಕೆಟ್ಟರಲ್ಲದವರಳಿವರೇಸಾಕಾರನಿಷ್ಠೆ ಭೂತಂಗಳೊಳಗನುಕಂಪೆ ತಾನೆ ಪರಬೊಮ್ಮವೆನಲು
ಆಗಲಹುದದಕೇನೊಡಂಬಟ್ಟೆನೀ ಯುಗಂಬಾಗಿ ಬಲಗಾಲಿನುಂಗುಟವನೂಱಲ್ಕಂಜಿಯೋಗಿಗಳು ಕದಳಿಯಂ ಮುನಿಗಳನಿಬರು ಮೇರು ಮಂದರಗುಹೋದರವನುಭೋಗಿಕುಲ ಸರ್ಪಲೋಕಕ್ಕೆ ದಿವಿಜರು ದಿವಕೆಸಾಗರದ ಕಟ್ಟೆಯಂ ಕಟ್ಟಿ ರಾಕ್ಷಸರು ಭಯರಾಗಿರ್ಪರೆಂಬಾಗ ಮಾನವರ ನಡುವಿರಲು ಬೇಡ ಸಿದ್ಧೇಂದ್ರಯೆನಲು
ಅದನು ನಾ ಬಲ್ಲೆನೀ ಯುಗದ ಜೀವರ ಪುಣ್ಯದೊದವಿಂಗೆ ಕೈಕೊಂಡ ಮೂರ್ತಿಯಿದು ಹುಸಿಯ ಮಾಡಿದೆನಾದೊಡುಳಿದ ಮಾನವರ ಪರಿಯೈಸಲೇ ಅಲ್ಲಮ ಪ್ರಭುವೆಯೆನಲುಚದುರ ನಿನ್ನೀ ಸೃಷ್ಟಿಯೇ ಬೇಱೆ ಅದಕೆ ಮೆಚ್ಚಿದೆನು ನೀನಿರ್ದುಮಿಲ್ಲೆಂಬ ಬಯಲಿನ ಭ್ರಮೆಯಬೆದಱ ಬಿಸುಡೆಂದು ಶಿವಸುಖಗೋಷ್ಠಿಯಿಂದ ಕದಳಿಯ ಬಟ್ಟೆಗೊಂಡ ಪ್ರಭುವು
ಸಂತರನುಭವ ಸ್ವಾನುಭವವಾಗಿ ಮನದೊಳಗೆಚಿಂತಿಸಿದ ಕೆಱೆಯ ಮಧ್ಯದ ಯೋಗಿನಾಥನ ಗೃಹಾಂತರದೊಳೊಂದು ಗೊಪೆಯಂ ಮಾಡಿ ನಡುಗುಂಡಿನೊಳು ಬಾಗಿಲಂ ಮಾಡಿಸಿಚಿಂತಿಸಲ್ಕರಿದೆನಿಪ ವಜ್ರದ ಕವಾಟದಿಂಭ್ರಾಂತುಗೊಳಿಸುವೆ ಸರ್ವ ಜನವನಿಲ್ಲಿಹೆನೆಂದುಮುಂತಿನಂತೀ ಕ್ಷೇತ್ರದೊಳಗು ಹೊಱಗೆನ್ನದಂತಿರುತಿರ್ದು ತೋರ್ಪೆನೆಂದ
ಹತ್ತೈದು ದಿವಸಮಂ ಕಳೆದು ಶಿವಕೂಟಣಿಯೆಇತ್ತ ಬಾಯೆನಲು ಹಾವಿನ ಹಾಳ ಕಲ್ಲಯ್ಯನತ್ಯಂತ ಹರುಷಮಯನಾಗಿ ಪುಳಕಿತಗಾತ್ರ ಮೈಯಿಕ್ಕಿ ಕೆಲಸಾರ್ದಡೆಹತ್ತಿರ್ದವರ್ಗೆ ಬೆಸನವ ಕೊಟ್ಟು ಕಳುಪುತ್ತನಿತ್ಯತೃಪ್ತನು ತಾನೆನಿಪ್ಪ ಗುರುವೇಕಾಂತಚಿತ್ತನಾಗಿರ್ದು ಮತ್ತಾತಂಗೆ ಮನದಾಯತವ ಹೇಳಲನುವಾದನು
ಎಮ್ಮ ಮನವೊಂದಂ ನಿವಾತ ಗೊಪೆಯಂ ಸವೆಸಿಸುಮ್ಮಾನದಿಂದ ಪದ್ಮಾಸನವ ಚಲಿಯಿಸದೆಹಮ್ಮಮತೆಯಂ ಬಿಟ್ಟು ಆತ್ಮನ ವಿಚಾರದಿಂ ಪರಮಕಾಷ್ಠೆಯನ್ನೆದುವನೆಮ್ಮುಗೆಯ ನೆನೆನೆನೆದು ಪರಮ ಶಿವತತ್ವವನುಬೊಮ್ಮವೆಳಗಿನ ಬೆಳಗುವೆರಸಿ ಬೆಱಗಾಗದಿಪ್ಪುಮ್ಮಹದಭೀಷ್ಟಮಂ ನಿನಗೆ ಹೇಳಿದೆವೆನಲು ದೇವ ಬಿನ್ನಪವೆಂದನು
ನಿತ್ಯತ್ವಮುತ್ತಮಾಂಗವ ಪಡೆದುದೆಂಬಂತೆಸತ್ಯಸಮತೆಯ ಧರೆಗೆ ಪೇಳಲೆಳಸಿರ್ದಂತೆಅತ್ಯಂತ ಭೂತದಯೆ ಅವಯವಂಬಡೆದುದೋ ಯೋಗಿಗಳ ಚಿತ್ತವೆಳಗುಪ್ರತ್ಯಕ್ಷ ಗುರುರೂಪ ಧರಿಸಿ ರಾಜಿಸಿ ಪರಮತತ್ವವೆನಿಸಿಹ ನೀನು ನೆನೆವುದೇನೈ ಜಗದಕತ್ತಲೆಯ ಕಳೆಯಲೆಂದವತರಿಸಿ ಬಂದೆ ನೀ ನಿನಗೆ ಪರವೇನೆಂದನು
ನೀನಱಿಯೆ ಮಲ್ಲಿಕಾರ್ಜುನನೊಬ್ಬನೇ ನಿತ್ಯಜ್ಞಾನಮಯ ಸರ್ವಜ್ಞ ಷಡ್ಗುಣೈಶ್ವರ್ಯಂಗಳೇನುವುಂ ಕೊಱತೆಯಿಲ್ಲದಲೆಸೆವ ನೆನದೆನ್ನ ನೀನಿಹಗೆ ಕೀರ್ತಿಸುವರೇಭಾನುವಿನ ಮುಂದುಳಿದ ಬೆಳಗೆಸೆವುದೇ ಶಿವಜ್ಞಾನ ನಿನಗುಂಟೆಂದು ಆಲೋಚಿಸಿದೊಡೆಮಗೇನುವುಂ ತತ್ವನೆಮ್ಮುಗೆಯ ಹೇಳದೆ ಸ್ತೌತ್ಯಮಂ ಮಾಡಿ ಕಳೆದೆಯೆನಲು
ಧರೆಯಱಿಯುತಿರೆ ಕಪಿಲಸಿದ್ಧ ಮಲ್ಲೇಶ್ವರನಹರವರಿಯ ನಾಮವಿದೆ ನಾ ಕೊಟ್ಟೆನೇ ತಂದೆನಿರುಪಾಧಿಕ ಜ್ಯೋತಿಮಯ ನಿನ್ನ ಕಾಯಕ್ಕೆ ನೆಳಲಡಿಗೆ ಹಜ್ಜೆಯಿಲ್ಲನರಲೋಕದನ್ನಪಾನದ ಹಂಗು ನಿನಗಿಲ್ಲಸುರರಸುರಮಾನವರೊಳಿನ್ನು ಮುನ್ನೆಂದುಂಟೆಪರಬೊಮ್ಮ ನೀ ನಿಮ್ಮ ನೆನೆವಾತನೇ ಬೊಮ್ಮಧಾರಿಯೆನುತಿಂತೆಂದನು
ಲೋಕದೊಳು ನರರಂ ಕೃತಾರ್ಥತೆಯ ಮಾಡಲೆಂದಾಕಾರವಾದ ಶಿವಸಿದ್ಧಮೂರುತಿ ದೇವಸಾಕಾರ ನಿಷ್ಕಳಾಕಾರ ವೇದಿಸಲು ಸರ್ವರಿಗೆ ಬೊಮ್ಮದ ಪೆರ್ಮೆಯಬೇಕೆಂಬನಿತು ಸೂಱೆಯೇಂ ಸುಲಭವಾಗಿತ್ತೆಏಕಕ್ಕಟಾ ಬಯಲ ಭ್ರಮೆಯನೆಲ್ಲರಿಗಿಕ್ಕಬೇಕಾದಡಿಕ್ಕು ದೇವರು ಸ್ವತಂತ್ರರು ನಮೋ ನಮೋ ಎಂದು ಶುದ್ಧನೆನಲು
ಕಲ್ಲಯ್ಯನೆಂದ ಬಿನ್ನಹಕೆ ಉಮ್ಮಹದಿ ಕರಪಲ್ಲವದಿ ಮೈದಡವಿ ಬೋಳ್ಳೆಸಿ ನಿನ್ನಂತೆಬಲ್ಲರಾರೂ ಇಲ್ಲ ಮನವ ವಂಚಿಸಬಹುದೆ ನಮಗಾಗದಿರವೆಂಬುದುಹೊಲ್ಲಹುದು ಕಲಿಕಾಲ ನರರು ಸುರರಸುರರಿಂಬಲ್ಲಿದರು ಅದು ಕಾರಣಂ ಸಮಾಧಿಯ ಧರೆಗೆಪಲ್ಲವಿಸಿ ಮಲ್ಲಿಕಾರ್ಜುನನ ಕ್ಷೇತ್ರದೊಳಿರ್ದು ಇರದಂತೆ ತೋರ್ಪೆನೆನಲು
ಅದನಾನೊಡಂಬಡಲ್ಕಾರ್ಪೆನೇ ದೇವ ಶ್ರೀಪದವ ನೋಡಿದ ಕಣ್ಣು ಕೀರ್ತಿಸಿದ ಬಾಯಿ ಮಾಣದೆ ನೆನೆವ ಮನ ನಿನ್ನ ಹಂಬಲಿಂ ಮತ್ತೊಂದಕೆಳಸದದಱಿಂದಲೆನಗೆಹೃದುಗತಂ ನೀನು ನೆನವರ ಮನವೆ ಮನೆಯೆಂಬುದಿದು ನಿನ್ನ ವಚನಮಂ ನಂಬಿದೆನು ಗುರುವೆಯೆನೆಯದನೆ ಮೆಚ್ಚುತ್ತಣ್ಣ ಬೊಮ್ಮಯ್ಯ ಕೇತಾರ ಗುರುಗಳಿಗೆ ನೇಮವಿತ್ತ
ಧರೆಯಱಿಯೆ ಕೆಱೆಯ ನಡುವಣ ಸಮಾಧಿ ಸ್ಥಳವಪರಮಮಂಗಳವೆನಲು ಬೇಗ ಖನನವ ಮಾಡಿತರವಿಡಿದು ಭಿತ್ತಿಯಂ ಕಂಬಂಗಳಂ ಮೇಲೆ ಕವಿವ ಅಱೆಗಲ್ಲ ತರಿಸಿಹಿರಿಯದೊಂದೆಮ್ಮೆಗುಂಡದೆ ಅದಱ ಬಾಗಿಲಂವಿರಳವಾಗಿರಲೊಳಗೆ ತೋಡಿ ಕೀಲಿನ ಕಲ್ಲಕರ ಚೆಲುವ ಕಾಳಸಗಳಳವಡಲು ಮಾಡಿ ಬೇಗದೊಳೆನೆ ಭಯಂಗೊಂಡರು
ದೇವ ಇದ್ದಿದ್ದಿದೇನೇನ ನೆನೆದಿರಿ ಇಲ್ಲಿಯಾವುದುಂ ಸ್ಥಳವಿಲ್ಲವೇನು ಘಾತಕವಾಯಿತಾವ ಕಾರ್ಯದೊಳೀಗ ಗೊಪೆಗೆ ಬಿಜಯಂಗೆಯ್ದುದೇಕೆ ಬಿನ್ನಪವೆಂದೆನೆನೀವಿದಕ್ಕಂಜಲೇಕಾನೀ ಮಹಾಕ್ಷೇತ್ರದಾವಿಸದೊಳು ಸಮಾಧಿಯೊಳಚಲನಾಗಿರಲ್ಯಾವಗಂ ಈ ಪುರದ ಮಹಿಮೆ ಮಂಗಳವಾಗಿ ಮೆಱೆಯುತಿರಬೇಹುದೆನಲು
ಎಕ್ಕವಿಂಡಂ ಕರೆದು ಮಲ್ಲಿಕಾರ್ಜುನನ ಬೋನಕ್ಕೆ ಸತ್ರಕ್ಕೆ ಮಳೆಯದೆ ನಂಬಿ ಬೆಸಕೈದುಇಕ್ಕಿದಾ ಬೀಯದಿಂ ದಾನವನು ಉಂಡು ಕಲುಗೆಲಸ ಕೊಟ್ಟಿಗೆ ಕೆಱೆಯಲಿಅಕ್ಕುಳಿಸದಲಸದಂಜುತ್ತ ಮಾಡಿದಡವರ್ಗೆಸಿಕ್ಕುವುದು ಮುಕುತಿ ಕರತಳಾಮಳಕವೆಂದುನಿಕ್ಕವಿಪ್ಪುದು ಸುಖವು ಮಾಡುವುದು ಕೂಡಿ ಲಿಂಗದೊಳಗೈಕ್ಯವ ಪಡೆವೊಡೆ
ಕರುವಾಗಿ ಹಾಡಿದೀ ಗೀತಮಂ ಬಲ್ಲೆವೆಂಬರಿಗೀಗ ಯೋಗಮಜ್ಜನದನುವ ತೋಱುವುದುಉರವಣೆಯ ಬಿಟ್ಟು ಪರಿಣಾಮವಳವಟ್ಟು ನೆಟ್ಟನೆ ಶಿವನ ನಂಬಿರ್ಪುದುಪರಕ್ಷೇತ್ರದತ್ತಣಾಸೆಯನುಳಿದು ಇಲ್ಲಿರಲುಕರುಣಿಸುವ ಶ್ರೀ ಮಲ್ಲಿಕಾರ್ಜುನನು ನಿಮ್ಮ ನಾಲ್ವರ ಕಂಬಳಿಯ ಬೆಂಬಳಿಯೊಳಿಪ್ಪೆ ಉಮ್ಮಳಿಸಬೇಡಂಜಬೇಡೆಂದನು
ಇಂದು ತಳಗೊಳಿಸಿದೀ ವೇದಿಕೆಯ ಕೊಂಡದೊಳುಮಂದರ ಗಿರಿಯ ಹೋಮವಂ ಮಾಡುವಂದಿಂಗೆಹೊಂದಿದೀ ಸಿದ್ಧರೆನಿಸುವ ನಾಲ್ವರಂ ಎತ್ತಿ ಪರಿಚಾರಕರ ಮಾಡುವೆಂಹೆಂದದ ಧರೆಯ ನೃಪರ ಗುಡ್ಡರಂ ಮಾಡಿ ಕೆಱೆಯಿಂದೊಗೆದ ಬಿಳಿಯಾನೆಯಂ ಮಲ್ಲಿಕಾರ್ಜುನನಮಂದಿರದಿ ಕಟ್ಟುವೆಂ ಸರ್ವಲಿಂಗವ ಪ್ರತಿಷ್ಠಿಸುವೆ ನಾ ಬಂದೆಂದನು
ನೆಟ್ಟನೆ ಮಹಾರಾಜಿಕಂ ದೈವಿಕಂಗಳಳವಟ್ಟು ಲೋಕದೊಳು ನಾನಾ ಜೀವಜಾಲ ಪಡಲಿಟ್ಟು ಮೆದೆಗೆಡೆದೊಡಂ ಧೃತಿಮಾಡಿ ಇಲ್ಲಿ ತಲ್ಲಣವಿಲ್ಲದೀ ಕ್ಷೇತ್ರವಬಿಟ್ಟು ಹೋಗದಿರಿ ಕಲುಗೆಲಸಕ್ಕೆ ಜಾಱಿ ಮೃಡನಿಷ್ಠೆಯಂ ನಂಬಿಕೊಂಡಿಹುದು ಮಲ್ಲಯ್ಯಂಗೆಬಿಟ್ಟಿಯಂ ಮಱೆಯದೇ ಸರ್ವನೇಮವ ನಡೆಸಿ ಶಿವನಾಜ್ಞೆಯಿಂದೆಂದನು
ಈ ಪರಿಯಲೆಲ್ಲವಂ ಗುಡ್ಡರಿಗೆ ಆ ಜ್ಞಾನಿರೂಪಮಂ ಕೊಟ್ಟು ಶ್ರೀ ಮಲ್ಲಿಕಾರ್ಜುನನಲ್ಲಿಆ ಪೊತ್ತುವೀ ಪೊತ್ತುವೆನ್ನದೆಲ್ಲಾ ಕೆಲಸದಲ್ಲಿ ಸನ್ನಿಹಿತನಾಗಿಶ್ರೀ ಪರಮಗುರು ಭರಿತನಾಗಿ ಸುಖಮಿರ್ಪ ಪಂಪಾಪತಿ ವಿರೂಪಾಕ್ಷನಾಣೆ ಹುಸಿಯೆಂದೆಂಬಪಾಪನಿಷ್ಠರಿಗೆ ಪ್ರತಿಯಿಲ್ಲ ಶಿರದಿಂ ಪಾಳದಿಂ ಗೆಲುವೆ ವಾದಿಸಿದಡೆ
ಕ್ಷಿತಿಯೊಳೆಲ್ಲಾ ಜನಂ ಕೇಳ್ದು ಸಿದ್ಧೇಂದ್ರನುನ್ನತ ಮಹಿಮೆಯೆಂಬ ಸುಧೆಯಂ ಸವಿದು ಬದುಕಲೆಂದತಿ ಕೃತಾರ್ಥತೆಯಿಂದೆ ನಿರಪೇಕ್ಷೆಯಿಂದೆ ಶ್ರೀ ಗುರುಪದವ ಪೊಗಳ್ವಾತನುಚತುರ ಕವಿರಾಯ ಹಂಪೆಯ ಹರೀಶ್ವರನ ವರಸುತನುಭಯಕವಿ ಕಮಲರವಿ ರಾಘವಾಂಕ ಪಂಡಿತನೆನಲು ಕರುಣಿಸುಗೆ ಪರಮ ಮಾಹೇಶ್ವರರು ಅನ್ಯವಂ ಪೊಗಳನೆಂದು
ಗುರುಭಕ್ತರೆಲ್ಲ ಪುಳಕಿಸಿ ಕೇಳ್ದರಾರವರುಪರಮ ಸುಖವಳವಟ್ಟು ದುರ್ನೀತಿ ಬಿಟ್ಟು ಶಂಕರ ಭಕ್ತಿಯಳವಟ್ಟು ಧನ್ಯರಪ್ಪಂದದೀ ಕಾವ್ಯಮಂ ಪೇಳ್ದ ದೆಸೆಯಿಂಧರೆಯೊಳು ಸುವೃಷ್ಟಿ ಸುಫಲಂ ಕ್ಷೇಮ ಧಾನ್ಯಮಂಕರುಣಿಸುಗೆ ಸರ್ವ ಭೂಪಾಲರವನೀತಳವಸ್ಥಿರವಾಗಿ ಪಾಲಿಸಲಿ ಶ್ರೀ ಗುರು ವಿರೂಪಾಕ್ಷನೊಲಿದು ಭಕ್ತರ ಸಲಹಲಿ


