EN | KA

Menu

II

Madanatilaka

ತನುಮಧ್ಯಂ ಭ್ರಮರಾಳಕಂ ಘಟಕುಚಂ ಬಿಂಬಾಧರಂ ಮೀನಲೋಚನವಸ್ಯಾನನವಬ್ಜಗಂಧಮಿಭಕುಂಭಶ್ರೋಣಿ ರಂಬೋರು ಕಂತುನಿಷಂಗೋಪಮಜಂಘೆ ಪಿಪ್ಪಲದಳಾಹೃಭಾಸಗುಹ್ಯಂ ಪಿಕಧ್ವನಿ ವಜ್ರದ್ವಿಜಮಾಗೆ ಪದ್ಮನಿಯವಳ್ ಶುಂಭಪ್ರವಾಳಾಧರೇ

ನಳಿತೋಳ್ ಮೇಗೊಗೆದೊಪ್ಪಿ ತೋರ್ಪ ಜಘನಂ ಬಿಂಬಾಧರಂ ವಕ್ರಕುಂತಳಮೊಂದಾಗಿದೆ ತಳ್ತ ಪುರ್ವು ರತಿರಾಗಂ ಗೌರವರ್ಣಂ ಸಪಿಂಗಳನೇತ್ರಂ ಗುರುಮಧ್ಯವಲ್ಪನಿಟಿಲಂ ರೋಮಾನ್ವಿತಂ ಜಂಘೆಗಳತಿಳಜಾಮೋದಮಿದಾಗೆ ಶಂಕಿನಿಯವಳ್ ಪಂಕೇಜಪತ್ರೇಕ್ಷಣೇ

ತೊಡೆ ತೋಳಂಗುಲಿ ಕಂಧರಂ ದ್ವಿಜಮಿವೆತ್ತಂ ಕೋಮಲಂ ಭ್ರೂ ಕುಚಂಮಡಕಾಲ್ ಕಣ್ ಕಿವಿಯೆಂಬವಲ್ಪವಧರಂ ಭಾಳಂ ಕಪೋಲಂ ಕಚಂನಡುವೆಂದಿಂತಿವು ತೋರವರ್ಧರತಿ ಲೌಲ್ಯಂ ಬುದ್ಧಿ ಪದ್ಮಾಸ್ಯಮೊಳ್ನುಡಿಗಳ್‌ ಬೆಟ್ಟಿತುವಾಗೆ ಹಸ್ತಿನಿಗೆ ದಾನಾಮೋದಮಕ್ಕುಂ ಸತೀ

ಅಳಕಂಗಳ್ ನಯನಂಗಳಂಗುಲಿಚಯಂಗಳ ಜಂಘೆಗಳ್ ನಾಡೆ ಕೋಮಳಮಕ್ಕುಂ ಮೊಲೆ ಬದ್ದೆ ಕಂಗಳಿನಿತುಂ ತೆಳ್ಪಿಂದೆ ಕೌಂಕುೞ್ ಕರಂಕುಳಿದಿರ್ಕುಂ ಪೆಱತೇಂ ಕವಂದಿವಸುರಾಗಿರ್ಕುಂ ನಿತಂಬಂ ಮನಂಗೊಳಿಕುಂ ಬೆಟ್ಟಿತುವಾಗೆ ಚಿತ್ತಿನಿಗೆ ನಿಂಬಾಮೋದಮಕ್ಕುಂ ಪ್ರಿಯೇ

ಮಾನೋನ್ನತಮೊಳ್ಪೆನೆ ಪದ್ಮಿನಿಯೊಳ್ಮೀನಧ್ವಜರಾಗದೆ ಶಂಕಿನಿಯೊಳ್ಪೀನಂ ಕಠಿನತ್ವದೆ ಹಸ್ತಿನಿಯೊಳ್ನಾನಾರತವೆಂದುಱಿ ಚಿತ್ತಿನಿಯೊಳ್

ಇಂತೀ ನಾಲ್ಕುಂ ಜಾತಿಯಕಾಂತೆಯರವಯವಗುಣಂಗಳೊಂದೊಂದಱೊಳತ್ಯಂತಂ ಕೂಡಿದೊಡಱಿ ನೀಂಭ್ರಾಂತೇಂ ಸಂಕೀರ್ಣಜಾತಿಯೆಂದಾ ವಧುವಂ

ಇದು ಸಕಲವಿಬುಧಜನವಿಸುತ ಕಾವ್ಯಾಲಂಕಾರನೀತಿನಿಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜ ವಿರಚಿತಮುಮಪ್ಪ ಮದನತಿಲಕದೊಳ್ ಜಾತಿವಿವರಣಂ ದ್ವಿತೀಯಾಧಿಕಾರಂ ಸಮಾಪ್ತಂ